Thursday, 5 September 2019

ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು: 442 ದೂಮ ದೈವ© ಡಾ.ಲಕ್ಷ್ಮೀ ಜಿ ಪ್ರಸಾದ

ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು: 442 ದೂಮ ದೈವ© ಡಾ.ಲಕ್ಷ್ಮೀ ಜಿ ಪ್ರಸಾದ
ದೂಮ ದೈವ
ಗುಂಡ್ಮಿ ಬ್ರಹ್ಮಾವರ ಗರಡಿಯಲ್ಲಿ ಆರಾಧಿಸಲ್ಪಡುವ ದೈವ ದೂಮ.ಮೂಲತಃ ಈತನೊಬ್ಬ ಬ್ರಾಹ್ಮಣ ಬಾಲಕ.ಸ್ವಲ್ಪ ಪೆದ್ದು ಹುಡುಗ.
ಕರುಳು ಕರಗುವ ಕಥೆ ಈತನದು‌.ಇವನು ಚಿಕ್ಕ ಮಗು ಇರುವಾಗಲೇ ಈತನ ತಾಯಿ ಸಣ್ಣ ವಯಸ್ಸಿನಲ್ಲಿ ಮರಣವನ್ನಪ್ಪಿದ್ದರು‌.ಹಾಗಾಗಿ ತಂದೆ ಇನ್ನೊಂದು ಮದುವೆ ಆಗಿದ್ದರು. ಮಲತಾಯಿಯಾಗಿ ಬಂದ ಚಿಕ್ಕಮ್ಮ ಈತನಿಗೆ ತುಂಬಾ ಕಿರುಕುಳ ಕೊಡುತ್ತಿದ್ದಳು.ಹೊಟ್ಟೆಗೆ ಆಹಾರ ಕೊಡುತ್ತಿರಲಿಲ್ಲ.
ಒಂದು ದಿನ ಚಿಕ್ಕಮ್ಮನ ಕಣ್ಣು ತಪ್ಪಿಸಿ ನೀರು ದೋಸೆ ಮಾಡಿ ತಿನ್ನುತ್ತಾ ಇದ್ದ.ಅದನ್ನು ನೋಡಿದ ಚಿಕ್ಕಮ್ಮ ದೊಡ್ಡ ಕೋಲು ಹಿಡಿದು ಹೊಡೆಯಲು ಬರುತ್ತಾಳೆ.ಇವನು ಓಡುತ್ತಾನೆ‌.ಚಿಕ್ಕಮ್ಮ ಹಿಂದಿನಿಂದ ಅಟ್ಟಿಸಿಕೊಂಡು ಬರುತ್ತಾಳೆ ‌.ಅವಳಿಂದ ತಪ್ಪಿಸಿಕೊಂಡು ಓಡುವಾಗ ಒಂದು ಬಾವಿಗೆ ಬಿದ್ದು ದೂಮ ಸಾಯುತ್ತಾನೆ‌.ದುರಂತ ಮತ್ತು ದೈವತ್ವ ತುಳು ಸಂಸ್ಕೃತಿಯ ಅವಿಭಾಜ್ಯ ಅಂಶ‌.ಅಂತೆಯೇ ದುರಂತವನ್ನಪ್ಪಿದ ಬ್ರಾಹ್ಮಣ ಬಾಲಕ ದೂಮ ದೈವತ್ವ ಪಡೆದು ಆರಾಧನೆ ಪಡೆಯುತ್ತಾನೆ‌.ಈಗ ಕೂಡ ದೂಮ ದೈವಕ್ಕೆ ನೀರು ದೋಸೆ/ ತೆಳ್ಳವು ಅನ್ನು ನೈವೇದ್ಯ ವಾಗಿ ಅರ್ಪಿಸುತ್ತಾರೆ.
ಈ ಬಗ್ಗೆ ಮಾಹಿತಿ ನೀಡಿದ ಶ್ರೀವತ್ಸ ಪ್ರದ್ಯುಮ್ನ ಅವರಿಗೆ ಹೃತ್ಪೂರ್ವಕ ಕೃತಜ್ಞತೆ ಗಳು.

No comments:

Post a Comment