Friday 29 September 2023

Karavaliya saviradindu Daivagalu embodies very spirit of fascinating local culture*- Shloka Nayak


 *Karavaliya saviradindu  Daivagalu embodies very spirit of fascinating local culture*- Shloka Nayak 


Worshipping of daivas or spirits is at the heart of Tulunadu culture. Despite the passage of time and the introduction of the modern lifestyle, there lies an unwavering faith in these local deities amongst many. Dr. Lakshmi G. Prasad's book, 'Karavaliya saviradoñdu  Daivagalu' embodies the very spirit of this fascinating culture.


'Karavaliya saviradondu  Daivagalu' (Karavali's 1001 Deities) presents readers with an exhaustive list of the local spirits, deities and demigods along the coastal belt. The book also provides more information on each deity and includes pictures of the different daivas. "The book includes daivas ^ Karwar to Coorg to Kannur.

daivas. "The book includes daivas from Karwar to Coorg to Kannur. Since 60% of the daivas are from Tulunadu, I decided to use 'Karavali' in the book title, "Dr. Lakshmi G. Prasad, the author, said. Dr Lakshmi G. Prasad is a lecturer in Kannada at the Government Pre-University College in Byatarayanapura, Bengaluru. Dr .Lakshmi  has captured most of the photographs by herself.


Through the course of extensive research, Dr. Lakshmi has identified 2240 deities, many of which were unidentified and not found on record. Growing up in the village of Koliyoor in Kasaragod District, Kerala, Dr Prasad witnessed several Bhuta Kolas. Heavily interested in folklore, janapadas. A spirits, she leaned towards studying more about it while pursuing her M. Phil. "I came across two local deities from my hometown. But not many people knew much about these deities. Even my family members did not possess too much information about them. The books that I referred too did not include these local deities. This piqued my interest," Dr. Lakshmi narrated. Thus, what began as a study into local daivas spurred years-long research and the list of daivas kept adding up.


Starting in 2000, the book is Dr. Lakshmi's 20-year-long labour and intense efforts. Dr. Lakshmi  to juggle the full-time jobs of being a mother, a lecturer and a researcher. During this time, she also managed to finish two degrees. "Over 20 years, I have cont every spare moment working on this book. It has been a while since I last enjoyed a wedding or properly celebrated a holiday," said Dr. Lakshmi. "Despite the obstacles I had to overcome along this journey, it has still been a fruitful one. It has given me much joy and satisfaction. I am proud to have put the history down of Karavali on paper," she added.


Karavaliya 1001 Daivagalu embodies very spirit of fascinating local culture 1


Apart from 20 years of research and fieldwork, Dr.  Lakshmi spent a year writing the book itself. She also edited the book herself. The lockdown lent a helping hand in the completion of the book. "I decided to write this book for the purpose of knowledge gaining, not personal gain," she said. Dr.Prasad has also worked on a blog where she would share snippets of knowledge. She has not updated the blog for a year since she started working on the book. However, the blog still holds a wealth of information on Tulunadu culture.Speaking on the challenges she faced, Dr. Prasad said, "Compiling all the information and putting the names down in alphabetical order was a challenge. There are several divisions and subgroups, akin to the branches of a large tree. Describing these spirits individually is more convenient, but grouping them is no easy task." While she had to refer to several books and inscriptions throughout her time gathering information for the book, she also highlighted the lack of prior information on these local deities. "A majority of these daivas were unknown in general knowledge. Now, new researchers have a book for reference. "Another downside of research is that it doesn't pay and requires capital to carry out. "I would spend every earned leave, every holiday on research. Every year during mer vacation, I would go out summer vacation, I would go out with my camera and do fieldwork. The expenses are many including travel, stay and camera expenses. I am fortunate for the support of my family," she said.


Dr.Lakshmi commends the support of her family through her research. "My husband, son and brothers have helped me greatly in the completion of this book. My brothers helped me acquire the cameras I needed. My son would accompany me at 3 years of age and even help record information during my fieldwork."


"Although this has been largely a solo journey, by the grace of God, I have had assistance at every step of the way. Acquiring permission to record information, getting help from various people along this journey to carry out this labour- intensive research has shown me that the daivas' blessings are with me," said Dr. Prasad.

Thursday 28 September 2023

ನಾಗ ಮತ್ತು ಬೆರ್ಮೆರ್ ಬೇರೆ ಬೇರೆ ಶಕ್ತಿಗಳು: ಡಾ.ಲಕ್ಷ್ಮೀ ಜಿ ಪ್ರಸಾದ


 

ನಾಗ ಮತ್ತು ಬೆರ್ಮೆರ್ ಬೇರೆ ಬೇರೆ ಶಕ್ತಿಗಳು: ಡಾ.ಲಕ್ಷ್ಮೀ ಜಿ ಪ್ರಸಾದ ‌
ಬೆರ್ಮೆರ್ ತುಳುನಾಡಿನ ಅಧಿದೈವ ಆದ್ದರಿಂದಲೇ ತುಳುನಾಡಿನ ಆರಾಧನಾ ಸಂಕೀರ್ಣ ಗಳಾದ ಗರಡಿಗಳಲ್ಲಿ ಮುಗೇರ್ಕಳ ತಾಣಗಳಲ್ಲಿ ಆಲಡೆಗಳಲ್ಲಿ ಬೆರ್ಮೆರ್ ಗೆ‌ ಆರಾಧನೆ ಇದೆ.


ಹಿರಿಯ/ಪೆರಿಯ ಎಂಬ ಶಬ್ದ ಕಾಲಾಂತರದಲ್ಲಿ ಬೆರ್ಮೆರ್/ಬೆರ್ಮೆರ್ ಆಗಿದೆ .ಸುಬ್ರಹ್ಮಣ್ಯ ನಿಗೆ ಮಲೆಯಾಳದಲ್ಲಿ‌ ಹಿರಿಯ ಎಂಬರ್ಥ ಕೊಡುವ ಪೆರುಮಾಳ ಎಂದು ಕರೆಯುತ್ತಾರೆ. ಬೆರ್ಮೆರ್ ಶಬ್ದ ಸಂಸ್ಕೃತೀಕರಣಕ್ಕೆ ಒಳಗಾಗಿ ಬ್ರಹ್ಮ ಆಯಿತು .ಶೈವಾರಾಧನೆಯ ಪ್ರಭಾವ ದಿಂದ ಬ್ರಹ್ಮ ಲಿಂಗೇಶ್ವರ ಆಯಿತು - ಡಾ.ಲಕ್ಷ್ಮೀ ಜಿ ಪ್ರಸಾದ್ 

.ನಾಗಾರಾಧನೆ ವಿಶ್ವದ ಎಲ್ಲೆಡೆ ಇದೆ.ಕಾಡಿನಲ್ಲಿ ಬೆರ್ಮೆರ ತಾಣ/ಬ್ರಹ್ಮ ಸ್ಥಾನ ದಲ್ಲಿ ನಾಗನ ಆರಾಧನೆ ಯೂ ಆರಂಭವಾಯಿತು.ಕಾಲಾಂತರದಲ್ಲಿ ನಾಗ ಮತ್ತು ಬ್ರಹ್ಮ ರ ಸಮನ್ವಯವಾಗಿ ಈ ಎರಡೂ ಶಕ್ತಿ ಗಳನ್ನು ಒಟ್ಟಾಗಿ ಆರಾಧಿಸುವ ಸಂಪ್ರದಾಯ ಬೆಳೆಯಿತು- ಡಾ.ಲಕ್ಷ್ಮೀ ಜಿ ಪ್ರಸಾದ್ 

Friday 4 August 2023

ಆತ್ಮ‌ಕಥೆಯ ಬಿಡಿ ಭಾಗಗಳು ಅನುಭವ ಆಗಲು ಏನು ಮಾಡಬೇಕು ?

 ಆತ್ಮ‌ಕಥೆಯ ಬಿಡಿ ಭಾಗಗಳು 


ಅನುಭವ ಆಗಲು ಏನು ಮಾಡಬೇಕು ?


ಹೌದು..ಹೀಗೊಂದು ತಲೆಬಿಸಿ ಮಾಡ್ತಾ ಇದ್ದ ಕಾಲ ಒಂದಿತ್ತು..


ನಾನು ಎರಡನೆಯ ವರ್ಷ ಬಿಎಸ್ ಸಿ ಪದವಿ ಓದುತ್ತಿರುವಾಗಲೇ ನನಗೆ ಮದುವೆಯಾಯಿತು..ಚಿಕ್ಕಂದಿನಿಂದಲೂ ಬರವಣಿಗೆಯ ಹವ್ಯಾಸ ಇದ್ದ ನನ್ನ ಬರಹಗಳು ಒಂದೊಂದಾಗಿ ಹೊಸ ದಿಗಂತ ಉದಯವಾಣಿ ಮಂಗಳ ಮೊದಲಾದ ಪತ್ರಿಕೆಗಳಲ್ಲಿ ಪ್ತಕಟವಾಗತೊಡಗಿದ್ದವು..


ದಕ್ಷಿಣ ಕನ್ನಡದ ಹಿರಿಯ ಸಾಹಿತಿ ಗಂಗಾ ಪಾದೇಕಲ್ಲು ನನ್ನ ಗಂಡ ಪ್ರಸಾದರ ಸಂಬಂಧಿ..ಒಂದು ದಿನ ಯಾವುದೋ ಕೌಟುಂಬಿಕ ಕಾರ್ಯಕ್ರಮದಲ್ಲಿ ಭೇಟಿಯಾದವರು ನನ್ನ ಬರವಣಿಗೆಗೆ ಮೆಚ್ಚುಗೆ ಸೂಸಿ ಬರಹಕ್ಕೆ ಅನುಭವದ ತಳಹದಿ ಇದ್ದರೆ ಇನ್ನಷ್ಡು ಗಟ್ಟಿಯಾಗುತ್ತದೆ ಎಂದಿದ್ದರು


ಈ ಅನುಭವವನ್ನು ಪಡೆಯುವುದು ಹೇಗೆ ಎಂಬುದೊಂದು ತಲೆಬಿಸಿ ಶುರು ಆಯಿತು ನನಗೆ.ಚಿಕ್ಕಂದಿನಲ್ಲಿ ಶಾಲಾ ಪ್ರಬಂಧದಲ್ಲಿ  ಪ್ರವಾಸ ಮಾಡಿದರೆ ಬೇರೆ ಬೇರೆ ಊರಿನ ಜನರ ಸಂಸ್ಕೃತಿಯ ಪರಿಚಯ ಆಗುತ್ತದೆ.ಅನುಭವ  ದೊರೆಯುತ್ತದೆ ಎಂದು ಬರೆದಿದ್ದೆ.ಅದು ನೆನಪಾಯಿತು.


ನೆನಪಾಗಿಯೂ ಏನೂ ಪ್ರಯೋಜನವಿಲ್ಲದಾಯಿತು..

ಮೊದಲಿಗೆ ಪ್ರವಾಸ ಮಾಡುವಷ್ಟು ದುಡ್ಡು ನಮ್ಮಲ್ಲಿ ಇರಲಿಲ್ಲ.ಅಲ್ಲದೆ ನಾನು ವಿದ್ಯಾರ್ಥಿಯಾಗಿದ್ದು ಪ್ರವಾಸ ಹೋಗಲು ರಜೆಯದ್ದೂ ಸಮಸ್ಯೆಯೇ..ಎಲ್ಲಕ್ಕಿಂತ ಹೆಚ್ಚು ಟ್ರಾವೆಲಿಂಗ್ ಸಿಕ್ ನೆಸ್ ಇರುವ ನನಗೆ ಪ್ರವಾಸ ಬಹಳ ಪ್ರಯಾಸವಾಗಿ ಪರಿಣಮಿಸುತ್ತದೆ.ಹಾಗಾಗಿ ಪ್ರವಾಸದತ್ತ ನನಗೆ ಒಲವಿರಲಿಲ್ಲ..


ಆದರೆ ಹಿರಿಯ ಸಾಹಿತಿ ಗಂಗಾ ಪಾದೇಕಲ್ಲು ಅವರು ಹೇಳಿದ  ಮಾತು ಸದಾ ಕೊರೆಯುತ್ತಿತ್ತು.ಅನುಭವ ಇಲ್ಲದೆ ಬರಹ ಗಟ್ಟಿತನ ಹೊಂದುದಿಲ್ಲ ಎಂದು..


ಹಾಗೆಂದು ನಾನು ಪ್ರವಾಸ ಹೋಗಿಯೇ ಇಲ್ಲವೆಂದಲ್ಲ..ಸುಮಾರು 25-26 ವರ್ಷಗಳ ಮೊದಲು ನಿಜಾಮುದ್ದೀನ್ ನಲ್ಲಿ ನಡೆದ ರಾಷ್ಟ್ರ ಸೇವಿಕ ಸಂಘದ ಸಮ್ಮೇಳನದಲ್ಲಿ ಭಾಗವಹಿಸಲು ಹೋಗಿದ್ದೆ.ಹಾಗೆ ಹೋದವರೆಲ್ಲ ಅಗ್ರ ಡೆಲ್ಲಿ ಹರಿದ್ವಾರ ಹೃಷಿಕೇಶ ಕಾಶಿ ಮೊದಲಾದೆಡೆ ಮೂರು ನಾಲ್ಕು ದಿನ ಸುತ್ತಾಡಿ ಬಂದಿದ್ದೆವು


ಅಂತೆಯೇ ಬೆಂಗಳೂರಿನ ಎಪಿಎಸ್ ಕಾಲೆಜಿನಲ್ಲಿ ಉಪನ್ಯಾಸಕಿಯಾಗಿದ್ದಾಗ ಡಿಡಿ 1 ಚಾನೆಲ್ ನವರು ಆಯೋಜಿಸಿದ್ದ ಖೇಲ್ ಖೇಲ್ ಮೇ ಬದಲೋ ದುನಿಯ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿದ್ಯಾರ್ಥಿಗಳನ್ನು ಡೆಲ್ಲಿಗೆ ಕರೆದುಕೊಂಡು ಹೋಗಿದ್ದೆ.ಆಗಲೂ ಒಂದಿನಿತು ಸುತ್ತಾಡಿದ್ದೆವು


ನಂತರವೂ ಪ್ರಬಂಧ ಮಂಡನೆಗೆ ಅಹ್ವನಿತಳಾಗಿ ಭಾರತೀಯಾರ್ ಯೂನಿವರ್ಸಿಟಿ,ಗಾಂಧಿ ಗ್ರಾಮ ? ಕೊಯಂಬತ್ತೂರು ಏಲಾಗಿರಿ ಮೊದಲಾದೆಡೆ ಹೋಗಿದ್ದು ಅಲ್ಲೂ ಸುತ್ತ ಮುತ್ತ ಸ್ವಲ್ಪ ತಿರುಗಾಡಿ ಬಂದಿರುವೆ


ಆದರೆ ಈ ಪ್ರವಾಸಗಳು ಯಾವುವೂ ನನಗೆ ಅಂಥಹ ದೊಡ್ಡ ಅನುಭವವನ್ನು ತುಂಬಿ ಕೊಡಲಿಲ್ಲವೇನೋ ಎಂದೆನಿಸ್ತದೆ


ಪ್ರವಾಸಗಳು ಅನುಭವವನ್ನು ತುಂಬಿ ಕೊಡದಿದ್ದರೂ ಬದುಕು ಮೂಟೆ ಮೂಟೆಯಾಗಿ ನಾನಾವಿಧವಾದ ಅನುಭವಗಳನ್ನು ತುಂಬಿಕೊಟ್ಟಿದೆ.

ಒಂದೊಂದು ಯೂನಿವರ್ಸಿಟಿಗೆ ಸಂದರ್ಶನಕ್ಕೆ ಹೋದಾಗ ಒಂದೊಂದು ಅನುಭವ..ನನಗೆ ಪರಿಚಯವೇ ಇಲ್ಲದವರೂ ವಿನಾಕಾರಣ ದ್ವೇಷ ಕಾರುವ ಪರಿಯಂತೂ ನನಗೆ ಅಚ್ಚರಿ ತಂದಿದೆ


ನಾನು ಯಾರ ಸುದ್ದಿಗೂ ಹೋಗದೆ ನನ್ನದೇ ವೃತ್ರಿ ಪ್ರವೃತ್ತಿ ಯಾಗಿ ಬರವಣಿಗೆಯ ಲೋಕದಲ್ಲಿ ಇರುವವಳು


ಆದರೆ ಅದೇ ಕಾರಣಕ್ಕೆ ಸ್ವಕೀಯರಿಂದ ಹಾಗೂ ಪರಕೀಯರಿಂದ ಮತ್ಸರದ ನಡೆಯನ್ನು ಎದುರಿಸಿದೆ..


ಇನ್ನು ಪುಸ್ತಕ ಬರೆಯುವುದು ಪ್ರಕಟಿಸುವುದು ಒಂದು ಚಾಲೆಂಜ್ ಅಗಿದ್ದರೆ ಬಿಡುಗಡೆಯದೇ ಒಂದು ಅನುಭವ


ಕೆಲವರಿಗೆ ಬರಹಗಾರರ ಬಗ್ಗೆ ಎಷ್ಟು ಮತ್ಸರ ಅಹಸನೆ ಇದೆ ಎಂಬುದರ ಅರಿವಾಗ ಬೇಕಾದರೆ ಪುಸ್ತಕ ಬರೆದೇ ಆಗಬೇಕು..

ಬೆಂಗಳೂರು ಹವ್ಯಕ ಸಭೆಯ ಸಂಸ್ಥಾಪಕರಾದ ಮೇಣ ರಾಮಕೃಷ್ಣ ಭಟ್ ಅವರ ಸಂಸ್ಮರಣಾ ಸಮಾರಂಭದಲ್ಲಿ ನನ್ನ ದೈವಿಕ ಕಂಬಳ ಕೋಣ ಎಂಬ ಪುಸ್ತಕ ಮಲ್ಲೇಪುರಂ ವೆಂಕಟೇಶ್ ಅವರಿಂದ ಬಿಡುಗಡೆಯಾಯಿತು..ಇಲ್ಲಿನದೊಂದು ದೊಡ್ಡ ಕಥೆಯೇ ಇದೆ


ಇದಾದ ನಂತರ ಚೊಕ್ಕಾಡಿಯಲ್ಲಿ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳ ಹಸ್ತದಿಂದ ನನ್ನ ಐದು ಪುಸ್ತಕಗಳು ಬಿಡುಗಡೆಯಾದವು..ಇಲ್ಲಿನದು ಮತ್ತೊಂದು ಕಥೆ

ಈ ನಡುವೆ ನನ್ನ ಎರಡು ಪುಸ್ತಕಗಳು ತುಳು ಅಕಾಡೆಮಿಯಲ್ಲಿ ಕಲ್ಲಡ್ಕ ಡಾ.ಕಮಲಾ ಭಟ್ ಅವರಿಂದ ಬಿಡುಗಡೆಯಾದವು..ಅಲ್ಲಿನದೂ ಮತ್ತೊಂದು ಕಥೆ


2021 ರಲ್ಲಿ ನನ್ನ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕ ಮತ್ತೆ ಬೆಂಗಳೂರಿನಲ್ಲಿ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಯವರ ದಿವ್ಯ ಹಸ್ತದಿಂದ ಬಿಡುಗಡೆಯಾಯಿತು..ಈ ಬಗ್ಗೆ ಕನ್ನಡ ಪ್ರಭ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ ವರದಿ ಪ್ರಕಟವಾಯಿತು.ಇಲ್ಲಿ ಸಭೆಯಲ್ಲಿದ್ದ ಯಾರೋ ಒಬ್ಬ ಮತ್ಸರಿಯ ಕುತಂತ್ರದಿಂದ ತಪ್ಪೇ ಮಾಡದ ಓರ್ವ  ಪತ್ರಕರ್ತರಿಗೆ ತುಂಬಾ ತೊಂದರೆ ಆಯಿತು..


ಇನ್ನು ವೃತ್ತಿ ಜೀವನದಲ್ಲೂ ನಾನಾ ಅನುಭವಗಳು..ಸಿಹಿ ಕಹಿ ಎರಡೂ ಅನುಭವಗಳೇ..

ಓದುವಾಗಲೂ ಒಂದೊಂದು ಅನುಭವ..


ನಾನು ಕಾಲೇಜಿಗೆ ಸೇರುವ ವರೆಗೆ ಪೋಲೀಸರನ್ನು ನೋಡಿರಲಿಲ್ಲ‌‌.ಸಿನೇಮವನ್ನೂ ಆ ವರೆಗೆ ನೋಡಿರದ ಕಾರಣ  ಪೋಲೀಸರ ಬಗ್ಗೆ ತಿಳಿದೇ ಇರಲಿಲ್ಲ..ಬೆಂಗಳೂರಿಗೆ ಬರುವವರೆಗೆ ಎಂದರೆ ನನಗೆ 35 ವರ್ಷ ಆಗುವವರೆಗೆ ನನಗೆ ಪೊಲೀಸ್ ಸ್ಟೇಶನ್ ,ಹೇಗಿರುತ್ತದೆ  ಕೋರ್ಟು ಹೇಗಿರುತ್ತದೆ ? ನ್ಯಾಯಾಧೀಶರು ಹೇಗಿರ್ತಾರೆ ಎಂಬ ಕಲ್ಪನೆಯೂ ಇರಲಿಲ್ಲ..


ನಿದಾನಕ್ಕೆ ಬದುಕು ಎಲ್ಲವನ್ನೂ ತೋರಿಸಿಕೊಟ್ಟಿತು. ಉಡುಪಿಯ ಬಹುಜನ ಹಿತಾಯ ವೇದಿಕೆಯ ಡಾ.ರವೀಂದ್ರನಾಥ ಶಾನುಭಾಗರಿಂದ ಅನ್ಯಾಯದ ವಿರುದ್ದ ನ್ಯಾಯಯುತವಾಗಿ ಹೋರಾಡಲು ಪ್ರೇರಣೆ ಪಡೆದೆ..

ಜಗತ್ತಿಡೀ ಅನ್ಯಾಯಕ್ಕೊಳಗಾದವರು ತುಂಬಾ ಜನ ಇದ್ದಾರೆ.ಅವರೆಲ್ಲರ ಪರ ಹೋರಾಡಲು ಸಾಧ್ಯವಿಲ್ಲದಿದ್ದರೂ ಕೊನೆಯ ಪಕ್ಷ ನನಗೆ ಕಿರುಕುಳ ಕೊಟ್ಟವರ ವಿರುದ್ಧ ಹೋರಾಡಲು ಕಲಿತೆ..

ಪೋಲೀಸರ ಭ್ರಷ್ಟಾಚಾರದ ಅರಿವಾಯಿತು..ರಕ್ಷಕರೇ ಭಕ್ಷಕರಾದರೆ ಸಾಮಾನ್ಯ ಜನರಿಗೆ ಬದುಕು ಬಹಳ ಕಷ್ಟಕರ ಎಂದೆನಿಸ್ತದೆ

ಬಸವಣ್ಣನವರು ಒಲೆ ಹತ್ತಿ ಉರಿದರೆ ನಿಲಲುಬಹುದಲ್ಲದೆ ಧರೆ ಹತ್ತಿ ಉರಿದರೆ ನಿಲಲು ಬಾರದು ಎಂದು 12 ನೆಯ ಶತಮಾನದಲ್ಲಿ ಹೇಳಿದ್ದರ ನಿಜವಾದ ಅರ್ಥ ಗೊತ್ತಾಯಿತು


ಆದರೆ ಕೊಲ್ಲುವ ಪಿಶಾಚಿಗಳಿಗಿಂತ ಕಾಯುವ ದೇವರು ದೊಡ್ಡವನು..ಇನ್ನೇನು ಸೋತು ಹೋಗುವೆ ಎನ್ನುವಷ್ಟರಲ್ಲಿ ಏನೋ ಒಂದು ಬೆಳಕು ಎಲ್ಲಿಂದಲೋ  ಬಂದು ರಕ್ಷಿಸುತ್ತದೆ 


ಭವಿತವ್ಯಾಣಿ ದ್ವಾರಾಣಿ ಭವಂತಿ ಸರ್ವತ್ರ..ಆಗಲೇ ಬೇಕಾದವುಗಳಿಗೆ ಎಲ್ಲೆಡೆ ಬಾಗಿಲುಗಳು ಇರುತ್ತವೆ ಎಂದು ಕಾಳಿದಾಸ ಹೇಳಬೇಕಾಗಿದ್ದರೆ ಅವನಿಗೂ ಬದುಕಿನಲ್ಲಿ ಇಂತಹ  ಅಪಾರ ಅನುಭವಗಳು ಆಗಿದ್ದಿರಬೇಕು.


ಈಗ ಅಂದು ಗಂಗಾ ಪಾದೇಕಲ್ಲು ಅವರು ಹೇಳಿದ ಅನುಭವ ಆಗಬೇಕು ಆಗ ಬರಹ ಗಟ್ಟಿಯಾಗುತ್ತದೆ ಎಂದ ಮಾತಿನ ಸರಿಯಾದ ಅರ್ಥ ಆಗುತ್ತಿದೆ


ಅನುಭವ  ಎಲ್ಲೋ ಎಲ್ಲಿಂದಲೋ ಆಗುವದಲ್ಲ..ಬದುಕಿಗೆ ನಾವು ತೆರೆದುಕೊಂಡರೆ ಅದಾಗಿಯೇ ಆಗುತ್ತದೆ 

ಇನ್ನೂ ಆಗುವದ್ದು ತುಂಬಾ ಇರಬಹುದು


ನನ್ನ ಅನುಭವಗಳೆಲ್ಲವೂ ಕಹಿಯಾದುದಲ್ಲ..ಅದರಲ್ಕಿ ಕಹಿಗಿಂತ ಸಿಹಿಯಾದ ಸಂಭ್ರಮವೇ ಹೆಚ್ಚಿದೆ.ಕೆಲವು ಕಹಿ ಅನುಭವಗಳೂ  ಇವೆ


ನಾನು ಉಪನ್ಯಾಸಕಿಯಾದ ಕಾರಣ ಇರಬೇಕು..ನಾನು ಸದಾ ವಿದ್ಯಾರ್ಥಿಗಳ ಗೆಲುವನ್ನು ಸಂಭ್ರಮಿಸುತ್ತೇನೆ.ಅವರಿಗೆ ಬಾಷಣ ಪ್ರಬಂಧ ನಾಟಕ ಹೇಳಿಕೊಟ್ಟು ವೇದಿಕೆಯಲ್ಲಿ ಪ್ರಸ್ತುತ ಪಡಿಸಿ ಅವರ ಜೊತೆ ನಾನೂ ಸಂಭ್ರಮಿಸುತ್ತೆವೆ.ಪ್ರರಿ ವರ್ಷ ಹೊಸ ಹೊಸ ವಿದ್ಯಾರ್ಥಿಗಳು..ಹೊಸ ಹೊಸ ಅನುಭವಗಳು..ಇವರಿಗಾಗಿಯೇ ನಾಟಕ ಬರೆದು ನಾಟಕಗಾರ್ತಿ ಎನಿಸಿಕೊಂಡೆ..ನಾಟಕ ರಚನೆಯ ಬಗ್ಗೆ ಏನೊಂದೂ ಮಾಹಿತಿ ಇರದಿದ್ದರೂ ಏನೋ ನನಗರಿತಂತೆ ಬರೆದೆ .ನಿರ್ದೇಶನದ ಗಂಧ ಗಾಳಿ‌ಇರದಿದ್ದರೂ ಏನೋ ಒಂದು ನನಗರಿತಂತೆ ಮಕ್ಕಳಿಗೆ ಹೇಳಿಕೊಟ್ಟೆ..ಕೆಲವು ಬಹುಮಾನಗಳೂ ಬಂದವು..


ನನಗನಿಸಿದ್ದನ್ನು ಬರೆದು ಪತ್ರಿಕೆಗೆ ಕಳುಹಿಸಿ ಪ್ರಕಟವಾಗಿ ನಾನೂ ಒಬ್ಬ ಲೇಖಕಿ ಎನಿಸಿಕೊಂಡೆ.ನನ್ನ ಬ್ಲಾಗ್ ಬರಹಗಳ ಹೊರತಾಗಿಯೂ   ಮುನ್ನೂರರಷ್ಟು ನನ್ನ ಬರಹಗಳು ಬೇರೆ ಬೇರೆ ಪತ್ರಿಕೆಗಳಲ್ಲಿ  ವೆಬ್ ಪೋರ್ಟರ್ ಗಳಲ್ಲಿ  ಪ್ರಕಟವಾಗಿವೆ 25 ಪುಸ್ತಕಗಳೂ ಪ್ರಕಟವಾಗಿವೆ .ಬ್ಲಾಗ್ ನಲ್ಲಿ ಸಾವಿರಕ್ಕಿಂತ ಹೆಚ್ಚು ಬರಹಗಳಿವೆ

ಸುಮಾರು ಐದೂವರೆ ಲಕ್ಷ ಓದುಗರೂ ಇದ್ದಾರೆ 

ಕಣ್ಣಿಗೇ ಕಾಣಿಸದ ಸಾವಿರಾರು ಮಂದಿ ಹಿತೈಷಿಗಳಿದ್ದಾರೆ.ಅಂತೆಯೇ ಪರಿಚಯವೇ ಇಲ್ಲದಿದ್ದರೂ ದ್ವೇಷ ಸಾಧಿಸುವ ಕೆಲ ಜನರೂ ಇದ್ದಾರೆ.

ಡಾ

ಗಣೇಶಯ್ಯನರ ಕಾದಂಬರಿ ಬಳ್ಳಿ ಕಾಳಬೆಳ್ಳಿಯಲ್ಲಿ ಒಮದು ಪ್ರಮುಖ ಪಾತ್ರವಾಗಿ ಲಕ್ಷ್ಮೀ ಪೋದ್ದಾರ್ ಹೆಸರಿನ ನಿಜ ಪಾತ್ರವಾಗಿ ನನ್ನದೇ ತುಳು ಅಧ್ಯಯನದ ವಿಚಾರಗಳನ್ನು ಪ್ರಸ್ತುತ ಪಡಿಸುವ ವಿಶಿಷ್ಟ ಅನುಭವ ನನ್ನದಾಗಿದೆ 


ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕದ ಸಾವಿರಕ್ಕಿಂತ ಹೆಚ್ಚಿನ ಪುಟಗಳನ್ನು ತಿರುವಿ ಹಾಕುವಾಗ ಇದೆಲ್ಲ ನಾನು ಬರೆದದ್ದಾ ಎಂಬ ಅಚ್ಚರಿ ನನಗಾಗುತ್ತದೆ


ದೈವ ಕೃಪೆ ಎಂದರೆ ಇದೇ ಇರಬೇಕೆನಿಸುತ್ತದೆ..

ಮನುಷ್ಯ ಪ್ರಯತ್ನವನ್ನೇ ನಂಬಿದ್ದವಳು ನಾನು..ಆದರೂ ಮಂಗಳೂರು ಯೂನಿವರ್ಸಿಟಿಯ ಕನ್ನಡ ವಿಭಾಗದಲ್ಲಿ ನಡೆದ ನೇಮಕಾತಿಯ ಅಕ್ರಮ ಅನ್ಯಾಯದ ವಿರುದ್ದ ಸುಪ್ರೀಂ ಕೋರ್ಟಿನ ವರೆಗೂ ಹೋಗಿ ಸ್ಪಷ್ಟ ದಾಖಲೆ ಇದ್ದಾಗಲೂ ಸೋತ ನಂತರ ಮನುಷ್ಯ ಯತ್ನವನ್ನು ಮೀರಿದ ಏನೋ ಒಂದು ಇದೆ ಎಂಬುದು ನನ್ನ ಅರಿವಿಗೆ ಬಂದಿದೆ.ಅದು ತನಕ ನಾನು ಅದೃಷ್ಟ ದುರದೃಷ್ಟ ಎಂಬುದನ್ನು ಒಪ್ಪಿದವಳೇ ಅಲ್ಲ

ತೇನ ವಿನಾ ತೃಣಮಪಿ ನ ಚಲತಿ ಎಂಬಂತೆ ಎಲ್ಲವೂ ಅವನ ಅಣತಿಯಂತೆಯೇ ನಡೆಯುತ್ತದಾ ? 

ನನಗೆ ಗೊತ್ತಿಲ್ಲ..

ತೀರ ಸಣ್ಣ ವಯಸ್ಸಿನಲ್ಲಿಯೆ ಕ್ಯಾನ್ಸರ್ ನಂತಹ ಮಾರಕ ರೋಗಕ್ಕೆ ತುತ್ತಾಗಿ ಈ ಜಗತ್ತಿನಿಂದ ನಿರ್ಗಮಿಸಿದ ಸಹಪಾಠಿಗಳನ್ನು ಸಂಬಂಧಿಕರ  ನೆನಪಾದಾಗ ಐವತ್ತು ತಲುಪಿಸಿದ ದೇವರಿಗೆ ಕೃತಜ್ಞತೆಯನ್ನು  ಅರ್ಪಿಸಬೇಕು ಎಂದು  ನೆನಪಾಗುತ್ತದೆ 


ಹದಿನೈದು ವರ್ಷಗಳ ಹಿಂದೆ ನನಗೆ ಸರಿಯಾದ ಕೆಲಸವಿಲ್ಲ ಎಂದು ತಲೆಕೆಡಿಸಿಕೊಂಡಿದ್ದೆ.ವಯಸ್ಸು ಮೀರುತ್ತದೆ ಎಂಬ ಆತಂಕ ಕಾಡುತ್ತಿತ್ತು.ಅಂತೂ ನಾನು ಬಯಸಿದ ಸರ್ಕಾರಿ ಕಾಲೇಜು ಉಪನ್ಯಾಸಕ ಹುದ್ದೆ ದೊರೆತು ಹದಿನೈದು ವರ್ಷಗಳಾಗುತ್ತಾ ಬಂತು.ನನ್ನ ಕನಸಿನಂತೆ ಯಥೇಚ್ಛವಾಗಿ  ಭೂತ ಕೋಲ ರೆಕಾರ್ಡ್ ಮಾಡಿ ಅಧ್ಯಯನ ಮಾಡುದಕ್ಕಾಗಿಯೇ  ಬೆಳ್ಲಾರೆ ಕಾಲೇಜನ್ನು ಆಯ್ಕೆ ಮಾಡಿದೆ 

ಅದರ ಫಲ ರೂಪವಾಗಿ  ಕರಾವಳಿಯ ಸಾವಿರದೊಂದು ದೈವಗಳು ಗ್ರಂಥ ಯಶಸ್ವಿಯಾಗಿದೆ 


ಇನ್ನು ಹತ್ತು ವರ್ಷಗಳ ಸರ್ವಿಸ್ ಇದೆ ನಂತರ ಮತ್ತೆ ಭೂತಾರಾಧನೆಯ ಅದ್ಯಯನ ಮುಂದುವರಿಸಬೇಕೆಂದಿರುವೆ


ಮುಂದಿನದು ದೈವ ಚಿತ್ತ..


ಡಾ.ಲಕ್ಷ್ಮೀ ಜಿ ಪ್ರಸಾದ್

Tuesday 25 April 2023

ನನ್ನೊಳಗೂ ಒಂದು ಆತ್ಮವಿದೆ..3 ಮಾನವೀಯತೆ ಮೆರೆದ ಪ್ರೇಮನಾಥ್ -3

 ನನ್ನೊಳಗೂ ಒಂದು ಆತ್ಮವಿದೆ..3


ಮಾನವೀಯತೆ ಮೆರೆದ ಪ್ರೇಮನಾಥ್ -3


 ಬಜಾಜ್ ಸ್ಪಿರಿಟ್ ನಲ್ಲಿ ಒಂದು ತಿಂಗಳು ಒಬ್ಬಳೇ ಓಡಾಡಿ ಅಭ್ಯಾಸವಾದ ನಂತರ ‌ಮಗನನ್ನು ಕೂರಿಸಿಕೊಂಡು ಓಡಾಡಲು ಶುರು ಮಾಡಿದೆ‌‌.ನಿದಾನಕ್ಕೆ ಡಬಲ್ ರೈಡ್ ಕೂಡ ಅಭ್ಯಾಸವಾಯಿತು.

ಈ ನಡುವೆ ಮಗನನ್ನು ಸಂಜೆ ಬೇಬಿ ಸಿಟ್ಟಿಂಗ್ ಗೆ ಬಿಡುವ ಬದಲು ಒಬ್ಬ ಹುಡುಗಿಯನ್ನು ಮನೆಗೆ ಬಂದು ನೋಡಿಕೊಳ್ಳುವಂತೆ ವ್ಯವಸ್ಥೆ ಮಾಡಿದ್ದೆ.ಅವಳು ಮಗ ಹಗಲಿ‌ನ ಹೊತ್ತು ಇರುತ್ತಿದ್ದ ಬೇಬಿ ಸಿಟ್ಟಿಂಗ್ / ಪ್ರಿಸ್ಕೂಲ್ ನಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಳು.

ಹಾಗಾಗಿ  ಮೂರು ಗಂಟೆಗೆ ಚಿನ್ಮಯ ಶಾಲೆ ಬಿಟ್ಟ ನಂತರ ಮಗ ಮತ್ತು ಆ ಹುಡುಗಿ ಇಬ್ಬರನ್ನು ಗಾಡಿಯಲ್ಲಿ ಕೂರಿಸಿ ಮನೆಗೆ ಕರೆ ತರುತ್ತಾ ಇದ್ದೆ .

ಒಂದು ದಿನ ಹೀಗೆ  ಒಳಗಿನ  ಸಣ್ಣ ರಸ್ತೆಯಲ್ಲಿ  ಬರುತ್ತಿರುವಾಗ ಎದುರಿನಿಂದ  ಡ್ರೈವಿಂಗ್ ಕಲಿಯುತ್ತಿರುವವರ ಕಾರು ರಾಂಗ್ ಸೈಡಿನಿಂದ ಬಂತು.ಆಗ ಅದನ್ನು ತಪ್ಪಿಸುವ ಸಲುವಾಗಿ ತೀರಾ ಬದಿಗೆ ಹೋಗಿ ಸಮತೋಲನ ತಪ್ಪಿ ಬಿದ್ದೆ.ಮಗನನ್ನು ಮುಂದೆ ಕೂರಿಸಿದ್ದು ಅವನ ಎದುರುಗಡೆ ಅವನ ಊಟದ ಬ್ಯಾಗ್ ಇತ್ತು‌.ಅದು ಅವನ ಕಣ್ಣಿನ ಕೆಳಭಾಗಕ್ಕೆ ತಾಗಿ ದೊಡ್ಡ ಗಾಯವಾಗಿ ರಕ್ತ ಸುರಿಯತೊಡಗಿತು.ಮಗನ ತಲೆ ನನ್ನ ಹೊಟ್ಟೆಗ ತಾಗಿ ನನಗೂ ತುಂಬಾ ನೋವಾಗಿ ತಲೆ ಸುತ್ತುತ್ತಾ ಇತ್ತು.ಹಿಂದೆ ಕುಳಿತಿದ್ದ ಸಹಾಯಕಿ ಹುಡುಗಿಗೆ ಕಾಲಿಗೆ ಏಟು ಬಿದ್ದಿತ್ತು. ಆದರೆ ನನಗಿಂಗ ಒಳ್ಳೆಯ ಸ್ಥಿತಿ ಯಲ್ಲಿ ಇದ್ದಳು.ಅವಳು ಎದ್ದು ಮಗನನ್ನು ಎತ್ತಿಕೊಂಡಳು‌.ಕಾರಿನವರು ಹಿಂದೆ ನೋಡದೆ ಒಂದು ಕ್ಷಣ ಕೂಡ ನಿಲ್ಲಿಸದೆ ಹೊರಟು ಹೋಗಿದ್ದರು‌.ನಾವು ಬಿದ್ದಲ್ಲಿ ಸಮೀಪವೇ ಒಂದು ಸಣ್ಣ ತೊರೆ ಇತ್ತು.ಅದರ ಆ ಕಡೆಗೆ ಒಂದು ಮನೆ ಇತ್ತು.ನನ್ನ ‌ಮಗನ ಅಳು ಕೇಳಿದ ಅವರು ಕಾಲು ಪಾಪು( ಮರದ ಸಂಕ) ದಾಟಿ ಓಡಿ ಬಂದರು.ಅದು ತನಕ ಅವರ ಪರಿಚಯ ನನಗಿರಲಿಲ್ಲ.ಅವರು ಮಗನ ಕಣ್ಣಿನ ಕೆಳಭಾಗದ ಗಾಯ ನೋಡಿ ಕೂಡಲೇ ಹತ್ತಿರದ ವಿನಯ ಕ್ಲಿನಿಕ್ ಹಾಸ್ಪಿಟಲ್ ಗೆ ಹೋಗಲು ತಿಳಿಸಿದರು‌.ಆಗ ನಾನು ತುಸು ಹಿಂದೆ ಮುಂದೆ ನೋಡಿದೆ‌.ಯಾಕೆಂದರೆ ನನ್ನ ಬಳಿ ಹತ್ತು ಹದಿನೈದು ರುಪಾಯಿ ಮಾತ್ರ ಇತ್ತು ಅಷ್ಟೇ. ಅದನ್ನು ಅರ್ಥ ಮಾಡಕೊಂಡ ಪ್ರೇಮನಾಥ್ ( ಹೆಸರು ಸರಿಯಾಗಿ ನೆನಪಿಲ್ಲ, ಪ್ರೇಮನಾಥ್ ಎಂದು ನೆನಪು) ಅವರು ಅವರ ಮನೆಗೆ ಹೋಗಿ ಐದುನೂರು ರುಪಾಯಿ ನನಗೆ ತಂದು ಕೊಟ್ಟು ಒಂದು ಆಟೊ ತಂದು ನಮ್ಮ ಮೂವರನ್ನು ಆಟೊ ಹತ್ತಿಸಿ ಆಸ್ಪತ್ರೆಗೆ ಕಳಹಿಸಿಕೊಟ್ಟರು.

ಮಗನಿಗೆ ಸ್ಟಿಚ್ ಹಾಕಬೇಕಾಯಿತು‌.ನನಗೆ ಮತ್ತು ಸಹಾಯಕ ಹುಡುಗಿಗೆ ಪ್ರಥಮ ಚಿಕಿತ್ಸೆ ನೀಡಿದರು.ನಂತರ ಆಸ್ಪತ್ರೆ ಯಿಂದ ನಾನು ಹಸ್ಬೆಂಡ್ ಕೆಲಸ ಮಾಡುವ ಆಫೀಸಿಗೆ ಫೋನ್ ಮಾಡಿ ವಿಷಯ ತಿಳಿಸಿದೆ( ಆಗಿನ್ನೂ ಮೊಬೈಲ್ ನಮ್ಮ ಬಳಿ ಇರಲಿಲ್ಲ) ಅವರು ಬಂದರು .ಮತ್ತೆ ಮನೆಗೆ ಬಂದೆವು.ಮರುದಿನವೇ ಪ್ರೇಮನಾಥ್ ಅವರ ಮನೆಗೆ ಹೋಗಿ ಅವರು ಕೊಟ್ಟ ದುಡ್ಡನ್ನು ಹಿಂದಿರುಗಿಸಿ ಧನ್ಯವಾದಗಳನ್ನು ತಿಳಿಸಿದೆ.ಆಗ ಅವರು "ದುಡ್ಡನ್ನು ಇಷ್ಟು ಅರ್ಜೆಂಟಲ್ಲಿ ಕೊಡ ಬೇಕಾಗಿರಲಿಲ್ಲ, ಥ್ಯಾಂಕ್ಸ್ ಯಾಕೆ? ನಾವು ಮನುಷ್ಯರು ಪರಸ್ಪರ ಸಹಾಯಕ್ಕೆ ಬಾರದಿದ್ದರೆ ಮನುಷ್ಯರೆಂದು ಕರೆಯಲು ನಾಲಾಯಕ್ ಆಗಿ ಬಿಡುತ್ತೇವೆ‌‌.ಸಧ್ಯ  ನಿಮಗೆ‌ ಮೂವರಿಗೆ ದೊಡ್ಡ ಏಟೇನೂ ಬಿದ್ದಿಲ್ಲವಲ್ಲ ದೇವರ ದಯೆ.ಮುಂದೆ ಇನ್ನೂ ಜಾಗ್ರತೆಯಿಂದ ಗಾಡಿ ಓಡಿಸಿ "ಎಂದು ಹೇಳಿದರು‌.ಅವರ ಮನೆ ಮಂದಿ ಕೂಡ ನಮ್ಮ ಆರೋಗ್ಯ ವಿಚಾರಿಸಿ ಕಾಫಿ ಮಾಡಿ ಕೊಟ್ಟರು‌.ಅವರು ಕೊಟ್ಟ ಕಾಫಿ ಅವರ ಮನಸ್ಸಿನಂತೆಯೇ ತುಂಬಾ ರುಚಿಯಾಗಿತ್ತು.ಅದರ ಕೊನೆಯ ತೊಟ್ಟನ್ನು ಕೂಡ ಕುಡಿದು ಖಾಲಿ ಲೋಟ ಇಟ್ಟು ಮತ್ತೊಮ್ಮೆ ಧನ್ಯವಾದ ಹೇಳಿ ಕೈಮುಗಿದು ಹನಿ ಗಣ್ಣಿನಿಂದ ಹಿಂದಿರುಗಿದೆ.

ಅಂದಿನ ಐದುನೂರು ರುಪಾಯಿ ಇಂದಿನ ಹತ್ತು ಸಾವಿರ ರುಪಾಯಿಗಿಂತ ಹೆಚ್ಚಿನ ಮೌಲ್ಯ ಹೊಂದಿತ್ತು.ಅದು ತನಕ ನೋಡದ ತೀರಾ ಅಪರಿಚಿತಳಾದ ನನಗೆ  ಅವರಾಗಿಯೇ ತಂದು ಕೊಟ್ಟು ಆಟೋ ತಂದು ನಮ್ಮನ್ನು ಆಸ್ಪತ್ರೆ ಗೆ ಕಳಹಿಸಿಕೊಟ್ಟ ಅವರ ಮಾನವೀಯತೆಯನ್ನು ಬಣ್ಣಿಸಲು ನನ್ನಲ್ಲಿ ಪದಗಳಿಲ್ಲ .ಮುಂದಿನ ಬಾರಿ ಊರಿಗೆ ಹೋದಾಗ ಅವರ ಮನೆಗೆ ಹೋಗಿ ಬರಬೇಕು ಎಂದು ಕೊಂಡಿರುವೆ.ಅವರು ಅಲ್ಲೇ ಇದ್ದಾರಾ ? ಅದು ಅವರ ಸ್ವಂತ ಮನೆಯಾ ? ಬಾಡಿಗೆಗೆ ಇದ್ದರಾ ? ಯಾವುದೊಂದು ಮಾಹಿತಿಯೂ ನನಗೆ ತಿಳಿಯದು.ಆದರೂ ಅವರನ್ನು ಭೇಟಿ ಮಾಡಲು ಯತ್ನ ಮಾಡುವೆ‌.ಅವರು‌ ಮತ್ತು ಅವರ ಕುಟುಂಬದವರು ಎಲ್ಲೇ ಇದ್ದರೂ ಸುಖವಾಗಿರಲಿ ಎಂದು ಹಾರೈಸುವೆ

Thursday 6 April 2023

ಆತ್ಮ ಕಥೆ -20 ಝಾನ್ಸಿ ರಾಣಿ ಲಕ್ಷ್ಮೀ ಬಾಯಿಯಂತಾಗುವ ಕನಸು ನನಸಾಗದಿದ್ದರೂ ಡಾ.ಲಕ್ಷ್ಮೀ ಪೋದ್ದಾರ್ ಆದೆ

 ಝಾನ್ಸಿ  ರಾಣಿ ಲಕ್ಷ್ಮೀ ಬಾಯಿಯಂತಾಗುವ ಕನಸು ನನಸಾಗದಿದ್ದರೂ ಡಾ.ಲಕ್ಷ್ಮೀ ಪೋದ್ದಾರ್ ಆದೆ .


ಆತ್ಮ ಕಥೆ ಬರೆಯದೆ ತುಂಬಾ ದಿನ ಆಯಿತು.ಈವತ್ಯಾಕೋ‌ ನಾನು ಝಾನ್ಸಿರಾಣಿ ಲಕ್ಷ್ಮೀಬಾಯಿಯಾಗಿ ಮೆರೆದದ್ದು ನೆನಪಾಗಿ ಬರೆಯೋಣ ಎನಿಸಿತು

ನಾನು ಒಂದನೇ ತರಗತಿಯನ್ನು ಮೀಯಪದವಿನ ವಿದ್ಯಾವರ್ಧಕ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿದ್ದೆ..ಆಗ ನಮ್ಮ ಹಿರಿ ಮನೆ ವಾರಣಾಸಿಯಲ್ಲಿ ಆಸ್ತಿ ಪಾಲಾಗಿ ಹಿರಿಯರಿಂದ ಬಂದ ಮೂಲ ಮನೆ ದೊಡ್ಡ ಚಿಕ್ಕಪ್ಪ ಕೇಶವ ಭಟ್ಟರ ಪಾಲಿಗೆ ಬಂದಿತ್ತು.


ಹಿರಿ ಮಗನಾದ ನನ್ನ ತಂದೆಯವರಿಗೆ ಆಗ ಸುಮಾರು ನಲುವತ್ತನಾಲ್ಕು ವರ್ಷ..ಅಜ್ಜ ತೀರಿ ಹೋಗುವಾಗ ತಂದೆಯವರಿಗೆ ಹದಿನೈದು ವರ್ಷ.ಹತ್ತನೆಯ ತರಗತಿಯಲ್ಲಿ ಓದುತ್ತಿದ್ದರು.ಆಗ ಮೆಟ್ರಿ್ಕ್ ಎಂದರೆ ಹನ್ನೊಂದನೆಯ ತರಗತಿ ಪಾಸಾಗಬೇಕಿತ್ತು ಮೆಟ್ರಿಕ ಪಾಸಾದವರಿಗೆ ಒಳ್ಳೆಯ ಉದ್ಯೋಗ ಸಿಗುತ್ತಾ ಇತ್ತು


ನನ್ನ ತಂದೆಯವರು ಕಲಿಕೆಯಲ್ಲಿ ತುಂಬಾ ಜಾಣರಿದ್ದರಂತೆ.ಈ ವಿಚಾರ ನಮಗೆ ತಂದೆಯವರು ತೀರಿ ಹೋದ ಮೇಲೆ ಅವರ ಸಹಪಾಠಿ ಕಿಟ್ಟಣ್ಣ ರೈ ಅವರ ಮೂಲಕ ತಿಳಿದದ್ದು.ತಂದೆಯವರು ತೀರಿ ಹೋದ ಸುದ್ದಿ ಕೇಳಿ ಬಾಲ್ಯದ ಗೆಳೆಯನ ಮನೆ ಹುಡುಕಿಕೊಂಡು ಬಂದು ತಂದೆಯವರ ಭಾವ ಚಿತ್ರಕ್ಕೆ ಹೂ ಹಾಕಿ ನಮಿಸಿ ತಮ್ಮ‌ಪ್ರೀತಿಯನ್ನು ತೋರಿದ್ದರು.ಆಗ ಮಾತನಾಡುತ್ತಾ ನನ್ನ ತಂದೆಯವರು ಅರ್ಧ ಮಾರ್ಕ್ ಕಡಿಮೆ ಬಂದರೆ ಅಳುತ್ತಿದ್ದ ವಿಚಾರವನ್ನವರು ತಿಳಿಸಿ ತಂದೆಯವರು ತರಗತಿಯಲ್ಲಿ ಸದಾ ಪ್ರಥಮ ಸ್ಥಾನವನ್ನು ಗಳಿಸಿಕೊಳ್ಳುತ್ತಿದ್ದ ವಿಚಾರವನ್ನು ಹೇಳಿದ್ದರು.


ಅಜ್ಜ ಕೃಷ್ಣ ಭಟ್ಟರು ತೀರಿ ಹೋಗುವಾಗ ಮೆಟ್ರಿಕ‌್ ಪಾಸಾಗಲು ಒಂದು ವರ್ಷ ತಂದೆಯವರು ಓದಬೇಕಾಗಿತ್ತು.ತಂದೆಯವರಿಗೆ ಓದಲು ತುಂಬಾ ಆಸೆ ಇತ್ತು.ಆದರೆ ಮನೆಯಲ್ಲಿ ಸಣ್ಣ ವಯಸ್ಸಿನ ತಮ್ಮ ತಂಗಿಯರ ಜವಾಬ್ದಾರಿ ಇತ್ತು‌ಅಜ್ಜ ತೀರಿ ಹೋಗುವಾಗ ಸಣ್ಣ ಚಿಕ್ಕಪ್ಪ ಸದಾಶಿವ ಭಟ್ಟರಿಗೆ ಮೂರು ವರ್ಷವಂತೆ.ಅವರ ಅಣ್ಣ ಕಾಶಿ ಚಿಕ್ಕಪ್ಪ ( ರಾಮ‌ಕೃಷ್ಣಭಟ್ಟರು ) ಒಂದೆರಡು ವರ್ಷ ದೊಡ್ಡವರಿದ್ದಿರಬಹುದು.ಇವರಿಗಿಂತ ಒಂದೆರಡುವರ್ಷ ಸೋದರತ್ತೆ ಪಾರ್ವತಿ ದೊಡ್ಡವರಿದ್ದಿರಬಹುದು.ಅವರಿಗಿಂತ ದೊಡ್ಡವರು ನನ್ನ ದೊಡ್ಡ ದೊಡ್ಡಪ್ಪ ಕೇಶವ ಭಟ್ಟರು ಇವರಿಗಾಗ ಹತ್ತು ಹನ್ನೆರಡು ವರುಷ ಇವರಿಗಿಂತ ಹಿರಿಯರಾದ ಇಬ್ಬರು ಅಕ್ಕಂದಿರಿದ್ದರು.ನಡುವೆ ಓರ್ವ ಇನ್ನೊಂದು  ತಂಗಿಯೂ ಇದ್ದು ಅವರು ಸಣ್ಣ ವಯಸ್ಸಿನಲ್ಲಿಯೇ ತೀರಿ ಹೋಗಿದ್ದು ಅವರನ್ನು ನಾನು ಬಹುಶಃ ನೋಡಿಲ್ಲ ಎಂದೆನಿಸ್ತದೆ.ಅಥವಾ ನೋಡಿದ್ದರೂ ನೋಡಿದ್ದರೂ ನೆನಪಿರದಷ್ಟು ಸಣ್ಣ ವಯಸ್ಸು ನನಗಿದ್ದಿರಬಹುದು


ಈ ಅತ್ತೆಯ ಹೆಸರೂ ನನಗೆ ಗೊತ್ತಿಲ್ಲ‌.ಪಂಜಕ್ಕೆ ಮದುವೆ ಮಾಡಿಕೊಟ್ಟಕಾರಣ ಪಂಜದ ಅತ್ತೆ ಎನ್ನುತ್ತಿದ್ದೆವು.ಕಂರ್ಬಿ ಎಂದೂ ಹೇಳುತ್ತಿದ್ದೆವು‌.ಕಂರ್ಬಿಯ ಮಾವ ಅತ್ತೆ ತೀರಿ ಹೋದ ಮೇಲೆ ಮತ್ತೆ ಮದುವೆಯಾಗಿದ್ದು ಅವರಿಗೆ ಮಕ್ಕಳಿದ್ದರು.ಅವರಲ್ಲಿ ಯಾರನ್ನೋ ಕಂರ್ಬಿ ಬಾವ ಎಂದು ಕರೆಯುತ್ತಿದ್ದ ನೆನಪು.


ನನ್ನ ಆ ಸೋದರತ್ತೆ ಬಹಳ ಜಾಣೆಯಂತೆ.ನನ್ನನ್ನು ಬಂಧು ಬಳಗದವರು ಅವರಿಗೆ ಹೋಲಿಸುತ್ತಿದ್ದರು.ಅವರ ಬಗ್ಗೆ ಎರಡು ವಿಚಾರ ಅಮ್ಮ ಹೇಳಿದ್ದು ನನಗೆ ನೆನಪಿದೆ.

ಒಬ್ಬರು ಆಗಾಗ ಊಟಕ್ಕೆ ಮನೆಗೆ ಬರ್ತಿದ್ದರಂತೆ.ಬಂದಾಗ ಮಜ್ಜಿಗೆ ನೀರು ಕೊಡುವ ಪದ್ದತಿ ನಮ್ಮಲ್ಲಿ.ಪ್ರತಿ ಬಾರಿ ಎಷ್ಟೇ ಉಪ್ಪು ಹಾಕಿ ಹದ ಮಾಡಿ ಕೊಡುತ್ತಿದ್ದರೂ ಸ್ವಲ್ಪ  ಉಪ್ಪು ಕಡಿಮೆ ಎಂದು ಕೊರತೆ ಹೇಳುತ್ತಿದ್ದರಂತೆ.


ಹೀಗೆ ಒಂದು ಬಾರಿ ಬಂದಾಗ ನನ್ನ ಅತ್ತೆ ಒಂದು ಲೋಟ ಮಜ್ಜಿಗೆಗೆ ಒಂದು ಕೋಟ ಉಪ್ಪು ಹಾಕಿ ಎಷ್ಟು ಕರಗುತ್ತದೋ‌ಅಷ್ಟು ಕರಗಿಸಿ ಅರಿವೆಯಲ್ಲಿ ಸೋಸಿ‌ ತಗೊಂಡು ಹೋಗಿ ಕೊಟ್ಟರಂತೆ.ಆ ಉಪ್ಪಿನ ಸಿಂಗಿಯನ್ನು ಕಣ್ಣು ಮುಚ್ಚಿ ಕುಡಿದ ಪುಣ್ಯಾತ್ಮ‌ಕಮಕ್ ಕಿಮ್ ಎನ್ನಲಿಲ್ಲವಂತೆ.ಅದೇ ಕೊನೆ ಅಂತೆ ಉಪ್ಪು ಕಡಿಮೆ ಎಂದು‌ ಕೊರತೆ ಹೇಳಿದ್ದು.ಅತ್ತೆಗೆ ಮಕ್ಕಳಾಟಿಗೆ ಮದುವೆಯಾಗುವ ಮೊದಲಿನ ಕಥೆ ಇದು.ಹೆಚ್ಚಂದರೆ ಹತ್ತು ಹನ್ನೊಂದು ವರ್ಷದ ಎಳೆಯ ಹುಡುಗು ಬುದ್ಧಿ.ಇದು ಗೊತ್ತಾದಾಗ ಅಜ್ಜಿ ಕೈಯಿಂದ ಬೈಗಳು ಸಿಕ್ಕರೂ ಎಲ್ಲರಿಗೂ ಇದು ನಗು ತರಿಸಿದ ವಿಚಾರ ಆಗಿತ್ತಂತೆ.


ಅದೇ ರೀತಿ‌ ಯಾರದೋ ಹತ್ತಿರದ ಸಂಬಂಧಿಕರ ಮದುವೆಯ ಸಮಯದಲ್ಲಿ ಸೀರೆ ತೆಗೆಯುವ ಮಾತು ಬಂದಾಗ ಕುಟುಂಬದಲ್ಲಿ ಪ್ರಭಾವಿಗಳಾಗಿದ್ದ ಸಂಬಂಧಿಯೊಬ್ಬರು  ಅಜ್ಜನ ಮೊದಲ ಹೆಂಡತಿಯಲ್ಲಿ ಹುಟ್ಟಿದ  ಮಗಳಿಗೆ ಸೀರೆ ತೆಗೆಯುವ "ತಾಯಿ ಇಲ್ಲದ ಮಗು ಅವಳು" ಎಂದರಂತೆ.ಆಗ ನನ್ನ ಈ ಸೋದರತ್ರೆ 'ಹೌದೌದು..ನಾನು ಮದುವೆ ದಿನ ನನ್ನ ತಾಯಿಯನ್ನೇ ಸೀರೆಯಂತೆ ಉಡುವುದು ಎಂದರಂತೆ'..ಮುಂದೆ ಇವರಿಗೂ ಸೀರೆ ತೆಗೆದರೋ ಇಲ್ಲವೋ ಏನಾಯಿತು ನನಗೆ ಗೊತ್ತಿಲ್ಲ.ಅಂತೂ ಇದೂ ಎಲ್ಲರಲ್ಲಿ ನಗು‌ಹುಟ್ಟಿಸಿದ ವಿಚಾರವಾಗಿತ್ತು‌ .


ಒಟ್ಟಿನಲ್ಲಿ ಬಡತನದ ಜೊತೆಗೆ ತಂದೆಯನ್ನೂ ಕಳೆದುಕೊಂಡ ಮಕ್ಕಳದು ಬಹಳ ಶೋಚನೀಯ ಪರಿಸ್ಥಿತಿ ಇದ್ದಿರಬಹುದು ಎಂದು‌ ಎನಿಸ್ತದೆ.ಮನೆ ಮಕ್ಕಳಿಗೆ ಸೀರೆ ತೆಗೆಯುವ ಬಗ್ಗೆ ನಿರ್ಧಾರ ತಗೊಳ್ಳುವವರು ಇನ್ಯಾರೋ..ತಂದೆ ಇದ್ದರೆ ಹೀಗಾಗಲುಂಟೇ?


ನನಗೆ ಮದುವೆಯಾಗಿ ಮಗ ಹುಟ್ಟಿ ಅವನ ಉಪನಯನವನ್ನೂ ಪುರೋಹಿತರಾಗಿ‌ ನನ್ನ ತಂದೆಯವರೃ  ಮುಂದಾಳತ್ವ ವಹಿಸಿ  ಮಾಡಿದ್ದರು.ಅವರ ಜವಾಬ್ದಾರಿ ಎಲ್ಲವನ್ನೂ ಕಳೆದುಕೊಂಡ ನಂತರ ಒಂದಿನ ಸುಖವಾಗಿ ಜೀವ ತ್ಯಜಿಸಿ ಇಹ ಲೋಕ ಬಿಟ್ಟು ಪರಲೋಕಕ್ಕೆ ತೆರಳಿದ್ದರು.ಆದರೂ ನಮಗೆ ತಂದೆಯ ಸಾವು ಬಹಳ ದುಃಖ ಉಂಟು ಮಾಡಿತ್ತು.ಹಾಗಿರುವಾಗ   ಅಕಾಲದಲ್ಲಿ ತಂದೆಯನ್ನು ಕಳೆದುಕೊಂಡ ಮಕ್ಕಳ ಪರಿಸ್ಥಿತಿಯನ್ನು ಊಹಿಸುವುದೂ ಕೂಡ ಕಷ್ಟ.


ನನ್ನ ಸ್ನೇಹಿತೆಯೊಬ್ಬಳ ತಂದೆ ಸಣ್ಣ ವಯಸ್ಸಿನಲ್ಲಿಯೇ ತೀರಿ ಹೋಗಿದ್ದರು.ಅವರು ಹೇಳ್ತಿದ್ದರು.ನಾವು ನೆಂಟರ ಮನೆಗೆ ಹೋದರೆ ಹೊಟ್ಟೆ ತುಂಬಾ ಊಟ ಮಾಡ್ತಿರಲಿಲ್ಲ.ಯಾಕೆಂದರೆ ತಂದೆ ಇಲ್ಲದ ಮಕ್ಕಳು ರಾವು ಕಟ್ಟಿ ತಿಂತಾರೆ ಎಂದು ಜನ ಆಡಿಕೊಳ್ಳಬಾರದಲ್ವ ಲಕ್ಷ್ಮೀ‌? ಎಂದಿದ್ದರು.


ನನ್ನ ತಂದೆಯವರಿಗೆ ಕೂಡ ಅವರ ತಂದೆ ಎಂದರೆ ನನ್ನ ಅಜ್ಜ ಅಕಾಲದಲ್ಲಿ ತೀರಿ ಹೋದದ್ದು ಬಹು ದೊಡ್ಡ ನಷ್ಟ ಉಂಟು ಮಾಡಿತ್ತು‌.ಮೆಟ್ರಿಕ್ ಓದುವಕನಸಿಗೆ ತಣ್ಣೀರು ಪಟ್ಟಿ ಹಾಕಬೇಕಾಯಿತು.ಕುಟುಂಬದ ಹಿರಿಯರು ಆಣತಿಯಂತೆ ಮಂತ್ರ ಕಲಿಯಲು ಕುಂಭ ಕೋಣಂ ಗೆ ಹೋಗಬೇಕಾಯಿತು

ಅಲ್ಲಿ ಕೆಲ ವರ್ಷ ಮಂತ್ರ ಕಲಿತು ಬಂದು ಹೊಟ್ಟೆಪಾಡಿಗಾಗಿ ಕುಲ ವೃತ್ತಿ ಪೌರೋಹಿತ್ಯ ಮಾಡಬೇಕಾಯಿತು.


ಹಗಲು ರಾತ್ರಿ ಪೌರೋಹಿತ್ಯ ಮಾಡುತ್ತಲೇ ಅಕ್ಕ ತಂಗಿಯರನ್ನೆಲ್ಲ ಮದುವೆ ಮಾಡಿ ಸಂಸಾರಸ್ಥರನ್ನಾಗಿಸಿದರು.ದೊಡ್ಡ ಚಿಕ್ಕಪ್ಪ ಮತ್ತು ಕಾಶಿ ಚಿಕ್ಕಪ್ಪ ಇಬ್ಬರನ್ನೂ ಮಂತ್ರ ಕಲಿಯಲು ಹಾಕಿದ್ದೇಕೆ ಎಂದು ನನಗೆ ಗೊತ್ತಿಲ್ಲ.ದೊಡ್ಡ ಚಿಕ್ಕಪ್ಪನಿಗೆ ಶಾಲೆಯ ವಿದ್ಯೆ ಅಷ್ಟಾಗಿ ಹಿಡಿಸಿರಲಿಲ್ಲವಂತೆ ಹಾಗಾಗಿ ಮಂತ್ರ ಕಲಿಯಲು ಹಾಕಿದರು.ಸಣ್ಣ ಚಿಕ್ಕಪ್ಪ ( ನಂತರ ಕಾಶಿಯಲ್ಲಿ ಓದಿ ಪ್ರೊಫೆಸರರಾದ ಕಾರಣ ಇವರನ್ನು ಕಾಶಿ ಅಪ್ಪಚ್ಚಿ ಎಂದು ಕರೆಯುತ್ತೇವೆ) ತಮ್ಮಣ್ಣ / ರಾಮ ಕೃಷ್ಣ ಭಟ್ಟರಿಗೆ ಶಾಲೆಗೆ ಹೊಗಿ ಕಲಿಯಲು ಆಸಕ್ತಿ ಇತ್ತಂತೆ.ಆದರೂ ಇವರನ್ನೇಕೆ ಮಂತ್ರ ಕಲಿಯಲು ಹಾಕಿದರು? ಇಲ್ಲಿ ಬಹುಶಃ ನನ್ನ ತಂದೆ ದುಡಿಯುವ ವ್ಯಕ್ತಿ ಮಾತ್ರ ಆಗಿದ್ದರು.ಬಹಳ ಸಜ್ಜನರಾದ ನನ್ನ ತಂದೆಯವರಿಗೆ ಕುಟುಂಬದ ಹಿರಿಯರ ಮಾತನ್ನು‌ ಮೀರುವ ಧೈರ್ಯ ಇದ್ದಿರಲಾರದು.ನನ್ನ ಅಜ್ಜಿ ಗಟ್ಟಿಗಿತ್ತಿಯೇ...ಅವರೂ ಯಾಕೆ ಸಣ್ಣ ಮಗನ ಪರವಾಗಿ ಧ್ವನಿ ಎತ್ತಲಿಲ್ಲ? ಬಹುಶಃ ಆಗಿನ ಪರಿಸ್ಥಿತಿ ಹಾಗೆಯೇ ಇತ್ತು ಕಾಣಬೇಕು.ಆದರೆ ನಮ್ಮಲ್ಲಿ ಅಜ್ಜಿಯ ಮಾತೇ ಅಂತಿಮವಾಗಿತ್ತುಆದರೂ ಯಾಕೆ ಅಜ್ಜಿ ಮಗನ ಪರ ಮಾತಾಡಲಿಲ್ಲ.?


 ನನ್ನ ತಂದೆಯವರಿಗೆ ಈ ತಮ್ಮನಲ್ಲಿ ಬಹಳ ಪ್ರೀತಿ.ತಮ್ಮಣ್ಣ ಎಂದವರನ್ನು ಕರೆಯುತ್ತಿದ್ದರು.ತಮ್ಮಣ್ಣ ಎಂದರೆ ಆಸರಿಗೆ ಬೇಡ ಎಂಬಷ್ಟು ಪ್ರೀತಿ ಅಭಿಮಾನ ನನ್ನ ತಂದೆಯವರಿಗೆ ಇತ್ತು.ನನ್ನ ಅಣ್ಣ ಅಕ್ಕನಿಗೂ ಈ ಚಿಕ್ಕಪ್ಪ ಎಂದರೆ ಬಹಳ ಪ್ರೀತಿ.


ಈ ಸಣ್ಣ ಚಿಕ್ಕಪ್ಪನಿಗೆ ಸಣ್ಣಾಗಿರುವಾಗ ಕ್ರಾಣಿ‌ ಎಂಬ ಆರೋಗ್ಯ ಸಮಸ್ಯೆ ಇತ್ತಂತೆ.ಮನೆ ಮಂದಿಯ ಭಯಕ್ಕೆ ಶಾಲೆಗೆ ಹೋದವರು ನಡುವೆ ಜ್ವರದಿಂದ ಎಚ್ಚರ ತಪ್ಪಿ ತೋಡಿನ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದವರನ್ನು ಯಾರೋ ನೋಡಿ ಎತ್ತಿ ಮನೆಗೆ ತಂದು ಬಿಟ್ಟರಂತೆ..ಇವೆಲ್ಲ ನಾನು ಹಿರಿಯರು ಮಾತನಾಡುವಾಗ ಓಂಗಿಕೊಂಡು ಕೇಳಿಸಿಕೊಂಡ ವಿಚಾರಗಳು.ಹಿರಿಯರ ಮಾತಿಗೆ ಕಿವಿ ಕೊಟ್ಟರೆ ನಮಗೆ ಪೆಟ್ಟು ಬೈಗಳು ಸಿಗುತ್ತಿತ್ತು.ಆದರೂ ನಾವು ಮಕ್ಕಳು ಬಾಲ ಸಹಜ ಕುತೂಹಲದಿಂದ  ಅಲ್ಲಿ ಇಲ್ಲಿ ಓಂಗಿ‌ ಸ್ವಲ್ಪ ಸ್ವಲ್ಪ ಕೇಳಿಸಿಕೊಳ್ತಿದ್ದೆವು


ಮತ್ತೆ ಹಿಂದಿನ ಕಥೆಗೆ ಬರುವೆ‌.ನನ್ನ ತಂದೆಯವರು ಹದಿನಾರು ವರ್ಷಕ್ಕೆ ಅಜ್ಜನನ್ನು ಕಳೆದುಕೊಂಡು ಮಂತ್ರ ಕಲಿತು ದುಡಿಯಲು ಶುರು ಮಾಡಿದವರು ತನಗಾಗಿ ಒಂದು ಪೈಸೆಯನ್ನೂ ಎತ್ತಿಡಲಿಲ್ಲ.ಎಲ್ಲವನ್ನೂಕುಟುಂಬಕ್ಕೇ ಕೊಡುತ್ತಿದ್ದರು.


ಮನೆಯಲ್ಲಿ‌ ನಾವು ಐದು ಜನ ಮಕ್ಕಳು ದೊಡ್ಡ ಚಿಕ್ಕಪ್ಪನ ಮಗಳು ನನ್ನ ವಯಸ್ಸಿನ ಸಂಧ್ಯಾ ಬೆಳೆಯಲಾರಂಭಿಸಿದಂತೆ‌ 

ಮನೆಯಲ್ಲಿ ಭಿನ್ನಾಭಿಪ್ರಾಯಗಳು ವ್ಯಾಜ್ಯ ಗಲಾಟೆ ಶುರು ಆಯಿತು.ಎಲ್ಲರ ಮನೆ ದೋಸೆಯೂ ತೂತೇ ಅಲ್ವೇ? 


ಅಂತೂ ಇಂತೂ ತಂದೆಯವರಿಗೆ ನಲುವತ್ತನಾಲ್ಕು ವಯಸ್ಸಾದಾಗ ಆಸ್ತಿ ಪಾಲಾಯಿತು.

ನಾನು ಒಂದನೇ ತರಗತಿಗೆ ಸೇರಿದ ಸಮಯದಲ್ಲಿ ಹಿರಿಯ ಮನೆ ಪಾಲಾಯಿತು ,ತಂದೆಯವರಿಗೆ ಆಗ ನಲುವತ್ತನಾಲ್ಕು ವರ್ಷ ಪ್ರಾಯ .

ಸ್ವಲ್ಪ ತೋಟ ,ಸ್ವಲ್ಪ ಗದ್ದೆ ತಂದೆಯವರ ಪಾಲಿಗೆ ಬಂತು.ಮನೆ ಕಟ್ಟಲು ಪುಡಿಕಾಸು ಕೈಯಲ್ಲಿ ಇರಲಿಲ್ಲ..ಪೂರ್ತಿಯಾಗಿ ಸಾಲ ಮಾಡಿ ಮನೆ ಕಟ್ಟಬೇಕಾಯಿತು.ಆಗಿನ ಕಾಲಕ್ಕೆ ಬಡ್ಡಿಗೆ ಸಾಲ ಕೊಡುತ್ತಿದ್ದ ಸಾವ್ಕಾರರಾಗಿದ್ದ ಸೊಂದಿ ಗಣಪಣ್ಣ ಅವರ ಬಳಿ 19,000₹ ಸಾಲ ಪಡೆದರೆಂದು ಹಿರಿಯರು ಮಾತನಾಡುವಾಗ ಕೇಳಿದ ನೆನಪು ನನಗೆ‌ .ಆಗಿನ ಕಾಲಕ್ಕೆ ದೊಡ್ಡ ಮೊತ್ತವೇ ಇರಬೇಕು ಅದು.

ತಾಯಿಯವರು ನನ್ನ ಸಣ್ಣ ತಮ್ಮ ಗಣೇಶನ ಬಸುರಿ.ಹೆರಿಗೆ ಮತ್ತು ಬಾಣಂತನಕ್ಕಾಗಿ ನನ್ನ‌ಮತ್ತುನ ತಮ್ಮ ಈಶ್ವರನ ಜೊತೆಗೆ ಅಮ್ಮ ಅಜ್ಜನ‌ ಮನೆಗೆ ಬಂದಿದ್ದರು ಅಣ್ಣ ಮತ್ತು ಅಕ್ಕ ಶಾಲೆಗೆ ಕೊಡ್ಲೊ ಮೊಗರಿನ ಶಾಲೆಗೆ ಹೋಗುತ್ತಿದ್ದ ಕಾರಣ ಹೋಗುತ್ತಿದ್ದ ಕಾರಣ ನನ್ನ‌ ದೊಡ್ಡಮ್ಮನ ಮನೆ ಕತ್ತೆರಿ ಮೂಲೆಯಿಂದ ಶಾಲೆಗೆ ಹೋಗುತ್ತಿದ್ದರು.

ಈ ಸಮಯದಲ್ಲಿಯೇ ಉಕ್ಕಿ ಹರಿಯುವ ತೋಡಿನ ನೀರಿಗೆ ಬಿದ್ದು ಬೆಳ್ಳಕ್ಕೆ ಹೋಗಿ‌ ಪವಾಡ ಸದೃಶವಾಗ ಬದುಕುಳಿದದ್ದು ನಾನು 

ಅಂತೂ ತಮ್ಮ‌ಪಾಲಿಗೆ ಬಂದಿದ್ದ ಅಂಗೈ ಅಗಲದ ಗುಡ್ಡವನ್ನು ಕಡಿದು ಮಣ್ಣಿನ ಮನೆ ಕಟ್ಟಿದರು.ಸಾರಣೆ ಇಲ್ಲದ ಮಣ್ಣಿನ‌‌ಮನೆಯಲ್ಲಿ ಎಲ್ಲೆಡೆ ನೀರು ಒಸರುತ್ತಿತ್ತು.ಆದರೂ ನಮಗೆ ಹೊಸ ಮನೆಗೆ ಬಂದ ಸಂಭ್ರಮ ,ಹೊಸ ಮನೆ ಒಕ್ಕಲಾಗುವಾಗ ಸಣ್ಣ ತಮ್ಮ ಗಣೇಶ ಎರಡು ತಿಂಗಳ ಮಗು.ನಾವು ಕೊಂಡಾಟದಿಂದ ಗಂಚ ಎಂದು ಕರೆಯುತ್ತಿದ್ದೆವು.

ಮನೆ ಏನೋ ಆಯಿತು‌ ಮನೆಗಾಗಿ‌ ಮಾಡಿದ ಸಾಲವನ್ನು ಹಿಂದೆ ಕೊಡಬೇಕಲ್ಲ..ಗಾಣದೆತ್ತಿನಂತೆ ಹಗಲು ರಾತ್ರಿ ತಂದೆ ತಾಯಿ ದುಡಿದು ಪೈಸೆಗೆ ಪೈಸೆ ಕೂಡಿಸಿ ತಾಯಿ ತನಗಾಗಿ ಒಂದು ಸೀರೆಯನ್ನಾಗಲೀತಂದೆಯವರು ತಮಗಾಗಿ  ಅಂಗಿಯನ್ನಾಗಲೀ ತೆಗೆಯದೆ ತಮಗಾಗಿ ಏನೊಂದೂ ಖರ್ಚು ಮಾಡದೆ ಸಾಲ ಬೂಟಿದರು.

ನಮಗೂ ಲಂಗಕ್ಕೆ ಹೊರಗಿನಿಂದ ಬಟ್ಟೆ ತರುತ್ತಿರಲಿಲ್ಲ.ತಂದೆ ಪುರೋಹಿತರಾದ ಕಾರಣ ಮುಂಡು ಎಂಬ ಬಿಳಿ ಬಟ್ಟೆ ದಕ್ಷಿಣೆಯಾಗಿ ಸಿಗುತ್ತಿತ್ತು.ಆಗ ಬಣ್ಣದ ಪುಡಿಗಳು ಸಿಗುತ್ತಿದ್ದವು.ಈಗಲೂ ಸಿಗಬಹುದೋ ಏನೋ..ಹಸಿರು ನೀಲಿ ಕೆಂಪು ಕಾಪಿ ಪುಡಿ ರಂಗಿನ ಪುಡಿಯನ್ನು ತಂದು ಪ್ರತ್ಯ ಪ್ರತ್ಯೇಕವಾಗಿ ಪಾತ್ರೆಯ ನೀರಿಗೆ ಹಾಕಿ ಕುದಿಸಿ ಅದರಲ್ಲಿ ಬಿಳಿ ಮುಂಡನ್ನು ಮುಳುಗಿಸಿ ತೆಗೆದು ಒಣಗಿಸುತ್ತಿದ್ದರು.ಹೀಗೆ ತಯಾರಾದ ಮೂರು‌ನಾಕು ಬಗೆಯ ಬಣ್ಣದ ಬಟ್ಟೆಯಲ್ಲಿಯಲ್ಲಿ ನನಗೆ ಅಕ್ಕನಿಗೆ  ಲಂಗ ರವಿಕೆ ಅಣ್ಣ ತಮ್ಮಂದಿರಿಗೆ ಅಂಗಿ ಚಡ್ಡಿ ಹೊಲಿಸುತ್ತಿದ್ದರು.ಅಮ್ಮನ ಅಕ್ಕ ದೊಡ್ಡಮ್ಮನ ಮಕ್ಕಳಿಗೂ ಇದರದ್ದೇ ಬಟ್ಟೆ ಬರೆ.ಅವರ ಪರಿಸ್ಥಿತಿಯೂ ನಮಗಿಂತ ಭಿನ್ನವಾಗಿ ಏನೂ ಇರಲಿಲ್ಲ.

ಬಹುಶಃ ಅಕ್ಕ ಇದೇ ಲಂಗ ರವಿಕೆ ತೊಟ್ಟೇ ಬೆಳೆದಳು.ಅಂಗಡಿಯಿಂದ  ತಂದ ಬಣ್ಣ ಬಣ್ಣದ ಹೂವು ಬಳ್ಳಿಗಳ ಚಿತ್ತಾರದ ಬಟ್ಟೆಯ ಲಂಗ ರವಿಕೆಯನ್ನು ಅವಳು ತೊಟ್ಟೇ ಇಲ್ಲ ಎಂದು ನೆನಪು.ನನಗೆ ನಾಲ್ಕನೆಯ ತರಗತಿಯಲ್ಲಿದ್ದಾಗ ಕೋಳ್ಯೂರಾಯನಕ್ಕೆ ಒಂದು ಬಣ್ಣ ಬಣ್ಣದ ಹೂವಿನ ಚಿತ್ತಾರದ ಬಟ್ಟೆ ತಂದು ಸ್ಕರ್ಟ್ ಹೊಲಿಸಿದ್ದು ನೆನಪಿದೆ

ನಂತರ ಐದನೆಯ ತರಗತಿಗೆ ಮತ್ತೆ ನಾನು ಅಜ್ಜನ‌ಮನೆ ಸೇರಿ ಮೀಯಪದವಿನ ವಿದ್ಯಾವರ್ಧಕ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿದೆ

ಅಜ್ಜ ಒಂದೆರಡು ಹಸಿರು ಕೆಂಪು ಗುಲಾಬಿ‌ ಬಣ್ಣ ಬಣ್ಣದ ಡಿಸೈನಿನ ಬಟ್ಟೆ ಯನ್ನು ದಿನಕರಣ್ಣನ ಅಂಗಡಿಯಿಂದ ತೆಗೆದು ಅಲ್ಲಿಯೇ ನನಗೆ ಹೊಲಿಸಿಕೊಟ್ಟಿದ್ದರು.

ಈ ಮೀಯಪದವಿನ ವಿದ್ಯಾವರ್ಧಕ ಶಾಲೆ ನನ್ನ ಬದುಕಿಗೆ ಬಣ್ಣವನ್ನು ತುಂಬುವ ಕೆಲಸ ಮಾಡಿತ್ತು.ಎಲ್ಲೋ ಒಂದು ಮೂಲೆಯಲ್ಲಿ ನನ್ನಷ್ಟಕ್ಕೆ ಇದ್ದ ಕಲಿಯುವುದರಲ್ಲಿಯೂ ಅಷ್ಟಕಷ್ಟೇ ಇದ್ದ ನನ್ನನ್ನು ಗುರುತಿಸಿ ಮುಂದೆ ತಂದವರು ಇಲ್ಲಿನ ಶಿಕ್ಷಕರು.ಈ ಶಾಲೆಯಲ್ಲಿ‌ ಬಹಳ‌ ಕ್ರಿಯಾಶೀಲ‌ ಶಿ‌ಕ್ಷಕರಿದ್ದರು.ಮಕ್ಕಳನ್ನು ಬಾಲಕಲೋತ್ಸವಕ್ಕೆ ತಯಾರು ಮಾಡಿ ಬಹುಮಾನವನ್ನು ಬಾಚಿಕೊಂಡು ಬರುತ್ತಿದ್ದರು‌ಅಂತೆಯೇ ಆಟೋಟ ಸ್ಪರ್ಧೆಗಳಲ್ಲೂ ಮುಂಚೂಣಿಯಲ್ಲಿತ್ತು.

ಈ ಶಾಲೆಯಲ್ಲಿ ನಾನು ತರಗತಿಯ ಒಳಗೆ ಇದ್ದದ್ದಕ್ಕಿಂತ ಹೆಚ್ಚು ಹೊರಗೆ ಗ್ರೌಂಡಿನಲ್ಲಿ ಇದ್ದದ್ದೇ ಹೆಚ್ಚು.

ಸದಾ ಡ್ಯಾನ್ಸ್ ನಾಟಕ ಸ್ಪೋರ್ಟ್ಸ್..ಇದರ ತರಬೇತಿ ಸ್ಪರ್ಧೆಗೆ ಹೋಗುದು ಬಹುಮಾನ ತರುದು..ಹೆಚ್ಚು ಪಾಯಿಂಟ್ಸ್ ಯಾರಿಗೆ ಮೀಯ ಪದವು ಶಾಲೆಗೆ ಹೆಚ್ಚು ಶೀಲ್ಡ್ ಯಾರಿಗೆ ಮೀಯಪದವು ಶಾಲೆಗೆ ಎಂದು ಊರಿಡೀ ಪ್ರಶಸ್ತಿ ಫಲಕಗಳನ್ನು ಹಿಡಿದುಕೊಂಡು ಮೆರವಣಿಗೆ ಮಾಡುತ್ತಿದ್ದುದರಪಥ ಸಂಚಲನದ ವೈಭವದ ಹೆಮ್ಮೆಯ ನೆನಪು ಈಗಲೂ ರೋಮಾಂಚನ ಉಂಟು ಮಾಡುತ್ತದೆ.

ಜೊತೆಗೆ ಡ್ಯಾನ್ಸ್ ನಾಟಕ ಪ್ರಾಕ್ಟೀಸ್ ಮುಗಿಸಿ ತರಗತಿಗೆ ಹೋದಾಗ ಶಂಕರ ಶೆಟ್ಟಿ ಮಾಸ್ಟ್ರು ಈಗ್ಯಾಕೆ ಬಂದದ್ದು? ಕ್ಲಾಸು ನೆನಪಾಯ್ತಾ? ಇನ್ನೇನೂ ತಿರುಗಲಿಕ್ಕೆ ಇಲ್ವ ಎಂದು ಬೈದಾಗ ನಾನು ಮತ್ತು  ಮಾಲಿನಿ‌ ಮುಖ ಮುಖ ನೋಡಿಕೊಂಡು ಬೆಪ್ಪಾಗಿ ನಿಂತದ್ದು ನನಗೆ ಈಗಲೂ ನೆನಪಿದೆ 

ಶಾಲಾ ಕಾಲೇಜುಗಳಲ್ಲಿ‌‌ ಇಂಥಹ‌ ಒಂದು ಸಣ್ಣ ಕಾಗೆ ಜಗಳ‌ ವಿವಾದ ಅಂದಿನಿಂದ ಇಂದಿನವರೆಗೂ ಇದೆ ಮುಂದೆಯೂ ಇರುತ್ತದೆ.

ಯಾವುದೇ ಶಾಲಾ ಕಾಲೇಜಿನಲ್ಲಿ ಒಬ್ಬಿಬ್ಬರು ನಾಟಕ ಡ್ಯಾನ್ಸ್ ಭಾಷಣ ಮೊದಲಸದ್ದರಲ್ಲಿ ನಿಷ್ಣಾತ ಉಪನ್ಯಾಸಕರಿರುತ್ತಾರೆ.ಇವರು ವಿದ್ಯಾರ್ಥಿಗಳಿಗೆ ಈ ಬಗ್ಗೆ ತರಬೇತಿ ನೀಡಲು ತಮ್ಮ‌  ಬಿಡುವಿನ‌ ಸಮಯದಲ್ಲಿ‌ಕೆಲವು‌ವಿದ್ಯಾರ್ಥಿಗಳನ್ನು  ಕರೆಯುತ್ತಾರೆ.ಆಗ ಇತರರು ಕಳುಹಿಸದೆ ತಕರಾರು ಮಾಡುದು ಇರ್ತದೆ‌.ಶಾಲೆಯ ಸಮಯದ ನಂತರ ಮಾಡಿ ಎನ್ನುದು..ಶಾಲಾ ಸಮಯದ ನಂತರ ಈ ಮಕ್ಕಳು ನಿಲ್ಲಬೇಕಲ್ಲ..

ನಾವು ಸಣ್ಣಗಿದ್ದಾಗ ಈ ದೊಡ್ಡವರ ಸಂಗತಿ ನಮಗೆ ಗೊತ್ತಾಗದೆ ಪೆಚ್ಚಾಗುತ್ತಿದ್ದೆವು.ದೊಡ್ಡವರಾಗಿ ಶಿಕ್ಷಕರಾದಾಗ ಇವನ್ನೆಲ್ಲ ಹೊಂದಾಣಿಕೆ ಮಾಡಿಕೊಂಡು ಬದುಕಲು ಕಲಿತೆ ನಾನು‌.

ನಮ್ಮ‌ ಮೀಯಪದವು ಶಾಲೆಯಲ್ಲಿ ಪ್ರತಿಯೊಂದು ಕೆಲಸವನ್ನು ಬಹಳ ಶ್ರದ್ಧೆಯಿಂದ ಅಚ್ಚುಕಟ್ಟಾಗಿ‌ ಮಾಡುತ್ತಿದ್ದರು.ಅದರಲ್ಲಿ ಬಹಳ ನೆನಪಿಡುವಂತಹದ್ದು‌ ಶಾಲೆಯ ಅಸೆಂಬ್ಲಿ.

ಅಸೆಂಬ್ಲಿಗೆ ಶಾಲಾನಾಯಕ/ಕಿ ನಡುವೆ ಧ್ವಜಸ್ಥಂಭದ ಬಳಿ‌ ನಿಲ್ತಾರೆ

ಅವರ ಎಡಬದಿನಗೆ ನಾಲ್ಕು ಐದು ಸಾಲು ಹುಡುಗರು.ಬಲಬದಿಗೆ ನಾಲ್ಕು ಸಾಲು ಹುಡುಗಿಯರು

ಪ್ರತಿ ಸಾಲನ್ನು ಒಂದು ತಂಡವಾಗಿ ಪರಿಗಣಿಸುತ್ತಿದ್ದರು ಪ್ರತಿ ತಂಡಕ್ಕೆ ಓರ್ವ ಸ್ವಾಂತಂತ್ರ್ಯ ಹೋರಾಟಗಾರರ ಹೆಸರು ಇರುತ್ತಿತ್ತು‌ಉದಾಹರಣೆಗೆ ಸುಭಾಷ್  ಚಂದ್ರ ಭೋಸ್ ಬಾಲಗಂಗಾಧರ ತಿಲಕ್ ,ಹುಡುಗಿಯರ ತಂಡಕ್ಕೆ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ,ಕಿತ್ತೂರ ರಾಣಿ ಚೆನ್ನಮ್ಮ‌,ಉಳ್ಳಾಲ ರಾಣಿ ಅಬ್ಬಕ್ಕ ಇತ್ಯಾದಿ.

ಸಾಮಾನ್ಯವಾಗಿ ಕಲಿಕೆಯಲ್ಲಿ‌ಮುಂದೆ ಇರುವವರು ಈ ತಂಡಗಳ ನಾಯಕರಾಗಿರುತ್ತಿದ್ದರು.ಅಸೆಂಬ್ಲಿ‌‌ಆಗುವಾಗ ಬಾಲ ಗಂಗಾಧರ ತಿಲಕ್ ಎಂದು ಒಂದು ಹೆಜ್ಜೆ ಮುಂದೆ ಹೋಗಿ ಅಟೆಂನ್ಷನ್ ಎಂದು ಹೇಳಿ ಸೆಲುಟ್ ಎಂದು ಸೆಲುಟ್ ಹೊಡೆದು ಸ್ಡ್ಟಾಂಡ್ ಇಟಗ ಈಸ್  ಎಂದು ಮತ್ತೆ ಸ್ವಸ್ಥಾನಕ್ಕೆ ತಂಡದ ನಾಯಕ ಬರುವ ಕ್ರಮ ಇತ್ತು

ಇದೊಂದು ತಂಡದ ನಾಯಕನಿಗೆ ಬಹಳ ಗೌರವ ಹೆಮ್ಮೆಯ ವಿಚಾರ ಆಗಿತ್ತು 

ನಾನು ಹುಡುಗಿಯರ ಮೊದಲ ತಂಡದ ನಾಯಕಿ ಆಗಿದ್ದೆ.ಈ ತಂಡದ ಹೆಸರು ಝಾಂಸಿರಾಣಿ ಲಕ್ಷ್ಮೀ .

ಝಾಂಸಿರಾಣಿ ಲಕ್ಷ್ಮೀಬಾಯಯಿಯ ಕಥೆಯನ್ನು ನಾನು ಯಾರಿಂದ ಕೇಳಿದ್ದೆ ಎಂದು ನನಗೆ ನೆನಪಿಲ್ಕ‌ನನಗೆ ಚಂದಮಾಮ ಬಾಲಮಿತ್ರ ಓದುವ ಹವ್ಯಸ ಇತ್ತು‌ಬಹುಶಃ ಅಜ್ಜ ಇವನ್ನು ನಮಗೆ ತಂದು ಕೊಡುತ್ತಿದ್ದರು.ಅಥವಾ ಕೋಳ್ಯೂರು ಗ್ರಂಥಾಲಯದಿಂದ ತಂದು ಓದುತ್ತಿದ್ದೆವು.ಅದರಲ್ಲಿ ಝಾಂಸಿರಾಣಿಯ ಕೆಚ್ಚೆದೆಯ ಸಾಹವನ್ನು ಓದಿ ತಿಳಿದಿದ್ದೆ.ಭಾರತವನ್ನು ಬ್ರಿಟಿಷರ ಕಪಿಮುಷ್ಠಿತಿಂದ ಬಿಡಿಸಿ ಸ್ವತಂತ್ರವಾಗಿಸಲು ಝಾಂಸಿರಾಣಿ‌ ಎಲ್ಲ ವೀರರನ್ನು ಕಲೆಹಾಕಿ ಹುರಿದುಂಬಿಸಿದ್ದಳು.ದತ್ತು ಪುತ್ರನಿಗೆ ರಾಜ್ಯದ ಹಕ್ಕಲ್ಲ ಎಂಬ ಡಾಲ್ ಹೌಸಿಯ ನಿರ್ಬಂಧವನ್ನು ಮೀರಿ ಕೇವಲ ತನ್ನ ರಾಜ್ಯ ಝಾಂಸಿಯ ಉಳಿವಿಗಾಗಿ ಮಾತ್ರವಲ್ಲದೆ ಇಡೀ ದೇಶವನ್ನು ಸ್ವತಂತ್ರಗೊಳಿಸಬೇಕೆಂಮ ಕನಸನ್ನು ಬಿತ್ತಿದ ವೀರ ಮಹಿಳೆ ಅವಳು.ಎಂಟು ವರ್ಷದ ಮಗನನ್ನು ಬೆನ್ನಿಗೆ ಕಟ್ಟಿಕೊಂಡೇ ಕತ್ತಿ ಹಿರಿದು ಬ್ರಿಟಿಷರೊಡದೆ ಹೋರಾಡಿದ ಧೀರೆ ಅವಳು

ಇನ್ನೇನು ಬ್ರಿಟಿಷರ ಕೈ ಮೇಲಾಗುತ್ತದೆ ಎಂದರಿವಾದಾಗ ಶತ್ರುಗಳಿಗೆ ಶರಣಾಗಲಾರೆ ಎಂದು ಕಠಾರಿಯಿಂದ ತನ್ನ ಎದೆಗೆ ಇರಿದುಕೊಂಡು ತನ್ನ ಸ್ವತಂತ್ರ ನೆಲದಲ್ಲಿಯೇ ಪ್ರಾಣತ್ಯಾಗ ಮಾಡಿದ ಸಾಹಸಿ ಅವಳು

.ಈ ಕಥೆ ಚಿಕ್ಕಂದಿನಲ್ಲಿಯೇ ನನ್ನ‌ಮನಸಿಗೆ ಬಹಳಷ್ಟಿ ನಾಟಿತ್ತು.ನಾನೂ ಝಾನ್ಸಿರಾಣಿಯಂತೆ ಆಗಬೇಕು ಎಂದುಕೊಂಡಿದ್ದೆ.

ಐದನೆಯ ತರಗತಿಯಲ್ಲಿರುವಾಗಲೇ ಏಳನೆಯ ತರಗತಿಯ ಜಾಣ ವಿದ್ಯಾರ್ಥಿನಿಯರು ಈ ಝಾನ್ಸಿರಾಣಿ ಲಕ್ಷ್ಮೀ ಬಾಯಿ ತಂಡದ ನಾಯಕಿಯರಾಗಿದ್ದುದನ್ನು ಗಮನಿಸಿದ್ದೆ.ಝಾನ್ಸಿ ರಾಣಿ ತಂಡದ ನಾಯಕಿಯಾಗಬೇಕಿದ್ದರೆ ತರಗತಿಯಲ್ಲಿ ಮೊದಲ ಸ್ಥಾನ ಗಳಿಸಬೇಕೆಂದು ನನಗೆ ಗೊತ್ತಾಗಿತ್ತು.

ಅಲ್ಲಿಂದ ನಾನು ಪ್ರಥಮ ಸ್ಥಾನ ಗಳಿಸುವುದಕ್ಕಾಗಿ ಓದಲು ಶುರು ಮಾಡಿದೆ.

ಏಳನೆಯ ತರಗತಿಗೆ ಬಂದಾಗ ಕಲಿಕರಯಲ್ಲಿ ಕೋಡಿಯಡ್ಕ ಮಾಸ್ಟ್ರ ಮಗಳು ಶೈಲಜಾ ನನಗೆ ಪ್ರತಿಸ್ಪರ್ಧಿಯಾಗಿದ್ದಳು.ನನಗಿಂತ ಒಂದೆರಡು ಅಂಕ ಅವಳಿಗೆ ಹೆಚ್ಚಿರುತ್ತಿತ್ತು.ಎಷ್ಟಾದರೂ‌ಮಾಸ್ಟ್ರ ಮಗಳಲ್ವಾ? ಮಾಸ್ಟ್ರಿಗೆ ಹೇಳಿ ಕೊಡಲು ಬರುತ್ತದೆ ಮಗಳನ್ನು ಪರೀಕ್ಷೆಗೆ ತಯಾರು ಮಾಡಿ ಕಳುಹಿಸ್ತಾರೆ.ಹೇಗೆ ಪ್ರಶ್ನೆಗಳುಬರುತ್ತವೆ ಹೇಗೆ ಉತ್ತರಿಸವೇಕೆಂಬ ತರಬೇತಿ ಕೊಟ್ಟಿರ್ತಾರೆ

ಮನೆಯಲ್ಲಿ ಹೇಳಿಕೊಡುವವರಿಲ್ಲ‌ದ ನಾನು ನಾನೇ ಓದಿ ತಯಾರಾಗಬೇಕಿತ್ತು.  

ಅಥವಾ ಶೈಲಜಾ ನನಗಿಂತ ಜಾಣೆ ಇದ್ದಿರಬಹುದು‌ ಒಟ್ಟಿನಲ್ಲಿ ಶೈಲಜಾಳಿಗೆ ನನಗಿಂತ ಒಂದೆರಡು ಅಂಕ ಹೆಚ್ಚು ಬರ್ತಿತ್ತು 

 ಹಾಗಾಗಿ ನನ್ನ ಕನಸಿನ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ತಂಡದ ನಾಯಕಿ ಆಗುವುದು ಸುಲಭವಿರಲಿಲ್ಲ

ಆದರೆ ನನ್ನ ಅದೃಷ್ಟಕ್ಕೆ ಅವಳು ಶಾಲಾ ನಾಯಕ ಸ್ಥಾನದ ಚುನಾವಣೆಗೆ ನಿಂತು ಗೆದ್ದು ಶಾಲಾ ನಾಯಕಿಯಾಗಿ ಅಸೆಂಬ್ಲಿಯಾಗುವಾಗ ಧ್ವಜಸ್ಥಂಭದ ಬಳಿ ನಿಂತಳು‌

ನನಗೆ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ತಂಡದ ನಾಯಕಿಯಾಗುವ ಅವಕಾಶ ಸಿಕ್ಕಿತ್ತು.ಅಂದು ಎದೆಯುಬ್ಬಿಸಿ‌  ಝಾನ್ಸಿರಾಣಿ  ಲಕ್ಷ್ಮೀ ಬಾಯಿಯ ಹೆಸರಿನಲ್ಲಿ‌ ಸೆಲ್ಯೂಟ್ ಹೊಡೆಯುತ್ತಿದ್ದಾಗ ಉಂಟಾಗುತ್ತಿದ್ದ ರೋಮಾಂಚನ ಇಂದಿಗೂ ನೆನಪಾದಾಗ ಆಗುತ್ತದೆ ನನಗೆ‌

ಝಾನ್ಸಿ ರಾಣಿಯಂತೆ ವೀರ ಸೇನಾನಿಯಾಗಲು ನನಗೆ ಸಾಧ್ಯವಾಗಿಲ್ಲ.ಮಿಲಿಟರಿಗೆ ಸೇರುದು ಹೇಗೆಂದೇ ಗೊತ್ತಿಲ್ಲದ ಕಾಲದಲ್ಲಿ ನಾನು ಕಾಲೇಜು ಓದಿದ್ದೇ ದೊಡ್ಡ ಸಾಧನೆ.

ಕೂಸು ಎಂತ ಓದಿದರೆಂತ ಒಲೆ ಬೂದಿ ಒಕ್ಕುದು ತಪ್ಪ( ಹುಡುಗಿ‌ ಏನು‌ ಓದಿದರೇನು‌ ಒಲೆಯ ಬೂದಿ ಗೋರುವುದು ತಪ್ಪದು)ಎಂಬ ಮಾತು ಪ್ರಚಲಿತವಿದ್ದ ಕಾಲದಲ್ಲಿ ಹುಟ್ಟಿ ಬೆಳೆದ ನಾನೀಗ ಉಪನ್ಯಾಸಕಿಯಾಗಿದ್ದೇನೆ ಕೆಲವು ಪುಸ್ತಕ ಲೇಖನ ಬರೆದು ಲೇಖಕಿ ಎಂದೆನಿಸಿಕೊಂಡಿದ್ದೇನೆ ಎಂಬುದೇ ಒಂದು ಸೋಜಿಗದ ವಿಚಾರ....ಇದು ನಿಜವೋ ಭ್ರಮೆಯೋ‌ಎಂದು ಚಿವುಟಿ ನೋಡಿಕೊಳ್ಳುವ ಹಾಗೆ ಆಗುತ್ತದೆ ಕೆಲವೊಮ್ಮೆ..ಆದರೆ ಈ ಹಂತ ಮುಟ್ಟಲು‌ನಡೆದ ದಾರಿ ಹುಲ್ಲು‌‌ ಹಾಸಿನದಾಗಿರಲಿಲ್ಲ..ಹಿಡಿಯಷ್ಟು ಪಡೆಯಲು‌ ಮುಡಿಯಷ್ಟು‌ ಕಳೆದುಕೊಂಡೆನೋ ಏನೋ‌ಎಂದು‌ ಕೆಲವೊಮ್ಮೆ ಅನಿಸಿದ್ದಿದೆ..ಆದರೆ ಹಿಂದೆ ಮತ್ತೆ ನಡೆಯಲಾಗದು..ಮುಂದೆ ನಡೆಯುವುದೊಂದೇ ಇರುವ ದಾರಿ...ಅಂತಿಮ ಗುರಿ ಯಾವುದು ? ನನಗೂ ಗೊತ್ತಿಲ್ಲ‌..

ತೇ ನ ವಿನಾ ತೃಣಮಪಿ ನ ಚಲತಿ..

ಎಲ್ಲವೂ ಭಗವಂತನ ಆಣತಿಯಂತೆಯೇ ನಡೆಯುತ್ತದೆ.ಅವನ ಆಣತಿಯ ಹೊರತಾಗಿ ಹುಲು ಕಡ್ಡಿ ಕೂಡ ಅಲುಗಾಡುವುದಿಲ್ಲ..ಮತ್ತೆ ನಮ್ಮದೇನಿದೆ ಮಹಾ.

ನಾನು ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಆಗದಿದ್ದರೂ ಡಾ.ಕೆ ಎನ್ ಗಣೇಶಯ್ಯರ ಪ್ರಸಿದ್ದ ಕಾದಂಬರಿ ಬಳ್ಳಿ ಕಾಳ ಬೆಳ್ಳಿಯ ಜೀವಂತ ಪ್ರಮುಖ ಪಾತ್ರ ಡಾ.ಲಕ್ಷ್ಮೀ ಪೋದ್ದಾರ್ ಆಗಿರುವೆ.ಇಲ್ಲೂ ನಾನು ತುಳು ಸಂಶೋಧಕಿಯಾಗಿಯೇ ಕಾಣಿಸಿಕೊಂಡಿರುವೆ.

ಈ ಕಾದಂಬರಿಯ ಬಿಡುಗಡೆಗೆ ಬಂದಿದ್ದ ಈಗಿನ ಬ್ರಿಟನ್ ಪ್ರಧಾನಿಯ ಅತ್ತೆ ಇನ್ಫೋಸಿಸ್ ನ ಸುಧಾ ಮೂರ್ತಿಯವರ ಜೊತೆ ಕುಳಿತಿದ್ದಾಗ ಒಂದು ಸೆಲ್ಫಿ‌ತಗೊಂಡಿದ್ದು‌ಅದನ್ನಿಲ್ಲಿ‌ ಹಾಕಿದ್ದೇನೆ..

ಡಾ.ಲಕ್ಷ್ಮೀ‌ ಜಿ‌ ಪ್ರಸಾದ್

ಪೆಟ್ಟಿಗೆ ಹೊತ್ತುಕೊಂಡು ನಡೆದೆ..ಕಮಟು ವಾಸನೆಯಿಂದ ಮುಕ್ತಿ ಪಡೆದೆ ..

 ನನಗೂ ಆತ್ಮವಿದೆ‌.ಅದಕೂ ಒಂದು ಕಥೆಯಿದೆ - 21 


ಪೆಟ್ಟಿಗೆ ಹೊತ್ತುಕೊಂಡು ನಡೆದೆ..ಕಮಟು ವಾಸನೆಯಿಂದ ಮುಕ್ತಿ ಪಡೆದೆ ..

ಒಂದನೆಯ ತರಗತಿಯನ್ನು ನಾನು ಮೀಯಪದವಿನ ವಿದ್ಯಾವರ್ಧಕ ಪ್ರಾಥಮಿಕ ಶಾಲೆಯಲ್ಲಿ ಓದಿದ್ದೆ.ನನ್ನ ಅದೃಷ್ಟಕ್ಕೆ ಬಹಳ ಒಳ್ಳೆಯ ಶಿಕ್ಷಕಿ ವೇದವಲ್ಲಿ ಟೀಚರ್ ನನಗೆ ಸಿಕ್ಕಿದ್ದರು.ನಾನು ಅಕ್ಷರಗಳನ್ನು ಉಲ್ಟಾ ಬರೆಯುತ್ತಿದ್ದೆ.ಬಹುಶಃ ಈಗ ಅದನ್ನು ಡಿಸ್ ಲೆಕ್ಸಿಯ ಎಂದು ಗುರುತಿಸುತ್ತಿದ್ದರೋ ಏನೋ..ಯಾಕೆ ನನಗೆ ಅಕ್ಷರವನ್ನು ನೇರ ಬರೆಯಲಾಗುತ್ತಿರಲಿಲ್ಲ ಎಂದು ಗೊತ್ತಿಲ್ಲ.ಎಲ್ಲ ಅಕ್ಷರಗಳನ್ನು ಬರೆಯುತ್ತಿದ್ದೆ.ಆದರೆ ಎಲ್ಲವೂ ತಲೆಕೆಳಗಾಗಿ ಇರುತ್ತಿದ್ದವು


ಇದನ್ನು ಸರಿ ಪಡಿಸಲು ನನ್ನ ಅಮ್ಮ ದೊಡ್ಡಮ್ಮನ ಮಗಳು ಅಕ್ಕ( ಅಕ್ಕು ) ಬಹಳಷ್ಟು ಪ್ರಯಾಸಪಟ್ಟಿದ್ದರು.ಸಾಕಷ್ಟು ಪೆಟ್ಟು ಕೂಡ ಬಿದ್ದಿತ್ತು ನನಗೆ.ಈ ನಡುವೆ ನಮ್ಮ ಶಿಕ್ಷಕಿ ಒಂದು ಉಪಾಯ ಕಂಡು ಹಿಡಿದರು

ಅಕ್ಷರದ ಆರಂಭದ ಸುಳಿಹಾಕಿ ಕೊಡುತ್ತಿದ್ದರು

ನಂತರ ಅದನ್ನು ಮುಂದುವರಿಸಿ ಸರಿಯಾಗಿ ಬರೆಯಲು ನನಗೆ ಬರುತ್ತಿತ್ತು.ಈ ಬಗ್ಗೆ ನನಗೆ ಸಹಾಯ ಮಾಡುವಂತೆ ಓರ್ವ ಜಾಣ ವಿದ್ಯಾರ್ಥಿನಿ ಶಾರದೆಗೂ ಹೇಳಿಕೊಟ್ಟರು.ವೇದವಲ್ಲಿ ಟೀಚರ್ ಅಥವಾ ಶಾರದೆ ನನಗೆ ಎಲ್ಲ ಅಕ್ಷರಗಳ ಆರಂಭದ ಸುಳಿ ಹಾಕಿ ಕೊಡುತ್ತಿದ್ದರು.


ಅದನ್ನು ಮುಂದುವರೆಸಿ ಹೇಗೋ ವರ್ಷವಾಗುವಷ್ಟರಲ್ಲಿ ಎಲ್ಲ ಅಕ್ಷರಗಳನ್ನು ಕಾಗುಣಿತವನ್ನು ಬರೆಯಲು ಕಲಿತಿದ್ದೆ.ಉಳಿದಂತೆ ಕಲಿಕೆಯಲ್ಲಿ ನಾನು ಜಾಣೆ ಇದ್ದೆ ಎಂದು ಕಾಣುತ್ತದೆ.ಬರೆಯಲು ಮಾತ್ರ ಸಮಸ್ಯೆ ಇತ್ತೇ ಹೊರತು ಓದಲು ಇರಲಿಲ್ಲ.ಪಟ ಪಟನೆ ಓದಿ ಮೆಚ್ಚುಗೆ ಗಳಿಸುತ್ತಿದ್ದುದು ಈಗಲೂ ನನಗೆ ನೆನಪಿದೆ

ವೇದವಲ್ಲಿ ಟೀಚರ್ ಈ ಒಂದು ಉಪಾಯ ಕಂಡು ಹಿಡಿಯದೇ ಇದ್ದರೆ ಬರೆಯಲು ಬಾರದ ಶತ ದಡ್ಡ ಹುಡುಗಿಯಾಗಿ ಒಂದನೇ ತರಗತಿಯಲ್ಲಿಯೇ ಫೇಲ್ ಆಗಿ ಬಿಡುತ್ತಿದ್ದೆನೋ ಏನೋ..ಆಗ ಒಂದನೇ ತರಗತಿಯಲ್ಲಿ ಕೂಡ ಫೇಲ್ ಮಾಡುತ್ತಿದ್ದರು.

ಒಂದನೇ ತರಗತಿ ಮುಗಿಯುವಷ್ಟರಲ್ಲಿ ಅಮ್ಮ ಸಣ್ಣ ತಮ್ಮ ಗಣೇಶನನ್ನು ಹೆತ್ತು ಬಾಣಂತನ‌ ಮುಗಿಸಿ ಹೊಸತಾಗಿ ಕಟ್ಟಿದ ನಮ್ಮ ಮನೆಗೆ ಹಿಂತಿರುಗಿದ್ದರು.


ಎರಡನೆಯ ತರಗತಿಯನ್ನು ನಾನು ಅಜ್ಜನ ಮನೆಯಲ್ಲಿ ಇದ್ದುಕೊಂಡು ಮೀಯಪದವು ಶಾಲೆಯಲ್ಲಿಯೇ ಮುಂದುವರಿಯಬಹುದಿತ್ತು.ಆದರೆ ಅಮ್ಮ ,ಅಣ್ಣ ಅಕ್ಕ‌ತಮ್ಮಂದಿರ ಜೊತೆಗಿನ ಆಟದ ಸೆಳೆತ ನನಗಿತ್ತು ಕಾಣಬೇಕು‌.ನಾನೇ ಹಠ ಮಾಡಿ ತಂದೆ ಮನೆ ಸಮೀಪದ ಕೋಳ್ಯೂರು ಶಂಕರನಾರಾಯಣ ದೇವಸ್ಥಾನ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡನೆಯ ತರಗತಿಗೆ ಸೇರಿದ್ದೆ.

ಬಹುಶಃ ವಾತಾವರಣ ಬದಲಾಗಿಯೋ‌ ಇನ್ನೇನು ಕಾರಣವೋ ಗೊತ್ತಿಲ್ಲ.ನಾನಿಲ್ಲಿ ಸರಿಯಾಗಿ ಹೊಂದಿಕೊಂಡಿಲ್ಲವೇನೋ.ದಿನಾಲು ಎರಡನೆ ತರಗತಿಯ ಕೊಮ್ಮೆ ಮಾಸ್ಟ್ರ ಕೈಯಿಂದ ಪೆಟ್ಟು ತಿನ್ನುತ್ತಿದ್ದೆನಂತೆ.ಪೆಟ್ಟು ಬೀಳಲು ಮುಖ್ಯ ಕಾರಣ ತಡವಾಗಿ ಬರುವುದು ಆಗಿತ್ತಂತೆ.ಅದೃಷ್ಟವಶಾತ್ ಈ ಪೆಟ್ಟು ತಿನ್ನುತ್ತಿದ್ದ ವಿಚಾರ ನನಗೆ ಒಂದಿನಿತೂ ನೆನಪಿಲ್ಲ.ಬಾಲ್ಯದ ಸಹಪಾಠಿ ಗೆಳತಿ ಯಶೋಧೆ ಹೇಳಿ ನನಗೀ ವಿಚಾರ ನಾನು ಎಂಎ ಓದಿ ಕೆಲಸಕ್ಕೆ ಸೇರಿದ ನಂತರ ಗೊತ್ತಾಗಿತ್ತು.

ತಡವಾಗಿ ಬರುವುದಕ್ಕೆ ಏನು ಕಾರಣ ಎಂದು ನನಗೆ ಗೊತ್ತಿಲ್ಲ.


ಅದೇನೇ ಇದ್ದರೂ ದಿನಾಲು ಆರೇಳು ವರ್ಷದ ಎಳೆಯ ಹುಡುಗಿಗೆ ಹೊಡೆಯುವ ಬದಲು ಆಗಾಗ ಸಿಗುತ್ತಿದ್ದ ನನ್ನ ತಂದೆಯವರಲ್ಲಿ ಹೇಳಬಹುದಿತ್ತು.ಅಥವಾ ಬಂದು ಭೇಟಿ ಆಗುವಂತೆ ತಂದೆಯವರಿಗೆ ಚೀಟಿ ಬರೆದು ಕಳುಹಿಸಬಹುದಿತ್ತು‌.ಕೊಮ್ಮೆ ಮಾಸ್ಟ್ರು ಹಾಗೆ ಮಾಡದೆ ದಿನಾಲು ನನಗೇಕೆ ಹೊಡೆದರು ಎಂದು ನನಗೆ ಈವತ್ತಿಗೂ ಗೊತ್ತಾಗುತ್ತಿಲ್ಲ.ಇಷ್ಟಾದರೂ ನಾನು ಶಾಲೆಗೆ ಹೋಗುವುದಿಲ್ಕ ಎಂದು ಹಠ ಮಾಡದ್ದು ನಿಜಕ್ಕೂ ಅಚ್ಚರಿಯ ವಿಷಯ..ಬಹುಶಃ ಶಾಲೆಯ ಸೆಳೆತ ನನಗೆ ತುಂಬಾ ಇದ್ದಿರಬೇಕು.ತಡವಾಗಿ ಬಂದದ್ದಕ್ಕೋ ಇನ್ನೇನಕ್ಕೋ ಹೊಡೆಯುತ್ತಿದ್ದರೂ ಕೊನೆಯ ಅವಧಿಯಲ್ಲಿ ಪ್ರತಿ ದಿನ ಕೊಮ್ಮೆ ಮಾಸ್ಟ್ರು ರಸವತ್ತಾಗಿ ಅಭಿನಯದ ಮೂಲಕ ಹೇಳುತ್ತಿದ್ದ ರಾಮಾಯಣದ ಕಥೆ ನನ್ನನ್ನು ದಿನಾಲು ಶಾಲೆಗೆ ಬರುವಂತೆ ಮಾಡಿರಬಹುದು ಎಂದು ನನಗನಿಸುತ್ತದೆ.


ಈಗಲೂ ಅವರು ರಾಮಾಯಣದ ಕಥೆ ಹೇಳುತ್ತಿದ್ದುದು ಕಣ್ಣಿಗೆ ಕಟ್ಟುತ್ತಿದೆ ನನಗೆ.ರಾವಣಬಂದು ಶಿಬ ಧನುಸ್ಸನ್ನು ಎತ್ತಲು ಹೋಗಿ ಅದರಡಿಯಲ್ಲಿ ಸಿಕ್ಕಾಕೊಂಡದ್ದು.ಅಂಗದ ಸಂಧಾನದ ಸಂದರ್ಭದಲ್ಲಿ ಅಂಗದ ಬಾಲವನ್ನೇ ಸುರುಳಿಯಾಗಿ ಸುತ್ತಿ ರಾವಣನ ಸಿಂಹಾಸನಕ್ಕೆ ಸಮವಾಗಿ ಎತ್ತರಿಸಿ ಕುಳಿತದ್ದು..ಹೀಗೆ ಎಲ್ಲ ಕಥಾನಗಳನ್ನೂ ಅಭಿನಯ ಸಹಿತ ವಿವರಿಸಿದ್ದು ಅದನ್ನು ತನ್ಮಯತೆಯಿಂದ ಕೇಳುತ್ತಿದ್ದುದು ,ಶಾಲೆಯ ಮನೆಗೆ ಹೋಗುವ ಗಂಟೆ ಆಗಬಾರದೆಂದು ನಾನು ಬಯಸುತ್ತಿದ್ದುದು ನನಗೆ ನೆನಪಿದೆ.


ಎರಡನೆಯ ತರಗತಿಗೆ ಬಂದಾಗ ವಿಪರೀತ ಪೆನ್ಸಿಲ್ ಕಳೆದು ಹೋಗುತ್ತಿತ್ತು .ಹೆಚ್ಚು ಕಡುಮೆ ದಿನ ನಿತ್ಯ ತಂದೆ ಅಣ್ಣ ಅಕ್ಕ ಹೊಸ ಪೆನ್ಸಿಲ್ ತಂದು ಮೂರು ಭಾಗ ಮಾಡಿ ಒಂದು ತುಂಡನ್ನು ಕೊಡುತ್ತಿದ್ದರು.ಮನೆಗೆ ಹೋಗುವಷ್ಟರಲ್ಕಿ ಅಥವಾ ಶಾಲೆಯ ಅವಧಿಯಲ್ಲಿಯೇ ಅದನ್ನು ಕಳೆದು ಹಾಕುತ್ತಿದ್ದೆ.ಹೇಗೆ ಕಳೆದು ಹೋಗುತ್ತಿತ್ತು ಎಂದು ನನಗೆ ಗೊತ್ತಿಲ್ಲ.ಇಂದಿಗೂ ಕರ ವಸ್ತ್ರ ಪೆನ್ ಮೊದಲಾದವುಗಳನ್ನು‌ ಗೊತ್ತಿಲ್ಕದೆ ಬೀಳಿಸಿಕೊಂಡು ಕಳೆದು ಹಾಕುವ ಅಭ್ಯಾಸ ನನಗಿದೆ.ಆದರೆ ಎರಡನೆಯ ತರಗತಿಯಲ್ಲಾದದ್ದು ಮಾತ್ರ ಬಹುವಿಚಿತ್ರ.ಬಹುಶಃ ನನ್ನ‌ಮೈ ಮರವೆಯನ್ನು ಅರಿತ ಯಾರೋ ಸಮೀಪ ಕುಳಿತಿರುತ್ತಿದ್ದ ವಿದ್ಯಾರ್ಥಿ ತೆಗೆದು ತನ್ನ ಚೀಲದೊಳಗೆ ಬಾಕ ಸಹಜ ಅಸೆಯಿಂದ ಇಡುತ್ತಿದ್ದಿರಬಹುದು ಎಂದು ನನಗೆ ಈಗ ಅನಿಸ್ತದೆ.ಇದನ್ನು ಕೂಡ ಮಾಸ್ಟ್ರಿಗೆ ಪತ್ತೆ ಮಾಡಲು ಅವಕಾಶವಿತ್ತು.ಕಳೆದು ಹಾಕುದಕ್ಕೆ ನನಗೆ ಹೊಡೆದು ಬಡಿದು ಮಾಡುತ್ತಿದ್ದರೇ ಹೊರತು‌ ತರಗತಿಯೊಳಗೆ ಎಲ್ಲಿ ಮಾಯವಾಗುತ್ತದೆ ಎಂದು ಪತ್ತೆ ಮಾಡಲು ಯತ್ನ ಮಾಡಿಲ್ಲ ಎಂದೆನಿಸ್ತದೆ.


ಆ ಸಣ್ಣ ವಯಸ್ಸಿಗೆ ದಿನ ನಿತ್ಯ ಪೆಟ್ಟು ತಿಂದಾಗ ನನ್ನ‌ ಮನಸ್ಥಿತಿ ಹೇಗಿತ್ತು ? ಖಂಡಿತವಾಗಿಯೂ ಇತರ ಮಕ್ಕಳ ಎದುರು ಅವಮಾನ ಆಗಿರ್ತದೆ.ನೋವಾಗಿರುತ್ತದೆ.ಹಾಗಾಗಿ ಮನಸ್ಸು ಕುಗ್ಗಿ ಹೋಗಿದ್ದಿರಬಹುದು.ನಾನು ಮನೆಯಲ್ಲಿ ಹೇಳಲಿಲ್ಲವೇಕೆ  ? ಇಂದಿಗೂ ನನಗೆ ಗೊತ್ತಾಗುತ್ತಿಲ್ಕ  ಬಹುಶಃ ನನ್ನ ಶಾರ್ಟ್ ಟೆಂಪರ್ ಗೆ ಈ ಕಟು ಅನುಭವವೇ ಕಾರಣ ಆಗಿದ್ದಿರಬಹುದಾ ? ಇರಲೂ ಬಹುದೆನಿಸ್ತದೆ.


ವಾಸ್ತವದಲ್ಲಿ ಕೊಮ್ಮೆ ಮಾಸ್ಟ್ರು ನನಗೆ ಇಂದಿಗೂ ಪ್ರಿಯರೇ..ಹೊಡೆದಿದ್ದರೂ ಅದನ್ನು ಮರೆಸುವಷ್ಟು ಒಲವನ್ನೂ ಅವರು ತೋರಿರಬಹುದು.ಇಲ್ಲವಾಗಿದ್ದರೆ ಅವರ ಮೇಲೆ ನನಗೆ ಪ್ರೀತಿಯ ಬದಲು ದ್ವೇಷ ಇರುತ್ತಿತ್ತು.ನನಗೆ ದೊಡ್ಡವಳಾದ ನಂತರ ಯಶೋದೆ ಹೇಳಿದಾಗ ಹೊಡೆತ ತಿನ್ನುತ್ತಿದ್ದುದು ಚೂರು ನೆನಪಾಯಿತೇ ಹೊರತು ಮಾಸ್ಟ್ರ ಬಗ್ಗೆ ಕೋಪ ಉಂಟಾಗಿರಲಿಲ್ಲ


ಮೂರನೆಯ ತರಗತಿಗೆ ಬಂದಾಗ ಈರೋಡಿಯ ಗಣಪತಿ ಭಟ್ ನಮಗೆ ಮಾಸ್ಟ್ರಾಗಿದ್ದರು.ನಾಲ್ಕನೆಯ ತರಗತಿಯಲ್ಲಿ ವೇದೋಡಿ ನಾರಾಯಣ ಭಟ್ಟರು ಮಾಸ್ಟ್ರಾಗಿದ್ದರು.ಇವರಿಬ್ಬರಿಂದ ಒಂದೇ ಒಂದು ಏಟನ್ನು ನಾನು ತಿಂದಿಲ್ಲ‌.ಬಹುಶಃ ಕಲಿಕೆಯಲ್ಲಿ ಮುಂದೆ ಇದ್ದುದರ ಜೊತೆಗೆ ಶಾಲೆಗೆ ಒಬ್ಬಳೇ ಬರಲು ಅಭ್ಯಾಸವಾಗಿ ಸಮಯಕ್ಕೆ ಸರಿಯಾಗಿ ಬಂದಿರಬಹುದು.

ಎರಡನೇ ತರಗತಿಗೆ ನಾನು ಹೊಸತಾಗಿ ಸೇರಿದ ಕಾರಣ ನನ್ನನ್ನು ಪಕ್ಕದ ಮನೆಯವರೋ ಅಥವಾ ಕೆಲಸದವರೋ ಕರೆದುಕೊಂಡು ಬರುತ್ತಿದ್ದರೆಂದು ನೆನಪು.ಹಾಗಾಗಿ ಅವರ ಸಮಯ ಕಾದು ಬರಬೇಕಾಗಿದ್ದ ಕಾರಣ ತಡವಾಗುತ್ತಿತ್ರೆಂದು ಕಾಣುತ್ತದೆ.ನಂತರ ಒಬ್ಬಳೇ ಬರಲು ಅಭ್ಯಾಸವಾಗಿ ಸಮಯಕ್ಕೆ ಸರಿಯಾಗಿ ಬಂದಿರಬಹುದು

ಈ ಸಮಯದಲ್ಲಿ ಕಾಡಿದ ಗಂಡಮಾಲೆ ಎಂಬ ಕ್ಯಾನ್ಸರ್ ಇರಬಹುದು ಎಂದು ನಮ್ಮ ಊರಿನ ವೈದ್ಯರಾದ ಬರೆ ಡಾಕ್ಟರು ಊಹಿಸಿದ್ದ ಖಾಯಿಲೆ ಮಾತ್ರ ಬಹಳ ಕಾಡಿತ್ತು ನನಗೆ‌

ಐದನೇ ತರಗತಿಗೆ ಮತ್ತೆ ನಾನು ಅಜ್ಜನ‌ಮನೆಯಲ್ಲಿ ಉಳಿದುಕೊಂಡು ಮೀಯಪದವಿನ ವಿದ್ಯಾವರ್ಧಕ ಶಾಲೆಗೆ ಸೇರಿದೆ.ಈ ಸಮಯಕ್ಕಾಗುವಾಗ ಆಯುರ್ವೇದ ವೈದ್ಯರಾದ ಕೊಡಂಗೆ ಭೀಮ ಭಟ್ಟರ ಚಿಕಿತ್ಸೆಯಲ್ಲಿ ಗಂಡ ಮಾಲೆ ಸಂಪೂರ್ಣ ಗುಣವಾಗಿತ್ತು.


ಇಲ್ಲಿಂದ ನನ್ನ ಬದುಕು ಬಣ್ಣಮಯವಾಯಿತು.ವಿದ್ಯಾರ್ಥಿಗಳನ್ನು ಬಹಳ ಪ್ರೀತಿಯಿಂದ ಕಾಣುವ ಶಿಕ್ಷಕ ವರ್ಗ ನನ್ನಲ್ಲಿ ಜೀವನೋತ್ಸಾಹ ಹುಟ್ಟಿಸಿರಬೇಕೆನಿಸ್ತದೆ.

ಬಹಳ ಅತ್ಯುತ್ಸಾಹ ನನಗಿತ್ತು.ಇದೇ ನನಗೆ ಮುಳುವಾಯಿತಾ ? ಸಂಸ್ಕೃತ ಎಂಎ ಯಲ್ಲಿ ಮೊದಲ ರ‌್ಯಾಂಕ್ ಗಳಿಸಿ ಕಟೀಲು ಕಾಲೇಜಿನ ವಾರ್ಷಿಕೋತ್ಸವದಲ್ಲಿ ವಿಠಲ ಆಚಾರ್ಯ ಸ್ಮಾರಕ ಚಿನ್ನದ ಪದಕವನ್ನು ಸ್ವೀಕರಿಸಿದ ಸಂದರ್ಭದಲ್ಲಿ ನನ್ನ ಸಂಕ್ಷಿಪ್ತ ಪರಿಚಯವನ್ನು ಮಾಡಿದ ನನ್ನ ಎಂಎ ತರಗತಿಯ ಗುರುಗಳಾಗಿದ್ದ ಪ್ರೊ ನಾಗರಾಜ ಭಟ್ ಅವರು ಕೊನೆಗೆ ಇವರ ಅತ್ಯುತ್ಸಾಹವೇ ಇವರಿಗೆ ಮುಳುವಾಗಬಹುದೋ ಏನೋ ಎಂಬ ಸಂದೇಹವನ್ನು ತೋರಿ ಉತ್ತಮ ನಾಗರಿಕತ್ವ ದೊರೆಯಲಿ ಎಂದು ಶುಭ ಹಾರೈಸಿದ್ದರು‌.ಆಗ ನನಗೂ 23 ರ ಸಣ್ಣ ವಯಸ್ಸು.ಹಾಗಾಗಿ ಅವರ ಹಾರೈಕೆಯಲ್ಲೂ ಕುಹಕವೇ ನನಗೆ ಕಾಣಿಸಿತ್ತು.ಮೊದಲೇ ಅಂತರ್ಮೌಲ್ಯ ಮಾಪನ ಅಂಕದ ವಿಷಯದಲ್ಲಿ ಅವರೊಂದಿಗೆ ತಗಾದೆ ಆದದ್ದೂ ಇದಕ್ಕೆ ಕಾರಣ ಇರಬಹುದು.

ಈಗ ಅವರು ಹೇಳಿದ್ದರಲ್ಲಿ ಸತ್ಯಾಂಶ ಇದೆ ಎಂದು ಕಾಣುತ್ತದೆ ನನಗೆ.


ನಾನು ಏಳನೆಯ ತರಗತಿ ಓದುತ್ತಿದ್ದಾಗ ನನ್ನ ಅಕ್ಕನಿಗೆ ಮದುವೆಯಾಯಿತು.ಹಾಗಾಗಿ ನಾನು ಎಂಟನೇ ತರಗತಿಯನ್ನು ತಂದೆ ಮನೆಯಲ್ಲಿ ಇದ್ದುಕೊಂಡು ವಾಣಿವಿಜಯ ಪ್ರೌಢ ಶಾಲೆಯಲ್ಲಿ ಓದುವುದು ಅನಿವಾರ್ಯ ಆಯಿತು.ಬಹಲ ಮಡಿ ಮೈಲಿಗೆ ಇದ್ದ ಕಾಲವದು.ಅಮ್ಮ ಮುಟ್ಟದಾಗ ಅಡಿಗೆ ಮತ್ತಿತರ ಕೆಲಸಕ್ಕೆ ನಾನು ತಂದೆ ಮನೆಯಲ್ಲಿರುವುದು ಅಗತ್ಯವಾಗಿತ್ತು.ತಮ್ಮಂದಿರು ಚಿಕ್ಕವರು.ಅಣ್ಣ ವೇದ ಕಲಿಕೆಗಾಗಿ ಕುಂಭ ಕೋಣಂ ವೇದ ಪಾಠ ಶಾಲೆಗೆ ಸೇರಿದ್ದ.ಅಕ್ಕ ಮದುವೆಯಾಗಿ ಗಂಡನ ಮನೆಗೆ ಹೋದಾಗ ಮನೆಯಲ್ಲಿ ನಾನೇ ಹಿರಿ ಮಗಳು.ಅದು ತನಕ ಅಜ್ಜನ‌ಮನೆಯಲ್ಲಿ ಸ್ವಚ್ಛಂದವಾಗಿದ್ದ ನನಗೆ ಅಮ್ಮ ಮುಟ್ಟಾದಾಗ ಅಡುಗೆ ಮಾಡಿ ಶಾಲೆಗೆ ಹೋಗಿ ಬರುವುದು ಬಹಳ ಕಷ್ಟ ಎನಿಸಿತ್ತು‌.ಜೊತೆಗೆ ಅಮದಮನಿಗೆ ಮುಟ್ಟಾದಾಗ ಕಾಡುತ್ತಿದ್ದ ತೀವ್ರ ತಲೆ ನೋವಿನ ಸಮಸ್ಯೆಯೂ ನನ್ನನ್ನು ತೀವ್ರ ಆತಂಕಕ್ಕೆ ಈಡು ಮಾಡಿತ್ತು.ಆಗ ಬರೆ ಡಾಕ್ಟ್ರೇ ನಮ್ಮ ಊರಿಗೆ ಧನ್ವಂತರಿ.ಅವರ ಮದ್ದಿನಲ್ಲಿ ಅಮ್ಮನಿಗೆ ತಲೆನೋವಿನ ಶಾಶ್ವತ ಪರಿಹಾರ ಸಿಕ್ಕಿರಲಿಲ್ಲ.ನಾನು ಪಿಯುಸಿ ಓದುವಾಗ ಮಂಗಳೂರಿನ ನರರೋಗ ತಜ್ಞ ಶಂಕರ ಭಟ್ ? ( ಹೆಸರು ಸರಿಯಾಗಿ ನೆನಪಿಲ್ಲ) ಬಳಿಗೆ ಅಮ್ಮನನ್ನು ಕರೆದುಕೊಂಡು ಹೋಗಿದ್ದೆ.ಅವರು ನೀಡಿದ ಟ್ಯಾಬ್ಲೆಟ್ ಒಂದು ದುಷ್ಪರಿಣಾಮದಿಂದ ಅಮ್ಮನಿಗೆ ಉಸಿರಾಟದ ತೊಂದರೆಯೂ ಕಾಡತೊಡಗಿತ್ತು.ಅಮ್ಮನಿಗೆ ಈ ತಲೆನೋವಿನ ಸಮಸ್ಯೆ ಗರ್ಭ ಕೋಶ ತೆಗೆದು ಹಾಕಿದ ನಂತರ ಹೊರಟು ಹೋಯಿತು.ಅಮ್ಮ ತನ್ನ ಹನ್ನೆರಡನೆಯ ವಯಸ್ಸಿನಿಂದ ಸುಮಾರು ಐವತ್ತೈದು ವಯಸ್ಸನವರೆಗೂ ತೀವ್ರ ತಲೆ ನೋವಿನ ಸಮಸ್ಯೆಯ ಜೊತೆಗೆ ಬದುಕಬೇಕಾಗಿ ಬಂದಿತ್ತು.ನಂತರ ಮೆನೋಪಾಝ್ ನ ಸಮಸ್ಯೆಗೊಳಗಾಗಿ ತೀವ್ರ ರಕ್ತಸ್ರಾವದ ಕಾರಣಕ್ಕೆ ಗರ್ಭ ಕೋಶವನ್ನು ಶಸ್ತ್ರ ಚಿಕಿತ್ಸೆ ಮೂಲಕ ವೈದ್ಯರಾದ ಡಾ.ಮಾಲತಿ ಭಟ್ ತೆಗೆದು ಹಾಕಿದ್ದರು.ನಂತರ ಅಮ್ಮನಿಗೆ ಮುಟ್ಟಿನ ಸಮಯದಲ್ಲಿ ಕಾಡುತ್ತಿದ್ದ ತೀವ್ರ ತಲೆನೋವಿನಿಂದ ಮುಕ್ತ ದೊರಕಿತ್ತು

ಅಕ್ಕನ ಮದುವೆಯ ನಂತರ ನಾನು ತಂದೆ ಮನೆಯಿಂದ ವಾಣಿವಿಜಯ ಪ್ರೌಢಶಾಲೆಯಲ್ಲಿ ಓದನ್ನು ಮುಂದುವರಿಸಿದೆ

ಇಲ್ಲಿ ಮೀಯಪದವು ಶಾಲೆಯಲ್ಲಿ ಸಿಕ್ಕಷ್ಟು ಪ್ರೋತ್ಸಾಹ ನನಗೆ ಸಿಗಲಿಲ್ಲ.

ಇಲ್ಲಿ ಆರನೇ ತರಗತಿಯಿಂದಲೇ ಓದುತ್ತಿದ್ದ ಜಾಣ ವಿದ್ಯಾರ್ಥಿಗಳಾದ ಸುಮಂಗಲ ನಿಶಾ,ವಿಜಯ,ಪ್ರಮೋದ್ ಸೂರ್ಯನಾರಾಯಣ ಮೊದಲಾದವರು ಸಹಜವಾಗಿಯೇ ಇಲ್ಲಿನ ಶಿಕ್ಷಕರಿಗೆ ಪ್ರೀತಿ ಪಾತ್ರರಾಗಿದ್ದರು.ಬಹುಶಃ ನನ್ನ ಅತ್ಯುತ್ಸಾಹ ಇಲ್ಲಿನ ಶಿಕ್ಷಕರಿಗೆ ಉದ್ಧಟತನದಂತೆ ಕಾಣಿಸಿರಬಹುದು.ಹಾಗಾಗಿ ನನ್ನ ಬಗ್ಗೆ ತುಸು ಇಲ್ಲಿನ ಶಿಕ್ಷಕರು ಪೂರ್ವಗ್ರಹದಿಂದ ವರ್ತಿಸುತ್ತಿದ್ದರೆಂದು ನನಗೆ ಅನಿಸ್ತದೆ.ಎಲ್ಲರೂ ಅಲ್ಲ.ಕೆಲವರು.

ಇಲ್ಲಿನ ಕನ್ನಡ ಟೀಚರ್ ಸುಲೋಚನ ನನಗೆ ಬಹಳ ಇಷ್ಟದವರಾಗಿದ್ದರು.ಆದರೆ ಒಂದು ನಾನು ಮಾಡಿರದ ತಪ್ಪಿನ ಆರೋಪ ನನ್ನ ಮೇಲೆ ಬಂತು.

ಅದು ಬಹುಶಃ ಒಂಬತ್ತನೇ ತರಗತಿಯ ಮಧ್ಯಾವಧಿ ಪರೀಕ್ಷೆ.

ಬೆಳಗ್ಗೆ ಚರಿತ್ರೆ ಪರೀಕ್ಷೆ ಇತ್ತು ಮಧ್ಯಾಹ್ನ ಮೇಲೆ ಭೂಗೋಳಶಾಸ್ತ್ರ ಪರೀಕ್ಷೆ ಇತ್ತು ( ಕೇರಳದಲ್ಲಿ ಒಟ್ಟು ಹನ್ನೆರಡುವಿಷಯಗಳ ಪರೀಕ್ಷೆ ಇತ್ತು.ವಿಜ್ಞಾನದಲ್ಲಿ ಭೌತಶಾಸ್ತ್ರ,ರಸಾಯನಶಾಸ್ತ್ರ ,ಜೀವ ಶಾಸ್ತ್ರ,ಸಮಾಜದಲ್ಲಿ ಚರಿತ್ರೆ ಮತ್ತು ಭೂಗೋಳ ಶಾಸ್ತ್ರ ,ಗಣಿತ ಎರಡು ಪತ್ರಿಕೆಗಳು ,ಇಂಗ್ಲಿಷ್ ಎರಡು ಪತ್ರಿಕೆ ಕನ್ನಡ ಎರಡು ಪತ್ರಿಕೆಗಳು,ಹಿಂದಿ ಭಾಷಾ ಪತ್ರಿಕೆ ಒಂದು ಹೀಗೆ ಒಟ್ಟು ಹನ್ನೆರಡು ಪರೀಕ್ಷೆಗಳಿದ್ದವು) 

ಭೂಗೋಳ ಪರೀಕ್ಷೆ ಆಗುವಾಗ ನನ್ನ ಒಂದು ನೋಟ್ಸ್ ಡೆಸ್ಕ್ ಒಳಗೆ ಉಳಿತ್ತು.ಬಹುಶಃ ನಾನು ಓದಿ ಕೆಳಗೆ ಇರಿಸಲು ಮರೆತಿದ್ದೆನೋ ಅಥವಾ ಬೇರೆ ಯಾರಾದರೂ ತಪ್ಪಿ ಓದಲೆಂದು ತೆರೆದು ಅದು ಅವರ ನೋಟ್ಸ್ ಅಲ್ಕವೆಂದು ವೆಂದು ಒಳಗೆ ಇರಿಸಿದ್ದರೋ,ಪರೀಕ್ಷೆಯ ದಿನ ನಮ್ಮ ಚೀಲ ಪುಸ್ತಕಗಳನ್ನೆಲ್ಲ ನಾವು ಕುಳಿತಿರುವಲ್ಲಿಯೇ ಬೆಂಚಿನ ಕೆಳಭಾಗ ಇರಿಸ್ತಿದ್ದೆವು.

ಕೊನೆಯ ಗಳಿಗೆಯ ಓದಿನಲ್ಲಿ ಗಡಿಬಿಡಿಯಾಗಿ ಒಂದು ನೋಟ್ಸು ಪುಸ್ತಕವಂತೂ ಡೆಸ್ಕ್ ಒಳಗೆ ಉಳಿದದ್ದು ಪರೀಕ್ಷೆ ಶುರುವಾಗುವ ಮೊದಲು ನನ್ನ ಗಮನಕ್ಕೆ ಬಂದಿರಲಿಲ್ಲ.

ಈ ನಡುವೆ ಒಂದು ಜಿರಳೆ ಮರಿ ನಾನು ಬರೆಯುತ್ತಿದ್ದ ಡೆಸ್ಕ್ ನ ಒಳಭಾಗ ಓಡಾಡುತ್ತಿತ್ತು.ನನಗೂ ಜಿರಳೆಗೂ ಆಜನ್ಮ ವೈರತ್ವ ಇದೆ.ನನಗೆ ಜಿರಳೆ ನೋಡಿದರಾಗದು.ನಾನು ಜಗತ್ತಿನಲ್ಲಿ ಹೆದರುವ ಒಂದೇ ಒಂದು ವಿಷಯ ಜಿರಳೆ.

ಈ ಜಿರಳೆ ಮರಿ ನನ್ನ‌ಮೈಗೆಲ್ಲಿ ಹತ್ತುತ್ತೋ ಎಂಬ ಆತಂಕದಲ್ಲಿ ನಾನು ಆಗಾಗ ಡೆಸ್ಕ್ ಒಳಗೆ ನೋಡುತ್ತಿದ್ದೆ.

ನನ್ನ ಈ ವರ್ತನೆ ಪಕ್ಕದ ಕೊಠಡಿಯಲ್ಲಿ ಇನ್ವಿಜಿಕೇಷನ್ ಮಾಡುತ್ತಿದ್ದ ಕೆಮೆಸ್ಟ್ರಿ ಮಾಸ್ಟ್ರು ಸುಬ್ರಹ್ಮಣ್ಯ ಭಟ್ ಗೆ ಸಂಶಯ ಉಂಟು ಮಾಡಿತು.ಅವರು ಪಕ್ಕದ ಕೊಠಡಿಯಲ್ಲಿದ್ದರೂ ಕೊಠಡಿಯನ್ನು ಬೇರ್ಪಡಿಸಿದ್ದ ತಡಿಕೆಯ ನಡುವಿನ ಸಣ್ಣ ತೂತಿನಲ್ಲಿ ನಮ್ಮ ಕೊಠಡಿಯನ ಮೇಲೆ ಕಣ್ಣಿರಿಸಿದ್ದರಂತೆ‌.ನಮ್ಮ‌ಕೊಠಡಿಯಲ್ಲಿ ಬಹಳ ಪಾಪದ ಮಾಸ್್ಟರೆಂದೇ ಹೆಸರಾದ ಕನ್ನಡ ಪಂಡಿತರೆಂಬ ಖ್ಯಾತಿಯ ವಿಘ್ನರಾಜ ಭಟ್ಟರಿದ್ದರಿದ್ದರು.ಬಹುಶಃ ನಡುವೆ ರಿಲೀವಿಂಗ್ ಗೆ ಬರಲಿದ್ದ ಸುಲೋಚನ ಟೀಚರ್ ಗೆ ಕೆಮೆಸ್ಟ್ರಿ ಮಾಸ್್ಟ್ರು ನನ್ನ ಡೆಸ್ಕ್ ತಪಾಸಣೆ ಮಾಡಲು ಸೂಚನೆ ಕೊಟ್ಟಿದ್ದರು.( ಇದೆಲ್ಲ ನಂತರ ನನಗೆ  ಗೊತ್ತಾಯಿತು) 

ಸುಲೋಚನ ಟೀಚರ್ ಬಂದು ನೋಡುವಾಗ ಡೆಸ್ಕ್ ಒಳಗೆ ಭೂಗೋಳ ಶಾಸ್ತ್ರ ಎಂಬ ಹೆಸರಿದ್ದ ನನ್ನ ನೋಟ್ಸ್ ಸಿಕ್ತು.

ಕೂಡಲೇ ನನ್ನನ್ನು ಅಲ್ಲಿಯೇ ಕಳ್ಳಿ ಸುಳ್ಳಿ ಇತ್ಯಾದಿ ಏನೇನೋ ಬೈದು ಹಂಗಿಸಿ ನನಗೆ ಎಲ್ಕರ ಎದುರು ಅವಮಾನ ಮಾಡಿದ್ದರು‌.ಪೆಟ್ಟು ಬಿದ್ದಿತ್ತೋ ಇಲ್ವೋ ನೆನಪಿಲ್ಲ.ಪೆಟ್ಟು ಕೊಟ್ಟಿದ್ದರೂ ನನಗೆ ಬೇಸರ ಇರಲಿಲ್ಲ..ಸತ್ಯಾಸತ್ಯತೆಯನ್ನು ವಿಚಾರಿಸದೆ ನೋಡಿ ಬರೆದಿದ್ದೇನೆಂಬ ಆರೋಪ ಮಾಡಿ ಕೇವಕ ಆ ವಿಷಯದಲ್ಲಿ ಬೈಯದೆ ಕಳ್ಳಿ ಸುಳ್ಳಿ ಕುಳ್ಳಿ ಇತ್ಯಾದಿ ಬೈದದ್ದು ಇದೆಯಲ್ಲ..ನನಗದು ಇಂದಿಗೂ ಮರೆಯಲಾಗದ ಅನುಭವ..

ಪರೀಕ್ಷೆ ಮುಗಿದ ನಂತರ ಸಮಾಜ ಶಾಸ್ತ್ರ ಪಾಠ ಮಾಡುತ್ತಿದ್ದ ನಾಗಪ್ಪ ಮಾಸ್್ಟರಲ್ಲಿ ಹೋಗಿ ಇರುವ ವಿಷಯ ಹೇಳಿದೆ.ಅವರಿಗೆ ವಿಷಯ ಮನದಟ್ಟಾದರೂ ಕಿರಿಯ ಶಿಕ್ಷಕರಾಗಿದ್ದವರಲ್ಲಿ ಮಾತನಾಡಲು ಅಳುಕಿರಬೇಕು.

ಅಲ್ಲಿ ಒಂದು ವಿಚಾರ ಇತ್ತು.ಆ ನೋಟ್ಸ್ನ ಹೊರ ಪುಟದಲ್ಲಿ ಭೂಗೋಳ ಶಾಸ್ತ್ರ ಎಂದು ಬರೆದಿದ್ದರೂ ಒಳಗೆ ಚರಿತ್ರೆಯ ನೋಟ್ಸ್ ಇತ್ತು‌ಭೂಗೋಳದ ನೋಟ್ಸ್ ಅದಾಗಿರಲಿಲ್ಲ.ಈ ವಿಷಯವನ್ನು ನಾನು ಹೇಳಿದಾಗ ಬೆಳಿಗ್ಗೆಯ ಚರಿತ್ರೆ ಪರೀಕ್ಷೆಗೆ ನೋಡಿ ಬರೆಯಲು ಇರಿಸಿದ ಪುಸ್ತಕ ,ಬೆಳಗ್ಗೆ ನೋಡಿ ಬರೆದಿದ್ದಿ ಎಂಬ ಆಧಾರ ರಹಿತ ವಿತ್ತಂಡವಾದ ಶಿಕ್ಷಕರಿಂದ ಶುರು ಆಯಿತು.

ಬಹುಶಃ ಜೀವನದಲ್ಲಿ ಮೊದಲ ಬಾರಿ ನನ್ನದಲ್ಲದ ತಪ್ಪಿಗೆ ತೀವ್ರ ಅವಮಾನಕ್ಕೀಡಾದೆ.ನನಗೆ ಈಗಲೂ ಅನಿಸುದು..ಒಂದೊಮ್ಮೆ ಅವರ ಗ್ರಹಿಕೆಯಂತೆ ಪರೀಕ್ಷೆಯಲ್ಲಿ ನೋಡಿ ಬರೆಯಲು ಯತ್ನ ಮಾಡಿದ್ದು ( ನೋಡಿ ಬರೆಯಲು ನೋಟ್ಸ್ ಅ ವಿಷಯದ್ದಾಗಿರಲಿಲ್ಲ‌ಹಾಗಾಗಿ ನೋಡಿ ಬರೆದಿಲ್ಲ ಎಂದವರೇ ಒಪ್ಪಿಕೊಂಡಿದ್ದರು) ಅಂತಹ ಅಕ್ಷಮ್ಯ ಅಪರಾಧವೇ? ಆ ವಿಷಯಕ್ಕೆ ಮಾತ್ರ ಬೈದು ಬುದ್ದಿ ಹೇಳಿದ್ದರೆ ಸಾಕಿತ್ತಲ್ಲವೇ ? ಕಳ್ಳಿ ಸುಳ್ಳಿ ಇತ್ಯಾದಿ ಹೀಯಾಳಿಸುವ ಅಗತ್ಯವಿತ್ತೇ? ಇಷ್ಟಕ್ಕೂ ಅದು ಪಬ್ಲಿಕ್ ಪರೀಕ್ಷೆಯಾಗಿರಲಿಲ್ಲ.ಅಂತಿಮ ಪರೀಕ್ಷೆಯೂ ಆಗಿರಲಿಲ್ಲ.ಮಧ್ಯಾವಧಿ ಪರೀಕ್ಷೆ ಆಗಿತ್ತದು.

ಇಲ್ಲಿಂದ ಈ ಶಾಲೆಯ ಶಿಕ್ಷಕರೆಲ್ಲರೂ ನನ್ನನ್ನು ಖಳನಾಯಕಿಯಂತೆ ಬಹು ದುಷ್ಟೆಯಂತೆ ಪರಿಗಣಿಸಿದರು.ನನಗೆ ಹೆಜ್ಜೆ ಹೆಜ್ಜೆಗೆ ಬೈದು ಅವಮಾನಿಸಿದ್ದರು.ಇದು ಎಷ್ಟೆಂದರೆ ವಿದ್ಯಾರ್ಥಿಗಳಲ್ಲೂ ನನ್ನ ಬಗ್ಗೆ ಹೀನಾಯಭಾವ ಉದಿಸಿರಬೇಕು

ಹತ್ತನೆಯ ತರಗತಿ ಮುಗಿಯುತ್ತಾ ಬಂದು ಪರೀಕ್ಷೆಗೆ ಒದಲು ರಜೆ ಕೊಡುವ ಮೊದಲು ಒಂದು ದಿನ ಕೆಮೆಸ್್ಟ್ರು ಮಾಸ್ಟ್ರು  ನಮ್ಮ ತರಗತಿಯಲ್ಲಿ ಯಾರೆಲ್ಲ ಹತ್ತನೆಯ ತರಗತಿಯಲ್ಲಿ ಪಾಸಾಗಬಹುದು ಎಂದು ಉಮಾ ಳಲ್ಲಿ ಕೇಳಿದರು.

ಅವಳು ಸುಮಂಗಲ, ವಿಜಯ ನಿಶ ಸೂರ್ಯ ನಾರಾಯಣ,ಪ್ರಮೋದ ಮೊದಲಾದ ತರಗತಿಯಲ್ಲಿ ಮೊದಲ ಹತ್ತು ರ‌್ಯಾಂಕ್ ಪಡೆಯುತ್ತಿದ್ದ ವಿದ್ಯಾರ್ಥಿಗಳ ಹೆಸರು ಹೇಳಿದ್ದಳು.ತರಗತಿಯಲ್ಲಿ ಸಾಮಾನ್ಯವಾಗಿ ಎರಡನೆಯ ಮೂರನೆಯ ರ‌್ಯಾಂಕ್ ತೆಗೆಯುತ್ತಿದ್ದ ನನ್ನ ಹೆಸರು ಹೇಳಿರಲಿಲ್ಲ.ಬಹುಶಃ ಆಗ ಕೆಮೆಸ್್ಟ್ರಿ ಮಾಸ್ಟ್ರಿಗೇ ಅಚ್ಚರಿ ಆಗಿಬೇಕು‌ನನ್ನಲ್ಲಿ ನೀನು ಪಾಸಾಗುವ ನಂಬಿಕೆ ಇಲ್ವ? ಎಂದು ನನ್ನಲ್ಲಿ ಕೇಳಿದ್ದರು.ನಾನು ಪಾಸಾಗ್ತೇನೆ ಎಂದು ಆತ್ಮ ವಿಶ್ವಾಸದಲ್ಲಿ ಹೇಳಿದ್ದೆ.

ಹತ್ತನೆಯ ಪಬ್ಲಿಕ್ ಪರೀಕ್ಷೆಯಲ್ಲಿ ಆ ಕಾಲಕ್ಕೆ ಉತ್ತಮ ಎನಿಸಿದ ಅಂಕಗಳನ್ನು ಗಳಿಸಿ ಶಾಲೆಗೆ ಎರಡನೆಯ  ಸ್ಥಾನ ಪಡೆದಿದ್ದೆ.ಮೊದಲ ಸ್ಥಾನ ಸುಮಂಗಲ ಗಳಿಸಿದ್ದಳು.

ಇದೊಂದು ವಿಚಾರ ಹೇಳಿದರೆ ಇಲ್ಲಿನ ನನ್ನ ಶಿಕ್ಷಕರಿಗೆ ಬೇಸರವಾಗಬಹುದೋ ಏನೋ ಆದರೆ ಈ ಶಿಕ್ಷಕರ ನಿರ್ಲಕ್ಷ್ಯ ಅವಜ್ಞೆಯನ್ನು ಮುಚ್ಚಿಟ್ಟು ಆತ್ಮ ಕಥೆಯನ್ನು ಬರೆಯುವುದು ವಂಚನೆ ಎಂದೆನಿಸಬಹುದು

ಇಲ್ಲಿ ನಮ್ಮನ್ನೆಲ್ಲ ನಾಲಾಯಕ್ ಗಳು ಎಂದು ಪರಿಗಣಿಸಿದ್ದಿರಬೇಕು.ಹಳ್ಳಿ ಹುಡುಗಿಯರಲ್ವೇ? ಪುರೋಹಿತರ ಇಲ್ಲವೇ ಅಡಿಗೆ ಭಟ್ರ ಅಥವಾ ಕೃಷಿಕನ ಮದುವೆಯಾಗಿ ನಾಲ್ಕು ಹೆತ್ತು ಮಕ್ಕಳನ್ನು ಸಾಕಲು ಮಾತ್ರ ನಾವು ಯೋಗ್ಯರೆಂದು ಭಾವಿಸಿದ್ದರೋ ಏನೋ..ಹುಡುಗರನ್ನೂ ಅಷ್ಟೇ ಅಡುಗೆ ಭಟ್ಟರಾಗಿಯೋ ಪುರೋಹಿತರಾಗಿಯೊಬಕೃಷಿಕರಾಗಿಯೋ ಬದುಕಲು ಯೋಗ್ಯರೆಂದು ಪರಿಗಣಿಸಿರಬೇಕು

ಯಾಕೆಂದರೆ ಹತ್ರನೆಯ ತರಗತಿ ನಂತರ ಏನು ಓದಿದರೆ ಒಳ್ಳೆಯದು.ಏನನ್ನು ಓದಿದರೆ ಏನೆಲ್ಲ ಅವಕಾಶಗಳಿವೆ ಇತ್ಯಾದಿ ಯಾವುದೇ ಒಂದು ಮಾಹಿತಿಯನ್ನು ನಮಗೆ ನೀಡಿರಲಿಲ್ಲ‌ಹೇಗೆ ಬದುಕಬೇಕೆಂಬ ಮಾರ್ಗದರ್ಶನದ ಮಾತುಗಳನ್ನುಹೇಳಿರಲಿಲ್ಲ.


2012 ನೆ ಇಸವಿಯಲ್ಲಿ ಮೀಯಪದವಿನ ವಿದ್ಯಾವರ್ಧಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಸ್ಥಾಪಕರ ಸಂಸ್ಮರಣಾ ದಿನದಂದು  ಸಾಧನೆ ಮಾಡಿದ ಹಳೆಯ ವಿದ್ಯಾರ್ಥಿನಿಯಾಗಿ ನನ್ನನ್ನು ಗುರುತಿಸಿ ಸನ್ಮಾನ ಮಾಡಿದ್ದರು.ಈ ಕಾರ್ಯಕ್ರಮಕ್ಕೆ ಬಂದಿದ್ದ ವಾಣಿವಿಜಯ ಪ್ರೌಢಶಾಲೆಯಲ್ಲಿ ನನಗೆ ಇಂಗ್ಲಿಷ್ ಶಿಕ಼್ಕಕರಾಗಿದ್ದ  ತೊಟ್ಡೆತ್ತೋಡಿ ಮಾಸ್್ಟ್ರು ( ತೊಟ್ಟೆತ್ತೋಡಿ ನಾರಾಯಣ ಭಟ್) ಕಾರ್ಯಕ್ರಮದ ನಂತರ ನಾನು ತಮ್ಮನ ಜೊತೆಗೆ  ಕಾರು ಹತ್ತಿ ಹೊರಡುವಾಗ. ಸಿಕ್ಕಿ " ನಾವು ವಾಣಿವಿಜಯ ಪ್ರೌಢಶಾಲೆಯಲ್ಲಿ ನಿನಗೆ ಯಾವುದೇ ಬೆಂಬಲ ಕೊಟ್ಟಿಲ್ಲ ಎಂದು ಪ್ರಾಂಜಲವಾಗಿ ಒಪ್ಪಿಕೊಂಡು ಬಹಳ ಪ್ರೀತಿಯಿಂದ ಮಾತನಾಡಿಸಿದ್ದರು.ಇದವರ ದೊಡ್ಡ ಗುಣ.ಇವರು ನನಗೆ ಬೆಂಬಲ ಕೊಡದೇ ಇದ್ದಿದ್ದರೂ ಇತರ ಕೆಲವು ಶಿಕ್ಷಕರಂತೆ ನನ್ನನ್ನು ಪೂರ್ವಗ್ರಹದಿಂದ ಕಂಡು ಹೆಜ್ಜೆ ಹೆಜ್ಜೆಗೆ ಬೈದು ಅವಮಾನಿಸುತ್ತಿರಲಿಲ್ಲ.


ನಮಗೆ ಅನುದಾನಿತ ಶಾಲೆಯ ಹೊರತಾಗಿ ಸರ್ಕಾರಿ ಶಾಲೆ ಎಂಬುದೊಂದಿದೆ.ಅದಕ್ಕೆ ಶಿಕ್ಷಕರಾಗಲು ಟಿಸಿಎಚ್ ಅಥವಾಬಿಎಡ್  ಮಾಡಬೇಕು ಹತ್ತನೆಯ ತರಗತಿ ಆಗಿ ಆರು ತಿಂಗಳ ಟಿಸಿಎಚ್ ಮಾಡಿದರೆ ಹತ್ತನೆಯ ತರಗತಿ ಮತ್ತು ಟಿಸಿಎಚ್ ನಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ಹುದ್ದೆ ದೊರೆಯುತ್ತದೆ.ನಂತರ ಖಾಸಗಿಯಾಗಿ ಪಿಯುಸಿ ,ಪದವಿ ಓದಿ ಬಿಎಡ್ ಎಂಎ ಮಾಡಿದರೆ ಹೈಸ್ಕೂಲು ಶಿಕ್ಷರಾಗಿ ಪಿಯು ಉಪನ್ಯಾಸಕರಾಗಿ ಪದೋನ್ನತಿ ಪಡೆಯಲು ಆಗುತ್ತದೆ ಎಂಬ ಸಂಗತಿಯೇ ನಮಗೆ ಗೊತ್ತಿರಲಿಲ್ಲ


.ನನ್ನ ಈಗಿನ ಅನೇಕ ಸಹೋದ್ಯೋಗಿಗಳು ಹೀಗೆ ಸರ್ಕಾರಿ ಶಾಲೆಯಲ್ಲಿ ಹದಿನೆಂಟು ವಯಸ್ಸಿಗೆ ಶಿಕ್ಷಕರಾಗಿ ಸೇರಿ ಪದೋನ್ನತಿ ಪಡೆದು ಪಿಯು ಉಪನ್ಯಾಸಕರಾಗಿದ್ದಾರೆ

ನಾನು ಉಪನ್ಯಾಸಕಿತಾದ ಮೇಲೆ ಈ ವಿಚಾರ ನನಗೆ ಗೊತ್ತಾಯಿತು.ಮಾಯಿಪ್ಪಾಡಿ ನಮಗೆ ತೀರಾ ದೂರದ ಊರಲ್ಲ‌.ಅಲ್ಲಿ ಟಿಸಿಎಚ್ ಕಾಲೇಜಿತ್ತು.ನನಗೆ ಸಿಕ್ಕ ಹತ್ತನೆಯ ತರಗತಿಯ ಮಾರ್ಕ್ಸ್ ಗೆ ಖಂಡಿತವಾಗಿಯೂ ಸೀಟು ಸಿಕ್ತಿತ್ತು.ಟಿಸಿಎಚ್ ಓದಿದ್ದರೆ ಅಲ್ಲೂ ಉತ್ತಮ ಅಂಕ ಗಳಿಸಿ ಹದಿನೆಂಟು ವಯಸ್ಸಿಗೇ ನನಗೆ ಸರ್ಕಾರಿ ಶಾಲೆ ಶಿಕ್ಷಕಿ ಯಾಗಬಹುದಿತ್ತು.


ಈ ಯಾವ ವಿಚಾರವೂ ಅರಿಯದ ನಾನು ಪಿಯುಸಿ ವಿಜ್ಞಾನ ತಗೊಂಡು ಇಂಗ್ಲಿಷ್ ಭಾಷೆಯ ಪಾಠ ಅರ್ಥವಾಗದೆ ಪೇಲಾಗಿ ಮತ್ತೆ ಹೇಗೋ ಮರು ಪರೀಕ್ಷೆಯಲ್ಲಿ  ಒದ್ದಾಡಿ ಪಾಸಾಗಿ ಮನೆಯಲ್ಲಿ ಒಂದು ವರ್ಷ ಇದ್ದೆ.ಡಿಗ್ರಿಗೆ ಆರ್ಟ್ಸ್ ತಗೊಳ್ಳಬೇಕೆಂದು ನಿರ್ಧರಿಸಿ ಕೆನರಾ ಕಾಲೇಜಿಗೆ ತಂದೆಯವರ ಜೊತೆಗೆ ಹೋಗಿ ಸೀಟು ಕೇಳಿದ್ದೆ.ಬಹುಶಃ ಫೇಲಾಗಿ ಮತ್ತೆ ಪಾಸಾದ ಕಾರಣವೋ ಏನೋ ಅಥವಾ ಅಲ್ಲಿ ದುಬಾರಿ ಡೊನೇಶನ್ ಎಲ್ಲರಿಗೂ ತಗೊಳ್ತಿದ್ದರೊ ಏನೊ ನಮಗೆ ಅಲ್ಲಿ ಇಪ್ಪತ್ತು ಸಾವಿರ ಡೊನೇಶನ್ ಕೇಳಿದ್ದರು.ಆಗ ನನ್ನ ತಂದೆಯವರು ನಾವು ಬಡವರು ನಮಗೆ ಎರಡು ಖಂಡಿ ಅಡಿಕೆ ಆಗುದು.ಡೊನೇಶನ್ ಕಡಿಮೆ ಮಾಡಿ ಎಂದು ನನಗಾಗಿ ಮೈ ಹಿಡಿ ಮಾಡಿಕೊಂಡು ಕೇಳಿದ್ದರು.ಆಗ ಅಲ್ಲಿನ ಪ್ರಿನ್ಸಿಪಾಲ್ ಎರಡು ಖಂಡಿಯೋ ಇಪ್ಪತ್ತು ಖಂಡಿಯೋ ಎಂದು ನನ್ನ ತಂದೆಯವರನ್ನು ಗದರಿಸಿ ದಟ್ಟಿಸಿ ಹೀನಾಯವಾಗಿ ಏನೇನೋ ಮಾತಾಡಿದ್ದರು

ನನ್ನ ತಂದೆಯವರು ಅವಮಾನವನ್ನು ಅವಡುಗಚ್ಚಿ ಸಹಿಸಿ ಆಗಬಹುದು ಅಷ್ಟು ಕೊಡ್ತೇವೆ ಎಂದು ಒಪ್ಪಿದ್ದರು

ಆದರೆ ನನ್ನ ತಂದೆಯವರನ್ನು ವಿನಾಕಾರಣ ದಟ್ಟಿಸಿ ಅವಮಾನಿಸಿದ ಕಾಲೇಜಲ್ಲಿ ಓದುವುದಿಲ್ಲ ಎಂದು ನಿರ್ಧರಿಸಿದ್ದೆ‌


ಮುಂದೇನು ? ನನಗೂ ಗೊತ್ತಿರಲಿಲ್ಲ

ಈ ಸಮಯಕ್ಕಾಗುವಾಗ ನನ್ನ ದೊಡ್ಡ ತಮ್ಮ ಈಶ್ವರ ಭಟ್ ನ ಎಸ್ ಎಸ್ ಎಲ್ ಸಿ ಪರೀಕ್ಷೆ ಆಗಿ ಫಲಿತಾಂಶ ಬಂತು‌ಒಳ್ಳೆಯ ಅಂಕಗಳು ಬಂದಿದ್ದವು.

ಉಜಿರೆ ಕಾಲೆಜಿನಲ್ಲಿ ನನ್ನ ತಂದೆಯವರ ಸೋದರತ್ತಿಗೆಯ ಮಗ ಭೀಮಗುಳಿಯ ಗಣಪಯ್ಯನವರು ಉಪನ್ಯಾಸಕರಾಗಿದ್ದರು.ಅಣ್ಣ ತಮ್ಮ ಈಶ್ವರರನನ್ನು ಉಜಿರೆ ಕಾಲೇಜಿಗೆ ಸೇರಿಸುವ ಸಲುವಾಗಿ ಸೀಡು ಕೊಡಿಸಲು ಆಗುತ್ತದಾ ಎಂದು ಗಣಪಯ್ಯನವರನ್ನು ಭೇಟಿ ಮಾಡಿ ಕೇಳಲು ಹೋಗಿದ್ದ.ತಮ್ಮ ಮನೆಗೆ ಕರೆದುಕೊಂಡು ಹೋಗಿ ಪ್ರೀತಿಯಿಂದ ಸತ್ಕರಿಸಿದ ಗಣಪಯ್ಯನವರು ಅಣ್ಣನಲ್ಲಿ ನಮ್ಮ ಮನೆ ಮಂದಿಯ ಕ್ಷೇಮ ವಿಚಾರಿಸಿದ್ದರು.ಆಗ ಅಣ್ಣ ನಾನು ಪಿಯುಸಿ ಯಲ್ಲಿ ಪೇಲ್ ಆಗಿ ನಂತರ ಮರು ಪರೀಕ್ಷೆಯಲ್ಲಿ ಪಾಸಾಗಿ ಮನೆಯಲ್ಲಿದ್ದು ಪದವಿ ಓದಲು ಎಲ್ಲೂ ಸೀಟು ಸಿಕ್ಕಿಲ್ಲ ಎಂಬ ವಿಚಾರ ಅಣ್ಣ ಹೇಳಿದ್ದ.


ಆಗ ಗಣಪಯ್ಯನವರು ತಾವಾಗಿಯೇ ತಂಗಿಗೂ ಇಲ್ಲಿಯೇ ಬಿಎಸ್ಸಿಗೆ ಸೇರಿಸು ಸೀಟು ಕೊಡಿಸ್ತೇನೆ ಎಂದು ನುಡಿದಂತೆ ನನಗೆ ಸೀಟು ಕೊಡಿಸಿದ್ದರು.

ಒಳ್ಳೆಯ ಅಂಕ ಗಳಿಸಿದವರಿಗೆ ಮಾತ್ರ ಉಜಿರೆ ಹಾಸ್ಟೆಲಿನಲ್ಲಿ ಸೀಟು ಸಿಕ್ತಿತ್ತು.ನನಗೆ ಸಿಗಲು ಸಾಧ್ಯವಿರಲಿಲ್ಲ.ಆಗ ಗಣಪಯ್ಯನವರೇ ಉಜಿರೆಯಲ್ಲಿ ಹುಡುಗಿಯರ ಮೆಸ್ ನಡೆಸುತ್ತಿದ್ದ ಉಜಿರೆ ಶಾಲೆಯ ಮಾಸ್್ಟ್ರು ವೆಂಕಟರಮಣ ಭಟ್ರ ಪರಿಚಯ ಮಾಡಿಸಿ ಅಲ್ಲಿ ಉಳಿದುಕೊಂಡು ಓದಲು ಅನುವು ಮಾಡಿದ್ದರು.ತಮ್ಮ ಈಶ್ವರ ಕೂಡ ಊಟ ತಿಂಡಿಗೆ ಅಲ್ಲಿಗೆ ಬರುತ್ತಿದ್ದ.ಅಲ್ಲಿಗೇ ಸಮೀಪದ ವಸಂತಿ‌ಅಮ್ಮನವರ ಕಾಂಪೌಂಡಿನಲ್ಲಿ ಕಲಿಯುವ ಹುಡುಗರಿಗೆ ಉಳಿದುಕೊಳ್ಳಲು ನಾಲ್ಕಾರು ಕೊಠಡಿಗಳನ್ನು ಬಾಡಿಗೆಗೆ ಲಭ್ಯವಿತ್ತು‌ಒಂದರಲ್ಲಿ ಇವನಿಗೆ ವಸಂತಿ ಅಮ್ಮ ಜಾಗ ಕೊಟ್ಟರು.


ಅಗೆಲ್ಲ ಸೂಟು ಕೇಸ್ ಟ್ರಾವೆಲಿಂಗ್ ಬ್ಯಾಗ್ ಗಳೆಲ್ಲ ನಮ್ಮಮಥಹ ಕೆಳ ಮಧ್ಯಮ ವರ್ಗದವರಿಗೆ ನೋಡಿ ಕೂಡ ಗೊತ್ತಿರಲಿಲ್ಲ.ಮನೆಯಲ್ಲಿ ಒಂದು ಹಳೆಯ ಕಬ್ಬಿಣದ ತುಕ್ಕು ಹಿಡಿದ ಪೆಟ್ಟಿಗೆ ಇತ್ತು.ಅದಕ್ಕೆ ಪೈಂಟು ಬಳಿದು ಅದರಲ್ಲಿ ನಮ್ಮ ಬಟ್ಟೆ ಬರೆ ತುಂಬಿ ನಾನೂ ಈಶ್ವರ ಉಜಿರೆಗೆ ಹೊರಟೆವು.ಬಟ್ಟೆ ಬರೆ ಎನ್ನಲು ಹೆಚ್ಚೇನೂ ಇರಲಿಲ್ಲ.ಒಂದೆರಡು ಜೊತೆ ಲಂಗ ರವಿಕೆ ಒಂದೆರಡು ಬೈರಾಸು ,ಅಮ್ಮನ ಹಳೆಯ ಮಗ್ಗದ ಸೀರೆ ಹಾಸಿ ಹೊದೆಯಲು ತಗೊಂಡೆವು ಅಷ್ಟೇ..ಉಜಿರೆ ಪೇಟೆಯಿಂದ ಒಂದೊಂದು ತೆಳುವಾದ ಹಾಸಿಗೆ ತಗೊಂಡೆವು

ಒಂದು ವರ್ಷ ಮೆಸ್ಸಿನಲ್ಲಿ ಕಳೆದೆ.ಇಲ್ಲಿ ನಾವು ಏಳೆಂಟು ಹುಡುಗಿಯರಿದ್ದೆವು.ನಾನು.ವಿದ್ಯಾ,ಪೂರ್ಣಿಮ ವೀಣ,ಸುಮನ್,ಜಯ,ಸಂಧ್ಯಾ ಉಳುವಾನ ಸಲಿಲ ಇನ್ನಿಬ್ಬರು ಹೈಸ್ಕೂಕಿನ ಹುಡುಗಿಯರು ಇದ್ದೆವು.


ಊಟ ತಿಂಡಿ ಎಲ್ಲ ಇಲ್ಲಿ ಚೆನ್ನಾಗಿತ್ತು.ಮಾವ( ಶಿಕ್ಷಕರಾದ ವೆಂಕಟರಮಣ ಭಟ್ ) ಮತ್ತವರ ಹೆಂಡತಿ ಕಾವೇರಿ ಆಂಟಿ ನಮ್ಮನ್ನೆಲ್ಲ ಚೆನ್ನಾಗಿಯೇ ನೋಡಿಕೊಂಡಿದ್ದರು.ಇಷ್ಟು ಹುಡುಗಿಯರಲ್ಲಿ ನಾನೇ ಬಡವರ ಮನೆ ಹುಡುಗಿಯಾಗಿದ್ದೆ.ಇವರ್ಯಾರೂ ಸಿರಿವಂತರಲ್ಲದಿದ್ದರೂ ನಮಗಿಂತ ಬೆಟರ್ ಇದ್ದರು.ಹಾಗಾಗಿಯೋ ಏನೋ ನನಗಿಲ್ಲಿ ಒಂದಿನಿತು ಕೀಳರಿಮೆ ಕಾಡುತ್ತಿತ್ತು.

ನನ್ನ ಮತ್ತು ತಮ್ಮನ ಮೆಸ್ ಬಿಲ್ ಸಾಕಷ್ಟು ಬರುತ್ತಿತ್ತು ( ಎಷ್ಟೆಂದು ನನಗೆ ಈಗ ನೆನಪಿಲ್ಲ ) ಇದನ್ನು ಭರಿಸುದು ನಮ್ಮ ತಂದೆಯವರಿಗೆ ಕಷ್ಟವಾಗುತ್ತದೆ ಎಂಬ ಅರಿವಿತ್ತು ನಮಗೆ‌.ಇಲ್ಲಿ ಸ್ನಾಕ್ಕೆ ಬಿಸಿನೀರು ಬೇಕಿದ್ದರೆ ದಿನಕ್ಕೆ ಐವತ್ತು ಪೈಸೆ ಕೊಡಬೇಕಿತ್ತು.ಎಂದರೆ ತಿಂಗಳಿಗೆ ಹದಿನೈದು ರುಪಾಯಿ.ಅ ಕಾಲಕ್ಕೆ ನಮಗೆ ದೊಡ್ಡ ಮೊತ್ತವೇ.‌ಹಾಗಾಗಿ ನಾನು ಬಿಸಿನೀರು ಬೇಡವೆಂದೆ.ಉಜಿರೆಯಲ್ಲಿ ಚಳಿ ಬಹಲ ಜಾಸ್ತಿ.ತಣ್ಣೀರು ಸ್ನಾನ ನಿಜಕ್ಕೂ ದೊಡ್ಡ ಶಿಕ್ಷೆಯೇ..ತೀರ ಚಳಿ ಇದ್ದ ದಿನ ನಾನು ಸುಮ್ಮನೇ ನೀರು ಕಾಲಿಗೆ ಮುಖಕ್ಕೆ ಹಾಕಿ ಸ್ನಾನದ ನಾಟಕ ಮಾಡುತ್ತಿದ್ದುದೂ ಇದೆ.ತೀರಾ ಚಳಿ ಇದ್ದ ಕಾರಣ ಬೆವತು ನಾರುವ ಪ್ರಮೇಯ ಇರಲಿಲ್ಲ.ಆದರೆ ನನ್ನ ಈ ಸ್ನಾನದ ಕಳ್ಳಾಟ ಮೆಸ್ಸಿನ ಆಂಟಿ ಮತ್ತಿತರರಿಗೆ ಗೊತ್ತಾಗಿ ನಗೆ ಪಾಟಾಲಿಗೆ ಈಡಾಗಿದ್ದು ನೆನೆದರೆ ನನಗೆ ಈಗ ನಗು ಬರುತ್ತದೆ.

ಇಲ್ಲಿ ಇನ್ನೊಂದು ವಿಷಯ ಹೇಳಬೇಕಿದೆ.ಒದುಗರಿಗೆ ಮುಜುಗರ ಆಗಬಹುದೊ ಏನೋ..ಅದರೆ ನಾವು ಹೇಳದಿದ್ದರೆ ನಮ್ಮ ಹುಡುಗಿಯರ ಸಂಕಷ್ಟದ ಅರಿವು ಹೊರ ಜಗತ್ತಿಗೆ ತಿಳಿಯುವುದು ಹೇಗೆ?.

ಈ ಮೆಸ್ಸೆಂಬ ಮಾಸ್ಟ್ರ ಮನೆಯಲ್ಲಿ ನಮಗೆ ಹುಡುಗಿಯರಿಗಾಗಿ ಒಂದು ಸುಮಾರು 15×15 ಅಡಿಯ ಕೋಣೆ ಇತ್ತು‌‌.ಕುಳಿತುಕೊಳ್ಳಲು ಬೆಂಚು ಬರೆಯಲು ಡೆಸ್ಟ್ ಇತ್ತೆಂದು ನೆನಪು..

ಮಲಗಲು ಉಣ್ಣಲು  ಉದ್ದದ ಕೋಣೆ ಇತ್ತು ಅದರಲ್ಲಿ ಸಾಲಾಗಿ ಚಾಪೆ ಹಾಸಿಗೆ ಹಾಸಿ ಮಲಗುತ್ತಿದ್ದೆವು

ಬಟ್ಟೆ ಒಣಗಿಸಲು ಹೊರಗೆ ಬಳ್ಳಿ ಹಾಕಿ ವ್ಯವಸ್ಥೆ ಮಾಡಿದ್ದರು.ಅಗಿನ ಕಾಲ ಒಳ ಬಟ್ಟೆಯನ್ನು ಹುಡುಗಿಯರು ಹೊರಗೆ ಒಣ ಹಾಕವಂತರಲಿಲ್ಲ.ಎಲ್ಲರೂ ಒಳ ಬಟ್ಟೆಯನ್ನು ಇ ಕೋಣೆಯ ಲ್ಲಿಯೇ ಒಣಗಲು ಹಾಕಬೇಕಾಗಿತ್ರು .

.ನಾವೆಲ್ಲರೂ ಪ್ರಾಪ್ತ ವಯಸ್ಸಿನ ಹುಡುಗಿಯರು‌ ಪ್ರತಿ ತಿಂಗಳು ಮುಟ್ಟಾಗುದು ಸಹಜವಾದ ವಿಚಾರವೇ..ಅಗಿನ್ನೂ ಪ್ಯಾಡ್ ಗಳ ಬಳಕೆ ಇಷ್ಟು ಇರಲಿಲ್ಲ‌ನಾವೆಲ್ಲ ಅಮ್ಮನ ಹಳೆಯ ಸೀರೆಯ ತುಂಡನ್ನೇ ದಪ್ಪಕ್ಕೆ ಕಟ್ಟಿ ಬಳಸುತ್ತಿದ್ದೆವು.

ಎಷ್ಟೇ ಕ್ಲೀನಾಗಿ ತೊಳೆದಿದ್ದರೂ ತಕ್ಷಣವೇ ಒಣಗದೆ ಮಳೆಗಾಲ ಚಳಿಗಾಲದಲ್ಲಿ ಇದು ಕಮಟು ವಾಸನೆ ಬರುತ್ತಿತ್ತು.ತಿಂಗಳಿನ ಎಲ್ಲ ದಿನಗಳಲ್ಲೂ ಒಬ್ಬರಲ್ಲ ಒಬ್ಬರ ಮುಟ್ಟಿನ ಬಟ್ಟೆ ಇದ್ದೇ ಇರುತ್ತಿತ್ತು.ಇದರ ಅಸಹನೀಯ ವಾಸನೆಯ ನಡುವೆ ಕುಳಿತುಕೊಳ್ಳಬೇಕಾದ ಅನಿವಾರ್ಯತೆ ನಮಗಿತ್ತು.ನಮ್ಮದೇ ಆಗಿದ್ದರೂ ವಾಸನೆ ವಾಸನೆಯೇ ಅಲ್ವೇ ? ಇದನ್ನು ಸಹಿಸುವುದು ನಮಗೆ ತೀರಾ ಕಷ್ಟ ಆಗಿತ್ತು 


ಹಾಗಾಗಿ ನಾವೆ ಅಡಿಗೆ ಮಾಡಿ ಇರುವಮತೆ ಸಣ್ಣ ಬಾಡಿಗೆ ಕೋಣೆಯನ್ನು ಎರಡನೆಯ ವರ್ಷಕ್ಕಾಗುವಾಗ ಹುಡುಕಿದೆವು.ಮೆಸ್ಸಿಗೆ ಸುಮಾರು ಎರಡು ಕಿಲೊಮೀಟರ್ ದೂರದಲ್ಲಿ ಪೆಜತ್ತಾಯರ ಮನೆಯಲ್ಲಿ ಒಂದು ಕೋಣೆ ಬಹಳ ಕಡಿಮೆ ಬಾಡಿಗೆಗೆ ನಮಗೆ ಸಿಕ್ತು .

ಮೆಸ್ಸಿನ ಲೆಕ್ಕ ಚುಕ್ತ ಮಾಡಿ  

ನಾನು ಮತ್ರು ತಮ್ನ ಈಶ್ವರ ಭಟ್  ನಮ್ಮ ಬಟ್ಟೆ ಬರೆಯನ್ನು ಹಳೆಯ ಪೆಟ್ಟಿಗೆಯಲ್ಲಿ ತುಂಬಿಸಿ ಹಾಸಿಗೆಯನ್ನು ಚಾಪೆ ಸಮೇತ ಸುರುಳಿ ಸುತ್ತಿ ತಲೆಯಲ್ಲಿ ಒಂದರ ಮೇಲೆ ಒಂದು ಇರಿಸಿಕೊಂಡು ಪೆಜತ್ತಾಯರ ಬಾಡಿಗೆ ಕೋಣೆಗೆ ನಡೆದೆವು.

ನಾವು ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಬಾಡಿಗೆಗೆ ಕೋಣೆ ಸಿಕ್ಕಿದ ಕಾರಣ ಬಹಳ ಖುಷಿಯಲ್ಲಿ ಪೆಟ್ಟಿಗೆ ಹೊತ್ರು ಸಂಭ್ರಮದಿಂದ ನಡೆದಿದ್ದೆವು.

ಹಳ್ಳಿಯಲ್ಲಿ ಹುಟ್ಡಿ ಬೆಳೆದ ನಮಗೆ ಕಟ್ಟು ಹೊತ್ತು ಅಭ್ಯಸ ಇತ್ತು.ನಮ್ಮ‌ಮನೆ ತನಕ ರಸ್ತೆ ಆಗ ಇರಲಿಲ್ಲ‌ ಸುಮಾರು ಅರ್ಧ ಕಿಲೋ ಮೀಟರ್ ದೂರದಿಂದ ಗಸಂಡಿಯ ಕಾಲುದಾರಿಯಲ್ಲಿ( ನೀರು ಹರಿದು ಕೊರಕಲಾದ ಕಣಿಯ ದಾರಿ) ಮನೆಗೆ ಬೇಕಾದ ಎಲ್ಕ ವಸ್ತುಗಳನ್ನೂ ತಕೆ ಹೊರೆಯಲ್ಲಿಯೇ ತರಬೇಕಾಗಿತ್ತು.ಮನೆ ಕಟ್ಟುವ ಮುರಕಲ್ಲು ಓಡು,ಹೊಯಿಗೆ  ಬೈ ಹುಲ್ಲು ಹೀಗೆ ಎಲ್ಲ ವಸ್ತುಗಳನ್ನೂ ತಂದೆ ತಾಯಿಯರ ಜೊತೆಗೆ ನಾವು ಮಕ್ಕಳೂ ಹೊತ್ತು ತರುತ್ತಿದ್ದ ಕಾರಣ ನಮಗೆ ನಮ್ಮ ಹಾಸಿಗೆ ಬಟ್ಟೆ ಬರೆಯ ಪೆಟ್ಟಿಗೆಯ ಭಾರ ಹೊರುದೇನೂ ಕಷ್ಟದ್ದಾಗಿರಲಿಲ್ಲ.ಮೆಸ್ಸಿನ ಸಹಪಾಠಿಗಳ ಎದುರು ಹೊತ್ತು ಕೊಂಡು ಹೋಗುದು ಸ್ವಲ್ಪ ಅವಮಾನ ಎನಿಸಿತ್ತು ನನಗೆ.ಈಗಲಾದರೆ ನಾನು ಹೆಮ್ಮೆ ಪಡುತ್ತಿದ್ದೆ.ಅದು ಆಗಿನ‌ ಮನಸ್ಥಿತಿ.

ಮುಂದೆ ಸ್ವಂತ ಅಡುಗೆಯ ವೈಭವ ಶುರು ಆಯಿತು.ಅಗೆಲ್ಲ ಸೀಮೆ ಎಣ್ಣೆಯ ಸ್ಟೌ ಬಳಸುತ್ತಿದ್ದೆವು.ಅಕ್ಕಿಯನ್ನು ಚೆನ್ನಾಗಿ ಕುದಿ ಬರಿಸಿ ನಾವೇ ತಯಾರಿಸಿದ ಬೈ ಹುಲ್ಲಿನ ಪೆಟ್ಟಿಗೆಯಲ್ಲಿ ಮುಚ್ಚಿ ಇರಿಸುತ್ತಿದ್ದೆ.

ಒಂದು ಗಂಟೆ ಕಳೆವಾದ ಅಕ್ಕಿ ಬೆಂದು ಅನ್ನವಾಗಿರುತ್ತಿತ್ತು.ಪೆಜತ್ತಾಯರ ಮನೆಯ ಅಡಿಗೆ ಕೋಣೆಗೆ ಹೋಗಿ ಕೆರೆಮಣೆ( ಹೆರೆಮಣೆ) ಯಲ್ಲಿ ತೆಮಗಿನ ಕಾಯಿ ಕೆರೆದ( ಹೆರೆದು) ಅವರದೇ ಕಡೆಗಲ್ಲಿನಲ್ಲಿ ಕಡೆದು ತಂದು ಕೊದ್ದೆಲ್ ಮಾಡ್ತಿದ್ದೆ..

ಅಮ್ಮ ಮುಟ್ಟದಾಗ ಮನೆಯಲ್ಲಿ ಅಡುಗೆ ಮಾಡಿ ಗೊತ್ತಿತ್ತಲ್ವ ಹಾಗಾಗಿ ಅಡುಗೆ ಮಾಡುದೇನೂ ಕಷ್ಟವಾಗಲಿಲ್ಲ ನನಗೆ ಹಾಗೆ ನೋಡಿದರೆ ಸೌದೆ ಉರಿಯ ಒಲೆಗಿಂತ ಸಿಮೆ ಎಣ್ಣೆಯ ಸ್ಟೌ ವುನಲ್ಲಿ ಅಡುಗೆ ಮಾಡುದು ಸುಲಭ ಎನಿಸಿತ್ತು ನಮಗೆ.ನಾವು ಊರಿನಿಂದ ಸ್ಟೋರ್ ( ನ್ಯಾಬೆಲೆ ಅಂಗಡಿ) ಯಲ್ಲಿ ಕಡಿಮೆಗೆ ಸಿಗುತ್ತಿದ್ದ ಸೀಮೆ ಎಣ್ಣೆಯನ್ನು ತಗೊಂಡು ಹೋಗುತ್ತಿದ್ದೆವು

ಇದರಿಂದಾಗಿ  ನಮ್ಮ ಖರ್ಚು ಕಡಿಮೆ ಆಯಿತು.ನನಗಂತೂ ಆ ಕಮಟು ವಾಸನೆಯಿಂದ ಪಾರಾಗಿ ಮೋಕ್ಷ ಪಡೆದಷ್ಟು ಸಂತಸವಾಗಿತ್ತು.ಮೆಸ್ಸಿಗೆ ಸಂಬಂಧಿಸಿದಂತೆ ಇನ್ನೊಂದು ಮುಖ್ಯ ವಿಚಾರ ಹೇಳಲಿಕ್ಕಿದೆ .ಈಗ ಹೇಳಲು ಕಾಲ ಅಥವಾ ನಾನು ಪರಿಪಕ್ವವಾಗಿಲ್ಲ.ಅದನ್ನು ನಿರುಮ್ಮಳವಾಗಿ ಹೇಳುವಷ್ಡು ಪ್ರೌಢತೆಯನ್ನು ಹೊಂದಿಲ್ಲ..ಮುಂದೆ ಕಾಲ ಬಂದಾಗ ಹೇಳುವೆ

Tuesday 28 March 2023

ಆತ್ಮ ಕಥೆ

 ಲಕ್ಷ್ಮೀ ಜಿ ಪ್ರಸಾದ್ ನಿಮ್ಮ ತಾಯಿಗೆ ಗೊತ್ತಾ ನಿಮ್ಮ ಅಜ್ಜಿಗೆ ಗೊತ್ತಾ ..?


ಹೀಗೆ ಕೇಳದ್ದು ರಘುಪತಿ ತ್ಹಾಮಣ್ಕರರ ಪುಣ್ಯವೋ ಲಕ್ಷ್ಮೀ ಪ್ರಸಾದರ ಪುಣ್ಯವೋ‌  ಗೊತ್ತಿಲ್ಲ..


ಕೆಲವು ಸಮಯದ ಹಿಂದೆ ದೆಹಲಿಯ ದೊಡ್ಡ ಕನ್ನಡ ತುಳು ಅಭಿಮಾನಿ ಸಂಘಟಕರೊಬ್ಬರು ಯಾವುದೋ ಕಾರ್ಯಕ್ರಮದ ಬಗ್ಗೆ fb ಯಲ್ಲಿ ಹಾಕಿದ್ದರು.ಅದರಲ್ಲಿ ಯಾರನ್ನೋ ಉಪನ್ಯಾಸಕ್ಕೆ ಕರೆದಿದ್ದರು


ಆ ಸಂಘಟಕರ ಸ್ನೇಹಿತರಾದ ನಮಗೂ ಆತ್ಮೀಯರಾದ ನಿವೃತ್ತ ಬ್ಯಾಂಕ್ ಮ್ಯಾನೇಜರರೂ ಸಾಹಿತಿಗಳೂ ಗಾಯಕರೂ ಆಗಿರುವ ರಘುಪತಿ ತ್ಹಾಮಣ್ಕರ್ ಅವರು ಆ ಪೋಸ್ಟ್ ನ ಕಮೆಂಟ್ ನಲ್ಲಿ ಲಕ್ಷ್ಮೀ ಜಿ ಪ್ರಸಾದರನ್ನೂ ಕರೆಯಿರಿ ಎಂದು ಕಮೆಂಟ್ ಮಾಡಿ ನನ್ನನ್ನೂ ಟ್ಯಾಗ್ ಮಾಡಿದ್ದರು

ಅವರು ಟ್ಯಾಗ್ ಮಾಡಿದ ಕಾರಣ ಆ ಪೋಸ್ಟ್ ಗಮನಕ್ಕೆ ಬಂದು ನೋಡಿದೆ..ಅದರಲ್ಲಿ ಅನೇಕರು ಆ ಸಂಘಟಕರ ಒಳ್ಳೆಯ ಕಾರ್ಯವನ್ನು ಮೆಚ್ಚಿ ಅಭಿನಂದಿಸಿದ್ದರು.ಅದಕ್ಕೆಲ್ಲ ಅವರು ಪ್ರತಿಕ್ರಯಿಸಿ ಧನ್ಯವಾದ ಸೂಚಿಸಿದ್ದರು.ಆ ಸಂಘಟಕರು ನನಗೂ ಪರಿಚಿತರಾಗಿದ್ದು ನನ್ನ ಹಿತೈಷಿ ಎಂದೇ ನಾನು ಆ ತನಕ ಭಾವಿಸಿದ್ದೆ.ರಘುಪತಿ ತ್ಹಾಮಣ್ಕರರ ಕಮೆಂಟಿಗೆ ನನ್ನನ್ನು ಕರೆಸಕಾಗದ ಬಗ್ಗೆ ಏನಾದರೊಂದು ಸಮಜಾಯಿಸಿ ನೀಡಬಹುದೆಂದು ಭಾವಿಸಿದ್ದೆ..ಅವರ ಕಮೆಂಟಿಗೆ ಇವರದೊಂದು ನೋಡಿದ್ದರ ಸೂಚಕವಾಗಿ ಲೈಲ್ ಕೂಡ ಇರಲಿಲ್ಲ..


ಅದನ್ನು ಗಮನಿಸಿದ ಯಾರೋ ಈ ಬಗ್ಗೆ ಏನೋ ಆಕ್ಷೇಪಿಸಿ ಕಮೆಂಟಿಸಿದರು

ಆಗ ಅವರು ರಘುಪತಿ ತ್ಹಾಮಣ್ಕರರಿಗೆ ನೀವು ಕಾರ್ಯಕ್ರಮ ಸ್ಪಾನ್ಸರ್ ಮಾಡ್ತಿದ್ದರೆ ನಿಮ್ಮ ಕಮೆಂಟಿಗೆ ಪ್ರತಿಕ್ರಿಯೆ ನೀಡ್ತಿದ್ದೆ ಎಂದರು..

ಅವರ ಪ್ರತಿಕ್ರಿಯೆ ನೋಡಿ ನನಗೂ ಅಚ್ಚರಿ ಆಯಿತು.ಸಾಮಾನ್ಯವಾಗಿ ಯಾರಾದರೂ ಯಾರನ್ನಾದರೂ ರೆಫರ್ ಮಾಡಿದರೆ ಮುಂದೆ ಅವಕಾಶ ಸಿಕ್ಕಾಗ ಕರೆಸುತ್ತೇವೆ ಎಂದು ಹೇಳುದು ಸಜ್ಜನಿಕೆ...ಕರೆಸುದು ಬಿಡುದು ನಂತರದ್ದು..


ಆದರೆ  ಅಂತಹ ಸಜ್ಜನಿಕೆಯ ಮಾತುಗಳೂ ಅವರಿಂದ ಬಾರದ್ದು ನನಗೂ ಅಚ್ಚರಿ ಎನಿಸಿತ್ತು..ನನ್ನ ಹಿತೈಷಿಗಳೆಂದು ಭಾವಿಸಿದ್ದು ನನ್ನ ತಪ್ಪೆಂದು ನನಗೆ ಅರಿವಾಯಿತು..


ಇರಲಿ..


ರಾಘವೆಂದ್ರ ಹುಣಸೂರರಿಗಿಂತ ಇವರು ಬೆಟರ್..ಯಾಕೆಂದರೆ ರಘುಪತಿ ತ್ಹಾಮಣ್ಕರರಲ್ಲಿ ಲಕ್ಷ್ಮೀ ಜಿ ಪ್ರಸಾದ್ ನಿಮ್ಮ ತಾಯಿಗೆ ಗೊತ್ತಾ ? ಅಜ್ಜಿಗೆ ಗೊತ್ತಾ ? ಅವರು ಎಡಪಂಥದವರಿಗೆ ಗೊತ್ತಾ ? ನಾವು ಎಡಚರನ್ನು ಮಾತ್ರ ಕರೆಯುವುದೆಂದು ನಿಮಗೆ ಗೊತ್ತಿಲ್ವ ?ಬಲ ಪಂಥದವರನ್ನು ನಾವು ಹಾಗೆಲ್ಲ ಕರೆಯುವುದಿಲ್ಲ ಎಂದು ನಿನಗೆ ಗೊತ್ತಿಲ್ವ ?/ ಅವರಿಗೆ ಬಕೆಟ್ ಹಿಡಿಯಲು ಬರುತ್ತಾ ? ನಮ್ಮನ್ನು ಕರೆಸಿ ಅವರು ಹಾರ ತುರಾಯಿ ಹಾಕಿ ಇಂದ್ರ ಚಂಸ್ರ ಎಂದು ಹೊಗಳಿ ಆಕಾಶಕ್ಕೇರಿಸಿದ್ದಾರಾ ? ಎಂದು ಕೇಳಲಿಲ್ಲವಲ್ಲ..ಅದೇ ಪುಣ್ಯ..


ಇಷ್ಟಕ್ಕೂ ಯಾರೋ ಕರೆದು ನಾನು ಹೋಗಿ ಉಪನ್ಯಾಸ ನೀಡಿ ನಾನು ನಾನಾಗಿದ್ದಲ್ಲ..ನನ್ನ ಬರವಣಿಗೆ ಮತ್ತು ಓದುಗರ ಕೊಂಡಿಯಾಗಿ ಬಂದದ್ದು ಬ್ಲಾಗ್ fb ವಾಟ್ಸೊ್ ಮತ್ತು ಪುಸ್ತಕಗಳು..ಮೊದಲೊಂದು ಕಾಲವಿತ್ತು.ಯಾರೋ ಕರೆದು ಅವಕಾಶ ಕೊಟ್ಟರೆ ಮಾತ್ರ ತಮ್ಮ ಅಧ್ಯಯನದ ವಿಚಾರಗಳನ್ನು ಹೊರ ಜಗತ್ತಿಗೆ ತಿಳಿಸಲು ಸಾಧ್ಯವಿತ್ತು.ಈಗ ಹಾಗಲ್ಲ..ಬರಹಗಳನ್ನು ಚೆನ್ನಾಗಿದ್ದರೆ ದೇಶ ವಿದೇಶದ ಲಕ್ಷಾಂತರ ಓದುಗರನ್ನು ಕ್ಷಣ ಮಾತ್ರದಲ್ಲಿ ತಲುಪುತ್ತವೆ.ಹಾಗಾಗಿ ಇಂತಹವರಿಗೆ ಬಕೆಟ್ ಹಿಡಿಯುವ ಅಗತ್ಯ ನಮಗಿಲ್ಲ ಈಗ .ಜಾತಿ ರಾಜಕೀಯ ಸಣ್ಣತನ ಅಹಂಕಾರ ಕಾಲೆಳೆಯುವಿಕೆ ಇದೆಲ್ಲ ನಾನಿರುವ ತನಕ ಅವರಿರುವ ತನಕ ಮಾತ್ರ..ನಂತರ ನನ್ನ ಅಧ್ಯಯನ , ಪುಸ್ತಕಗಳೇ ಮಾತಾಡುತ್ತವೆ..

ಆದರೆ ಇಂತಹವರಿದ್ದರೆಂದು ತಿಳಿಸುವ ಸಲುವಾಗಿ ಆತ್ಮಕಥೆಯಲ್ಲಿದನ್ನು ಬರೆಯಬೇಕೆಂದಿದ್ದೆ.ಆದರೆ

ಈ ವಿಚಾರ ನನಗೆ ಮರೆತೇ ಹೋಗಿತ್ತು..ರಾಘವೇಂದ್ರ ಹುಣಸೂರರ ಕೃಪೆಯಿಂದ ನೆನಪಾಯಿತು..😁😁

ನೆನಪಾದ ಕಾರಣ ಈಗಲೇ ಬರೆದಿಡುವೆ..


ಅದು ಸರಿ..ಆ ವ್ಯಕ್ತಿ ಯಾರು ?....

.

.

.

.

.

.

.

.

.

.

.

.

.

.

.

.

ನನ್ನ ಆತ್ಮಕಥೆಯಲ್ಲಿ ತಿಳಿಸುತ್ತೇನೆ..ಈಗಲೇ ತಿಳಿಸಿದರೆ ಸ್ವಾರಸ್ಯವಿರುವುದಿಲ್ಲ.ಅಲ್ವ?

.