Thursday 5 September 2019

ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು : 444 ಜೈನ ಜಟ್ಟಿಗ © ಡಾ.ಲಕ್ಷ್ಮೀ ಜಿ ಪ್ರಸಾದ

ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು : 444 ಜೈನ ಜಟ್ಟಿಗ © ಡಾ.ಲಕ್ಷ್ಮೀ ಜಿ ಪ್ರಸಾದ
ತುಳುನಾಡಿನಲ್ಲಿ ಅನೆಕ ಜಟ್ಟಿಗ ದೈವಗಳಿಗೆ ಆರಾಧನೆ ಇದೆ. ಕೋಟೆ ಜಟ್ಟಿಗ,ಅರಮನೆ ಜಟ್ಟಿಗ ಹೊಗೆವಡ್ಡಿ ಜಟ್ಟಿಗ, ನೇತ್ರಾಣಿ ಜಟ್ಟಿಗ ಮೊದಲಾದವರು ಮೂಲತಃ ಜಟ್ಟಿಗರಾಗಿದ್ದವರು ಯಾವುದೋ ಕಾರಣಕ್ಕೆ ದೈವತ್ವ ಪಡೆದು ಆರಾಧನೆ ಪಡೆಯುತ್ತಾರೆ. ಹಾಗೆಯೇ
ಶಿರೂರು ಪರಿಸರದಲ್ಲಿ ಜೈನ ಜಟ್ಟಿಗ ಎಂಬ ದೈವಕ್ಕೆ ಆರಾಧನೆ ಇದೆ.ಹೆಸರೇ ಸೂಚಿಸುವಂತೆ ಈತ ಒಬ್ಬ ಜಟ್ಟಿ,ಶೂರ.ಆತ ಜೈನ ಅರಸರ ವಿರುದ್ಧ ಹೋರಾಡುತ್ತಾನೆ.ಹೋರಾಟದಲ್ಲಿ ಸೋಲುತ್ತಾನೆ.ನಂತರ ಅವನು ಜೈನ ಮತಕ್ಕೆ ಪರಿವರ್ತನೆ ಹೊಂದುತ್ತಾನೆ.ನಂತರ ಆತ ದೈವತ್ವ ಪಡೆದು  ಜೈನ ಜಟ್ಟಿಗ ಎಂಬ ಹೆಸರಿನ ದೈವವಾಗಿ ಆರಾಧನೆ ಪಡೆಯುತ್ತಾನೆ.
ಮಾಹಿತಿ ನೀಡಿದ ಶ್ರೀ ವತ್ಸ ಪ್ರದ್ಯುಮ್ನ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು
- ಡಾ.ಲಕ್ಷ್ಮೀ ಜಿ ಪ್ರಸಾದ, ಕನ್ನಡ ಉಪನ್ಯಾಸಕರು ,ಸರ್ಕಾರಿ ಪದವಿ ಪೂರ್ವ ಕಾಲೇಜು,ನೆಲಮಂಗಲ

No comments:

Post a Comment