ನಮ್ಮ ಹೆಮ್ಮೆಯ ಓದುಗರು
ಕರಾವಳಿಯ ಸಾವಿರದೊಂದು ದೈವಗಳು.
Pawan Naresh Bangera
ಪ್ರಸ್ತುತ ದುಬೈ ಯಲ್ಲಿರುವ ಪವನ್ ನರೇಶ್ ಬಂಗೇರ ಅವರ ಕೈಯಲ್ಲಿ ಕರಾವಳಿಯ ಸಾವಿರದೊಂದು ದೈವಗಳು ಗ್ರಂಥ
Daiva Book Daiva research book ಮಾಯ ಮತ್ತು ಜೋಗದ ಬೆಳಕಿನಲ್ಲಿ. ಕರಾವಳಿಯ ಸಾವಿರದೊಂದು ದೈವಗಳು -ಡಾ.ಲಕ್ಷ್ಮೀ ಜಿ ಪ್ರಸಾದ್,ಮೊಬೈಲ್ 9480516684 The thhousand and one daivas of karavali - Dr Lakshmi G Prasad mobile 9480516684 ,translated by Ashwini Bhat Daiva ,daiva kola ,panjurli Guliga chamundi koragajja Jumadi ತುಳುನಾಡಿನ ಭೂತಾರಾಧನೆ/ ಭೂತ ಕೋಲ/ ದೈವಾರಾಧನೆ ಬಗ್ಗೆ ಮಾಹಿತಿಗಾಗಿ ಡಾ..ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684 Information about bhootaradhane daivas of Tulunadu
ಕರಾವಳಿಯ ಸಾವಿರದೊಂದು ದೈವಗಳು.
Pawan Naresh Bangera
ಪ್ರಸ್ತುತ ದುಬೈ ಯಲ್ಲಿರುವ ಪವನ್ ನರೇಶ್ ಬಂಗೇರ ಅವರ ಕೈಯಲ್ಲಿ ಕರಾವಳಿಯ ಸಾವಿರದೊಂದು ದೈವಗಳು ಗ್ರಂಥ
ಈವತ್ತು ಮಧ್ಯಾಹ್ನ ಊಟದ ಸಮಯದಲ್ಲಿ ಒಬ್ಬರ ಫೋನ್ ಬಂತು.ನೀವು ಲಕ್ಷ್ಮೀ ಜಿ ಪ್ರಸಾದರಾ? ನೀವು ಕಳುಹಿಸಿದ ಪಾರ್ಸೆಲ್ ಬಂದಿದೆ.ನಿಮಗೆ ನನ್ನ ವಿಳಾಸ ಯಾರು ಕೊಟ್ಟದ್ದು.ಈ ಪುಸ್ತಕ ನಮಗೆ ಬೇಕಾಗಿತ್ತು.ಆದರೆ ನಾನು ನಿಮಗೆ ಅಡ್ರೆಸ್ ಕೊಟ್ಟಿಲ್ಲ ,ನಿಮಗೆ ಹೇಗೆ ಪೇ ಮಾಡುದು ?" ಎಂದರು.ಆಗ ನನಗೆ ಅನೇಕರು ತಮ್ಮ ಹೆತ್ತವರಿಗಾಗಿ ಆತ್ಮೀಯರಿಗಾಗಿ ಪುಸ್ತಕಕ್ಕೆ ಪೇ ಮಾಡಿ ಅವರವರ ವಿಳಾಸ ನೀಡಿ ಕಳುಹಿಸುವಂತೆ ಹೇಳಿದ್ದು ನೆನಪಾಯಿತು
ಹಾಗೆ ನನಗೆ ಫೋನ್ ಮಾಡಿದ ಶ್ರೀಧರ್ ಅವರ ವಿಳಾಸ ತಗೊಂಡು ಚೆಕ್ ಮಾಡಿದೆ..
ಹೌದು..ನನ್ನ ಅಂದಾಜು ಸರಿ ಇತ್ರು
ಪ್ರಸ್ತುತ ಚೆನ್ನೈಯಲ್ಲಿ ಸೀನಿಯರ್ ಬ್ಯಾಂಕ್ ಮ್ಯಾನೇಜರ್ ಆಗಿರುವ ನನ್ನ ಹಳೆಯ ವಿದ್ಯಾರ್ಥಿನಿ ಅನರೂಪಾ ಕಳೆದ ವಾರ ನನ್ನನ್ನು ಸಂಪರ್ಕಿಸಿ ಪುಸ್ತಕಕ್ಕೆ 2000₹ ಪೂರ್ಣ ಬೆಲೆ ಪಾವತಿಸಿ ಅವರ ತಂದೆಯ ಹೆಸರು ವಿಳಾಸ ನೀಡಿದ್ದರು
ಹಾಗೆ ಮತ್ತೆ ಫೋನ್ ಮಾಡಿ ಶ್ರೀಧರ್ ಅವರಿಗೆ ಅವರ ಮಗಳ ಉಡುಗೊರೆ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕ ಎಂದು ತಿಳಿಸಿದೆ.ಅವರಿಗೆ ತಮ್ಮ ಅಭಿರುಚಿ ಗಮನಿಸಿದ ಮಗಳು ಪುಸ್ತಕ ಉಡುಗೊರೆ ನೀಡಿದ ಬಗ್ಗೆ ತಿಳಿದು ಬಹಳ ಸಂತಸಪಟ್ಟರು
(ಮೂರು ವರ್ಷದ ಹಿಂದೆ)
ಹವ್ಯಕರಲ್ಲಿ ಭೂತಾರಾಧನೆ ಬಗ್ಗೆ ಆಸಕ್ತಿ ಇರುವವರ ಸಂಖ್ಯೆ ಕಡಿಮೆ.ಅದರಲ್ಲೂ ಹವ್ಯಕ ಸ್ತ್ರೀಯರಿಗೆ ಆಸಕ್ತಿ ಇಲ್ಲವೇ ಇಲ್ಲ ಎನುವಷ್ಟು ಕಡಿಮೆ
ಇಂತಹವರ ನಡುವೆ ನಮ್ಮ ಸಮೀಪದ ಸಂಬಂಧಿ( ನನ್ನ ಅಕ್ಕನ ಸಣ್ಣ ಮಾವನವರ ಮೊಮ್ಮಗಳು) ಅಪರ್ಣಾ Aparna Prashanth ವಿಶಿಷ್ಟರಾಗಿ ಕಾಣ್ತಾರೆ.ಇವರಿಗೆ ದೈವಾರಾಧನೆ ಕನ್ನಡ ತುಳು ಸಂಸ್ಕೃತಿ ಕುರಿತು ಆಸಕ್ತಿ ಇದೆ.ಈ ಬಗ್ಗೆ ಮಾಹಿತಿ ಸಂಗ್ರಹಮಾಡುತ್ತಿದ್ದಾರೆ ಎಂಬುದು ಸಂತಸದ ಹೆಮ್ಮೆಯ ವಿಚಾರ .
ಮುಂದೆ ಇವರಿಂದ ಅಪರೂಪದ ಕೃತಿಗಳ ರಚನೆಯಾಗಲಿ ..ಸಮಾಜಕ್ಕೊಂದು ಕೊಡುಗೆಯಾಗಲಿ ಎಂದು ಹಾರೈಸುವೆ.
ನನ್ನನ್ನು ಚಿಕ್ಕಿ,ಚಿಕ್ಕಮ್ಮ ಎಂದು ತುಂಬು ಪ್ರೀತಿಯಿಂದ ಕರೆಯುವ ಅಪರ್ಣಾ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕವನ್ನು ಪೂರ್ಣ ಬೆಲೆ 2000₹ ಗೆ ಖರೀದಿಸಿ ಓದಿ ಸಂಭ್ರಮಿಸಿದ್ದಾರೆ.ಒಂದು ಚಂದದ ಪೋಟೊ ತೆಗೆದು ಕಳುಹಿಸಿದ್ದಾರೆ.