ಪ್ರಧಾನ ಅರ್ಚಕರು: ಶ್ರೀ ಸ್ವಾಮಿಲಿಂಗ ಹೈಗುಳಿ ಮರ್ಲಿ ಚಿಕ್ಕು ಹಾಗೂ ಸಪರಿವಾರ ದೈವಗಳ ದೈವಸ್ಥಾನ ಒಳನಾಡು-ಆರಾಟೆ-ಮಂಕಿ
ಕರಾವಳಿಯ ಸಾವಿರದೊಂದು ದೈವಗಳು -ಡಾ.ಲಕ್ಷ್ಮೀ ಜಿ ಪ್ರಸಾದ್,ಮೊಬೈಲ್ 9480516684 ತುಳುನಾಡಿನ ಭೂತಾರಾಧನೆ/ ಭೂತ ಕೋಲ/ ದೈವಾರಾಧನೆ ಬಗ್ಗೆ ಮಾಹಿತಿಗಾಗಿ ಡಾ..ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684 Information about bhootaradhane daivas of Tulunadu
Tuesday, 4 November 2025
225 ಕೃಷ್ಣ ಚಂದನ್ :ಪ್ರಧಾನ ಅರ್ಚಕರು: ಶ್ರೀ ಸ್ವಾಮಿಲಿಂಗ ಹೈಗುಳಿ ಮರ್ಲಿ ಚಿಕ್ಕು ಹಾಗೂ ಸಪರಿವಾರ ದೈವಗಳ ದೈವಸ್ಥಾನ ಒಳನಾಡು-ಆರಾಟೆ-ಮಂಕಿ ಕುಂದಾಪುರ ತಾಲೂಕು ಪುಸ್ತಕ ಮಿತ್ರರು : ಕರಾವಳಿಯ ಸಾವಿರದೊಂದು ದೈವಗಳು : ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684
ಪ್ರಧಾನ ಅರ್ಚಕರು: ಶ್ರೀ ಸ್ವಾಮಿಲಿಂಗ ಹೈಗುಳಿ ಮರ್ಲಿ ಚಿಕ್ಕು ಹಾಗೂ ಸಪರಿವಾರ ದೈವಗಳ ದೈವಸ್ಥಾನ ಒಳನಾಡು-ಆರಾಟೆ-ಮಂಕಿ
Monday, 3 November 2025
224 ಶಾಂಭವಿ ಧರಣೀಶ್ ನಮ್ಮಪ್ರೀತಿಯ ಪುಸ್ತಕ ಮಿತ್ರರು : ಕರಾವಳಿಯ ಸಾವಿರದೊಂದು ದೈವಗಳು- ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684
ಈ ಯಾಂತ್ರಿಕ ಜಗತ್ತಿನಲ್ಲಿ ಜನರು ಗುರಿಯಿಲ್ಲದೆ ಸಾಗುತ್ತಿರುವ ಸಮಯದಲ್ಲಿ, ಡಾ. ಲಕ್ಷ್ಮಿ ಅವರ ಕರಾವಳಿಯ ಸಾವಿರದೊಂದು ದೈವಗಳು ಕೃತಿ ಓದುಗರನ್ನು ಆಧ್ಯಾತ್ಮಿಕ ಚಿಂತನೆಗಳ ದಾರಿಯಲ್ಲಿ ಸಾಗಿಸುವ ದೀಪದಂತಿದೆ.
Sunday, 2 November 2025
223 ನಮ್ಮಹೆಮ್ಮೆಯ ಪುಸ್ತಕ ಮಿತ್ರರು
#ನಮ್ಮ_ಹೆಮ್ಮೆಯ_ಓದುಗ_ಮಿತ್ರರು
#ಕರಾವಳಿಯ_ಸಾವಿರದೊಂದು_ದೈವಗಳು
ಕಳೆದ ವರ್ಷ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕ ಪ್ರಕಟಣೆಗೆ ಮೊದಲೇ ಮುಂಗಡ ಪಾವತಿಸಿ ಕಾದಿರಿಸಿ ಬೆಂಬಲಿಸಿದವರು ಯುವ ಬರಹಗಾರರಾದ ದಯಾನಂದ ರೈ ಕಳ್ವಾಜೆಯವರು.
ಪುಸ್ತಕದ ಕುರಿತಾದ ಅವರ ಮೆಚ್ಚುಗೆಯ ಮಾತುಗಳು ಇಲ್ಲಿವೆ
"ಮೇಮ್ ನಮಸ್ಕಾರ...
ನಾನು ದಯಾನಂದ ರೈ ಕಳ್ವಾಜೆ.ನಿಮ್ಮ ಪುಸ್ತಕ ನನ್ನ ಕೈಸೇರಿ ವರುಷ ಸಂದರೂ, ಅಭಿಪ್ರಾಯ ಹೇಳಲು ಅನುವಾಗಿರಲಿಲ್ಲ. ದೈವಾರಾಧಾನೆಯ ನೆಲೆ ಮತ್ತು ಸಂಸ್ಕೃತಿಯ ಕೆಲವು ಮಜಲುಗಳನ್ನು ತಿಳಿಯಪಡಿಸುವ ಪ್ರಯತ್ನ ಶ್ಲಾಘನೀಯ. ಈ ಸಂಗ್ರಹಯೋಗ್ಯ ಹೊತ್ತಗೆಯ ಹಿಂದೆ ಅದೆಷ್ಟು ಶ್ರಮವಿದೆಯೋ ನಾನರಿಯೆ. ಆದರೆ ದೈವಿಕ ಸಂಪ್ರದಾಯಗಳನ್ನು ನಂಬುವವರು, ಮತ್ತು ಅಧ್ಯಯನ ನಡೆಸುವವರು ತಮ್ಮ ತಮ್ಮ ಮನೆಯಲ್ಲಿ ಸಂಗ್ರಹಿಸಿಡಲೇ ಬೇಕಾದ ಹೊತ್ತಗೆ ಇದು. ಮೇಲಾಗಿ ಸಾವಿರಕ್ಕಿಂತಲೂ ಮಿಗಿಲಾದ ವಿಭಿನ್ನ ಸಂಸ್ಕಾರ ವಿಶೇಷಗಳನ್ನು ಲೇಖನಿಯಲ್ಲಿಳಿಸಿ ಬಲ್ಲವರಲ್ಲಿ ಕೇಳಿತಿಳಿದ ನಿಮ್ಮ ಬಗೆ ಬಹುಮಾನ್ಯ. ಅಭಿನಂದನೆಗಳು ಮೇಮ್ ನಮಸ್ಕಾರ 🙏"
222 ನಮ್ಮಪ್ರೀತಿಯ ಓದುಗ ಮಿತ್ರರು
ಭರವಸೆಯ ಯುವ ಸಂಶೋಧಕ ಸುರೇಶ್ ಮಂಗಲ್ಪಾಡಿಯವರ ಕೈಯಲ್ಲಿ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್
ಸುಮಾರು 18 ವರ್ಷಗಳ ಮೊದಲು ನಾನು ಇಂಚಲಂಗೋಡಿನಲ್ಲಿ ನಡೆಯುವ ಸರ್ಪಕೋಲ/ ಬೆರ್ಮೆರ ನಲಿಕೆ ರೆಕಾರ್ಡ್ ಮಾಡಲು ಹೋದಾಗ ಮಾಹಿತಿ ನೀಡಿ ಪೂರ್ಣ ಬೆಂಬಲ ನೀಡಿದವರು ರತ್ನಾಕರ,ಸುರೇಶ ಮತ್ತು ಸತೀಶ ಎಂಬ ಮಂಗಲ್ಪಾಡಿಯ ಸಹೋದರರು.
ಇವರಲ್ಲಿ ವೃತ್ತಿಯಲ್ಲಿ ಶಿಕ್ಷಕರಾಗಿರುವ ಅರ್ಥ ಶಾಸ್ತ್ರ ಸ್ನಾತಕೋತ್ತರ ಪದವೀಧರರಾದ ಸುರೇಶ್ ಅವರು ಇತ್ತೀಚೆಗೆ ಬಾಕುಡ ಸಮುದಾಯದವರ ಸರ್ಪಕೋಲದ ಬಗ್ಗೆ ಅಧ್ಯಯನ ಮಾಡಿ ಹೊಸ ಹೊಳಹುಗಳ ಸಂಶೋಧನಾ ಗ್ರಂಥವನ್ನು ಪ್ರಕಟಿಸಿದ್ದಾರೆ.ಪ್ರಸ್ತುತ ನಮ್ಮಕರಾವಳಿಯ ಸಾವಿರದೊಂದು ದೈವಗಳು ಕೃತಿಯನ್ನು ಮಲೆಯಾಳ ಭಾಷೆಗೆ ಅನುವಾದಿಸಲು ಮುಂದಾಗಿದ್ದಾರೆ
ಇವರಿಂದ ಇನ್ನಷ್ಟು ಅಧ್ಯಯನ ನಡೆಯಲಿ ಸಂಶೋಧನಾ ಕೃತಿಗಳು ಪ್ರಕಟವಾಗಲಿ ಎಂಬ ಹಾರೈಕೆ ನನ್ನದು
221 ನಮ್ಮಪ್ರೀತಿಯ ಓದುಗ ಮಿತ್ರರು
ತುಳುನಾಡಿನ ದೈವಗಳು ಕಾಲ್ಪನಿಕ ಪಾತ್ರಗಳಲ್ಲ..
ಆರು ತಲೆಮಾರುಗಳ ಹಿಂದೆ ಕಾರಣಾಂತರಗಳಿಂದ ದೈವತ್ವ ಪಡೆದು ಅಜ್ಜೆರ್ ಭಟ್ರು ಎಂಬ ಹೆಸರಿನ ದೈವವಾಗಿ ಆರಾಧಿಸಲ್ಪಡುವ ನಾರಾಯಣ ಎಡವಟ್ನಾಯರ ವಂಶಜರಾದ ಗೀತ ಮತ್ತು ಅವರ ಪತಿ ರಾಘವೇಂದ್ರ ಅಸ್ರಣ್ಣರು ತುಳುವರ ದೈವಗಳ ಕಥಾನಕಗಳು ಊಹಾಪೋಹವಲ್ಲ ಕಪೋಲ ಕಲ್ಪತವಲ್ಲ.ನಡೆದು ಹೋದ ಅಲೌಕಿಕ,ಐತಿಹಾಸಿಕ ಸಂಗತಿಗಳು ಎಂಬ ಬಗ್ಗೆ ಪ್ರತ್ಯಕ್ಷ ನಿದರ್ಶನವಾಗಿದ್ದಾರೆ
ಹೀಗೆಯೇ ಅಯ್ಯೆರ್ ಬಂಟೆರ್ ,ಕಚ್ಚೆ ಭಟ್ಟ ,ಬೀರ್ಣಾಳ್ಬ ,,ತಿಮ್ಮಣ್ಣ ನಾಯಕ ,ನೈದಾಲ ಪಾಂಡಿ ,ಮಂಡೆಕ್ಕಾರ ಕಲ್ಲುರ್ಟಿ ದೈವಗಳ ವಂಶಜರು ಈಗಲೂ ಇದ್ದಾರೆ ,ಮುಂದೆ ಸಮಯ ಸಿಕ್ಕಾಗ ಸಚಿತ್ರ ಮಾಹಿತಿ ನೀಡುವೆ ಹುಡುಕಾಡಿದರೆ ಇನ್ನಿತರ ದೈವತ್ವ ಪಡೆದು ಆರಾಧಿಸಲ್ಪಡುವ ಐತಿಹಾಸಿಕ ವ್ಯಕ್ತಿಗಳ ವಂಶಜರ ಬಗ್ಗೆಯೂ ಮಾಹಿತಿ ಸಿಗಬಹುದು
ಹೆಚ್ಚಿನ ಮಾಹಿತಿ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ ಗ್ರಂಥದಲ್ಲಿದೆ mobile9480516684
220 ನಮ್ಮಹೆಮ್ಮೆಯ ಓದುಗ ಮಿತ್ರರು
ನಮ್ಮ ಹೆಮ್ಮೆಯ ಓದುಗರು
ಕರಾವಳಿಯ ಸಾವಿರದೊಂದು ದೈವಗಳು -
Pawan Naresh Bangera
ಪ್ರಸ್ತುತ ದುಬೈ ಯಲ್ಲಿರುವ ಪವನ್ ನರೇಶ್ ಬಂಗೇರ ಅವರ ಮತ್ತವರ ಮಡದಿ ಮಗಳ ಕೈಯಲ್ಲಿ ಕರಾವಳಿಯ ಸಾವಿರದೊಂದು ದೈವಗಳು ಗ್ರಂಥ
219 ನಮ್ಮಹೆಮ್ಮೆಯ ಪುಸ್ತಕ ಮಿತ್ರರು : ಪದ್ಮಶ್ರೀ ಒಪುರಸ್ಕೃತ ಸಾಲು ಮರದ ತಿಮ್ಮಕ್ಕ
ವೃಕ್ಷ ಮಾತೆ ಪದ್ಮಶ್ರೀ ಸಾಲು ಮರದ ತಿಮ್ಮಕ್ಕನವರ ಮಡಿಲಲ್ಲಿ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684






