Friday, 31 October 2025

204 ನಮ್ಮ‌ಹೆಮ್ಮೆಯ ಪುಸ್ತಕ‌ಮಿತ್ರರು ಶ್ರೀನಾಥ ಕೆ ಆರ್ : ಕರಾವಳಿಯ ಸಾವಿರದೊಂದು ದೈವಗಳು‌: ಡಾ.ಲಕ್ಷ್ಮೀ ಜಿ‌ಪ್ರಸಾದ್ ಮೊಬೈಲ್ 9480516684


 

202 ನಮ್ಮ ಹೆಮ್ಮೆಯ ಪುಸ್ತಕ‌ಮಿತ್ರು: ಅಪರ್ಣಾ ಪ್ರಶಾಂತ್ : ಕರಾವಳಿಯ ಸಾವಿರದೊಂದು ದೈವಗಳು: ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684


 ಪುಸ್ತಕ ಸಂಭ್ರಮ


ಹವ್ಯಕರಲ್ಲಿ ಭೂತಾರಾಧನೆ ಬಗ್ಗೆ ಆಸಕ್ತಿ ಇರುವವರ ಸಂಖ್ಯೆ ಕಡಿಮೆ.ಅದರಲ್ಲೂ ಹವ್ಯಕ  ಸ್ತ್ರೀಯರಿಗೆ ಆಸಕ್ತಿ ಇಲ್ಲವೇ ಇಲ್ಲ ಎನುವಷ್ಟು ಕಡಿಮೆ

ಇಂತಹವರ ನಡುವೆ ನಮ್ಮ ಸಮೀಪದ ಸಂಬಂಧಿ( ನನ್ನ ಅಕ್ಕನ ಸಣ್ಣ ಮಾವನವರ ಮೊಮ್ಮಗಳು) ಅಪರ್ಣಾ Aparna Prashanth  ವಿಶಿಷ್ಟರಾಗಿ ಕಾಣ್ತಾರೆ.ಇವರಿಗೆ ದೈವಾರಾಧನೆ ಕನ್ನಡ ತುಳು ಸಂಸ್ಕೃತಿ ಕುರಿತು ಆಸಕ್ತಿ ಇದೆ.ಈ ಬಗ್ಗೆ ಮಾಹಿತಿ ಸಂಗ್ರಹಮಾಡುತ್ತಿದ್ದಾರೆ ಎಂಬುದು ಸಂತಸದ ಹೆಮ್ಮೆಯ ವಿಚಾರ .

ಮುಂದೆ ಇವರಿಂದ ಅಪರೂಪದ ಕೃತಿಗಳ ರಚನೆಯಾಗಲಿ ..ಸಮಾಜಕ್ಕೊಂದು ಕೊಡುಗೆಯಾಗಲಿ ಎಂದು ಹಾರೈಸುವೆ.

ನನ್ನನ್ನು ಚಿಕ್ಕಿ,ಚಿಕ್ಕಮ್ಮ ಎಂದು ತುಂಬು ಪ್ರೀತಿಯಿಂದ ಕರೆಯುವ ಅಪರ್ಣಾ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕವನ್ನು ಪೂರ್ಣ ಬೆಲೆ 2000₹ ಗೆ ಖರೀದಿಸಿ ಓದಿ ಸಂಭ್ರಮಿಸಿದ್ದಾರೆ.ಒಂದು ಚಂದದ ಪೋಟೊ ತೆಗೆದು ಕಳುಹಿಸಿದ್ದಾರೆ.

Thursday, 30 October 2025

201 ನಮ್ಮ‌ಹೆಮ್ಮೆಯ ಪುಸ್ತಕ‌ಮಿತ್ರರು : ಸೂರಜ್ ಕುಮಾರ್ ಕೊಠಾರಿ ದೈವ ಪಾತ್ರಿಗಳು: ಕರಾವಳಿಯ ಸಾವಿರದೊಂದು ದೈವಗಳು: ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684


 ನಾನೊಬ್ಬ ದೈವದ ಪಾತ್ರಿಯಾಗಿ ತುಂಬಾ ಸಂತೋಷ ಪಡುವಂತ ವಿಚಾರ 

 ನನ್ನ ತುಳುನಾಡಿನ ದೈವಾರಾಧನೆ ಬಗ್ಗೆ   21 ವರ್ಷ ಅಧ್ಯಯನ ಮಾಡಿ ಸಂಪೂರ್ಣವಾಗಿ ನಮಗೆ ಮಾಹಿತಿ ಕೊಟ್ಟಂತದ್ದು  ತುಂಬಾ ಸಂತೋಷದ ವಿಚಾರ: ಸೂರಜ್ ಕುಮಾರ್ ಕೊಠಾರಿ 

201 ನಮ್ಮ_ಹೆಮ್ಮೆಯ_ಓದುಗ_ಮಿತ್ರರು ಮಾಯ ಮತ್ತು ಜೋಗದ ಬೆಳಕಿನಲ್ಲಿ #


 

200 ನಮ್ಮ ಹೆಮ್ಮೆಯ ಪುಸ್ತಕ ಓದುಗರು : ಚಂದ್ರಶೇಖರ್ ವೀರಕಂಬ : ಕರಾವಳಿಯ ಸಾವಿರದೊಂದು ದೈವಗಳು: ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ : 9480516684


 

Tuesday, 28 October 2025

197 ನಮ್ಮ ಹೆಮ್ಮೆಯ ಪುಸ್ತಕ‌ಮಿತ್ರರು: ಡಾ.ಸುದರ್ಶನ ಚಿಪ್ಲುನ್ಕರ್ : ಕರಾವಳಿಯ ಸಾವಿರದೊಂದು ದೈವಗಳು: ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684


 ಶ್ರೀಮತೀ ಡಾ.ಲಕ್ಷ್ಮೀ ಜಿ. ಪ್ರಸಾದ್ ರವರ ಸಂಶೋಧನಾ ಪರಿಶ್ರಮದ ಫಲವಾಗಿ, ಸಾರಸ್ವತ ಕುಸುಮಾಂಜಲಿಯಾಗಿ ಮೂಡಿಬಂದ *ಕರಾವಳಿಯ ಸಾವಿರದೊಂದು ದೈವಗಳು* ಅನ್ನುವ ಉದ್ಗ್ರಂಥವು ಸರಸ್ವತೀ ಸಮಾರಾಧಕರಿಗೊಂದು ಅತ್ಯಮೂಲ್ಯ ಪ್ರಸಾದ. ನನ್ನ ಅನಿಸಿಕೆಯ ಪ್ರಕಾರ ದೇವರು, ದೈವಗಳು ಇತ್ಯಾದಿಯಾಗಿ ಎಲ್ಲವೂ ನಮ್ಮ ಜೊತೆಯಾಗಿದ್ದು ನಮ್ಮನ್ನು ಪೊರೆಯುವ ಒಂದು ಅಲೌಕಿಕ ಶಕ್ತಿ. ಈ ಕೆಲವೊಂದಷ್ಟು ವಿಚಾರಗಳಲ್ಲಿ ಯಾಕೆ? ಏನು? ಹೇಗೆ ಇತ್ಯಾದಿ ತರ್ಕ ವಿತರ್ಕಗಳು ಅನುಚಿತ. ಭಾರತೀಯರ ಭಾವತಂತುವೇ ಈ ಶಕ್ತಿಯ ವಿರಾಟ್ ಸ್ವರೂಪದ ಮೂಲಾಧಾರ. ಈ ಶಕ್ತಿಯ ಆರಾಧನೆಯಲ್ಲಿ ಸಗುಣಾರಾಧನೆ ಹಾಗೂ ನಿರ್ಗುಣಾರಾಧನೆ ಎಂಬೆರಡು ಪ್ರಧಾನ ಮಾರ್ಗಗಳು. ಇವೆರಡರಲ್ಲಿ ಹೆಚ್ಚಿನವರು ಆಶ್ರಯಿಸುವುದು ಸಗುಣಾರಾಧನೆಯನ್ನು. ವೇದಮೂಲವಾಗಿ ಹೊರಹೊಮ್ಮಿದ ಪುರಾಣಾದಿ ಅನೇಕ ವಾಙ್ಮಯಗಳ ಮೂಲಕ ಶ್ರೀರಾಮ, ಕೃಷ್ಣರೇ ಮೊದಲಾದ ದೇವತೆಗಳನ್ನು ವಿಗ್ರಹರೂಪವಾಗಿಯೋ ಚಿತ್ರರೂಪವಾಗಿಯೋ  ತಮ್ಮದೇ ನೆಲೆಯಲ್ಲಿ ಕಂಡುಕೊಳ್ಳುವ ಕಲೆ ಭಾರತೀಯರಾದ ನಮಗೆ ಸಹಜಸಿದ್ಧ. ಆದರೆ ಪ್ರಾಂತೀಯವಾಗಿ ಅಸ್ತಿತ್ವದಲ್ಲಿರುವ, ನಿತ್ಯಸತ್ಯವಾದ ದೈವಗಳ ಪ್ರಪಂಚವು ನೆಲೆಯಾಗಿರುವುದು ಸತ್ಯ, ಧರ್ಮ, ನ್ಯಾಯ, ನೀತಿಗಳ ಮೂಲಕವಾಗಿ. ಪೂರ್ಣಪ್ರಮಾಣದ ಸಗುಣಾರಾಧನೆಯೂ ಇಲ್ಲದೆ ನಿರ್ಗುಣಾರಾಧನೆಯೂ ಆಗಿರದೆ ದೈವಗಳು ಆರಾಧ್ಯವಾಗಿರುವುದು ಅನುಭವವೇದ್ಯ. ಹಾಗಾಗಿ ಕಾಲ ಬದಲಾದಂತೆ ದೈವಗಳ ಕುರಿತಾಗಿ ಪ್ರಶ್ನೆ ಎತ್ತುವುದು ದೂರದ ಮಾತಲ್ಲ. ಪ್ರಸ್ತುತ ಕಾಲಘಟ್ಟದಲ್ಲಿ ಹೆಚ್ಚಿನವರು ಜೀವನೋಪಾಯಗಳನ್ನು ಕಂಡುಕೊಳ್ಳುತ್ತಾ ದೂರದೂರುಗಳನ್ನು ಸೇರಿಕೊಂಡಾಗ ದೈವಾರಾಧನೆಯು ತಮ್ಮ ಮೂಲಸ್ಥಾನದಲ್ಲಿ ಮಾತ್ರವೇ ಆರಾಧನೆಯಾಗಿ ಉಳಿದಾಗ ಸಹಜವಾಗಿಯೇ ಮುಂದಿನ ತಲೆಮಾರಿಗೆ ದೈವಗಳ ಸತ್ತ್ವ, ಚೌಕಟ್ಟುಗಳು ಅಜ್ಞಾತವಾಗಿಯೇ ಉಳಿಯುವುದರಲ್ಲಿ ಆಶ್ಚರ್ಯವಿಲ್ಲ. ಆ ನಿಟ್ಟಿನಲ್ಲಿ ಮುಂದಿನ ತಲೆಮಾರಿಗೆ ಈ ಉದ್ಗ್ರಂಥವು ದಾರಿದೀಪ! ಸತ್ಯ, ಧರ್ಮಗಳಲ್ಲಿ ನಡೆದು ದೈವಗಳ ಸ್ವರೂಪ ಸಾಕ್ಷಾತ್ಕಾರಗೊಳಿಸುವಲ್ಲಿ ಅತ್ಯಮೂಲ್ಯ ಕಾಣಿಕೆ!


✍🏻 *ಡಾ.ಎಂ.ಸುದರ್ಶನ ಚಿಪಳೂಣಕರ್, ಮಾವಿನಮಲೆ, ದುರ್ಗ, ಕಾರ್ಕಳ*

*ಅಸೋಸಿಯೇಟ್ ಪ್ರೊಫೆಸರ್, ಚಿನ್ಮಯ ವಿಶ್ವವಿದ್ಯಾಪೀಠ, ಕೇರಳ*