Saturday, 4 April 2026

ಆತ್ಮ‌ಕಥೆಯ ಬಿಡಿ ಭಾಗಗಳು..ಝಾಂಸಿರಾಣಿಯಂತಾಗದಿದ್ದರೂ ಲಕ್ಷ್ಮೀ ಪೋದ್ದಾರ್ ಆದೆ

 ಝಾನ್ಸಿ  ರಾಣಿ ಲಕ್ಷ್ಮೀ ಬಾಯಿಯಂತಾಗುವ ಕನಸು ನನಸಾಗದಿದ್ದರೂ ಡಾ.ಲಕ್ಷ್ಮೀ ಪೋದ್ದಾರ್ ಆದೆ .


ಆತ್ಮ ಕಥೆ ಬರೆಯದೆ ತುಂಬಾ ದಿನ ಆಯಿತು.ಈವತ್ಯಾಕೋ‌ ನಾನು ಝಾನ್ಸಿರಾಣಿ ಲಕ್ಷ್ಮೀಬಾಯಿಯಾಗಿ ಮೆರೆದದ್ದು ನೆನಪಾಗಿ ಬರೆಯೋಣ ಎನಿಸಿತು

ನಾನು ಒಂದನೇ ತರಗತಿಯನ್ನು ಮೀಯಪದವಿನ ವಿದ್ಯಾವರ್ಧಕ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿದ್ದೆ..ಆಗ ನಮ್ಮ ಹಿರಿ ಮನೆ ವಾರಣಾಸಿಯಲ್ಲಿ ಆಸ್ತಿ ಪಾಲಾಗಿ ಹಿರಿಯರಿಂದ ಬಂದ ಮೂಲ ಮನೆ ದೊಡ್ಡ ಚಿಕ್ಕಪ್ಪ ಕೇಶವ ಭಟ್ಟರ ಪಾಲಿಗೆ ಬಂದಿತ್ತು.


ಹಿರಿ ಮಗನಾದ ನನ್ನ ತಂದೆಯವರಿಗೆ ಆಗ ಸುಮಾರು ನಲುವತ್ತನಾಲ್ಕು ವರ್ಷ..ಅಜ್ಜ ತೀರಿ ಹೋಗುವಾಗ ತಂದೆಯವರಿಗೆ ಹದಿನೈದು ವರ್ಷ.ಹತ್ತನೆಯ ತರಗತಿಯಲ್ಲಿ ಓದುತ್ತಿದ್ದರು.ಆಗ ಮೆಟ್ರಿ್ಕ್ ಎಂದರೆ ಹನ್ನೊಂದನೆಯ ತರಗತಿ ಪಾಸಾಗಬೇಕಿತ್ತು ಮೆಟ್ರಿಕ ಪಾಸಾದವರಿಗೆ ಒಳ್ಳೆಯ ಉದ್ಯೋಗ ಸಿಗುತ್ತಾ ಇತ್ತು


ನನ್ನ ತಂದೆಯವರು ಕಲಿಕೆಯಲ್ಲಿ ತುಂಬಾ ಜಾಣರಿದ್ದರಂತೆ.ಈ ವಿಚಾರ ನಮಗೆ ತಂದೆಯವರು ತೀರಿ ಹೋದ ಮೇಲೆ ಅವರ ಸಹಪಾಠಿ ಕಿಟ್ಟಣ್ಣ ರೈ ಅವರ ಮೂಲಕ ತಿಳಿದದ್ದು.ತಂದೆಯವರು ತೀರಿ ಹೋದ ಸುದ್ದಿ ಕೇಳಿ ಬಾಲ್ಯದ ಗೆಳೆಯನ ಮನೆ ಹುಡುಕಿಕೊಂಡು ಬಂದು ತಂದೆಯವರ ಭಾವ ಚಿತ್ರಕ್ಕೆ ಹೂ ಹಾಕಿ ನಮಿಸಿ ತಮ್ಮ‌ಪ್ರೀತಿಯನ್ನು ತೋರಿದ್ದರು.ಆಗ ಮಾತನಾಡುತ್ತಾ ನನ್ನ ತಂದೆಯವರು ಅರ್ಧ ಮಾರ್ಕ್ ಕಡಿಮೆ ಬಂದರೆ ಅಳುತ್ತಿದ್ದ ವಿಚಾರವನ್ನವರು ತಿಳಿಸಿ ತಂದೆಯವರು ತರಗತಿಯಲ್ಲಿ ಸದಾ ಪ್ರಥಮ ಸ್ಥಾನವನ್ನು ಗಳಿಸಿಕೊಳ್ಳುತ್ತಿದ್ದ ವಿಚಾರವನ್ನು ಹೇಳಿದ್ದರು.


ಅಜ್ಜ ಕೃಷ್ಣ ಭಟ್ಟರು ತೀರಿ ಹೋಗುವಾಗ ಮೆಟ್ರಿಕ‌್ ಪಾಸಾಗಲು ಒಂದು ವರ್ಷ ತಂದೆಯವರು ಓದಬೇಕಾಗಿತ್ತು.ತಂದೆಯವರಿಗೆ ಓದಲು ತುಂಬಾ ಆಸೆ ಇತ್ತು.ಆದರೆ ಮನೆಯಲ್ಲಿ ಸಣ್ಣ ವಯಸ್ಸಿನ ತಮ್ಮ ತಂಗಿಯರ ಜವಾಬ್ದಾರಿ ಇತ್ತು‌ಅಜ್ಜ ತೀರಿ ಹೋಗುವಾಗ ಸಣ್ಣ ಚಿಕ್ಕಪ್ಪ ಸದಾಶಿವ ಭಟ್ಟರಿಗೆ ಮೂರು ವರ್ಷವಂತೆ.ಅವರ ಅಣ್ಣ ಕಾಶಿ ಚಿಕ್ಕಪ್ಪ ( ರಾಮ‌ಕೃಷ್ಣಭಟ್ಟರು ) ಒಂದೆರಡು ವರ್ಷ ದೊಡ್ಡವರಿದ್ದಿರಬಹುದು.ಇವರಿಗಿಂತ ಒಂದೆರಡುವರ್ಷ ಸೋದರತ್ತೆ ಪಾರ್ವತಿ ದೊಡ್ಡವರಿದ್ದಿರಬಹುದು.ಅವರಿಗಿಂತ ದೊಡ್ಡವರು ನನ್ನ ದೊಡ್ಡ ದೊಡ್ಡಪ್ಪ ಕೇಶವ ಭಟ್ಟರು ಇವರಿಗಾಗ ಹತ್ತು ಹನ್ನೆರಡು ವರುಷ ಇವರಿಗಿಂತ ಹಿರಿಯರಾದ ಇಬ್ಬರು ಅಕ್ಕಂದಿರಿದ್ದರು.ನಡುವೆ ಓರ್ವ ಇನ್ನೊಂದು  ತಂಗಿಯೂ ಇದ್ದು ಅವರು ಸಣ್ಣ ವಯಸ್ಸಿನಲ್ಲಿಯೇ ತೀರಿ ಹೋಗಿದ್ದು ಅವರನ್ನು ನಾನು ಬಹುಶಃ ನೋಡಿಲ್ಲ ಎಂದೆನಿಸ್ತದೆ.ಅಥವಾ ನೋಡಿದ್ದರೂ ನೋಡಿದ್ದರೂ ನೆನಪಿರದಷ್ಟು ಸಣ್ಣ ವಯಸ್ಸು ನನಗಿದ್ದಿರಬಹುದು


ಈ ಅತ್ತೆಯ ಹೆಸರೂ ನನಗೆ ಗೊತ್ತಿಲ್ಲ‌.ಪಂಜಕ್ಕೆ ಮದುವೆ ಮಾಡಿಕೊಟ್ಟಕಾರಣ ಪಂಜದ ಅತ್ತೆ ಎನ್ನುತ್ತಿದ್ದೆವು.ಕಂರ್ಬಿ ಎಂದೂ ಹೇಳುತ್ತಿದ್ದೆವು‌.ಕಂರ್ಬಿಯ ಮಾವ ಅತ್ತೆ ತೀರಿ ಹೋದ ಮೇಲೆ ಮತ್ತೆ ಮದುವೆಯಾಗಿದ್ದು ಅವರಿಗೆ ಮಕ್ಕಳಿದ್ದರು.ಅವರಲ್ಲಿ ಯಾರನ್ನೋ ಕಂರ್ಬಿ ಬಾವ ಎಂದು ಕರೆಯುತ್ತಿದ್ದ ನೆನಪು.


ನನ್ನ ಆ ಸೋದರತ್ತೆ ಬಹಳ ಜಾಣೆಯಂತೆ.ನನ್ನನ್ನು ಬಂಧು ಬಳಗದವರು ಅವರಿಗೆ ಹೋಲಿಸುತ್ತಿದ್ದರು.ಅವರ ಬಗ್ಗೆ ಎರಡು ವಿಚಾರ ಅಮ್ಮ ಹೇಳಿದ್ದು ನನಗೆ ನೆನಪಿದೆ.

ಒಬ್ಬರು ಆಗಾಗ ಊಟಕ್ಕೆ ಮನೆಗೆ ಬರ್ತಿದ್ದರಂತೆ.ಬಂದಾಗ ಮಜ್ಜಿಗೆ ನೀರು ಕೊಡುವ ಪದ್ದತಿ ನಮ್ಮಲ್ಲಿ.ಪ್ರತಿ ಬಾರಿ ಎಷ್ಟೇ ಉಪ್ಪು ಹಾಕಿ ಹದ ಮಾಡಿ ಕೊಡುತ್ತಿದ್ದರೂ ಸ್ವಲ್ಪ  ಉಪ್ಪು ಕಡಿಮೆ ಎಂದು ಕೊರತೆ ಹೇಳುತ್ತಿದ್ದರಂತೆ.


ಹೀಗೆ ಒಂದು ಬಾರಿ ಬಂದಾಗ ನನ್ನ ಅತ್ತೆ ಒಂದು ಲೋಟ ಮಜ್ಜಿಗೆಗೆ ಒಂದು ಕೋಟ ಉಪ್ಪು ಹಾಕಿ ಎಷ್ಟು ಕರಗುತ್ತದೋ‌ಅಷ್ಟು ಕರಗಿಸಿ ಅರಿವೆಯಲ್ಲಿ ಸೋಸಿ‌ ತಗೊಂಡು ಹೋಗಿ ಕೊಟ್ಟರಂತೆ.ಆ ಉಪ್ಪಿನ ಸಿಂಗಿಯನ್ನು ಕಣ್ಣು ಮುಚ್ಚಿ ಕುಡಿದ ಪುಣ್ಯಾತ್ಮ‌ಕಮಕ್ ಕಿಮ್ ಎನ್ನಲಿಲ್ಲವಂತೆ.ಅದೇ ಕೊನೆ ಅಂತೆ ಉಪ್ಪು ಕಡಿಮೆ ಎಂದು‌ ಕೊರತೆ ಹೇಳಿದ್ದು.ಅತ್ತೆಗೆ ಮಕ್ಕಳಾಟಿಗೆ ಮದುವೆಯಾಗುವ ಮೊದಲಿನ ಕಥೆ ಇದು.ಹೆಚ್ಚಂದರೆ ಹತ್ತು ಹನ್ನೊಂದು ವರ್ಷದ ಎಳೆಯ ಹುಡುಗು ಬುದ್ಧಿ.ಇದು ಗೊತ್ತಾದಾಗ ಅಜ್ಜಿ ಕೈಯಿಂದ ಬೈಗಳು ಸಿಕ್ಕರೂ ಎಲ್ಲರಿಗೂ ಇದು ನಗು ತರಿಸಿದ ವಿಚಾರ ಆಗಿತ್ತಂತೆ.


ಅದೇ ರೀತಿ‌ ಯಾರದೋ ಹತ್ತಿರದ ಸಂಬಂಧಿಕರ ಮದುವೆಯ ಸಮಯದಲ್ಲಿ ಸೀರೆ ತೆಗೆಯುವ ಮಾತು ಬಂದಾಗ ಕುಟುಂಬದಲ್ಲಿ ಪ್ರಭಾವಿಗಳಾಗಿದ್ದ ಸಂಬಂಧಿಯೊಬ್ಬರು  ಅಜ್ಜನ ಮೊದಲ ಹೆಂಡತಿಯಲ್ಲಿ ಹುಟ್ಟಿದ  ಮಗಳಿಗೆ ಸೀರೆ ತೆಗೆಯುವ "ತಾಯಿ ಇಲ್ಲದ ಮಗು ಅವಳು" ಎಂದರಂತೆ.ಆಗ ನನ್ನ ಈ ಸೋದರತ್ರೆ 'ಹೌದೌದು..ನಾನು ಮದುವೆ ದಿನ ನನ್ನ ತಾಯಿಯನ್ನೇ ಸೀರೆಯಂತೆ ಉಡುವುದು ಎಂದರಂತೆ'..ಮುಂದೆ ಇವರಿಗೂ ಸೀರೆ ತೆಗೆದರೋ ಇಲ್ಲವೋ ಏನಾಯಿತು ನನಗೆ ಗೊತ್ತಿಲ್ಲ.ಅಂತೂ ಇದೂ ಎಲ್ಲರಲ್ಲಿ ನಗು‌ಹುಟ್ಟಿಸಿದ ವಿಚಾರವಾಗಿತ್ತು‌ .


ಒಟ್ಟಿನಲ್ಲಿ ಬಡತನದ ಜೊತೆಗೆ ತಂದೆಯನ್ನೂ ಕಳೆದುಕೊಂಡ ಮಕ್ಕಳದು ಬಹಳ ಶೋಚನೀಯ ಪರಿಸ್ಥಿತಿ ಇದ್ದಿರಬಹುದು ಎಂದು‌ ಎನಿಸ್ತದೆ.ಮನೆ ಮಕ್ಕಳಿಗೆ ಸೀರೆ ತೆಗೆಯುವ ಬಗ್ಗೆ ನಿರ್ಧಾರ ತಗೊಳ್ಳುವವರು ಇನ್ಯಾರೋ..ತಂದೆ ಇದ್ದರೆ ಹೀಗಾಗಲುಂಟೇ?


ನನಗೆ ಮದುವೆಯಾಗಿ ಮಗ ಹುಟ್ಟಿ ಅವನ ಉಪನಯನವನ್ನೂ ಪುರೋಹಿತರಾಗಿ‌ ನನ್ನ ತಂದೆಯವರೃ  ಮುಂದಾಳತ್ವ ವಹಿಸಿ  ಮಾಡಿದ್ದರು.ಅವರ ಜವಾಬ್ದಾರಿ ಎಲ್ಲವನ್ನೂ ಕಳೆದುಕೊಂಡ ನಂತರ ಒಂದಿನ ಸುಖವಾಗಿ ಜೀವ ತ್ಯಜಿಸಿ ಇಹ ಲೋಕ ಬಿಟ್ಟು ಪರಲೋಕಕ್ಕೆ ತೆರಳಿದ್ದರು.ಆದರೂ ನಮಗೆ ತಂದೆಯ ಸಾವು ಬಹಳ ದುಃಖ ಉಂಟು ಮಾಡಿತ್ತು.ಹಾಗಿರುವಾಗ   ಅಕಾಲದಲ್ಲಿ ತಂದೆಯನ್ನು ಕಳೆದುಕೊಂಡ ಮಕ್ಕಳ ಪರಿಸ್ಥಿತಿಯನ್ನು ಊಹಿಸುವುದೂ ಕೂಡ ಕಷ್ಟ.


ನನ್ನ ಸ್ನೇಹಿತೆಯೊಬ್ಬಳ ತಂದೆ ಸಣ್ಣ ವಯಸ್ಸಿನಲ್ಲಿಯೇ ತೀರಿ ಹೋಗಿದ್ದರು.ಅವರು ಹೇಳ್ತಿದ್ದರು.ನಾವು ನೆಂಟರ ಮನೆಗೆ ಹೋದರೆ ಹೊಟ್ಟೆ ತುಂಬಾ ಊಟ ಮಾಡ್ತಿರಲಿಲ್ಲ.ಯಾಕೆಂದರೆ ತಂದೆ ಇಲ್ಲದ ಮಕ್ಕಳು ರಾವು ಕಟ್ಟಿ ತಿಂತಾರೆ ಎಂದು ಜನ ಆಡಿಕೊಳ್ಳಬಾರದಲ್ವ ಲಕ್ಷ್ಮೀ‌? ಎಂದಿದ್ದರು.


ನನ್ನ ತಂದೆಯವರಿಗೆ ಕೂಡ ಅವರ ತಂದೆ ಎಂದರೆ ನನ್ನ ಅಜ್ಜ ಅಕಾಲದಲ್ಲಿ ತೀರಿ ಹೋದದ್ದು ಬಹು ದೊಡ್ಡ ನಷ್ಟ ಉಂಟು ಮಾಡಿತ್ತು‌.ಮೆಟ್ರಿಕ್ ಓದುವಕನಸಿಗೆ ತಣ್ಣೀರು ಪಟ್ಟಿ ಹಾಕಬೇಕಾಯಿತು.ಕುಟುಂಬದ ಹಿರಿಯರು ಆಣತಿಯಂತೆ ಮಂತ್ರ ಕಲಿಯಲು ಕುಂಭ ಕೋಣಂ ಗೆ ಹೋಗಬೇಕಾಯಿತು

ಅಲ್ಲಿ ಕೆಲ ವರ್ಷ ಮಂತ್ರ ಕಲಿತು ಬಂದು ಹೊಟ್ಟೆಪಾಡಿಗಾಗಿ ಕುಲ ವೃತ್ತಿ ಪೌರೋಹಿತ್ಯ ಮಾಡಬೇಕಾಯಿತು.


ಹಗಲು ರಾತ್ರಿ ಪೌರೋಹಿತ್ಯ ಮಾಡುತ್ತಲೇ ಅಕ್ಕ ತಂಗಿಯರನ್ನೆಲ್ಲ ಮದುವೆ ಮಾಡಿ ಸಂಸಾರಸ್ಥರನ್ನಾಗಿಸಿದರು.ದೊಡ್ಡ ಚಿಕ್ಕಪ್ಪ ಮತ್ತು ಕಾಶಿ ಚಿಕ್ಕಪ್ಪ ಇಬ್ಬರನ್ನೂ ಮಂತ್ರ ಕಲಿಯಲು ಹಾಕಿದ್ದೇಕೆ ಎಂದು ನನಗೆ ಗೊತ್ತಿಲ್ಲ.ದೊಡ್ಡ ಚಿಕ್ಕಪ್ಪನಿಗೆ ಶಾಲೆಯ ವಿದ್ಯೆ ಅಷ್ಟಾಗಿ ಹಿಡಿಸಿರಲಿಲ್ಲವಂತೆ ಹಾಗಾಗಿ ಮಂತ್ರ ಕಲಿಯಲು ಹಾಕಿದರು.ಸಣ್ಣ ಚಿಕ್ಕಪ್ಪ ( ನಂತರ ಕಾಶಿಯಲ್ಲಿ ಓದಿ ಪ್ರೊಫೆಸರರಾದ ಕಾರಣ ಇವರನ್ನು ಕಾಶಿ ಅಪ್ಪಚ್ಚಿ ಎಂದು ಕರೆಯುತ್ತೇವೆ) ತಮ್ಮಣ್ಣ / ರಾಮ ಕೃಷ್ಣ ಭಟ್ಟರಿಗೆ ಶಾಲೆಗೆ ಹೊಗಿ ಕಲಿಯಲು ಆಸಕ್ತಿ ಇತ್ತಂತೆ.ಆದರೂ ಇವರನ್ನೇಕೆ ಮಂತ್ರ ಕಲಿಯಲು ಹಾಕಿದರು? ಇಲ್ಲಿ ಬಹುಶಃ ನನ್ನ ತಂದೆ ದುಡಿಯುವ ವ್ಯಕ್ತಿ ಮಾತ್ರ ಆಗಿದ್ದರು.ಬಹಳ ಸಜ್ಜನರಾದ ನನ್ನ ತಂದೆಯವರಿಗೆ ಕುಟುಂಬದ ಹಿರಿಯರ ಮಾತನ್ನು‌ ಮೀರುವ ಧೈರ್ಯ ಇದ್ದಿರಲಾರದು.ನನ್ನ ಅಜ್ಜಿ ಗಟ್ಟಿಗಿತ್ತಿಯೇ...ಅವರೂ ಯಾಕೆ ಸಣ್ಣ ಮಗನ ಪರವಾಗಿ ಧ್ವನಿ ಎತ್ತಲಿಲ್ಲ? ಬಹುಶಃ ಆಗಿನ ಪರಿಸ್ಥಿತಿ ಹಾಗೆಯೇ ಇತ್ತು ಕಾಣಬೇಕು.ಆದರೆ ನಮ್ಮಲ್ಲಿ ಅಜ್ಜಿಯ ಮಾತೇ ಅಂತಿಮವಾಗಿತ್ತುಆದರೂ ಯಾಕೆ ಅಜ್ಜಿ ಮಗನ ಪರ ಮಾತಾಡಲಿಲ್ಲ.?


 ನನ್ನ ತಂದೆಯವರಿಗೆ ಈ ತಮ್ಮನಲ್ಲಿ ಬಹಳ ಪ್ರೀತಿ.ತಮ್ಮಣ್ಣ ಎಂದವರನ್ನು ಕರೆಯುತ್ತಿದ್ದರು.ತಮ್ಮಣ್ಣ ಎಂದರೆ ಆಸರಿಗೆ ಬೇಡ ಎಂಬಷ್ಟು ಪ್ರೀತಿ ಅಭಿಮಾನ ನನ್ನ ತಂದೆಯವರಿಗೆ ಇತ್ತು.ನನ್ನ ಅಣ್ಣ ಅಕ್ಕನಿಗೂ ಈ ಚಿಕ್ಕಪ್ಪ ಎಂದರೆ ಬಹಳ ಪ್ರೀತಿ.


ಈ ಸಣ್ಣ ಚಿಕ್ಕಪ್ಪನಿಗೆ ಸಣ್ಣಾಗಿರುವಾಗ ಕ್ರಾಣಿ‌ ಎಂಬ ಆರೋಗ್ಯ ಸಮಸ್ಯೆ ಇತ್ತಂತೆ.ಮನೆ ಮಂದಿಯ ಭಯಕ್ಕೆ ಶಾಲೆಗೆ ಹೋದವರು ನಡುವೆ ಜ್ವರದಿಂದ ಎಚ್ಚರ ತಪ್ಪಿ ತೋಡಿನ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದವರನ್ನು ಯಾರೋ ನೋಡಿ ಎತ್ತಿ ಮನೆಗೆ ತಂದು ಬಿಟ್ಟರಂತೆ..ಇವೆಲ್ಲ ನಾನು ಹಿರಿಯರು ಮಾತನಾಡುವಾಗ ಓಂಗಿಕೊಂಡು ಕೇಳಿಸಿಕೊಂಡ ವಿಚಾರಗಳು.ಹಿರಿಯರ ಮಾತಿಗೆ ಕಿವಿ ಕೊಟ್ಟರೆ ನಮಗೆ ಪೆಟ್ಟು ಬೈಗಳು ಸಿಗುತ್ತಿತ್ತು.ಆದರೂ ನಾವು ಮಕ್ಕಳು ಬಾಲ ಸಹಜ ಕುತೂಹಲದಿಂದ  ಅಲ್ಲಿ ಇಲ್ಲಿ ಓಂಗಿ‌ ಸ್ವಲ್ಪ ಸ್ವಲ್ಪ ಕೇಳಿಸಿಕೊಳ್ತಿದ್ದೆವು


ಮತ್ತೆ ಹಿಂದಿನ ಕಥೆಗೆ ಬರುವೆ‌.ನನ್ನ ತಂದೆಯವರು ಹದಿನಾರು ವರ್ಷಕ್ಕೆ ಅಜ್ಜನನ್ನು ಕಳೆದುಕೊಂಡು ಮಂತ್ರ ಕಲಿತು ದುಡಿಯಲು ಶುರು ಮಾಡಿದವರು ತನಗಾಗಿ ಒಂದು ಪೈಸೆಯನ್ನೂ ಎತ್ತಿಡಲಿಲ್ಲ.ಎಲ್ಲವನ್ನೂಕುಟುಂಬಕ್ಕೇ ಕೊಡುತ್ತಿದ್ದರು.


ಮನೆಯಲ್ಲಿ‌ ನಾವು ಐದು ಜನ ಮಕ್ಕಳು ದೊಡ್ಡ ಚಿಕ್ಕಪ್ಪನ ಮಗಳು ನನ್ನ ವಯಸ್ಸಿನ ಸಂಧ್ಯಾ ಬೆಳೆಯಲಾರಂಭಿಸಿದಂತೆ‌ 

ಮನೆಯಲ್ಲಿ ಭಿನ್ನಾಭಿಪ್ರಾಯಗಳು ವ್ಯಾಜ್ಯ ಗಲಾಟೆ ಶುರು ಆಯಿತು.ಎಲ್ಲರ ಮನೆ ದೋಸೆಯೂ ತೂತೇ ಅಲ್ವೇ? 


ಅಂತೂ ಇಂತೂ ತಂದೆಯವರಿಗೆ ನಲುವತ್ತನಾಲ್ಕು ವಯಸ್ಸಾದಾಗ ಆಸ್ತಿ ಪಾಲಾಯಿತು.

ನಾನು ಒಂದನೇ ತರಗತಿಗೆ ಸೇರಿದ ಸಮಯದಲ್ಲಿ ಹಿರಿಯ ಮನೆ ಪಾಲಾಯಿತು ,ತಂದೆಯವರಿಗೆ ಆಗ ನಲುವತ್ತನಾಲ್ಕು ವರ್ಷ ಪ್ರಾಯ .

ಸ್ವಲ್ಪ ತೋಟ ,ಸ್ವಲ್ಪ ಗದ್ದೆ ತಂದೆಯವರ ಪಾಲಿಗೆ ಬಂತು.ಮನೆ ಕಟ್ಟಲು ಪುಡಿಕಾಸು ಕೈಯಲ್ಲಿ ಇರಲಿಲ್ಲ..ಪೂರ್ತಿಯಾಗಿ ಸಾಲ ಮಾಡಿ ಮನೆ ಕಟ್ಟಬೇಕಾಯಿತು.ಆಗಿನ ಕಾಲಕ್ಕೆ ಬಡ್ಡಿಗೆ ಸಾಲ ಕೊಡುತ್ತಿದ್ದ ಸಾವ್ಕಾರರಾಗಿದ್ದ ಸೊಂದಿ ಗಣಪಣ್ಣ ಅವರ ಬಳಿ 19,000₹ ಸಾಲ ಪಡೆದರೆಂದು ಹಿರಿಯರು ಮಾತನಾಡುವಾಗ ಕೇಳಿದ ನೆನಪು ನನಗೆ‌ .ಆಗಿನ ಕಾಲಕ್ಕೆ ದೊಡ್ಡ ಮೊತ್ತವೇ ಇರಬೇಕು ಅದು.

ತಾಯಿಯವರು ನನ್ನ ಸಣ್ಣ ತಮ್ಮ ಗಣೇಶನ ಬಸುರಿ.ಹೆರಿಗೆ ಮತ್ತು ಬಾಣಂತನಕ್ಕಾಗಿ ನನ್ನ‌ಮತ್ತುನ ತಮ್ಮ ಈಶ್ವರನ ಜೊತೆಗೆ ಅಮ್ಮ ಅಜ್ಜನ‌ ಮನೆಗೆ ಬಂದಿದ್ದರು ಅಣ್ಣ ಮತ್ತು ಅಕ್ಕ ಶಾಲೆಗೆ ಕೊಡ್ಲೊ ಮೊಗರಿನ ಶಾಲೆಗೆ ಹೋಗುತ್ತಿದ್ದ ಕಾರಣ ಹೋಗುತ್ತಿದ್ದ ಕಾರಣ ನನ್ನ‌ ದೊಡ್ಡಮ್ಮನ ಮನೆ ಕತ್ತೆರಿ ಮೂಲೆಯಿಂದ ಶಾಲೆಗೆ ಹೋಗುತ್ತಿದ್ದರು.

ಈ ಸಮಯದಲ್ಲಿಯೇ ಉಕ್ಕಿ ಹರಿಯುವ ತೋಡಿನ ನೀರಿಗೆ ಬಿದ್ದು ಬೆಳ್ಳಕ್ಕೆ ಹೋಗಿ‌ ಪವಾಡ ಸದೃಶವಾಗ ಬದುಕುಳಿದದ್ದು ನಾನು 

ಅಂತೂ ತಮ್ಮ‌ಪಾಲಿಗೆ ಬಂದಿದ್ದ ಅಂಗೈ ಅಗಲದ ಗುಡ್ಡವನ್ನು ಕಡಿದು ಮಣ್ಣಿನ ಮನೆ ಕಟ್ಟಿದರು.ಸಾರಣೆ ಇಲ್ಲದ ಮಣ್ಣಿನ‌‌ಮನೆಯಲ್ಲಿ ಎಲ್ಲೆಡೆ ನೀರು ಒಸರುತ್ತಿತ್ತು.ಆದರೂ ನಮಗೆ ಹೊಸ ಮನೆಗೆ ಬಂದ ಸಂಭ್ರಮ ,ಹೊಸ ಮನೆ ಒಕ್ಕಲಾಗುವಾಗ ಸಣ್ಣ ತಮ್ಮ ಗಣೇಶ ಎರಡು ತಿಂಗಳ ಮಗು.ನಾವು ಕೊಂಡಾಟದಿಂದ ಗಂಚ ಎಂದು ಕರೆಯುತ್ತಿದ್ದೆವು.

ಮನೆ ಏನೋ ಆಯಿತು‌ ಮನೆಗಾಗಿ‌ ಮಾಡಿದ ಸಾಲವನ್ನು ಹಿಂದೆ ಕೊಡಬೇಕಲ್ಲ..ಗಾಣದೆತ್ತಿನಂತೆ ಹಗಲು ರಾತ್ರಿ ತಂದೆ ತಾಯಿ ದುಡಿದು ಪೈಸೆಗೆ ಪೈಸೆ ಕೂಡಿಸಿ ತಾಯಿ ತನಗಾಗಿ ಒಂದು ಸೀರೆಯನ್ನಾಗಲೀತಂದೆಯವರು ತಮಗಾಗಿ  ಅಂಗಿಯನ್ನಾಗಲೀ ತೆಗೆಯದೆ ತಮಗಾಗಿ ಏನೊಂದೂ ಖರ್ಚು ಮಾಡದೆ ಸಾಲ ಬೂಟಿದರು.

ನಮಗೂ ಲಂಗಕ್ಕೆ ಹೊರಗಿನಿಂದ ಬಟ್ಟೆ ತರುತ್ತಿರಲಿಲ್ಲ.ತಂದೆ ಪುರೋಹಿತರಾದ ಕಾರಣ ಮುಂಡು ಎಂಬ ಬಿಳಿ ಬಟ್ಟೆ ದಕ್ಷಿಣೆಯಾಗಿ ಸಿಗುತ್ತಿತ್ತು.ಆಗ ಬಣ್ಣದ ಪುಡಿಗಳು ಸಿಗುತ್ತಿದ್ದವು.ಈಗಲೂ ಸಿಗಬಹುದೋ ಏನೋ..ಹಸಿರು ನೀಲಿ ಕೆಂಪು ಕಾಪಿ ಪುಡಿ ರಂಗಿನ ಪುಡಿಯನ್ನು ತಂದು ಪ್ರತ್ಯ ಪ್ರತ್ಯೇಕವಾಗಿ ಪಾತ್ರೆಯ ನೀರಿಗೆ ಹಾಕಿ ಕುದಿಸಿ ಅದರಲ್ಲಿ ಬಿಳಿ ಮುಂಡನ್ನು ಮುಳುಗಿಸಿ ತೆಗೆದು ಒಣಗಿಸುತ್ತಿದ್ದರು.ಹೀಗೆ ತಯಾರಾದ ಮೂರು‌ನಾಕು ಬಗೆಯ ಬಣ್ಣದ ಬಟ್ಟೆಯಲ್ಲಿಯಲ್ಲಿ ನನಗೆ ಅಕ್ಕನಿಗೆ  ಲಂಗ ರವಿಕೆ ಅಣ್ಣ ತಮ್ಮಂದಿರಿಗೆ ಅಂಗಿ ಚಡ್ಡಿ ಹೊಲಿಸುತ್ತಿದ್ದರು.ಅಮ್ಮನ ಅಕ್ಕ ದೊಡ್ಡಮ್ಮನ ಮಕ್ಕಳಿಗೂ ಇದರದ್ದೇ ಬಟ್ಟೆ ಬರೆ.ಅವರ ಪರಿಸ್ಥಿತಿಯೂ ನಮಗಿಂತ ಭಿನ್ನವಾಗಿ ಏನೂ ಇರಲಿಲ್ಲ.

ಬಹುಶಃ ಅಕ್ಕ ಇದೇ ಲಂಗ ರವಿಕೆ ತೊಟ್ಟೇ ಬೆಳೆದಳು.ಅಂಗಡಿಯಿಂದ  ತಂದ ಬಣ್ಣ ಬಣ್ಣದ ಹೂವು ಬಳ್ಳಿಗಳ ಚಿತ್ತಾರದ ಬಟ್ಟೆಯ ಲಂಗ ರವಿಕೆಯನ್ನು ಅವಳು ತೊಟ್ಟೇ ಇಲ್ಲ ಎಂದು ನೆನಪು.ನನಗೆ ನಾಲ್ಕನೆಯ ತರಗತಿಯಲ್ಲಿದ್ದಾಗ ಕೋಳ್ಯೂರಾಯನಕ್ಕೆ ಒಂದು ಬಣ್ಣ ಬಣ್ಣದ ಹೂವಿನ ಚಿತ್ತಾರದ ಬಟ್ಟೆ ತಂದು ಸ್ಕರ್ಟ್ ಹೊಲಿಸಿದ್ದು ನೆನಪಿದೆ

ನಂತರ ಐದನೆಯ ತರಗತಿಗೆ ಮತ್ತೆ ನಾನು ಅಜ್ಜನ‌ಮನೆ ಸೇರಿ ಮೀಯಪದವಿನ ವಿದ್ಯಾವರ್ಧಕ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿದೆ

ಅಜ್ಜ ಒಂದೆರಡು ಹಸಿರು ಕೆಂಪು ಗುಲಾಬಿ‌ ಬಣ್ಣ ಬಣ್ಣದ ಡಿಸೈನಿನ ಬಟ್ಟೆ ಯನ್ನು ದಿನಕರಣ್ಣನ ಅಂಗಡಿಯಿಂದ ತೆಗೆದು ಅಲ್ಲಿಯೇ ನನಗೆ ಹೊಲಿಸಿಕೊಟ್ಟಿದ್ದರು.

ಈ ಮೀಯಪದವಿನ ವಿದ್ಯಾವರ್ಧಕ ಶಾಲೆ ನನ್ನ ಬದುಕಿಗೆ ಬಣ್ಣವನ್ನು ತುಂಬುವ ಕೆಲಸ ಮಾಡಿತ್ತು.ಎಲ್ಲೋ ಒಂದು ಮೂಲೆಯಲ್ಲಿ ನನ್ನಷ್ಟಕ್ಕೆ ಇದ್ದ ಕಲಿಯುವುದರಲ್ಲಿಯೂ ಅಷ್ಟಕಷ್ಟೇ ಇದ್ದ ನನ್ನನ್ನು ಗುರುತಿಸಿ ಮುಂದೆ ತಂದವರು ಇಲ್ಲಿನ ಶಿಕ್ಷಕರು.ಈ ಶಾಲೆಯಲ್ಲಿ‌ ಬಹಳ‌ ಕ್ರಿಯಾಶೀಲ‌ ಶಿ‌ಕ್ಷಕರಿದ್ದರು.ಮಕ್ಕಳನ್ನು ಬಾಲಕಲೋತ್ಸವಕ್ಕೆ ತಯಾರು ಮಾಡಿ ಬಹುಮಾನವನ್ನು ಬಾಚಿಕೊಂಡು ಬರುತ್ತಿದ್ದರು‌ಅಂತೆಯೇ ಆಟೋಟ ಸ್ಪರ್ಧೆಗಳಲ್ಲೂ ಮುಂಚೂಣಿಯಲ್ಲಿತ್ತು.

ಈ ಶಾಲೆಯಲ್ಲಿ ನಾನು ತರಗತಿಯ ಒಳಗೆ ಇದ್ದದ್ದಕ್ಕಿಂತ ಹೆಚ್ಚು ಹೊರಗೆ ಗ್ರೌಂಡಿನಲ್ಲಿ ಇದ್ದದ್ದೇ ಹೆಚ್ಚು.

ಸದಾ ಡ್ಯಾನ್ಸ್ ನಾಟಕ ಸ್ಪೋರ್ಟ್ಸ್..ಇದರ ತರಬೇತಿ ಸ್ಪರ್ಧೆಗೆ ಹೋಗುದು ಬಹುಮಾನ ತರುದು..ಹೆಚ್ಚು ಪಾಯಿಂಟ್ಸ್ ಯಾರಿಗೆ ಮೀಯ ಪದವು ಶಾಲೆಗೆ ಹೆಚ್ಚು ಶೀಲ್ಡ್ ಯಾರಿಗೆ ಮೀಯಪದವು ಶಾಲೆಗೆ ಎಂದು ಊರಿಡೀ ಪ್ರಶಸ್ತಿ ಫಲಕಗಳನ್ನು ಹಿಡಿದುಕೊಂಡು ಮೆರವಣಿಗೆ ಮಾಡುತ್ತಿದ್ದುದರಪಥ ಸಂಚಲನದ ವೈಭವದ ಹೆಮ್ಮೆಯ ನೆನಪು ಈಗಲೂ ರೋಮಾಂಚನ ಉಂಟು ಮಾಡುತ್ತದೆ.

ಜೊತೆಗೆ ಡ್ಯಾನ್ಸ್ ನಾಟಕ ಪ್ರಾಕ್ಟೀಸ್ ಮುಗಿಸಿ ತರಗತಿಗೆ ಹೋದಾಗ ಶಂಕರ ಶೆಟ್ಟಿ ಮಾಸ್ಟ್ರು ಈಗ್ಯಾಕೆ ಬಂದದ್ದು? ಕ್ಲಾಸು ನೆನಪಾಯ್ತಾ? ಇನ್ನೇನೂ ತಿರುಗಲಿಕ್ಕೆ ಇಲ್ವ ಎಂದು ಬೈದಾಗ ನಾನು ಮತ್ತು  ಮಾಲಿನಿ‌ ಮುಖ ಮುಖ ನೋಡಿಕೊಂಡು ಬೆಪ್ಪಾಗಿ ನಿಂತದ್ದು ನನಗೆ ಈಗಲೂ ನೆನಪಿದೆ 

ಶಾಲಾ ಕಾಲೇಜುಗಳಲ್ಲಿ‌‌ ಇಂಥಹ‌ ಒಂದು ಸಣ್ಣ ಕಾಗೆ ಜಗಳ‌ ವಿವಾದ ಅಂದಿನಿಂದ ಇಂದಿನವರೆಗೂ ಇದೆ ಮುಂದೆಯೂ ಇರುತ್ತದೆ.

ಯಾವುದೇ ಶಾಲಾ ಕಾಲೇಜಿನಲ್ಲಿ ಒಬ್ಬಿಬ್ಬರು ನಾಟಕ ಡ್ಯಾನ್ಸ್ ಭಾಷಣ ಮೊದಲಸದ್ದರಲ್ಲಿ ನಿಷ್ಣಾತ ಉಪನ್ಯಾಸಕರಿರುತ್ತಾರೆ.ಇವರು ವಿದ್ಯಾರ್ಥಿಗಳಿಗೆ ಈ ಬಗ್ಗೆ ತರಬೇತಿ ನೀಡಲು ತಮ್ಮ‌  ಬಿಡುವಿನ‌ ಸಮಯದಲ್ಲಿ‌ಕೆಲವು‌ವಿದ್ಯಾರ್ಥಿಗಳನ್ನು  ಕರೆಯುತ್ತಾರೆ.ಆಗ ಇತರರು ಕಳುಹಿಸದೆ ತಕರಾರು ಮಾಡುದು ಇರ್ತದೆ‌.ಶಾಲೆಯ ಸಮಯದ ನಂತರ ಮಾಡಿ ಎನ್ನುದು..ಶಾಲಾ ಸಮಯದ ನಂತರ ಈ ಮಕ್ಕಳು ನಿಲ್ಲಬೇಕಲ್ಲ..

ನಾವು ಸಣ್ಣಗಿದ್ದಾಗ ಈ ದೊಡ್ಡವರ ಸಂಗತಿ ನಮಗೆ ಗೊತ್ತಾಗದೆ ಪೆಚ್ಚಾಗುತ್ತಿದ್ದೆವು.ದೊಡ್ಡವರಾಗಿ ಶಿಕ್ಷಕರಾದಾಗ ಇವನ್ನೆಲ್ಲ ಹೊಂದಾಣಿಕೆ ಮಾಡಿಕೊಂಡು ಬದುಕಲು ಕಲಿತೆ ನಾನು‌.

ನಮ್ಮ‌ ಮೀಯಪದವು ಶಾಲೆಯಲ್ಲಿ ಪ್ರತಿಯೊಂದು ಕೆಲಸವನ್ನು ಬಹಳ ಶ್ರದ್ಧೆಯಿಂದ ಅಚ್ಚುಕಟ್ಟಾಗಿ‌ ಮಾಡುತ್ತಿದ್ದರು.ಅದರಲ್ಲಿ ಬಹಳ ನೆನಪಿಡುವಂತಹದ್ದು‌ ಶಾಲೆಯ ಅಸೆಂಬ್ಲಿ.

ಅಸೆಂಬ್ಲಿಗೆ ಶಾಲಾನಾಯಕ/ಕಿ ನಡುವೆ ಧ್ವಜಸ್ಥಂಭದ ಬಳಿ‌ ನಿಲ್ತಾರೆ

ಅವರ ಎಡಬದಿನಗೆ ನಾಲ್ಕು ಐದು ಸಾಲು ಹುಡುಗರು.ಬಲಬದಿಗೆ ನಾಲ್ಕು ಸಾಲು ಹುಡುಗಿಯರು

ಪ್ರತಿ ಸಾಲನ್ನು ಒಂದು ತಂಡವಾಗಿ ಪರಿಗಣಿಸುತ್ತಿದ್ದರು ಪ್ರತಿ ತಂಡಕ್ಕೆ ಓರ್ವ ಸ್ವಾಂತಂತ್ರ್ಯ ಹೋರಾಟಗಾರರ ಹೆಸರು ಇರುತ್ತಿತ್ತು‌ಉದಾಹರಣೆಗೆ ಸುಭಾಷ್  ಚಂದ್ರ ಭೋಸ್ ಬಾಲಗಂಗಾಧರ ತಿಲಕ್ ,ಹುಡುಗಿಯರ ತಂಡಕ್ಕೆ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ,ಕಿತ್ತೂರ ರಾಣಿ ಚೆನ್ನಮ್ಮ‌,ಉಳ್ಳಾಲ ರಾಣಿ ಅಬ್ಬಕ್ಕ ಇತ್ಯಾದಿ.

ಸಾಮಾನ್ಯವಾಗಿ ಕಲಿಕೆಯಲ್ಲಿ‌ಮುಂದೆ ಇರುವವರು ಈ ತಂಡಗಳ ನಾಯಕರಾಗಿರುತ್ತಿದ್ದರು.ಅಸೆಂಬ್ಲಿ‌‌ಆಗುವಾಗ ಬಾಲ ಗಂಗಾಧರ ತಿಲಕ್ ಎಂದು ಒಂದು ಹೆಜ್ಜೆ ಮುಂದೆ ಹೋಗಿ ಅಟೆಂನ್ಷನ್ ಎಂದು ಹೇಳಿ ಸೆಲುಟ್ ಎಂದು ಸೆಲುಟ್ ಹೊಡೆದು ಸ್ಡ್ಟಾಂಡ್ ಇಟಗ ಈಸ್  ಎಂದು ಮತ್ತೆ ಸ್ವಸ್ಥಾನಕ್ಕೆ ತಂಡದ ನಾಯಕ ಬರುವ ಕ್ರಮ ಇತ್ತು

ಇದೊಂದು ತಂಡದ ನಾಯಕನಿಗೆ ಬಹಳ ಗೌರವ ಹೆಮ್ಮೆಯ ವಿಚಾರ ಆಗಿತ್ತು 

ನಾನು ಹುಡುಗಿಯರ ಮೊದಲ ತಂಡದ ನಾಯಕಿ ಆಗಿದ್ದೆ.ಈ ತಂಡದ ಹೆಸರು ಝಾಂಸಿರಾಣಿ ಲಕ್ಷ್ಮೀ .

ಝಾಂಸಿರಾಣಿ ಲಕ್ಷ್ಮೀಬಾಯಯಿಯ ಕಥೆಯನ್ನು ನಾನು ಯಾರಿಂದ ಕೇಳಿದ್ದೆ ಎಂದು ನನಗೆ ನೆನಪಿಲ್ಕ‌ನನಗೆ ಚಂದಮಾಮ ಬಾಲಮಿತ್ರ ಓದುವ ಹವ್ಯಸ ಇತ್ತು‌ಬಹುಶಃ ಅಜ್ಜ ಇವನ್ನು ನಮಗೆ ತಂದು ಕೊಡುತ್ತಿದ್ದರು.ಅಥವಾ ಕೋಳ್ಯೂರು ಗ್ರಂಥಾಲಯದಿಂದ ತಂದು ಓದುತ್ತಿದ್ದೆವು.ಅದರಲ್ಲಿ ಝಾಂಸಿರಾಣಿಯ ಕೆಚ್ಚೆದೆಯ ಸಾಹವನ್ನು ಓದಿ ತಿಳಿದಿದ್ದೆ.ಭಾರತವನ್ನು ಬ್ರಿಟಿಷರ ಕಪಿಮುಷ್ಠಿತಿಂದ ಬಿಡಿಸಿ ಸ್ವತಂತ್ರವಾಗಿಸಲು ಝಾಂಸಿರಾಣಿ‌ ಎಲ್ಲ ವೀರರನ್ನು ಕಲೆಹಾಕಿ ಹುರಿದುಂಬಿಸಿದ್ದಳು.ದತ್ತು ಪುತ್ರನಿಗೆ ರಾಜ್ಯದ ಹಕ್ಕಲ್ಲ ಎಂಬ ಡಾಲ್ ಹೌಸಿಯ ನಿರ್ಬಂಧವನ್ನು ಮೀರಿ ಕೇವಲ ತನ್ನ ರಾಜ್ಯ ಝಾಂಸಿಯ ಉಳಿವಿಗಾಗಿ ಮಾತ್ರವಲ್ಲದೆ ಇಡೀ ದೇಶವನ್ನು ಸ್ವತಂತ್ರಗೊಳಿಸಬೇಕೆಂಮ ಕನಸನ್ನು ಬಿತ್ತಿದ ವೀರ ಮಹಿಳೆ ಅವಳು.ಎಂಟು ವರ್ಷದ ಮಗನನ್ನು ಬೆನ್ನಿಗೆ ಕಟ್ಟಿಕೊಂಡೇ ಕತ್ತಿ ಹಿರಿದು ಬ್ರಿಟಿಷರೊಡದೆ ಹೋರಾಡಿದ ಧೀರೆ ಅವಳು

ಇನ್ನೇನು ಬ್ರಿಟಿಷರ ಕೈ ಮೇಲಾಗುತ್ತದೆ ಎಂದರಿವಾದಾಗ ಶತ್ರುಗಳಿಗೆ ಶರಣಾಗಲಾರೆ ಎಂದು ಕಠಾರಿಯಿಂದ ತನ್ನ ಎದೆಗೆ ಇರಿದುಕೊಂಡು ತನ್ನ ಸ್ವತಂತ್ರ ನೆಲದಲ್ಲಿಯೇ ಪ್ರಾಣತ್ಯಾಗ ಮಾಡಿದ ಸಾಹಸಿ ಅವಳು

.ಈ ಕಥೆ ಚಿಕ್ಕಂದಿನಲ್ಲಿಯೇ ನನ್ನ‌ಮನಸಿಗೆ ಬಹಳಷ್ಟಿ ನಾಟಿತ್ತು.ನಾನೂ ಝಾನ್ಸಿರಾಣಿಯಂತೆ ಆಗಬೇಕು ಎಂದುಕೊಂಡಿದ್ದೆ.

ಐದನೆಯ ತರಗತಿಯಲ್ಲಿರುವಾಗಲೇ ಏಳನೆಯ ತರಗತಿಯ ಜಾಣ ವಿದ್ಯಾರ್ಥಿನಿಯರು ಈ ಝಾನ್ಸಿರಾಣಿ ಲಕ್ಷ್ಮೀ ಬಾಯಿ ತಂಡದ ನಾಯಕಿಯರಾಗಿದ್ದುದನ್ನು ಗಮನಿಸಿದ್ದೆ.ಝಾನ್ಸಿ ರಾಣಿ ತಂಡದ ನಾಯಕಿಯಾಗಬೇಕಿದ್ದರೆ ತರಗತಿಯಲ್ಲಿ ಮೊದಲ ಸ್ಥಾನ ಗಳಿಸಬೇಕೆಂದು ನನಗೆ ಗೊತ್ತಾಗಿತ್ತು.

ಅಲ್ಲಿಂದ ನಾನು ಪ್ರಥಮ ಸ್ಥಾನ ಗಳಿಸುವುದಕ್ಕಾಗಿ ಓದಲು ಶುರು ಮಾಡಿದೆ.

ಏಳನೆಯ ತರಗತಿಗೆ ಬಂದಾಗ ಕಲಿಕರಯಲ್ಲಿ ಕೋಡಿಯಡ್ಕ ಮಾಸ್ಟ್ರ ಮಗಳು ಶೈಲಜಾ ನನಗೆ ಪ್ರತಿಸ್ಪರ್ಧಿಯಾಗಿದ್ದಳು.ನನಗಿಂತ ಒಂದೆರಡು ಅಂಕ ಅವಳಿಗೆ ಹೆಚ್ಚಿರುತ್ತಿತ್ತು.ಎಷ್ಟಾದರೂ‌ಮಾಸ್ಟ್ರ ಮಗಳಲ್ವಾ? ಮಾಸ್ಟ್ರಿಗೆ ಹೇಳಿ ಕೊಡಲು ಬರುತ್ತದೆ ಮಗಳನ್ನು ಪರೀಕ್ಷೆಗೆ ತಯಾರು ಮಾಡಿ ಕಳುಹಿಸ್ತಾರೆ.ಹೇಗೆ ಪ್ರಶ್ನೆಗಳುಬರುತ್ತವೆ ಹೇಗೆ ಉತ್ತರಿಸವೇಕೆಂಬ ತರಬೇತಿ ಕೊಟ್ಟಿರ್ತಾರೆ

ಮನೆಯಲ್ಲಿ ಹೇಳಿಕೊಡುವವರಿಲ್ಲ‌ದ ನಾನು ನಾನೇ ಓದಿ ತಯಾರಾಗಬೇಕಿತ್ತು.  

ಅಥವಾ ಶೈಲಜಾ ನನಗಿಂತ ಜಾಣೆ ಇದ್ದಿರಬಹುದು‌ ಒಟ್ಟಿನಲ್ಲಿ ಶೈಲಜಾಳಿಗೆ ನನಗಿಂತ ಒಂದೆರಡು ಅಂಕ ಹೆಚ್ಚು ಬರ್ತಿತ್ತು 

 ಹಾಗಾಗಿ ನನ್ನ ಕನಸಿನ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ತಂಡದ ನಾಯಕಿ ಆಗುವುದು ಸುಲಭವಿರಲಿಲ್ಲ

ಆದರೆ ನನ್ನ ಅದೃಷ್ಟಕ್ಕೆ ಅವಳು ಶಾಲಾ ನಾಯಕ ಸ್ಥಾನದ ಚುನಾವಣೆಗೆ ನಿಂತು ಗೆದ್ದು ಶಾಲಾ ನಾಯಕಿಯಾಗಿ ಅಸೆಂಬ್ಲಿಯಾಗುವಾಗ ಧ್ವಜಸ್ಥಂಭದ ಬಳಿ ನಿಂತಳು‌

ನನಗೆ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ತಂಡದ ನಾಯಕಿಯಾಗುವ ಅವಕಾಶ ಸಿಕ್ಕಿತ್ತು.ಅಂದು ಎದೆಯುಬ್ಬಿಸಿ‌  ಝಾನ್ಸಿರಾಣಿ  ಲಕ್ಷ್ಮೀ ಬಾಯಿಯ ಹೆಸರಿನಲ್ಲಿ‌ ಸೆಲ್ಯೂಟ್ ಹೊಡೆಯುತ್ತಿದ್ದಾಗ ಉಂಟಾಗುತ್ತಿದ್ದ ರೋಮಾಂಚನ ಇಂದಿಗೂ ನೆನಪಾದಾಗ ಆಗುತ್ತದೆ ನನಗೆ‌

ಝಾನ್ಸಿ ರಾಣಿಯಂತೆ ವೀರ ಸೇನಾನಿಯಾಗಲು ನನಗೆ ಸಾಧ್ಯವಾಗಿಲ್ಲ.ಮಿಲಿಟರಿಗೆ ಸೇರುದು ಹೇಗೆಂದೇ ಗೊತ್ತಿಲ್ಲದ ಕಾಲದಲ್ಲಿ ನಾನು ಕಾಲೇಜು ಓದಿದ್ದೇ ದೊಡ್ಡ ಸಾಧನೆ.

ಕೂಸು ಎಂತ ಓದಿದರೆಂತ ಒಲೆ ಬೂದಿ ಒಕ್ಕುದು ತಪ್ಪ( ಹುಡುಗಿ‌ ಏನು‌ ಓದಿದರೇನು‌ ಒಲೆಯ ಬೂದಿ ಗೋರುವುದು ತಪ್ಪದು)ಎಂಬ ಮಾತು ಪ್ರಚಲಿತವಿದ್ದ ಕಾಲದಲ್ಲಿ ಹುಟ್ಟಿ ಬೆಳೆದ ನಾನೀಗ ಉಪನ್ಯಾಸಕಿಯಾಗಿದ್ದೇನೆ ಕೆಲವು ಪುಸ್ತಕ ಲೇಖನ ಬರೆದು ಲೇಖಕಿ ಎಂದೆನಿಸಿಕೊಂಡಿದ್ದೇನೆ ಎಂಬುದೇ ಒಂದು ಸೋಜಿಗದ ವಿಚಾರ....ಇದು ನಿಜವೋ ಭ್ರಮೆಯೋ‌ಎಂದು ಚಿವುಟಿ ನೋಡಿಕೊಳ್ಳುವ ಹಾಗೆ ಆಗುತ್ತದೆ ಕೆಲವೊಮ್ಮೆ..ಆದರೆ ಈ ಹಂತ ಮುಟ್ಟಲು‌ನಡೆದ ದಾರಿ ಹುಲ್ಲು‌‌ ಹಾಸಿನದಾಗಿರಲಿಲ್ಲ..ಹಿಡಿಯಷ್ಟು ಪಡೆಯಲು‌ ಮುಡಿಯಷ್ಟು‌ ಕಳೆದುಕೊಂಡೆನೋ ಏನೋ‌ಎಂದು‌ ಕೆಲವೊಮ್ಮೆ ಅನಿಸಿದ್ದಿದೆ..ಆದರೆ ಹಿಂದೆ ಮತ್ತೆ ನಡೆಯಲಾಗದು..ಮುಂದೆ ನಡೆಯುವುದೊಂದೇ ಇರುವ ದಾರಿ...ಅಂತಿಮ ಗುರಿ ಯಾವುದು ? ನನಗೂ ಗೊತ್ತಿಲ್ಲ‌..

ತೇ ನ ವಿನಾ ತೃಣಮಪಿ ನ ಚಲತಿ..

ಎಲ್ಲವೂ ಭಗವಂತನ ಆಣತಿಯಂತೆಯೇ ನಡೆಯುತ್ತದೆ.ಅವನ ಆಣತಿಯ ಹೊರತಾಗಿ ಹುಲು ಕಡ್ಡಿ ಕೂಡ ಅಲುಗಾಡುವುದಿಲ್ಲ..ಮತ್ತೆ ನಮ್ಮದೇನಿದೆ ಮಹಾ.

ನಾನು ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಆಗದಿದ್ದರೂ ಡಾ.ಕೆ ಎನ್ ಗಣೇಶಯ್ಯರ ಪ್ರಸಿದ್ದ ಕಾದಂಬರಿ ಬಳ್ಳಿ ಕಾಳ ಬೆಳ್ಳಿಯ ಜೀವಂತ ಪ್ರಮುಖ ಪಾತ್ರ ಡಾ.ಲಕ್ಷ್ಮೀ ಪೋದ್ದಾರ್ ಆಗಿರುವೆ.ಇಲ್ಲೂ ನಾನು ತುಳು ಸಂಶೋಧಕಿಯಾಗಿಯೇ ಕಾಣಿಸಿಕೊಂಡಿರುವೆ.

ಈ ಕಾದಂಬರಿಯ ಬಿಡುಗಡೆಗೆ ಬಂದಿದ್ದ ಈಗಿನ ಬ್ರಿಟನ್ ಪ್ರಧಾನಿಯ ಅತ್ತೆ ಇನ್ಫೋಸಿಸ್ ನ ಸುಧಾ ಮೂರ್ತಿಯವರ ಜೊತೆ ಕುಳಿತಿದ್ದಾಗ ಒಂದು ಸೆಲ್ಫಿ‌ತಗೊಂಡಿದ್ದು‌ಅದನ್ನಿಲ್ಲಿ‌ ಹಾಕಿದ್ದೇನೆ..

ಡಾ.ಲಕ್ಷ್ಮೀ‌ ಜಿ‌ ಪ್ರಸಾದ್

Friday, 6 March 2026

Daiva book daiva research book The thousand and one daivas of Karavali


 ಗುಜರಾತ್ ನ ಅಧ್ಯಯನ ಗಾರರ ತಂಡದ   ಭಕ್ತಿ ಪರಿಖ್ ಅವರು ಪ್ರಾಜೆಕ್ಟ್ ಗಾಗಿ 

ಭೂತಾರಾದನೆ ಬಗ್ಗೆ  ಸಂದರ್ಶನ ಮಾಡಲು ಬರುತ್ತಿದ್ದು ಈ ಬಗ್ಗೆ ಪೂರ್ವ ಮಾಹಿತಿಗಾಗಿ  ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ 

ನ ಇಂಗ್ಲಿಷ್ ಆವೃತ್ತಿ ಯನ್ನು ವಾರದ ಮೊದಲೇ ತಗೊಂಡು ಓದಿ ತಯಾರಾಗಿಧ್ದಾರೆ ..

The Thousand and One Daivas of Karavali-Dr Lakshmi G Prasad,mob 9480516684 

Translated by Ashwini Bhat

Monday, 2 March 2026

Daiva book ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ : ನಮ್ಮ ಹೆಮ್ಮೆಯ ಓದುಗರು- ರಮೇಶ್ ಶೆಟ್ಟಿಗಾರ್ ಮಂಜೇಶ್ವರ

 

ಇಂತಹ ಅಪೂರ್ವವಾದ ಕೃತಿಯನ್ನು ಕೈಗೆತ್ತಿಕೊಂಡಾಗ ಏನೋ ಖುಷಿ!

ನಮ್ಮೂರಿನ ಹೆಮ್ಮೆಯ ಸಾಹಿತಿಯವರಾದ ಲಕ್ಷ್ಮೀಪ್ರಸಾದ್‌ ಮೇಡಂ ಅವರ ಮಹತ್ವಾಕಾಂಕ್ಷೆಯ ಕೃತಿ! 

ಧನ್ಯವಾದಗಳು

ರಮೇಶ್ ಶೆಟ್ಟಿಗಾರ್ ಮಂಜೇಶ್ವರ


ನಮ್ಮ ಊರಿನ ಪ್ರಸಿದ್ದ ಕಾದಂಬರಿಗಾರರಾದ ನನ್ನ ಅಣ್ಣನ ಬಾಲ್ಯದ ಸ್ನೇಹಿತರಾದ ರಮೇಶ್ ಶೆಟ್ಟಿಗಾರ್ ಮಂಜೇಶ್ವರ Ramesh Shettigar Manjeshwar ಅವರ ಮುಕ್ತ ಮನಸಿನ ಮೆಚ್ಚುಗೆಗೆ ಆಭಾರಿಯಾಗಿದ್ದೇನೆ ಧನ್ಯವಾದಗಳು ಸರ್ 🙏

ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ 

The Thousand and One Daivas of Karavali-Dr Lakshmi G Prasad,mob 9480516684 

Translated by Ashwini Bhat

Sunday, 22 February 2026

ಬಾಗಿಲು ಬೊಬ್ಬರ್ಯ - ಕರಾವಳಿಯ ಸಾವಿರದೊಂದು ದೈವಗಳು


 ಬಾಗಿಲು ಬಬ್ಬರ್ಯ..


ಉಡುಪಿ ಕುಂದಾಪುರ ಕಡೆ ಬಾಗಿಲು ಬಬ್ಬರ್ಯ ಎಂಬ ದೈವವಿದೆ.ಈತ ದೈವಸ್ಥಾನವನ್ನು ಕಾಯುವ ಕೆಲಸವನ್ನು ಮಾಡುವ ದೈವ

ಇಲ್ಲಿ ಈ ದೈವದ ವೇಷ ಭೂಷಣ ವಿಶಿಷ್ಟವಾಗಿವೆ 

ಮುಸ್ಲಿಮರು ಧರಿಸುವ ಟೊಪ್ಪಿ ಗಡ್ಡ ಇದ್ದು ಮೂಲತಹ ಮುಸ್ಲಿಂ ಮೂಲದ ವ್ಯಕ್ತಿ ಎಂಬುದನ್ನು ಇದು ದ್ಯೋತಿಸುತ್ತದೆ  


ಇದು ನಮ್ಮ‌ಕಡೆ ರೆಂಕೆ ಅಣಿ ಕಟ್ಟಿ ಆರಾಧನೆ ಆಗುವ ಬಬ್ಬರ್ಯನಿಗೂ ಮುಸ್ಲಿಂ ಮೂಲದ ಕಥಾನಕವಿದೆ

 

ಈ ದೈವಗಳನ್ನು ಆರಾಧನೆ ಮಾಡುದು ಹಿಂದುಗಳೇ. 


ಈತ ಮಾದವ ಸುಲಿಕಲ್ಲಬ್ಯಾರಿಯ ಮಗ‌,ಜೈನ ಮಡಸ್ತಾನದ ಹುಡುಗಿಯನ್ನು ಮದುವೆ ಅಗುತ್ತಾನೆ.ರಾತ್ರಿ ಅಕೆಯ ಮೂಗಿನಿಂದ ಹೊರಬರುವ ಸರ್ಪಗಳನ್ನು ಕೊಲ್ಲುತ್ತಾನೆ.


ತಮ್ಮ ತಂಗಿಯನ್ನು ಮದುವೆಯಾದ ಕಾರಣಕ್ಕಾಗಿ ಇವನಿಗೆ ಸ್ಥಳೀಯ ಜೈನ ಮಡಸ್ಥಾನದವರ ವ್ಯಾಪ್ತಿಯಲ್ಲಿದ್ದ ಪ್ರದೇಶದ  ಆಳ್ತನ ಸಿಕ್ಕಿರುವ ಸಾಧ್ಯತೆ ಇದೆ 

ಈತ ನಂತರ ಜೈನನಾಗಿಯೇ ಬದುಕಿರಬೇಕು ಯಾಕೆಂದರೆ ಬಬ್ಬರ್ಯ ನಿಗೆ ಸಪ್ಪೆ ಕಡುಬಿನ ಸಸ್ಯಾಹಾರ ನೀಡುತ್ತಾರೆ 

ನಂತರ ಕಡಲಿಗೆ ವ್ಯಾಪಾರಕ್ಕೆ ಹೋಗಿ ದುರಂತವನ್ನಪ್ಪಿ ದೈವತ್ವ ಪಡೆಯುತ್ತಾನೆ


ಈತನೆಲ್ಲೂ ಕಾಯುವ ಕಾಯಕವನ್ನು ಮಾಡುದಿಲ್ಲ.ಮತ್ತು ಈ ದೈವದ ವೇಷ ಭೂಷಣಗಳಲ್ಲಿ‌ ಮುಸ್ಲಿಂರ ವೇಷಭೂಷಣ ದ ಛಾಯೆ ಇಲ್ಲ


ಹಾಗಾಗಿ ಬಾಗಿಲ ಬಬ್ಬರ್ಯ ಮತ್ತು ರೆಂಕೆ ಅಣಿ ಕಟ್ಟಿ ಕೋಲ ಅಗುವ ಸಸ್ಯಹಾರ ಸೇವಿಸುವ ಬಬ್ಬರ್ಯ ಬೇರೆ ಬೇರೆ ದೈವಗಳಾಗಿವೆ ಎಂದು ಹೇಳಬಹುದು ,ಬಬ್ಬರ್ಯನ ರೆಂಕೆ ಅಣಿ ಆತ ಕಡಲಿನಲ್ಲಿ ಸಾಗುವಾಗ ಹಡಗಿಗೆ ? ದೋಣಿಗೆಕಟ್ಟಿದ ಹಾಯಿಯ ಪ್ರತೀಕವಾಗಿದೆ ,ಬಬ್ಬರ್ಯ ನಿಗೆ ಬಿಟ್ಟರ ಕಿನ್ನಿ ಮಾಣಿಗೂ ರೆಂಕೆ ಅಣಿ ಕಟ್ಟುವ ಪದ್ದತಿ ಇದೆ ಇವರೂ ದೋಣಿ ಮೂಲಕ ಪ್ರಯಾಣಿಸಿದ ಉಲ್ಲೇಖವಿದೆ 

ಬಾಗಿಲ ಬಬ್ಬರ್ಯ ನ ಬಗ್ಗೆ ಹೆಚ್ಚಿನ ಮಾಹಿತಿ ಇದ್ದವರು ತಿಳಿಸಿ ಎಂದು ಕೋರಿಕೆ 

ಬಬ್ಬರ್ಯ ಪಂಜುರ್ಲಿ ಗುಳಿಗ ಸೇರಿದಂತೆ 1253 ದೈವಗಳ ಮಾಹಿತಿಗಾಗಿ ಮಾಯ ಮತ್ತು ಜೋಗದ ಬೆಳಕಿನಲ್ಲಿ

ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ 

The Thousand and One Daivas of Karavali-Dr Lakshmi G Prasad,mob 9480516684 

Translated by Ashwini Bhat 


ಕ್ಷೇತ್ರ ಕಾರ್ಯದಲ್ಲಿ ಮಾರ್ಗ ದರ್ಶನ ನೀಡಿದ್ದಲ್ಲದೆ ಜೊತೆಗೆ ಬಂದು ಮಾಹಿತಿ ಸಂಗ್ರಹದಲ್ಲಿ ಸಹಾಯ ಮಾಡಿದ ಹಿರಿಯ ವಿದ್ವಾಂಸರಾದ ಚಂದ್ರ ಶೇಖರ ನಾವಡ ಮತ್ತು ಗೆಳತಿ ನೀತಾರಿಗೆ ಧನ್ಯವಾದಗಳು

Saturday, 21 February 2026

226 daiva book daiva research book ನಮ್ಮ ಹೆಮ್ಮೆಯ ಓದುಗ ಮಿತ್ರರು ಭರತ್ ಕುಮಾರ್


 ತಲೆಮಾರುಗಳಿಂದ ದೈವಾರಾಧನೆ (ಭೂತಾರಾಧನೆ) ಕುರಿತು ಸಮರ್ಪಕವಾದ ಮಾಹಿತಿ ವರ್ಗಾವಣೆ ಆಗದೇ ಇದ್ದುದರಿಂದಲೋ ಅಥವಾ ಇನ್ಯಾವುದೋ ಕಾರಣಗಳಿಂದಲೋ ಮನಸಿನಲ್ಲಿ ಮೂಡಿದ ಪ್ರಶ್ನೆಗಳಿಗೆ ಉತ್ತರವಿಲ್ಲದೆ ಅಲೆದಾಡುತ್ತಿರುವಾಗ ನಿಮ್ಮ ಕೃತಿಯು ಒಂದು ಆಶಾಕಿರಣವಾಗಿ ಹೊರಹೊಮ್ಮಿದೆ.

ದೇವರು ಸದಾ ನಿಮಗೆ ಆಯುರಾರೋಗ್ಯ, ಐಶ್ವರ್ಯ,ಸುಖ, ಶಾಂತಿ,ನೆಮ್ಮದಿಯನ್ನು ಕರುಣಿಸಲಿ ಎಂದು ಹಾರೈಸುತ್ತೇನೆ.

 ಹೃತ್ಪೂರ್ವಕ ಧನ್ಯವಾದಗಳು.

ಇತಿ 

ಭರತ್ ಕುಮಾರ್.

ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ 

The Thousand and One Daivas of Karavali-Dr Lakshmi G Prasad,mob 9480516684

Monday, 16 February 2026

255 stephen and liew daiva book The thousand and one daivas of karavali


 ಇದು ನಿಜಕ್ಕೂ ದೈವಗಳ ಕಾರಣಿಕವೇ ಸರಿ


ಈವತ್ತು ಸಂಜೆ ಕಾಪು ಬೀಚ್ ನಲ್ಲಿ ನಡೆದ ಶಿವರಾತ್ರಿ ಕಾರ್ಯಕ್ರಮಕ್ಕೆ ಆಹ್ವಾನಿತ ಮುಖ್ಯ ಅತಿಥಿಯಾಗಿ ಹೋಗಿದ್ದೆ.


ಸಭಾ ಕಾರ್ಯಕ್ರಮಕ್ಕೆ ಮೊದಲು ಇಬ್ಬರು ವಿದೇಶೀ ಭಕ್ತರು ಬಂದದ್ದನ್ನು ಗಮನಿಸಿದೆ.


ಹಾಗೆ ಅವರಲ್ಲಿ ಮಾತನಾಡಿದೆ ಮಾತಿನ ನಡುವೆ ನಾನು ದೈವಗಳ ಬಗ್ಗೆ ಅಧ್ಯಯನ ಮಾಡಿದ್ದನ್ನು ತಿಳಿದು ನನ್ನ ಕೈಯಲ್ಲಿ ಇದ್ದ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು ಚಿತ್ರಗಳನ್ನೆಲ್ಲ ನೋಡಿ ಈ ಪುಸ್ತಕದ ಬೆಲೆ ಎಷ್ಟು ಕೇಳಿದರು. ಹೇಳಿದೆ ತಕ್ಷಣವೇ ದುಡ್ಡು ಕೊಟ್ಟು  ನಮಗೆ ಈ ಪುಸ್ತಕ ಕೊಡಿ ಎಂದು ಎಂದರು


 ಆಗ ನಾನು ಇದರ ಇಂಗ್ಲಿಷ್ ಆವೃತ್ತಿ ಇದೆ ಎಂದಾಗ ಅವರಿಗೆ ಬಹಳ ಖುಷಿ ಅಯಿತು.

ಕಾರಿನಲ್ಲಿರಿಸಿದ್ದ  ಇಂಗ್ಲಿಷ್ ಆವೃತ್ತಿ The Thousand and One Daivas of Karavali-Dr Lakshmi G Prasad,mob 9480516684 translated by Ashwini Bhat  ಪುಸ್ತಕ ನೋಡಿ ಮಕ್ಕಳಂತೆ ಸಂಭ್ರಮಿಸಿದರು

ಸಹಿ ಮಾಡಿ ಕೊಡಿ ಎಂದು ಕೇಳಿ ಪಡೆದರು 

ಇಂಗ್ಲೆಂಡ್ ನಿಂದ ಬಂದ ಇವರಿಗೆ ನಮ್ಮ ಸಂಸ್ಕೃತಿ ಬಗ್ಗೆ ಅತೀವ ಪ್ರೀತಿ ಅಭಿಮಾನ..ಇದನ್ನು ಕಂಡು ನನಗೆ ಹೃದಯ ತುಂಬಿ ಬಂತು.

Thursday, 12 February 2026

254 ನಮ್ಮ‌ಪ್ರೀತಿಯ ಪುಸ್ತಕ ಮಿತ್ರರು - ರುಕ್ಮಿಣಿ ಮಾಲಾ


 ನಮ್ಮ ಪ್ರೀತಿಯ ಪುಸ್ತಕ ಮಿತ್ರರು

ರುಕ್ಮಿಣಿ ಮಾಲಾ ,ಮೈಸೂರು

ಮಾಯ ಮತ್ತು ಜೋಗದ ಬೆಳಕಿನಲ್ಲಿ 

ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ .t

The Thousand and One Daivas of Karavali-Dr Lakshmi G Prasad,mob 9480516684 

Translated by Ashwini Bhat

ಮಾತೃಶ್ರೀ ಪ್ರಕಾಶನ ಪ್ರಕಾಶನ 

Aravinda Bhat 

Govinda Prasad 

J M Rajashekhara 

Rachan Ghoshal Budnar 

ದೈವಾರಾಧನೆ

#daiva_book 

#daiva

Wednesday, 11 February 2026

253 daiva book daiva research book ,ನಮ್ಮ ಹೆಮ್ಮೆಯ ಓದುಗರು : ರಾಜೇಶ್ ಶೆಟ್ಟಿ


 #ನಮ್ಮ_ಹೆಮ್ಮೆಯ_ಓದುಗ_ಮಿತ್ರರು 

#ಕರಾವಳಿಯ_ಸಾವಿರದೊಂದು_ದೈವಗಳು 

ಪ್ರಸ್ತುತ ಮಹಾರಾಷ್ಟ್ರದಲ್ಲಿ ನೆಲೆಸಿರುವ ರಾಜೇಶ್ ಶೆಟ್ಟಿ

252 Daiva book daiva research book ನಮ್ಮ‌ಹೆಮ್ಮೆಯ ಓದುಗ ಮಿತ್ರರು : ಪ್ರಶಾಂತ್ ಆಚಾರ್ಯ


 ನಮ್ಮ‌ ಹೆಮ್ಮೆಯ ಓದುಗ ಮಿತ್ರರು..

ಮಂಗಳೂರು ಎಡಪದವಿನ ಪ್ರಶಾಂತ್ ಎಸ್ ಆಚಾರ್ಯರ ಕೈಯಲ್ಲಿ ನಮ್ಮ‌ಪುಸ್ತಕ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ - ಡಾ.ಲಕ್ಷ್ಮೀ ಜಿ ಪ್ರಸಾದ್

251 daiva book daiva research book - ನಮ್ಮ ಹೆಮ್ಮೆಯ ಓದುಗರು


 ನಮ್ಮ ಹೆಮ್ಮೆಯ ಓದುಗ ಮಿತ್ರರು..

ಸ್ವತಃ ಲೇಖಕರೂ ಉತ್ತಮ ಗಾಯಕರೂ ಆಗಿರುವ ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಮ್ಯಾನೇಜರರಾದ ರಘುಪತಿ ತಾಮ್ಹನ್ ಕರ್ ಅವರು ಸದಾ ನನ್ನ ಅಧ್ಯಯನ ಮತ್ತು ಬರವಣಿಗೆಗೆ ಪ್ರೋತ್ಸಾಹ ಕೊಡುವವರು.


ಅವರು ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕವನ್ನು ತಗೊಂಡು ಓದಿ ಶುಭ ಹಾರೈಸಿದ್ದಾರೆ 

 ಧನ್ಯವಾದಗಳು ಸರ್ Raghupathi Thamankar  


""ಡಾ. ಶ್ರೀಮತಿ ಲಕ್ಷ್ಮೀ ಪ್ರಸಾದ್ ರವರೆ.. 

ನೀವು ಬರೆದ ಕರಾವಳಿಯ ಸಾವಿರ ದೊಂದು ದೈವಗಳು ಎಂಬ ಬೃಹತ್  ಗ್ರಂಥ ತಲುಪಿದೆ.


.ನಮ್ಮ ಕರಾವಳಿಯ ಐತಿಹಾಸಿಕ ,ಸಾಂಸ್ಕೃತಿಕ ವಿಶ್ಲೇ ಷಣಾ ತ್ಮಕ  ನೋಟವುಳ್ಳ ದೈವಗಳ ಬಗ್ಗೆ  ಇನ್ನೂ  ಚಾಲ್ತಿ ಯಲ್ಲಿ ಇರುವ ಪ್ರಾಚೀನ ಸಂಸ್ಕೃತಿಯ ಅನಾವರಣ ಇಲ್ಲಿ ಇದೆ..ನಿಮ್ಮ ಸಂಶೋಧನಾ ಗ್ರಂಥಗಳ ಪಟ್ಟಿಯೇ ಈಗಲೇ 21 ದಾಟಿದ್ದು ಇನ್ನೂ ಐದು ಗ್ರಂಥಗಳ ರಚನೆಯಲ್ಲಿ 

ತೊಡಗಿದ್ದೀರೆಂದು ತಿಳಿಯಿತು . ಇವುಗಳೆಲ್ಲವನ್ನೂ ಇಂಗ್ಲಿಷ್ ಸಹಿತ ದೇಶದ ಎಲ್ಲಾ ಭಾಷೆ ಗಳಲ್ಲಿ ತರ್ಜುಮೆ ಯಾಗಿ ದೇಶದ ಹಾಗೂ ಪರದೇಶದ ಜನರೂ ಓದುವಂತೆ   ಆಗಲಿ ಎಂದು ಹಾರೈಸುವೆ .ನೀವು ಬರೆದ ಪುಸ್ತಕವನ್ನು ಪ್ರೀತಿಯಿಂದ ಎತ್ತಿಕೊಂಡ ಫೋಟೋ ವನ್ನು ಕಳುಹಿಸಿದ್ದೇನೆ.. 

- ರಘುಪತಿ ತಾಮ್ಹನ್ ಕರ್ ಮೈಸೂರು

Tuesday, 10 February 2026

250 ನಮ್ಮ ಹೆಮ್ಮೆಯ ಪುಸ್ತಕ ಮಿತ್ರರು : ಡಾ.ಉದಯ ಕುಮಾರ್ ನೂಜಿ‌

 


ನಮ್ಮ‌ ಪ್ರೀತಿಯ ಡಾ.ಉದಯ ಕುಮಾರ್ ಭಟ್  ಸಾಯಿ ನಿಕೇತನ ದೈಗೋಳಿ 

Nooji Udaya Kumar

Sai Nikethan Sevashram Daigoli 


 ಸಾಯಿ ಬಾಬಾರ ಅನನ್ಯ ಭಕ್ತರಾದ ನಮ್ಮ ಊರಿನ ನೂಜಿ  ಡಾ.ಉದಯ ಕುಮಾರ್ ಮತ್ತು ಶಾರದಕ್ಕ ದಂಪತಿಗಳ ಸೇವೆ ಅನನ್ಯವಾದುದು 


ಎಲ್ಲೆಲ್ಲೋ ದಾರಿಯಲ್ಲಿ ಅನಾಥರಂತೆ ಬಿದ್ದವರನ್ನು ಕರೆ ತಂದು ಚಿಕಿತ್ಸೆ ಕೊಟ್ಟು  ಅವರ ಮನೆ ಮಂದಿಯನ್ನು ಪತ್ತೆ ಮಾಡಿ ಅವರಿಗೆ ತಲುಪಿಸುವ ಬಗ್ಗೆ ನೋಡುತ್ತಲೇ ಇದ್ದೇನೆ

ಇನ್ನು ಅನಾಥರಾಗಿರುವ ನೂರಾರು ಮಂದಿಗೆ ಆಶ್ರಯ ನೀಡಿದ್ದಾರೆ.

ಇದೀಗ  ತೀರ ಅಶಕ್ತರಾದವರ ಪುನಶ್ಚೇತನಕ್ಕೆ ಆರೈಕೆಗಾಗಿ ಯೋಜನೆ ಹಾಕಿದ್ದು ಕಟ್ಟಡ ನಿರ್ಮಾಣ ಆಗುತ್ತಿದೆ ಜೊತೆಗೆ ಗೋ ಧಾಮ ಕೂಡ ಇದೆ 


ಇಂಥಹ ಮಹತ್ಕಾರ್ಯ ಒಬ್ಬ ಮನುಷ್ಯನಿಗೆ ಸಾಧ್ಯವಾಗುವದ್ದಲ್ಲ.ಅದಕ್ಕೆ ದೈವ ಪ್ರೇರಣೆ ಇರಲೇಬೇಕು.ಆ ಶಕ್ತಿ ಅವರು ನಂಬುವ ಸಾಯಿ ಬಾಬಾರೇ ನೀಡಿದ್ದು ಇರಬಹುದು ಎಂದು ನನಗೆ  ಅನಿಸಿದೆ ,


ದೇವರಿಗೆ ಎಲ್ಲರನ್ನು ನೋಡಿಕೊಳ್ಳಲು ಆಗುವುದಿಲ್ಲ ಅದಕ್ಕಾಗಿ ಅಲ್ಲಲ್ಲಿ ತನ್ನವರನ್ನು ನೇಮಿಸುತ್ತಾನಂತೆ


ನಮ್ಮ ಊರಿನ ಡಾ.ಉದಯ ಕುಮಾರ್ ಶಾರದಕ್ಕ ಈ ರೀತಿ ಸೇವೆಗಾಗಿ ದೇವರಿಂದ ನೇಮಿಸಲ್ಪಟ್ಟವರು


ಇಂದಿನ ಕಾಲದಲ್ಲಿ ಅವರವರ ತಂದೆ ತಾಯಿಯರನ್ನೇ ನೋಡಿ ಕೊಳ್ಳುದು ಕಷ್ಟದಲ್ಲಿ, ವಯಸ್ಸಾದ ಮೇಲೆ ಇವರು ಭಾರ ಎಂದೇ ಮಕ್ಕಳಿಗೆ ಭಾಸವಾಗುತ್ತದೆ.


ಅಂತಹದ್ದರಲ್ಲಿ ಯಾರ್ಯಾರೋ ದಾರಿಯಲ್ಲಿ ಬಿದ್ದವರನ್ನು ತಂದು ಆರೈಕೆ ಮಾಡುದೆಂದರೆ ಸಾಮಾನ್ಯ ವಿಚಾರವಲ್ಲ


ದೇವರು ಮಾಡುವ ಕೆಲಸವನ್ನು ಮನುಷ್ಯ ಮಾಡಿದರೆ ಆ ಮನುಷ್ಯ ಕೂಡ ದೇವರೇ ಎಂಬುದು ನನ್ನ ದೃಢವಾದ ನಿಲುವು..


ಹಾಗಾಗಿ ನನಗೆ ನಮ್ಮ ಊರಿನ ಉದಯ ಡಾಕ್ಟರ್ ಮತ್ತು ಶಾರದಾ ಡಾಕ್ಟರ್ ಬಗ್ಗೆ ವಿಶೇಷ ಅಭಿಮಾನ .ಇವರಿಂದಾಗಿ ನಮ್ಮ ಊರಿಗೆ ಒಂದು ಶೋಭೆ ಬಂದಿದೆ

ಕಳೆದ ವಾರ ಒಬ್ಬರು ಮೆಸೇಜ್ ಮಾಡಿ ಪುಸ್ತಕ ಬೇಕೆಂದಾಗ ಎಲ್ಲರಿಗೆ ಕಳುಹಿಸುವಂತೆ ವಿವರ ಕಳುಹಿಸಿದ್ದೆ

ಅವರು ಪೇ ಮಾಡಿ ಅಡ್ರೆಸ್ ಕೊಟ್ಟಾಗಲೇ ಇವರ ನಮ್ಮ ಉದಯ ಡಾಕ್ಟರ್ ಎಂದು ತಲೆಗೆ ಹೋದದ್ದು

ಸಾಮಾನ್ಯವಾಗಿ ಹವ್ಯಕರಿಗೆ ಭೂತಾರಾದನೆ ಬಗ್ಗೆ ಹೆಚ್ಚು ಆಸಕ್ತಿ ಇರುವುದು ಕಡಿಮೆ.

ಹಾಗಾಗಿ ಡಾ.ಉದಯ ಕುಮಾರ್ ಅವರು ಓದಲು ಆಶಿಸಿ ಪುಸ್ತಕಕ್ಕೆ ಆರ್ಡರ್ ಮಾಡಿದಾಗ ತುಸು ಅಚ್ಚರಿಯೂ ಆಯಿತು.


ನನ್ನ ಊರಿನಲ್ಲಿ ಕರೆಯುವ ನನ್ನ ಹೆಸರು ವಿದ್ಯಾ ಎಂದು‌ ಹಾಗಾಗಿ ನಮ್ಮ ಊರಿನ ಹೆಚ್ಚಿನವರಿಗೆ ನನಗೆ ಲಕ್ಷ್ಮೀ ಎಂಬ ಹೆಸರಿದೆ ಡಾ.ಲಕ್ಷ್ಮೀ ಜಿ ಪ್ರಸಾದ್ ಎಂದರೆ ನಾನು ಎಂದು ಗೊತ್ತಿಲ್ಲ.

.ಮುಖ ಪರಿಚಯ ಇರುವುದೂ ಸಂಶಯ ಯಾಕೆಂದರೆ ಚಿಕ್ಕಂದಿನಲ್ಲಿ ನಾನು ಅಜ್ಜನ ಮನೆಯಲ್ಲಿ ಬೆಳೆದೆ ನಂತರ ಹಾಸ್ಟೆಲ್ ನ ಓದು ,ದ್ವಿತೀಯ ವರ್ಷ ಬಿಎಸ್ಸಿ ಓದುತ್ತಿರುವಾಗಲೇ ಮದುವೆಯಾಗಿ ಊರಿಂದ ಹೊರಗಿನವಳಾದೆ 

ನಂತರವೂ ನಾನು ನನ್ನ ಓದು ಅಧ್ಯಯನದಲ್ಲಿ ಮುಳುಗಿದೆ.ಒಂದಷ್ಟು ಸಮಸ್ಯೆಗಳೂ ಬೆನ್ನತ್ತಿದವು.ಹಾಗಾಗಿ ಊರಿನ ಉಪನಯನ ಮದುವೆ ಮೊದಲಾದ  ಕಾರ್ಯಕ್ರಮಗಳಿಗೆ ಹೋದದ್ದೇ ತೀರ ಕಡಿಮೆ ಅಲ್ಲದೇ ನನಗೆ ಮಾತು ಕಡಿಮೆ ಇತ್ತು . ಈಗಿನಂತೆ ವಾಚಾಳಿ ಆಗಿರಲಿಲ್ಲ ಹಾಗಾಗಿ ನಮ್ಮ ಊರಲ್ಲಿ ಬಂಧು ಬಳಗದಲ್ಲಿ ಕೂಡ ನಾನು ಹೆಚ್ಚು ಪರಿಚಿತಳಲ್ಲ


ಹಾಗಾಗಿ ನೂಜಿ ಡಾ.ಉದಯ ಕುಮಾರ್ ಅವರಿಗೆ ನನ್ನ ಪರಿಚಯ ಇರಲಾದೆಂದು ಭಾವಿಸಿದ್ದೆ.ಈಗ್ಗೆ ಒಂದು ವರ್ಷದ ಮೊದಲು ಯಾವುದೊ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದಾಗ ಅವರಿಗೆ ನನ್ನ ಪರಿಚಯ ಇರುದು ತಿಳಿದಿತ್ತು


ಆದರೆ ನನ್ನ ತುಳು ಸಂಸ್ಕೃತಿ ಭೂತಾರಾಧನೆ / ದೈವಾರಾಧನೆ ಬಗ್ಗೆ ಆಸಕ್ತಿ ಇರಬಹುದು ಎಂದು ನುಜಕೆ ಯೋಚಿಸಿರಲಿಲ್ಲ

ಅವರು ನನ್ನ ಅಧ್ಯಯನ ಗ್ರಂಥ

ಕರಾವಳಿಯ ಸಾವಿರದೊಂದು ದೈವಗಳು ಅನ್ನು ಓದಲು ಆಶಿಸಿದ್ದು ನನಗೆ ತುಂಬಾ ಖುಷಿ ಕೊಟ್ಟಿದೆ..

ಧನ್ಯವಾದಗಳು ಸರ್

Monday, 9 February 2026

249 Daiva book daiva research bookನಮ್ಮ ಹೆಮ್ಮೆಯ ಓದುಗ ಮಿತ್ರರು ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ ಅವಿನಾಶ್ ಹೆಬ್ಬಾರ್

 ನಮ್ಮ ಹೆಮ್ಮೆಯ ಓದುಗ ಮಿತ್ರರು

ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ 

ಅವಿನಾಶ್ ಹೆಬ್ಬಾರ್


Sunday, 8 February 2026

248 daiva book daiva research book


 ನಮ್ಮ‌ಪ್ರೀತಿಯ ಓದುಗ ಮಿತ್ರರು

ಅಮಿತಾ ಶೆಟ್ಟಿಯವರ ಸೊಸೆ ಹರ್ಷಿತಾ ಸುಹಾನ್ 

ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ 

The Thousand and One Daivas of Karavali-Dr Lakshmi G Prasad,mob 9480516684 

Translated by Ashwini Bhat 

#daiva_book 

#daiva_research_book

ದೈವಾರಾಧನೆ 


247 Daiva book daiva research book


 ನಮ್ಮ ಊರಿನವರೇ ಅದ ನನ್ನಣ್ಣನ ಬಾಲ್ಯದ ಗೆಳೆಯರಾದ  ಶೌರ್ಯ ಮಲೆ ಶಿರಾಡಿ ಘಾಟ್ ಹಾಂಟೆಡ್ ಹೊಸಮನೆ ಮೊದಲಾದ ಕಾದಂಬರಿಗಳ ಮೂಲಕ ಖ್ಯಾತಿಯನ್ನು ಪಡೆದಿರುವ ರಮೇಶ್ ಶೆಟ್ಟಿಗಾರ್ ಮಂಜೇಶ್ವರ Ramesh Shettigar Manjeshwar ಅವರ ಕೈಯಲ್ಲಿ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684 



ಈ ಬಾರಿ ನಮ್ಮ ಊರಿನ ಇನ್ನೊಬ್ಬರು ಮಹನೀಯರು ಕೂಡ ನನ್ನ ಅಧ್ಯಯನ ಗ್ರಂಥ ಓದಲು ಕೊಂಡುಕೊಂಡು ಬೆಂಬಲಿಸಿದ್ದು ನನಗೆ ಬಹಳ ಸಂತಸವಾಗಿದೆ..

ಅಂದ ಹಾಗೆ ದೀನ ದಲಿತರ ಸೇವೆಯಲ್ಲಿಯೇ ಭಗವಂತನನ್ನು ಕಂಡಿರುವ ಇನ್ನೊಬ್ಬರು ಯಾರು ? ..

ಸಧ್ಯದಲ್ಲಿಯೇ ತಿಳಿಸುವೆ..


Daiva book

Daiva research book 

The Thousand and One Daivas of Karavali-Dr Lakshmi G Prasad,mob 9480516684 

Translated by Ashwini Bhat

246 Daiva book Daiva research book ನಮ್ಮ ಹೆಮ್ಮೆಯ ಪುಸ್ತಕ‌ಮಿತ್ರರು ಯತೀಶ್ ಎಲ್ ಶೆಟ್ಟಿಗಾರ್ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ The Thousand and One Daivas of Karavali-Dr Lakshmi G Prasad,mob 9480516684 Translated by Ashwini Bhat Yathish Siddakatte


 Daiva book

Daiva research book 

ನಮ್ಮ ಹೆಮ್ಮೆಯ ಪುಸ್ತಕ‌ಮಿತ್ರರು 

ಯತೀಶ್ ಎಲ್ ಶೆಟ್ಟಿಗಾರ್ 

ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ 

The Thousand and One Daivas of Karavali-Dr Lakshmi G Prasad,mob 9480516684 

Translated by Ashwini Bhat

Yathish Siddakatte

245 Daiva book daiva research bookನಮ್ಮ ಹೆಮ್ಮೆಯ ಪುಸ್ತಕ‌ ಮಿತ್ರರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಕಟೀಲು ಮೂಲದ ರಂಗನಾಥ ರಾವ್ ಮಾಯ ಮತ್ತು ಜೋಗದ ಬೆಳಕಿನಲ್ಲಿ. ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ - ಡಾ.ಲಕ್ಷ್ಮೀ ಜಿ ಪ್ರಸಾದ್ The Thousand and One Daivas of Karavali-Dr Lakshmi G Prasad,mob 9480516684 -Dr Lakshmi G Prasad,mob 9480516684 Translated by Ashwini Bhat


 ನಮ್ಮ ಹೆಮ್ಮೆಯ ಪುಸ್ತಕ‌ ಮಿತ್ರರು

ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಕಟೀಲು ಮೂಲದ ರಂಗನಾಥ ರಾವ್

ಮಾಯ ಮತ್ತು ಜೋಗದ ಬೆಳಕಿನಲ್ಲಿ. ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್  - ಡಾ.ಲಕ್ಷ್ಮೀ ಜಿ ಪ್ರಸಾದ್ 

The Thousand and One Daivas of Karavali-Dr Lakshmi G Prasad,mob 9480516684 -Dr Lakshmi G Prasad,mob 9480516684 

Translated by Ashwini Bhat 

Aravinda Bhat 

Rachan Ghoshal Budnar  

J M Rajashekhara 

ಮಾತೃಶ್ರೀ ಪ್ರಕಾಶನ ಪ್ರಕಾಶನ 

Yogish Kori 

#daiva 

#daivaradane 

#tuluá 

#tuluá

244 daiva bok daiva research book ನಮ್ಮ ಹೆಮ್ಮೆಯ ಓದುಗ ಮಿತ್ರರು ನಾಗಭೂಷಣ ಗಿಳಿಯಾರು.. ಇವರು ವಸಂತ ಗಿಳಿಯಾರ್ Vasanth Giliyar ಅವರ ಸ್ನೇಹಿತರು ..ಒಂದೇ ಊರಿನವರು.. ಈವತ್ತು ಸಂಜೆ ಮನೆಗೆ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ ( ಮೊಬೈಲ್ 9480516684)ಪುಸ್ತಕ ತಗೊಳ್ಳಲು ಬಂದಿದ್ದರು ಸ್ವಲ್ಪ ಹೊತ್ತು ಪಟ್ಟಾಂಗ ಹೊಡೆದವು.ನೆನಪಿಗಾಗಿ ಒಂದು ಫೋಟೋ ತೆಗೆಸಿಕೊಂಡೆವು.. ಮನೆ ಅಂಗಳಕ್ಕೆ ಬಿದ್ದ ಸಂಜೆಯ ಇಳಿ ಬಿಸಿಲು ಫೋಟೋ ತೆಗೆಯುವಾಗ ಕಾಡಿ ನೆರಳು ಬೆಳಕಿನ ಆಟವಾಡಿದೆ.

 

Daiva book

Daiva research book

ನಮ್ಮ ಹೆಮ್ಮೆಯ ಓದುಗ ಮಿತ್ರರು 

ನಾಗಭೂಷಣ ಗಿಳಿಯಾರು.. ಇವರು ವಸಂತ ಗಿಳಿಯಾರ್ Vasanth Giliyar ಅವರ ಸ್ನೇಹಿತರು ..ಒಂದೇ ಊರಿನವರು..

ಈವತ್ತು ಸಂಜೆ ಮನೆಗೆ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ ( ಮೊಬೈಲ್  9480516684)ಪುಸ್ತಕ ತಗೊಳ್ಳಲು ಬಂದಿದ್ದರು

ಸ್ವಲ್ಪ ಹೊತ್ತು ಪಟ್ಟಾಂಗ ಹೊಡೆದವು.ನೆನಪಿಗಾಗಿ ಒಂದು ಫೋಟೋ ತೆಗೆಸಿಕೊಂಡೆವು..

ಮನೆ ಅಂಗಳಕ್ಕೆ ಬಿದ್ದ ಸಂಜೆಯ ಇಳಿ ಬಿಸಿಲು ಫೋಟೋ ತೆಗೆಯುವಾಗ ಕಾಡಿ ನೆರಳು ಬೆಳಕಿನ ಆಟವಾಡಿದೆ.

243 Daiva book daiva research bookನಮ್ಮ ಹೆಮ್ಮೆಯ ಪುಸ್ತಕ‌ಮಿತ್ರರು ಜಯಕೀರ್ತಿ Keerthi Trilok ತುಮಕೂರು ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684


 ನಮ್ಮ ಹೆಮ್ಮೆಯ ಪುಸ್ತಕ‌ಮಿತ್ರರು

ಜಯಕೀರ್ತಿ Keerthi Trilok  ತುಮಕೂರು

ಮಾಯ ಮತ್ತು ಜೋಗದ ಬೆಳಕಿನಲ್ಲಿ

ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684

Daiva book

Daiva research book 

Daiva worship of Tuluvas 

242 Daiva research book daiva book ನಮ್ಮ‌ಹೆಮ್ಮೆಯ ಪುಸ್ತಕ ಮಿತ್ರರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಕೇಶವ ಪ್ರಸಾದ್ ಮರುವಳ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ The Thousand and One Daivas of Karavali-Dr Lakshmi G Prasad,mob 9480516684 Translated by Ashwini Bhat

 



ನಮ್ಮ‌ಹೆಮ್ಮೆಯ ಪುಸ್ತಕ ಮಿತ್ರರು

ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಕೃಷ್ಣ   ಪ್ರಸಾದ್ . ಮರುವಳ

ಮಾಯ ಮತ್ತು ಜೋಗದ ಬೆಳಕಿನಲ್ಲಿ

ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ 

The Thousand and One Daivas of Karavali-Dr Lakshmi G Prasad,mob 9480516684 

Translated by Ashwini Bhat

Daiva book ,daiva research book ಕರಾವೞಿಯ ಸಾವಿರದೊಂದು ದೈವಗಳು ,The thousand and one daivas of karavali - Dr Lakshmi G prasad ,mobile 9480516684 translated by ashwini bhat

 ಕಾಲು ಶತಮಾನದ  ಕಾಯುವಿಕೆ ತಣಿದಿದೆ....


ಇಂಗ್ಲಿಷ್ ಅನುವಾದದ ಕನಸು ಕಣ್ಣ ಮುಂದೆ ನನಸಾಗಿ ನಿಂತಿದೆ..


ಕನ್ನಡ ಮತ್ತು ಇಂಗ್ಲಿಷ್ ಆವೃತ್ತಿ ಯ  ಪುಸ್ತಕಗಳು ತಲುಪಿದವು..


ಮೊದಲೇ ಪಾವತಿಸಿ ಕಾದಿರಿಸಿದವರಿಗೆ ಎರಡು ಮೂರು ದಿನಗಳಲ್ಲಿ ಪ್ಯಾಕ್ ಮಾಡಿ ರಿಜಿಸ್ಟರ್ ಪೋಸ್ಟ್ ಮೂಲಕ ಕಳುಹಿಸ್ತೇವೆ..

ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು

The thousand and one daivas of Karavali- Dr Lakshmi G prasad, mobile 9480516684

Translated by Ashwini Bhat