ಬಾಗಿಲು ಬಬ್ಬರ್ಯ..
ಉಡುಪಿ ಕುಂದಾಪುರ ಕಡೆ ಬಾಗಿಲು ಬಬ್ಬರ್ಯ ಎಂಬ ದೈವವಿದೆ.ಈತ ದೈವಸ್ಥಾನವನ್ನು ಕಾಯುವ ಕೆಲಸವನ್ನು ಮಾಡುವ ದೈವ
ಇಲ್ಲಿ ಈ ದೈವದ ವೇಷ ಭೂಷಣ ವಿಶಿಷ್ಟವಾಗಿವೆ
ಮುಸ್ಲಿಮರು ಧರಿಸುವ ಟೊಪ್ಪಿ ಗಡ್ಡ ಇದ್ದು ಮೂಲತಹ ಮುಸ್ಲಿಂ ಮೂಲದ ವ್ಯಕ್ತಿ ಎಂಬುದನ್ನು ಇದು ದ್ಯೋತಿಸುತ್ತದೆ
ಇದು ನಮ್ಮಕಡೆ ರೆಂಕೆ ಅಣಿ ಕಟ್ಟಿ ಆರಾಧನೆ ಆಗುವ ಬಬ್ಬರ್ಯನಿಗೂ ಮುಸ್ಲಿಂ ಮೂಲದ ಕಥಾನಕವಿದೆ
ಈ ದೈವಗಳನ್ನು ಆರಾಧನೆ ಮಾಡುದು ಹಿಂದುಗಳೇ.
ಈತ ಮಾದವ ಸುಲಿಕಲ್ಲಬ್ಯಾರಿಯ ಮಗ,ಜೈನ ಮಡಸ್ತಾನದ ಹುಡುಗಿಯನ್ನು ಮದುವೆ ಅಗುತ್ತಾನೆ.ರಾತ್ರಿ ಅಕೆಯ ಮೂಗಿನಿಂದ ಹೊರಬರುವ ಸರ್ಪಗಳನ್ನು ಕೊಲ್ಲುತ್ತಾನೆ.
ತಮ್ಮ ತಂಗಿಯನ್ನು ಮದುವೆಯಾದ ಕಾರಣಕ್ಕಾಗಿ ಇವನಿಗೆ ಸ್ಥಳೀಯ ಜೈನ ಮಡಸ್ಥಾನದವರ ವ್ಯಾಪ್ತಿಯಲ್ಲಿದ್ದ ಪ್ರದೇಶದ ಆಳ್ತನ ಸಿಕ್ಕಿರುವ ಸಾಧ್ಯತೆ ಇದೆ
ಈತ ನಂತರ ಜೈನನಾಗಿಯೇ ಬದುಕಿರಬೇಕು ಯಾಕೆಂದರೆ ಬಬ್ಬರ್ಯ ನಿಗೆ ಸಪ್ಪೆ ಕಡುಬಿನ ಸಸ್ಯಾಹಾರ ನೀಡುತ್ತಾರೆ
ನಂತರ ಕಡಲಿಗೆ ವ್ಯಾಪಾರಕ್ಕೆ ಹೋಗಿ ದುರಂತವನ್ನಪ್ಪಿ ದೈವತ್ವ ಪಡೆಯುತ್ತಾನೆ
ಈತನೆಲ್ಲೂ ಕಾಯುವ ಕಾಯಕವನ್ನು ಮಾಡುದಿಲ್ಲ.ಮತ್ತು ಈ ದೈವದ ವೇಷ ಭೂಷಣಗಳಲ್ಲಿ ಮುಸ್ಲಿಂರ ವೇಷಭೂಷಣ ದ ಛಾಯೆ ಇಲ್ಲ
ಹಾಗಾಗಿ ಬಾಗಿಲ ಬಬ್ಬರ್ಯ ಮತ್ತು ರೆಂಕೆ ಅಣಿ ಕಟ್ಟಿ ಕೋಲ ಅಗುವ ಸಸ್ಯಹಾರ ಸೇವಿಸುವ ಬಬ್ಬರ್ಯ ಬೇರೆ ಬೇರೆ ದೈವಗಳಾಗಿವೆ ಎಂದು ಹೇಳಬಹುದು ,ಬಬ್ಬರ್ಯನ ರೆಂಕೆ ಅಣಿ ಆತ ಕಡಲಿನಲ್ಲಿ ಸಾಗುವಾಗ ಹಡಗಿಗೆ ? ದೋಣಿಗೆಕಟ್ಟಿದ ಹಾಯಿಯ ಪ್ರತೀಕವಾಗಿದೆ ,ಬಬ್ಬರ್ಯ ನಿಗೆ ಬಿಟ್ಟರ ಕಿನ್ನಿ ಮಾಣಿಗೂ ರೆಂಕೆ ಅಣಿ ಕಟ್ಟುವ ಪದ್ದತಿ ಇದೆ ಇವರೂ ದೋಣಿ ಮೂಲಕ ಪ್ರಯಾಣಿಸಿದ ಉಲ್ಲೇಖವಿದೆ
ಬಾಗಿಲ ಬಬ್ಬರ್ಯ ನ ಬಗ್ಗೆ ಹೆಚ್ಚಿನ ಮಾಹಿತಿ ಇದ್ದವರು ತಿಳಿಸಿ ಎಂದು ಕೋರಿಕೆ
ಬಬ್ಬರ್ಯ ಪಂಜುರ್ಲಿ ಗುಳಿಗ ಸೇರಿದಂತೆ 1253 ದೈವಗಳ ಮಾಹಿತಿಗಾಗಿ ಮಾಯ ಮತ್ತು ಜೋಗದ ಬೆಳಕಿನಲ್ಲಿ
ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್
The Thousand and One Daivas of Karavali-Dr Lakshmi G Prasad,mob 9480516684
Translated by Ashwini Bhat
ಕ್ಷೇತ್ರ ಕಾರ್ಯದಲ್ಲಿ ಮಾರ್ಗ ದರ್ಶನ ನೀಡಿದ್ದಲ್ಲದೆ ಜೊತೆಗೆ ಬಂದು ಮಾಹಿತಿ ಸಂಗ್ರಹದಲ್ಲಿ ಸಹಾಯ ಮಾಡಿದ ಹಿರಿಯ ವಿದ್ವಾಂಸರಾದ ಚಂದ್ರ ಶೇಖರ ನಾವಡ ಮತ್ತು ಗೆಳತಿ ನೀತಾರಿಗೆ ಧನ್ಯವಾದಗಳು

No comments:
Post a Comment