ರಾಧು ಮತ್ತು ಬಂಗಾರಾಳ್ವಾಗ ಶಾರದಾ ಜಿ ಬಂಗೇರರು ಹಾಡಿದ ಎರಡು ತುಳು ಜನಪದ ಕವಿತೆಗಳ ನಾಯಕಿಯರು.ಇಬ್ಬರೂ ಬಹಳ ದಿಟ್ಟೆಯರು.ಕಷ್ಟದ ಪರಿಸ್ಥಿತಿ ಯನ್ಮು ಎದುರಿಸಿದ ಅನ್ಯಾಯದ ವಿರುದ್ಧ ಸೆಟೆದು ನಿಂತವರು.ಇವರಲ್ಲಿ ಬಂಗಾರಾಳ್ವಾಗಳದು ನೇರ ಪ್ರತಿಭಟಣೆಯಾದರೆ ಸಾತ್ವಿಕ ಹೆಣ್ಣು ಮಗಳು ರಾಧುವಿನದು ಅಪರೋಕ್ಷ ಪ್ರತಿಭಟಣೆ © ಡಾ.ಲಕ್ಷ್ಮೀ ಜಿ ಪ್ರಸಾದ್
ಬಂಗರಾಳ್ವಾಗ
ನೀರಿಗೆಂದು ಹೋಗುವ ಹೆಣ್ಣು ಮಗಳಿಗೆ ದಾರಿಯಲ್ಲಿ ಕಾಮುಕನೊಬ್ಬ ಸಿಕ್ಕಿತೊಂದರೆ ಕೊಟ್ಟಾಗ, ಆತನಿಗೆರಡೇಟು ಕೊಟ್ಟು ಓಡಿಸುವ ಧೈರ್ಯ ಸಾಹಸವನ್ನು ತೋರುವ ಕಥಾನಕ ಬಂಗರಾಳ್ವಾಗ ಎಂಬ ಸಣ್ಣ ತುಳು ಕವಿತೆಯಲ್ಲಿದೆ.
``ಬಂಗರಾಳ್ವಾಗ’’ ಎಂಬ ಧೈರ್ಯಸ್ಥ ಹುಡುಗಿ ನೀರು ತರಲೆಂದು ಹೋಗುತ್ತಾಳೆ. ದಾರಿಯಲ್ಲಿ ಒಂದು ಬೇಲಿಯ ದ್ವಾರದಲ್ಲಿ ದೇರೆ ಮುಂಡೋರಿ ಎಂಬಾತ ಅಡ್ಡಗಟ್ಟುತ್ತಾನೆ. ಆಗ ಅವಳು `ದಾರಿ ಬಿಡು ತಡಮೆಯನ್ನು ತೊಲಗಿಸು ದೇರೆ ಮುಂಡೋರಿ’ ಎಂದು ಹೇಳುತ್ತಾಳೆ. `ದಾರಿ ಬಿಡಲು ತಡಮೆ ತೆಗೆಯಲು ನಿನ್ನ ಹತ್ತಿರ ಒಂದು ಮಾತನಾಡಬೇಕು’ ಎಂದು ದೇರೆ ಮುಂಡೋರಿ ಹೇಳುತ್ತಾನೆ. ಅವನಿಂದ ಹೇಗೋ ತಪ್ಪಿಸಿಕೊಂಡು ಹೋಗಿ ನೀರು ತರುತ್ತಾಳೆ. ಬಂಗರಾಳ್ವಾಗ ನೀರು ತೆಗೆದುಕೊಂಡು ಹಿಂದೆ ಬರುವಾಗ ಅವನು ಪುನಃ ದಾರಿಗಡ್ಡ ನಿಂತು ನನ್ನನ್ನು ಮದುವೆಯಾಗುತ್ತೀಯಾ? ಎಂದು ಕೇಳುತ್ತಾನೆ. ಆಗಲೂ ಹೇಗೋ ತಪ್ಪಿಸಿಕೊಂಡು ಹೋಗುತ್ತಾಳೆ ಬಂಗರಾಳ್ವಾಗ. ಮರುದಿನ ಅವಳು ನೀರಿಗೆ ಹೋದಾಗ ಪುನಃ ಅದೇ ದೇರೆ ಮುಂಡೋರಿ ದಾರಿಗಡ್ಡ ನಿಂತು `ನಿನ್ನೆ ಹೇಳಿದ ಮಾತಿಗೆ ಉತ್ತರ ಕೊಡು ಬಂಗರಾಳ್ವಾಗ’ ಎಂದು ಹೇಳುತ್ತಾನೆ. ಆಗ ಬಂಗರಾಳ್ವಾಗ `ನಾನೀಗ ಬೊಬ್ಬೆ ಹಾಕುತ್ತೇನೆ’ ಎಂದು ಹೆದರಿಸುತ್ತಾಳೆ. © ಡಾ.ಲಕ್ಷ್ಮೀ ಜಿ ಪ್ರಸಾದ್
ಆಗಲೂ ದೇರೆ ಮುಂಡೋರಿ ದಾರಿ ಬಿಡುವುದಿಲ್ಲ. ಆಗ ಅವನು ಅವಳ ಕೈ ಹಿಡಿದು ಬಳೆ ಒಡೆದು ಹಾಕುತ್ತಾನೆ. `ನಿನ್ನನ್ನು ಬಿಟ್ಟರೆ ನನಗೆ ಬೇರೆ ಹೆಣ್ಣು ಸಿಗುವುದಿಲ್ಲ’ ಎಂದುಹೇಳುತ್ತಾನೆ. ಆಗ ಬಂಗರಾಳ್ವಾಗ ಬೊಬ್ಬೆ ಹಾಕುತ್ತಾಳೆ. ಅವಳ ಬೊಬ್ಬೆ ಕೇಳಿ ಊರಿನ ಜನರೆಲ್ಲ ಓಡಿ ಬಂದು ದೇರೆ ಮುಂಡೋರಿಗೆ ಏಟು ಹಾಕಿ ಅವನನ್ನು ಓಡಿಸುತ್ತಾರೆ. ಆದರೆ ಮರುದಿವಸ ಪುನಃ ಅವಳನ್ನು ದಾರಿಯಲ್ಲಿ ಅಡ್ಡಗಟ್ಟಿ ತೊಂದರೆ ಮಾಡುತ್ತಾನೆ. ದೇರೆ ಮುಂಡೋರಿ, ಇನ್ನು ರಕ್ಷಣೆಗಾಗಿ ಬೇರೆಯವರನ್ನು ನಂಬಿ ಪ್ರಯೋಜನವಿಲ್ಲ ಎಂದರಿತ ಬಂಗರಾಳ್ವಾಗ `ದಾರಿ ಬಿಡು ತಡಮೆ ತೊಲಗಿಸು’ ಎಂದವಳೇ ತಾನು ಹಿಡಿದ ಕೊಡವನ್ನು ಎತ್ತಿ ಅವನ ಮೇಲೆ ಹೊಡೆಯುತ್ತಾಳೆ. ಆಗ ಓಡಿಹೋಗುತ್ತಾನೆ ದೇರೆ ಮುಂಡೋರಿ, `ಊರಿಗೆ ಬಂದ ಮಾರಿ ಅತ್ತ ಹೋಯಿತು’ ಎಂದು ಹೇಳಿ ಬಂಗರಾಳ್ವಾಗ ಮನೆಗೆ ಬರುತ್ತಾಳೆ. ಮುಂದೆಂದೂ ಬೇರೆ ಮುಂಡೋರಿ ಅವಳ ಸುದ್ದಿಗೆ ಬರುವುದಿಲ್ಲ.
ತೊಂದರೆ ಕೊಟ್ಟವನಿಗೆ ಎರಡೇಟು ಕೊಟ್ಟು ಓಡಿಸುವ ಧೈರ್ಯವನ್ನು ತೋರುವ ತುಳು ನಾಡಿನ ಹೆಣ್ಣು ಮಗಳು ಬಂಗರಾಳ್ವಾನ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.© ಡಾ.ಲಕ್ಷ್ಮೀ ಜಿ ಪ್ರಸಾದ್
3.ಬಂಗರಾಳ್ವಾಗ
ನೀರುಗೆಂದು ಹೋಗುವಳವಳು ಬಂಗರಾಳ್ವಾಗ
ನೀರಿಗೆಂದು ಹೋಗುವಳವಳು ಬಂಗರಾಳ್ವಾಗ
ನೀರಿಗೆಂದುಹೋಗುವಾಗ ದಾರಿ ಗಡ್ಡ
ತಡಮೆಯಲ್ಲಿ ನಿಂತಿದ್ದಾನೆ ದೇರೆ ಮುಂಡೋರಿ
ದಾರಿ ಬಿಡು ತಡಮೆ ಸರಿ ದೇರೆ ಮುಂಡೋರಿ
ದಾರಿ ಬಿಡಲು ತಡಮೆ ಸರಿಸಲು
ನನಗೊಂದು ಮಾತುಹೇಳಬೇಕೆಂದನು ದೇರೆ ಮುಂಡೋರಿ
ನೀರು ತೆಗೆದುಕೊಂಡು ಬರುವಾಗ ದಾರಿಗಡ್ಡ
ತಡಮೆಯಲ್ಲಿ ನಿಂತಿದ್ದಾನೆ ಬೇರೆ ಮುಂಡೋರಿ
ದಾರಿ ಬಿಡು ತಡಮೆ ಸರಿಸು
ನಿನಗೊಂದು ಮಾತು ನಾಳೆ ಹೇಳುವೆ ಎಂದು ಅವಳು ಹೇಳಿದಳು
ದಾರಿಬಿಟ್ಟು ತಡಮೆ ಸರಿಸಿ ನಿಂತನು ದೇರೆ ಮುಂಡೋರಿ
ಆ ದಿನ ಹೋಯಿತಪ್ಪ ಬಂಗರಾಳ್ವಾಗನಿಗೆ
ಮರುದಿನ ಬಂದಳವಳು ಬಂಗರಾಳ್ವಾಗ
ನೀರಿಗೆಂದು ಹೋಗುವಾಗ ನಿನ್ನೆ ಹೇಳಿದ
ಮಾತಿಗೆ ಉತ್ತರ ಕೊಡು ಬಂಗರಾಳ್ವಾಗ
ಎಂದು ಹೇಳವನು ದೇರೆ ಮುಂಡೋರಿ
ದಾರಿ ಬಿಡದಿದ್ದರೆ ತಡಮೆ ಸರಿಸದಿದ್ದರೆ
ನಾನು ಈಗ ಬೊಬ್ಬೆ ಹಾಕುವೆ ಎಂದು ಅವಳು ಹೇಳಿದಳು
ಬೊಬ್ಬೆ ಹಾಕಿ ಕರೆಯುವರು ಒಂದು ಮಾಡುವರು
© ಡಾ.ಲಕ್ಷ್ಮೀ ಜಿ ಪ್ರಸಾದ್
ನಿನ್ನನ್ನು ಬಿಟ್ಟು ಬೇರೆ ನನಗೆ ಸಿಗುವುದಿಲ್ಲ
ಕೈಯಲ್ಲಿ ಹಿಡಿದು ಬಳೆ ಒಡೆಯುತ್ತಾನೆ ದೇರೆ ಮುಂಡೋರಿ
ಹಿಡಿದು ನಾಲ್ಕು ಏಟು ಇಕ್ಕುತ್ತಾರವರು ದೇರ ಮುಂಡೋರಿ
ಹಾದಿ ಬಿಟ್ಟು ತಡಮೆ ಸರಿಸಿದ ದೇರೆ ಮುಂಡೋರಿ
ನೀರು ತೆಗೆದುಕೊಂಡು ಹೋದಳವಳು ಬಂಗರಾಳ್ವಾಗ
ರಾತ್ರಿಯ ಹೊತ್ತಿನಲ್ಲಿ ಸ್ನಾನಕ್ಕೆ ಹೋಗುವಾಗ
ದಾರಿಗಡ್ಡ ತಡಮೆಯಲ್ಲಿ ನಿಂತಿದ್ದಾನೆ ದೇರೆ ಮುಂಡೋರಿ
ದಾರಿಬಿಡು ತಡಮ್ಮೆ ಸರಿಸು ಎಂದಳು
ಹಿಡಿದ ಕೊಡವನ್ನು ಎತ್ತಿ ಒಂದು ಏಟು ಹಾಕುತ್ತಾಳೆ
ಓಡಿಕೊಂಡು ಹೋದನಾತ ದೇರೆ ಮುಂಡೋರಿ
ಅಷ್ಟು ಹೊತ್ತಿಗೆ ಹೇಳುತ್ತಾಳವಳು ಬಂಗರಾಳ್ವಾಗ
ಊರಿಗೆ ಬಂದ ಮಾರಿ ಆ ಕಡೆ ಹೋಯಿತು
ಎಂದು ಹೇಳಿದಳು ಬಂಗರಾಳ್ವಾಗ
© ಡಾ.ಲಕ್ಷ್ಮೀ ಜಿ ಪ್ರಸಾದ್
No comments:
Post a Comment