Friday, 22 February 2013

laxmiprasad: An interview with prof.Umaram--a Bastar folklorist...

laxmiprasad: An interview with prof.Umaram--a Bastar folklorist...: Vocaroo Voice Message             ಬಸ್ತರ್  ಜಾನಪದ ತಜ್ಞೆ ಪ್ರೊ .ಉಮಾ  ರಾಮ್  ಅವರೊಂದಿಗೆ ಮಾತು ಕತೆ   ಎತ್ತಣ  ಮಾಮರ ಎತ್ತಣ ಕೋಗಿಲೆ !ಛತ್ತೀಸ್ ಘಡದ ಬಸ...

Thursday, 21 February 2013

An interview with prof.Umaram--a Bastar folklorist

Vocaroo Voice Message    
       ಬಸ್ತರ್  ಜಾನಪದ ತಜ್ಞೆ ಪ್ರೊ .ಉಮಾ  ರಾಮ್  ಅವರೊಂದಿಗೆ ಮಾತು ಕತೆ 

 ಎತ್ತಣ  ಮಾಮರ ಎತ್ತಣ ಕೋಗಿಲೆ !ಛತ್ತೀಸ್ ಘಡದ ಬಸ್ತರ್ ಜಿಲ್ಲೆಯ ಪ್ರದೇಶದ ಜಾನಪದ ತಜ್ಞ ರಾದ ಉಮಾ ರಾಮ್  ಮೂಲತ: ಇಂಗ್ಲಿಷ್ ಪ್ರೊಫೆಸರ್ .ಇವರ ಹುಟ್ಟೂರು ಮೈಸೂರು.   ಅನೇಕ ವರ್ಷಗಳಿಂದ ಬಸ್ತರ್ ಜಿಲ್ಲೆಯ ಬುಡಕಟ್ಟು ಜನಾಂಗಗಳ ಜನರನ್ನು ಹತ್ತಿರ ದಿಂದ ಕಂಡು ಅವರೊಡನೆ ಒಡನಾಡಿಯಾಗಿ ಇದ್ದು ಅವರ ವಿಶ್ವಾಸ ಗಳಿಸಿ ಅವರಲ್ಲಿರುವ ಜಾನಪದ ಹಾಡುಗಳನ್ನು ಕಾವ್ಯಗಳನ್ನು ಸಂಗ್ರಹಿಸಿ ಸತತ ಅದ್ಯಯನ ನಡೆಸಿ    Tribal songs Ballads and Oral epics of Bastar ಎಂಬ ಗ್ರಂಥ ವನ್ನು ಬರೆದು ಪ್ರಕಟಿಸಿದ್ದಾರೆ .ಇವರ ಪತಿ ಕೆ. ಎಸ  ರಾಮ್  ಕೂಡಾ ಇದರಲ್ಲಿ ಸಹಭಾಗಿಯಾಗಿದ್ದಾರೆ . ಜನಪದ ಹಾಡು ಕಾವ್ಯಗಳ ಸಂಗ್ರಹದೊಂದಿಗೆ ಸಮಗ್ರ ವಿಮರ್ಶೆ ಯನ್ನು ಇದರಲ್ಲಿ ಮಾಡಿದ್ದಾರೆ . ಪ್ರಳಯಾನಂತರದ  ಸೃಷ್ಟಿ ,ಅಣ್ಣ ತಂಗಿಯರು  ಮುಂದೆ ಗಂಡ -ಹೆಂಡತಿಯರಾಗಿ ಸೃಷ್ಟಿ ಕಾರ್ಯವನ್ನು ಮಾಡುವುದು ಲಿಂಗೊ ಪೆನ್ ಎಂಬ ಅಲೌಕಿಕ ಶಕ್ತಿಯ ಪುರುಷ ಸಂಗೀತ ವನ್ನು ಸೃಜಿಸುವುದು, ಆತನನ್ನು ಕೊಲ್ಲಲೆಂದು ಭಾವಿಯಲ್ಲಿ ಭರ್ಜಿಯನ್ನು ಚುಚ್ಚಿ ಇಡುವುದು, ಆತ ಅಲೌಕಿಕ ಶಕ್ತಿಯಿಂದ ಪೂಜ್ಯನಾಗುವುದು ,ವಿವಿಧ ತರಕಾರಿಗಳಿಗೆ ನಮಸ್ಕಾರ(ಸಲ್ಯೂಟ್ ಟು ಬ್ರಿಂಜಾಲ್ } ಎಂಬ ಹಾಡು, ಕೊಕೆರೆಂಗ್ ಕೊರೆಂಗ್  ನೀನು ಯಾಕೆ ಹಾಡುವುದಿಲ್ಲ(ಕೊಕೆರೆಂಗ್ ಕೊರೆಂಗ್ ವಾಯ್ ವಿ ಆರ್ ನಾಟ್ ಸಿಂಗಿಂಗ್ } , ರಾಣಿಗೇನು ನೀ ತರುವಿ {ವಾಟ್ ಯೂ ಬ್ರಿಂಗ್ ಫಾರ್ ದಿ ರಾಣಿ }ಮೊದಲಾದ ಹಾಡುಗಳು ಇದರಲ್ಲಿ ಇವೆ ಇವು ತುಳು ಪಾಡ್ದನಗಳಲ್ಲಿ ವರ್ಣಿಸಿರುವ ಸೂರ್ಯ ನಾರಾಯಣ ದೇವರು ಮಾಡಿದ ಸೃಷ್ಟಿ ಅಣ್ಣತಂಗಿಯರಾಗಿದ್ದ ಕೇಂಜವ ಪಕ್ಷಿಗಳು ದೇವರ ಅನುಮತಿ ಪಡೆದು ಗಂಡ ಹೆಂಡತಿಯರಾಗಿ ಸೃಷ್ಟಿ ಕಾರ್ಯದಲ್ಲಿ ನೆರವಾಗುವುದು , ತುಳು ಜಾನಪದ ಹಾಡುಗಳಾದ ರಾವೋ ರಾವು ಕೊರೆಂಗೊ ,ಆಜಪ್ಪಾ ಮೂಜಿಮೂಡೆ .. ಬೊಳೀಯ ಲತ್ತಂಡೆ ಕರಿಯ ಲತ್ತಂಡೆ  ಈಶ್ವರ ದೇವೇರೇ ಪಾದ ಕಾಣಿಕೆ ಮೊದಲಾದುವುಗಳನ್ನು ನೆನಪಿಸುತ್ತವೆ .ಈ ಬಗ್ಗೆ ತೌಲನಿಕ ಅಧ್ಯಯನ  ನಡೆಯಬೇಕಾಗಿದೆ . 

Saturday, 16 February 2013

Outstanding teacher award-2013


ಡಾ।।ಲಕ್ಷ್ಮೀ  ಜಿ ಪ್ರಸಾದರಿಗೆ(ನನಗೆ) ಶ್ರೀನಿವಾಸ ಸಮೂಹ ವಿದ್ಯಾ ಸಂಸ್ಥೆಗಳ ಸಂಸ್ಥಾಪಕರಾದ ಎ.ಶಾಮರಾವ್ ಅವರ ನೆನಪಿನಲ್ಲಿ ನೀಡುವ ಪ್ರತಿಷ್ಟಿತ   ಎ. ಶಾಮರಾವ್  ಮೆಮೋರಿಯಲ್  ಔಟ್ ಸ್ಟ್ಯಾಂಡಿಂಗ್ ಟೀಚರ್ ಅವಾರ್ಡ್ -೨೦೧೩ ಅನ್ನು ೧೪-೨-೨೦೧೩ರಂದು ಮಂಗಳೂರಿನ ವಲಚ್ಚಿಲ್ ನಲ್ಲಿರುವ ಶ್ರೀನಿವಾಸ ವಿದ್ಯಾ ಸಂಸ್ಥೆಗಳ ಆವರಣದಲ್ಲಿ ನಡೆದ ಸಂಸ್ಥಾಪಕರ ದಿನಾಚರಣೆಯಂದು ನೀಡಿದ್ದಾರೆ .ಈ ಪ್ರಶಸ್ತಿಯು ಅಭಿನಂದನಾ ಪತ್ರ ನೆನಪಿನ ಕಾಣಿಕೆ ಹಾಗೂ ೧೦,೦೦೦ ರೂ ಗಳನ್ನು ಒಳಗೊಂಡಿದೆ 

Saturday, 9 February 2013

A blade company- Rich lands agro ltd

                                ರಿಚ್ ಲ್ಯಾಂಡ್ಸ್ ಎಂಬ ಬ್ಲೇಡ್ ಕಂಪೆನಿ ಬಗ್ಗೆ ಎಚ್ಚರ!
  ನಮ್ಮ ರಾಜ್ಯದಲ್ಲಿ ಈ ಹಿಂದೆಯೇ  ವಿನಿವಿಂಕ್  ದಯೋತೆಕ್ ಸಹಾರ ಪರ್ಲ್ಸ್ ಮ್ಯಾಗ್ನೆಟ್ ಬೆಡ್ ಕ್ವನ್ತಂ ಕೆದಿಯ ಇನ್ಫೋಟೆಕ್ ಮೊದಲಾದ ಅನೇಕ ಬ್ಲೇಡ್ ಕಂಪನಿಗಳು ಬಂದು ಜನರನ್ನು ದೋಚಿವೆ  ಮುಕಂಬಿಕ ,ಆದಿತ್ಯ ಫೈನಾನ್ಸ್  ಮೊದಲಾದ ಅನೇಕ ಫೈನಾನ್ಸ್ ಗಳೂ  ಜನರಿಗೆ ಅಧಿಕ ಬಡ್ಡಿಯ ಆಮಿಷ್  ತೋರಿ ವಂಚಿಸಿವೆ .ಈಗ ಇಂಥ್ಹಾದ್ದೆ ಒಂದು ಬ್ಲೇಡ್ ಕಂಪನಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸುಳ್ಯ ಪುತ್ತೂರು ಗಳಲ್ಲಿ ಹಾಸನ ಅರಸೀಕೆರೆ ಬೆಂಗಳೂರು ಗಳಲ್ಲಿ ಜನರನ್ನು ದೋಚುತ್ತಿದೆ . ಚೆನ್ನೈ ಯ  ರಿಚ್ ಲ್ಯಾಂಡ್ಸ್ ಎಂಬ ಬ್ಲೇಡ್ ಕಂಪನಿಯ ಪ್ರತಿನಿಧಿಗಳು ಜನರಿಗೆ  ಮೂ ರುವರ್ಷದಲ್ಲಿ  ಮೂ ರು ಪಟ್ಟು ದುಡ್ಡು ಕೊಡುತ್ತೇವೆ ದುಡ್ಡು ಕಟ್ಟಿದ ಮರು ತಿಂಗಳಿ ನಿಂದ ೩೬ ತಿಂಗಳು ಕಾಲ ದುಡ್ಡು ಕೊಡುತ್ತೇವೆ ಎಂದು ಆಮಿಷ ಒಡ್ಡಿ ಲಕ್ಷಾಂತರ ದುಡ್ಡನ್ನು ದೋಚುತ್ತಿದ್ದಾರೆ ಕಂಪೆನಿ ಕೊಡುವ ಕಮಿಶಂಗಾಗಿ ಹೀಗೆ ಮಾಡುತ್ತಿದ್ದಾರೆ ಆತ್ಮೀಯರೊಬ್ಬರ ದಾಕ್ಷಿಣ್ಯಕ್ಕೆ ಸಿಲುಕಿ ನಾನು ಕೂಡ ಸ್ವಲ್ಪ ದುಡ್ಡು ಇದರಲ್ಲಿ ಹಾಕಿದ್ದು ನನಗೆ ೪-೫ ತಿಂಗಳು ಮಾತ್ರ ದುಡ್ಡು ಬಂದಿದ್ದು ಈಗ ೨-೩ ತಿಂಗಳಿನಿಂದ ದುಡ್ಡು ಬಂದಿಲ್ಲ ಕಂಪೆನಿಗೆ ಫೋನ್ ಮಾಡಿದರೆ ಯಾರೂ ರಿಸೀವ್ ಮಾಡುವುದಿಲ್ಲ ಈಮೈಲ್ ಮಾಡಿದರೆ ಅದಕ್ಕೂ ಉತ್ತರ ಬಂದಿಲ್ಲ ನನ್ನಿಂದ ದುಡ್ಡು ಕಟ್ಟಿಸಿದ ಪ್ರತಿನಿಧಿ ಗೋವಿಂದ ಪ್ರಸಾದ್   ಪುತ್ತೂರು ಎಂಬಾತನಿಗೆ  ಫೋನ್ ಮಾಡಿದರೆ ಈ ಬಗ್ಗೆಪೊಲೀಸರಿಗೆ ಅಥವಾ ಬೇರೆ  ಯಾರಿಗಾದರೂ ತಿಳಿಸಿದರೆ ಹುಷಾರ್ ಎಂದು ನನಗೆ ರೋಪ್ ಹಾಕಿದ್ದಾರೆ ಬೇರೆಯವರಿಂದ ಇನ್ನು ಕೂಡ ಲಕ್ಷಾಂತರ ದುಡ್ಡು ಕಟ್ಟಿಸುತ್ತಿದ್ದಾರೆ ಅದ್ದರಿಂದ ರಿಚ್ ಲ್ಯಾಂಡ್ಸ್  ಪ್ರತಿನಿಧಿಗಳು ನಿಮ್ಮಲ್ಲಿಗೆ  ಬಂದ್ರೆ ಎಚ್ಚತ್ತು ಗೊಳ್ಳಿ ಸಮೀಪದ ಪೊಲೀಸರಿಗೆ ತಿಳಿಸಿ ಜಾಗ್ರತೆ ನಿಮ್ಮ ದುಡ್ಡನ್ನು ಕಳೆದು ಕೊಳ್ಳ ಬೇಡಿ ನನ್ನಂತೆ! 

Friday, 8 February 2013

A pecuiliar statue head


                                                ಪೆರುವಾಜೆಯ  ವಿಶಿಷ್ಟ ತಲೆ
ಸುಳ್ಯ ತಾಲೂಕಿನ ಪೆರುವಾಜೆ ಗುತ್ತಿನ ತರವಾಡು  ಮನೆಗೆ ಸೇರಿದ ಭೂತ ಸ್ಥಾನಕ್ಕೆ ತಲೆಗೆ ಪ್ರತಿಯಾಗಿ ತಲೆ ಹರಿಕೆಯಾಗಿ ಬಂದಿದೆ ಎಂದು ನಂಬಲಾಗಿರುವ ವಿಶಿಷ್ಟ ವಾದ ಕಂಚಿನ ಮೂರ್ತಿ  




Wednesday, 6 February 2013

Bellareya maasti (maha sati) vigrahagalu

                             ಬೆಳ್ಳಾರೆಯ ಮಾಸ್ತಿ ಹಾಗೂ ಇತರ ವಿಗ್ರಹಗಳು 
                                     ಬೆಳ್ಳಾರೆ ಬೀಡಿನ ಮಾಸ್ತಿ ವಿಗ್ರಹ -೧ 
                                                                    ಕಂಚಿನ ಕರಡಿಗೆಗಳು 

                                                                    ಹಸುವಿನ ವಿಗ್ರಹ 
                                                                     ಹಂದಿಯ ಮೂರ್ತಿ 
                                                                    ಮಾಸ್ತಿ ವಿಗ್ರಹ -೨
ಬೆಳ್ಳಾರೆ ಬೀಡಿನ ಪಟ್ಟದ ಚಾವಡಿಯ ಬಳಿಯಲ್ಲಿರುವ ಅಡ್ಯಂತಾಯ  ಭೂತಸ್ಥಾನದಲ್ಲಿ  ಭೂತದ ಮೊಗ ಆಯುಧಗಳೊಂದಿಗೆ  ಕೆಲವು ಅಪೂರ್ವ ವಿಗ್ರಹಗಳಿವೆ.ಇಲ್ಲಿ ಎರಡು ಕಂಚಿನಿಂದ ತಯಾರಿಸಿದ ಮಾಸ್ತಿ ಮೂರ್ತಿಗಳಿವೆ .ಒಂದು ಹಸುವಿನ ಮೂರ್ತಿ ಇದೆ .ಇದರ ಬೆನ್ನಿನ ಮೇಲೆ ಚಿಕ್ಕದಾದ ನಂದಿಯ ವಿಗ್ರಹ ಇದೆ.ಹಾಲನ್ನು ಕುಡಿಯುವ ಕರು ಕೂಡ ಜೊತೆಗೆ ಇದೆ.ಮೂರು ಕಂಚಿನ ಕರಡಿಗೆಗಳಿದ್ದು ಇದರ ಅಕ್ಕರ ವಿಶಿಷ್ಟ ವಾಗಿದೆ ಇದು ಸ್ತ್ರೀಯ  ಹಾಗೆ  ತೋರುತ್ತದೆ ಪಕ್ಷಿಯ ಹಾಗೆಯೂ ಕಾಣಿಸುತ್ತದೆ