Sunday, 10 December 2023

ಕರಾವಳಿಯ ಸಾವಿರದೊಂದು ದೈವಗಳು - ಡಾ.ಪುನೀತ್ ರಾಘವೇಂದ್ರ


 ತಮ್ಮ‌ಮಗನ ಕೈಗೆ ಪುಸ್ತಕ ನೀಡಿದ ಈ ಪ್ರೀತಿ ಅಭಿಮಾನಕ್ಕೆ ಏನೆನ್ನಲಿ, ಧನ್ಯವಾದಗಳು ಡಾಕ್ಟ್ರೇ DrPuneeth Raghavendra Kuntukadu 


ದೇಶ #ಸುತ್ತಬೇಕು #ಕೋಶ #ಓದಬೇಕು

https://m.facebook.com/story.php?story_fbid=1795558340834127&id=100011399344171

ಲಕ್ಷ್ಮೀ ಮೇಡಂ ಪರಿಚಯ ನನಗೆ ಸುಮಾರು ಐದು ವರ್ಷಗಳಿಗೂ ಹಳೆಯದು...ಅದೂ ಕೇವಲ ಅಂತರ್ಜಾಲದಲ್ಲಿ ಮಾತ್ರ!! ಹೀಗೇ ಒಂದು ಬಾರಿ ಬ್ಲಾಗ್'ನಲ್ಲಿ ಜಾಲಾಡುತ್ತಿದ್ದಾಗ ಅವರ ಕೆಲಸಗಳ ಪರಿಚಯವಾಯ್ತು.. ಸುಳ್ಯ ತೊಡಿಕಾನ ಗ್ರಾಮದ ನಮ್ಮ ಕುಂಟುಕಾಡು ಮನೆತನದಲ್ಲಿ ಮಾತ್ರ ಆರಾಧನೆಗೊಳಪಡುವ #ಹಿತ್ತಿಲುಚಾಮುಂಡಿ ಎಂಬ ದೈವದ ಕುರಿತಾಗಿ ಮಾಹಿತಿ ಪಡೆಯುವುದಿತ್ತು. ಅಲ್ಲಿಂದ ಮುಂದುವರೆದ ಪರಿಚಯ ಆರೋಗ್ಯ-ಮಾಹಿತಿ ಕುರಿತಾಗಿಯೂ ವಿಚಾರ ವಿನಿಮಯಮಾಡಿಕೊಳ್ಳುತ್ತೇವೆ. 


ಅವರ ಬರವಣಿಗೆಯ ಪರಿಚಯವಿದ್ದ ನನಗೆ ಈ ಹೊಸ ಪುಸ್ತಕಕ್ಕೆ ಮುಂಗಡ ಪಾವತಿಸಲು ಯಾವುದೇ ಸಂಶಯವಿರಲಿಲ್ಲ. ಪುಸ್ತಕ ನಿನ್ನೆಯಷ್ಟೇ ಕೈ ಸೇರಿತು... ಅಮೋಘ.. ಅದ್ಭುತ.. ಅಪೂರ್ವ ಗ್ರಂಥ!! 


ಭೂತಾರಾಧನೆಯ ಕುರಿತು "ಏನು ಇದೆ?" ಅಂದುಕೊಳ್ಳುವವರಿಗೆ ಇದೊಂದು ಮಾಹಾಗ್ರಂಥ!! ಕರಾವಳಿ ಪ್ರಾಂತ್ಯದಲ್ಲಿ ನಾವೆಲ್ಲಾ ದೈವಾರಾಧನೆಯನ್ನು ನಡೆಸುವವರೇ. ಆದರೆ ಅವುಗಳ ಇತಿಹಾಸ ಒಂದಿನಿತೂ ತಿಳಿದಿಲ್ಲ‌. ಹಾಗಾಗಿ ನನಗನಿಸಿದಂತೆ ಪ್ರತಿಯೋರ್ವರ ಮನೆಯಲ್ಲೂ ಖಡ್ಡಾಯವಾಗಿ ಇರತಕ್ಕಂಥ ಅಪೂರ್ವ ಪುಸ್ತಕ ಈ "#ಕರಾವಳಿಯ #ಸಾವಿರದೊಂದು #ದೈವಗಳು" (ನಮ್ಮ ಇತಿಹಾಸ ನಾವಲ್ಲದೆ ಇನ್ಯಾರು ತಿಳ್ಕೋಬೇಕು? ಅಲ್ವೇ?! )


ಅಷ್ಟಕ್ಕೂ ಇದೊಂದು ಸಾಮಾನ್ಯ ಗ್ರಂಥವಲ್ಲ. ಕನಿಷ್ಠ ಹತ್ತು ಅಧ್ಯಯನ (ಪಿಹೆಚ್'ಡಿ) ಈ ಒಂದು ಗ್ರಂಥದ ಮೇಲೇ ಮಾಡಲು ಸಾಧ್ಯವಿದೆ!!  ಹಾಗಾಗಿ ಇದರ ಇಂಗ್ಲೀಷ್ ಅವತರಣಿಕೆ ಶೀಘ್ರವಾಗಿ ಬರಲಿ, ಆ ಮೂಲಕ ನಮ್ಮ ಸಂಸ್ಕ್ರತಿಯು ವಿಶ್ವದಾದ್ಯಂತ ಪರಿಚಯವಾಗಲೆಂದು ಹಾರೈಸುತ್ತೇನೆ. 


#ಕೊನೆಯದಾಗಿ: 


ನಮ್ಮ ಮುಂದಿನ ಪೀಳಿಗೆಗೆ ನಾವು ನೀಡುವ ಅತ್ಯುತ್ತಮ ಉಡುಗೊರೆಯೆಂದರೆ ನಮ್ಮ ಸಂಸ್ಕೃತಿಯನ್ನು ತಿಳಿಸಿಕೊಡುವುದು. ಈ ಹಿಂದೆ ಸೂಕ್ತ ದಾಖಲೆಗಳಿಲ್ಲದೆ ಅದೆಷ್ಟನ್ನೋ ನಾವು ಕಳೆದುಕೊಂಡಿದ್ದೇವೆ, ಇಂದೂ ಕಳೆದುಕೊಳ್ಳುತ್ತಿದ್ದೇವೆ. ಹಾಗಾಗಿ.. ಮುಂದಿನ ತಲೆಮಾರಿಗೆ ಸಂಸ್ಕ್ರತಿ ಪರಿಚಯಿಸಲು ನನ್ನ ಮಗನಾದ #ಹಿರಣ್ಮಯ #ರಾಂ ನಿಗೆ ಈ ಪುಸ್ತಕವನ್ನು ಕೊಡುತ್ತಿದ್ದೇನೆ. 


Lakshmi V  ಲಕ್ಷ್ಮೀ ಮೇಡಂ... ಕೇವಲ ಧನ್ಯವಾದ ಹೇಳಿದ್ರೆ ಮುಗಿಯಲ್ಲ... ಬೇರೆ ಹೇಳ್ಲಿಕ್ಕೆ ಪದಗಳೂ ಇಲ್ಲ!! ನಿಮ್ಮ ಆಶೀರ್ವಾದ ಇರ್ಲಿ ಅಷ್ಟೇ ಕೇಳ್ಕೋಬೋದು 🙏🙏🙏


#ನಮಸ್ತೇ 🙏🙏


ದುಂಡಿರಾಜರು ಹೇಳಿದಂತೆ 

ರಾವಣನ ಪತ್ನಿ ಮಂಡೋದರಿ..‌

ಕನ್ನಡ ಪುಸ್ತಕ ಕೊಂಡೋದಿರಿ!! 😂😂


ಪುಸ್ತಕಕ್ಕೆ ಇಲ್ಲಿ ಸಂಪರ್ಕಿಸಬಹುದು. 


Dr Laxmi V 

9480516684

No comments:

Post a Comment