Sunday, 10 December 2023

ಕರಾವಳಿಯ ಸಾವಿರದೊಂದು ದೈವಗಳು - ಡಾ.ಪುನೀತ್ ರಾಘವೇಂದ್ರ


 ತಮ್ಮ‌ಮಗನ ಕೈಗೆ ಪುಸ್ತಕ ನೀಡಿದ ಈ ಪ್ರೀತಿ ಅಭಿಮಾನಕ್ಕೆ ಏನೆನ್ನಲಿ, ಧನ್ಯವಾದಗಳು ಡಾಕ್ಟ್ರೇ DrPuneeth Raghavendra Kuntukadu 


ದೇಶ #ಸುತ್ತಬೇಕು #ಕೋಶ #ಓದಬೇಕು

https://m.facebook.com/story.php?story_fbid=1795558340834127&id=100011399344171

ಲಕ್ಷ್ಮೀ ಮೇಡಂ ಪರಿಚಯ ನನಗೆ ಸುಮಾರು ಐದು ವರ್ಷಗಳಿಗೂ ಹಳೆಯದು...ಅದೂ ಕೇವಲ ಅಂತರ್ಜಾಲದಲ್ಲಿ ಮಾತ್ರ!! ಹೀಗೇ ಒಂದು ಬಾರಿ ಬ್ಲಾಗ್'ನಲ್ಲಿ ಜಾಲಾಡುತ್ತಿದ್ದಾಗ ಅವರ ಕೆಲಸಗಳ ಪರಿಚಯವಾಯ್ತು.. ಸುಳ್ಯ ತೊಡಿಕಾನ ಗ್ರಾಮದ ನಮ್ಮ ಕುಂಟುಕಾಡು ಮನೆತನದಲ್ಲಿ ಮಾತ್ರ ಆರಾಧನೆಗೊಳಪಡುವ #ಹಿತ್ತಿಲುಚಾಮುಂಡಿ ಎಂಬ ದೈವದ ಕುರಿತಾಗಿ ಮಾಹಿತಿ ಪಡೆಯುವುದಿತ್ತು. ಅಲ್ಲಿಂದ ಮುಂದುವರೆದ ಪರಿಚಯ ಆರೋಗ್ಯ-ಮಾಹಿತಿ ಕುರಿತಾಗಿಯೂ ವಿಚಾರ ವಿನಿಮಯಮಾಡಿಕೊಳ್ಳುತ್ತೇವೆ. 


ಅವರ ಬರವಣಿಗೆಯ ಪರಿಚಯವಿದ್ದ ನನಗೆ ಈ ಹೊಸ ಪುಸ್ತಕಕ್ಕೆ ಮುಂಗಡ ಪಾವತಿಸಲು ಯಾವುದೇ ಸಂಶಯವಿರಲಿಲ್ಲ. ಪುಸ್ತಕ ನಿನ್ನೆಯಷ್ಟೇ ಕೈ ಸೇರಿತು... ಅಮೋಘ.. ಅದ್ಭುತ.. ಅಪೂರ್ವ ಗ್ರಂಥ!! 


ಭೂತಾರಾಧನೆಯ ಕುರಿತು "ಏನು ಇದೆ?" ಅಂದುಕೊಳ್ಳುವವರಿಗೆ ಇದೊಂದು ಮಾಹಾಗ್ರಂಥ!! ಕರಾವಳಿ ಪ್ರಾಂತ್ಯದಲ್ಲಿ ನಾವೆಲ್ಲಾ ದೈವಾರಾಧನೆಯನ್ನು ನಡೆಸುವವರೇ. ಆದರೆ ಅವುಗಳ ಇತಿಹಾಸ ಒಂದಿನಿತೂ ತಿಳಿದಿಲ್ಲ‌. ಹಾಗಾಗಿ ನನಗನಿಸಿದಂತೆ ಪ್ರತಿಯೋರ್ವರ ಮನೆಯಲ್ಲೂ ಖಡ್ಡಾಯವಾಗಿ ಇರತಕ್ಕಂಥ ಅಪೂರ್ವ ಪುಸ್ತಕ ಈ "#ಕರಾವಳಿಯ #ಸಾವಿರದೊಂದು #ದೈವಗಳು" (ನಮ್ಮ ಇತಿಹಾಸ ನಾವಲ್ಲದೆ ಇನ್ಯಾರು ತಿಳ್ಕೋಬೇಕು? ಅಲ್ವೇ?! )


ಅಷ್ಟಕ್ಕೂ ಇದೊಂದು ಸಾಮಾನ್ಯ ಗ್ರಂಥವಲ್ಲ. ಕನಿಷ್ಠ ಹತ್ತು ಅಧ್ಯಯನ (ಪಿಹೆಚ್'ಡಿ) ಈ ಒಂದು ಗ್ರಂಥದ ಮೇಲೇ ಮಾಡಲು ಸಾಧ್ಯವಿದೆ!!  ಹಾಗಾಗಿ ಇದರ ಇಂಗ್ಲೀಷ್ ಅವತರಣಿಕೆ ಶೀಘ್ರವಾಗಿ ಬರಲಿ, ಆ ಮೂಲಕ ನಮ್ಮ ಸಂಸ್ಕ್ರತಿಯು ವಿಶ್ವದಾದ್ಯಂತ ಪರಿಚಯವಾಗಲೆಂದು ಹಾರೈಸುತ್ತೇನೆ. 


#ಕೊನೆಯದಾಗಿ: 


ನಮ್ಮ ಮುಂದಿನ ಪೀಳಿಗೆಗೆ ನಾವು ನೀಡುವ ಅತ್ಯುತ್ತಮ ಉಡುಗೊರೆಯೆಂದರೆ ನಮ್ಮ ಸಂಸ್ಕೃತಿಯನ್ನು ತಿಳಿಸಿಕೊಡುವುದು. ಈ ಹಿಂದೆ ಸೂಕ್ತ ದಾಖಲೆಗಳಿಲ್ಲದೆ ಅದೆಷ್ಟನ್ನೋ ನಾವು ಕಳೆದುಕೊಂಡಿದ್ದೇವೆ, ಇಂದೂ ಕಳೆದುಕೊಳ್ಳುತ್ತಿದ್ದೇವೆ. ಹಾಗಾಗಿ.. ಮುಂದಿನ ತಲೆಮಾರಿಗೆ ಸಂಸ್ಕ್ರತಿ ಪರಿಚಯಿಸಲು ನನ್ನ ಮಗನಾದ #ಹಿರಣ್ಮಯ #ರಾಂ ನಿಗೆ ಈ ಪುಸ್ತಕವನ್ನು ಕೊಡುತ್ತಿದ್ದೇನೆ. 


Lakshmi V  ಲಕ್ಷ್ಮೀ ಮೇಡಂ... ಕೇವಲ ಧನ್ಯವಾದ ಹೇಳಿದ್ರೆ ಮುಗಿಯಲ್ಲ... ಬೇರೆ ಹೇಳ್ಲಿಕ್ಕೆ ಪದಗಳೂ ಇಲ್ಲ!! ನಿಮ್ಮ ಆಶೀರ್ವಾದ ಇರ್ಲಿ ಅಷ್ಟೇ ಕೇಳ್ಕೋಬೋದು 🙏🙏🙏


#ನಮಸ್ತೇ 🙏🙏


ದುಂಡಿರಾಜರು ಹೇಳಿದಂತೆ 

ರಾವಣನ ಪತ್ನಿ ಮಂಡೋದರಿ..‌

ಕನ್ನಡ ಪುಸ್ತಕ ಕೊಂಡೋದಿರಿ!! 😂😂


ಪುಸ್ತಕಕ್ಕೆ ಇಲ್ಲಿ ಸಂಪರ್ಕಿಸಬಹುದು. 


Dr Laxmi V 

9480516684

ಕರಾವಳಿಯ ಸಾವಿರದೊಂದು ದೈವಗಳು - ಕೋಟೇಶ್ವರ ನಾಯಕ


 

ಕೋಟೇಶ್ವರ ನಾಯಕ/ ಕೋಟೆರಾಯ- ಡಾ.ಲಕ್ಷ್ಮೀ ಜಿ ಪ್ರಸಾದ 


ಕುಂದಾಪುರ ಸುತ್ತ ಮುತ್ತ ಕೋಟೆರಾಯ ಎಂಬ ದೈವಕ್ಕೆ ಆರಾಧನೆ ಇದೆ.ಮಡಾಮಕ್ಕಿ ವೀರಭದ್ರ ದೇವಸ್ಥಾನದ ಪ್ರಧಾನ ದೈವ ಈತ .ಅಲ್ಲಿ ನಿಧಿಯನ್ನು ಕಾಯುವ ಕಾರ್ಯ ಈತನದು.ಈ ದೈವದ ವೃತ್ತಾಂತದಲ್ಲಿ ಇತಿಹಾಸದ ಎಳೆಗಳು ಅಡಕವಾಗಿವೆ .© ಡಾ.ಲಕ್ಷ್ಮೀ ಜಿ ಪ್ರಸಾದ್ 


ಪ್ರಚಲಿತ ಐತಿಹ್ಯದಂತೆ 1200 ವರ್ಷಗಳ ಹಿಂದೆ ಈ ಪರಿಸರವನ್ನು ಕೋಟೆರಾಯ / ಕೋಟೇಶ್ವರ ರಾಯ ಎಂಬ ಅರಸ ಆಳುತ್ತಿದ್ದ ...

 ಉಡುಪಿ ಕುಂದಾಪುರ ಕಡೆ ಕೋಟೆರಾಯ  ದೈವಸ್ಥಾನಗಳು ಇವೆ .ಇಲ್ಲಿ ಈತನಿಗೆ ನೇಮ ಕೊಟ್ಟು ಆರಾಧಿಸುತ್ತಾರೆ .


ಅರಸಮ್ಮನ ಕಾನು ಸಮೀಪದ ಬೆಟ್ಟದಲ್ಲಿ ಕೋಟೆರಾಯನ ಮೂಲ ಸ್ಥಳ ಪತ್ತೆಯಾಗಿದೆ ಅಲ್ಲಿ ಈತ ಲಿಂಗ ರೂಪಿಯಾಗಿ ನೆಲೆ ನಿಂತಿದ್ದಾನೆ.


.ಕೋಟೆರಾಯನಿಗೆ  ಡಕ್ಕೆ ಬಲಿಯಲ್ಲಿ  ಆರಾಧನೆ ಇದೆ .ಕೋಟೆರಾಯನ ಕುರಿತಾಗಿ ಡಕ್ಕೆ ಬಲಿಯಲ್ಲಿ ವೈದ್ಯರು ಹೇಳುವ ಹಾಡುಗಳಲ್ಲಿ ಈ ರೀತಿಯ ಕಥಾನಕವಿದೆ. ..ಹೆಚ್ಚಿನ ಮಾಹಿತಿಗೆ http://laxmipras.blogspot.in/2015/11/261-c.html

ಐತಿಹಾಸಿಕ ವೀರನಾಗಿರುವ ಕೋಟೇಶ್ವರ ನಾಯಕನ ಬಗ್ಗೆ ಹೆಚ್ಚಿನ ಮಾಹಿತಿ ನನ್ನ ಕರಾವಳಿಯ ಸಾವಿರದೊಂದು ದೈವಗಳು ಕೃತಿಯಲ್ಲಿದೆ 

ಚಿತ್ರ ಕೃಪೆ :ವಿಜಯಕರ್ನಾಟಕ



ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್


 ಒಂದು ಪ್ರಶ್ನೆ.


ಈ ಕೆಳಗಿನ ದೈವಗಳಲ್ಲಿ ಎಷ್ಟು ದೈವಗಳ ಹೆಸರು ತಿಳಿದಿದೆ? ಎಷ್ಟು ದೈವಗಳ ಮಾಹಿತಿ ತಿಳಿದಿದೆ,? ಈ ಹೆಸರುಗಳ ಹೊರತಾಗಿ ಬೇರೆ ದೈವಗಳ ಮಾಹಿತಿ ಇದ್ದರೆ ತಿಳಿಸಿ ,ಇದಕ್ಕೆನಿಮ್ಮ  ಹೆಸರು ಹಾಕಿ ಸೇರಿಸುವೆ 


ಕರಾವಳಿಯ ಸಾವಿರದೊಂದು ದೈವಗಳು-ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ© ಡಾ.ಲಕ್ಷ್ಮೀ ಜಿ ಪ್ರಸಾದ್ 

ಅನುಕ್ರಮಣಿಕೆ 

ಪ್ರಸ್ತಾವನೆ 


1 ಅಕ್ಕಚ್ಚು

2- ಅಕ್ಕ ಬೋಳಾರಿಗೆ

3-4ಅಕ್ಕೆರ್ಲು- ಅಂಬೆರ್ಲು

5 ಅಗ್ನಿ ಕೊರತಿ

6-9  ಅಗ್ನಿ ಭೈರವನ್ ಮತ್ತು ಪರಿವಾರ 

10-11 ಅಚ್ಚು ಮತ್ತು ಮೆಚ್ಚು ಬಂಗೇತಿಯರು

12-14  ಅಜ್ಜಮ್ಮ ದೇವರು ಮತ್ತು ಪರಿವಾರ 

15-16 ಅಜ್ಜ ಬಳಯ  ಮತ್ತು ಮಾಮಿ ಕುಲೆ

17-23  ಅಜ್ಜಿ ಭೂತ , ಕೂಜಿಲು ಮತ್ತು ಇತರ ದೈವಗಳು

24 ಅಜ್ಜಿ ಬೆರೆಂತೊಲು

25-26  ಅಜ್ಜೆರ್ ಭಟ್ರು ಮತ್ತು ಅಜ್ಜೆರ್ ಪರಿವಾರ

27 ಅಡ್ಯಲಾಯ

28 ಅಡ್ಯಂತಾಯ

29 ಅಡಿ ಮಣಿತ್ತಾಯ

30-31   ಅಣ್ಣ ತಮ್ಮ ದೈವಗಳು/ಅತ್ತಾವರದ ದೈವಗಳು

32-33   ಅಣ್ಣೋಡಿ ಕುಮಾರ- ಕಿನ್ಯಂಬು

34   ಗುಟ್ಟು ಬಿಟ್ಟು ಕೊಡದ ಅಬ್ಬೆ ಜಲಾಯ

35-36  ಅರಬ್ಬಿ ಭೂತ  ಮತ್ತು ಬ್ರಾಂದಿ ( ಬ್ರಾಹ್ಮಣತಿ‌)

37 -40  ಅರಸು ಬಂಗಾಡಿತ್ತಾಯ ಮತ್ತು ಸೇರಿಗೆ ದೈವಗಳು

41 ಅಸುರಾಳನ್/ ಅಸುಳಾನುಂ ಮಕ್ಕಳು

42-43  ಅಂಗಕ್ಕಾರನ್ ಮತ್ತು  ಮರುಟೋಳನ್

44  ಅಂಗಾರ ಬಾಕುಡ

45 ಅಂಮಣ ಬನ್ನಾಯ

46-47  ಅಂಕೆ- ಉಮ್ಮಯ

48 ಆಚಾರಿ ಭೂತ

49  ಆಟಕಾರ್ತಿ

50   ಆಟಿ ಕಳೆಂಜ

51-53  ಆದಿ ವೇಡನ್ ಮತ್ತು ಪರಿವಾರ.

54 ಇಡಲದಜ್ಜಿ  

55  ಇಷ್ಟಜಾವದೆ 

56 ಉಗ್ಗೆದಲ್ತಾಯ 

57- 60 ಉಮ್ಮಲ್ತಿ ,ಉಮ್ಮಲಾಯ,ಬೆಮ್ಮಲ್ತಿ ಬೆಮ್ಮಲಾಯ 

61 ಉಪ್ರಝಾಸ್ಸಿ

 62 ಉಚ್ಚಬಲಿ ತೆಯ್ಯಂ

63-64 ಉರವ ಎರುಬಂಟ

65-88 ಉಳ್ಳಾಕುಲು   ಮತ್ತು ಉಳ್ಳಾಲ್ತಿ ದೈವಗಳು

89-90 ಎರು ಶೆಟ್ಟಿ( ಮಲೆ ಮುದ್ದ)

91-92  ಎಂಬ್ರಾನ್ ದೇವ- ಐಪ್ಪಳ್ಳಿ

93-99 ಏಲುವೆರ್ ಸಿರಿಕುಲು

100 ಒಕ್ಕು ಬಲ್ಲಾಳ

101-102 ಒರು ಬಾಣಿಯೆತ್ತಿ ,ನೆಲ್ಲೂರಾಯ 

 103- 105 ಓಣಂ ದೈವಗಳು

106 ಓಟೆಚರಾಯ

107: ಕಟ್ಟು ಎಡ್ತುನ್ ಕುಟ್ಟಿ

‌108 ಕಟ್ಟದಲ್ತಾಯ

‌109-110 ಕಡವಿನ ಕುಂಞ ಮತ್ತು ಕಳವಿನ ಚಿಕ್ಕ

111-112 ಕಡಂಬಳಿತ್ತಾಯ/,ಕೊಡಂಬಿಲ್ತಾಯ ಮತ್ತು ಮಲ್ಯೋಡಿತ್ತಾಯ 

113 -114 ಕನಪಾಡಿತ್ತಾಯ, ಮಗ್ರಂದಾಯ ಮತ್ತು ಪಂಬದ 

115 ಕನ್ನಡ ಕಲ್ಕುಡ

116   ಕನ್ನಡ ಬೀರ

117  ಕನ್ನಡ ಭೂತ

118-119 ಕನ್ನಲಾಯ ಮತ್ತು ಸ್ವಾಮಿ ನಂದೆದಿ

120 ಕನಿಯತಿ

121 ಕಪ್ಪಣ ಸ್ವಾಮಿ 

122 ಕರಣಿಕ / ಕಾರ್ಯಸ್ಥನ್ ತೆಯ್ಯಂ

 123-124 ಕರಿಯಣ್ಣ ನಾಯಕ, ಕೋಟಿ ನಾಯಕ

125 ಕರಿಯ ಮಲ್ಲಯ್ಯ

 126-133 ಕರಿಂತಿರಿ ನಾಯರ್ ,ಪುಲಿಯೂರ್ ಕಾಳಿ ಮತ್ತು ಪುಲಿ ದೈವಗಳು 

134 -135 ಕರ್ನಗೆ ಮತ್ತು ಮಲಾರ್ ಜುಮಾದಿ

136-137  ಕಲಿಯಾಟ ಅಜ್ಜಪ್ಪ, ಕಾಟಾಳ ಬೊಳ್ತು

138-139 ಅಲಿಖಿತ ಇತಿಹಾಸ ಸಾರುವ ಕಲ್ಕುಡ ಕಲ್ಲುರ್ಟಿ ದೈವಗಳು 

140  ಕಂಡನಾರ ಕೇಳನ್

141  ಕಂರ್ಭಿ ಬೈದ್ಯೆದಿ

142  ಕಾಜಿಗಾರ್ತಿ

143-153  ಕಾಡ್ಯನಾಟದ ದೈವಗಳು 

154- 155  ಕಾಡೆದಿ  ಮತ್ತು ಕಾಡ್ತಿಯಮ್ನ

156-157 ಅತಿಕಾರೆ ಬೆಳೆಯನ್ನು ತಂದ ಕಾನದ ಕಟದರು

158-160 ಕಾನಲ್ತಾಯ ಮತ್ತು ಪರಿವಾರ ದೈವಗಳು

161-162 ಕಾಯರ್ತಾಯ ಮಾದ್ರಿತ್ತಾಯ

163-167 ಕಾರಿ ಕಬಿಲ ದೈವಗಳು 

168 ಕಾಳರಾತ್ರಿ 

169-172 ಕಾಳರಾಹು,ಕಳರ್ಕಾಯಿ ,ಕುಮಾರ ಸ್ವಾಮಿ‌ ಕನ್ಯಾಕುಮಾರಿ 

173-178  ಕಾಂತಾ ಬಾರೆ ,ಬೂದಾ ಬಾರೆ , ಅಚು ಬೈದ್ಯೆತಿ ,ಪುಲ್ಲ ಪೆರ್ಗಡ್ತಿ ,ಉಳ್ಳಾಯ ,ಸಾರಮಾನ್ಯ ದೈವಗಳು 

 179 ಕಾಂತು ನೆಕ್ರಿ ಭೂತ

180  ಕಿನ್ನಿದಾರು

181 ಕೀಳು ದೈವ

182-183 ಮದುಮಕ್ಕಳ ರೂಪದಲ್ಲಿ ಕಂಗೊಳಿಸುವ ಕುಕ್ಕೆತ್ತಿ ಬಳ್ಳು ದೈವಗಳು 

184-185 ಕುಜುಂಬ ಕಾಂಜವ ಮತ್ತು ಕಾಚು ಕುಜುಂಬ  ದೈವಗಳು

186-187  ಕುಟ್ಟಿಚ್ಚಾತ್ತನ್  ಮತ್ತು ಪಮ್ಮಚ್ಚು

188  ಕುಡಿ ವೀರನ್ 

189  ಕುದುರೆತ್ತಾಯ / ಕುದುರೆ ಮುಖ ದೈವ

‌ 190-191  ಕುರವ ಮತ್ತು ಸತ್ಯಂಗಳದ ಕೊರತಿ

192  ಕುರುವಾಯಿ ದೈವ

‌193- 199   ಕುಲೆ ಭೂತಗಳು - ತುಳುನಾಡಿನ ವಿಶಿಷ್ಟ ದೈವಗಳು

‌200 ಕುಂಞಮ್ಮ ಆಚಾರ್ದಿ

‌201   ಕುಂಞಾಳ್ವ ಬಂಟ

‌202   ಕುಂಞಿ ಭೂತ

‌203 ಕುಂಞಿ ರಾಮ ಕುರಿಕ್ಕಳ್

204 -208  ಕುಂಜಿರಾಯ ದೈವಗಳು

209-210 ಕುಂಜಿ ಮತ್ತು ಅಂಗಾರ ದೈವಗಳು

211  ಕುಂಜೂರಂಗಾರ

‌212 ಕುಂಟಲ್ದಾಯ

‌213-214  ಕುಂಟುಕಾನ  ಮತ್ತು ಕೊರವ ದೈವಗಳು

‌215-216 ಕುಂಡ - ಮಲ್ಲು ದೈವಗಳು 

217  ಕುಂಡೋದರ

218--221  ಕೆಂಚಣ್ಣ ಕರಿಯಣ್ಣ ಪಾಪಣ್ಣ ಮತ್ತು ಲಕ್ಷ್ಮೀ ನರಸಿಂಹ

222-223  ಕೇಚ ರಾವುತ ಮತ್ತು ರೇವಂತ 

‌224  ಕೇತುರ್ಲಾಯ

 225  ಕೊಟ್ಟೆದಲ್ತಾಯ

226-228  ಕೊಡಮಣಿತ್ತಾಯ,ವೈದ್ಯನಾಥ ,ಕುಡುಮದಾಯ ಮತ್ತು ಕುಕ್ಕಿನಂತಾಯ ದೈವಗಳು

239 ಕೊನ್ನೊಟ್ಟು ಕಡ್ತ

‌230-231   ತುಳುನಾಡಿನ ಜನಾನುರಾಗಿ ದೈವ ಕೊರಗ ತನಿಯ  ಮತ್ತು  ಮೈರೆ ಕೊರತಿ 

‌232  ಕೊರತಿ 

‌233  ಕೊಲ್ಲಿ ಕುಮಾರ ಮತ್ತು ಕೊಲ್ಯತ್ತಾಯ

234-235  ಕೊಂಡಾಣದ ಬಂಟ ಮತ್ತು ತಂಕರು ಮೂಲ್ಯೆದಿ

236: ಅಪ್ರತಿಮ ವೀರ ಕೋಚು ಮಲ್ಲಿ 

237-239  ತುಳುನಾಡು ಬೆಳಗಿದ ಅವಳಿ ವೀರರು : ಕೋಟಿ ಚೆನ್ನಯರು ಮತ್ತು ದೇಯಿ ಬೈದ್ಯೆತಿ 

‌240-241  ಅಪ್ರತಿಮ ಸಾಹಸಿ ಕೋಟೆದ ಬಬ್ಬು ಮತ್ತು ಕಚ್ಚೂರ ಮಾಲ್ದಿ

‌242:  ಕೋಟ್ರ ಗುತ್ತಿನ ಬಬ್ಬು 

‌243-244  ಕೋಟೆರಾಯ ಮತ್ತು ಕೋಟೇಶ್ವರ ದೈವಗಳು

245   ಕೋರಚ್ಚನ್ 

‌246   ಕೋಲು ಭಂಡಾರಿ

247    ಕೋಳೆಯಾರ ಮಾಮ

248  ಗಣಪತಿ ಕೋಲ

249  ಗಂಗೆ ನಾಡಿ ಕುಮಾರ ,( ಓಡಿಲ್ತಾಯ)

250-251  ಗಂಡ ಗಣಗಳು ಮತ್ತು ಡೆಂಜಿ ಪುಕ್ಕೆ 

252  ಗಂಧರ್ವ ದೈವಗಳು

253    ಗಿಳಿರಾಮ

254   ಗಿಳಿರಾವಂತ

255-256  ಗಿರಾವು ಮತ್ತು ಕೊಡೆಕಲ್ಲಾಯ

257  ಗುರು ಕಾರ್ನವೆರ್ 

258  ಗುರುನಾಥನ್ 

259-275 ಗುಳಿಗ ಮತ್ತು ಸೇರಿಗೆ  ದೈವಗಳು

 276-300  ಚಾಮುಂಡಿ ಮತ್ತು ಸೇರಿಗೆ ದೈವಗಳು 

301-302 ಚಾವುಂಡೇಶ್ವರ ಮತ್ತು ಚಂಡಿಕೇಶ್ವರ 

303 -313   ಚಿಕ್ಕು/ ಚಿಕ್ಕಮ್ಮ  ಪರಿವಾರ ದೈವಗಳು

 314-318' ಐವರು  ಚಿನಿಕಾರ/ಚೀನೀ ಭೂತಗಳು

319 ಚೆನ್ನಿಗರಾಯ

320-322' ಚೆಮ್ಮರತಿಮತ್ತು ಪಡೆವೀರನ್ ದೈವಗಳು

323  ಜಟಾಧಾರಿ 

324  -334  ಜಟ್ಟಿಗ  ದೈವಗಳು

(ಜೈನ ಜಟ್ಟಿಗ ಕೋಟೆ ಜಟ್ಟಿಗ ನೆತ್ರಾಣಿ ಜಟ್ಟಿಗ ಹೊಗೆವಡ್ಡಿ ಜಟ್ಟಿಗ ಅರಮನೆ ಜಟ್ಟಿಗ ಇತ್ಯಾದಿ) 

335-337 ಜಮೆಯ- ಜಮಯತಿ ,ಬಡೆದಿ ದೈವಗಳು

338  ಜಂಗ ಬಂಟ

339 ಜಾನು ನಾಯ್ಕ   

340  ಜಾರಂದಾಯ

341-342  ಜಾಲ ಬೈಕಾಡ್ತಿ/ ಜಾಲ ಕೊರತಿ ಮತ್ರು ಅಂಗಾಡಿ ಕೊರತಿ ದೈವಗಳು 

343   ಪನ್ನೆ ಬೀಡಿನ ಜಾಲ್ಸೂರಾಯ

344-345  ಇರ್ವೆರ್ ಜೋಕುಲು ದೈವೊಲು

346 ಜೈನ ಗುಜ್ಜಾರ್ಲು

347  ಜೈನ ಭೂತ 

348  ತಪ್ಪೇದಿ/ ತಪ್ಪೆದಿ 

349 ತನ್ನಿಮಾಣಿಗ 

 350-352  ತಂತ್ರಿಗಣಗಳು

353 ತಿಮ್ಮಣ್ಣ ನಾಯಕ

354 -356ತೆಕ್ಕನ್ ಕರಿಯಾತನ್, ಕನ್ನಿಕ್ಕೊರುಮಗನ್ ಮತ್ತು ಕೈಕೋಲನ್ ತೆಯ್ಯಂ

357 ತೋಡ ಕುಕ್ಕಿನಾರ್ 

358  ದಾರಮ್ಮ ಬಳ್ಳಾಲ್ತಿ 

359-362  ದಾರು ಕುಂದಯ ದೈವಗಳು 

363   ದೀಪದ ಮಾಣಿ

364-365   ದುಗ್ಗಲಾಯ ಮತ್ತು ಸುತ್ತು ಕೋಟೆ ಚಾಮುಂಡಿ 

366   ದೂಮ

367  ದೂಧುರ್ಮ / ದೂರ್ದುಮ 

368-369  ದೆಸಿಲು ಮತ್ತು ಕಿಲಮರತ್ತಾಯ ದೈವಗಳುಬ

370 ದೇಬೆ ದೈವ 

371-372   ದೇರೆ ಮತ್ತು  ಮಾನಿ ದೈವಗಳು

373 ದೇವಾನು ಪಂಬೆದಿಯಮ್ಮ

374 ದೇಯಿ ಬೈದೆತಿ

375-376 ದೇಸಿಂಗ ಉಳ್ಳಾಕುಲು ಮತ್ತು ,ಕೋಟೆದಾರ್

 377--380; ದೈವ ಸಾದಿಗೆ ಒಲಿಪ್ರಾಂಡಿ , ,ದೈವನ ಮುಟ್ನಾಯೆ ,ಅಡ್ಯೊಲ್ತಾಯೆ

381   ದೈವಂತಿ

382-396 ಧೂಮಾವತಿ ಮತ್ತು ಸೇರಿಗೆ ದೈವಗಳು 

397 -400 ನಂದಿ ಹೆಸರಿನ ದೈವಗಳು 

401-404  ನರಿ ತೆಯ್ಯಂ,ನರಿ ಪೂದ ಮತ್ತು ಸೇರಿಗೆ ದೈವಗಳು 

405-406  ನಂದಿಗೆನ್ನಾಯ ಮತ್ತು ಬ್ರಾಣ ಭೂತ

407-409  ನಾಗ ಕನ್ನಿಕೆ  ಮತ್ತು ನಾಗರಾಜರು 

410   ನಾಗ ಬ್ರಹ್ಮ 

411 ನಾಗ ಭೂತ 

412-418    ನಾಗ ಬ್ರಹ್ಮ ಮಂಡಲದ ದೈವಗಳು

419-420 ನಾರಳ್ತಾಯ ಮತ್ತು ಭೂತರಾಜ 

421  ನಾಲ್ಕೈತಾಯ

422-423  ನೀಚ ತನಿಯ ಮತ್ತು ಒಂಟಿ ಕಾಲಿನ ಬಬ್ಬರ್ಯ 

424-425 ನುರ್ಗಿ‌ಮದಿಮಾಲ್ ಮತ್ತು ದುರ್ಗಿ ಮದಿಮಾಲ್ 

426   ನೇರಳತ್ತಾಯ

427-428   ನೈದಾಲ ಪಾಂಡಿ  ಮತ್ತು ಮಹೇಶ್ವರನ್ ದೈವಗಳು

429 ಪಟ್ಟಾರ್ ತೆಯ್ಯಂ

430 ಪಟ್ಟೋರಿತ್ತಾಯ

431 ಪಡೆ ಬೀರ ಕಣ್ಣಂಡ ದೊಡ್ಡಯ್ಯ 

432-433 ಪಡ್ಕಂತಾಯ ಮತ್ತು  ಗೆಂಡಕೇತ್ರಾಯ

434 ಪತ್ತೊಕ್ಕೆಲು ಜನನಂದ ದೈವ

435-436 :ಪನಯಾರ್  ಮತ್ತು ಸಂಪ್ರದಾಯ ದೈವ

437:ಪಯ್ಯ ಬೈದ್ಯ

438-443'ಪಯ್ಯಂಬಿಲ್ ಚಂದು ತಚ್ಚೋಳಿ ಒದೆನನ್ನ ಮತ್ತು ಪರಿವಾರ

444-445  ಪರವ  ಮತ್ತು ಪರಿವಾರ ನಾಯಕ

446 ಪಂಜಿ ಭೂತ

 447  -466 ಪಂಜುರ್ಲಿ ಮತ್ತು ಸೇರಿಗೆ ದೈವಗಳು

467 ಪಾಣರಾಟ

468 ಪಿಲಿ ಭೂತ 

469 -471  ಪುದರ್ ಚಿನ್ನ ಬಂಟ ಮತ್ತು  ಪಿಲೆ ಪೆಲತ್ತಿ ದೈವಗಳು

472  ಪುದ  ಮತ್ತು ಪೋತಾಳ‌

473- 490 ಪುರಾಣ ದೇವತೆಗಳು ಮತ್ತು ಭೂತ ತೆಯ್ಯಂ ಗಳು

491-501 ತುಳುನಾಡಿನ ಪುರುಷ ಭೂತಗಳು 

502  ಪುಲಂದಾಯ ಬಂಟ

503 ಪುಲಿಮರಂಞ ತೊಂಡನ್ 

504 -511   ಪುಲಿಯೂರ್ ಕಾಳಿ  ಪುಳ್ಳಿಕರಂಕಾಳಿ,ಕರಿಂತಿರಿ ನಾಯರ್ ಮತ್ತು ಐವರು ಹುಲಿ ದೈವಗಳು

512  ಪೆರಿಯಾಟ್ ಕಂಡನ್ 

513  ಪೆರುಂಬಳಯಚ್ಚನ್

514  ಪೊಟ್ಟನ್ 

515-  521 ಪೊನ್ನಂಗಾಲತಮ್ಮೆ  ಮತ್ತು ಆರು  ಸಹೋದರರು

522 ಪೊನ್ವಾನ್ ತೊಂಡಚ್ಚನ್

523-525 ಪೊಸಮಹರಾಯ ,ಉಳ್ಳಾಲ್ತಿಯರು ಮತ್ತು ಮಾಡ್ಲಾಯಿ 

526 -536 ಪೋಲೀಸ್,  ಕಳ್ಳ ,ಶಾನುಭಾಗ,ಪಟೇಲ, ಗುರಿಕ್ಕಾರ,ತಿಗಮಾರೆರ್ ,ಬಲಾಯಿಮಾರೆರ್,ಸೇನವ ,ಕಡೆಂಜು ಬಂಟ,ಬಂಕಿನಾಯ್ಕ  ದೈವಗಳು

537 ಪೋಲೀಸ್ ತೆಯ್ಯಂ

 538-539 ಬಚ್ಚನಾಯಕ

540 -544 5ಬಬ್ಬರ್ಯ ಮತ್ತು ಸೇರಿಗೆ ದೈವಗಳು 

545-548 ಬಲವಾಂಡಿ ,ಕಂಡೆತ್ತಾಯ , ಉಳ್ಳಾಯ ,ಕುರಿಯಾಡಿತ್ತಾಯ

549  ಬಲ್ಲ ಮಂಜತ್ತಾಯ

550-555 ಬಲ್ಲಾಳ ಬಲ್ಲಾಳ್ತಿ ಮತ್ತು ಇತರ ದೈವಗಳು

556 ಬಲೀಂದ್ರ 

557  ಬಸ್ತಿನಾಯಕ

558 ಬಂಕಿ ನಾಯ್ಕ 

559 ಬಂಡಿ ರಾಮ‌

560 ಬಾಕುಡತಿ

561 ಬಾಲೆ ಕನ್ಯಾಪು

562 -606 ಬ್ರಾಹ್ಮಣ ಮೂಲದ ದೈವಗಳು

607 ಬಿರ್ಮಣಾಚಾರಿ 

608-609   ಬಿಲ್ಲಾರ ಬಿಲ್ಲಾರ್ತಿ ದೈವಗಳು

610 ಕುಂಬಳೆ ಸಿಮೆಯ ಪಟ್ಟದ ದೈವ ಬೀರಣ್ಣಾಳ್ವ

611 ಬೀರ್ನಾಚಾರಿ

612-614 ಬೂಡು ಬೊಮ್ಮಯ್ಯ ಮತ್ತು ಕತ್ತಲೆ ಬೊಮ್ಮಯ್ಯ,ಪಟ್ಟಂತರಸು

 615-616 ಬೆರ್ಮೆರ್,ಕಂಬೆರ್ಲು ಮತ್ತು ಹಕ್ಕೆರ್ಲು 

617-618 ಬೆಲೆಟಂಗರಜ್ಜ ಮತ್ತು ತಂಗಡಿ

619-620 ಬೇಡವ ಮತ್ತು ಬೇಟೆಗಾರ ದೈವಗಳು

621 ಬೊಟ್ಟಿ ಭೂತ

622 -625:ಬೋವ ದೈವಗಳು .

626 ಬೈನಾಟಿ 

627   ಬೈಸು ನಾಯಕ

628-690 ಭಗವತಿ ದೈವಗಳು

691 ಭಟಾರಿ ದೈವ 

 692-694   ಭದ್ರಕಾಳಿ ,ಭದ್ರಕಾಳಿ ಭಗವತಿ ಮತ್ತು ವಣ್ಣಾತಿ ದೈವ

695 - 696  ಭದ್ರಕಾಳಿಮತ್ತು ಬೊಳ್ಳಿ ಬಿಲ್ ಅಯ್ಯಪ್ಪ 

697-698 ಭಂಡಾರಿ ಮತ್ತು ಪಿಲಡ್ಕತ್ತಾಯ‌

699 ಮಡಿಕತ್ತಾಯ

700-701 ಮದನಕ್ಕೆ ದೈಯಾರ್ ,ಕಳಿಗೋಂಕು ಮಾಬೀರರು

702-703'  ಮದಂಗಲ್ಲಾಯ ಮತ್ತು  ಕಡಂಗಲ್ಲಾಯ 

704-705 ಮದಿಮಾಯ ಮದಿಮಾಲ್

706 ಮನಕ್ಕಡನ್ ಗುರುಕ್ಕಳ್ 

707 ಮನಕ್ಕೊಟ್ಟ್ ಅಮ್ಮ

708- 716 ಮನ್ಸರ  ದೈವಗಳು

717 ಮರಾಂಗಣೆ

718;ಮರುತಿಯೋಡನ್ ಕುರಿಕ್ಕಳ್

719-720  ಮಲಯಾಳ ಬ್ರಹ್ಮ ಮತ್ತು ಮಲ್ಯಾಳ ಭಟ್ರು 

721 ಮಲರಾಯ

722  ಮಲೆಕುಡಿಯರ ಅಯ್ಯಪ್ಪ 

723-726: ಮಲೆ ತಮ್ಮಚ್ಚ ಮತ್ತು ಪರಿವಾರ 

727 ಮಲೆರಾಯ ಮತ್ತು ಪರಿವಾರ 

 728 ಮಲೆಸಾವಿರ ದೈವ

729-730 ಮಂಗಳೆರ್ ಮತ್ತು  ಗುರು ಮಂಗೞೆರ್ 

731-733 ಮಂತ್ರ ಗಣ ಮಂತ್ರ ದೇವತೆ ಮಂತ್ರ ಮೂರ್ತಿ ದೈವಗಳು

734 ಮಂದ್ರಾಯ

735 ಮಹಾಕಾಳಿ

736  ಮಾಂಕಾಳಿ ದೈವಗಳು

737-741  ಮಾಯಂದಾಲ್ ಮತ್ತು ಪರಿವಾರ  

742-743  ಮಾಯೊಲು ಮಾಯೊಲಜ್ಜಿ.

744-757 ಮಾರಿ ಭೂತಗಳು

758-760 ಮಾಲಿಂಗ ರಾಯ ದಂಡಪ್ಪ ನಾಯಕ ಮಂಞ ನಾಯಕ ದೈವಗಳು‌

761 ಮಾಸ್ತಿಯಮ್ಮ 

762-763  ಮಿತ್ತೂರು ನಾಯರ್ ದೈವಗಳು

764 ಮಿಲಿಟ್ರಿ ಅಜ್ಜ 

765 ಮೀನು ಗಾರ್ತಿ

766  -780  ಮುಗೇರ ದೈವಗಳು 

781 ಮುಡದೇರ್ ಕಾಳ ಭೈರವ 

782-784  ಮುತ್ತಪ್ಪನ್ ,ತಿರುವಪ್ಪನ್ ,ಮೂಲಂಪೆತ್ತಮ್ಮ

785  ಮುತ್ತು ಮಾರಿಯಮ್ಮ  

786 ಮುನಿಸ್ವಾಮಿ ದೈವ

787 ಮುವ್ವೆ ಮೂವ,ಮೂವಿಗೆ ವಾತೆ 

788-813 ಮುಸ್ಲಿಂ ಮೂಲದ ದೈವಗಳು 

814  ಮೂಜಿಲ್ನಾಯ 

815-816  ಮೂಡೊಟ್ನಾರ್,ಪಡುವೆಟ್ನಾರ್ 

817  ಮೂರಿಲು

818  ಮೂರ್ತಿಲ್ಲಾಯ

818-900 ಮೂಲ ಪುರುಷ ದೈವಗಳು 

901-1055 ಮೆಕ್ಕೆ ಕಟ್ಟಿನ ಉರುಗಳು 

1056-1057  ಮೇರ ಮೇತಿಯರು

1058  ಮೇಲಂಟಾಯ 

1059  ಮೈಯೊಂದಿ

1060   ಮೈಸಂದಾಯ

1061-1066  ಮೋಂದಿ ಕೋಲ‌

1067 -1117 ಯಕ್ಷ ಯಕ್ಷಿಯರು ಮತ್ತು ಶ್ರೀಲಂಕಾದ  ಯಕುಮ ಕೋಲ‌ 

1118-1119  ರಕ್ತೇಶ್ವರಿ ಮತ್ತು ಬವನೊ

1120  ರಾಜನ್ ದೈವಗಳು

1121-1123  ವಣ್ಣಾತನ್ ವಯನಾಡು ಕುಲವನ್,ಕಣ್ಣನ್ 

1124 ವಡ್ಡಮರಾಯ

1125-1126  ವಿದೇಶೀ ಕಾಫ್ರೀ ದೈವಗಳು

1127-1128 ವಿಷ್ಣು ಮೂರ್ತಿ ಮತ್ತು ಪಾಲಂದಾಯಿ ಕಣ್ಣನ್

1129-1130  ವೀರಭದ್ರ/ ವೈರಜಾತ್,ವೀರನ್ 

1131-1134 ವೀರ ವಿಕ್ರಮೆರ್ ಮತ್ತು ಇರ್ವೆರ್ ಬೈದ್ಯೆರ್

1135  ವೆಳ್ಳು ಕುರಿಕ್ಕಳ್

1136  ವೇಟಕ್ಕೊರುಮಗನ್

1137  ವೈದ್ಯಾಚಾರ್ಯ/ ವೈದ್ಯರಾಜನ್ 

1138  ಶಂಕರ ಬಡವಣ

1139-1141 ಶಾಸ್ತಾವು,ಕರಿ ಭೂತ,ಕೋಮಾಳಿ

1142  ಶಿರಾಡಿ ಭೂತ.

1143  ಶಿವರಾಯ 

1144  ಶ್ರೀಮಂತಿ ದೈವ

1145-1146 ಸತ್ಯ ಮಾಗಣ್ತಿ ಮತ್ತು ಕಲ್ಲು ದೈವ 

1147-1151  ಬಾಕುಡರ ಸರ್ಪಕೋಲದ ದೈವಗಳು

1152  ಸರ್ಪಂಕಳಿ

1153  ಸರ್ಪಂತುಳ್ಳಲ್

1154  ಸಂನ್ಯಾಸಿ ಮಂತ್ರ ದೇವತೆ

1155 ಸಾದಿಕರಾಯ ಮತ್ತು ಹಾದಿಕಾರಾಯ 

1156  ಸಾರ ಮಾಂಕಾಳಿ

1157 ಸ್ವಾಮಿ ದೈವ 

1158-1165  ಸೀತಾಯುಂ ಮಕ್ಕಳುಂ,ದೈವತಾರ್ ಮತ್ತು ಪರಿವಾರ

1166  ಸುಬ್ಬರಾಯ

1167 ಸೋಣದ ಜೋಗಿ

1168 ಸೋಣದಜ್ಜಿ/ ತಡ್ಯದಜ್ಜಿ 

1169  ಹನುಮಂತ/ ಸಾರ ಪುಲ್ಲಿದಾರ್ ದೈವ

1170 ಹಳ್ಳತ್ತಾಯ ಮತ್ತು ಅಲ್ನತ್ತಾಯ 

1171  ಹಳೆಯಮ್ಮ

1172-1181  ಹಾಯ್ಗುಳಿ ಮತ್ತು ಪರಿವಾರ 

1182-1201  ಹಿರಿಯಾಯ ದೈವಗಳು

1202 -1203  ಹುಲಿ ಮತ್ತು ಹಸರ ತಿಮ್ಮ 

1204  ಹೊಸಮ್ಮ ,

1205 ಹೊಸಳಿಗಮ್ಮ

1206-1207   ಹೌಟಲ್ದಾಯ  ಮತ್ತು ಮಾಳದ ಕೊರಗ 


ಅನುಬಂಧ

1 ತುಳು ಕಲಿಕಾ ಪಠ್ಯ

2 ತಿಗಳಾರಿ( ತುಳು) ಲಿಪಿ- ಒಂದು ವಿಶ್ಲೇಷಣಾತ್ಮಕ‌ ಅಧ್ಯಯನ 

3 ಭೂತಾರಾಧನೆ ಮತ್ತು ಯಕ್ಷಗಾನ- ಒಂದು ತೌಲನಿಕ ನೋಟ


4 ತುಳುವ ಸಂಸ್ಕಾರಗಳು

5 ಕನ್ನಡ ತುಳು ಜನಪದ ಕಾವ್ಯಗಳಲ್ಲಿ ಸಮಾನ ಆಶಯಗಳು‌

6 ತುಳು ಭೂತಗಳ ನಡುವೆ ಗೌತಮ‌ ಬುದ್ಧನೂ ಇದ್ದ 

7 ಸಾಂಸ್ಕೃತಿಕ‌ ಪದ ಕೋಶ 

8  ಕ್ಷೇತ್ರ ಕಾರ್ಯದ ವಿವರ

ಅತ್ಮ‌ಕಥೆಯ ಬಿಡಿ ಭಾಗಗಳು - ನವ ಚೇತನ ಎಂವ ಚೈತನ್ಯದ ಚಿಲುಮೆ


 ಆತ್ಮ‌ಕಥೆಯ ಬಿಡಿ ಭಾಗಗಳು 


ಅನುಭವ ಆಗಲು ಏನು ಮಾಡಬೇಕು ?


ಹೌದು..ಹೀಗೊಂದು ತಲೆಬಿಸಿ ಮಾಡ್ತಾ ಇದ್ದ ಕಾಲ ಒಂದಿತ್ತು..


ನಾನು ಎರಡನೆಯ ವರ್ಷ ಬಿಎಸ್ ಸಿ ಪದವಿ ಓದುತ್ತಿರುವಾಗಲೇ ನನಗೆ ಮದುವೆಯಾಯಿತು..ಚಿಕ್ಕಂದಿನಿಂದಲೂ ಬರವಣಿಗೆಯ ಹವ್ಯಾಸ ಇದ್ದ ನನ್ನ ಬರಹಗಳು ಒಂದೊಂದಾಗಿ ಹೊಸ ದಿಗಂತ ಉದಯವಾಣಿ ಮಂಗಳ ಮೊದಲಾದ ಪತ್ರಿಕೆಗಳಲ್ಲಿ ಪ್ತಕಟವಾಗತೊಡಗಿದ್ದವು..


ದಕ್ಷಿಣ ಕನ್ನಡದ ಹಿರಿಯ ಸಾಹಿತಿ ಗಂಗಾ ಪಾದೇಕಲ್ಲು ನನ್ನ ಗಂಡ ಪ್ರಸಾದರ ಸಂಬಂಧಿ..ಒಂದು ದಿನ ಯಾವುದೋ ಕೌಟುಂಬಿಕ ಕಾರ್ಯಕ್ರಮದಲ್ಲಿ ಭೇಟಿಯಾದವರು ನನ್ನ ಬರವಣಿಗೆಗೆ ಮೆಚ್ಚುಗೆ ಸೂಸಿ ಬರಹಕ್ಕೆ ಅನುಭವದ ತಳಹದಿ ಇದ್ದರೆ ಇನ್ನಷ್ಡು ಗಟ್ಟಿಯಾಗುತ್ತದೆ ಎಂದಿದ್ದರು


ಈ ಅನುಭವವನ್ನು ಪಡೆಯುವುದು ಹೇಗೆ ಎಂಬುದೊಂದು ತಲೆಬಿಸಿ ಶುರು ಆಯಿತು ನನಗೆ.ಚಿಕ್ಕಂದಿನಲ್ಲಿ ಶಾಲಾ ಪ್ರಬಂಧದಲ್ಲಿ  ಪ್ರವಾಸ ಮಾಡಿದರೆ ಬೇರೆ ಬೇರೆ ಊರಿನ ಜನರ ಸಂಸ್ಕೃತಿಯ ಪರಿಚಯ ಆಗುತ್ತದೆ.ಅನುಭವ  ದೊರೆಯುತ್ತದೆ ಎಂದು ಬರೆದಿದ್ದೆ.ಅದು ನೆನಪಾಯಿತು.


ನೆನಪಾಗಿಯೂ ಏನೂ ಪ್ರಯೋಜನವಿಲ್ಲದಾಯಿತು..

ಮೊದಲಿಗೆ ಪ್ರವಾಸ ಮಾಡುವಷ್ಟು ದುಡ್ಡು ನಮ್ಮಲ್ಲಿ ಇರಲಿಲ್ಲ.ಅಲ್ಲದೆ ನಾನು ವಿದ್ಯಾರ್ಥಿಯಾಗಿದ್ದು ಪ್ರವಾಸ ಹೋಗಲು ರಜೆಯದ್ದೂ ಸಮಸ್ಯೆಯೇ..ಎಲ್ಲಕ್ಕಿಂತ ಹೆಚ್ಚು ಟ್ರಾವೆಲಿಂಗ್ ಸಿಕ್ ನೆಸ್ ಇರುವ ನನಗೆ ಪ್ರವಾಸ ಬಹಳ ಪ್ರಯಾಸವಾಗಿ ಪರಿಣಮಿಸುತ್ತದೆ.ಹಾಗಾಗಿ ಪ್ರವಾಸದತ್ತ ನನಗೆ ಒಲವಿರಲಿಲ್ಲ..


ಆದರೆ ಹಿರಿಯ ಸಾಹಿತಿ ಗಂಗಾ ಪಾದೇಕಲ್ಲು ಅವರು ಹೇಳಿದ  ಮಾತು ಸದಾ ಕೊರೆಯುತ್ತಿತ್ತು.ಅನುಭವ ಇಲ್ಲದೆ ಬರಹ ಗಟ್ಟಿತನ ಹೊಂದುದಿಲ್ಲ ಎಂದು..


ಹಾಗೆಂದು ನಾನು ಪ್ರವಾಸ ಹೋಗಿಯೇ ಇಲ್ಲವೆಂದಲ್ಲ..ಸುಮಾರು 25-26 ವರ್ಷಗಳ ಮೊದಲು ನಿಜಾಮುದ್ದೀನ್ ನಲ್ಲಿ ನಡೆದ ರಾಷ್ಟ್ರ ಸೇವಿಕ ಸಂಘದ ಸಮ್ಮೇಳನದಲ್ಲಿ ಭಾಗವಹಿಸಲು ಹೋಗಿದ್ದೆ.ಹಾಗೆ ಹೋದವರೆಲ್ಲ ಅಗ್ರ ಡೆಲ್ಲಿ ಹರಿದ್ವಾರ ಹೃಷಿಕೇಶ ಕಾಶಿ ಮೊದಲಾದೆಡೆ ಮೂರು ನಾಲ್ಕು ದಿನ ಸುತ್ತಾಡಿ ಬಂದಿದ್ದೆವು


ಅಂತೆಯೇ ಬೆಂಗಳೂರಿನ ಎಪಿಎಸ್ ಕಾಲೆಜಿನಲ್ಲಿ ಉಪನ್ಯಾಸಕಿಯಾಗಿದ್ದಾಗ ಡಿಡಿ 1 ಚಾನೆಲ್ ನವರು ಆಯೋಜಿಸಿದ್ದ ಖೇಲ್ ಖೇಲ್ ಮೇ ಬದಲೋ ದುನಿಯ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿದ್ಯಾರ್ಥಿಗಳನ್ನು ಡೆಲ್ಲಿಗೆ ಕರೆದುಕೊಂಡು ಹೋಗಿದ್ದೆ.ಆಗಲೂ ಒಂದಿನಿತು ಸುತ್ತಾಡಿದ್ದೆವು


ನಂತರವೂ ಪ್ರಬಂಧ ಮಂಡನೆಗೆ ಅಹ್ವನಿತಳಾಗಿ ಭಾರತೀಯಾರ್ ಯೂನಿವರ್ಸಿಟಿ,ಗಾಂಧಿ ಗ್ರಾಮ ? ಕೊಯಂಬತ್ತೂರು ಏಲಾಗಿರಿ ಮೊದಲಾದೆಡೆ ಹೋಗಿದ್ದು ಅಲ್ಲೂ ಸುತ್ತ ಮುತ್ತ ಸ್ವಲ್ಪ ತಿರುಗಾಡಿ ಬಂದಿರುವೆ


ಆದರೆ ಈ ಪ್ರವಾಸಗಳು ಯಾವುವೂ ನನಗೆ ಅಂಥಹ ದೊಡ್ಡ ಅನುಭವವನ್ನು ತುಂಬಿ ಕೊಡಲಿಲ್ಲವೇನೋ ಎಂದೆನಿಸ್ತದೆ


ಪ್ರವಾಸಗಳು ಅನುಭವವನ್ನು ತುಂಬಿ ಕೊಡದಿದ್ದರೂ ಬದುಕು ಮೂಟೆ ಮೂಟೆಯಾಗಿ ನಾನಾವಿಧವಾದ ಅನುಭವಗಳನ್ನು ತುಂಬಿಕೊಟ್ಟಿದೆ.

ಒಂದೊಂದು ಯೂನಿವರ್ಸಿಟಿಗೆ ಸಂದರ್ಶನಕ್ಕೆ ಹೋದಾಗ ಒಂದೊಂದು ಅನುಭವ..ನನಗೆ ಪರಿಚಯವೇ ಇಲ್ಲದವರೂ ವಿನಾಕಾರಣ ದ್ವೇಷ ಕಾರುವ ಪರಿಯಂತೂ ನನಗೆ ಅಚ್ಚರಿ ತಂದಿದೆ


ನಾನು ಯಾರ ಸುದ್ದಿಗೂ ಹೋಗದೆ ನನ್ನದೇ ವೃತ್ರಿ ಪ್ರವೃತ್ತಿ ಯಾಗಿ ಬರವಣಿಗೆಯ ಲೋಕದಲ್ಲಿ ಇರುವವಳು


ಆದರೆ ಅದೇ ಕಾರಣಕ್ಕೆ ಸ್ವಕೀಯರಿಂದ ಹಾಗೂ ಪರಕೀಯರಿಂದ ಮತ್ಸರದ ನಡೆಯನ್ನು ಎದುರಿಸಿದೆ..


ಇನ್ನು ಪುಸ್ತಕ ಬರೆಯುವುದು ಪ್ರಕಟಿಸುವುದು ಒಂದು ಚಾಲೆಂಜ್ ಅಗಿದ್ದರೆ ಬಿಡುಗಡೆಯದೇ ಒಂದು ಅನುಭವ


ಕೆಲವರಿಗೆ ಬರಹಗಾರರ ಬಗ್ಗೆ ಎಷ್ಟು ಮತ್ಸರ ಅಹಸನೆ ಇದೆ ಎಂಬುದರ ಅರಿವಾಗ ಬೇಕಾದರೆ ಪುಸ್ತಕ ಬರೆದೇ ಆಗಬೇಕು..

ಬೆಂಗಳೂರು ಹವ್ಯಕ ಸಭೆಯ ಸಂಸ್ಥಾಪಕರಾದ ಮೇಣ ರಾಮಕೃಷ್ಣ ಭಟ್ ಅವರ ಸಂಸ್ಮರಣಾ ಸಮಾರಂಭದಲ್ಲಿ ನನ್ನ ದೈವಿಕ ಕಂಬಳ ಕೋಣ ಎಂಬ ಪುಸ್ತಕ ಮಲ್ಲೇಪುರಂ ವೆಂಕಟೇಶ್ ಅವರಿಂದ ಬಿಡುಗಡೆಯಾಯಿತು..ಇಲ್ಲಿನದೊಂದು ದೊಡ್ಡ ಕಥೆಯೇ ಇದೆ


ಇದಾದ ನಂತರ ಚೊಕ್ಕಾಡಿಯಲ್ಲಿ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳ ಹಸ್ತದಿಂದ ನನ್ನ ಐದು ಪುಸ್ತಕಗಳು ಬಿಡುಗಡೆಯಾದವು..ಇಲ್ಲಿನದು ಮತ್ತೊಂದು ಕಥೆ

ಈ ನಡುವೆ ನನ್ನ ಎರಡು ಪುಸ್ತಕಗಳು ತುಳು ಅಕಾಡೆಮಿಯಲ್ಲಿ ಕಲ್ಲಡ್ಕ ಡಾ.ಕಮಲಾ ಭಟ್ ಅವರಿಂದ ಬಿಡುಗಡೆಯಾದವು..ಅಲ್ಲಿನದೂ ಮತ್ತೊಂದು ಕಥೆ


2021 ರಲ್ಲಿ ನನ್ನ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕ ಮತ್ತೆ ಬೆಂಗಳೂರಿನಲ್ಲಿ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಯವರ ದಿವ್ಯ ಹಸ್ತದಿಂದ ಬಿಡುಗಡೆಯಾಯಿತು..ಈ ಬಗ್ಗೆ ಕನ್ನಡ ಪ್ರಭ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ ವರದಿ ಪ್ರಕಟವಾಯಿತು.ಇಲ್ಲಿ ಸಭೆಯಲ್ಲಿದ್ದ ಯಾರೋ ಒಬ್ಬ ಮತ್ಸರಿಯ ಕುತಂತ್ರದಿಂದ ತಪ್ಪೇ ಮಾಡದ ಓರ್ವ  ಪತ್ರಕರ್ತರಿಗೆ ತುಂಬಾ ತೊಂದರೆ ಆಯಿತು..


ಇನ್ನು ವೃತ್ತಿ ಜೀವನದಲ್ಲೂ ನಾನಾ ಅನುಭವಗಳು..ಸಿಹಿ ಕಹಿ ಎರಡೂ ಅನುಭವಗಳೇ..

ಓದುವಾಗಲೂ ಒಂದೊಂದು ಅನುಭವ..


ನಾನು ಕಾಲೇಜಿಗೆ ಸೇರುವ ವರೆಗೆ ಪೋಲೀಸರನ್ನು ನೋಡಿರಲಿಲ್ಲ‌‌.ಸಿನೇಮವನ್ನೂ ಆ ವರೆಗೆ ನೋಡಿರದ ಕಾರಣ  ಪೋಲೀಸರ ಬಗ್ಗೆ ತಿಳಿದೇ ಇರಲಿಲ್ಲ..ಬೆಂಗಳೂರಿಗೆ ಬರುವವರೆಗೆ ಎಂದರೆ ನನಗೆ 35 ವರ್ಷ ಆಗುವವರೆಗೆ ನನಗೆ ಪೊಲೀಸ್ ಸ್ಟೇಶನ್ ,ಹೇಗಿರುತ್ತದೆ  ಕೋರ್ಟು ಹೇಗಿರುತ್ತದೆ ? ನ್ಯಾಯಾಧೀಶರು ಹೇಗಿರ್ತಾರೆ ಎಂಬ ಕಲ್ಪನೆಯೂ ಇರಲಿಲ್ಲ..


ನಿದಾನಕ್ಕೆ ಬದುಕು ಎಲ್ಲವನ್ನೂ ತೋರಿಸಿಕೊಟ್ಟಿತು. ಉಡುಪಿಯ ಬಹುಜನ ಹಿತಾಯ ವೇದಿಕೆಯ ಡಾ.ರವೀಂದ್ರನಾಥ ಶಾನುಭಾಗರಿಂದ ಅನ್ಯಾಯದ ವಿರುದ್ದ ನ್ಯಾಯಯುತವಾಗಿ ಹೋರಾಡಲು ಪ್ರೇರಣೆ ಪಡೆದೆ..

ಜಗತ್ತಿಡೀ ಅನ್ಯಾಯಕ್ಕೊಳಗಾದವರು ತುಂಬಾ ಜನ ಇದ್ದಾರೆ.ಅವರೆಲ್ಲರ ಪರ ಹೋರಾಡಲು ಸಾಧ್ಯವಿಲ್ಲದಿದ್ದರೂ ಕೊನೆಯ ಪಕ್ಷ ನನಗೆ ಕಿರುಕುಳ ಕೊಟ್ಟವರ ವಿರುದ್ಧ ಹೋರಾಡಲು ಕಲಿತೆ..

ಪೋಲೀಸರ ಭ್ರಷ್ಟಾಚಾರದ ಅರಿವಾಯಿತು..ರಕ್ಷಕರೇ ಭಕ್ಷಕರಾದರೆ ಸಾಮಾನ್ಯ ಜನರಿಗೆ ಬದುಕು ಬಹಳ ಕಷ್ಟಕರ ಎಂದೆನಿಸ್ತದೆ

ಬಸವಣ್ಣನವರು ಒಲೆ ಹತ್ತಿ ಉರಿದರೆ ನಿಲಲುಬಹುದಲ್ಲದೆ ಧರೆ ಹತ್ತಿ ಉರಿದರೆ ನಿಲಲು ಬಾರದು ಎಂದು 12 ನೆಯ ಶತಮಾನದಲ್ಲಿ ಹೇಳಿದ್ದರ ನಿಜವಾದ ಅರ್ಥ ಗೊತ್ತಾಯಿತು


ಕೇಳಬಾರದಂತ ಮಾತುಗಳನ್ನೂ ಆರೋಪಗಳನ್ನೂ ಎದುರಿಸಿರುವೆ,ಕನಸಲ್ಲೂ ಕಲ್ಪಿಸದಂತಹ ಪ್ರಶಸ್ತಿ ಪುರಸ್ಕಾರ ಗೌರವಗಳನ್ನೂ ಓದುಗರನ್ನೂ ಪಡೆದಿರುವೆ 


ಆದರೆ ಕೊಲ್ಲುವ ಪಿಶಾಚಿಗಳಿಗಿಂತ ಕಾಯುವ ದೇವರು ದೊಡ್ಡವನು..ಇನ್ನೇನು ಸೋತು ಹೋಗುವೆ ಎನ್ನುವಷ್ಟರಲ್ಲಿ ಏನೋ ಒಂದು ಬೆಳಕು ಎಲ್ಲಿಂದಲೋ  ಬಂದು ರಕ್ಷಿಸುತ್ತದೆ 


ಭವಿತವ್ಯಾಣಿ ದ್ವಾರಾಣಿ ಭವಂತಿ ಸರ್ವತ್ರ..ಆಗಲೇ ಬೇಕಾದವುಗಳಿಗೆ ಎಲ್ಲೆಡೆ ಬಾಗಿಲುಗಳು ಇರುತ್ತವೆ ಎಂದು ಕಾಳಿದಾಸ ಹೇಳಬೇಕಾಗಿದ್ದರೆ ಅವನಿಗೂ ಬದುಕಿನಲ್ಲಿ ಇಂತಹ  ಅಪಾರ ಅನುಭವಗಳು ಆಗಿದ್ದಿರಬೇಕು.


ಈಗ ಅಂದು ಗಂಗಾ ಪಾದೇಕಲ್ಲು ಅವರು ಹೇಳಿದ ಅನುಭವ ಆಗಬೇಕು ಆಗ ಬರಹ ಗಟ್ಟಿಯಾಗುತ್ತದೆ ಎಂದ ಮಾತಿನ ಸರಿಯಾದ ಅರ್ಥ ಆಗುತ್ತಿದೆ


ಅನುಭವ  ಎಲ್ಲೋ ಎಲ್ಲಿಂದಲೋ ಆಗುವದಲ್ಲ..ಬದುಕಿಗೆ ನಾವು ತೆರೆದುಕೊಂಡರೆ ಅದಾಗಿಯೇ ಆಗುತ್ತದೆ 

ಇನ್ನೂ ಆಗುವದ್ದು ತುಂಬಾ ಇರಬಹುದು


ನನ್ನ ಅನುಭವಗಳೆಲ್ಲವೂ ಕಹಿಯಾದುದಲ್ಲ..ಅದರಲ್ಕಿ ಕಹಿಗಿಂತ ಸಿಹಿಯಾದ ಸಂಭ್ರಮವೇ ಹೆಚ್ಚಿದೆ.ಕೆಲವು ಕಹಿ ಅನುಭವಗಳೂ  ಇವೆ


ನಾನು ಉಪನ್ಯಾಸಕಿಯಾದ ಕಾರಣ ಇರಬೇಕು..ನಾನು ಸದಾ ವಿದ್ಯಾರ್ಥಿಗಳ ಗೆಲುವನ್ನು ಸಂಭ್ರಮಿಸುತ್ತೇನೆ.ಅವರಿಗೆ ಬಾಷಣ ಪ್ರಬಂಧ ನಾಟಕ ಹೇಳಿಕೊಟ್ಟು ವೇದಿಕೆಯಲ್ಲಿ ಪ್ರಸ್ತುತ ಪಡಿಸಿ ಅವರ ಜೊತೆ ನಾನೂ ಸಂಭ್ರಮಿಸುತ್ತೆವೆ.ಪ್ರರಿ ವರ್ಷ ಹೊಸ ಹೊಸ ವಿದ್ಯಾರ್ಥಿಗಳು..ಹೊಸ ಹೊಸ ಅನುಭವಗಳು..ಇವರಿಗಾಗಿಯೇ ನಾಟಕ ಬರೆದು ನಾಟಕಗಾರ್ತಿ ಎನಿಸಿಕೊಂಡೆ..ನಾಟಕ ರಚನೆಯ ಬಗ್ಗೆ ಏನೊಂದೂ ಮಾಹಿತಿ ಇರದಿದ್ದರೂ ಏನೋ ನನಗರಿತಂತೆ ಬರೆದೆ .ನಿರ್ದೇಶನದ ಗಂಧ ಗಾಳಿ‌ಇರದಿದ್ದರೂ ಏನೋ ಒಂದು ನನಗರಿತಂತೆ ಮಕ್ಕಳಿಗೆ ಹೇಳಿಕೊಟ್ಟೆ..ಕೆಲವು ಬಹುಮಾನಗಳೂ ಬಂದವು..


ನನಗನಿಸಿದ್ದನ್ನು ಬರೆದು ಪತ್ರಿಕೆಗೆ ಕಳುಹಿಸಿ ಪ್ರಕಟವಾಗಿ ನಾನೂ ಒಬ್ಬ ಲೇಖಕಿ ಎನಿಸಿಕೊಂಡೆ.ನನ್ನ ಬ್ಲಾಗ್ ಬರಹಗಳ ಹೊರತಾಗಿಯೂ   ಮುನ್ನೂರರಷ್ಟು ನನ್ನ ಬರಹಗಳು ಬೇರೆ ಬೇರೆ ಪತ್ರಿಕೆಗಳಲ್ಲಿ  ವೆಬ್ ಪೋರ್ಟರ್ ಗಳಲ್ಲಿ  ಪ್ರಕಟವಾಗಿವೆ 25 ಪುಸ್ತಕಗಳೂ ಪ್ರಕಟವಾಗಿವೆ .ಬ್ಲಾಗ್ ನಲ್ಲಿ ಸಾವಿರಕ್ಕಿಂತ ಹೆಚ್ಚು ಬರಹಗಳಿವೆ

ಸುಮಾರು ಐದೂವರೆ ಲಕ್ಷ ಓದುಗರೂ ಇದ್ದಾರೆ 

ಕಣ್ಣಿಗೇ ಕಾಣಿಸದ ಸಾವಿರಾರು ಮಂದಿ ಹಿತೈಷಿಗಳಿದ್ದಾರೆ.ಅಂತೆಯೇ ಪರಿಚಯವೇ ಇಲ್ಲದಿದ್ದರೂ ದ್ವೇಷ ಸಾಧಿಸುವ ಕೆಲ ಜನರೂ ಇದ್ದಾರೆ.

ಡಾ

ಗಣೇಶಯ್ಯನರ ಕಾದಂಬರಿ ಬಳ್ಳಿ ಕಾಳಬೆಳ್ಳಿಯಲ್ಲಿ ಒಮದು ಪ್ರಮುಖ ಪಾತ್ರವಾಗಿ ಲಕ್ಷ್ಮೀ ಪೋದ್ದಾರ್ ಹೆಸರಿನ ನಿಜ ಪಾತ್ರವಾಗಿ ನನ್ನದೇ ತುಳು ಅಧ್ಯಯನದ ವಿಚಾರಗಳನ್ನು ಪ್ರಸ್ತುತ ಪಡಿಸುವ ವಿಶಿಷ್ಟ ಅನುಭವ ನನ್ನದಾಗಿದೆ 


ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕದ ಸಾವಿರಕ್ಕಿಂತ ಹೆಚ್ಚಿನ ಪುಟಗಳನ್ನು ತಿರುವಿ ಹಾಕುವಾಗ ಇದೆಲ್ಲ ನಾನು ಬರೆದದ್ದಾ ಎಂಬ ಅಚ್ಚರಿ ನನಗಾಗುತ್ತದೆ


ದೈವ ಕೃಪೆ ಎಂದರೆ ಇದೇ ಇರಬೇಕೆನಿಸುತ್ತದೆ..

ಮನುಷ್ಯ ಪ್ರಯತ್ನವನ್ನೇ ನಂಬಿದ್ದವಳು ನಾನು..ಆದರೂ ಮಂಗಳೂರು ಯೂನಿವರ್ಸಿಟಿಯ ಕನ್ನಡ ವಿಭಾಗದಲ್ಲಿ ನಡೆದ ನೇಮಕಾತಿಯ ಅಕ್ರಮ ಅನ್ಯಾಯದ ವಿರುದ್ದ ಸುಪ್ರೀಂ ಕೋರ್ಟಿನ ವರೆಗೂ ಹೋಗಿ ಸ್ಪಷ್ಟ ದಾಖಲೆ ಇದ್ದಾಗಲೂ ಸೋತ ನಂತರ ಮನುಷ್ಯ ಯತ್ನವನ್ನು ಮೀರಿದ ಏನೋ ಒಂದು ಇದೆ ಎಂಬುದು ನನ್ನ ಅರಿವಿಗೆ ಬಂದಿದೆ.ಅದು ತನಕ ನಾನು ಅದೃಷ್ಟ ದುರದೃಷ್ಟ ಎಂಬುದನ್ನು ಒಪ್ಪಿದವಳೇ ಅಲ್ಲ

ತೇನ ವಿನಾ ತೃಣಮಪಿ ನ ಚಲತಿ ಎಂಬಂತೆ ಎಲ್ಲವೂ ಅವನ ಅಣತಿಯಂತೆಯೇ ನಡೆಯುತ್ತದಾ ? 

ನನಗೆ ಗೊತ್ತಿಲ್ಲ..

ತೀರ ಸಣ್ಣ ವಯಸ್ಸಿನಲ್ಲಿಯೆ ಕ್ಯಾನ್ಸರ್ ನಂತಹ ಮಾರಕ ರೋಗಕ್ಕೆ ತುತ್ತಾಗಿ ಈ ಜಗತ್ತಿನಿಂದ ನಿರ್ಗಮಿಸಿದ ಸಹಪಾಠಿಗಳನ್ನು ಸಂಬಂಧಿಕರ  ನೆನಪಾದಾಗ ಐವತ್ತು ತಲುಪಿಸಿದ ದೇವರಿಗೆ ಕೃತಜ್ಞತೆಯನ್ನು  ಅರ್ಪಿಸಬೇಕು ಎಂದು  ನೆನಪಾಗುತ್ತದೆ 


ಹದಿನೈದು ವರ್ಷಗಳ ಹಿಂದೆ ನನಗೆ ಸರಿಯಾದ ಕೆಲಸವಿಲ್ಲ ಎಂದು ತಲೆಕೆಡಿಸಿಕೊಂಡಿದ್ದೆ.ವಯಸ್ಸು ಮೀರುತ್ತದೆ ಎಂಬ ಆತಂಕ ಕಾಡುತ್ತಿತ್ತು.ಅಂತೂ ನಾನು ಬಯಸಿದ ಸರ್ಕಾರಿ ಕಾಲೇಜು ಉಪನ್ಯಾಸಕ ಹುದ್ದೆ ದೊರೆತು ಹದಿನೈದು ವರ್ಷಗಳಾಗುತ್ತಾ ಬಂತು.ನನ್ನ ಕನಸಿನಂತೆ ಯಥೇಚ್ಛವಾಗಿ  ಭೂತ ಕೋಲ ರೆಕಾರ್ಡ್ ಮಾಡಿ ಅಧ್ಯಯನ ಮಾಡುದಕ್ಕಾಗಿಯೇ  ಬೆಳ್ಲಾರೆ ಕಾಲೇಜನ್ನು ಆಯ್ಕೆ ಮಾಡಿದೆ 

ಅದರ ಫಲ ರೂಪವಾಗಿ  ಕರಾವಳಿಯ ಸಾವಿರದೊಂದು ದೈವಗಳು ಗ್ರಂಥ ಯಶಸ್ವಿಯಾಗಿದೆ 


ಇನ್ನು ಹತ್ತು ವರ್ಷಗಳ ಸರ್ವಿಸ್ ಇದೆ ನಂತರ ಮತ್ತೆ ಭೂತಾರಾಧನೆಯ ಅದ್ಯಯನ ಮುಂದುವರಿಸಬೇಕೆಂದಿರುವೆ

ನಿವೃತ್ತಿಯ ನಂತರದ ಬದುಕಿಗೆ ಈಗಲೇ ಸಿದ್ಧತೆ ಮಾಡಿಕೊಂಡಿರುವೆ.ನಮ್ಮ ಊರು ಪುತ್ತೂರಿನಲ್ಲಿ ನವ ಚೇತನ ರಿಟೈರ್ ಮೆಂಟ್ ಟೌನ್ ಶಿಪ್ ನಲ್ಲೊಂದು ಮನೆ ನಮಗಾಗಿ ತೆಗೆದಿರಿಸಿರುವೆ.


. A resort for seniors ಆಗಿರುವ ನವ ಚೇತನದಲ್ಲಿ   ಈಗಲೂ ರಜೆಯಲ್ಲಿ ಪೇಟೆಯವೆಲ್ಲ ಜಂಜಾಟಗಳಿಂದ ಹೊರ ಬಂದು ಶಾಂತವಾಗಿ ನಾಲ್ಕು ದಿನ ಅಲ್ಲಿ ಇದ್ದು ಬರುತ್ತಿರುವೆ 


ಮುಂದಿನದು ದೈವ ಚಿತ್ತ..


ಡಾ.ಲಕ್ಷ್ಮೀ ಜಿ ಪ್ರಸಾದ್

ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್


 ಪುಸ್ತಕ ಮಳಿಗೆಯವರೊಬ್ಬರು ಪುಸ್ತಕಗಳು ಬೇಕೆಂದು ಫೋನ್ ಮಾಡಿದ್ದರು.ಮಾತಿನ ನಡುವೆ ನೀವು‌1500₹ ಕ್ಕೆ ಕೊಡ್ತಾ ಇದ್ದರೆ ನಮ್ಮಲ್ಲಿಗೆ ಬಂದು 2000₹ ಗೆ ತಗೊಳ್ತಾರಾ?  ಎಂದು ಕೇಳಿದರು..ನನಗೂ ಇದು ಹೌದೆನಿಸಿತು..

ನಾನು ಅದಕ್ಕೆ ಪರಿಹಾರ ಹೇಳಿದೆ.

ಸಧ್ಯಲ್ಲಿಯೇ ಪುಸ್ತಕಗಳು ಪ್ರಿಂಟಾಗಿ ಸಿಗುತ್ತವೆ.ಆಗ ಮುಂಗಡ ಪಾವತಿಸಿದವರಿಗೆಲ್ಲ ಕಳುಹಿಸಿಕೊಟ್ಟು ಉಳಿದ ಪುಸ್ತಕಗಳನ್ನು ಪುಸ್ತಕ ಮಳಿಗೆಗಳಿಗೆ ಕೊಡುತ್ತೇನೆ.


ನಂತರ ನಾನು ನೇರವಾಗಿ ಗ್ರಾಹಕರಿಗೆ ನೀಡುವುದಿಲ್ಲ.ಒಂದೊಮ್ಮೆ ನೀಡಿದರೆ ನಾನೂ 2000₹ ಗೇ ನೀಡುವೆ ಎಂದೆ


ಹಾಗಾಗಿ ಕಡಿಮೆ ಬೆಲೆಗೆ 1500₹ ಗೆ ಬೇಕಾದವರು ಕೂಡಲೇ ನನ್ನನ್ನು 9480516684 ಗೆ ಸಂಪರ್ಕಿಸಿ 

ಈ ತಿಂಗಳ ಕೊನೆಗೆ ಮುಂಗಡ ಪಾವತಿಸಿದವರಿಗೆಲ್ಲರಿಗೂ ಕಳುಹಿಸಿ ನನ್ನ ಸ್ವಂತಕ್ಕೆ ಕೆಲವು ಪುಸ್ತಕಗಳನ್ನು ಇರಿಸಿಕೊಂಡು ಪುಸ್ತಕ ಮಳಿಗೆಗಳಿಗೆ ಹಾಕುವೆ,ಸಾಹಿತ್ಯ ಕೇಂದ್ರ ಪುಸ್ತಕ‌ಮಳಿಗೆ ಮಂಗಳೂರು,ಪೊಪ್ಯಿಲರ್ ಬುಕ್ ಹೌಸ್,ಪುತ್ತೂರು ,ಸಪ್ನಾ,ನವಕರ್ನಾಟಕ ಮೊದಲಾದ ಪುಸ್ತಕ ಮಳಿಗೆಗಳಲ್ಲಿ  ಮುಂದಿನ ತಿಂಗಳಿನಿಂದ 2000₹ ಗೆ ಈ ಪುಸ್ತಕ ಲಭ್ಯವಾಗಲಿವೆ

ಕಾರವಾರದಿಂದ ಕೊಟ್ಟಾಯಂ  ತನಕದ ಕೊಡಗು ಸೇರಿದಂತೆ  ಕರಾವಳಿಯಲ್ಲಿ ಆರಾಧನೆ ಪಡೆವ ಕನ್ನಡ ತುಳು ,ಮಲೆಯಾಳ,ಕೊಡವ ಪರಿಸರದ 1288 ದೈವಗಳ ಮಾಹಿತಿ ಇರುವ ದೊಡ್ಡ ಗಾತ್ರದ( A4) ದಲ್ಲಿ ಸಾವಿರಕ್ಕಿಂತ ಹೆಚ್ಚು ಪುಟಗಳಿರುವ  ,ಉತ್ತಮ ಗುಣಮಟ್ಟದ 90 gsn art paper ನಲ್ಲಿ ಪ್ರಿಂಟಾಗಿರುವ ಕನ್ನಡ ಭಾಷೆಯ  ಕರಾವಳಿಯ ಸಾವಿರದೊಂದು ದೈವಗಳು ಎಂಬ ಬೃಹತ್ ಗ್ರಂಥಕ್ಕಾಗಿ  9480516684 ಅನ್ನು  ಸಂಪರ್ಕಿಸಿ 


https://youtu.be/rNK9R5zW0uA


 ಈ ಗ್ರಂಥದ ಬೆಲೆ 2000 ₹

 ಆದರೆ ಮುಂಗಡ ಬುಕ್ಕಿಂಗ್ ಶುರುಮಾಡಿದ್ದು 1500₹ ಗೆ  ನೀಡುತ್ತಿರುವೆ 

  ಪ್ರಕಟಣೆಯ ಪೂರ್ವದ ಈಗಿನ  ದರ  1500₹ + ( ರಾಜ್ಯದ ಒಳಗಡೆ) 


ಒಂದೊಂದು ದೈವದ್ದು ಒಂದೊಂದು ನುಡಿಕಟ್ಟು ,ಪುಟ್ಟು ಪುರಪ್ಪು,ವೇಷಭೂಷಣ ಅಭಿವ್ಯಕ್ತಿ..ಕೋಪ‌,ಪ್ರೀತಿ,ಅಭಯ ರಕ್ಷಣೆ ಭರವಸೆ,ನ್ಯಾಯದಾನ...


ನಿಜಕ್ಕೂ ಇದೊಂದು ಅದ್ಭುತ ಲೋಕ


ಒಳ ಹೊಕ್ಕರೆ ಹೊರ ಬರಲು ಮನಸಾಗುವುದಿಲ್ಲ


( . A4 ಸೈಜಿನಲ್ಲಿ ಒಂದು ಸಾವಿರದಷ್ಟು ಪುಟಗಳು 

ಸು 315 ಅಧ್ಯಾಯಗಳಲ್ಲಿ 1228/ ದೈವಗಳ ಮಾಹಿತಿ ಇರುವ ಬೃಹತ್ ಹೊತ್ತಗೆ ) 


ತುಳು ಸಂಸ್ಕೃತಿಯ ಹೊನ್ನ‌ ಕಿರೀಟಕ್ಕೆ ಇಟ್ಟ ನವಿಲು ಗರಿ


ಡಾ. ಲಕ್ಷ್ಮೀ ಪ್ರಸಾದ್ (ಲಕ್ಷ್ಮೀ ವಾರಣಾಸಿ) ಅವರು ಕಾಸರಗೋಡು ಜಿಲ್ಲೆಯ ಕೋಳ್ಯೂರು ಗ್ರಾಮದ ವಾರಣಾಸಿ ಮೂಲದವರು .ಇವರ ತಂದೆ ವೇದಮೂರ್ತಿ ನಾರಾಯಣ ಭಟ್ಟರು  ವಿದ್ವಾಂಸರೆಂದು ಪ್ರಸಿದ್ಧರು. ತನ್ನ ಮನೆತನವು ವೈದಿಕಾಚರಣೆಯನ್ನೇ ಹೊಂದಿದ್ದರೂ, ಕುಟುಂಬದಲ್ಲಿ ದೈವದ ಆರಾಧನೆಯನ್ನು ಮಾಡುತ್ತಿರುವುದೇಕೆ ಎಂಬ ಕುತೂಹಲವೇ ಡಾ. ಲಕ್ಷ್ಮೀ ಪ್ರಸಾದ್ ಅವರಿಗೆ ಪ್ರೇರಣೆಯಾಗಿ ಅವರು ಈ ಕುರಿತಾದ ಸಂಶೋಧನೆಗೆ ಇಳಿದರು. 


ಇದರಿಂದ ಕರಾವಳಿ ಕರ್ನಾಟಕದ ಅಂದರೆ ಅವಿಭಜಿತ ದ.ಕ.ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ ಮತ್ತು ಕೊಡಗನ್ನೂ ಒಳಗೊಂಡಂತೆ ದೈವರಾಧನೆಯ ಆಶಯ ಆಕೃತಿಯನ್ನು ನಿರಂತರ ಸಂಶೋಧಿಸಲು ಅವರು ಮುಂದಾದರು. ಈ ನಿರಂತರತೆ ಇಪ್ಪತ್ತೊಂದು  ವರುಷಗಳ ಕಾಲ ನಡೆದುದರ ಪರಿಣಾಮವಾಗಿ ಈ ಮೇಲಿನ ಪ್ರದೇಶಗಳಲ್ಲಿ ಒಟ್ಟು ಎರಡು ಸಾವಿರದ ಇನ್ನೂರ ಮೂವತ್ತು  ದೈವಗಳು ಆರಾಧಿಸಲ್ಪಡುತ್ತವೆ ಎನ್ನುವ ಸತ್ಯ ಗೋಚರಿಸಿತು.


ಹಿರಿಯ ಜಾನಪದ ತಜ್ಞರೂ ವಿದ್ವಾಂಸರೂ ಆಗಿರುವ ಪ್ರೊ| ಬಿ.ಎ.ವಿವೇಕ ರೈ ಅವರು ತಮ್ಮ ಮಹಾಪ್ರಬಂಧದಲ್ಲಿ (1985) ಇನ್ನೂರ ಅರುವತ್ತೇಳು  ,ಇನ್ನೋರ್ವ ಜಾನಪದ ವಿದ್ವಾಂಸ ಪ್ರೊ| ಚಿನ್ನಪ್ಪಗೌಡರು ಇದನ್ನು ಪರಿಷ್ಕರಿಸಿ  ತಮ್ಮ ಮಹಾಪ್ರಬಂಧದಲ್ಲಿ (1990) ಮುನ್ನೂರು , ಮುಂದೆ ರಘುನಾಥ ವರ್ಕಾಡಿಯವರು ತಮ್ಮ ‘ಕಂಡಂಬಾರು ಮಲರಾಯ’ ಕೃತಿಯಲ್ಲಿ (2011) ನಾಲ್ಕು ನೂರ ಏಳು ದೈವಗಳ ಹೆಸರುಗಳನ್ನು ಪಟ್ಟಿ ಮಾಡಿದ್ದಾರೆ.


ಆಮೇಲೆ ಈ ಬಗ್ಗೆ ಸಂಶೋಧನೆ ನಡೆದದ್ದು ಕಡಿಮೆ ಅಥವಾ ಈ ಅರಿವಿನಲ್ಲೆ ಗಿರಕಿ ಹೊಡೆದದ್ದೇ ಹೆಚ್ಚು. ಆದರೆ ಡಾ. ಲಕ್ಷ್ಮಿ ಪ್ರಸಾದ್ ಅವರ ಆಸಕ್ತಿ ಅಥವಾ ಜಿಜ್ಞಾಸೆಯು ತಾವು ರಚಿಸಿದ ಮಹಾಪ್ರಬಂಧದ ಹೊತ್ತಿಗೆ (2007) ಸಾವಿರದ ನಾಲ್ಕು ನೂರ ಮೂವತ್ತೈದು ದೈವಗಳ ಕ್ಷೇತ್ರ ಕಾರ್ಯದ ತನಕ ಹಬ್ಬಿತು. ಇದೀಗ ಅವರು ಎರಡು ಸಾವಿರದ ಇನ್ನೂರ ಮೂವತ್ತು   ದೈವಗಳನ್ನು ಸಾಕ್ಷಿ ಸಮೇತ ಗುರುತಿಸಿ ನಾಡು ಬೆರಗಾಗುವಂತೆ ಮಾಡಿದ್ದಾರೆ.


ತುಳು ಸಂಸ್ಕೃತಿಯ ಪ್ರಧಾನ ಅಂಗವಾಗಿ ದೈವಾರಾಧನೆ ಇದೆ. ಅದು ಇಲ್ಲದ ತುಳು ಸಂಸ್ಕೃತಿಯೇ ಇಲ್ಲ ಎನ್ನುವುದು ಅದರ ಪಾರಮ್ಯ. ನಂಬಿಕೆಯ ಆಧಾರದ ಮೇಲೆ ನಿಂತಿರುವ ಈ ಆರಾಧನಾ ಪದ್ಧತಿಯು ಶತಮಾನಗಳ ಪರಂಪರೆಯುಳ್ಳದ್ದು. ಇಂಥ ಸಂಸ್ಕೃತಿಯ ಬೇರುಗಳ ಆಳಕ್ಕೆ ಇಳಿದು ಚಿನ್ನವನ್ನು ಅಗೆದು ತೆಗೆದು ಪುಟಕ್ಕಿಡುವ ಹಾಗೆ ಮಾಡುವ ಕೆಲಸವು ಸಂಕೀರ್ಣವೂ, ಸಂಕಷ್ಟದ್ದೂ ಹೌದು, ಹಾಗೆಯೇ ಪುರುಷರಿಗಷ್ಟೇ ಸೀಮಿತ ಎನ್ನುವಂತಿದ್ದ ಈ ಸಂಶೋಧನೆಯನ್ನು  ಮಹಿಳೆಯರು ಮಾಡಬಹುದೆನ್ನುವಂತೆ ಡಾ.ಲಕ್ಷ್ಮೀ ಪ್ರಸಾದರು ಮಾಡಿ ತೋರಿಸಿದ್ದಾರೆ. 


ಇದಕ್ಕೆ ಅವರು ಹುಟ್ಟಿದ ಗಂಡು ಮೆಟ್ಟಿನ ನೆಲದ ಪ್ರಭಾವ ಎಷ್ಟು ಕಾರಣವೋ ಅಷ್ಟೇ ಅವರ ಗಂಡೆದೆಯೂ ಕೂಡಾ! 

ಡಾ. ಲಕ್ಷ್ಮೀ ಪ್ರಸಾದರು ಸಂಸ್ಕೃತ( ಮೊದಲನೆಯ ರ‌್ಯಾಂಕ್) ಹಿಂದಿ ಮತ್ತು ಕನ್ನಡ( ನಾಲ್ಕನೆಯ ರ‌್ಯಾಂಕ್), ದಲ್ಲಿ ಸ್ನಾತಕೋತ್ತರ ಪದವೀಧರರು. ಒಂದು  ಎಂ.ಫಿಲ್ ಪದವಿ  ಹಾಗೂ ಎರಡು ಪಿ.ಹೆಚ್.ಡಿ ಪದವಿಗಳ‌ ಗರಿಯೂ ಅವರ ಸಾಧನೆಗೆ ದಕ್ಕಿದೆ. 


ಬದುಕನ್ನು ಅಧ್ಯಯನ ,ಅಧ್ಯಾಪನ ಮತ್ತು ಸಂಶೋಧನೆಗಳಿಗೆ  ಮೀಸಲಿಟ್ಟಿರುವ ಅವರ ಈ ಇಪ್ಪತ್ತಮೂರನೆಯ   ಕೃತಿ ಅವರ ಮಹಾತ್ವಾಕಾಂಕ್ಷೆಯ ಶಿಖರ.


ಸರಕಾರದ ಆಶ್ರಯವಿಲ್ಲದೆ, ಅಕಾಡಮಿಗಳ ಪ್ರೋತ್ಸಾಹವಿಲ್ಲದೆಯೇ  ತನಗೆ ತಾನೇ ಸ್ವಯಂ ಭೂವಾಗಿ ನಡೆಸಿದ ಈ ಕ್ಷೇತ್ರ ಕಾರ್ಯ ಆಧಾರಿತ ಅಧ್ಯಯನ ಅಪರೂಪದಲ್ಲಿ ಅಪರೂಪದ್ದು.


 ಭೂತ ಕಟ್ಟುವ ಜನಾಂಗದವರಿಂದ ಮತ್ತು ಇನ್ನಿತರ ಸಂಸ್ಕೃತಿ ಚಿಂತಕರ ಮೂಲದ ಐತಿಹ್ಯಗಳಿಂದ ಸಂಗ್ರಹಿಸಲ್ಪಟ್ಟು ವಿಶ್ಲೇಷಿಸಲ್ಪಟ್ಟ ಅವರ ಸಂಶೋಧನೆಯ  ಆಯ್ದ ಸಾವಿರದ ಇನ್ನೂರ ಎಂಟು   ದೈವ(1228)ಗಳ ಮಾಹಿತಿಗಳನ್ನು ಈ ಗ್ರಂಥದಲ್ಲಿ ಅವರು ಅನಾವರಣಗೊಳಿಸಿದ್ದಾರೆ. 


ಇದು ತುಳು ಸಂಸ್ಕೃತಿಯ ಹೊನ್ನ ಕಿರೀಟಕ್ಕೆ ಇಟ್ಟ ನವಿಲಗರಿ.


ಇದು ‘ಪಿಂತಿಲ್ಲ ಮುಂತಿಲ್ಲ’ ಎನ್ನುವ ಜಾನಪದ ಸಂಶೋಧನೆಯ ಆಚಾರ್ಯಕೃತಿಯಾಗಿದ್ದು ‘ಅಯ್ಯಯ್ಯ ಎಂಚ ಪೊರ್ಲಾಂಡ್‍ಂದ್ ತುಳುವರು ಮೈಯುಬ್ಬಿ ಹೇಳಬೇಕಣ್ಣ’ ಎನ್ನುವುದನ್ನು ಈ ಕಾಲದಲ್ಲಿ ಅನುರಣಿಸಲು ಕಾರಣವಾಗಿರುವ ವಿಸ್ಮಯ.


ಸ್ಥಳ : ಕಾಂತಾವರ           ಡಾ.ನಾ.ಮೊಗಸಾಲೆ

 ದಿ: 01.08.2021          ಕನ್ನಡ ಸಂಘ, ಕಾಂತಾವರ


 ಕರಾವಳಿಯ ಸಾವಿರದೊಂದು ದೈವಗಳು

ಅನುಕ್ರಮಣಿಕೆ 315  ಅಧ್ಯಾಯಗಳು

1 ಅಕ್ಕಚ್ಚು

2- ಅಕ್ಕ ಬೋಳಾರಿಗೆ

3-4ಅಕ್ಕೆರ್ಲು- ಅಂಬೆರ್ಲು

5-6 ಅಚ್ಚು ಮತ್ತು ಮೆಚ್ಚು ಬಂಗೇತಿಯರು

7 ಅಗ್ನಿ ಕೊರತಿ

8-13  ಅಗ್ನಿ ಭೈರವನ್ ಮತ್ತು ಪರಿವಾರ 

13- 15 ಅಜ್ಜ ಬಳಯ  ಮತ್ತು ಮಾಮಿ ಕುಲೆ

15-17 ಅಜ್ಜಮ್ಮ ದೇವರು ಮತ್ತು ಪರಿವಾರ 

18-26 ಅಜ್ಜಿ ಭೂತ , ಕೂಜಿಲು ಮತ್ತು ಇತರ ದೈವಗಳು

27  ಅಜ್ಜಿ ಬೆರೆಂತೊಲು

28-29 ಅಜ್ಜೆರ್ ಭಟ್ರು ಮತ್ತು ಅಜ್ಜೆರ್ ಪರಿವಾರ

30 ಅಡ್ಯಲಾಯ

31   ಅಡ್ಯಂತಾಯ

32-33 ಅಡಿ ಮಣಿತ್ತಾಯ ಮತ್ತು ಅಡಿಮರಾಂಡಿ

34-35  ಅಣ್ಣ ತಮ್ಮ ದೈವಗಳು/ಅತ್ತಾವರದ ದೈವಗಳು

36-37  ಅಣ್ಣೋಡಿ ಕುಮಾರ- ಕಿನ್ಯಂಬು

38  ಗುಟ್ಟು ಬಿಟ್ಟು ಕೊಡದ ಅಬ್ಬೆ ಜಲಾಯ

39 -40 ಅರಬ್ಬಿ ಮತ್ತು ಬ್ರಾಂದಿ 

41-44 ಅರಸು ಬಂಗಾಡಿತ್ತಾಯ ಮತ್ತು ಸೇರಿಗೆ ದೈವಗಳು

45 ಅಸುರಾಳನ್/ ಅಸುಳಾನುಂ ಮಕ್ಕಳು

46-47 ಅಂಗಕ್ಕಾರನ್ ಮರುಟೋಳನ್

48 ಅಂಗಾರ ಬಾಕುಡ

49 ಅಂಮಣ ಬನ್ನಾಯ

50-51 ಅಂಕೆ- ಉಮ್ಮಯ

52  ಆಚಾರಿ ಭೂತ

53 ಆಟಕಾರ್ತಿ

54  ಆಟಿ ಕಳೆಂಜ

55-57 ಆದಿ ವೇಡನ್ ಮತ್ತು ಪರಿವಾರ 

58 ಇಷ್ಟಜಾವದೆ 

59 ಉಗ್ಗೆದಲ್ತಾಯ 

60 ಉಮ್ಮಲ್ತಿ 

61-62 ಉಪ್ರಝಾಸ್ಸಿ ಮತ್ತು ಉಚ್ಚಬಲಿ ತೆಯ್ಯಂ

63-64 ಉರವ ಎರುಬಂಟ

65-88 ಉಳ್ಳಾಕುಲು   ಮತ್ತು ಉಳ್ಳಾಲ್ತಿ ದೈವಗಳು

89-90 ಎರು ಶೆಟ್ಟಿ( ಮಲೆ ಮುದ್ದ)

91-92  ಎಂಬ್ರಾನ್ ದೇವ- ಐಪ್ಪಳ್ಳಿ

93-99 ಏಲುವೆರ್ ಸಿರಿಕುಲು

100 ಒಕ್ಕು ಬಲ್ಲಾಳ

101-102 ಒರುಬಾಣಿಯೆತ್ತಿ ,ನೆಲ್ಲೂರಾಯ 

 103- 105 ಓಣಂ ದೈವಗಳು

106 ಓಟೆಚರಾಯ

107: ಕಟ್ಟು ಎಡ್ತುನ್ ಕುಟ್ಟಿ

‌108 ಕಟ್ಟದಲ್ತಾಯ

‌109-110 ಕಡವಿನ ಕುಂಞ ಮತ್ತು ಕಳವಿನ ಚಿಕ್ಕ

111-112 ಕಡಂಬಳಿತ್ತಾಯ,ಕೊಡಂಬಿಲ್ತಾಯ

113-114 ಕನಪಾಡಿತ್ತಾಯ ಮತ್ತು ಮಗ್ರಂದಾಯ

115  ಕನ್ನಡ ಕಲ್ಕುಡ

116  ಕನ್ನಡ ಬೀರ

117 ಕನ್ನಡ ಭೂತ

118-119 ಕನ್ನಲಾಯ ಮತ್ತು ಸ್ವಾಮಿ ನಂದೆದಿ

120 ಕನಿಯತಿ

121  ಕಪ್ಪಣ್ಣಣಿಕ/ ಕಾರ್ಯಸ್ಥನ್ 

 123-124 ಕರಿಯಣ್ಣ ನಾಯಕ ಮತ್ತು ಕೋಟಿ ನಾಯಕ 

125 ಕರಿಯ ಮಲ್ಲಯ್ಯ

  126-133 ಕರಿಂತಿರಿ ನಾಯರ್ ,ಪುಲಿಯೂರ್ ಕಾಳಿ ಮತ್ತು ಪುಲಿ ದೈವಗಳು 

134 -135 ಕರ್ನಗೆ ಮತ್ತು ಮಲಾರ್ ಜುಮಾದಿ

136-137  ಕಲಿಯಾಟ ಅಜ್ಜಪ್ಪ, ಕಾಟಾಳ ಬೊಳ್ತು

138-139 ಅಲಿಖಿತ ಇತಿಹಾಸ ಸಾರುವ ಕಲ್ಕುಡ ಕಲ್ಲುರ್ಟಿ ದೈವಗಳು 

140  ಕಂಡನಾರ ಕೇಳನ್

141  ಕಂರ್ಭಿ ಬೈದ್ಯೆದಿ

142  ಕಾಜಿಗಾರ್ತಿ

143-153  ಕಾಡ್ಯನಾಟದ ದೈವಗಳು 

154- 155  ಕಾಡೆದಿ  ಮತ್ತು ಕಾಡ್ತಿಯಮ್ನ

156-157 ಅತಿಕಾರೆ ಬೆಳೆಯನ್ನು ತಂದ ಕಾನದ ಕಟದರು

158-160 ಕಾನಲ್ತಾಯ ಮತ್ತು ಪರಿವಾರ ದೈವಗಳು

161-162 ಕಾಯರ್ತಾಯ ಮಾದ್ರಿತ್ತಾಯ

163-167 ಕಾರಿ ಕಬಿಲ ದೈವಗಳು 

168 ಕಾಳರಾತ್ರಿ 

169-172 ಧರ್ಮಸ್ಥಳದಲ್ಲಿ ನೆಲೆಸಿದ ದೈವಗಳು ಕಾಳರಾಹು,ಕಳರ್ಕಾಯಿ ,ಕುಮಾರ ಸ್ವಾಮಿ‌ ಕನ್ಯಾಕುಮಾರಿ 

173-178  ಕಾಂತಾ ಬಾರೆ ,ಬೂದಾ ಬಾರೆ , ಅಚು ಬೈದ್ಯೆತಿ ,ಪುಲ್ಲ ಪೆರ್ಗಡ್ತಿ ,ಉಳ್ಳಾಯ ,ಸಾರಮಾನ್ಯ ದೈವಗಳು 

 179 ಕಾಂತು ನೆಕ್ರಿ ಭೂತ

180  ಕಿನ್ನಿದಾರು

181 ಕೀಳು ದೈವ

183-183 ಮದುಮಕ್ಕಳ ರೂಪದಲ್ಲಿ ಕಂಗೊಳಿಸುವ ಕುಕ್ಕೆತ್ತಿ ಬಳ್ಳು ದೈವಗಳು 

184-185 ಕುಜುಂಬ ಕಾಂಜವ ಮತ್ತು ಕಾಚು ಕುಜುಂಬ  ದೈವಗಳು

186-190 ಕುಟ್ಟಿಚ್ಚಾತ್ತನ್ ,ಪಮ್ಮಚ್ಚು ಮತ್ತು ಸೇರಿಗೆ ದೈವಗಳು 

191 ಕುಡಿ ವೀರನ್ 

192 ಕುದುರೆತ್ತಾಯ / ಕುದುರೆ ಮುಖ ದೈವ

‌ 193-194 ಕುರವ ಮತ್ತು ಸತ್ಯಂಗಳದ ಕೊರತಿ

195 ಕುರುವಾಯಿ ದೈವ

‌196-203 ಕುಲೆ ಭೂತಗಳು - ತುಳುನಾಡಿನ ವಿಶಿಷ್ಟ ದೈವಗಳು

‌204   ಕುಂಞಮ್ಮ ಆಚಾರ್ದಿ

‌205  ಕುಂಞಾಳ್ವ ಬಂಟ

‌206 ಕುಂಞಿ ಭೂತ

‌207 ಕುಂಞಿ ರಾಮ ಕುರಿಕ್ಕಳ್

208 - 212 ಕುಂಜಿರಾಯ ದೈವಗಳು

213-214 ಕುಂಜಿ ಮತ್ತು ಅಂಗಾರ ದೈವಗಳು 

215  ಕುಂಜೂರಂಗಾರ

‌216 ಕುಂಟಲ್ದಾಯ

‌217 ಕುಂಟುಕಾನ ಕೊರವ

‌218-219 ಕುಂಡ - ಮಲ್ಲು ದೈವಗಳು 

220  ಕುಂಡೋದರ

221-224 ಕೆಂಚಣ್ಣ ಕರಿಯಣ್ಣ ಪಾಪಣ್ಣ ಮತ್ತು ಲಕ್ಷ್ಮೀ ನರಸಿಂಹ

225-226 ಕೇಚ ರಾವುತ ಮತ್ತು ರೇವಂತ 

‌227   ಕೇತುರ್ಲಾಯ

228-231 ಕೊಡಮಣಿತ್ತಾಯ,ವೈದ್ಯನಾಥ ,ಕುಡುಮದಾಯ ಮತ್ತು ಕುಕ್ಕಿನಂತಾಯ ದೈವಗಳು

 232 ಕೊಟ್ಟೆದಲ್ತಾಯ

‌233 ಕೊನ್ನೊಟ್ಟು ಕಡ್ತ

‌234  ತುಳುನಾಡಿನ ಜನಾನುರಾಗಿ ದೈವ ಕೊರಗ ತನಿಯ 

‌235 ಕೊರತಿ 

‌236 -237  ಕೊಲ್ಲಿ ಕುಮಾರ ಮತ್ತು ಕೊಲ್ಯತ್ತಾಯ

238-239 ಕೊಂಡಾಣದ ಬಂಟ ಮತ್ತು ತಂಕರು ಮೂಲ್ಯೆದಿ

240 ಅಪ್ರತಿಮ ವೀರ ಕೋಚು ಮಲ್ಲಿ 

241 242 ತುಳುನಾಡು ಬೆಳಗಿದ ಅವಳಿ ವೀರರು : ಕೋಟಿ ಚೆನ್ನಯರು

‌243-244 ಅಪ್ರತಿಮ ಸಾಹಸಿ ಕೋಟೆದ ಬಬ್ಬು ಮತ್ತು ಕಚ್ಚೂರ ಮಾಲ್ದಿ

‌245 ಕೋಟ್ರ ಗುತ್ತಿನ ಬಬ್ಬು 

‌246-247  ಕೋಟೆರಾಯ ಮತ್ತು ಕೋಟೇಶ್ವರ ದೈವಗಳು

248 ಕೋರಚ್ಚನ್ 

‌249 ಕೋಲು ಭಂಡಾರಿ

250   ಕೋಳೆಯಾರ ಮಾಮ

251ಗಣಪತಿ ಕೋಲ

252  ಗಂಗೆ ನಾಡಿ ಕುಮಾರ ,( ಓಡಿಲ್ತಾಯ)

253-254 ಗಂಡ ಗಣಗಳು ಮತ್ತು ಡೆಂಜಿ ಪುಕ್ಕೆ 

255-256 ಗಂಧರ್ವ ದೈವಗಳು

257   ಗಿಳಿರಾಮ

258  ಗಿಡಿರಾವಂತ

259 -260 ಗಿರಾವು ಮತ್ತು ಕೊಡೆಕಲ್ಲಾಯ

261 ಗುರು ಕಾರ್ನವೆರ್ 

262 ಗುರುನಾಥನ್ 

263-275 ಗುಳಿಗ ಮತ್ತು ಸೇರಿಗೆ  ದೈವಗಳು

( ಒರಿ ಮಾಣಿ ಗುಳಿಗ ,ಮಂತ್ರವಾದಿ ಗುಳಿಗ,ಸನ್ಯಾಸಿ ಗುಳಿಗ ,ತಂರ್ಜಿ ಗುತ್ತಿನ ಗುಳಿಗ ,ಮುಕಾಂಬಿ ಗುಳಿಗ,ಸಂಕೊಲಿಗ ಗುಳಿಗ,ಶಾಂತಿ ಗುಳಿಗ,ಸುಬ್ಬಿಯಮ್ಮ ಗುಳಿಗ,ಕಲಾಲ್ತಾಯ ಗುಳಿಗ ,ಜಾಗೆದ ಖಾವಂದೆರಾವು ಗುಳಿಗ,ಕಲಿಚ್ಚಿ,ಕಾಲನ್ ಗುಳಿಗ ) 

 276-300 ಚಾಮುಂಡಿ ಮತ್ತು ಸೇರಿಗೆದೈವಗಳು 

ಅಗ್ನಿ ಚಾಮುಂಡಿ ಗುಳಿಗ, ಕರಿ ಚಾಮುಂಡಿ,ಕೆರೆ ಚಾಮುಂಡಿ,ಚೌಂಡಿ,ಗುಡ್ಡೆ ಚಾಮುಂಡಿ ಅರದರೆ ಚಾಮುಂಡಿ ,ಅಸಗಲ ಚಾಮುಂಡಿ,ನಾಗ ಚಾಮುಂಡಿ,ಪಾಪೆಲು ಚಾಮುಂಡಿ, ನೆತ್ರಾಂಡಿ ,ಮನದಲಾತ್ ಚಾಮುಂಡಿ,ಮಾಪಿಳ್ಳ ಚಾಮುಂಡಿ ಕೋಮಾರು ಚಾಮುಂಡಿ ಇತ್ಯಾದಿ)

301-302 ಚಾವುಂಡೇಶ್ವರ ಮತ್ತು ಚಂಡಿಕೇಶ್ವರ 

303-314  ಚಿಕ್ಕು/ ಚಿಕ್ಕಮ್ಮ  ಪರಿವಾರ ದೈವಗಳು

 315 ಚಿನಿಕಾರ/ ಚೀನೀ ಬೂತಗಳು

316 ಚೆನ್ನಿಗರಾಯ

317-319 ಚೆಮ್ಮರತಿ,ಪಡುವೀರನ್ ದೈವಗಳು

320 ಚೆಂಬರ್ಪುನ್ನಾಯ

321-322 ಜಟಾಧಾರಿ ಮತ್ತು  ಶಾಂತ ದುರ್ಗೆ 

323 -334'  ಜಟ್ಟಿಗ  ದೈವಗಳು

(ಜೈನ ಜಟ್ಟಿಗ ಕೋಟೆ ಜಟ್ಟಿಗ ನೆತ್ರಾಣಿ ಜಟ್ಟಿಗ ಹೊಗೆವಡ್ಡಿ ಜಟ್ಟಿಗ ಅರಮನೆ ಜಟ್ಟಿಗ ಮಾಣಿ ಬೀರ ಜಟ್ಟಿಗಮಾಣಿಭದ್ರ ಜಟ್ಟಿಗ ಇತ್ಯಾದಿ) 

335-337 ಜಮೆಯ- ಜಮಯತಿ ,ಬಡೆದಿ ದೈವಗಳು

338  ಜಂಗ ಬಂಟ

339-340  ಜಾನು ನಾಯ್ಕ ಮತ್ತು ಬಂಡಿರಾಮ 

341  ಜಾರಂದಾಯ

342  ಜಾಲ ಬೈಕಾಡ್ತಿ

343   ಪನ್ನೆ ಬೀಡಿನ ಜಾಲ್ಸೂರಾಯ

344 ಜೋಕುಲು ದೈವೊಲು

345-346 ಜೈನ ಗುಜ್ಜಾರ್ಲು ಮತ್ತು ಜೈನ ಭೂತ 

347 ತಪ್ಪೇದಿ

348 ತನ್ನಿಮಾಣಿಗ 

 349-351 ತಂತ್ರಿಗಣಗಳು

352 ತಿಮ್ಮಣ್ಣ ನಾಯಕ

353-355 ತೆಕ್ಕನ್ ಕರಿಯಾತನ್, ಕನ್ನಿಕ್ಕೊರುಮಗನ್ ಮತ್ತು ಕೈಕೋಲನ್ ತೆಯ್ಯಂ

356 ತೋಡ ಕುಕ್ಕಿನಾರ್ 

357 ದಾರಮ್ಮ ಬಳ್ಳಾಲ್ತಿ 

358-361 ದಾರು ಕುಂದಯ ದೈವಗಳು 

362   ದೀಪದ ಮಾಣಿ

363   ದುಗ್ಗಲಾಯ ಮತ್ತು ಸುತ್ತು ಕೋಟೆ ಚಾಮುಂಡಿ 

364  ದೂಮ

365 ದೂಧುರ್ಮ / ದೂರ್ದುಮ 

366-367 ದೆಸಿಲು ಮತ್ತು ಕಿಲಮರತ್ತಾಯ

368 ದೇಬೆ ದೈವ,

369-370  ದೇರೆ ಮತ್ತು  ಮಾನಿ ದೈವಗಳು

371ದೇವಾನು ಪಂಬೆದಿಯಮ್ಮ

372 ದೇಯಿ ಬೈದೆತಿ

373-374 ದೇಸಿಂಗ ಉಳ್ಳಾಕುಲು ಮತ್ತು ,ಕೋಟೆದಾರ್

 375-378 ದೈವ ಸಾದಿಗೆ ಒಲಿಪ್ರಾಂಡಿ , ,ದೈವನ ಮುಟ್ನಾಯೆ ,ಅಡ್ಯೊಲ್ತಾಯೆ

379  ದೈವಂತಿ

380-400 ಧೂಮಾವತಿ ಮತ್ತು ಸೇರಿಗೆ ದೈವಗಳು 

ಕಾಂತೇರಿ ಜುಮಾದಿ,ಬಂಟ,ಮರ್ಲು ಜುಮಾದಿ,ಕರ್ಮಲೆ ಜುಮಾದಿ ,ದುರ್ಗಲ್ಲ ಜುಮಾದಿ,ಮಾಪುಳ್ತಿ ಧೂಮಾವತಿ ,ಪಡಿಂಞರೆ ಧೂಮಾವತಿ, ಧೂಮಹಾಸ್ತಿಯಮ್ಮ ,ಮಲಾರ್ ಜುಮಾದಿ ಮತ್ತು ಕರ್ನಗೆ ಇತ್ಯಾದಿ) 

401-404 ನಂದಿ ಹೆಸರಿನ ದೈವಗಳು ( ಹಿರೇ ನಂದಿ ಕಿರರ ನಂದಿ ,ಜೋಗಪ್ಪ ಶೆಟ್ಟಿ ,ನಂದಿಕೇಶ್ವರ ,ನಂದಿ ಗೋಣ) 

405-408  ನರಿ ತೆಯ್ಯಂ,ನರಿ ಪೂದ ಮತ್ತು ಸೇರಿಗೆ ದೈವಗಳು 

409 ನಂದಿಗೆನ್ನಾಯ

410-412  ನಾಗ ಕನ್ನಿಕೆ  ಮತ್ತು ನಾಗರಾಜರು 

413 ನಾಗ ದೈವ/ಭೂತ

414   ನಾಗ ಬ್ರಹ್ಮ 

415   ನಾಗ ಬ್ರಹ್ಮ ಮಂಡಲದ ದೈವಗಳು

416-417 ನಾರಳ್ತಾಯ ಮತ್ತು ಭೂತರಾಜ 

418 ನಾಲ್ಕೈತಾಯ

419-420  ನೀಚ ತನಿಯ ಮತ್ತು ಒಂಟಿ ಕಾಲಿನ ಬಬ್ಬರ್ಯ 

421-422  ನುರ್ಗಿ‌ಮದಿಮಾಲ್ ಮತ್ತು ದುರ್ಗಿ ಮದಿಮಾಲ್ 

423-424  ನೆತ್ತರು ಮುಗುಳಿ ಮತ್ತು ಭೈರವ 

425   ನೇರಳತ್ತಾಯ

426 -428  ನೈದಾಲ ಪಾಂಡಿ  ,ಪೂವತ್ತಿಮಾರ್ ಮತ್ತು ಮಹೇಶ್ವರನ್ ದೈವಗಳು

429 ಪಟ್ಟಾರ್ ತೆಯ್ಯಂ

430 ಪಟ್ಟೋರಿತ್ತಾಯ

431 ಪಡೆ ಬೀರ ಕಣ್ಣಂಡ ದೊಡ್ಡಯ್ಯ 

432-433 ಪಡ್ಕಂತಾಯ ಮತ್ತು  ಗೆಂಡಕೇತ್ರಾಯ

434 ಪತ್ತೊಕ್ಕೆಲು ಜನನಂದ ದೈವ

435-436:ಪನಯಾರ್  ಮತ್ತು ಸಂಪ್ರದಾಯ ದೈವ

437:ಪಯ್ಯ ಬೈದ್ಯ

438-443'ಪಯ್ಯಂಬಿಲ್ ಚಂದು ತಚ್ಚೋಳಿ ಒದೆನನ್ನ ಮತ್ತು ಪರಿವಾರ

444-445  ಪರವ  ಮತ್ತು ಪರಿವಾರ ನಾಯಕ

446 ಪಂಜಿ ಭೂತ

 447  -462 ಪಂಜುರ್ಲಿ ಮತ್ತು ಸೇರಿಗೆ ದೈವಗಳು

ಅಂಗಣತ್ತಾಯ ಪಂಜುರ್ಲಿ ಅಟ್ಟೊಡಾಯೆ ಪಂಜುರ್ಲಿ 

ಅಣ್ಣಪ್ಪ ಪಂಜುರ್ಲಿ ಅಲೇರ ಪಂಜುರ್ಲಿ‌

ಉಂರ್ದರ ಪಂಜುರ್ಲು ,ಒರಿ ಮರ್ಲೆ ಪಂಜುರ್ಲಿ

ಕಟ್ಟದಲ್ತಾಯ ಪಂಜುರ್ಲಿ ,ಕೆಂಪರ್ನ ಪಂಜುರ್ಲಿ ‌,ಕುಪ್ಪೆ ಪಂಜುರ್ಲಿ,ಕುಪ್ಪೆಟ್ಟು ಪಂಜುರ್ಲಿ

ಗಣಾಮಣಿ ಪಂಜುರ್ಲಿ,ಜುಂಬುರ್ಲಿ ,ತೆಲ್ಲಾರ್  ಪಂಜುರ್ಲಿ ದಾಸಪ್ಪ ಪಂಜುರ್ಲಿ

ದೆಂದೂರ ಪಂಜುರ್ಲಿ

ದೇವರ ಪೂಜಾರಿ ಪಂಜುರ್ಲಿ 

ಪಂಜಣತ್ತಾಯ ಪಂಜುರ್ಲಿ‌

ಬಗ್ಗು ಪಂಜುರ್ಲಿ,

ಬಗ್ಗು ಮೊಯ್ಲಿದಿ 

ವರ್ಣಾರ ಪಂಜುರ್ಲಿ 

ಸೇಮಿಕಲ್ಲ ಪಂಜುರ್ಲಿ 

468 ಪಾಣರಾಟ

469 ಪಿಲಿ ಭೂತ 

470 -471  ಪುದರ್ ಚಿನ್ನ ಬಂಟ ಮತ್ತು  ಪಿಲೆ ಪೆಲತ್ತಿ ದೈವಗಳು

472  ಪುದ  ಮತ್ತು ಪೋತಾಳ

473- 490 ಪುರಾಣ ದೇವತೆಗಳು ಮತ್ತು ಭೂತ ತೆಯ್ಯಂ ಗಳು

491-500ತುಳುನಾಡಿನ ಪುರುಷ ಭೂತಗಳು 

501  ಪುಲಂದಾಯ ಬಂಟ

502 ಪುಲಿಮರಂಞ ತೊಂಡನ್ 

503 -510  ಪುಲಿಯೂರ್ ಕಾಳಿ  ಪುಳ್ಳಿಕರಂಕಾಳಿ,ಕರಿಂತಿರಿ ನಾಯರ್ ಮತ್ತು ಐವರು ಹುಲಿ ದೈವಗಳು

511  ಪೆರಿಯಾಟ್ ಕಂಡನ್ 

512  ಪೆರುಂಬಳಯಚ್ಚನ್

513  ಪೊಟ್ಟನ್ 

514  520 ಪೊನ್ನಂಗಾಲತಮ್ಮೆ  ಮತ್ತು ಆರು  ಸಹೋದರರು

521 ಪೊನ್ವಾನ್ ತೊಂಡಚ್ಚನ್

522-525:ಪೊಸಮಹರಾಯ ,ಉಳ್ಳಾಲ್ತಿಯರುಮತ್ತು ಮಾಡ್ಲಾಯಿ 

526 -536 ಪೋಲೀಸ್,  ಕಳ್ಳ ,ಶಾನುಭಾಗ,ಪಟೇಲ, ಗುರಿಕ್ಕಾರ,ತಿಗಮಾರೆರ್ ,ಬಲಾಯಿಮಾರೆರ್,ಸೇನವ ,ಕಡೆಂಜು ಬಂಟ, ಸೇನವ ದೈವಗಳು

537 ಪೋಲೀಸ್ ತೆಯ್ಯಂ

 538-539 ಬಚ್ಚನಾಯಕ ಮತ್ತು ಮಂಞಣ ನಾಯಕ‌

540 -544 5ಬಬ್ಬರ್ಯ ಮತ್ತು ಸೇರಿಗೆ ದೈವಗಳು 

545-548 ಬಲವಾಂಡಿ ,ಕಂಡೆತ್ತಾಯ , ಉಳ್ಳಾಯ ,ಕುರಿಯಾಡಿತ್ತಾಯ

549  ಬಲ್ಲ ಮಂಜತ್ತಾಯ

550-555 ಬಲ್ಲಾಳ ಬಲ್ಲಾಳ್ತಿ ಮತ್ತು ಇತರ ದೈವಗಳು

556 ಬಲೀಂದ್ರ 

557  ಬಸ್ತಿನಾಯಕ

558 ಬಂಕಿ ನಾಯ್ಕ 

559-562 ಬಂಟಜಾವದೆ ಮತ್ತು ಉಳ್ಳಾಲ್ತಿ  ಪಡಿಕಲ್ಲಾಯ

562 ಬಾಕುಡತಿ

563 ಬಾಲೆ ಕನ್ಯಾಪು

564 -605 ಬ್ರಾಹ್ಮಣ ಮೂಲದ ದೈವಗಳು

606 ಬಿರ್ಮಣಾಚಾರಿ 

607 -608  ಬಿಲ್ಲಾರ ಬಿಲ್ಲಾರ್ತಿ ದೈವಗಳು

609 ಕುಂಬಳೆ ಸಿಮೆಯ ಪಟ್ಟದ ದೈವ ಬೀರಣ್ಣಾಳ್ವ

610  ಬೀರ್ನಾಚಾರಿ

611-613 ಬೂಡು ಬೊಮ್ಮಯ್ಯ ಮತ್ತು ಕತ್ತಲೆ ಬೊಮ್ಮಯ್ಯ,ಪಟ್ಟಂತರಸು

 614-616:ಬೆರ್ಮೆರ್,ಕಂಬೆರ್ಲು ಮತ್ತು ಹಕ್ಕೆರ್ಲು 

617-618 ಬೆಲೆಟಂಗರಜ್ಜ ಮತ್ತು ತಂಗಡಿ

619-620 ಬೇಡವ ಮತ್ತು ಬೇಟೆಗಾರ ದೈವಗಳು

621 ಬೊಟ್ಟಿ ಭೂತ

622 -625:ಬೋವ ದೈವಗಳು .

626 ಬೈನಾಟಿ 

627   ಬೈಸು ನಾಯಕ

628-690 ಭಗವತಿ ದೈವಗಳು

 692-694   ಭದ್ರಕಾಳಿ ,ಭದ್ರಕಾಳಿ ಭಗವತಿ ಮತ್ತು ವಣ್ಣಾತಿ ದೈವ

695 - 696  ಭದ್ರಕಾಳಿಮತ್ತು ಬೊಳ್ಳಿ ಬಿಲ್ ಅಯ್ಯಪ್ಪ 

697-698 ಭಂಡಾರಿ ಮತ್ತು ಪಿಲಡ್ಕತ್ತಾಯ‌

699 ಮಡಿಕತ್ತಾಯ

700-701 ಮದನಕ್ಕೆ ದೈಯಾರ್ ,ಕಳಿಗೋಂಕು ಮಾಬೀರರು

702-703'  ಮದಂಗಲ್ಲಾಯ ಕಡಂಗಲ್ಲಾಯ 

704-705 ಮದಿಮಾಯ ಮದಿಮಾಲ್

706ಮನಕ್ಕಡನ್ ಗುರುಕ್ಕಳ್ 

707 ಮನಕ್ಕೊಟ್ಟ ಅಮ್ಮ

708- 726 ಮನ್ಸರ  ದೈವಗಳು

717 ಮರಾಂಗಣೆ

718;ಮರುತಿಯೋಡನ್ ಕುರಿಕ್ಕಳ್

719-720  ಮಲಯಾಳ ಬ್ರಹ್ಮ ಮತ್ತು ಮಲ್ಯಾಳ ಭಟ್ರು 

721 ಮಲರಾಯ

722  ಮಲೆಕುಡಿಯರ ಅಯ್ಯಪ್ಪ 

723-726: ಮಲೆ ತಮ್ಮಚ್ಚ ಮತ್ತು ಪರಿವಾರ 

727-730 ಮಲೆರಾಯ ಮತ್ತು ಪರಿವಾರ 

 731 ಮಲೆಸಾವಿರ ದೈವ

732-733:ಮಂಗಳೆರ್ ಮತ್ತು  ಗುರು ಮಂಗೞೆರ್ 

734 -736:ಮಂತ್ರ ಗಣ ಮಂತ್ರ ದೇವತೆ ಮಂತ್ರ ಮೂರ್ತಿ ದೈವಗಳು

737 ಮಂದ್ರಾಯ

738-739 ಮಹಾಕಾಳಿ ಮತ್ತು ಮಾಂಕಾಳಿ ದೈವಗಳು

740-745 ಮಾಯಂದಾಲ್ ಮತ್ತು ಪರಿವಾರ  

746-747 ಮಾಯೊಲು ಮಾಯೊಲಜ್ಜಿ.

748-760 ಮಾರಿ ಭೂತಗಳು

761 -763 ಮಾಲಿಂಗ ರಾಯ ದಂಡಪ್ಪ ನಾಯಕ ಮಂಞ ನಾಯಕ ದೈವಗಳು‌

764 ಮಾಸ್ತಿಯಮ್ಮ 

765-766 ಮಿತ್ತೂರು ನಾಯರ್ ದೈವಗಳು


768-782 ಮುಗೇರ ದೈವಗಳು 

783 ಮುಡದೇರ್ ಕಾಳ ಭೈರವ 

784-786  ಮುತ್ತಪ್ಪನ್ ,ತಿರುವಪ್ಪನ್ ,ಮೂಲಂಪೆತ್ತಮ್ಮ

787  ಮುತ್ತು ಮಾರಿಯಮ್ಮ  

788 ಮುನಿಸ್ವಾಮಿ ದೈವ

789 ಮುವ್ವೆ ಮೂವ,ಮೂವಿಗೆ ವಾತೆ 

790 - 816ಮುಸ್ಲಿಂ ಮೂಲದ ದೈವಗಳು 

817 ಮೂಜಿಲ್ನಾಯ 

818-819 ಮೂಡೊಟ್ನಾರ್,ಪಡುವೆಟ್ನಾರ್ 

820 ಮೂರಿಲು

821 ಮೂರ್ತಿಲ್ಲಾಯ

822- 900 ಮೂಲ ಪುರುಷ ದೈವಗಳು 

901 ಮೆಕ್ಕೆ ಕಟ್ಟಿನ ಉರುಗಳು 

902-903  ಮೇರ ಮೇತಿಯರು

904 ಮೇಲಂಟಾಯ 

905 ಮೈಯೊಂದಿ

906  ಮೈಸಂದಾಯ

907 ಮೋಂದಿ ಕೋಲ‌

908 ಯಕ್ಷ ಯಕ್ಷಿಯರು ಮತ್ತು ಶ್ರೀಲಂಕಾದ  ಯಕುಮ ಕೋಲ‌ 

909 -910  ರಕ್ತೇಶ್ವರಿ ಮತ್ತು ಬವನೊ

911 ರಾಜನ್ ದೈವಗಳು

912 -914 ವಣ್ಣಾತನ್ ವಯನಾಡು ಕುಲವನ್,ಕಣ್ಣನ್ 

915 ವಡ್ಡಮರಾಯ

916 ವಿದೇಶೀ ಕಾಫ್ರೀ ದೈವಗಳು

917 ವಿಷ್ಣು ಮೂರ್ತಿ ಮತ್ತು ಪಾಲಂದಾಯಿ ಕಣ್ಣನ್

919 - 920 ವೀರಭದ್ರ/ ವೈರಜಾತ್,ವೀರನ್ 

921-924 ವೀರ ವಿಕ್ರಮೆರ್ ಮತ್ತು ಇರ್ವೆರ್ ಬೈದ್ಯೆರ್

925 ವೆಳ್ಳು ಕುರಿಕ್ಕಳ್

926 ವೇಟಕ್ಕೊರುಮಗನ್

927 ವೈದ್ಯಾಚಾರ್ಯ/ ವೈದ್ಯರಾಜನ್ 

928 ಶಗ್ರಿತ್ತಾಯ ದೈವ 

929 ಶಂಕರ ಬಡವಣ

930 -932 ಶಾಸ್ತಾವು,ಕರಿ ಭೂತ,ಕೋಮಾಳಿ

933 ಶಿರಾಡಿ ಭೂತ.

934 ಶಿವರಾಯ 

935 ಶ್ರೀಮಂತಿ ದೈವ

936-937 ಸತ್ಯ ಮಾಗಣ್ತಿ ಮತ್ತು ಕಲ್ಲು ದೈವ 

938 -942 ಬಾಕುಡರ ಸರ್ಪಕೋಲದ ದೈವಗಳು

943 ಸರ್ಪಂಕಳಿ

944 ಸರ್ಪಂತುಳ್ಳಲ್

945 ಸಂನ್ಯಾಸಿ ಮಂತ್ರ ದೇವತೆ

946 ಸಾದಿಕರಾಯ ಮತ್ತು ಹಾದಿಕಾರಾಯ 

947 ಸಾರ ಮಾಂಕಾಳಿ

948 ಸ್ವಾಮಿ ದೈವ 

949-956 ಸೀತಾಯುಂ ಮಕ್ಕಳುಂ,ದೈವತಾರ್ ಮತ್ತು ಪರಿವಾರ

957: ಸುಬ್ಬರಾಯ

958 ಸೋಣದ ಜೋಗಿ

959 ಹನುಮಂತ/ ಸಾರ ಪುಲ್ಲಿದಾರ್ ದೈವ

960 -961ಹಳ್ಳತ್ತಾಯ ಮತ್ತು ಅಲ್ನತ್ತಾಯ 

962 ಹಳೆಯಮ್ಮ

963 -973 ಹಾಯ್ಗುಳಿ ಮತ್ತು ಪರಿವಾರ 

ಮೂಕ ಹಾಯ್ಗುಳಿ,ಕೆಪ್ಪ ಹಾಯ್ಗುಳಿ,ತಾತ್ರಯ್ಯ,ಅಕ್ಸಾಲಿ ,ಮೂಡೂರ್ ಹಾಯ್ಗುಳಿ ,ನೆತ್ರ ಹಾಯ್ಗುಳಿ ಇತ್ಯಾದಿ )

974 -995 ಹಿರಿಯಾಯ ದೈವಗಳು

( ಆನೆ ಬೈದ್ಯ,ಸಿದ್ದ ಮರ್ದ ಬೈದ್ಯ,ಬಗ್ಗ ಪೂಜಾರಿ, ನಾಡು ಬೈದ್ಯ, ಬೊಲ್ಲ ಬೈದ್ಯ,ದೇರೆ ಬೈದ್ಯ ,ಚೆನ್ನಪ್ಪ ಪೂಜಾರಿ ,ಸಿದ್ದ ಬೈದ್ಯ,ಕೊರಗ ಬೈದ್ಯ ಇತ್ಯಾದಿ );

996-997 ಹುಲಿ ಮತ್ತು ಹಸರ ತಿಮ್ಮ 

998 -1000 ಹೊಸಮ್ಮ ,ಹೊಸಳಿಗಮ್ಮ ಮತ್ತು ಕುಲೆ ಮಾಣಿಕೊ

1001 ಹೌಟಲ್ದಾಯ ಮತ್ತು ಮಾಳದ ಕೊರಗ 

ಅಧ್ಯಯನಾತ್ಮಕ ಮಾಹಿತಿ  ಸಂಗ್ರಹ-© ಡಾ.ಲಕ್ಷ್ಮೀ ಜಿ ಪ್ರಸಾದ್

ಕರಾವಳಿಯ ಸಾವಿರದೊಂದು ದೈವಗಳಯ : ಜಾನಪದ ಅಧ್ಯಯನದ ಆಚಾರ್ಯ ಕೃತಿ- ಡಾ.ನಾ ಮೊಗಸಾಲೆ


 ಹಿರಿಯ ವಿದ್ವಾಂಸರಾದ ಡಾ.ನಾ ಮೊಗಸಾಲೆಯವರು ನನ್ನ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕಕ್ಕೆ ಚಂದದ ಬೆನ್ಙುಡಿ ಬರೆದುಕೊಟ್ಟಿದ್ದು."ಇದೊಂದು ಆಚಾರ್ಯ ಕೃತಿ,ತುಳು ಸಂಸ್ಕೃತಿಯಹೊನ್ನ ಕಿರೀಟಕ್ಕೆ ಇಟ್ಟ ನವಿಲುಗರಿ " ಎಂದಿದ್ದರು

ಪುಸ್ತಕ ತಲುಪಿದಾಗ ಮತ್ತೊಮ್ಮೆ ಇದು ನಿಜಕ್ಕೂ ಆಚಾರ್ಯ ಕೃತಿ ಎಂದು ಮೆಚ್ಚಿದ್ದಾರೆ

ಈ ಕೃತಿ ರಿಯಾಯತಿ ದರದಲ್ಲಿ ಲಭ್ಯವಿದ್ದು ಬೇಕಾದವರು 9480516684 ಗೆ ವಾಟ್ಸಪ್ ಮೆಸೇಜ್ ಅಥವಾ ಕರೆ ಮಾಡಿ


ತುಳು ಸಂಸ್ಕೃತಿಯ ಹೊನ್ನ‌ ಕಿರೀಟಕ್ಕೆ ಇಟ್ಟ ನವಿಲು ಗರಿ

- ಡಾ.ನಾ ಮೊಗಸಾಲೆ 

ಡಾ. ಲಕ್ಷ್ಮೀ ಪ್ರಸಾದ್ (ಲಕ್ಷ್ಮೀ ವಾರಣಾಸಿ) ಅವರು ಕಾಸರಗೋಡು ಜಿಲ್ಲೆಯ ಕೋಳ್ಯೂರು ಗ್ರಾಮದ ವಾರಣಾಸಿ ಮೂಲದವರು .ಇವರ ತಂದೆ ವೇದಮೂರ್ತಿ ನಾರಾಯಣ ಭಟ್ಟರು  ವಿದ್ವಾಂಸರೆಂದು ಪ್ರಸಿದ್ಧರು. ತನ್ನ ಮನೆತನವು ವೈದಿಕಾಚರಣೆಯನ್ನೇ ಹೊಂದಿದ್ದರೂ, ಕುಟುಂಬದಲ್ಲಿ ದೈವದ ಆರಾಧನೆಯನ್ನು ಮಾಡುತ್ತಿರುವುದೇಕೆ ಎಂಬ ಕುತೂಹಲವೇ ಡಾ. ಲಕ್ಷ್ಮೀ ಪ್ರಸಾದ್ ಅವರಿಗೆ ಪ್ರೇರಣೆಯಾಗಿ ಅವರು ಈ ಕುರಿತಾದ ಸಂಶೋಧನೆಗೆ ಇಳಿದರು. 


ಇದರಿಂದ ಕರಾವಳಿ ಕರ್ನಾಟಕದ ಅಂದರೆ ಅವಿಭಜಿತ ದ.ಕ.ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ ಮತ್ತು ಕೊಡಗನ್ನೂ ಒಳಗೊಂಡಂತೆ ದೈವರಾಧನೆಯ ಆಶಯ ಆಕೃತಿಯನ್ನು ನಿರಂತರ ಸಂಶೋಧಿಸಲು ಅವರು ಮುಂದಾದರು. ಈ ನಿರಂತರತೆ ಇಪ್ಪತ್ತೊಂದು  ವರುಷಗಳ ಕಾಲ ನಡೆದುದರ ಪರಿಣಾಮವಾಗಿ ಈ ಮೇಲಿನ ಪ್ರದೇಶಗಳಲ್ಲಿ ಒಟ್ಟು ಎರಡು ಸಾವಿರದ ಇನ್ನೂರ ಮೂವತ್ತು  ದೈವಗಳು ಆರಾಧಿಸಲ್ಪಡುತ್ತವೆ ಎನ್ನುವ ಸತ್ಯ ಗೋಚರಿಸಿತು.


ಹಿರಿಯ ಜಾನಪದ ತಜ್ಞರೂ ವಿದ್ವಾಂಸರೂ ಆಗಿರುವ ಪ್ರೊ| ಬಿ.ಎ.ವಿವೇಕ ರೈ ಅವರು ತಮ್ಮ ಮಹಾಪ್ರಬಂಧದಲ್ಲಿ (1985) ಇನ್ನೂರ ಅರುವತ್ತೇಳು  ,ಇನ್ನೋರ್ವ ಜಾನಪದ ವಿದ್ವಾಂಸ ಪ್ರೊ| ಚಿನ್ನಪ್ಪಗೌಡರು ಇದನ್ನು ಪರಿಷ್ಕರಿಸಿ  ತಮ್ಮ ಮಹಾಪ್ರಬಂಧದಲ್ಲಿ (1990) ಮುನ್ನೂರು , ಮುಂದೆ ರಘುನಾಥ ವರ್ಕಾಡಿಯವರು ತಮ್ಮ ‘ಕಂಡಂಬಾರು ಮಲರಾಯ’ ಕೃತಿಯಲ್ಲಿ (2011) ನಾಲ್ಕು ನೂರ ಏಳು ದೈವಗಳ ಹೆಸರುಗಳನ್ನು ಪಟ್ಟಿ ಮಾಡಿದ್ದಾರೆ.


ಆಮೇಲೆ ಈ ಬಗ್ಗೆ ಸಂಶೋಧನೆ ನಡೆದದ್ದು ಕಡಿಮೆ ಅಥವಾ ಈ ಅರಿವಿನಲ್ಲೆ ಗಿರಕಿ ಹೊಡೆದದ್ದೇ ಹೆಚ್ಚು. ಆದರೆ ಡಾ. ಲಕ್ಷ್ಮಿ ಪ್ರಸಾದ್ ಅವರ ಆಸಕ್ತಿ ಅಥವಾ ಜಿಜ್ಞಾಸೆಯು ತಾವು ರಚಿಸಿದ ಮಹಾಪ್ರಬಂಧದ ಹೊತ್ತಿಗೆ (2007) ಸಾವಿರದ ನಾಲ್ಕು ನೂರ ಮೂವತ್ತೈದು ದೈವಗಳ ಕ್ಷೇತ್ರ ಕಾರ್ಯದ ತನಕ ಹಬ್ಬಿತು. ಇದೀಗ ಅವರು ಎರಡು ಸಾವಿರದ ಇನ್ನೂರ ಮೂವತ್ತು   ದೈವಗಳನ್ನು ಸಾಕ್ಷಿ ಸಮೇತ ಗುರುತಿಸಿ ನಾಡು ಬೆರಗಾಗುವಂತೆ ಮಾಡಿದ್ದಾರೆ.


ತುಳು ಸಂಸ್ಕೃತಿಯ ಪ್ರಧಾನ ಅಂಗವಾಗಿ ದೈವಾರಾಧನೆ ಇದೆ. ಅದು ಇಲ್ಲದ ತುಳು ಸಂಸ್ಕೃತಿಯೇ ಇಲ್ಲ ಎನ್ನುವುದು ಅದರ ಪಾರಮ್ಯ. ನಂಬಿಕೆಯ ಆಧಾರದ ಮೇಲೆ ನಿಂತಿರುವ ಈ ಆರಾಧನಾ ಪದ್ಧತಿಯು ಶತಮಾನಗಳ ಪರಂಪರೆಯುಳ್ಳದ್ದು. ಇಂಥ ಸಂಸ್ಕೃತಿಯ ಬೇರುಗಳ ಆಳಕ್ಕೆ ಇಳಿದು ಚಿನ್ನವನ್ನು ಅಗೆದು ತೆಗೆದು ಪುಟಕ್ಕಿಡುವ ಹಾಗೆ ಮಾಡುವ ಕೆಲಸವು ಸಂಕೀರ್ಣವೂ, ಸಂಕಷ್ಟದ್ದೂ ಹೌದು, ಹಾಗೆಯೇ ಪುರುಷರಿಗಷ್ಟೇ ಸೀಮಿತ ಎನ್ನುವಂತಿದ್ದ ಈ ಸಂಶೋಧನೆಯನ್ನು  ಮಹಿಳೆಯರು ಮಾಡಬಹುದೆನ್ನುವಂತೆ ಡಾ.ಲಕ್ಷ್ಮೀ ಪ್ರಸಾದರು ಮಾಡಿ ತೋರಿಸಿದ್ದಾರೆ. 


ಇದಕ್ಕೆ ಅವರು ಹುಟ್ಟಿದ ಗಂಡು ಮೆಟ್ಟಿನ ನೆಲದ ಪ್ರಭಾವ ಎಷ್ಟು ಕಾರಣವೋ ಅಷ್ಟೇ ಅವರ ಗಂಡೆದೆಯೂ ಕೂಡಾ! 

ಡಾ. ಲಕ್ಷ್ಮೀ ಪ್ರಸಾದರು ಸಂಸ್ಕೃತ( ಮೊದಲನೆಯ ರ‌್ಯಾಂಕ್) ಹಿಂದಿ ಮತ್ತು ಕನ್ನಡ( ನಾಲ್ಕನೆಯ ರ‌್ಯಾಂಕ್), ದಲ್ಲಿ ಸ್ನಾತಕೋತ್ತರ ಪದವೀಧರರು. ಒಂದು  ಎಂ.ಫಿಲ್ ಪದವಿ  ಹಾಗೂ ಎರಡು ಪಿ.ಹೆಚ್.ಡಿ ಪದವಿಗಳ‌ ಗರಿಯೂ ಅವರ ಸಾಧನೆಗೆ ದಕ್ಕಿದೆ. 


ಬದುಕನ್ನು ಅಧ್ಯಯನ ,ಅಧ್ಯಾಪನ ಮತ್ತು ಸಂಶೋಧನೆಗಳಿಗೆ  ಮೀಸಲಿಟ್ಟಿರುವ ಅವರ ಈ ಇಪ್ಪತ್ತಮೂರನೆಯ   ಕೃತಿ ಅವರ ಮಹಾತ್ವಾಕಾಂಕ್ಷೆಯ ಶಿಖರ.


ಸರಕಾರದ ಆಶ್ರಯವಿಲ್ಲದೆ, ಅಕಾಡಮಿಗಳ ಪ್ರೋತ್ಸಾಹವಿಲ್ಲದೆಯೇ  ತನಗೆ ತಾನೇ ಸ್ವಯಂ ಭೂವಾಗಿ ನಡೆಸಿದ ಈ ಕ್ಷೇತ್ರ ಕಾರ್ಯ ಆಧಾರಿತ ಅಧ್ಯಯನ ಅಪರೂಪದಲ್ಲಿ ಅಪರೂಪದ್ದು.


 ಭೂತ ಕಟ್ಟುವ ಜನಾಂಗದವರಿಂದ ಮತ್ತು ಇನ್ನಿತರ ಸಂಸ್ಕೃತಿ ಚಿಂತಕರ ಮೂಲದ ಐತಿಹ್ಯಗಳಿಂದ ಸಂಗ್ರಹಿಸಲ್ಪಟ್ಟು ವಿಶ್ಲೇಷಿಸಲ್ಪಟ್ಟ ಅವರ ಸಂಶೋಧನೆಯ  ಆಯ್ದ ಸಾವಿರದ ಇನ್ನೂರ ಎಂಟು   ದೈವ(1228)ಗಳ ಮಾಹಿತಿಗಳನ್ನು ಈ ಗ್ರಂಥದಲ್ಲಿ ಅವರು ಅನಾವರಣಗೊಳಿಸಿದ್ದಾರೆ. 


ಇದು ತುಳು ಸಂಸ್ಕೃತಿಯ ಹೊನ್ನ ಕಿರೀಟಕ್ಕೆ ಇಟ್ಟ ನವಿಲಗರಿ.


ಇದು ‘ಪಿಂತಿಲ್ಲ ಮುಂತಿಲ್ಲ’ ಎನ್ನುವ ಜಾನಪದ ಸಂಶೋಧನೆಯ ಆಚಾರ್ಯಕೃತಿಯಾಗಿದ್ದು ‘ಅಯ್ಯಯ್ಯ ಎಂಚ ಪೊರ್ಲಾಂಡ್‍ಂದ್ ತುಳುವರು ಮೈಯುಬ್ಬಿ ಹೇಳಬೇಕಣ್ಣ’ ಎನ್ನುವುದನ್ನು ಈ ಕಾಲದಲ್ಲಿ ಅನುರಣಿಸಲು ಕಾರಣವಾಗಿರುವ ವಿಸ್ಮಯ.


ಸ್ಥಳ : ಕಾಂತಾವರ           ಡಾ.ನಾ.ಮೊಗಸಾಲೆ

 ದಿ: 01.08.2021          ಕನ್ನಡ ಸಂಘ, ಕಾಂತಾವರ


 ಕರಾವಳಿಯ ಸಾವಿರದೊಂದು ದೈವಗಳು- ಡಾ.ಲಕ್ಷ್ಮೀ ಜಿ ಪ್ರಸಾದ್ 

ಅನುಕ್ರಮಣಿಕೆ 315  ಅಧ್ಯಾಯಗಳು

1 ಅಕ್ಕಚ್ಚು

2- ಅಕ್ಕ ಬೋಳಾರಿಗೆ

3-4ಅಕ್ಕೆರ್ಲು- ಅಂಬೆರ್ಲು

5-6 ಅಚ್ಚು ಮತ್ತು ಮೆಚ್ಚು ಬಂಗೇತಿಯರು

7 ಅಗ್ನಿ ಕೊರತಿ

8-13  ಅಗ್ನಿ ಭೈರವನ್ ಮತ್ತು ಪರಿವಾರ 

13- 15 ಅಜ್ಜ ಬಳಯ  ಮತ್ತು ಮಾಮಿ ಕುಲೆ

15-17 ಅಜ್ಜಮ್ಮ ದೇವರು ಮತ್ತು ಪರಿವಾರ 

18-26 ಅಜ್ಜಿ ಭೂತ , ಕೂಜಿಲು ಮತ್ತು ಇತರ ದೈವಗಳು

27  ಅಜ್ಜಿ ಬೆರೆಂತೊಲು

28-29 ಅಜ್ಜೆರ್ ಭಟ್ರು ಮತ್ತು ಅಜ್ಜೆರ್ ಪರಿವಾರ

30 ಅಡ್ಯಲಾಯ

31   ಅಡ್ಯಂತಾಯ

32-33 ಅಡಿ ಮಣಿತ್ತಾಯ ಮತ್ತು ಅಡಿಮರಾಂಡಿ

34-35  ಅಣ್ಣ ತಮ್ಮ ದೈವಗಳು/ಅತ್ತಾವರದ ದೈವಗಳು

36-37  ಅಣ್ಣೋಡಿ ಕುಮಾರ- ಕಿನ್ಯಂಬು

38  ಗುಟ್ಟು ಬಿಟ್ಟು ಕೊಡದ ಅಬ್ಬೆ ಜಲಾಯ

39 -40 ಅರಬ್ಬಿ ಮತ್ತು ಬ್ರಾಂದಿ 

41-44 ಅರಸು ಬಂಗಾಡಿತ್ತಾಯ ಮತ್ತು ಸೇರಿಗೆ ದೈವಗಳು

45 ಅಸುರಾಳನ್/ ಅಸುಳಾನುಂ ಮಕ್ಕಳು

46-47 ಅಂಗಕ್ಕಾರನ್ ಮರುಟೋಳನ್

48 ಅಂಗಾರ ಬಾಕುಡ

49 ಅಂಮಣ ಬನ್ನಾಯ

50-51 ಅಂಕೆ- ಉಮ್ಮಯ

52  ಆಚಾರಿ ಭೂತ

53 ಆಟಕಾರ್ತಿ

54  ಆಟಿ ಕಳೆಂಜ

55-57 ಆದಿ ವೇಡನ್ ಮತ್ತು ಪರಿವಾರ 

58 ಇಷ್ಟಜಾವದೆ 

59 ಉಗ್ಗೆದಲ್ತಾಯ 

60 ಉಮ್ಮಲ್ತಿ 

61-62 ಉಪ್ರಝಾಸ್ಸಿ ಮತ್ತು ಉಚ್ಚಬಲಿ ತೆಯ್ಯಂ

63-64 ಉರವ ಎರುಬಂಟ

65-88 ಉಳ್ಳಾಕುಲು   ಮತ್ತು ಉಳ್ಳಾಲ್ತಿ ದೈವಗಳು

89-90 ಎರು ಶೆಟ್ಟಿ( ಮಲೆ ಮುದ್ದ)

91-92  ಎಂಬ್ರಾನ್ ದೇವ- ಐಪ್ಪಳ್ಳಿ

93-99 ಏಲುವೆರ್ ಸಿರಿಕುಲು

100 ಒಕ್ಕು ಬಲ್ಲಾಳ

101-102 ಒರುಬಾಣಿಯೆತ್ತಿ ,ನೆಲ್ಲೂರಾಯ 

 103- 105 ಓಣಂ ದೈವಗಳು

106 ಓಟೆಚರಾಯ

107: ಕಟ್ಟು ಎಡ್ತುನ್ ಕುಟ್ಟಿ

‌108 ಕಟ್ಟದಲ್ತಾಯ

‌109-110 ಕಡವಿನ ಕುಂಞ ಮತ್ತು ಕಳವಿನ ಚಿಕ್ಕ

111-112 ಕಡಂಬಳಿತ್ತಾಯ,ಕೊಡಂಬಿಲ್ತಾಯ

113-114 ಕನಪಾಡಿತ್ತಾಯ ಮತ್ತು ಮಗ್ರಂದಾಯ

115  ಕನ್ನಡ ಕಲ್ಕುಡ

116  ಕನ್ನಡ ಬೀರ

117 ಕನ್ನಡ ಭೂತ

118-119 ಕನ್ನಲಾಯ ಮತ್ತು ಸ್ವಾಮಿ ನಂದೆದಿ

120 ಕನಿಯತಿ

121  ಕಪ್ಪಣ್ಣಣಿಕ/ ಕಾರ್ಯಸ್ಥನ್ 

 123-124 ಕರಿಯಣ್ಣ ನಾಯಕ ಮತ್ತು ಕೋಟಿ ನಾಯಕ 

125 ಕರಿಯ ಮಲ್ಲಯ್ಯ

  126-133 ಕರಿಂತಿರಿ ನಾಯರ್ ,ಪುಲಿಯೂರ್ ಕಾಳಿ ಮತ್ತು ಪುಲಿ ದೈವಗಳು 

134 -135 ಕರ್ನಗೆ ಮತ್ತು ಮಲಾರ್ ಜುಮಾದಿ

136-137  ಕಲಿಯಾಟ ಅಜ್ಜಪ್ಪ, ಕಾಟಾಳ ಬೊಳ್ತು

138-139 ಅಲಿಖಿತ ಇತಿಹಾಸ ಸಾರುವ ಕಲ್ಕುಡ ಕಲ್ಲುರ್ಟಿ ದೈವಗಳು 

140  ಕಂಡನಾರ ಕೇಳನ್

141  ಕಂರ್ಭಿ ಬೈದ್ಯೆದಿ

142  ಕಾಜಿಗಾರ್ತಿ

143-153  ಕಾಡ್ಯನಾಟದ ದೈವಗಳು 

154- 155  ಕಾಡೆದಿ  ಮತ್ತು ಕಾಡ್ತಿಯಮ್ನ

156-157 ಅತಿಕಾರೆ ಬೆಳೆಯನ್ನು ತಂದ ಕಾನದ ಕಟದರು

158-160 ಕಾನಲ್ತಾಯ ಮತ್ತು ಪರಿವಾರ ದೈವಗಳು

161-162 ಕಾಯರ್ತಾಯ ಮಾದ್ರಿತ್ತಾಯ

163-167 ಕಾರಿ ಕಬಿಲ ದೈವಗಳು 

168 ಕಾಳರಾತ್ರಿ 

169-172 ಧರ್ಮಸ್ಥಳದಲ್ಲಿ ನೆಲೆಸಿದ ದೈವಗಳು ಕಾಳರಾಹು,ಕಳರ್ಕಾಯಿ ,ಕುಮಾರ ಸ್ವಾಮಿ‌ ಕನ್ಯಾಕುಮಾರಿ 

173-178  ಕಾಂತಾ ಬಾರೆ ,ಬೂದಾ ಬಾರೆ , ಅಚು ಬೈದ್ಯೆತಿ ,ಪುಲ್ಲ ಪೆರ್ಗಡ್ತಿ ,ಉಳ್ಳಾಯ ,ಸಾರಮಾನ್ಯ ದೈವಗಳು 

 179 ಕಾಂತು ನೆಕ್ರಿ ಭೂತ

180  ಕಿನ್ನಿದಾರು

181 ಕೀಳು ದೈವ

183-183 ಮದುಮಕ್ಕಳ ರೂಪದಲ್ಲಿ ಕಂಗೊಳಿಸುವ ಕುಕ್ಕೆತ್ತಿ ಬಳ್ಳು ದೈವಗಳು 

184-185 ಕುಜುಂಬ ಕಾಂಜವ ಮತ್ತು ಕಾಚು ಕುಜುಂಬ  ದೈವಗಳು

186-190 ಕುಟ್ಟಿಚ್ಚಾತ್ತನ್ ,ಪಮ್ಮಚ್ಚು ಮತ್ತು ಸೇರಿಗೆ ದೈವಗಳು 

191 ಕುಡಿ ವೀರನ್ 

192 ಕುದುರೆತ್ತಾಯ / ಕುದುರೆ ಮುಖ ದೈವ

‌ 193-194 ಕುರವ ಮತ್ತು ಸತ್ಯಂಗಳದ ಕೊರತಿ

195 ಕುರುವಾಯಿ ದೈವ

‌196-203 ಕುಲೆ ಭೂತಗಳು - ತುಳುನಾಡಿನ ವಿಶಿಷ್ಟ ದೈವಗಳು

‌204   ಕುಂಞಮ್ಮ ಆಚಾರ್ದಿ

‌205  ಕುಂಞಾಳ್ವ ಬಂಟ

‌206 ಕುಂಞಿ ಭೂತ

‌207 ಕುಂಞಿ ರಾಮ ಕುರಿಕ್ಕಳ್

208 - 212 ಕುಂಜಿರಾಯ ದೈವಗಳು

213-214 ಕುಂಜಿ ಮತ್ತು ಅಂಗಾರ ದೈವಗಳು 

215  ಕುಂಜೂರಂಗಾರ

‌216 ಕುಂಟಲ್ದಾಯ

‌217 ಕುಂಟುಕಾನ ಕೊರವ

‌218-219 ಕುಂಡ - ಮಲ್ಲು ದೈವಗಳು 

220  ಕುಂಡೋದರ

221-224 ಕೆಂಚಣ್ಣ ಕರಿಯಣ್ಣ ಪಾಪಣ್ಣ ಮತ್ತು ಲಕ್ಷ್ಮೀ ನರಸಿಂಹ

225-226 ಕೇಚ ರಾವುತ ಮತ್ತು ರೇವಂತ 

‌227   ಕೇತುರ್ಲಾಯ

228-231 ಕೊಡಮಣಿತ್ತಾಯ,ವೈದ್ಯನಾಥ ,ಕುಡುಮದಾಯ ಮತ್ತು ಕುಕ್ಕಿನಂತಾಯ ದೈವಗಳು

 232 ಕೊಟ್ಟೆದಲ್ತಾಯ

‌233 ಕೊನ್ನೊಟ್ಟು ಕಡ್ತ

‌234  ತುಳುನಾಡಿನ ಜನಾನುರಾಗಿ ದೈವ ಕೊರಗ ತನಿಯ 

‌235 ಕೊರತಿ 

‌236 -237  ಕೊಲ್ಲಿ ಕುಮಾರ ಮತ್ತು ಕೊಲ್ಯತ್ತಾಯ

238-239 ಕೊಂಡಾಣದ ಬಂಟ ಮತ್ತು ತಂಕರು ಮೂಲ್ಯೆದಿ

240 ಅಪ್ರತಿಮ ವೀರ ಕೋಚು ಮಲ್ಲಿ 

241 242 ತುಳುನಾಡು ಬೆಳಗಿದ ಅವಳಿ ವೀರರು : ಕೋಟಿ ಚೆನ್ನಯರು

‌243-244 ಅಪ್ರತಿಮ ಸಾಹಸಿ ಕೋಟೆದ ಬಬ್ಬು ಮತ್ತು ಕಚ್ಚೂರ ಮಾಲ್ದಿ

‌245 ಕೋಟ್ರ ಗುತ್ತಿನ ಬಬ್ಬು 

‌246-247  ಕೋಟೆರಾಯ ಮತ್ತು ಕೋಟೇಶ್ವರ ದೈವಗಳು

248 ಕೋರಚ್ಚನ್ 

‌249 ಕೋಲು ಭಂಡಾರಿ

250   ಕೋಳೆಯಾರ ಮಾಮ

251ಗಣಪತಿ ಕೋಲ

252  ಗಂಗೆ ನಾಡಿ ಕುಮಾರ ,( ಓಡಿಲ್ತಾಯ)

253-254 ಗಂಡ ಗಣಗಳು ಮತ್ತು ಡೆಂಜಿ ಪುಕ್ಕೆ 

255-256 ಗಂಧರ್ವ ದೈವಗಳು

257   ಗಿಳಿರಾಮ

258  ಗಿಡಿರಾವಂತ

259 -260 ಗಿರಾವು ಮತ್ತು ಕೊಡೆಕಲ್ಲಾಯ

261 ಗುರು ಕಾರ್ನವೆರ್ 

262 ಗುರುನಾಥನ್ 

263-275 ಗುಳಿಗ ಮತ್ತು ಸೇರಿಗೆ  ದೈವಗಳು

( ಒರಿ ಮಾಣಿ ಗುಳಿಗ ,ಮಂತ್ರವಾದಿ ಗುಳಿಗ,ಸನ್ಯಾಸಿ ಗುಳಿಗ ,ತಂರ್ಜಿ ಗುತ್ತಿನ ಗುಳಿಗ ,ಮುಕಾಂಬಿ ಗುಳಿಗ,ಸಂಕೊಲಿಗ ಗುಳಿಗ,ಶಾಂತಿ ಗುಳಿಗ,ಸುಬ್ಬಿಯಮ್ಮ ಗುಳಿಗ,ಕಲಾಲ್ತಾಯ ಗುಳಿಗ ,ಜಾಗೆದ ಖಾವಂದೆರಾವು ಗುಳಿಗ,ಕಲಿಚ್ಚಿ,ಕಾಲನ್ ಗುಳಿಗ ) 

 276-300 ಚಾಮುಂಡಿ ಮತ್ತು ಸೇರಿಗೆದೈವಗಳು 

ಅಗ್ನಿ ಚಾಮುಂಡಿ ಗುಳಿಗ, ಕರಿ ಚಾಮುಂಡಿ,ಕೆರೆ ಚಾಮುಂಡಿ,ಚೌಂಡಿ,ಗುಡ್ಡೆ ಚಾಮುಂಡಿ ಅರದರೆ ಚಾಮುಂಡಿ ,ಅಸಗಲ ಚಾಮುಂಡಿ,ನಾಗ ಚಾಮುಂಡಿ,ಪಾಪೆಲು ಚಾಮುಂಡಿ, ನೆತ್ರಾಂಡಿ ,ಮನದಲಾತ್ ಚಾಮುಂಡಿ,ಮಾಪಿಳ್ಳ ಚಾಮುಂಡಿ ಕೋಮಾರು ಚಾಮುಂಡಿ ಇತ್ಯಾದಿ)

301-302 ಚಾವುಂಡೇಶ್ವರ ಮತ್ತು ಚಂಡಿಕೇಶ್ವರ 

303-314  ಚಿಕ್ಕು/ ಚಿಕ್ಕಮ್ಮ  ಪರಿವಾರ ದೈವಗಳು

 315 ಚಿನಿಕಾರ/ ಚೀನೀ ಬೂತಗಳು

316 ಚೆನ್ನಿಗರಾಯ

317-319 ಚೆಮ್ಮರತಿ,ಪಡುವೀರನ್ ದೈವಗಳು

320 ಚೆಂಬರ್ಪುನ್ನಾಯ

321-322 ಜಟಾಧಾರಿ ಮತ್ತು  ಶಾಂತ ದುರ್ಗೆ 

323 -334'  ಜಟ್ಟಿಗ  ದೈವಗಳು

(ಜೈನ ಜಟ್ಟಿಗ ಕೋಟೆ ಜಟ್ಟಿಗ ನೆತ್ರಾಣಿ ಜಟ್ಟಿಗ ಹೊಗೆವಡ್ಡಿ ಜಟ್ಟಿಗ ಅರಮನೆ ಜಟ್ಟಿಗ ಮಾಣಿ ಬೀರ ಜಟ್ಟಿಗಮಾಣಿಭದ್ರ ಜಟ್ಟಿಗ ಇತ್ಯಾದಿ) 

335-337 ಜಮೆಯ- ಜಮಯತಿ ,ಬಡೆದಿ ದೈವಗಳು

338  ಜಂಗ ಬಂಟ

339-340  ಜಾನು ನಾಯ್ಕ ಮತ್ತು ಬಂಡಿರಾಮ 

341  ಜಾರಂದಾಯ

342  ಜಾಲ ಬೈಕಾಡ್ತಿ

343   ಪನ್ನೆ ಬೀಡಿನ ಜಾಲ್ಸೂರಾಯ

344 ಜೋಕುಲು ದೈವೊಲು

345-346 ಜೈನ ಗುಜ್ಜಾರ್ಲು ಮತ್ತು ಜೈನ ಭೂತ 

347 ತಪ್ಪೇದಿ

348 ತನ್ನಿಮಾಣಿಗ 

 349-351 ತಂತ್ರಿಗಣಗಳು

352 ತಿಮ್ಮಣ್ಣ ನಾಯಕ

353-355 ತೆಕ್ಕನ್ ಕರಿಯಾತನ್, ಕನ್ನಿಕ್ಕೊರುಮಗನ್ ಮತ್ತು ಕೈಕೋಲನ್ ತೆಯ್ಯಂ

356 ತೋಡ ಕುಕ್ಕಿನಾರ್ 

357 ದಾರಮ್ಮ ಬಳ್ಳಾಲ್ತಿ 

358-361 ದಾರು ಕುಂದಯ ದೈವಗಳು 

362   ದೀಪದ ಮಾಣಿ

363   ದುಗ್ಗಲಾಯ ಮತ್ತು ಸುತ್ತು ಕೋಟೆ ಚಾಮುಂಡಿ 

364  ದೂಮ

365 ದೂಧುರ್ಮ / ದೂರ್ದುಮ 

366-367 ದೆಸಿಲು ಮತ್ತು ಕಿಲಮರತ್ತಾಯ

368 ದೇಬೆ ದೈವ,

369-370  ದೇರೆ ಮತ್ತು  ಮಾನಿ ದೈವಗಳು

371ದೇವಾನು ಪಂಬೆದಿಯಮ್ಮ

372 ದೇಯಿ ಬೈದೆತಿ

373-374 ದೇಸಿಂಗ ಉಳ್ಳಾಕುಲು ಮತ್ತು ,ಕೋಟೆದಾರ್

 375-378 ದೈವ ಸಾದಿಗೆ ಒಲಿಪ್ರಾಂಡಿ , ,ದೈವನ ಮುಟ್ನಾಯೆ ,ಅಡ್ಯೊಲ್ತಾಯೆ

379  ದೈವಂತಿ

380-400 ಧೂಮಾವತಿ ಮತ್ತು ಸೇರಿಗೆ ದೈವಗಳು 

ಕಾಂತೇರಿ ಜುಮಾದಿ,ಬಂಟ,ಮರ್ಲು ಜುಮಾದಿ,ಕರ್ಮಲೆ ಜುಮಾದಿ ,ದುರ್ಗಲ್ಲ ಜುಮಾದಿ,ಮಾಪುಳ್ತಿ ಧೂಮಾವತಿ ,ಪಡಿಂಞರೆ ಧೂಮಾವತಿ, ಧೂಮಹಾಸ್ತಿಯಮ್ಮ ,ಮಲಾರ್ ಜುಮಾದಿ ಮತ್ತು ಕರ್ನಗೆ ಇತ್ಯಾದಿ) 

401-404 ನಂದಿ ಹೆಸರಿನ ದೈವಗಳು ( ಹಿರೇ ನಂದಿ ಕಿರರ ನಂದಿ ,ಜೋಗಪ್ಪ ಶೆಟ್ಟಿ ,ನಂದಿಕೇಶ್ವರ ,ನಂದಿ ಗೋಣ) 

405-408  ನರಿ ತೆಯ್ಯಂ,ನರಿ ಪೂದ ಮತ್ತು ಸೇರಿಗೆ ದೈವಗಳು 

409 ನಂದಿಗೆನ್ನಾಯ

410-412  ನಾಗ ಕನ್ನಿಕೆ  ಮತ್ತು ನಾಗರಾಜರು 

413 ನಾಗ ದೈವ/ಭೂತ

414   ನಾಗ ಬ್ರಹ್ಮ 

415   ನಾಗ ಬ್ರಹ್ಮ ಮಂಡಲದ ದೈವಗಳು

416-417 ನಾರಳ್ತಾಯ ಮತ್ತು ಭೂತರಾಜ 

418 ನಾಲ್ಕೈತಾಯ

419-420  ನೀಚ ತನಿಯ ಮತ್ತು ಒಂಟಿ ಕಾಲಿನ ಬಬ್ಬರ್ಯ 

421-422  ನುರ್ಗಿ‌ಮದಿಮಾಲ್ ಮತ್ತು ದುರ್ಗಿ ಮದಿಮಾಲ್ 

423-424  ನೆತ್ತರು ಮುಗುಳಿ ಮತ್ತು ಭೈರವ 

425   ನೇರಳತ್ತಾಯ

426 -428  ನೈದಾಲ ಪಾಂಡಿ  ,ಪೂವತ್ತಿಮಾರ್ ಮತ್ತು ಮಹೇಶ್ವರನ್ ದೈವಗಳು

429 ಪಟ್ಟಾರ್ ತೆಯ್ಯಂ

430 ಪಟ್ಟೋರಿತ್ತಾಯ

431 ಪಡೆ ಬೀರ ಕಣ್ಣಂಡ ದೊಡ್ಡಯ್ಯ 

432-433 ಪಡ್ಕಂತಾಯ ಮತ್ತು  ಗೆಂಡಕೇತ್ರಾಯ

434 ಪತ್ತೊಕ್ಕೆಲು ಜನನಂದ ದೈವ

435-436:ಪನಯಾರ್  ಮತ್ತು ಸಂಪ್ರದಾಯ ದೈವ

437:ಪಯ್ಯ ಬೈದ್ಯ

438-443'ಪಯ್ಯಂಬಿಲ್ ಚಂದು ತಚ್ಚೋಳಿ ಒದೆನನ್ನ ಮತ್ತು ಪರಿವಾರ

444-445  ಪರವ  ಮತ್ತು ಪರಿವಾರ ನಾಯಕ

446 ಪಂಜಿ ಭೂತ

 447  -462 ಪಂಜುರ್ಲಿ ಮತ್ತು ಸೇರಿಗೆ ದೈವಗಳು

ಅಂಗಣತ್ತಾಯ ಪಂಜುರ್ಲಿ ಅಟ್ಟೊಡಾಯೆ ಪಂಜುರ್ಲಿ 

ಅಣ್ಣಪ್ಪ ಪಂಜುರ್ಲಿ ಅಲೇರ ಪಂಜುರ್ಲಿ‌

ಉಂರ್ದರ ಪಂಜುರ್ಲು ,ಒರಿ ಮರ್ಲೆ ಪಂಜುರ್ಲಿ

ಕಟ್ಟದಲ್ತಾಯ ಪಂಜುರ್ಲಿ ,ಕೆಂಪರ್ನ ಪಂಜುರ್ಲಿ ‌,ಕುಪ್ಪೆ ಪಂಜುರ್ಲಿ,ಕುಪ್ಪೆಟ್ಟು ಪಂಜುರ್ಲಿ

ಗಣಾಮಣಿ ಪಂಜುರ್ಲಿ,ಜುಂಬುರ್ಲಿ ,ತೆಲ್ಲಾರ್  ಪಂಜುರ್ಲಿ ದಾಸಪ್ಪ ಪಂಜುರ್ಲಿ

ದೆಂದೂರ ಪಂಜುರ್ಲಿ

ದೇವರ ಪೂಜಾರಿ ಪಂಜುರ್ಲಿ 

ಪಂಜಣತ್ತಾಯ ಪಂಜುರ್ಲಿ‌

ಬಗ್ಗು ಪಂಜುರ್ಲಿ,

ಬಗ್ಗು ಮೊಯ್ಲಿದಿ 

ವರ್ಣಾರ ಪಂಜುರ್ಲಿ 

ಸೇಮಿಕಲ್ಲ ಪಂಜುರ್ಲಿ 

468 ಪಾಣರಾಟ

469 ಪಿಲಿ ಭೂತ 

470 -471  ಪುದರ್ ಚಿನ್ನ ಬಂಟ ಮತ್ತು  ಪಿಲೆ ಪೆಲತ್ತಿ ದೈವಗಳು

472  ಪುದ  ಮತ್ತು ಪೋತಾಳ

473- 490 ಪುರಾಣ ದೇವತೆಗಳು ಮತ್ತು ಭೂತ ತೆಯ್ಯಂ ಗಳು

491-500ತುಳುನಾಡಿನ ಪುರುಷ ಭೂತಗಳು 

501  ಪುಲಂದಾಯ ಬಂಟ

502 ಪುಲಿಮರಂಞ ತೊಂಡನ್ 

503 -510  ಪುಲಿಯೂರ್ ಕಾಳಿ  ಪುಳ್ಳಿಕರಂಕಾಳಿ,ಕರಿಂತಿರಿ ನಾಯರ್ ಮತ್ತು ಐವರು ಹುಲಿ ದೈವಗಳು

511  ಪೆರಿಯಾಟ್ ಕಂಡನ್ 

512  ಪೆರುಂಬಳಯಚ್ಚನ್

513  ಪೊಟ್ಟನ್ 

514  520 ಪೊನ್ನಂಗಾಲತಮ್ಮೆ  ಮತ್ತು ಆರು  ಸಹೋದರರು

521 ಪೊನ್ವಾನ್ ತೊಂಡಚ್ಚನ್

522-525:ಪೊಸಮಹರಾಯ ,ಉಳ್ಳಾಲ್ತಿಯರುಮತ್ತು ಮಾಡ್ಲಾಯಿ 

526 -536 ಪೋಲೀಸ್,  ಕಳ್ಳ ,ಶಾನುಭಾಗ,ಪಟೇಲ, ಗುರಿಕ್ಕಾರ,ತಿಗಮಾರೆರ್ ,ಬಲಾಯಿಮಾರೆರ್,ಸೇನವ ,ಕಡೆಂಜು ಬಂಟ, ಸೇನವ ದೈವಗಳು

537 ಪೋಲೀಸ್ ತೆಯ್ಯಂ

 538-539 ಬಚ್ಚನಾಯಕ ಮತ್ತು ಮಂಞಣ ನಾಯಕ‌

540 -544 5ಬಬ್ಬರ್ಯ ಮತ್ತು ಸೇರಿಗೆ ದೈವಗಳು 

545-548 ಬಲವಾಂಡಿ ,ಕಂಡೆತ್ತಾಯ , ಉಳ್ಳಾಯ ,ಕುರಿಯಾಡಿತ್ತಾಯ

549  ಬಲ್ಲ ಮಂಜತ್ತಾಯ

550-555 ಬಲ್ಲಾಳ ಬಲ್ಲಾಳ್ತಿ ಮತ್ತು ಇತರ ದೈವಗಳು

556 ಬಲೀಂದ್ರ 

557  ಬಸ್ತಿನಾಯಕ

558 ಬಂಕಿ ನಾಯ್ಕ 

559-562 ಬಂಟಜಾವದೆ ಮತ್ತು ಉಳ್ಳಾಲ್ತಿ  ಪಡಿಕಲ್ಲಾಯ

562 ಬಾಕುಡತಿ

563 ಬಾಲೆ ಕನ್ಯಾಪು

564 -605 ಬ್ರಾಹ್ಮಣ ಮೂಲದ ದೈವಗಳು

606 ಬಿರ್ಮಣಾಚಾರಿ 

607 -608  ಬಿಲ್ಲಾರ ಬಿಲ್ಲಾರ್ತಿ ದೈವಗಳು

609 ಕುಂಬಳೆ ಸಿಮೆಯ ಪಟ್ಟದ ದೈವ ಬೀರಣ್ಣಾಳ್ವ

610  ಬೀರ್ನಾಚಾರಿ

611-613 ಬೂಡು ಬೊಮ್ಮಯ್ಯ ಮತ್ತು ಕತ್ತಲೆ ಬೊಮ್ಮಯ್ಯ,ಪಟ್ಟಂತರಸು

 614-616:ಬೆರ್ಮೆರ್,ಕಂಬೆರ್ಲು ಮತ್ತು ಹಕ್ಕೆರ್ಲು 

617-618 ಬೆಲೆಟಂಗರಜ್ಜ ಮತ್ತು ತಂಗಡಿ

619-620 ಬೇಡವ ಮತ್ತು ಬೇಟೆಗಾರ ದೈವಗಳು

621 ಬೊಟ್ಟಿ ಭೂತ

622 -625:ಬೋವ ದೈವಗಳು .

626 ಬೈನಾಟಿ 

627   ಬೈಸು ನಾಯಕ

628-690 ಭಗವತಿ ದೈವಗಳು

 692-694   ಭದ್ರಕಾಳಿ ,ಭದ್ರಕಾಳಿ ಭಗವತಿ ಮತ್ತು ವಣ್ಣಾತಿ ದೈವ

695 - 696  ಭದ್ರಕಾಳಿಮತ್ತು ಬೊಳ್ಳಿ ಬಿಲ್ ಅಯ್ಯಪ್ಪ 

697-698 ಭಂಡಾರಿ ಮತ್ತು ಪಿಲಡ್ಕತ್ತಾಯ‌

699 ಮಡಿಕತ್ತಾಯ

700-701 ಮದನಕ್ಕೆ ದೈಯಾರ್ ,ಕಳಿಗೋಂಕು ಮಾಬೀರರು

702-703'  ಮದಂಗಲ್ಲಾಯ ಕಡಂಗಲ್ಲಾಯ 

704-705 ಮದಿಮಾಯ ಮದಿಮಾಲ್

706ಮನಕ್ಕಡನ್ ಗುರುಕ್ಕಳ್ 

707 ಮನಕ್ಕೊಟ್ಟ ಅಮ್ಮ

708- 726 ಮನ್ಸರ  ದೈವಗಳು

717 ಮರಾಂಗಣೆ

718;ಮರುತಿಯೋಡನ್ ಕುರಿಕ್ಕಳ್

719-720  ಮಲಯಾಳ ಬ್ರಹ್ಮ ಮತ್ತು ಮಲ್ಯಾಳ ಭಟ್ರು 

721 ಮಲರಾಯ

722  ಮಲೆಕುಡಿಯರ ಅಯ್ಯಪ್ಪ 

723-726: ಮಲೆ ತಮ್ಮಚ್ಚ ಮತ್ತು ಪರಿವಾರ 

727-730 ಮಲೆರಾಯ ಮತ್ತು ಪರಿವಾರ 

 731 ಮಲೆಸಾವಿರ ದೈವ

732-733:ಮಂಗಳೆರ್ ಮತ್ತು  ಗುರು ಮಂಗೞೆರ್ 

734 -736:ಮಂತ್ರ ಗಣ ಮಂತ್ರ ದೇವತೆ ಮಂತ್ರ ಮೂರ್ತಿ ದೈವಗಳು

737 ಮಂದ್ರಾಯ

738-739 ಮಹಾಕಾಳಿ ಮತ್ತು ಮಾಂಕಾಳಿ ದೈವಗಳು

740-745 ಮಾಯಂದಾಲ್ ಮತ್ತು ಪರಿವಾರ  

746-747 ಮಾಯೊಲು ಮಾಯೊಲಜ್ಜಿ.

748-760 ಮಾರಿ ಭೂತಗಳು

761 -763 ಮಾಲಿಂಗ ರಾಯ ದಂಡಪ್ಪ ನಾಯಕ ಮಂಞ ನಾಯಕ ದೈವಗಳು‌

764 ಮಾಸ್ತಿಯಮ್ಮ 

765-766 ಮಿತ್ತೂರು ನಾಯರ್ ದೈವಗಳು


768-782 ಮುಗೇರ ದೈವಗಳು 

783 ಮುಡದೇರ್ ಕಾಳ ಭೈರವ 

784-786  ಮುತ್ತಪ್ಪನ್ ,ತಿರುವಪ್ಪನ್ ,ಮೂಲಂಪೆತ್ತಮ್ಮ

787  ಮುತ್ತು ಮಾರಿಯಮ್ಮ  

788 ಮುನಿಸ್ವಾಮಿ ದೈವ

789 ಮುವ್ವೆ ಮೂವ,ಮೂವಿಗೆ ವಾತೆ 

790 - 816ಮುಸ್ಲಿಂ ಮೂಲದ ದೈವಗಳು 

817 ಮೂಜಿಲ್ನಾಯ 

818-819 ಮೂಡೊಟ್ನಾರ್,ಪಡುವೆಟ್ನಾರ್ 

820 ಮೂರಿಲು

821 ಮೂರ್ತಿಲ್ಲಾಯ

822- 900 ಮೂಲ ಪುರುಷ ದೈವಗಳು 

901 ಮೆಕ್ಕೆ ಕಟ್ಟಿನ ಉರುಗಳು 

902-903  ಮೇರ ಮೇತಿಯರು

904 ಮೇಲಂಟಾಯ 

905 ಮೈಯೊಂದಿ

906  ಮೈಸಂದಾಯ

907 ಮೋಂದಿ ಕೋಲ‌

908 ಯಕ್ಷ ಯಕ್ಷಿಯರು ಮತ್ತು ಶ್ರೀಲಂಕಾದ  ಯಕುಮ ಕೋಲ‌ 

909 -910  ರಕ್ತೇಶ್ವರಿ ಮತ್ತು ಬವನೊ

911 ರಾಜನ್ ದೈವಗಳು

912 -914 ವಣ್ಣಾತನ್ ವಯನಾಡು ಕುಲವನ್,ಕಣ್ಣನ್ 

915 ವಡ್ಡಮರಾಯ

916 ವಿದೇಶೀ ಕಾಫ್ರೀ ದೈವಗಳು

917 ವಿಷ್ಣು ಮೂರ್ತಿ ಮತ್ತು ಪಾಲಂದಾಯಿ ಕಣ್ಣನ್

919 - 920 ವೀರಭದ್ರ/ ವೈರಜಾತ್,ವೀರನ್ 

921-924 ವೀರ ವಿಕ್ರಮೆರ್ ಮತ್ತು ಇರ್ವೆರ್ ಬೈದ್ಯೆರ್

925 ವೆಳ್ಳು ಕುರಿಕ್ಕಳ್

926 ವೇಟಕ್ಕೊರುಮಗನ್

927 ವೈದ್ಯಾಚಾರ್ಯ/ ವೈದ್ಯರಾಜನ್ 

928 ಶಗ್ರಿತ್ತಾಯ ದೈವ 

929 ಶಂಕರ ಬಡವಣ

930 -932 ಶಾಸ್ತಾವು,ಕರಿ ಭೂತ,ಕೋಮಾಳಿ

933 ಶಿರಾಡಿ ಭೂತ.

934 ಶಿವರಾಯ 

935 ಶ್ರೀಮಂತಿ ದೈವ

936-937 ಸತ್ಯ ಮಾಗಣ್ತಿ ಮತ್ತು ಕಲ್ಲು ದೈವ 

938 -942 ಬಾಕುಡರ ಸರ್ಪಕೋಲದ ದೈವಗಳು

943 ಸರ್ಪಂಕಳಿ

944 ಸರ್ಪಂತುಳ್ಳಲ್

945 ಸಂನ್ಯಾಸಿ ಮಂತ್ರ ದೇವತೆ

946 ಸಾದಿಕರಾಯ ಮತ್ತು ಹಾದಿಕಾರಾಯ 

947 ಸಾರ ಮಾಂಕಾಳಿ

948 ಸ್ವಾಮಿ ದೈವ 

949-956 ಸೀತಾಯುಂ ಮಕ್ಕಳುಂ,ದೈವತಾರ್ ಮತ್ತು ಪರಿವಾರ

957: ಸುಬ್ಬರಾಯ

958 ಸೋಣದ ಜೋಗಿ

959 ಹನುಮಂತ/ ಸಾರ ಪುಲ್ಲಿದಾರ್ ದೈವ

960 -961ಹಳ್ಳತ್ತಾಯ ಮತ್ತು ಅಲ್ನತ್ತಾಯ 

962 ಹಳೆಯಮ್ಮ

963 -973 ಹಾಯ್ಗುಳಿ ಮತ್ತು ಪರಿವಾರ 

ಮೂಕ ಹಾಯ್ಗುಳಿ,ಕೆಪ್ಪ ಹಾಯ್ಗುಳಿ,ತಾತ್ರಯ್ಯ,ಅಕ್ಸಾಲಿ ,ಮೂಡೂರ್ ಹಾಯ್ಗುಳಿ ,ನೆತ್ರ ಹಾಯ್ಗುಳಿ ಇತ್ಯಾದಿ )

974 -995 ಹಿರಿಯಾಯ ದೈವಗಳು

( ಆನೆ ಬೈದ್ಯ,ಸಿದ್ದ ಮರ್ದ ಬೈದ್ಯ,ಬಗ್ಗ ಪೂಜಾರಿ, ನಾಡು ಬೈದ್ಯ, ಬೊಲ್ಲ ಬೈದ್ಯ,ದೇರೆ ಬೈದ್ಯ ,ಚೆನ್ನಪ್ಪ ಪೂಜಾರಿ ,ಸಿದ್ದ ಬೈದ್ಯ,ಕೊರಗ ಬೈದ್ಯ ಇತ್ಯಾದಿ );

996-997 ಹುಲಿ ಮತ್ತು ಹಸರ ತಿಮ್ಮ 

998 -1000 ಹೊಸಮ್ಮ ,ಹೊಸಳಿಗಮ್ಮ ಮತ್ತು ಕುಲೆ ಮಾಣಿಕೊ

1001 ಹೌಟಲ್ದಾಯ ಮತ್ತು ಮಾಳದ ಕೊರಗ 

ಅಧ್ಯಯನಾತ್ಮಕ ಗ್ರಂಥ -© ಡಾ.ಲಕ್ಷ್ಮೀ ಜಿ ಪ್ರಸಾದ್

Aravinda Bhat  Govinda Prasad  Na Mogasale  Janardana Bhat  Udayagowri Birmukaje  Chandrahasa Mulki

ಕರಾವಳಿಯ ಸಾವಿರದೊಂದು ದೈವಗಳು‌: ಶೂರ ಯೋಧ ಕಮಾಂಡರ್ ಶ್ಯಾಮ ರಾಜ್


ನನ್ನ ಪರಿಶ್ರಮ ಸಾರ್ಥಕ ಎಂದೆನಿಸಿದ ಕ್ಷಣ..


ದೇಶ ಕಾವ ಯೋಧ ಶ್ಯಾಮರಾಜ್ ಅವರ ಕೈಯಲ್ಲಿ ನನ್ನ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು


ನನಗೆ ಚಿಕ್ಕಂದಿನಿಂದಲೂ ಮಿಲಿಟರಿಯವರ ಬಗ್ಗೆ ವಿಶೇಷ ಗೌರವ ಪ್ರೀತಿ.ಇವರೆಲ್ಲರು ಪ್ರಾಣದ ಹಂಗನ್ನು ತೊರೆದು ದೇಶದ ರಕ್ಷಣೆ ಮಾಡುವ ಕಾರಣ ನಾವು ದುಡಿದು ಎರಡು ತುತ್ತು ಉಂಡು ನೆಮ್ಮದಿಯಿಂದ ಮಲಗಲು ಸಾಧ್ಯವಾಗಿದೆ ಎಂಬುದನ್ನು ನಾವೆಂದಿಗೂ ಮರೆಯಬಾರದು.ಹಾಗಾಗಿ ಮಿಲಿಟರಿಯವರ ಬಗ್ಗೆ ನನಗೆ ವಿಶೇಷ ಪ್ರೀತಿ ಕೃತಜ್ಞತೆ.

 

ಶ್ಯಾಮರಾಜ್ ಅವರ ಜೀವನಗಾಥೆಯನ್ನು ವರ್ಷದ ಮೊದಲು ಪತ್ರಿಕೆಯಲ್ಲಿ ಓದಿದ್ದೆ

ಯುದ್ದದಲ್ಲಿ ಏಟಾಗಿಬಕಾಲಿನ ಬಲವನ್ನು ಕಳೆದುಕೊಂಡಿದ್ದರೂ ಅತುಲ ಜೀವನೋತ್ಸಾಹದಿಂದ ಪತ್ನಿ ಮತ್ತು ಮಗಳೊಡನೆ ಸಂತಸದಿಂದ   ಬಾಳುವ ಅವರು ನಿಜಕ್ಕೂ ಸಮಾಜಕ್ಕೊಂದು ಮಾದರಿ.ಮಿಲಿಟರಿಯಲ್ಲಿರುವ ಅವರ ಮಡದಿ ಶಿವಲೀಲಾ ಕೂಡ ಪ್ರಶಂಸಾರ್ಹರು.


ಇವರ ಮಾತನ್ನು ಕ್ಲಬ್ ಹೌಸಿನಲ್ಲಿ ಕೇಳಿದ್ದೆ.fb ಸ್ನೆಹಿತರಾದ ಕಾದಂಬರಿಗಾರ್ತಿ ಪ್ರಸನ್ನ ಚೆಕ್ಕೆಮನೆಯವರ  Prasanna Venkatakrishna Chekkemane ಬಾಲ್ಯದ ಸಹಪಾಠಿಯಾಗಿರುವ   ಶ್ಯಾಮರಾಜ್ ಅವರನ್ನೊಮ್ಮೆ ಭೇಟಿ ಮಾಡಿ ಮಾತನಾಡಬೇಕೆಂದುಕೊಂಡಿದ್ದೆ


ಕೆಲ ದಿನಗಳ ಹಿಂದೆ ಪುಸ್ತಕಕ್ಕಾಗಿ ಅವರ ಕರೆ ಬಂದಾಗ ದೇವರ ದ್ವನಿ ಕೇಳಿಸಿದಷ್ಟೇ ಸಂಭ್ರಮಗೊಂಡಿದ್ದೆ

ತಕ್ಷಣವೇ ಪುಸ್ತಕ ಕಳುಹಿಸಿದ್ದೆ.ಪುಸ್ತಕ ಅವರ ಕೈಯಲ್ಲಿ ನೋಡಿ ನನ್ನ ಪರಿಶ್ರಮ ಸಾರ್ಥಕ ಎನಿಸಿತು


.ಓರ್ವ ಬರಹಗಾರ್ತಿಗೆ ಇನ್ನೇನು ಬೇಕು..ಸಹೃದಯ ಓದುಗರೇ ನಮಗೆ ದೊಡ್ಡ ಸಂಪತ್ತು ಅಲ್ವೇ ?


ಇವರ ಬದುಕಿನಲ್ಲಿ ತಂಗಾಳಿಯಾಗಿ ಬಂದ ಮಡದಿ ಶಿವಪ್ರಿಯಾರ ಕುರಿತು ಸ್ನೆಹಿತರಾದ ಪ್ರಸನ್ನ ಚೆಕ್ಕೆಮನೆಯವರ. ಬರಹ ಪ್ರಜಾವಣಿಯಲ್ಲಿ ಪ್ರಕಟವಾಗಿದ್ದು ಅದನ್ನು ಇಲ್ಲಿನ ಕೊಂಡಿ ಮೂಲಕ ಓದಬಹುದು

https://www.prajavani.net/news/article/2018/04/07/564398.html


ಇವರ ಸಾಹಸೀ ಬದುಕಿನ ಬಗ್ಗೆ ಇಲ್ಲಿದೆ ಮಾಹಿತಿ


https://youtu.be/RrHBe6XzIwA


https://youtu.be/k6FldRA7-Xo