Sunday 10 March 2013

An interaction with pustaka mane Hariharapriya: part-2

Vocaroo Voice Message
                                ಪುಸ್ತಕ ಮನೆ  ಹರಿಹರ ಪ್ರಿಯ  ಅವರೊಂದಿಗೆ  ಸಂವಾದ
                              ದಿನಾಂಕ :೧೦-೦೩-೨೦೧೩
                             ಆಯೋಜಕರು :ಆಕೃತಿ ಬುಕ್ಸ್ ,ರಾಜಾಜಿನಗರ ಮೂರನೇ ಹಂತ ,ಬೆಂಗಳೂರು            

An interaction with pustaka mane Hariharapriya-part-1 one

Vocaroo Voice Message
               ಪುಸ್ತಕ ಮನೆ ಹರಿಹರ ಪ್ರಿಯ  ಅವರೊಂದಿಗೆ ಸಂವಾದ-1
    ಆಯೋಜಕರು : ಆಕೃತಿ ಬುಕ್ಸ್  ಹನ್ನೆರಡನೇ ಮುಖ್ಯ ರಸ್ತೆ  ರಾಜಾಜಿ ನಗರ ಮೂರನೇ ಹಂತ 
                           

Saturday 9 March 2013

A very rare tulu folk dance Chandakku nalike performed on the stage

                     ಚಂದಕ್ಕು ನಲಿಕೆ -ಮಂಜುನಾಥೇಶ್ವರ  ಜಾನಪದ ಕಲಾ ಸಂಘದ  ಸದಸ್ಯರಿಂದ 

Tuesday 5 March 2013

chanda baari raadhe gopala paddhana by Smt sharada g bangera ,maninalkur

Vocaroo Voice Message

 ಚಂದ ಬಾರಿ ರಾಧೆ ಗೋಪಾಲ ಪಾಡ್ದನ -ಹಾಡಿದವರು  ಶ್ರೀಮತಿ ಶಾರದ ಜಿ ಬಂಗೇರ ಮಣಿನಾಲ್ಕೂರು ,ಬಂಟ್ವಾಳ 

 
               ಲಕ್ಷ್ಮೀ ಪ್ರಸಾದ ಮತ್ತು ಶಾರದ ಜಿ  ಬಂಗೇರ
ಪುರಾಣಗಳ ಪರಿಕಲ್ಪನೆಗೆ ವ್ಯತಿರಿಕ್ತವಾದ ಶ್ರೀ ಕೃಷ್ಣ ನ ಚಿತ್ರಣ ಈ ಪಾಡ್ದನದಲ್ಲಿದೆ . ಪುರಾಣದ ಪ್ರಕಾರ ರಾಧೆ ಕೃಷ್ಣನ ಬಳಿಗೆ ಒಲಿದು ಆರಾಧಿಸಿ ತಾನಾಗಿಯೇ ಬಂದವಳು . ಆದರೆ ಇಲ್ಲಿ ಕೃಷ್ಣ ರಾಧೆಯನ್ನು  ಅವಳ ಅಕ್ಕ ಚಂದ ಬಾರಿಯ ರೂಪದಲ್ಲಿ ಬಂದು ವಂಚಿಸಿ ವಶೆ  ಪಡಿಸಿ ಕೊಳ್ಳುವ  ವಿಚಾರವನ್ನು ವರ್ಣಿಸಲಾಗಿದೆ . ಕೃಷ್ಣನನ್ನು ಕಳ್ಳರ ಕಳ್ಳ,  ಅಂಗಡಿ ಅಂಗಡಿ ಅಲೆದು ಪೆಟ್ಟು ತಿನ್ನುವವನು, .ಬೆಳಗ್ಗೆ ಕಂಡ ಹೆಣ್ಣನ್ನು ಸಂಜೆಗೆ ಬಿಡದವನು . ಸ್ತ್ರೀ ಲೋಲನೆಂದು  ವರ್ಣಿಸಿದ್ದಾರೆ ತುಳು ಜನಪದ ಪಾಡ್ದನಗಾರರು . ದಾಸವರೇಣ್ಯರ ನಿಂದಾಸ್ತುತಿ ಗಳಂತೆ  ಇದು ಕೂಡ  ತುಳು ಜನಪದರ ನಿಂದಾ ಸ್ತುತಿಯ ವಿಶಿಷ್ಟ  ಅಭಿವ್ಯಕ್ತಿ  ಇರಬಹುದು .
ಮಣಿನಾಲ್ಕೂರು ಅಂಗನವಾಡಿಯ ಸಹಾಯಕರಾಗಿರುವ ಶಾರದಾ ಬಂಗೆರರಿಗೆ ಅನೇಕ ಪಾಡ್ದನಗಳು,   ತುಳು ಜನಪದ ಹಾಡುಗಳು ತಿಳಿದಿದ್ದು  ಅವನ್ನು  ಸುಮಧುರವಾಗಿ ಹಾಡುತ್ತಾರೆ   

Thursday 28 February 2013

Folk song of a tulu folk dance "chandakku nalike" by Babu ajala Balila

Vocaroo Voice Message
 ಚಂದಕ್ಕು ನಲಿಕೆ  ಒಂದು ಅಪರೂಪದ  ತುಳು ಜಾನಪದ ಕುಣಿತ . ಇದು ಮಹಿಳೆಯರ ಜಾನಪದ   ಕುಣಿತ  . ಒಬ್ಬ ಮಹಿಳೆ ಹಾಡುತ್ತಾರೆ . ಅದಕ್ಕೆ  ಸೊಲ್ಲಿನ ಧ್ವನಿ ಸೇರಿಸಿಕೊಂಡು ಇತರೆ ೭-೮  ಮಹಿಳೆಯರು ವೃತ್ತಾಕಾರವಾಗಿ  ನೃತ್ಯ ಮಾಡುತ್ತಾರೆ . ಕಂಬಳ ಕೋರಿಯ ದಿನದಂದು ಈ   ಜನಪದ ನೃತ್ಯವನ್ನು ಸುಳ್ಯ ಪರಿಸರದಲ್ಲಿ  ಮಾಡುತ್ತಿದ್ದರು. ಇತರೆ ಜಾನಪದ ಕುಣಿತಗಳಂತೆ  ಇದು ಕೂಡ ಈಗ ತೆರೆ ಮರೆಗೆ ಸರಿದಿದೆ.  ಬೈಲ ಮಾರಿ ನಲಿಕೆಯಂತೆ ಈ ಜನಪದ ನೃತ್ಯ   ಕೂಡ  ವಿದ್ವಾಂಸರ ಗಮನಕ್ಕೆ ಬಾರದ ಕಾರಣ ಇನ್ನೂ ಅಜ್ಞಾತವಾಗಿಯೇ ಉಳಿದಿದೆ. ಇದರ ಹಾಡನ್ನು  ಬಾಬು ಅಜಲರು  ಸುಶ್ರಾವ್ಯವಾಗಿ ಹಾಡಿದ್ದಾರೆ . 

Wednesday 27 February 2013

Folk song of a tulu folk dance "chandakku nalike" by Babu ajala Balila

Vocaroo Voice Message
 ಚಂದಕ್ಕು ನಲಿಕೆ  ಒಂದು ಅಪರೂಪದ  ತುಳು ಜಾನಪದ ಕುಣಿತ . ಇದು ಮಹಿಳೆಯರ ಜಾನಪದ   ಕುಣಿತ  . ಒಬ್ಬ ಮಹಿಳೆ ಹಾಡುತ್ತಾರೆ . ಅದಕ್ಕೆ  ಸೊಲ್ಲಿನ ಧ್ವನಿ ಸೇರಿಸಿಕೊಂಡು ಇತರೆ ೭-೮  ಮಹಿಳೆಯರು ವೃತ್ತಾಕಾರವಾಗಿ  ನೃತ್ಯ ಮಾಡುತ್ತಾರೆ . ಕಂಬಳ ಕೋರಿಯ ದಿನದಂದು ಈ   ಜನಪದ ನೃತ್ಯವನ್ನು ಸುಳ್ಯ ಪರಿಸರದಲ್ಲಿ  ಮಾಡುತ್ತಿದ್ದರು. ಇತರೆ ಜಾನಪದ ಕುಣಿತಗಳಂತೆ  ಇದು ಕೂಡ ಈಗ ತೆರೆ ಮರೆಗೆ ಸರಿದಿದೆ.  ಬೈಲ ಮಾರಿ ನಲಿಕೆಯಂತೆ ಈ ಜನಪದ ನೃತ್ಯ   ಕೂಡ  ವಿದ್ವಾಂಸರ ಗಮನಕ್ಕೆ ಬಾರದ ಕಾರಣ ಇನ್ನೂ ಅಜ್ಞಾತವಾಗಿಯೇ ಉಳಿದಿದೆ. ಇದರ ಹಾಡನ್ನು  ಬಾಬು ಅಜಲರು  ಸುಶ್ರಾವ್ಯವಾಗಿ ಹಾಡಿದ್ದಾರೆ . 

Saturday 23 February 2013

Baila maari nalke -A rare folk dance of tulunadu

ಬೈಲ ಮಾರಿ ನಲಿಕೆ- ಒಂದು ತುಳು ಜನಪದ ಕುಣಿತ© ಡಾ.ಲಕ್ಷ್ಮೀ ಜಿ ಪ್ರಸಾದ



Tuesday, 17 December 2013


ಬೈಲ ಮಾರಿ ನಲ್ಕೆ -ಒಂದು ಅಪೂರ್ವ ತುಳುಜನಪದ ಕುಣಿತ ©Dr.LAKSHMI G PRASAD


ಬೈಲ ಮಾರಿ ನಲಿಕೆ /phttps://www.facebook.com/photo.php?v=223987697726539&set=vb.100003459322515&type=3&theater
copy rights reserved (C)Dr.Lakshmi G Prasad

ho
- ಒಂದು ವಿಶಿಷ್ಟ ಜಾನಪದ ಕುಣಿತ

ತುಳುನಾಡೆಂದೇ ಜನಜನಿತವಾಗಿರುವ ಉಡುಪಿ, ಕಾಸರಗೋಡನ್ನು ಒಳಗೊಂಡಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ತುಳು ಜನಪದ ಸಾಹಿತ್ಯದ ನಿಧಿ.  ಇಲ್ಲಿ ಮಾದಿರ ನಲಿಕೆ, ಚೆನ್ನು ನಲಿಕೆ, ಕಂಗೀಲು, ಕರಂಗೋಲು, ಆಟಿ ಕಲೆಂಜ, ಸೋಣದ ಜೋಗಿ ಮೊದಲಾದ ಅನೇಕ ಜನಪದ ಕುಣಿತಗಳಿವೆ.  ಬೈಲ ಮಾರಿ ನಲಿಕೆ ಕೂಡಾ ಇಂತಹ ಒಂದು ತುಳು ಜನಪದ ಕುಣಿತ.  ಇದೊಂದು ವಿಶಿಷ್ಟ ಕುಣಿತ.

ಸುಗ್ಗಿ ಬೇಸಾಯದ ಸಮಯದಲ್ಲಿ ಮಾರಿ ಕಳೆಯಲು ಕೊರಗ ತನಿಯ ಮನೆ ಮನೆಗೆ ಬರುತ್ತಾನೆ.  ಬೈಲ ‘ಮಾರಿನು ಕೊಂಡೋಪೆ’ ಎಂದು ಹೇಳುವ ಕೊರಗ ತನಿಯ ಗದ್ದೆಯ ಮಾರಿಯನ್ನು ಕೊಂಡು ಹೋಗುತ್ತಾನೆ.

ಬೈಲ ಮಾರಿಯನ್ನು ಕೊಂಡು ಹೋಗಲು ಮನೆ ಮನೆಗೆ ಬರುವ ಕೊರಗ ತನಿಯ ಭೂತದ ಪಾತ್ರಧಾರಿ ಒಂದು ವಿಶಿಷ್ಟ ಹಾಡನ್ನು ಹೇಳಿಕೊಂಡು ಕುಣಿಯುತ್ತಾನೆ.  ಅವನೊಂದಿಗೆ ಬಂದ ಇನ್ನೊಬ್ಬಾತ ತೆಂಬರೆಯನ್ನು ಬಡಿದು ಹಾಡು ಹೇಳುತ್ತಾನೆ.  ಈ ಕುಣಿತವನ್ನು ಬೈಲ ಮಾರಿ ನಲ್ಕೆ ಎಂದವರು ಹೇಳುತ್ತಾರೆ.  ಬೈಲ ಮಾರಿ ನಲಿಕೆ ಸುಗ್ಗಿ ಬೇಸಾಯದ ಸಂದರ್ಭದಲ್ಲಿ ಕುಣಿಯುವ ಕುಣಿತವಾಗಿದೆ.
ಇದು ಸುಳ್ಯ ತಾಲೂಕಿನ ಕೋಟೆ ಮುಂಡುಗಾರು, ನೆಟ್ಟಾರು ಚಾವಡಿ ಬಾಗಿಲು, ಮುರುಳ್ಯಗಳಲ್ಲಿ ಈಗ ಕೂಡಾ ಪ್ರಚಲಿತವಿದೆ.

ಆದರೆ ಈ ವಿಶಿಷ್ಟ ಕುಣಿತವು ಈ ತನಕ ಜಾನಪದ ವಿದ್ವಾಂಸರ ಗಮನಕ್ಕೆ ಬಾರದೆ ಇದ್ದುದರಿಂದ ಅಜ್ಞಾತವಾಗಿ ಉಳಿದಿದೆ. ಈ ಪರಿಸರದಲ್ಲಿ ಬತ್ತದ ಬೇಸಾಯವನ್ನು ಹೆಚ್ಚಿನವರು ನಿಲ್ಲಿಸಿರುವುದರಿಂದ ಸುಗ್ಗಿ ಬೇಸಾಯದ ಸಂದರ್ಭದಲ್ಲಿ ಮಾತ್ರ ಪ್ರಸ್ತುತಗೊಳ್ಳುವ ಈ ಕುಣಿತ ಇಂದು ಜನಪದರಿಂದ ದೂರವಾಗುತ್ತಿದೆ.

 ಪಾಜಪಳ್ಳದಲ್ಲಿರುವ ಬಾಬು ಅಜಿಲರ ಕುಟುಂಬದವರು ಈ ಕುಣಿತವನ್ನು ಪ್ರಸ್ತುತ ಪಡಿಸುತ್ತಾರೆ. ಈ ಕುಣಿತವು ಮೂಲತಃ ತುಂಬ ಹೊತ್ತಿನದಾಗಿದ್ದರೂ ಕೂಡಾ ಈಗ ಬೈಲ ಮಾರಿ ನಲಿಕೆಯ ಹಾಡಿನ ಮೊದಲ ಎರಡು ಸಾಲುಗಳನ್ನು ಮಾತ್ರ ಹೇಳಿ ನರ್ತಿಸುತ್ತಾರೆ.
ಶ್ರೀ ಕಾಂತು ಅಜಿಲರ ಸಹಾಯದಿಂದ  ಬೇರೆ ಬೇರೆ ಕಲಾವಿರಿಗೆ ಗೌರವ ಧನ ಕೊಟ್ಟು ರೆಕಾರ್ಡ್ ಮಾಡಿ ಲಿಪ್ಯಂತರ ಮಾಡಿ ಅನುವಾದಿಸಿ ಅಸ್ಪಷ್ಟತೆ ಇರುವಲ್ಲಿ ಊಹಾ ಪಾಠ ಸೇರಿಸಿ ,ಸಾಂಸ್ಕೃತಿಕ ಪದಕೋಶ ತಯಾರಿಸಿ ವಿಶ್ಲೇಷಣೆ  ಕುಣಿತವನ್ನು ರೆೆಕಾರ್ಡ್ ಮಾಡಿ ಹಾಡು,ಅದರ ಲಯ, ಕುಣಿತದ ವಿಧ,ಅದರ ಲಯ,ಕುಣಿತದ ಸಂದರ್ಭ,ಅದರ ಸಾಂಕೀತಿಕತೆ,ವೇಷ ಭೂಷಣ ,ಭಾಷೆ,ನುಡಿಗಟ್ಟು, ಆರಾಧನಾ ಪದ್ಧತಿಗಳ ಬಗ್ಗೆ ವಿಮರ್ಶೆ ಮಾಡಿ ಬರೆದ ಬರಹವಿದು.

  ಬೈಲ ಮಾರಿ ನಲಿಕೆಯ ಹಾಡು ಹೀಗಿದೆ. ಈ ಹಾಡನ್ನು ಅವರು ಕಬಿತೊ/ಪದೊ ಎಂದು  ಕರೆಯುತ್ತಾರೆ.
ಬೈಲ ಮಾರಿ ನಲಿಕೆಯ ಹಾಡು:-
ಈಯಿಲಾ ಬಲ್ಲಗ ಈಯಿ ಬಲ ದಿಕ್ಕನೆ
ಓ ಲೇಲೆ ಲೇಲೇ ಲಾ
ನಾಲುವೆರೆ ನಡುಟೆ ಗಿರಿ ಬಲ ದಿಕ್ಕನೆ
ಓ ಲೇಲೆ ಲೇಲೇ ಲಾ
ಆಕಾಸೊಟು ಅರಂತೋಡೆ ಭೂಮಿಟ್ ಬೈಕುಡೆ
ಓ ಲೇಲೆ ಲೇಲೇ ಲಾ
ಮೈರು ಕೆಲೆತ್ತುನನ್ ಕೇಂಡರೊಲ್ಲಾಯ
ಓ ಲೇಲೆ ಲೇಲೇ ಲಾ
ಆಯಿರೆ ಈಯಿರೆ ನೀರ್‍ಲಾ ಏರುಂಡುಗಾ
ಓ ಲೇಲೆ ಲೇಲೇ ಲಾ
ಬಾಣರೆ ಪೆÇಲ್ಲನ್ ಬೈಪೆ ನೋತುಂಡೆ
ಓ ಲೇಲೆ ಲೇಲೇ
ಗಾಣತ್ತೆರು ಕೈಯಿ ತಿನ್ಪುಂಡು ಕೆಬಿಲಾ ಪಂದುಜಿಗಾ
ಓ ಲೇಲೆ ಲೇಲೇ ಲಾ
ಕೈಪುಡ್ದಿಕ್ಕಾಲ್ ಪಜೆ ಮುಡೆಪುಂಡು ಕೈಲಾ ಪಂದುಜಿ
ಓ ಲೇಲೆ ಲೇಲೇ ಲಾ
ಕಾಂತಾರದ ಪದವುಡೆ ನಾಯಿ ಬರ್ಪುಂಡು
ಓ ಲೇಲೆ ಲೇಲೇ ಲಾ
ನಾಯಿ ಬರ್ಪುಂಡು ಮುಂಗುಲಿ ಪಾರ್‍ದು ಬದುಕೋನು
ಓ ಲೇಲೆ ಲೇಲೇ ಲಾ
ದಂಬೆಲಾ ಜಾರ್‍ಂಡ್ ದಂಬೆ ಜಾರ್‍ಂಡ್ ದಿಕ್ಕನೆ
ಓ ಲೇಲೆ ಲೇಲೇ ಲಾ
ಕಂಚಿ ದಂಬೆ ಜಾರುಂಡು ಬೈಲ್‍ಗೆಲಾ ಬೂರುಂಡೆ
ಓ ಲೇಲೆ ಲೇಲೇ ಲಾ

ಜೋಡುಲಾ ದೆಪೆÇ್ಪೀಡೆ ಜೋಡು ದೆಪ್ಪುಡು ದಿಕ್ಕನೆ
ಓ ಲೇಲೆ ಲೇಲೇ ಲಾ
ಜೋಡುನಾರ್ ಕಡಪ್ಪುನ ಜೋಡೂಲಾ ದೆಪೆÇ್ಪಡೇ
ಓ ಲೇಲೆ ಲೇಲೇ ಲಾ
ಕೋರಿ ತೂಯರ ಪೆÇೀಕಲ್ ಕೊಲಿಂದ ಮರ ಕೋರಿಗ್‍ಗ
ಓ ಲೇಲೆ ಲೇಲೇ ಲಾ
ಉತ್ತೊಡುಪ್ಪು ದೆಪೆÇ್ಪೀಡು ಕೋರಿಗುಲಾ ಪೆÇೀವೋಡೆ
ಓ ಲೇಲೆ ಲೇಲೇ ಲಾ
ಎನ್ನ ಉಳ್ಳಾಯ ಪಾಡಿನ ಸಣ್ಣ ಕಂಗು ಮಾಸಡಿ
ಓ ಲೇಲೆ ಲೇಲೇ ಲಾ
ಉತ್ತುಡುಪು ಉಳ್ಳಾಯೆಡ ಕೇಣೊಡೇ
ಓ ಲೇಲೆ ಲೇಲೇ ಲಾ
ಕೋರಿಗೆಂದ್ ಪೆÇೀವೋಡು ಕೊಕ್ಕಡದ ಕೋರಿಗಂದಮಲೆ
ಓ ಲೇಲೆ ಲೇಲೇ ಲಾ
ಉತ್ತೋಡುಪು ದೆಪೆÇ್ಪೀಡೇ ಕೋರಿಗುಲಾ ಪೆÇೀವೊಡೇ
ಓ ಲೇಲೆ ಲೇಲೇ ಲಾ
ಕಾಂತರ ಕದಿರೊಡು ಕಡುಪಾಡುನಂದಮಲೆ
ಓ ಲೇಲೆ ಲೇಲೇ ಲಾ
ಪುಚ್ಚೆ ಬೊಲುವಾಲುಡು ಮೀನ ಇತ್ತುಂಡೊಲ್ಲಾಯ
ಓ ಲೇಲೆ ಲೇಲೇ ಲಾ
ಚೀಪೆಕಳಿ ಗಂಗಸರ ಜೋರುಲಾ ಗುಡ್ಡೆಡೆಲಾ
ಓ ಲೇಲೆ ಲೇಲೇ ಲಾ
ಬೋರುಗುಡ್ಡೆ ಇರಂಗುಯೆನೇ ಜವ್ವನ್ ಜೇರುಳು
ಓ ಲೇಲೆ ಲೇಲೇ ಲಾ
ಕಳಿಪರಿ ಮುಟ್ಟಾಲೆ ಮಂಜಲ್‍ಲಾ ಒರಿಂಡುಗಾ
ಓ ಲೇಲೆ ಲೇಲೇ ಲಾ
ಕೊರುಂದ್ ಗದ್ದಾಗೋ ಕೊಪೆÇ್ಪಟೊಡೊರಿಂದ
ಓ ಲೇಲೆ ಲೇಲೇ ಲಾ
ಆಯೆ ಜೆರ್ಪುನ ಉಳಾಯಿ ಏನ್ ಜೆರ್ಪುನ ಪಿದಾಯಿ
ಓ ಲೇಲೆ ಲೇಲೇ ಲಾ
ನ್ಯಾಯ ಪಾತೆರುನೇನ್ ಬುಡುಪುಜಿ ಬೊನ್ಯತ ಗುಡ್ಡೆಡ್ತೆ
ಓ ಲೇಲೆ ಲೇಲೇ ಲಾ
ಉತ್ಯೆರುಲ್ಲೆಯೇ ಪಾಡುನ ಒಂಜಿಗೋನ್ ಬೆನ್ಪುನ
ಓ ಲೇಲೆ ಲೇಲೇ ಲಾ
ಕಣ್ಣಿರುತ್ತಣ್ಣ ಕಣ್ಣ್‍ಮಲ್ಲೆ ದೂಜಿಟ್‍ಲಾ ಕುತ್ತೊಂಡುಗಾ
ಓ ಲೇಲೆ ಲೇಲೇ ಲಾ
ಪುತ್ತೂರುತ್ತುಣ್ಣ ಮುಂಡ ಮಲ್ಲೆ ಬಾಜಿಟ್‍ಲಾ ಕೆತ್ತೊಡೆ
ಓ ಲೇಲೆ ಲೇಲೇ ಲಾ
ಕಾಂತುಶೆಟ್ಟಿ ದೂಮಶೆಟ್ಟಿ ಜಪ್ಪಲಾ ಪೆÇೀಪೆರಗಾ
ಓ ಲೇಲೆ ಲೇಲೇ ಲಾ
ಓಡೆಗ್ ಪೆÇೀಪಲೆ ಕುಂಞÂ ಮೊಡಂಡೂರು ದಿಕ್ಕಾಲೇ
ಓ ಲೇಲೆ ಲೇಲೇ ಲಾ

ಕನ್ನಡ ಅನುವಾದ:
ನೀನಾದರೂ ಬಾರೋ ಬಾ ದಿಕ್ಕನೇ (೧) 
ಓ ಲೇಲೆ ಲೇಲೇ ಲಾ
ನಾಲ್ಕು ಜನರ ನಡುವಿನಿಂದ ಗಿರಿ(?) ಬಾ ದಿಕ್ಕನೇ
ಓ ಲೇಲೆ ಲೇಲೇ ಲಾ
ಆಕಾಶದಲ್ಲಿ ಅರಮನೆಯಲ್ಲಿ ಭೂಮಿಯಲ್ಲಿ ಬೈಹುಲ್ಲಿನ ಮುಟ್ಟೆಯಲ್ಲಿ
ಓ ಲೇಲೆ ಲೇಲೇ ಲಾ
ನವಿಲು ಕೇಕೆ ಹಾಕಿದ್ದನ್ನು ಕೇಳಿದಿರಾ ಒಡೆಯ
ಓ ಲೇಲೆ ಲೇಲೇ ಲಾ
ಆ ಬದಿ ಈ ಬದಿ ನೀರಾದರೋ ಏರುತ್ತಿದೆಯಂತೆ
ಓ ಲೇಲೆ ಲೇಲೇ ಲಾ
ಬ್ರಾಹ್ಮಣರ ಪೆÇಲ್ಲನ್ ಬೈಪೇ(?) ಹೊಡೆಯಿತಲ್ಲ
ಓ ಲೇಲೆ ಲೇಲೇ ಲಾ
ಗಾಣದ ಕೋಣ ಪೈರು ತಿನ್ನುತ್ತದೆ ಕಿವಿಯೂ ಅಲುಗಾಡುತ್ತಿಲ್ಲ
ಓ ಲೇಲೆ ಲೇಲೇ ಲಾ
ಕೈಪುಡಿ ದಿಕ್ಕಾಲ್ದಿ (೨) ಚಾಪೆ ನೇಯುತ್ತಿದ್ದಾಳೆ ಕೈ ಅಲುಗಾಡುವುದಿಲ್ಲ
ಓ ಲೇಲೆ ಲೇಲೇ ಲಾ

ಕಾಂತಾರದ ಪದವಿನಲ್ಲಿ (೩) ನಾಯಿ ಬರುತ್ತಿದೆ
ಓ ಲೇಲೆ ಲೇಲೇ ಲಾ
ನಾಯಿ ಬರುತ್ತದೆ ಮುಂಗುಸಿ ಓಡುತ್ತದೆ ಬದುಕಿಗೊಂಡು
ಓ ಲೇಲೆ ಲೇಲೇ ಲಾ
ಕೋರಿ ನೋಡಲು ಹೋಗಬೇಕು ಕೊಲಿಂದ್ ಮರ ಕೋರಿಗೆ(೪)
ಓ ಲೇಲೆ ಲೇಲೇ ಲಾ
ಉಡುವ ಉಡುಪು ತೆಗೆಯಬೇಕು ಕೋರಿಗೆ ಹೋಗಬೇಕು
ಓ ಲೇಲೆ ಲೇಲೇ ಲಾ
ನನ್ನ ಉಳ್ಳಾಯ ಉಟ್ಟ ಬಟ್ಟೆ
ಓ ಲೇಲೆ ಲೇಲೇ ಲಾ
ಉಡುವ ಉಡುಪು ಕೇಳಬೇಕು ಒಡೆಯನಲ್ಲಿ
ಓ ಲೇಲೆ ಲೇಲೆ ಲಾ
ಕೋರಿಗೆಂದು ಹೋಗಬೇಕು ಕೊಕ್ಕಡ ಕೋರಿಗೆ 
ಓ ಲೇಲೆ ಲೇಲೆ ಲಾ 

ಕಾಂತರ ಕದಿರೊಡು ಕಡು ಹಾಕಿದ್ದು ಹೌದೇನೋ
ಓ ಲೇಲೆ ಲೇಲೇ ಲಾ
ಪುಚ್ಚೆ ಬೊಲುವಾಡದಲ್ಲಿ  ಮೀನುಗಳು ಇದ್ದವು ಒಡೆಯ
ಓ ಲೇಲೆ ಲೇಲೇ ಲಾ
ಸಿಹಿಕಳ್ಳು ಗಂಗಸರ ಬೋರು ಗುಡ್ಡೆಯಲ್ಲಿ
ಓ ಲೇಲೆ ಲೇಲೇ ಲಾ
ಬೋರುಗುಡ್ಡೆಯಲ್ಲಿ ಇಳಿಸಿದರು   ಯುವತಿಯರು
ಓ ಲೇಲೆ ಲೇಲೇ ಲಾ
ಕಳ್ಳು ಕುಡಿಯುವ  ಮುಟ್ಟಾಲೆ(೫) ಮಂಜಲ್ನತಲ್ಲಿಯೇ ಉಳಿಯಿತು
ಓ ಲೇಲೆ ಲೇಲೇ ಲಾ
ಕೊರುಂದ್7 ಗದ್ದಗ(?) ಕೊಪ್ಪದಲ್ಲಿಯೇ ಉಳಿಯಿತು
ಓ ಲೇಲೆ ಲೇಲೇ ಲಾ
ಆವನು ಮಲಗುದು ಒಳಗೆ  ನಾನು ಮಲಗುದು ಹೊರಗೆ 
ಓ ಲೇಲೆ ಲೇಲೇ ಲಾ
ನ್ಯಾಯ ಮಾತನಾಡುದನ್ನು ಬಿಡುವುದಿಲ್ಲ   ಬೂದಿಯ ಗುಡ್ಡದಿಂದಲೇ
ಓ ಲೇಲೆ ಲೇಲೇ ಲಾ
ಒಡೆಯ ಹಾಕಿದ ಒಂದು ಕೆಲಸ ಮಾಡುವ
ಓ ಲೇಲೆ ಲೇಲೇ ಲಾ
ಕಣ್ಣರತ್ತಣ್ಣ ಕಣ್ಣ್ ಮಲ್ಲೇ (?)ಸೂಜಿಯಲ್ಲಿ ಚುಚ್ಚಿಕೊಂಡರಂತೆ
ಓ ಲೇಲೆ ಲೇಲೇ ಲಾ
ಪುತ್ತೂರುತ್ತುಣ್ಣ ಮುಂಡ ಮಲ್ಲೆ (?)ಉಳಿಯಲ್ಲಿ ಕೆತ್ತಬೇಕು
ಓ ಲೇಲೆ ಲೇಲೇ ಲಾ
ಕಾಂತುಶೆಟ್ಟಿ ದೂಮಶೆಟ್ಟಿ ಇಳಿದುಕೊಂಡು ಹೋಗುವಂತೆ
ಓ ಲೇಲೆ ಲೇಲೇ ಲಾ
ಎಲ್ಲಿಗೆ ಹೋಗುವಳು ಕುಂಞÂ ಮೊಡಂಡೂರು ದಿಕ್ಕಾಳೇ(೬)
ಓ ಲೇಲೆ ಲೇಲೇ ಲಾ
ಓಲೇಲೆಲೇಲೆ ಲಾ


© ಡಾ.ಲಕ್ಷ್ಮೀ ಜಿ ಪ್ರಸಾದ
ಬೈಲ ಮಾರಿ ನಲಿಕೆ 
 ಇದು ಜಾನಪದ ಕರ್ನಾಟಕ, ಸಂಪುಟ-7, ಸಂಚಿಕೆ-2, ಪ್ರಸಾರಾಂಗ, ಹಂಪಿ ಕನ್ನಡ ವಿಶ್ವವಿದ್ಯಾಲಯ- 2010 ರಲ್ಲಿ ಪ್ರಕಟವಾದ ನನ್ನ ಬರಹ 
  ರೆಕಾರ್ಡಿಂಗ್ ಗೆ ಪೂರ್ಣ ಸಹಕಾರವಿತ್ತ ಸುಬ್ರಹ್ಮಣ್ಯ ಭಟ್ ನೆಟ್ಟಾರು ಇವರಿಗೆ ಹೃತ್ಪೂರ್ವಕ ಕೃತಜ್ಞತೆಗಳ ುು 
ಇದರ ಹಾಡಿನ ನಾಲ್ಕು ಸಾಲುಗಳನ್ನು ವಾರಿಜಾ,ಗುಲಾಬಿ,ಜಯಲಕ್ಷ್ಮಿ ಸುಂದರಿ,ಜಯರಾಮ  ಅವರಿಂದ ಹಾಡಿಸಿ ರೆಕಾರ್ಡ್ ಮಾಡ ಲಿಪ್ಯಂತರ ಮಾಡಿ ಮಾಡಿ ಅನುವಾದಿಸಿ ಹಾಕಿರುವೆ.ಇದರ ಸಂಗ್ರಹ ಕಾರ್ಯದಲ್ಲಿ ಸಹಾಯ ಮಾಡಿದ ಕಾಂತು ಅಜಲರಿಗೆ ಧನ್ಯವಾದಗಳು    


No comments:






                              ಬೈಲ ಮಾರಿ ನಲಿಕೆ -ಒಂದು ಅಪರೂಪದ ತುಳು ಜಾನಪದ ಕುಣಿತ