ಪುಸ್ತಕ ಸಂಭ್ರಮ
ಹವ್ಯಕರಲ್ಲಿ ಭೂತಾರಾಧನೆ ಬಗ್ಗೆ ಆಸಕ್ತಿ ಇರುವವರ ಸಂಖ್ಯೆ ಕಡಿಮೆ.ಅದರಲ್ಲೂ ಹವ್ಯಕ ಸ್ತ್ರೀಯರಿಗೆ ಆಸಕ್ತಿ ಇಲ್ಲವೇ ಇಲ್ಲ ಎನುವಷ್ಟು ಕಡಿಮೆ
ಇಂತಹವರ ನಡುವೆ ನಮ್ಮ ಸಮೀಪದ ಸಂಬಂಧಿ( ನನ್ನ ಅಕ್ಕನ ಸಣ್ಣ ಮಾವನವರ ಮೊಮ್ಮಗಳು) ಅಪರ್ಣಾ Aparna Prashanth ವಿಶಿಷ್ಟರಾಗಿ ಕಾಣ್ತಾರೆ.ಇವರಿಗೆ ದೈವಾರಾಧನೆ ಕನ್ನಡ ತುಳು ಸಂಸ್ಕೃತಿ ಕುರಿತು ಆಸಕ್ತಿ ಇದೆ.ಈ ಬಗ್ಗೆ ಮಾಹಿತಿ ಸಂಗ್ರಹಮಾಡುತ್ತಿದ್ದಾರೆ ಎಂಬುದು ಸಂತಸದ ಹೆಮ್ಮೆಯ ವಿಚಾರ .
ಮುಂದೆ ಇವರಿಂದ ಅಪರೂಪದ ಕೃತಿಗಳ ರಚನೆಯಾಗಲಿ ..ಸಮಾಜಕ್ಕೊಂದು ಕೊಡುಗೆಯಾಗಲಿ ಎಂದು ಹಾರೈಸುವೆ.
ನನ್ನನ್ನು ಚಿಕ್ಕಿ,ಚಿಕ್ಕಮ್ಮ ಎಂದು ತುಂಬು ಪ್ರೀತಿಯಿಂದ ಕರೆಯುವ ಅಪರ್ಣಾ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕವನ್ನು ಪೂರ್ಣ ಬೆಲೆ 2000₹ ಗೆ ಖರೀದಿಸಿ ಓದಿ ಸಂಭ್ರಮಿಸಿದ್ದಾರೆ.ಒಂದು ಚಂದದ ಪೋಟೊ ತೆಗೆದು ಕಳುಹಿಸಿದ್ದಾರೆ.

 
No comments:
Post a Comment