Thursday, 5 September 2019

ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು : 443 ಮಿಲಿಟ್ರಿ ಅಜ್ಜ ದೈವ © ಡಾ.ಲಕ್ಷ್ಮೀ ಜಿ ಪ್ರಸಾದ

ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು : 443 ಮಿಲಿಟ್ರಿ ಅಜ್ಜ ದೈವ © ಡಾ.ಲಕ್ಷ್ಮೀ ಜಿ ಪ್ರಸಾದ
ಸಾಸ್ತಾನ ಗೋಳಿ ಗರಡಿಯಲ್ಲಿ ಆರಾಧಿಸಲ್ಪಡುವ ಒಂದು ವಿಶಿಷ್ಟವಾದ ದೈವ ಮಿಲಿಟ್ರಿ ಅಜ್ಜ .
ಹೆಸರೇ ಸೂಚಿಸುವಂತೆ ಈತ ಮೂಲತಃ ಸೇನೆಯಲ್ಲಿ ( ಮಿಲಿಟರಿಯಲ್ಲಿ) ಇದ್ದ‌ ಓರ್ವ ಸೈನಿಕ.ಈತ ಶತ್ರು ದೇಶದವರ ಕೈಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾನೆ‌.ಆಗ ಆತ ನನಗೆ ಇಲ್ಲಿಂದ ತಪ್ಪಿಸಿಕೊಂಡು ಹೋಗಲು ಸಾಧ್ಯವಾದರೆ ಗರೊಡಿಗೆ ಮಣೆ ಮಂಚ ಒಪ್ಪಿಸುತ್ತೇನೆ ಎಂದು ಹರಿಕೆ ಹೇಳುತ್ತಾನೆ ‌.ನಂತರ ಆತ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಬರುತ್ತಾನೆ.
ಆತ ಮಿಲಿಟರಿಯವರು ಅವನನ್ನು ಹುಡುಕಿಕೊಂಡು ಬರುತ್ತಾರೆ‌.ಇವನಿಗೆ ಮತ್ತೆ ಸೈನ್ಯದಲ್ಲಿ ಕೆಲಸ ಮಾಡಲು ಇಷ್ಟ ಇರುವುದಿಲ್ಲ. ಆಗ ಕೂಡ ಮಿಲಿಟರಿಯವರಿಗೆ ಸಿಗದಂತೆ ಮಾಡುವಂತೆ ಪ್ರಾರ್ಥನೆ ಸಲ್ಲಿಸುತ್ತಾನೆ.ಹಾಗೆಯೇ ಹುಡುಕಿಕೊಂಡು ಬಂದ ಮಿಲಿಟರಿಯವರಿಗೆ ಕೂಡ ಈತನ ಸುಳಿವು ಸಿಗುವುದಿಲ್ಲ. ನಂತರ ಆ ಅಜ್ಜ ತನ್ನ ಮಡದಿ ಮಕ್ಕಳೊಂದಿಗೆ ಸುಖವಾಗಿ ಬಾಳುತ್ತಾನೆ‌‌.ಅಜ್ನಂಜನ ಮನೆ ಇರುವ ಸ್ಥಳ ಐರೋಡಿ .ಆ ಅಜ್ಜ ವಯಸ್ಸಾದ ನಂತರ ಕಾಲವಶವಾಗುತ್ತಾನೆ.ನಂತರ ಈತ ದೈವತ್ವ ಪಡೆದು  ಆ ಗರಡಿಯಲ್ಲಿ ಮಿಲಿಟ್ರಿ ಅಜ್ಜ ದ ದೈವವಾಗಿ ಆರಾಧನೆ ಪಡೆಯುತ್ತಾನೆ. ಅವನ ವಂಶಸ್ಥರು ಈಗ ಕೂಡ ಇದ್ದಾರೆ‌.ಗರಡಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಶ್ರೀ ವತ್ಸ ಪ್ರದ್ಯುಮ್ನ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು
© ಡಾ‌‌.ಲಕ್ಷ್ಮೀ ಜಿ ಪ್ರಸಾದ

No comments:

Post a Comment