Tuesday, 10 October 2023

ಸೇಮಿಕಲ್ಲ ಪಂಜುರ್ಲಿ‌: ಡಾ.ಲಕ್ಷ್ಮೀ ಜಿ ಪ್ರಸಾದ್

ರಾವಳಿಯ ಸಾವಿರದೊಂದು  ದೈವಗಳು :ಸೇಮಿ ಕಲ್ಲ ಪಂಜುರ್ಲಿ © ಡಾ.ಲಕ್ಷ್ಮೀ ಜಿ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು ಮೊಬೈಲ್ 9480516684 

                                                ಚಿತ್ರ ಕೃಪೆ :ಧರ್ಮ ದೈವ
ಹೆಸರಿನಲ್ಲಿ ಪಂಜುರ್ಲಿ ಎಂದು ಇದ್ದರೂ ಕ್ಷೇಮಕಲ್ಲ /ಸೇಮಿ ಕಲ್ಲ ಪಂಜುರ್ಲಿ, ಪಂಜುರ್ಲಿ ದೈವವಲ್ಲ .ಪಂಜುರ್ಲಿಯ ಸೇರಿಗೆ ದೈವ ಕೂಡ ಅಲ್ಲ
ಪ್ರಧಾನ ದೈವದ ಸೇರಿಗೆಯಾಗಿ ಅನೇಕ ದೈವಗಳಿಗೆ ಆರಾಧನೆ ಇರುತ್ತದೆ .ಸಾಮಾನ್ಯವಾಗಿ ಸೇರಿಗೆ ದೈವಗಳು ಪ್ರಧಾನ ದೈವದ ಆಗ್ರಹ ಅಥವಾ ಅನುಗ್ರಹ ಪಡೆದು ದೈವತ್ವ ಪಡೆದ ಶಕ್ತಿಗಳಾಗಿರುತ್ತವೆ
ಹೀಗೆ ಸತ್ಯನಾಪುರದ ಸಿರಿಯ ಆಗ್ರಹಕ್ಕೆ ತುತ್ತಾಗೆ ದೈವತ್ವ ಪಡೆದ ದೈವ ಕ್ಷೇಮಿಕಲ್ಲ ಪಂಜುರ್ಲಿ .ಸತ್ಯನಾಪುರದ ರಾಜ ಬೆರ್ಮ ಆಳ್ವನಿಗೆ ಹುಟ್ಟಿದ ಮಗು ಸಾಯುತ್ತದೆ. ಹೆಂಡತಿಯೂ ಸಾಯುತ್ತಾಳೆ. ಬೇರೆ ಸಂತಾನವಿಲ್ಲದ ವೃದ್ಧ ಅರಸ ಬೆರ್ಮ ಆಳ್ವನಿಗೆ ‘ಮುಂದೆ ತನ್ನ ರಾಜ್ಯಕ್ಕೆ ದಿಕ್ಕಿಲ್ಲ’ ಎಂದು ಚಿಂತೆಯಾಗಿ ದುಃಖಿಸುತ್ತಾನೆ. ಅವನ ಕಣ್ಣೀರು ಅವನ ಕುಲದೈವ ಲಂಕೆಲೋಕನಾಡಿನ ಬೆರ್ಮರ ಪಾದಕ್ಕೆ ಸಂಪಿಗೆ ಹೂವಿನ ರಾಶಿಯಾಗಿ ಬೀಳುತ್ತದೆ.© ಡಾ.ಲಕ್ಷ್ಮೀ ಜಿ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು ಮೊಬೈಲ್ 9480516684 

ಆಗ ಬೆರ್ಮೆರ್ ಬಡಬ್ರಾಹ್ಮಣನ ರೂಪ ಧರಿಸಿ, ಬೆರ್ಮ ಆಳ್ವನಲ್ಲಿಗೆ ಬಂದು ‘ಲಂಕೆಲೋಕನಾಡಿನ ಆದಿ ಆಲಡೆ, ಕಾಡು-ಪೊದೆ ಬಳ್ಳಿಯಿಂದ ಸುತ್ತುವರಿದು ಪಾಳು ಬಿದ್ದಿದೆ. ಅದರ ಜೀರ್ಣೋದ್ಧಾರ ಮಾಡಿದರೆ ನಿನ್ನ ಸಮಸ್ಯೆ ಸರಿಹೋಗುತ್ತದೆ’ ಎಂದು ಹೇಳುತ್ತಾನೆ. ಅಂತೆಯೇ ಬೆರ್ಮ ಆಳ್ವ ಹೋಗಿ ಲಂಕೆಲೋಕನಾಡಿನ ‘ಬೆರ್ಮೆರ’ ಪ್ರಾರ್ಥನೆಯನ್ನು ಮಾಡಿ ಕಾಡಿನಲ್ಲಿರುವ ಬೆರ್ಮೆರನ್ನು ತಂದು ಏಳದೆ ಗುಂಡ ಗುಡಿ ಕಟ್ಟಿಸುತ್ತೇನೆ ಎಂದು ಹರಿಕೆ ಹೇಳುತ್ತಾನೆ. ಆಗ ಪ್ರಸಾದರೂಪದಲ್ಲಿ ಸಿಕ್ಕ ಹಿಂಗಾರದ ಹಾಳೆಯ ಮೇಲಿನ ಗಂಧದ ಗುಳಿಗೆ ಹೆಣ್ಣುಮಗುವಾಗುತ್ತದೆ.
ಆ ಮಗುವನ್ನು ದೇವರ ವರವೆಂದು ಭಾವಿಸಿ ಬೆರ್ಮ ಆಳ್ವ ಆ ಮಗುವಿಗೆ ‘ಬಾಲೆಕ್ಕೆ ಸಿರಿ’ ಎಂದು ಹೆಸರಿಟ್ಟು ಸಾಕುತ್ತಾನೆ. ಮುಂದೆ ಬಸ್ರೂರು ಬತ್ತಕೇರಿ ಅರಮನೆಯ ಕಾಂತುಪೂಂಜರ ಜೊತೆ ಅವಳ ಮದುವೆಯಾಗುತ್ತದೆ. ಮುಂದೆ ಕಾಂತುಪೂಂಜ ಸೂಳೆ ಸಿದ್ದುವಿನ ಸಹವಾಸ ಮಾಡುತ್ತಾನೆ. ಸಿರಿ ಗರ್ಭಿಣಿಯಾಗುತ್ತಾಳೆ. ಅವಳ ಸೀಮಂತಕ್ಕೆ, ತೆಗೆದ ಸೀರೆಯನ್ನು ಸೂಳೆ ಸಿದ್ದು ಉಟ್ಟು ನೆರಿಗೆ ಹಾಳು ಮಾಡುತ್ತಾಳೆ. ಈ ಬಗ್ಗೆ ಬೆರ್ಮೆರ್ ಸಿರಿಗೆ ಸೂಚನೆ ನೀಡಿರುತ್ತಾರೆ.© ಡಾ.ಲಕ್ಷ್ಮೀ ಜಿ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು ಮೊಬೈಲ್ 9480516684 

 ಆದ್ದರಿಂದ ಆ ಸೀರೆಯನ್ನು ತಿರಸ್ಕರಿಸಿ ತನ್ನ ಅಜ್ಜ ತಂದ ಸೀರೆಯನ್ನು ಉಡುತ್ತಾಳೆ. ಎಲ್ಲರ ಎದುರು ತನ್ನ ಮರ್ಯಾದೆ ತೆಗೆದಳೆಂದು ಕಾಂತುಪೂಂಜ ಸಿರಿಯೊಡನೆ ಕೋಪಿಸುತ್ತಾನೆ. ಮುಂದೆ ಅವಳು ಮಗುವನ್ನು ಹೆತ್ತಾಗಲೂ ನೋಡಲು ಬರುವುದಿಲ್ಲ. ಬೆರ್ಮ ಆಳ್ವ ಸತ್ತಾಗಲೂ ಬರುವುದಿಲ್ಲ. ಕಾಂತುಪೂಂಜನ ಪಿತೂರಿಯಿಂದಾಗಿ ಬೆರ್ಮ ಆಳ್ವನ ಅರಮನೆ, ರಾಜ್ಯ ದಾಯಾದಿಗಳ ಪಾಲಾಗುತ್ತದೆ.
 ಸಿರಿ ತನ್ನ ಮಗು ಕುಮಾರ ಹಾಗೂ ಕೆಲಸದ ಹೆಂಗಸು ದಾರುವಿನೊಂದಿಗೆ ಬಸ್ರೂರು ಬತ್ತಕೇರಿ ಅರಮನೆಗೆ ಬಂದು ಬರ (ವಿಚ್ಛೇದ)ವನ್ನು ಕೇಳುತ್ತಾಳೆ. ಮುಂದೆ ಅರಮನೆ ಉರಿದು ಹೋಗುವಂತೆ ಶಾಪ ಕೊಟ್ಟು ಅಲ್ಲಿಂದ ದೇಶಾಂತರ ಹೋಗುತ್ತಾಳೆ
ಸಂಜೆ ಹೊತ್ತು ಕಂತುವುದರ ಒಳಗೆ ತನ್ನ ರಾಜ್ಯದ ಗದುಯನ್ನು ದಾಟಿ ಹೋಗಬೇಕೆಂದು ಕಾಂತು ಪೂಂಜ ಹೇಳುತ್ತಾನೆ .
ಅಂತೆಯೇ ದಾರುವಿನೊಂದಿಗೆ ತೊಟ್ಟಿಲ ಮಗುವನ್ನು ಹಿಡಿದುಕೊಂಡು ಬರುವಾಗ ದಾರಿಯಲ್ಲಿ ಗಾಳಿ ಕೊಂತ್ಯಮ್ಮ ದೇವರು ಸಿಗುತ್ತಾರೆ .
ಸಿರಿಗೆ ರಸ ಬಾಲೆ ಹಣ್ಣು ಹಾಲು ತಂದು ಕೊಡುತ್ತಾಳೆ .ಮತ್ತೆ ಅವಳಲ್ಲಿ ನನ್ನ ಮಗ ವೀರ ಭದ್ರ ಕುಮಾರ ಬರುವ ಮೊದಲು ಇಲ್ಲಿಂದ ಹೋಗು ಅವನು ಕಂಡರೆ ನಿನ್ನನ್ನು ಬಿಡಲಾರ ,ಅವನು ಸಿಕ್ಕರೆ ಅವನನ್ನು ನಿನ್ನ ಮಗನ ಹಾಗೆ ಭಾವಿಸಿ ಅವನ ತಪ್ಪನ್ನು ಕ್ಷಮಿಸಬೇಕು ಎಂದು ಹೇಳುತ್ತಾರೆ .ಆಯಿತು ಎಂದು ಹೇಳುತ್ತಾಳೆ ಸಿರಿ
ಅಲ್ಲಿಂದ ಮುಂದೆ ಹೋಗುವಾಗ ವೀರ ಭದ್ರ ಕುಮಾರ ಹಿಮ್ಬಾಲಿಸ್ಕೊಂದು ಬಂದು ಅಡ್ಡ ಕಟ್ಟುತ್ತಾನೆ .ಅವಳತಲೆ ಕೂದಲಿಗೆ ಕೈ ಹಾಕುತ್ತಾನೆ .ಆಗ


ಓ ಮುಟ್ಟಡ ಮುಟ್ಟಡ ಪಂಡೆರ್ ಬಾಲೆಕ್ಕೆ ಸಿರಿಯೇ
ಓ ಪನ್ನಲ ಪತ್ತಿನಕೇಂಡಿಜೆ ಪಂಡೆರ್ ಆರಾಂಡ ಆನಿಗಯ್ ಯೇ
ಓ ಒಲಿಪ್ಪಾಲ ಉದೆಟ್ ಲ ನೆದಿಪ್ಪಾಲ ಕಲ್ಲುಲ ಪಾದೆಲ ನೆಗೆಪ್ಪುಲಾಯೆ

ನನ್ನನ್ನು ಮುಟ್ಟ ಬೇಡ ಮುಟ್ಟ ಬೇಡ ಎಂದು ಸಿರಿ ಹೇಳುತ್ತಾಳೆ .ಅವಳ ಮಾತನ್ನು ಲಕ್ಷಿಸದೆ ಮುಂದುವರಿದ ಅವನಿಗೆ ಶಾಪ ಕೊಟ್ಟು ಹೊಳೆಯಲ್ಲಿ ಪಾದೆ ಕಲ್ಲಾಗುವಂತೆಮಾಡುತ್ತಾಳೆ .ಮುಂದೆ ಅವನ ತಾಯಿಗೆ ಕೊಟ್ಟ ಮಾತು ನೆನಪಾಗಿ ಆತನಿಗೆ ದೈವತ್ವ ನೀಡಿ ಕ್ಷೇಮ ಕಲ್ಲು ಪಂಜುರ್ಲಿ ಎಂಬ ಹೆಸರಿನಲ್ಲಿ ಆರಾಧನೆ ಪಡೆ ಎಂದು ಹೇಳುತ್ತಾಳೆ .
© ಡಾ.ಲಕ್ಷ್ಮೀ ಜಿ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು ಮೊಬೈಲ್ 9480516684 
ಹೀಗೆ ಸಿರಿಯ ಅನುಗ್ರಹದಿಂದ ದೈವತ್ವ ಪಡೆದ ವೀರ ಭದ್ರ ಕುಮಾರ ಕ್ಷೇಮ ಕಲ್ಲ ಪಂಜುರ್ಲಿ ದೈವವಾಗಿ ನೆಲೆ ನಿಲ್ಲುತ್ತಾನೆ .

No comments:

Monday, 9 October 2023

ಕರಾವಳಿಯ ಸಾವಿರದೊಂದು ದೈವಗಳು- ಪಿಲಿಚಾಮುಂಡಿ/ ವ್ಯಾಘ್ರ ಚಾಮುಂಡಿ- ಡಾ.ಲಕ್ಷ್ಮೀ ಜಿ ಪ್ರಸಾದ್

 


ಪಿಲಿಚಾಮುಂಡಿ - ಡಾ.ಲಕ್ಷ್ಮೀ ಜಿ ಪ್ರಸಾದ್ 


                 ಪಿಲಿಚಾಮುಂಡಿ ಭೂತವನ್ನು ದುರ್ಗೆಯ ಅಂಶ ಎನ್ನುವ ದೃಷ್ಟಿಯಿಂದ ಜುಮಾದಿಗೆ ಸಮಾನವಾದುದು ಎಂದು ಭಾವಿಸಿದ್ದಾರೆ” ಎಂದು ವಿವೇಕ ರೈ ಹೇಳುತ್ತಾರೆ. ಹುಲಿಯನ್ನೇರಿ ಯುದ್ಧ ಮಾಡಿ ಚಂಡಮುಂಡರನ್ನು ಸಂಹಾರ ಮಾಡಿರುವ ಶಕ್ತಿಸ್ವರೂಪಿಗೆ ದೇವಿಯನ್ನು ಚಾಮುಂಡಿಚಾಮುಂಡೇಶ್ವರಿ ಎಂದು ಕರೆಯುತ್ತಾರೆ. ಆದರೆ ಹುಲಿಯನ್ನೇ ಕುಲದೈವವಾಗಿರಿಸಿಕೊಂಡ ಜನಾಂಗಗಳ ಆರಾಧನೆಗೆ ಪೌರಾಣಿಕ ಕಲ್ಪನೆ ಸೇರಿ ಅದು ಪಿಲಿಚಾಮುಂಡಿ ಭೂತವಾಗಿರಬಹುದು ಎಂದು ವಿವೇಕ ರೈ ಅಭಿಪ್ರಾಯಪಟ್ಟಿದ್ದಾರೆ. ಪಿಲಿಚಾಮುಂಡಿಯ ಉಗಮಕ್ಕೆ ಸಂಬಂಧಿಸಿದ ಪಾಡ್ದನಗಳು ಲಭ್ಯವಿಲ್ಲ. ಆದರೆ ಅದರ ಪ್ರಸರಣವನ್ನುಮಹಿಮೆಯನ್ನು ಹೇಳುವ ಪಾಡ್ದನಗಳಿವೆ. ಪಾಡ್ದನಗಳ ಪ್ರಕಾರ ಮಂಜುಪೂಂಜನು ಕಳ್ಳರಿಂದ ರಕ್ಷಣೆ ಪಡೆಯುವುದಕ್ಕಾಗಿ ಪಿಲಿಚಾಮುಂಡಿ ಭೂತವನ್ನು ತರುತ್ತಾನೆ. ಆದರೆ ತಮ್ಮ ಕುಲದೈವವಾದ ಪಿಲಿಚಾಮುಂಡಿಯನ್ನು ಹಣದ ಆಸೆಯಿಂದ ಬಾಳೊಳಿಯವರು ಮಂಜುಪೂಂಜನಿಗೆ ಕೊಡುತ್ತಾರೆ. ಆದ್ದರಿಂದ ಮಂಜುಪೂಂಜನಿಗೆ ಅದು ನಾನಾವಿಧವಾದ ತೊಂದರೆಗಳನ್ನು ಉಂಟುಮಾಡುತ್ತದೆ. ನಂತರ ಸ್ಥಾನವನ್ನು ಕೇಳಿ ಪಡೆದು ನೆಲೆ ನಿಲ್ಲುತ್ತದೆ. ಪಿಲಿಚಾಮುಂಡಿ ಖಡ್ಗವನ್ನು ಕೇಳಿ ಪಡೆಯುತ್ತದೆ. ಪಿಲಿಚಾಮುಂಡಿ ಭೂತದ ಆಯುಧ ಖಡ್ಗವೇ ಆಗಿದೆ. ಇನ್ನೊಂದು ಪಾಡ್ದನದ ಪ್ರಕಾರ ಓಬಾದೇಶಿ ಎನ್ನುವವರು ನೆಕರೆಯ ಕೈಯಿಂದ ವೀಳ್ಯದೆಲೆಯಲ್ಲಿ ಮಂತ್ರಿಸಿದ ಪಿಲಿಚಾಮುಂಡಿ ಭೂತವನ್ನು ತರುತ್ತಾರೆ. ಆದರೆ ಅದರ ಶಕ್ತಿಯನ್ನು ತಡೆಯಲು ಸಾಧ್ಯವಾಗದೆಕೋಲಬಲಿ ನೀಡಿ ಅದನ್ನು ಶಾಂತಗೊಳಿಸುತ್ತಾರೆ. ಜೈನರಲ್ಲಿ ಚಾಮುಂಡಾ’ ಎಂಬ ಹೆಸರಿನ ಯಕ್ಷಿಯ ಆರಾಧನೆ ಇದೆ.© ಡಾ.ಲಕ್ಷ್ಮೀ ಜಿ‌ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು,ಮೊಬೈಲ್ 9480516684 

ಕರಾವಳಿಯ ಸಾವಿರದೊಂದು ದೈವಗಳು :ಪಾರ್ಥಂಪಾಡಿ( ಜಟಾಧಾರಿ) ದೈವ- ಡಾ.ಲಕ್ಷ್ಮೀ ಜಿ ಪ್ರಸಾದ್

 

ಚಿತ್ರ : ಅಂತರ್ಜಾಲ 
ಪಾರ್ಥಂಪಾಡಿ( ಜಟಾಧಾರಿ) ದೈವ- ಡಾ.ಲಕ್ಷ್ಮೀ ಜಿ ಪ್ರಸಾದ್ 

ಪಾರ್ಥಂಪಾಡಿ (ಜಟಾಧಾರಿ) ದೈವ ವಿಟ್ಲ ಅರಸರ ಅರಮನೆಯ ಪಟ್ಟದ ದೈವ. ಮೂಲತಃ ಓರ್ವ ವೀರ ಪುರುಷ .ಈತ ವಿಟ್ಲ ಅರಸರೊಬ್ಬರನ್ನು  ಬಂಧನದಿಂದ ಬಿಡಿಸಿ ಸ್ವತಂತ್ರಗೊಳಿಸಿದ ವೀರ ಎಂಬ ಐತಿಹ್ಯವನ್ನು ಹಿರಿಯರಾದ ಕುಂಡ ನಲಿಕೆಯವರು ತುಂಬಾ ಸಮಯದ ಹಿಂದೆ ತಿಳಿಸಿದ್ದರು

 ವಿಟ್ಲ ಅರಸರ ಚಾವಡಿಯ ಪಟ್ಟದ ದೈವದ ಮೂಲ ಹೆಸರು ಪಾರ್ಥಂಪಾಡಿ ದೈವ.ವಿಟ್ಲ ಅರಮನೆಯ ಚಾವಡಿಗೆ ಪಾರ್ಥಂಪಾಡಿ ಚಾವಡಿ ಎಂಬ ಹೆಸರಿದ್ದ ಬಗ್ವೆ ಇತಿಹಾಸದಲ್ಲಿ ಉಲ್ಲೇಖಗಳಿವೆ.ಇದನ್ನು ಜಟಾಧಾರಿ ಎಂದೂ ಕರೆಯುತ್ತಾರೆ 

ಯಾವ ವಿಟ್ಲದ ಅರಸರು ಬಂಧನಕ್ಕೊಳಗಾಗಿದ್ದರು ? ಯಾಕೆ ? ಅವರನ್ನು ಬಂಧನದಿಂದ ಬಿಡಿಸಿದ ವೀರ ಯಾರು ಎಂಬ ಬಗ್ಗೆ ಮಾಹಿತಿ ಹುಡುಕುತ್ತಾ ಇದ್ದಾಗ ಕೆಂಡ ಸಂಪಿಗೆಯಲ್ಲಿ ಡಾ.ಜನಾರ್ಧನ ಭಟ್ ಅವರು ಬರೆಯುತ್ತಿದ್ದ ಓಬೀರಾಯನ ಕಥೆಗಳು ಅಂಕಣದಲ್ಲಿ ಬೇಕಲ ರಾಮನಾಯಕರ ಒಂದು ಕಥೆ ಸಿಕ್ಕಿತು.ಇದು ಇತಿಹಾಸ ಆಧಾರಿತ ಕಥಾನಕವಾಗಿದೆ.

ಪುಣಚ ಗ್ರಾಮದ ದೊಡ್ಡ ಮನೆ ಈಶ್ವರಯ್ಯನವರು ಇಲ್ಲಿನ ಮೂಲ ಪುರುಷ.ಇವರು ಮೊದಲು ವಿಟ್ಲ ಅರಸರಬಗ್ಗೆ ಅತೀವ ಪ್ರೀತಿ ಗೌರವ ಉಳ್ಳವರಾಗಿದ್ದರು..ಇವರ ಬಗ್ಗೆ ಬೇಕಲ ರಾಮನಾಯಕರು "

ಅಂದಿನ ಇಟ್ಟಲ ಹೆಗ್ಗಡೆಗೆ ಅವನಲ್ಲಿ ತುಂಬ ಸ್ನೇಹ ವಿಶ್ವಾಸ. ಗಂಡುಡೆಯುಟ್ಟು ದೊಡ್ಡ ಮುಂಡಾಸನವನ್ನು ಸುತ್ತಿ ಬಿಳಿಯ ಬಗಲು ಕಸೆಯ ನಿಲುವಂಗಿ, ಜರತಾರಿ ಅಂಗರೇಖು ತೊಟ್ಟು ಬಿಗಿದ ಪಟ್ಟಿದಟ್ಟಿಯಲ್ಲಿ ಬೆಳ್ಳಿ ಹಿಡಿಯ ನೀಳ್ಗತ್ತಿಯನ್ನು ಸಿಕ್ಕಿಸಿಕೊಂಡು ಐವತ್ತರ ಹರಯದ ಆ ವೀರನು ಓಲಗದಲ್ಲಿ ಸುಳಿದನೆಂದರೆ ಅವನ ಗಂಡುಗಾಡಿಯಿಂದ ಪಾರ್ಥಂಪಾಡಿ ಚಾವಡಿಯೆಲ್ಲ ಬೆಳಗುತ್ತಿತ್ತು.ಎಂದಿದ್ದಾರೆ.

© ಡಾ‌.ಲಕ್ಷ್ಮೀ ಜಿ‌ ಪ್ರಸಾದ್ ,ಲೇ ಕರಾವಳಿಯ ಸಾವಿರದೊಂದು ದೈವಗಳು ಮೊಬೈಲ್ 9480516684:

ಊರಿನ ಎಲ್ಲ ಕೂಟ ಸ್ಥಾನ ಪಂಚಾಯತಿಗಳಿಗೆಲ್ಲ ಅವನೇ ಅಗ್ರಣಿ. ಅವನ ಮಾತಿಗೆ ಇದಿರಿಲ್ಲ. ಸೀಮೆಯ ಸಾವಿರದೈನೂರು ಆಳಿಗೆ ಅವನಲ್ಲಿ ಅಂಥ ಆದರಾಭಿಮಾನ. ಜಾತ್ರೆ, ಸಮಾರಾಧನೆ, ಅಯನ, ಕಂಬಳಗಳಿಗೆ ಹಣ ಸೂರೆಗುಡುತ್ತಿದ್ದನು. ಅವನ ಆ ದೊಡ್ಡ ಮನೆಗೆ ಹಸಿವಿನಿಂದ ಹೋದವರು ಬರಿ ಹೊಟ್ಟೆಯಲ್ಲಿ ಬಂದುದಿಲ್ಲ. ಸಹಾಯ ಬೇಡಲು ಹೋದವರು ಬರಿಗೈಯಲ್ಲಿ ಮರಳಿದುದಿಲ್ಲ. ಇತಿಗಳಿಗೆಲ್ಲ ಅವನೇ ಮೊಕ್ತೇಸರ. ಶುಭ ಶೋಭನಗಳಿಗೆ ಅವನಿಗೆ ಓಲಗದ ಹೇಳಿಕೆ. ಮದುವೆ ಮುಂಜಿಗಳಲ್ಲಿ ಅವನ ಮನೆಗೆ ಮೊದಲು ಸೇಸೆಯ ಮರ್ಯಾದೆ. ಅವನು ಹೋದಲ್ಲೆಲ್ಲ ಅವನಿಗೆ ಮೂರು ಮಣೆಯ ಮನ್ನಣೆ – ಒಂದು ಅವನ ಖಡ್ಗಕ್ಕೆ. ಒಂದು ಮುಂಡಾಸು ಇರಿಸುವುದಕ್ಕೆ, ಒಂದು ಅವನ ಆಸನಕ್ಕೆ. ಎಲ್ಲಿ ಹೋದರೂ ಅವನ ಮಾತುಕತೆ ನಡೆಯುತ್ತಿತ್ತು. ನಡೆದು ನಡೆದು ಅದು ಇಕ್ಕೇರಿಯ ಹೊನ್ನಾಗಿತ್ತು." ಎಂದು ರಾಮನಸಯಕರು ಈಶ್ವರಯ್ಯನ ವ್ಯಕ್ತಿತ್ವವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ

ವಿಟ್ಲ ಅರಸರು ಇಕ್ಕೇರಿಯ ಸಾಮಂತರಾಗಿದ್ದ ಕಾಲವದು.ಆಗ ಇಕ್ಕೇರಿಯ ಅರಸರು ಈಶ್ವರಯ್ಯನ ಸೌರ್ಯ ಸಾಹಸ ಧೀಮಂತಿಕೆಯನ್ನು ನೋಡಿ ತಮ್ಮ ಸೇನೆಯ ದಳವಾಯಿಯನ್ನಾಗಿ ಮಾಡಿದರು© ಡಾ.ಲಕ್ಷ್ಮೀ ಜಿ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು ಮೊಬೈಲ್ 9480516684 

ಈ ಬಗ್ಗೆ ಬೇಕಲ ರಾಮನಾಯಕರು "

ಕ್ರಿ.ಶ. 1715ರಲ್ಲಿ ಕೆಳದಿಯಲ್ಲಿ ಎರಡನೇ ಸೋಮಶೇಖರ ನಾಯಕನು ಪಟ್ಟವೇರಿ ಪರಮ ಪ್ರಸಿದ್ಧಿಯನ್ನು ಪಡೆದಿದ್ದನು. ನೆಗಳ್ತೆವೆತ್ತ ಶಿವಪ್ಪನಾಯಕನು ಚಂದ್ರಗಿರಿ, ಬೇರ, ಚಿತ್ತಾರಿ ಕೋಟೆಗಳನ್ನು ಬಲ್ಪಗೈಸಿ ನೀಲೇಶ್ವರದವರೆಗೆ ಗಡಿಯನ್ನೊತ್ತಿ ತೊಲಗದ ಕಂಬವನ್ನು ನಿಲ್ಲಿಸಿದ್ದರೂ ಆ ಪ್ರದೇಶದ ಹಿಡಿತವಿನ್ನೂ ಬೇರುಗೊಂಡಿರಲಿಲ್ಲ. ಎಡಬಲದ ಮಲೆಯಾಳಿಗಳು ಆಗಾಗ ಗುಲ್ಲೆಬ್ಬಿಸುತ್ತಿದ್ದರು. ಒಮ್ಮೆ ಕೋಲತ್ತರಸ ರವಿವರ್ಮರಾಜನು ಕುಹಕೋಪಾಯಗಳಿಂದ ಕುಂಬಳೆಯರಸನನ್ನು ಕೂಡಿಕೊಂಡು ನಾಯಿಮಾರ, ಮಾಪಿಳ್ಳೆ ಮೊದಲಾದ ಮಲೆಯಾಳಿ ಜನರ ಪಡೆಯೊಂದಿಗೆ ಬಲವೆತ್ತಿ ಬಂದು ಚಂದ್ರಗಿರಿ ಕೋಟೆಯನ್ನು ಲಗ್ಗೆಯಿಟ್ಟನು. ಪರಿಸರದ ಊರು ಕೇರಿಗಳನ್ನು ಕೊಳ್ಳೆಹೊಡೆದನು. ತಿರುಕಣ್ಣೂರು ತಿರೂರು ಕೋವಿಲಗಳನ್ನು ಸುಲಿದು ಊರಿಗೆ ಕಿಚ್ಚಿಟ್ಟನು. (ಹಾಗೆ ಸುಟ್ಟು ಕರಿಪುಡಿಯಾದ ಭಾಗವು ಈಗಲೂ ಕರಿಪೇಡಿಯೆಂದು ಕರೆಯಲ್ಪಡುತ್ತಿದೆ.) ಇದನ್ನು ಕಂಡು ಸೋಮಶೇಖರ ನಾಯಕನು ಕೆರಳಿ ಮಲೆತು ಮಾರ್ಮಲೆವ ಮಲೆಯಾಳಿಗಳನ್ನು ಹತ್ತಿಕ್ಕುವುದಕ್ಕಾಗಿ ಚಂದ್ರಗಿರಿ ಕೋಟೆಗೆ ಬಲ್ದಂಡನ್ನು ಕಳುಹಿಸಿದನು. ಆ ಕನ್ನಡ ಸೇನೆಯು ಮುನಿದೆತ್ತಿ ಬಂದು ಭೋಂಕನೆ ಬರಸಿಡಿಲಂತೆರಗಿ ಅರಿಪಡೆಯನ್ನು ತರಿದು ತೂರಿ ದೆಸೆಗೆಡಿಸಿತು. ಕೋಲತ್ತರಸನು ಕೈಯೂರಿ ಕೈದುವನಿಕ್ಕಿ ಕೈ ಮುಗಿದು ಮುತ್ತಿಗೆ ಕಿತ್ತು ಕಾಲ್ತೆಗೆದನು. ಕುಂಬಳೆಯರಸನು ಸೆರೆಸಿಕ್ಕಿ ವೇಣುಪುರ ಕೋಟೆಯಲ್ಲಿ ಬಂಧಿತನಾದನು. ಈ ಭೀಕರ ಯುದ್ಧದಲ್ಲಿ ಈಶ್ವರಯ್ಯನ ಪಟುತರ ಭುಜ ಬಲವು ಬೆಳಕಿಗೆ ಬಂತು.

ಸೋಮಶೇಖರ ನಾಯಕನು ಮಲೆಯಾಳಿಗಳನ್ನು ಹಿಮ್ಮೆಟ್ಟಿಸಿ ಅಷ್ಟಕ್ಕೇ ಸುಮ್ಮನಾಗಲಿಲ್ಲ. ತೆಂಕನಾಡ ಗಡಿಯನ್ನು ಇನ್ನೂ ಮುಂದೊತ್ತಬೇಕೆಂದು ಸೇನೆಯನ್ನಟ್ಟಿದನು. ಆ ಮಹಾಸೈನ್ಯವು ಚಿತ್ತಾರಿ ಕೋಟೆಯಲ್ಲಿ ಪಾಳೆಯ ಬಿಟ್ಟು (ನಡೆ) ತಳಿಗೋಂಟೆಯನ್ನು ನಡೆಸುತ್ತ ಜಂತ್ರದ ಒಡ್ಡವಣೆಯ ಚಳಕದಿಂದ ಒತ್ತೊತ್ತಿ ಮುಂದುವರಿಯುತ್ತ ಇದಿರಾಂತವರನ್ನು ತಳ್ತಿರಿಯುತ್ತ ಉರವಣೆಯಿಂದ ಕಾದಿ ಶತ್ರುಗಳನ್ನು ನೆಲೆಗೆಡಿಸಿ ಅಲವತ್ತನಾಡು ನೀಲೇಶ್ವರಗಳನ್ನು ಹಾಯ್ದು ಪೆರಂಪುಯ ನದಿಯ ವರೆಗೆ ನುಗ್ಗಿ – ಆ ಪ್ರದೇಶವನ್ನೆಲ್ಲ ವಶಪಡಿಸಿಕೊಂಡಿತು. © ಡಾ.ಲಕ್ಷ್ಮೀ ಜಿ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು ಮೊಬೈಲ್ 9480516684 

ಸೋಮಶೇಖರ ನಾಯಕನು ಕಾಂಞಂಗಾಡಿನಲ್ಲಿ ‘ಹೊಸದುರ್ಗ’ವನ್ನು ಕಟ್ಟಿಸಿ ಫೌಜನ್ನಿಟ್ಟು ಭದ್ರಪಡಿಸಿದನು. ಈ ಮಹಾ ಕಾಳಗದಲ್ಲಿ ಈಶ್ವರಯ್ಯನ ಪರಾಕ್ರಮಕ್ಕೆ ಕಲಶವಿಟ್ಟಿತು. ಅವನ ಅದಟು, ಆರ್ಪು, ಅಂಗವಣೆಗಳನ್ನು ಕಂಡು ಬಾರಕೂರು ಸೂರಪ್ಪಯ್ಯನೇ ಮೊದಲಾದ ಚಮೂಪತಿಗಳು ಶಹಭಾಸ್ ಎಂದರು. ಶತ್ರು ಸೈನ್ಯವು ಬೆರಗಾಯಿತು. ಸೋಮಶೇಖರ ನಾಯಕನು ಸ್ವತಹ ಅವನ ರಣವಿಕ್ರಮದ ಆಯತಿಕೆಯನ್ನು ಕೊಂಡಾಡಿ ಅವನನ್ನು ದಳವಾಯಿ ಪದವಿಗೇರಿಸಿ ಬಿರುದು ಬಾವಲಿಗಳನ್ನಿತ್ತು ಸನ್ಮಾನಿಸಿದನು." ಎಂದು ಬಣ್ಣಿಸಿದ್ದಾರೆ

ಆ ಸಮಯದಲ್ಲಿ ದೋರ್ದಂಡ ವಿದಾಯ ಶ್ರುತ ಪ್ರತಾಪ’ ಎಂಬ ಬಿರುದಿಗೆ ಪಾತ್ರರಾಗಿದ್ದ ರವಿವರ್ಮ ನರಸಿಂಹರಸ ಡೊಂಬ ಹೆಗ್ಗಡೆಯು ಪ್ರಜಾನುರಾಗಿಯಾಗಿ ರಾಜ್ಯವನ್ನಾಳುತ್ತಿದ್ದನು

© ಡಾ‌.ಲಕ್ಷ್ಮೀ ಜಿ‌ ಪ್ರಸಾದ್ ,ಲೇ ಕರಾವಳಿಯ ಸಾವಿರದೊಂದು ದೈವಗಳು ಮೊಬೈಲ್ 9480516684:

ಆಗ ಸರಿಯಾಗಿ ಮಳೆ ಬಾರದೆ ಬೆಳೆ ಬೆಳೆಯದೆ ಜನರ ಆದಾಯ ಕಡಿಮೆಯಾಯಿತು.ಪ್ರಜಾನುರಾಗಿಯಾದ ಅರಸ ಬಲವಂತವಾಗಿ ರಾಯ ಸಂಗ್ರಹಿಸಲಿಲ್ಲ.ಇದರಿಂದಾಗಿ ಬೊಕ್ಕಸ ಬರಿದಾಗಿ ಇಕ್ಕೇರಿಯ ಅರಸರಿಗೆ ಕಪ್ಪ ಕಾಣಿಕೆ ಸಲ್ಲಿಸಲು ಸಾಧ್ಯವಾಗಲಿಲ್ಲ.ಇದರಿಂದಾಗಿ ಇಕ್ಕೇರಿಯ ಅರಸರು ವಿಟ್ಲದ ಅರಸರನ್ನು ಬಂಧಿಸಿ ಸೆರೆಮನೆಗೆ ತಳ್ಳಿದರು.© ಡಾ.ಲಕ್ಷ್ಮೀ ಜಿ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು ಮೊಬೈಲ್ 9480516684 

ದಳವಾಯಿ ಈಶ್ವರಯ್ಯನವರಿಗೆ ಸೆರೆಮನೆಯ ವಿಭಾಗದ ಜವಾಬ್ದಾರಿಯನ್ನು ಇಕ್ಕೆರಿಯ ಅರಸರು ವಹಿಸಿದ್ದರು.ಇಕ್ಕೇರಿಗೆ ನಿಷ್ಟರಾಗಿದ್ದ ವಿಟ್ಕ ಅರಸರು ಸೆರೆಮನೆಯಲ್ಲಿರುವುದು ತಿಳಿದು ಈಶ್ವರಯ್ಯನವರಿಗೆ ಬಹಳ ಸಂತಾಪವಾಯಿತು.ಪ್ರಧಾನಿ ನಿರ್ವಾಣ ಶೆಟ್ಟಿ ಅವರ ಸಹೋದರ ಗುರುವಪ್ಪನವರ ಜೊತೆ ಮಾತನಾಡಿದರು‌ಮಹಾರಾಜರಿಗೆ ಒಪ್ಪಿಸಲು ಸಾವಿರ ಹೊನ್ನಿನ ವ್ಯವಸ್ಥೆ ಮಾಡಿದರು ಉಳಿದ ಕಪ್ಒದ ಹಣವನ್ನು ಸಲ್ಲಿಸಲು ಕಾಲಾವಕಾಶ ಒದಗಿಸಿ ಅರಸರನ್ನು ಸ್ವತಂತ್ರರನ್ನಾಗಿ ಮಾಡಿದರು.ಕೊಡಬೇಕಾದ ಕಪ್ಪದ ಹಣದಲ್ಕಿ ಅರ್ಧದಷ್ಟು ರಿಯಾಯತಿ ನೀಡಿಸಿದರು.

ಹಾಗಾಗಿ ವಿಟ್ಲದ ಅರಸರು ದಳವಾಯಿ ಈಶ್ವರಯ್ಯನವರ ಬಗ್ಗೆ ಅಪಾರವಾದ ಗೌರವ ಅಭಿಮಾನಗಳನ್ನು ಹೊಂದಿದ್ದರು.ಹಾಗಾಗಿ ವಿಟ್ಲದ ಪಾರ್ಥಂಪಾಡಿ ಚಾವಡಿಯಲ್ಲಿ ಈಶ್ವರಯ್ಯನವರಿಗೆ ವಿಶೇಷವಾದ ಸ್ಥಾನ ಇತ್ತು‌

ತನ್ನನ್ನು ಸೆರೆಮನೆಯಿಂದ ಬಿಡಿಸಿ ಮತ್ತೆ ಅರಸೊತ್ತಿಗೆ ಸಿಗುವಂತೆ ಮಾಡಿ ಮಾನವನ್ನುಳಿಸಿದ ನಿರ್ವಾಣ ಶೆಟ್ಟಿಗೆ ತನ್ನ ಅಧೀನದ ಕಾಡುಮಠದಲ್ಲಿಯೂ, ದಳವಾಯಿ ಈಶ್ವರಯ್ಯನಿಗೆ ಪುಣಚೆ ಗ್ರಾಮದಲ್ಲಿಯೂ ಭೂಮಿಯನ್ನು ಉಂಬಳಿ ಬಿಟ್ಟರು

ಈ ಬಗ್ಗೆ ಶಾಸನವಿದ್ದು ಗಣಪತಿರಾವ್ ಐಗಳು ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ ಗ್ರಂಥದಲ್ಲಿ ಹೀಗೆ ಬರೆದಿದ್ದಾರೆ© ಡಾ.ಲಕ್ಷ್ಮೀ ಜಿ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು ಮೊಬೈಲ್ 9480516684 

ವಿಟ್ಲ ರಾಜ್ಯದ ಕಾಡುಮಠದ ವೀರಶೈವ ರಾದ ರಾಮಯ್ಯ ಶೆಟ್ರಲ್ಲಿರುವ ಶಾ. ಶ. 1641ನೇ (ಕ್ರಿ, ಶ. 1719)ನೆಯ ಶಾಸನದಲ್ಲಿ ವಿಟ್ಟಿ ದ ಡೊಂಬಹೆಗಡೆಯು ಇಕ್ಕೇರಿ ಆಸ್ಥಾನಕ್ಕೆ ಹೊಡ ತಕ್ಕ ಕಪ್ಪವನ್ನು ಕೊಡದೆ ಇದ್ದುದಕ್ಕಾಗಿ ಆ ಹೆಗಡೆಯನ್ನು ಸೆರೆಹಿಡಿದು ನಗರಕ್ಕೆ ಕೊಂಡುಹೋದಾಗ ನಗರ ಸಂಸ್ಥಾನದಲ್ಲಿ ಪ್ರಧಾನಿಯಾಗಿದ್ದ ಸಂಗಪ್ಪ ಶೆಟ್ಟಿಯ ಮಗ ನಿರ್ವಾಣ ಶೆಶ್ಚಿಯು ಆ ಹಣಕ್ಕೆ ಜಾಮೂನು ನಿಂತದ್ದ ಕ್ಕಾಗಿ ಅರಸೆನಾದ' ನರಸಿಂಹರಸೆ ಡೊಂಬಹೆಗಡೆಯು ಅದೇ ಮೋಜಿಗೆ ನಿರ್ವಾಣ ಶೆಟ್ಟಿಗೆ ಕೊಲ್ನಾಡು ಮತ್ತು ವಿಟ್ಲಿ ಗ್ರಾಮ ಗಳಲ್ಲಿ ಚಂದಪ್ಪಾಡಿ, ಕಾಡುಮರ, ನರ್ಕಳ ಈ ಮೂರು ಕಡೆ ಉಂಬಳಿ ಬಿಟ್ಟಿನೆಂದು ಕಾಣುತ್ತದೆ. ಆ ಆಸ್ತಿಯನ್ನು ಈಗಲೂ ಕಾಡುಮಠ ದವರು ಅನುಭವಿಸಿಕೊಂಡು ಬರುತ್ತಾರೆ. ಈ ಶಾಸನದಿಂದ ಕ್ರಿ. ಶ. 1719ರಲ್ಲಿ ನರಸಿಂಹ ಅರಸೆನಾದ ಡೊಂಬಹೆಗಡೆಯು ಆಳುತ್ತಿದ್ದನೆಂದು ಕಾಣುತ್ತದೆ.

" ಈಶ್ವರಯ್ಯನು ದಳವಾಯಿ ಪದವಿಯಿಂದ ನಿವೃತ್ತನಾದ ಮೇಲೆ ಈ ಮಾನ್ಯದ ಭೂಮಿಯಲ್ಲಿ ಮಹಿಷಿಮರ್ದಿನಿಯ ಪಾದತಲದಲ್ಲಿ ನೆಲೆಗೊಂಡನು" ಎಂದು ಬೇಕಲ ರಾಮನಾಯಕರು ಹೇಳಿದ್ದಾರೆ.© ಡಾ.ಲಕ್ಷ್ಮೀ ಜಿ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು ಮೊಬೈಲ್ 9480516684 

ದೇವರ ಪದತಲದಲ್ಲಿ ನೆಲೆಗೊಂಡನು ಎಂಬಲ್ಲಿ ಈಶ್ವರಯ್ಯ ದೈವತ್ವ ಪಡೆದುದರ ಸೂಚನೆ ಇದೆ.ಪುಣಚ ಮಹಿಷ ಮರ್ಧಿನಿ ದೇವಾಲಯದ ಪ್ರಧಾನ ದೈವ ಜಟಾಧಾರಿ..ಜಟಾಧಾರಿ ದೈವದ ಪೂರ್ವದ ಹೆಸರು ಪಾರ್ಥಂಪಾಡಿ ದೈವ ಎಂದು.ಬಾಡೂರಿಗೆ ಬಂದ ನಂತರ ಪಾರ್ಥಂಪಾಡಿ ದೈವವನ್ನು ಜಟಾಧಾರಿ ಎಂದು ಕರೆದರು ಎಂದು ತಂತ್ರಿಗಳಾದ ಲಕ್ಷ್ಮೀನಾರಾಯಣ ಭಟ್ಟರು ಮಾಹಿತಿ ನೀಡಿದ್ದಾರೆ.

ಪಾರ್ಥಂಪಾಡಿ ಚಾವಡಿಯಲ್ಲಿ ಬಹುಮಾನ್ಯರಾಗಿಧದ ಈಶ್ವರಯ್ಯನವರೇ ದೈವತ್ವ ಪಡೆದು ಪಾರ್ಥಂಪಾಡಿ ದೈವ ಎಂಬ ಹೆಸರಿನಲ್ಲಿ ಆರಾದಿಸಲ್ಪಟ್ಟಿರಯವ ಸಾಧ್ಯತೆ ಇದೆ.

ವಿಟ್ಲದ ಪಟ್ಟದ ದೈವ ಈಗ ಜಟಾಧಾರಿ ಎಂದು ಕರೆಯಲ್ಪಡುತ್ತಿರುವ ಪಾರ್ಥಂಪಾಡಿ ದೈವವಾಗಿದೆ.

ಅರಸರ ಮಾನ ಉಳಿಸಿದ ಕಳೆದು ಹೋದ ಅರಸೊತ್ತಿಗೆ ಮರಳಿ ಸಿಗುವಂತೆ ಮಾಡಿದ ವೀರ ಪಟ್ಡದ ಚಾವಡಿ ದೈವವಾಗಿ ಆರಾಧನೆ ಪಡೆಯುವದ್ದರಲ್ಲಿ ಅಚ್ಚರಿಯ ವಿಚಾರವೇನೂ ಇಲ್ಲ© ಡಾ.ಲಕ್ಷ್ಮೀ ಜಿ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು ಮೊಬೈಲ್ 9480516684 

ಕುಂಬಳೆ ಅರಸರ ಸೇನಾನಿಯಾಗಿದ್ದ ಬೀರಣ್ಣಾಳ್ವ ಎಂಬ ವೀರ ದೈವತ್ವ ಪಡೆದು ಕುಂಳೆ ಅರಮನೆಯ ಪಟ್ಡದ ದೈವವಾಗಿ ಆರಾಧಿಸಲ್ಪಡುತ್ತಿದ್ದಾನೆ..ಅಂತೆಯೇ ವಿಟ್ಲದ ಅರಮನೆಯ ಪಾರ್ಥಂಪಾಡಿ ಚಾವಡಿಯಲ್ಲಿ ದಳವಾಯಿ ಈಶ್ವರಯ್ಯನವರೇದೈವತ್ವ ಪಡೆದು ಪಾರ್ಥಂಪಾಡಿ ದೈವವಾಗಿ ಮುಂದೆ ಜಟಾಧಾರಿ ಎಂಬ ಹೆಸರಿನಲ್ಲಿ ಶಿವಾಂಸ ಸಂಭೂತನಾಗಿ ಆರಾಧಿಸಲಪಡುತ್ತಿರಬಹುದು.

ಜಟಾಧಾರಿ ದೈವದ ದೊಡ್ಡದಾದ ಮೀಸೆ ಇ ದೈವ ಮೂಲತಃ ಓರ್ವ ವೀರ ದಳವಾಯಿಯಾಗಿರುವುದನ್ನು ದ್ಯೋತಿಸುತ್ತದೆ.

ಈ ಬಗ್ಗೆ ಇದು ಹೀಗೆಯೇ ಇದಮಿತ್ಥಂ ಎಂದು ಹೇಳಲು ಸಾಧ್ಯವಿಲ್ಲ‌,ಈ ಬಗ್ಗೆ ಹೆಚ್ವಿನ ಅಧ್ಯಯನ ನಡೆದರೆ ಸ್ಪಷ್ಟ ಮಾಹಿತಿ ಸಿಗಬಹುದು.

© ಡಾ.ಲಕ್ಷ್ಮೀ ಜಿ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು ಮೊಬೈಲ್ 9480516684 

Sunday, 8 October 2023

ಕರಾವಳಿಯ ಸಾವಿರದೊಂದು ದೈವಗಳು : ಕೊರತಿ - ಡಾ.ಲಕ್ಷ್ಮೀ ಜಿ ಪ್ರಸಾದ್

 

                                
© copy rights reserved© ಡಾ.ಲಕ್ಷ್ಮೀ ಜಿ ಪ್ರಸಾದ್ 
ಕರಾವಳಿಯ ಸಾವಿರದೊಂದು ದೈವಗಳು‌ ಗ್ರಂಥದ ಆಯ್ದ ಭಾಗ 
ಹೆಚ್ಚಿನ ಮಾಹಿತಿಗೆ 9480516684 ಗೆ ಕರೆ ಅಥವಾ ವಾಟ್ಸಪ್ ಮೆಸೇಜ್ ಮಾಡಬಹುದು 

ಕೊರತಿ ದೈವದ ಪಾಡ್ದನ ಪ್ರಕಾರ ಕೊರತಿ ಮೂಲತಃ ಪಾರ್ವತಿ ದೇವಿ .ಒಮ್ಮೆ ಈಶ್ವರ ದೇವರು ಬೇಟೆಗೆ ಹೋಗುವಾಗ ಪಾರ್ವತಿದೇವಿ ವೇಷ ಮರೆಸಿಕೊಂಡು ಕಾಡಿಗೆ ಹೋಗುತ್ತಾಳೆ. ಅಲ್ಲಿ ಈಶ್ವರದೇವರಿಗೆ ಕೊರಪ್ಪೊಳು ರೂಪದ ಪಾರ್ವತಿಯ ಮೇಲೆ ಮನಸ್ಸಾಗುತ್ತದೆ. ಅವರ ಸಮಾಗಮವಾಗುತ್ತದೆ. ಕೊರಪ್ಪೊಳು ವೇಷದ ಪಾರ್ವತಿ ಈಶ್ವರದೇವರ ಉಂಗುರ, ಬೆಳ್ಳಿ ಬಿರಡೆಯನ್ನು ಕೇಳಿ ಪಡೆಯುತ್ತಾಳೆ. ಆನಂತರ ಈಶ್ವರನಿಗಿಂತ ಮೊದಲು ಅಡ್ಡದಾರಿಯಲ್ಲಿ ಬಂದು ಮನೆ ಸೇರುತ್ತಾಳೆ. ಈಶ್ವರ ಬಂದಾಗ “ನಿಮ್ಮ ಉಂಗುರ, ಬೆಳ್ಳೆ ಬಿರಡೆ ಎಲ್ಲಿ?” ಎಂದು ಕೇಳುತ್ತಾಳೆ. ಹೀಗೆ ಕೊರಪ್ಪೊಳು ವೇಷದ ಪಾರ್ವತಿಯೇ ‘ಕೊರತಿ’ ಎಂಬ ದೈವವಾಗಿ ಆರಾಧನೆ ಪಡೆಯುತ್ತದೆ.        
ಆದರೆ ಕೊರತಿ ಭೂತ ಭತ್ತ ಕುಟ್ಟುವ ,ಕೇರುವ,ಅಂಗಳ ಗುಡಿಸುವ ಕಾರ್ಯಗಳ ಅಭಿನಯವನ್ನು ಮಾಡುತ್ತದೆ .ಇದು ಮೂಲತಃ ಮಾನವ ಮೂಲದ ಕೊರತಿಯ ಕೆಲಸಗಳನ್ನು ಸಾಂಕೇತಿಸುತ್ತದೆ .
ತುಳು ನಾಡಿನ ದೈವಗಳ ಮೂಲವನ್ನು ಪುರಾಣ ಮೂಲದ ದೇವರುಗಳೊಂದಿಗೆ ಸಮನ್ವಯ ಮಾಡುವುದು ಎಲ್ಲೆಡ ಕಂಡು ಬರುವ ಸಾಮಾನ್ಯ ವಿಚಾರ .ಇಲ್ಲಿ ಕೂಡ ಕೊರತಿ ಭೂತಕ್ಕೆ ಪಾರ್ವತಿಯ ವೇಷ ಬದಲಾಯಿಸಿದ ಕಥೆ ಸೇರಿರಬಹುದು .ವಾಸ್ತವದಲ್ಲಿ ಇದು ಅಸಾಧ್ಯದ ವಿಚಾರ  ದೇವರು ಕಾಡಿಗೆ ಹೋದಾಗ ಪಾರ್ವತಿ ಮೊದಲೇ ವೇಷ ಬದಲಾಯಿಸಿ ಕೊರತಿಯ ರೂಪದಲ್ಲಿ  ಕಾಡಿಗೆ ಹೋಗುವುದು .ಅಲ್ಲಿ ಈಶ್ವರ ದೇವರಿಗೆ ಕೊರತಿ ರೂಪದ ಪಾರ್ವತಿ ಮೇಲೆ ಮನಸಾಗುವುದು .ಇಲ್ಲಿ ಈಶ್ವರ ದೇವರಿಗೆ ತನ್ನ ಮಡದಿ ಎಂದು ತಿಳಿಯದೆ ಇರಲು ಸಾಧ್ಯವೇ ?
ಹಾಗಾಗಿ ಇದು ಈಶ್ವರ ಮತ್ತೆ ಪಾರ್ವತಿಯರ ಕಥೆಯಲ್ಲ ಎಂದು ಹೇಳಬಹುದು.
ಮೂಲತಃ ಇದು ಕೊರಗ ಸಮುದಾಯಕ್ಕೆ ಸೇರಿದ ಹೆಣ್ಣು  ಮಗಳ ಕಥಾನಕ .ಕೊರತಿಗೇಕೆ ದೈವತ್ವ ದೊರೆಯಿತು ಎಂಬ ಬಗ್ಗೆ ಪ್ರಸ್ತುತ ಮಾಹಿತಿ ಸಿಕ್ಕುತ್ತಿಲ್ಲ .ಆದರೆ ತುಳುನಾಡಿನಲ್ಲಿ ದುರಂತ ಮತ್ತು ದೈವತ್ವ ಒಂದಕ್ಕೊಂದು ತಳುಕು ಹಾಕಿಕೊಂಡಿದೆ .
ಕೊರತಿ ಪಾದ್ದನಲ್ಲಿನ ಪುರಾಣ ದ ಕಥೆಯನ್ನು ಬಿಟ್ಟು ಅಲ್ಲಿನ ಆಶಯವನ್ನು ಗಮನಿಸಿದಾಗ ಕೊರತಿ ಕಾಡಿಗೆ ಹೋದ ಓರ್ವ ಕೊರಗ ಸಮುದಾಯದ ಹೆಣ್ಣು ಮಗಳು .ಅಲ್ಲಿ ಯಾರೋ ಅರಸ ಅಥವಾ  ಬಲಿಷ್ಠ ವ್ಯಕ್ತಿ ಕೊರತಿಗೆ ತೊಂದರೆ ಕೊಟ್ಟಿರಬಹುದು .
ಮುಂದೆ ಅವಳು ಕೊರತಿ ದೈವವಾಗಿ ಆರಾಧಿಸಲ್ಪಡುತ್ತಿರ ಬಹುದು .
ಕೊರಗ ತನಿಯನ ತಾಯಿ ಮೈರೆಯೇ ಕೊರತಿ ಎಂದು ಆರಾಧಿಸಲ್ಪಡುತ್ತಿರುವ ಸಾಧ್ಯತೆ ಕೂಡ ಇದೆ .
ಕೋಳ್ಯೂರಿನ ಕುರವ ಕೊರತ್ತಿಯರ ಪಾಡ್ದನ ಭಿನ್ನ ಕಥೆಯನ್ಮು ಹೇಳುತ್ತದೆ 
ತುಳುನಾಡಿನ ಹೆಚ್ಚಿನ ದೇವಾಲಯಗಳಿಗೂ ಅಲ್ಲಿನ ಮೂಲ ನಿವಾಸಿಗಳಿಗೂ ಅವಿನ ಭಾವ ಸಂಬಂಧ ಇರುವಂತೆ ಇಲ್ಲಿಯೂ ಅಂತಹ ಒಂದು ಐತಿಹ್ಯ ಪ್ರಚಲಿತ ಇದೆ.ಈ ಊರಿಗೆ ಬೇಟೆಯಾಡುತ್ತಾ ಬಂದ ಕುರವ ಕುರತ್ತಿಯರು (ಕೊರಗ ಸಮುದಾಯದ ಗಂಡು ಮತ್ತು ಹೆಣ್ಣು ) ದೇವರ ಗುಡ್ಡದ ಬಳಿಯಲ್ಲಿ ನೆಲೆಯಾದರು .ಒಂದು ಡಿನ ದೇವರ ಗುಡ್ಡದಲ್ಲಿರುವ ದೇವರ ಕೆರೆಯಲ್ಲಿ ಒಂದು ಆಮೆ ಕಾಣಿಸಿಕೊಳ್ಳುತ್ತದೆ.ದೇವರ ಕೆರೆಯಲ್ಲಿ ಮೀನು ,ಆಮೆ ಮೊದಲಾದವುಗಳನ್ನು ಹಿಡಿಯಬಾರದು ಎಂಬ ನಿಷೇಧ ಇತ್ತು . ccopy rights reserved (c)ಡಾ.ಲಕ್ಷ್ಮೀ ಜಿ © ಡಾ.ಲಕ್ಷ್ಮೀ ಜಿ ಪ್ರಸಾದ್ 
ಕರಾವಳಿಯ ಸಾವಿರದೊಂದು ದೈವಗಳು‌ ಗ್ರಂಥದ ಆಯ್ದ ಭಾಗ 
ಹೆಚ್ಚಿನ ಮಾಹಿತಿಗೆ 9480516684 ಗೆ ಕರೆ ಅಥವಾ ವಾಟ್ಸಪ್ ಮೆಸೇಜ್ ಮಾಡಬಹುದು 

ಆದರೆ ಇದನ್ನು ಮೀರಿದ ಕೊರತಿ (ಕೊರಗ ಸಮುದಾಯದ ಹೆಂಗಸು )ಆಮೆಯ ಮೇಲೆ ಕತ್ತಿಯಿಂದ ಬಡಿಯುತ್ತಾಳೆ.ಆಗ ಅಲ್ಲಿ ತುಂಬಾ ರಕ್ತ ಹರಿಯುತ್ತದೆ.ಕೊರತಿ ಮಗುಚಿ ಬೀಳುತ್ತಾಳೆ.ಮುಂದೆ ಆವಳ ಮಠದ ದುರ್ಗಾ ದೇವಸ್ಥಾನದ ಸಂನಿಧಿಯಿಂದ ಎದ್ದು ನಿಂತು ಕೋಳ್ಯೂರು ದೇವಸ್ಥಾನದ ಮೇಲಿನ ಭಾಗದಲ್ಲಿರುವ ಸಂತೆ ಗದ್ದೆಯಲ್ಲಿ ನಿಲ್ಲುತ್ತಾಳೆ.

ಆಗ ಅವಳನ್ನು ನೋಡಿದ ಶಂಕರ ನಾರಾಯಣ ದೇವರು “ನೀನು ನನ್ನ ಅಂಗಳವನ್ನು ಗುಡಿಸಿಕೊಂಡು ಕೋಳ್ಯೂರು ದೇವಳದಲ್ಲಿ ಇರು” ಎನ್ನುತ್ತಾರೆ.ಹಾಗೆ ಅವಳು ಸತ್ಯಂಗಳದ ಕೊರತಿ ಎಂಬ ಹೆಸರಿನಲ್ಲಿ ದೈವತ್ವ ಪಡೆದು ಕೋಳ್ಯೂರು ದೇವಸ್ಥಾನದ ಕೆಳಭಾಗದಲ್ಲಿ ನೆಲೆಯಾಗುತ್ತಾಳೆ. ccopy rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ © 
ಕರಾವಳಿಯ ಸಾವಿರದೊಂದು ದೈವಗಳು‌ ಗ್ರಂಥದ ಆಯ್ದ ಭಾಗ 
ಹೆಚ್ಚಿನ ಮಾಹಿತಿಗೆ 9480516684 ಗೆ ಕರೆ ಅಥವಾ ವಾಟ್ಸಪ್ ಮೆಸೇಜ್ ಮಾಡಬಹುದು 

ಆವಳ ಮಠದ ಕಾಡು ಕೊರತಿ ದೈವದ ಮೂಲಸ್ಥಾನ ಎಂಬ ಅಭಿಪ್ರಾಯವಿದೆ .ಹಾಗಾಗಿ ಕೋಳ್ಯೂರು ದೇವರ ಕೆರೆಯಲ್ಲಿ ಆಮೆ ಹಿಡಿದ ಕೊರಪ್ಪೋಳುವೇ ದೈವತ್ವ ಪಡೆದು ಸತ್ಯನ್ಗಳದ  ಕೊರತಿ ದೈವವಾಗಿ ಆರಾಧಿಸಲ್ಪಡುತ್ತಿದ್ದಾಳೆ ಎಂದು ಹೇಳಬಹುದು .
ಇತರೆಡೆ ಆರಾಧಿಸಲ್ಪಡುವ ಕೊರತಿದೈವ ಮತ್ತು ಈ ದೈವ ಒಂದೆಯೇ ಅಥವಾ ಬೇರೆಯೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿಗಳು ಸಿಕ್ಕಿಲ್ಲ
ವಿಧಿ ನಿಷೇಧಗಳು ಆಡಿ ಮಾನವನ ಅಲಿಖಿತ ಶಾಸನಗಳಾಗಿದ್ದವು.ಅವುಗಳನ್ನು ಮೀರಿದವರಿಗೆ ಶಿಕ್ಷೆ ಕಾದಿರುತ್ತಿತ್ತು .
ದೇವರ ಕೆರೆಯಲ್ಲಿ ಅಮೆ ಹಿಡಿಯಬಾರದು ಎಂಬ ವಿಧಿಯನ್ನು ಮೀರಿದ ಕೊರತಿ ದುರಂತವನ್ನಪ್ಪಿ ದೈವತ್ವ ಪಡೆದು ಆರಾಧಿಸಲ್ಪಡುತ್ತಾಳೆ.
ಇಂದಿಗೂ ಕೋಳ್ಯೂರು ಗ್ರಾಮದಲ್ಲಿ ಆಮೆ ಹಿಡಿಯಬಾರದು ಕೊಲ್ಲಬಾರದು ತಿನ್ನ ಬರದು ಎಂಬ ಅಲಿಖಿತ ವಿಧಿ ಜಾರಿಯಲ್ಲಿದೆ ಅಲ್ಲಿನ ಜನರು ಯಾರೂ ಆಮೆ ಹಿಡಿಯುದಿಲ್ಲ
ಕೊರತಿ ದೈವ ಕೋಲದ ಸಮಯದಲ್ಲಿ‌ ಮಗುಚಿ ಬೀಳುವ ಬಿದ್ದ ಮಲಗಿಕೊಂಡೇ ನುಡಿ ಕೊಡುವ ಸಂಪ್ರದಾಯ ಕೆಲವೆಡೆ ಇದೆ.ಇದು ಕೊರತಿ ಮೂಲತಃ ಕೋಳ್ಯೂರು ದದವರ ಕೆರೆಯಲ್ಲಿ ಆಮೆಯನ್ನು ಹಿಡಿದು ಮಗುಚಿ ಬಿದ್ದ ಸ್ತ್ರೀ ಎಂಬುದನ್ನು ಸೂಚಿಸುತ್ತದೆ.
ನಿಷೇಧವನ್ನು ಮೀರಿ ಆಮೆ ಹಿಡಿದಕೊರಗ ಸಮುದಾಯದ ಸ್ತ್ರೀ ದುರಂತವನ್ನಪ್ಪಿ ದೈವತ್ವ ಪಡೆದಿರುವ ಕಥಾನಕ ವಾಸ್ತವಕ್ಕೆ ಸಮೀಪವಾಗಿದೆ.
© ಡಾ.ಲಕ್ಷ್ಮೀ ಜಿ ಪ್ರಸಾದ್ 
ಕರಾವಳಿಯ ಸಾವಿರದೊಂದು ದೈವಗಳು‌ ಗ್ರಂಥದ ಆಯ್ದ ಭಾಗ 
ಹೆಚ್ಚಿನ ಮಾಹಿತಿಗೆ 9480516684 ಗೆ ಕರೆ ಅಥವಾ ವಾಟ್ಸಪ್ ಮೆಸೇಜ್ ಮಾಡಬಹುದು 


Saturday, 7 October 2023

Kambala :A sports and a tradition©Dr Lakshmi G prasad

 Kambala :A sports and a tradition©Dr Lakshmi G prasad


 

Of late, Kambala, the traditional buf orace held in coastal Karnataka, is in news for many reasons arousing cu riosity among people about this folk sport. Essentially, Kambala is a buffalo race held in slush-filled tracks between the months of November and March. This buffalo race of Tulu Nadu has historical and cultural significance. In fact, it has been mentioned in many ancient scripts like the one from the time of the Alupa dynasty. This has been found in Karje near Kenjoor in Udupi district. Kambala also finds a mention in paddanas (Talu folk epic poems) like Ejo Manjotti Gona, Paddana of Baliyendra and Kori and Chennayya Paddana.

attention of people in the present day. In present-day Kambala, the winning pair gets a gold medal, and other prizes. Another marked difference is the fact . that it is not played on a field. Instead, the race is held on a marshy wetland created for the purpose of Kambala race. The race is held in four categories, which are divided according to the buffaloes age. The age is decided by checking the buffalo's teeth. Modern Kambala also has many types. The major ones being: Adda Halage: This is also called as addapalai in Tulu which means a wooden log. This will be provided at the back of the racing buffaloes, where the rider has to stand. For support, he will use the tail of the buffaloes and the ropes that are tied to them. As it requires a lot of skill, it is not practised everywhere. ■Negila Ota: In Tulu, it is called as Nayarda 

Historically, Kambala was seen not just as a race, but a matter of prestige among the Tulu rulers. Hence, it was mandatory for all the princes to participate in Kambala. While this may have been the case, there is much more to Kambala than this. Kambala is not only a sport or an act of entertainment, it is also a social, cultur- al, economical, and political representation of a locality." states researcher Purushottama Bilimale. Interestingly, the

breed of buffaloes

(girdelu) used for ANNUAL AFFAIR A popular sport in coastal Karnataka, racing is different Kambala has historical and cultural significance. 

ploughing Racing buffaloes are fed with healthy and nutritious food such as horse gram for their healthy growth. They are also kept in a hygienic environment. They are trained well to ensure a good perform- ance. A rope is tied to their nose for better control. On the day of Kambala, they are well-decorated with ornaments. The rules of Kambala don't allow for a single buffalo to participate. A pair of buffaloes is tied together with the help of wooden logs as the winner. and ropes.© Dr Lakshmi G prasad 

Types of Kambala

There are four types of Kambala: Pookare, Baare, Arasu or Devara, and Adhunika. Adhunika and Devara Kambala involve buffalo race. The other two types focus on ritual and cultural worship of Naga and Bhootas. In the past, the practice also had agricultural impor- tance as it helped even the paddy field. While these traditional Kambalas were known for their grandeur in the past, modern Kambala is catching the

nayerdarvu (a plough), Here, ploughs are tied to the back of the buffaloes. The rider has to race without lifting the plough.

Haggada Ota: In Tulu, this is known balluda gidapune, which means racing with the help of a rope. The buffaloes backs are tied with the help of a rope and wooden log. The racer has to run and follow the buffaloes. The pair that reaches the manjotti (a platform) first is declared

Kane Halageya Ota: This is the most famous version of Kambala. Unlike oth- ers, this is not based on speed. Here, the buffaloes have to splash mud water to the maximum height possible at a pole that is tied with a white cloth. This pole is known as nishane. The highest splasher will be announced the winner. The splash- ing is done with the help of a log, which is tied to the buffaloes. When it runs across the wetland in a great speed, the water splashes from the wooden log and reaches the nishane.© Lakshmi G Prasad


ಕರಾವಳಿಯ ಸಾವಿರದೊಂದು ದೈವಗಳು : ತುಳುನಾಡಿನ ಚಾಮುಂಡಿ ಭೂತಗಳು- ಡಾ.ಲಕ್ಷ್ಮೀ ಜಿ ಪ್ರಸಾದ್

 



ಕರಾವಳಿಯ ಸಾವಿರದೊಂದು ದೈವಗಳು : ತುಳುನಾಡಿನ ಚಾಮುಂಡಿ ಭೂತಗಳು- ಡಾ.ಲಕ್ಷ್ಮೀ ಜಿ ಪ್ರಸಾದ್ 
ದಸರಾ ಬಂತೆಂದರೆ ಮೈಸೂರಿನ ಉತ್ಸವದ್ದೇ ಸುದ್ದಿ ಎಲ್ಲಡೆ. ಮೈಸೂರಿನಲ್ಲಿ ಚಾಮುಂಡೇಶ್ವರಿಯ ಆರಾಧನೆಯನ್ನು ವೈಭವದಿಂದ ಮಾಡುತ್ತಾರೆ. ಮಹಿಷಾಸುರನನ್ನು ಕೊಂದ ಆದಿಶಕ್ತಿಯನ್ನೇ ಇಲ್ಲಿ ಚಾಮುಂಡೇಶ್ವರಿ ಎಂದು ಆರಾಧಿಸುತ್ತಾರೆ. ಉಡುಪಿಕಾಸರಗೋಡು ಸೇರಿದಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ತುಳುನಾಡೆಂದೇ ಪ್ರಸಿದ್ಧವಾದ ಪ್ರದೇಶ. ತುಳುನಾಡಿನ ಮಂಗಳೂರಿನಲ್ಲಿ ಕೂಡ ದಸರಾ ಬಹಳ ವೈಭವದಿಂದ ಆಚರಿಸಲ್ಪಡುತ್ತದೆ. ಇಲ್ಲಿ ಶಕ್ತಿ ಸ್ವರೂಪಿಣಿ ಆದಿಶಕ್ತಿಯನ್ನು ಕಾಳಿಸರಸ್ವತಿ ಮೊದಲಾಗಿ ನವರೂಪಗಳಲ್ಲಿ ಆರಾಧಿಸುತ್ತಾರೆ.

ಆದರೆ  ತುಳುನಾಡಿನ ಎಲ್ಲೆಡೆಗಳಲ್ಲಿ `ಚಾಮುಂಡಿ’ ಎಂಬ ಭೂತವು ಆರಾಧನೆಯನ್ನು ಹೊಂದುತ್ತದೆ. ತುಳುನಾಡಿನ ಭೂತಗಳು ಕೆಟ್ಟ ಶಕ್ತಿಗಳಲ್ಲ. ಶಿಷ್ಟ ರಕ್ಷಣೆಯನ್ನು ಮಾಡುವ ತುಳುನಾಡಿನ ಸತ್ಯಗಳು ಇವು. ಸಂಸ್ಕøತದ ಪೂತಂ ಎಂದರೆ ಪವಿತ್ರವಾದದ್ದು ಎಂಬ ಪದವೇ ಕಾಲಾಂತರದಲ್ಲಿ ಪೂತೊ ಆಗಿ ಭೂತೋ ಆಗಿರುವ ಸಾಧ್ಯತೆ ಇದೆ. ಕೊಡವರು ಇಂದಿಗೂ ಭೂತವನ್ನು ಪೂದ ಎಂದೇ ಕರೆಯುತ್ತಾರೆ. ಕೇರಳದಲ್ಲಿ ಭೂತವನ್ನು ತೆಯ್ಯಂ ಎಂದು ಕರೆಯುತ್ತಾರೆ. ಇದು ದೈವ ಎಂಬುದಕ್ಕೆ ಸಂವಾದಿಯಾಗಿರುವ ಪದವಾಗಿದೆ.© ಡಾ.ಲಕ್ಷ್ಮೀ ಜಿ‌ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು,ಮೊಬೈಲ್ 9480516684 

ತುಳುನಾಡಿನ ದೈವಗಳನ್ನು ಎರಡು ವಿಧಗಳಾಗಿ ವಿಂಗಡಿಸಬಹುದು. ಮೊದಲನೆಯದು ಪೌರಾಣಿಕ ಮೂಲದ ಭೂತಗಳು. ಇದರಲ್ಲಿ ಪುರಾಣೋಕ್ತ ದೈವಗಳು ಭೂತದ ರೂಪದಲ್ಲಿ ಆರಾಧನೆ ಪಡೆಯುವ ಭೂತಗಳು ಸೇರುತ್ತವೆ. ಗುಳಿಗವಿಷ್ಣುಮೂರ್ತಿರಕ್ತೇಶ್ವರಿಚಾಮುಂಡಿ ಮೊದಲಾದುವುಗಳು ಪುರಾಣಮೂಲ ಭೂತಗಳಾಗಿವೆ. ಜನಸಾಮಾನ್ಯರಂತೆ ಜನಿಸಿ ಅಸಾಮಾನ್ಯ ಸಾಹಸವನ್ನು ಮೆರೆದು ದುರಂತವನ್ನಪ್ಪಿ ದೈವತ್ವಕ್ಕೇರಿ ಆರಾಧಿಸಲ್ಪಡುವ ಕೊರಗ-ತನಿಯಕಲ್ಕುಡ-ಕಲ್ಲುರ್ಟಿಕೋಟಿ-ಚೆನ್ನಯ ಮೊದಲಾದವರು ಎರಡನೆಯ ವರ್ಗದಲ್ಲಿ ಸೇರುತ್ತಾರೆ.

ಚಾಮುಂಡಿ ತುಳುನಾಡಿನ ಎಲ್ಲಡೆಗಳಲ್ಲಿ ಆರಾಧಿಸಲ್ಪಡುವ ಪ್ರಧಾನ ದೈವ. ಚಾಮುಂಡಿ ಮೂಲತಃ ಪುರಾಣ ಮೂಲ ದೈವವೇಎಂಬ ಬಗ್ಗೆ ಇದಮಿತ್ಥಂ ಎಂಬ ನಿರ್ಣಯಕ್ಕೆ ಬರುವುದು ಕಷ್ಟಸಾಧ್ಯವಾದ ವಿಚಾರವಾಗಿದೆ. ಚಾಮುಂಡಿ ದೈವದ ಆರಾಧನೆಯ ಸಂದರ್ಭದಲ್ಲಿ ಅದರ ಪ್ರಸರಣ ಕಾರಣಿಕದ ಕುರಿತಾದ ಪಾಡ್ದನವನ್ನು ಹೇಳುತ್ತಾರೆ. ಚಾಮುಂಡಿ ಭೂತದ ಹುಟ್ಟಿನ ಕುರಿತಾಗಿ ಏನನ್ನೂ ಹೇಳುವುದಿಲ್ಲ. ಅಲೌಕಿಕ ನೆಲೆಯಲ್ಲಿ ಏಳು ಸಮುದ್ರದ ನಡುವೆ ಎಪ್ಪತ್ತೇಳು ನಾಗಬಿಂಬಗಳ ನಡುವೆ ಚಾಮುಂಡಿ ದೈವ ಉದ್ಭವಿಸಿ ಬಂತು ಎಂದು ಹೇಳುತ್ತಾರೆ.

ಚಾಮುಂಡಿ ದೈವದ ಹುಟ್ಟಿನ ಕುರಿತಾದ ಒಂದು ಪಾಡ್ದನದ ಭಾಗವನ್ನು ಪಾಡ್ದನಗಾರ್ತಿ ಶ್ರೀಮತಿ ಶಾರದಾ ಜಿ. ಬಂಗೇರ ಅವರಿಂದ ನಾನು ಸಂಗ್ರಹಿಸಿದ್ದು ಅದರ ಪ್ರಕಾರ ಚಾಮುಂಡಿ ಭೂತ ಮೂಲತಃ ಚಾಮುಂಡಿ ಎಂಬ ಹೆಸರಿನ ಹುಡುಗಿ. ಈ ಪಾಡ್ದನದಲ್ಲಿ ಎಡದಲ್ಲಿ ಎಡಮಲೆಬಲದಲ್ಲಿ ಬಲಮಲೆನಡುವಿನಲ್ಲಿ ನಡುಮಲೆ ಇದೆ. ಇದರಲ್ಲಿ ಭೀಮುರಾಯ ಭಟ್ಟರ ಸಂಪಿಗಾನ ತೋಟವಿದೆ. ಒಂದು ದಿನ ಭೀಮುರಾಯ ಭಟ್ಟರು ಸ್ನಾನಕ್ಕೆಂದು ಸಂಪಿಗಾನ ತೋಟದ ನಡುವಿನಲ್ಲಿರುವ ತಾವರೆಯ ಕೊಳಕ್ಕೆ ಬರುತ್ತಾರೆ. ಅಲ್ಲಿ ಒಂದು ಬಿಳಿಯ ತಾವರೆ ಹೂ ಭೀಮುರಾಯ ಭಟ್ಟರ ಮಡಿಲಿಗೆ ಬಂದು ಬೀಳುತ್ತದೆ. ತಮ್ಮ ಉತ್ತರೀಯದಲ್ಲಿ ಆ ಬಿಳಿಯ ತಾವರೆ ಹೂವನ್ನು ಕಟ್ಟಿಕೊಂಡು ಬಂದ ಭೀಮುರಾಯ ಭಟ್ಟರು ದೇವರ ಕೋಣೆಗೆ ತಂದು ದೇವರಿಗೆ ಅರ್ಪಿಸುತ್ತಾರೆ. ಆಗ ಆ ಬಿಳಿಯ ತಾವರೆ ಹೂ ಒಂದು ಹೆಣ್ಣುಮಗುವಾಗುತ್ತದೆ. ಮಕ್ಕಳಿಲ್ಲದೆ ಕೊರಗುತ್ತಿದ್ದ ಭೀಮುರಾಯ ಭಟ್ಟರಿಗೆ ಬಹಳ ಸಂತೋಷವಾಗುತ್ತದೆ. ಆ ಮಗುವಿಗೆ `ಚಾಮುಂಡಿ’ ಎಂದು ಹೆಸರಿಟ್ಟು ಸಾಕುತ್ತಾರೆ. ಮುಂದೆ `ಚಾಮುಂಡಿ’ ಎಂಬ ಹೆಸರುಳ್ಳ ಮಗುವೇ ದೈವತ್ವವನ್ನು ಪಡೆದು ಚಾಮುಂಡಿ ಭೂತವಾಗಿ ಆರಾಧನೆ ಹೊಂದುತ್ತಾಳೆ. ಆದರೆ ಅವಳು ಹೇಗೆ ದೈವತ್ವವನ್ನು ಪಡೆದಳು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.© ಡಾ.ಲಕ್ಷ್ಮೀ ಜಿ‌ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು,ಮೊಬೈಲ್ 9480516684 

ತುಳುನಾಡಿನಲ್ಲಿ ಮಲೆ ಚಾಮುಂಡಿಮುಡ ಚಾಮುಂಡಿಅಗ್ನಿ ಚಾಮುಂಡಿಒಲಿ ಚಾಮುಂಡಿಕೋಮಾರು ಚಾಮುಂಡಿಮಲೆಯಾಳ ಚಾಮುಂಡಿರುದ್ರ ಚಾಮುಂಡಿವಿಷ್ಣುಮೂರ್ತಿ ಚಾಮುಂಡಿಪಿಲಿಚಾಮುಂಡಿಕರಿಚಾಮುಂಡಿಪಾಪೆಲು ಚಾಮುಂಡಿ ನಾಗ ಚಾಮುಂಡಿ ,ಇತ್ಯಾದಿಯಾಗಿ ಅನೇಕ ಚಾಮುಂಡಿ ಭೂತಗಳಿವೆ. ಹೆಸರಿನೊಂದಿಗೆ `ಚಾಮುಂಡಿ’ ಎಂದು ಸೇರಿಕೊಂಡಿದೆಯಾದರೂ ಇವೆಲ್ಲ ಒಂದೇ ದೈವ ಚಾಮುಂಡಿಯ ಬೇರೆ-ಬೇರೆ ಹೆಸರುಗಳಲ್ಲ. ಬದಲಾಗಿ ಚಾಮುಂಡಿ ಎಂಬ ಹೆಸರನ್ನು ಸೇರಿಸಿಕೊಂಡಿರುವ ಬೇರೆ ಬೇರೆ ದೈವಗಳಾಗಿವೆ.© ಡಾ.ಲಕ್ಷ್ಮೀ ಜಿ‌ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು,ಮೊಬೈಲ್ 9480516684 

ಪಿಲಿಚಾಮುಂಡಿ 

                 ಪಿಲಿಚಾಮುಂಡಿ ಭೂತವನ್ನು ದುರ್ಗೆಯ ಅಂಶ ಎನ್ನುವ ದೃಷ್ಟಿಯಿಂದ ಜುಮಾದಿಗೆ ಸಮಾನವಾದುದು ಎಂದು ಭಾವಿಸಿದ್ದಾರೆ” ಎಂದು ವಿವೇಕ ರೈ ಹೇಳುತ್ತಾರೆ. ಹುಲಿಯನ್ನೇರಿ ಯುದ್ಧ ಮಾಡಿ ಚಂಡಮುಂಡರನ್ನು ಸಂಹಾರ ಮಾಡಿರುವ ಶಕ್ತಿಸ್ವರೂಪಿಗೆ ದೇವಿಯನ್ನು ಚಾಮುಂಡಿಚಾಮುಂಡೇಶ್ವರಿ ಎಂದು ಕರೆಯುತ್ತಾರೆ. ಆದರೆ ಹುಲಿಯನ್ನೇ ಕುಲದೈವವಾಗಿರಿಸಿಕೊಂಡ ಜನಾಂಗಗಳ ಆರಾಧನೆಗೆ ಪೌರಾಣಿಕ ಕಲ್ಪನೆ ಸೇರಿ ಅದು ಪಿಲಿಚಾಮುಂಡಿ ಭೂತವಾಗಿರಬಹುದು ಎಂದು ವಿವೇಕ ರೈ ಅಭಿಪ್ರಾಯಪಟ್ಟಿದ್ದಾರೆ. ಪಿಲಿಚಾಮುಂಡಿಯ ಉಗಮಕ್ಕೆ ಸಂಬಂಧಿಸಿದ ಪಾಡ್ದನಗಳು ಲಭ್ಯವಿಲ್ಲ. ಆದರೆ ಅದರ ಪ್ರಸರಣವನ್ನುಮಹಿಮೆಯನ್ನು ಹೇಳುವ ಪಾಡ್ದನಗಳಿವೆ. ಪಾಡ್ದನಗಳ ಪ್ರಕಾರ ಮಂಜುಪೂಂಜನು ಕಳ್ಳರಿಂದ ರಕ್ಷಣೆ ಪಡೆಯುವುದಕ್ಕಾಗಿ ಪಿಲಿಚಾಮುಂಡಿ ಭೂತವನ್ನು ತರುತ್ತಾನೆ. ಆದರೆ ತಮ್ಮ ಕುಲದೈವವಾದ ಪಿಲಿಚಾಮುಂಡಿಯನ್ನು ಹಣದ ಆಸೆಯಿಂದ ಬಾಳೊಳಿಯವರು ಮಂಜುಪೂಂಜನಿಗೆ ಕೊಡುತ್ತಾರೆ. ಆದ್ದರಿಂದ ಮಂಜುಪೂಂಜನಿಗೆ ಅದು ನಾನಾವಿಧವಾದ ತೊಂದರೆಗಳನ್ನು ಉಂಟುಮಾಡುತ್ತದೆ. ನಂತರ ಸ್ಥಾನವನ್ನು ಕೇಳಿ ಪಡೆದು ನೆಲೆ ನಿಲ್ಲುತ್ತದೆ. ಪಿಲಿಚಾಮುಂಡಿ ಖಡ್ಗವನ್ನು ಕೇಳಿ ಪಡೆಯುತ್ತದೆ. ಪಿಲಿಚಾಮುಂಡಿ ಭೂತದ ಆಯುಧ ಖಡ್ಗವೇ ಆಗಿದೆ. ಇನ್ನೊಂದು ಪಾಡ್ದನದ ಪ್ರಕಾರ ಓಬಾದೇಶಿ ಎನ್ನುವವರು ನೆಕರೆಯ ಕೈಯಿಂದ ವೀಳ್ಯದೆಲೆಯಲ್ಲಿ ಮಂತ್ರಿಸಿದ ಪಿಲಿಚಾಮುಂಡಿ ಭೂತವನ್ನು ತರುತ್ತಾರೆ. ಆದರೆ ಅದರ ಶಕ್ತಿಯನ್ನು ತಡೆಯಲು ಸಾಧ್ಯವಾಗದೆಕೋಲಬಲಿ ನೀಡಿ ಅದನ್ನು ಶಾಂತಗೊಳಿಸುತ್ತಾರೆ. ಜೈನರಲ್ಲಿ ಚಾಮುಂಡಾ’ ಎಂಬ ಹೆಸರಿನ ಯಕ್ಷಿಯ ಆರಾಧನೆ ಇದೆ.© ಡಾ.ಲಕ್ಷ್ಮೀ ಜಿ‌ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು,ಮೊಬೈಲ್ 9480516684 

ಅಗ್ನಿ ಚಾಮುಂಡಿ :

                    ಅಗ್ನಿ ಚಾಮುಂಡಿಯನ್ನು ಅಗ್ನಿ ಚಾಮುಂಡಿಗುಳಿಗ ಎಂದು ಕೂಡ ಕರೆಯುತ್ತಾರೆ. ಈ ದೈವಕ್ಕೆ ಅಗ್ನಿ ಬಹಳ ಪ್ರಿಯ. ಅಗ್ನಿಯೇ ಅದರ ಆಹಾರ. ಆದ್ದರಿಂದ ಇದನ್ನು ಅಗ್ನಿ ಚಾಮುಂಡಿ ಎಂದು ಕರೆಯುತ್ತಾರೆ ಎಂಬ ಐತಿಹ್ಯವಿದೆ. ಅಗ್ನಿ ಚಾಮುಂಡಿ ಗುಳಿಗ ನೇಮದ ವಿಧಾನಗಳು ಅಗ್ನಿ ಚಾಮುಂಡಿಯ ಮುಖಮರ್ಣಿಕೆ ಹಾಗೂ ನೇಮದ ಸಂದರ್ಭದಲ್ಲಿ ಹೇಳುವ ಪಾಡ್ದನಗಳಿಂದ ಮುಕಾಂಬಿ ಗುಳಿಗನನ್ನೇ ಅಗ್ನಿ ಚಾಮುಂಡಿ ಎಂದು ಕರೆಯುತ್ತಾರೆ ಎಂದು ತಿಳಿದು ಬರುತ್ತದೆ. ಮುಕಾಂಬಿ ಎಂಬ ಬ್ರಾಹ್ಮಣ ಕನ್ಯೆಗೆ ಬಹಳ ಎಳೆಯದರಲ್ಲಿಯೇ ವಾಸಲ್ಲ ಭಟ್ಟರೊಂದಿಗೆ ವಿವಾಹವಾಗುತ್ತದೆ. ವಿವಾಹವಾದ ತುಸು ಸಮಯದಲ್ಲಿ ಬರ ಬಂದು ಬಡತನ ಆವರಿಸಿ ಶಾಂತಿ ಪೂಜೆಗಾಗಿ ಕೇರಳಕ್ಕೆ ಹೊರಡುತ್ತಾರೆ ವಾಸುಲ್ಲ ಭಟ್ಟರು. ಕೇರಳಕ್ಕೆ ಹೋಗುವಾಗ ಮಡದಿ ಮುಕಾಂಬಿ ಜೇವಿನ ಹತ್ತಿರ ತಂದೆ ಮನೆಗೆ ಹೋಗಲು ತಿಳಿಸಿದಾಗ ಅವಳು ತಂದೆ ಮನೆಗೆ ಹೋಗಲೊಪ್ಪದೆ ಹಠಮಾಡಿ ವಾಸುಲ್ಲ ಭಟ್ಟರೊಂದಿಗೆ ಬರುತ್ತಾಳೆ.
ದಾರಿ ಮಧ್ಯದಲ್ಲಿ ಕಡಂಬಾರು ಮಯ್ಯರ ಬೀಡು ಸಿಗುತ್ತದೆ. ಇವರನ್ನು ನೋಡಿದ ಕಡಂಬಾರ ಮಯ್ಯ ಇವರ ಸಮಾಚಾರವನ್ನು ವಿಚಾರಿಸಿ ``ಕೇರಳ ಹೆಣ್ಣು ಮಕ್ಕಳುಹೋಗುವ ರಾಜ್ಯ ಅಲ್ಲ. ಅಲ್ಲಿ ಒಂದು ಸೇರು ಭತ್ತಕ್ಕೆ ತಲೆಕಡಿಯುವ ಮಂದಿ ಇದ್ದಾರೆ. ನನಗೆ ಏಳು ಸೊಸೆಯಂದಿರು ಇದ್ದರೆ. ಎರಡು ಕಲ್ಲಿನ ಗುಂಡಗಳಿವೆ. ಎರಡನೆಯ ಗುಂಡದಲ್ಲಿ ಮುಕಾಂಬಿ ಜೇವು ಇರಲಿ’’ ಎಂದು ಹೇಳಿದಾಗ ಕಡಂಬಾರ ಮಯ್ಯರನ್ನು ನಂಬಿದ ವಾಸುಲ್ಲ ಭಟ್ಟರು ಮೂಕಾಂಬಿ ಜೇವನ್ನು ಕಡಂಬಾರು ಬೀಡಿನಲ್ಲಿ ಬಿಟ್ಟು ಮುಂದೆ ಹೋಗುತ್ತಾರೆ. ಇತ್ತ ಕಡಂಬಾರು ಮಯ್ಯ ಕಲ್ಲಿನ ಗುಂಡದ ಬಾಗಿಲನ್ನು ಒಡೆದು ಬಲಾತ್ಕಾರದಿಂದ ಮೂಕಾಂಬಿ ಜೇವನ್ನು ಅತ್ಯಾಚಾರ ಮಾಡುತ್ತಾನೆ.
ಮುಕಾಂಬಿ ಜೇವು ತನ್ನ ಗಂಡನ ಮನೆ ದೈವ ಗುಳಿಗನನ್ನು ನೆನೆದು ಕಡಂಬಾರ ಕಟ್ಟಕ್ಕೆ ಹಾರಿ ಸಾಯುತ್ತಾಳೆ. ಇದನ್ನು ಕನಸಿನ ಮೂಲಕ ವಾಸುಲ್ಲ ಭಟ್ಟರಿಗೆ ಗುಳಿಗ ದೈವ ತಿಳಿಸುತ್ತದೆ. ವಾಸುಲ್ಲ ಭಟ್ಟರು ಓಡೋಡಿ ಬರುವಾಗ ಮುಕಾಂಬಿಯ ಚಿತೆ ಉರಿಯುತ್ತದೆ. ವಾಸುಲ್ಲ ಭಟ್ಟರು ಚಿತೆಗೆ ಹಾರಿ ಪ್ರಾಣ ಬಿಡುತ್ತಾರೆ. ಗುಳಿಗನನ್ನು ನೆನೆದು ನೀರಿನ ಕಟ್ಟಕ್ಕೆ ಹಾರಿದ ಮುಕಾಂಬಿ ಜೇವು ಗುಳಿಗನ ಸನ್ನಿಧಿಗೆ ಸಂದು ಮುಕಾಂಬಿಗುಳಿಗ ದೈವವಾಗಿ ಆರಾಧನೆ ಪಡೆಯುತ್ತಾಳೆ. ಮುಕಾಂಬಿ ಚಿತೆಯಲ್ಲಿ ಉರಿದುದರ ಪ್ರತೀಕವಾಗಿ ಮಾರಿಸೂಟೆಗೆ ಹಾರಿ ಬೆಂಕಿಯಲ್ಲಿ ಮಲಗುವ ಅಭಿನಯವನ್ನು ಮುಕಾಂಬಿ ಗುಳಿಗದ ಭೂತ ಭೂತ ಮಾಧ್ಯಮರು ಮಾಡುತ್ತಾರೆ. ಇದರಿಂದ ಮುಕಾಂಬಿ ಗುಳಿಗನನ್ನು ಅಗ್ನಿ ಚಾಮುಂಡಿ ಗುಳಿಗ ಎಂದು ಕರೆಯುತ್ತಾರೆ.

ಕರಿಚಾಮುಂಡಿ :
     ಕರಿಚಾಮುಂಡಿ ದೈವವನ್ನು ಕರಿಚಾಂಡಿ ಎಂದೂ ಕರೆಯುತ್ತಾರೆ. ಕರಿಚಾಮುಂಡಿ ಯಾರೆಂಬ ಬಗ್ಗೆ ಸೂಕ್ತ ಮಾಹಿತಿ ಸಿಕ್ಕಿಲ್ಲ. ಆದರೆ ಮಡಪ್ಪಾಡಿಯಲ್ಲಿ ಕರಿಚಾಮುಂಡಿ ಭೂತಕ್ಕೆ ನೇಮ ಆಗುವಾಗ ಹೇಳಿದ ಪಾಡ್ದನದ ಕೆಲವು ಸಾಲುಗಳಲ್ಲಿ ಕರಿಚಾಮುಂಡಿಯ ತಂದೆ ಕಾನಕಲ್ಲಟೆ ದೇವರೆಂದೂತಾಯಿ ನೆಲವುಲ್ಲ ಸಂಖ್ಯೆಎಂದೂ ಹೇಳಿದೆ. ಕೊರಗ ತನಿಯ ತಾಯಿ ಮೈರೆಯ ತಂದೆ ತಾಯಿಯನ್ನು ಕಾನಕಲ್ಲಟೆ ದೇವರುನೆಲವುಲ್ಲ ಸಂಖ್ಯೆ ಎಂದು ಕೊರಗ ತನಿಯ ಪಾಡ್ದನದಲ್ಲಿ ಹೇಳಿದೆ. ಕಾಸರಗೋಡುಬಂಟ್ವಾಳ ಪರಿಸರದಲ್ಲಿ ಒಂಜಿ ಕುಂದ ನಲ್ಪ ದೈವೊಳ ನೇಮದಲ್ಲಿ ಪುದ ಎಂಬ ಭೂತಕ್ಕೆ ಆರಾಧನೆ ಇದೆ. ಕೊರಗ ತನಿಯನ ತಾಯಿ ಮೊದಲು ಪಾರಿವಾಳವಾಗಿದ್ದು ನಂತರ ಹೆಣ್ಣಾದವಳು ಎಂದು ಒಂದು ಪಾಡ್ದನದಲ್ಲಿ ಹೇಳಿರುವ ಬಗೆ ಡಾ. ಅಮೃತ ಸೋಮೇಶ್ವರರು ತಿಳಿಸಿದ್ದಾರೆ. ಆದ್ದರಿಂದ ಕೊರಗ ತನಿಯನ ತಾಯಿ ಮೈರೆಯೇ ಪುದ ಎಂದೂಕರಿಚಾಮುಂಡಿ ಎಂದೂ ಆರಾಧನೆ ಹೊಂದಿರುವ ಸಾಧ್ಯತೆ ಇದೆ.

ಪಿಲಿಚಾಮುಂಡಿ 

                 ಪಿಲಿಚಾಮುಂಡಿ ಭೂತವನ್ನು ದುರ್ಗೆಯ ಅಂಶ ಎನ್ನುವ ದೃಷ್ಟಿಯಿಂದ ಜುಮಾದಿಗೆ ಸಮಾನವಾದುದು ಎಂದು ಭಾವಿಸಿದ್ದಾರೆ” ಎಂದು ವಿವೇಕ ರೈ ಹೇಳುತ್ತಾರೆ. ಹುಲಿಯನ್ನೇರಿ ಯುದ್ಧ ಮಾಡಿ ಚಂಡಮುಂಡರನ್ನು ಸಂಹಾರ ಮಾಡಿರುವ ಶಕ್ತಿಸ್ವರೂಪಿಗೆ ದೇವಿಯನ್ನು ಚಾಮುಂಡಿಚಾಮುಂಡೇಶ್ವರಿ ಎಂದು ಕರೆಯುತ್ತಾರೆ. ಆದರೆ ಹುಲಿಯನ್ನೇ ಕುಲದೈವವಾಗಿರಿಸಿಕೊಂಡ ಜನಾಂಗಗಳ ಆರಾಧನೆಗೆ ಪೌರಾಣಿಕ ಕಲ್ಪನೆ ಸೇರಿ ಅದು ಪಿಲಿಚಾಮುಂಡಿ ಭೂತವಾಗಿರಬಹುದು ಎಂದು ವಿವೇಕ ರೈ ಅಭಿಪ್ರಾಯಪಟ್ಟಿದ್ದಾರೆ. ಪಿಲಿಚಾಮುಂಡಿಯ ಉಗಮಕ್ಕೆ ಸಂಬಂಧಿಸಿದ ಪಾಡ್ದನಗಳು ಲಭ್ಯವಿಲ್ಲ. ಆದರೆ ಅದರ ಪ್ರಸರಣವನ್ನುಮಹಿಮೆಯನ್ನು ಹೇಳುವ ಪಾಡ್ದನಗಳಿವೆ. ಪಾಡ್ದನಗಳ ಪ್ರಕಾರ ಮಂಜುಪೂಂಜನು ಕಳ್ಳರಿಂದ ರಕ್ಷಣೆ ಪಡೆಯುವುದಕ್ಕಾಗಿ ಪಿಲಿಚಾಮುಂಡಿ ಭೂತವನ್ನು ತರುತ್ತಾನೆ. ಆದರೆ ತಮ್ಮ ಕುಲದೈವವಾದ ಪಿಲಿಚಾಮುಂಡಿಯನ್ನು ಹಣದ ಆಸೆಯಿಂದ ಬಾಳೊಳಿಯವರು ಮಂಜುಪೂಂಜನಿಗೆ ಕೊಡುತ್ತಾರೆ. ಆದ್ದರಿಂದ ಮಂಜುಪೂಂಜನಿಗೆ ಅದು ನಾನಾವಿಧವಾದ ತೊಂದರೆಗಳನ್ನು ಉಂಟುಮಾಡುತ್ತದೆ. ನಂತರ ಸ್ಥಾನವನ್ನು ಕೇಳಿ ಪಡೆದು ನೆಲೆ ನಿಲ್ಲುತ್ತದೆ. ಪಿಲಿಚಾಮುಂಡಿ ಖಡ್ಗವನ್ನು ಕೇಳಿ ಪಡೆಯುತ್ತದೆ. ಪಿಲಿಚಾಮುಂಡಿ ಭೂತದ ಆಯುಧ ಖಡ್ಗವೇ ಆಗಿದೆ. ಇನ್ನೊಂದು ಪಾಡ್ದನದ ಪ್ರಕಾರ ಓಬಾದೇಶಿ ಎನ್ನುವವರು ನೆಕರೆಯ ಕೈಯಿಂದ ವೀಳ್ಯದೆಲೆಯಲ್ಲಿ ಮಂತ್ರಿಸಿದ ಪಿಲಿಚಾಮುಂಡಿ ಭೂತವನ್ನು ತರುತ್ತಾರೆ. ಆದರೆ ಅದರ ಶಕ್ತಿಯನ್ನು ತಡೆಯಲು ಸಾಧ್ಯವಾಗದೆಕೋಲಬಲಿ ನೀಡಿ ಅದನ್ನು ಶಾಂತಗೊಳಿಸುತ್ತಾರೆ. ಜೈನರಲ್ಲಿ ಚಾಮುಂಡಾ’ ಎಂಬ ಹೆಸರಿನ ಯಕ್ಷಿಯ ಆರಾಧನೆ ಇದೆ.© ಡಾ.ಲಕ್ಷ್ಮೀ ಜಿ‌ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು,ಮೊಬೈಲ್ 9480516684 
ರುದ್ರಚಾಮುಂಡಿ : 
      ಉದ್ರಾಂಡಿರುದ್ರಾಂಡಿ ಎಂದೂ ರುದ್ರಚಾಮುಂಡಿಯನ್ನು ಕರೆಯುತ್ತಾರೆ. ಏಳು ಸಮುದ್ರದ ನಡುವೆ ಎಪ್ಪತೇಳು ನಾಗಬಿಂಬಗಳೊಂದಿಗೆ ರುದ್ರಚಾಮುಂಡಿ ಉದಿಸಿ ಬಂತು ಎಂದು ಪಾಡ್ದನದಲ್ಲಿ ಹೇಳಿದೆಯಾದರೂ ರುದ್ರಚಾಮುಂಡಿಯ ಕುರಿತು ಪ್ರಚಲಿತವಿರುವ ಐತಿಹ್ಯವೊಂದು ರುದ್ರಚಾಮುಂಡಿ ಭೂತದ ಮೂಲವನ್ನು ತಿಳಿಸುತ್ತದೆ. ಶಿರಾಡಿ ದೈವದ ಪ್ರಧಾನ ಪೂಜಾರಿಯಾಗಿ ರುದ್ರಪ್ಪ ಗೌಡ ಎಂಬವರು ಕಾರ್ಯವೆಸಗುತ್ತಿದ್ದರು. ಶಿರಾಡಿ ದೈವದ ಆಗ್ರಹಕ್ಕೆ ತುತ್ತಾಗಿ ರುದ್ರಪ್ಪ ಗೌಡ ಮಾಯವಾಗಿ ದೈವತ್ವವನ್ನು ಪಡೆದು ರುದ್ರಚಾಮುಂಡಿ ಎಂಬ ದೈವವಾಗಿ ಆರಾಧನೆ ಪಡೆಯುತ್ತಾನೆ ಎಂದು ಈ ಐತಿಹ್ಯವು ತಿಳಿಸುತ್ತದೆ. © ಡಾ.ಲಕ್ಷ್ಮೀ ಜಿ‌ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು,ಮೊಬೈಲ್ 9480516684 

ನಾಗಚಾಮುಂಡಿ : 
                         ನಾಗಚಾಮುಂಡಿಗೆ ನಾಗನ ಹೆಡೆಯ ಚಿಹ್ನೆಯುಳ್ಳು ಮುಡಿಯನ್ನು ಕಟ್ಟುತ್ತಾರೆ. ಹಣೆಯಲ್ಲಿ ನಾಗನ ಆಕೃತಿಯನ್ನು ಚಿತ್ರಿಸುತ್ತಾರೆ. ಮುವ್ವ/ಮೂವ/ಮೂವಿಗೆ ವಾತೆ ಎಂಬ ವಿಶಿಷ್ಟ ದೈವಕ್ಕೆ ಸಂಬಂಧಿಸಿದ ಕಿರು ಪಾಡ್ದನವೊಂದರಲ್ಲಿ ಪಂಚಪಾಂಡವರು ಅಡಿಗೆ ಸರಿದರು. ಐದು ಭೂತಗಳು ಮೇಲಕ್ಕೆ ನೆಗೆದವು ಎಂದು ಹೇಳಿದೆ. ನಾಗಚಾಮುಂಡಿಮೂವನಾಗ ಬೆರ್ಮೆರ್ರಕ್ತೇಶ್ವರಿಗಳು ಈ ಪಂಚಭೂತಗಳು ಎಂದು ಈ ಪಾಡ್ದನವು ತಿಳಿಸುತ್ತದೆ.

ಕೋಮಾರು ಚಾಮುಂಡಿ :
          ನಡಿಬೈಲುಇಚಲಂಗೋಡು ಮೊದಲಾದೆಡೆಗಳಲ್ಲಿ ಕೋಮಾರು ಚಾಮುಂಡಿ ಎಂಬ ದೈವಕ್ಕೆ ಆರಾಧನೆ ಇದೆ. ಕೋಮಾರು ಎಂಬಾತ ಇಚಲಂಗೋಡು ಪರಿಸರದ ಬಾಕುಡ ಸಮುದಾಯದ ಹಿರಿಯ ವ್ಯಕ್ತಿ. ವ್ಯಾಘ್ರ ಚಾಮುಂಡಿ ಅವರ ಆರಾಧ್ಯ ದೈವ. ಕೋಮಾರು ಆರಾಧಿಸಿದ ದೈವ ಕೋಮಾರು ಚಾಮುಂಡಿ ಎಂದು ಒಂದು ಐತಿಹ್ಯವು ಹೇಳಿದರೆ ಇನ್ನೊಂದು ಐತಿಹ್ಯದ ಪ್ರಕಾರ ತನ್ನನ್ನು ಆರಾಧಿಸಿz Àಕೋಮಾರುವಿನ ಮೇಲೆ ಅನುಗ್ರಹದಿಂದ ಆತನನ್ನು ಮಾಯಮಾಡಿ ತನ್ನ ಸೇರಿಗೆಗೆ ಚಾಮುಂಡಿ ಭೂತ ಸೇರಿಸಿಕೊಳ್ಳುತ್ತದೆ. ಮಾಯವಾದ ಕೋಮಾರುವೇ ಕೋಮಾರು ಚಾಮುಂಡಿ ಎಂಬ ಹೆಸರಿನಲ್ಲಿ ಆರಾಧನೆಗೊಳ್ಳುತ್ತಾನೆ ಎಂದು ಹೇಳಲಾಗಿದೆ.© ಡಾ.ಲಕ್ಷ್ಮೀ ಜಿ‌ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು,ಮೊಬೈಲ್ 9480516684 

ಒಲಿಚಾಮುಂಡಿ :
            ಒಲಿ ಚಾಮುಂಡಿಗೆ ತೆಂಗಿನ ಒಲಿಯ (ಎಳೆಗರಿಯ) ಅಲಂಕಾರವಿರುತ್ತದೆ. ಆದ್ದರಿಂದ ಒಲಿಚಾಮುಂಡಿ ಎನ್ನುತ್ತಾರೆ. ಒಲಿ ಚಾಮುಂಡಿಯನ್ನು ಒಲಿಪ್ರಾಂಡಿ ಎಂದೂ ಕರೆಯುತ್ತಾರೆ. ಮಡಪ್ಪಾಡಿಯಲ್ಲಿ ನೂರೆಂದು ಮಲೆದೈವಗಳ ನೇಮ ನಡೆಯುವಾಗ ಒಲಿಪ್ರಾಂಡಿ ದೈವಕ್ಕೆ ನೇಮ ನೀಡುತ್ತಾರೆ. ದೇವರು ಸುಬ್ರಹಣ್ಯದಲ್ಲಿ ಬರುವಾಗ ಎದುರು ಸಿಕ್ಕವನು ಮಾಯಾವಾಗಿ ದೈವಸಾದಿಗೆಯೆಂದು ಆರಾಧನೆ ಪಡೆಯುತ್ತಾನೆ. ದೈವವನ್ನು ಮುಟ್ಟಿದವನು ಮಾಯವಾಗಿ ದೈವನ ಮುಟ್ಟುನಾಯೆ ಎಂಬ ಹೆಸರಿನಲ್ಲಿ ಆರಾಧನೆ ಹೊಂದುತ್ತಾನೆ. ಅಂತೆಯೇ ದೈವವು ಒಬ್ಬನನ್ನು ಒಲಿದು ಮಾಯಮಾಡುತ್ತದೆ. © ಡಾ.ಲಕ್ಷ್ಮೀ ಜಿ‌ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು,ಮೊಬೈಲ್ 9480516684 
 ಒಲಿದು ಬಂದವನೇ ಒಲಿಪ್ರಾಂಡಿ ಎಂದು ಹೇಳಿ ಈತನನ್ನೇ ಒಲಿಪ್ರಾಂಡಿಒಲಿಚಾಮುಂಡಿ ಎಂದು ಆರಾಧಿಸುತ್ತಾರೆ.

ನಾಗಚಾಮುಂಡಿ : 
                         ನಾಗಚಾಮುಂಡಿಗೆ ನಾಗನ ಹೆಡೆಯ ಚಿಹ್ನೆಯುಳ್ಳು ಮುಡಿಯನ್ನು ಕಟ್ಟುತ್ತಾರೆ. ಹಣೆಯಲ್ಲಿ ನಾಗನ ಆಕೃತಿಯನ್ನು ಚಿತ್ರಿಸುತ್ತಾರೆ. ಮುವ್ವ/ಮೂವ/ಮೂವಿಗೆ ವಾತೆ ಎಂಬ ವಿಶಿಷ್ಟ ದೈವಕ್ಕೆ ಸಂಬಂಧಿಸಿದ ಕಿರು ಪಾಡ್ದನವೊಂದರಲ್ಲಿ ಪಂಚಪಾಂಡವರು ಅಡಿಗೆ ಸರಿದರು. ಐದು ಭೂತಗಳು ಮೇಲಕ್ಕೆ ನೆಗೆದವು ಎಂದು ಹೇಳಿದೆ. ನಾಗಚಾಮುಂಡಿಮೂವನಾಗ ಬೆರ್ಮೆರ್ರಕ್ತೇಶ್ವರಿಗಳು ಈ ಪಂಚಭೂತಗಳು ಎಂದು ಈ ಪಾಡ್ದನವು ತಿಳಿಸುತ್ತದೆ.© ಡಾ.ಲಕ್ಷ್ಮೀ ಜಿ‌ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು,ಮೊಬೈಲ್ 9480516684 
               
ಪಾಪೆಲು ಚಾಮುಂಡಿ : 
       ಪಾಪೆಲು ಚಾಮುಂಡಿ ಅನ್ಯಾಯ ಮಾಡಿದವನನ್ನು ರಕ್ತಕಾರಿ ಸಾಯುವಂತೆ ಮಾಡುತ್ತದೆ. ಆದ್ದರಿಂದ ಪಾಪೆಲು ಚಾಮುಂಡಿ ದೈವವು ನೆತ್ತರ ಮುಗುಳಿ ಎಂದೇ ಪ್ರಸಿದ್ಧವಾಗಿದೆ. ಪಾಪೆಲು ಚಾಮುಂಡಿ ದೈವದ ಪಾಡ್ದನದ ಪ್ರಕಾರ ಸಾವಿರ ವರ್ಷಗಳ ಹಿಂದೆ ಘಟ್ಟದ ಮೇಲಿನಿಂದ ಚಾರ್ಮಾಡಿ (ಬಂಗಾಡಿ) ಘಾಟಿಯ ಮೂಲಕ ವ್ಯಾಘ್ರವಾಹಿನಿ ರಕ್ತ ಚಾಮುಂಡಿ ದೈವವು ಇಳಿದು ಬರುತ್ತದೆ. ಲಿಂಗಾಯತ ಮತಕ್ಕೆ ಸೇರಿದ್ದ ರಾಮಸೆಟ್ಟಿ ಎಂಬುವರು ರುದ್ರಾಂಶ ಸಂಭೂತರಾಗಿದ್ದರು. ಅವರ ಜೊತೆಗೆ ವ್ಯಾಘ್ರವಾಹಿನಿ ರಕ್ತ ಚಾಮುಂಡಿಯು ಕಾವು ತ್ರಿಮೂರ್ತಿ ದೇವಸ್ಥಾನಕ್ಕೆ ಬಂದು ತ್ರಿಮೂರ್ತಿಗಳಲ್ಲಿ ತನಗೆ ನೆಲೆಸಲು ಯಾವ ಸ್ಥಳ ಯೋಗ್ಯವಾದುದುಎಂದು ಕೇಳುತ್ತದೆ. ಆ ಕಾಲದಲ್ಲಿ ಅಪ್ಪೆಟ್ಟಿ ಈರೆಟ್ಟಿ ಒಡೆಯರುಗಳು ಧರ್ಮಿಷ್ಠರಾಗಿದ್ದುಸತ್ಯ-ಧರ್ಮ-ನ್ಯಾಯ ನೀತಿಗಳ ಸಾಕಾರ ಮೂರ್ತಿಗಳಾಗಿದ್ದರು.© ಡಾ.ಲಕ್ಷ್ಮೀ ಜಿ‌ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು,ಮೊಬೈಲ್ 9480516684  ಆದ್ದರಿಂದ ದೇವರು ವ್ಯಾಘ್ರವಾಹಿನಿ ರಕ್ತಚಾಮುಂಡಿಗೆ ಅಪ್ಪೆಟ್ಟಿ ಒಡೆಯರುಗಳಿಂದ ಕಟ್ಟೆ ಗುಡಿಗಳನ್ನು ನಿರ್ಮಿಸಿಕೊಂಡು ಕಾವು ದೇವರುಗಳಿಗೆ ಪ್ರಧಾನ ಬಂಟರಂತೆ ಇದ್ದು ಗ್ರಾಮಕ್ಕೆ ಗ್ರಾಮಾಧಿ ದೇವತೆ ಎನಿಸಿಕೊಂಡಿರಲು ಆದೇಶವೀಯುತ್ತಾರೆ. ವ್ಯಾಘ್ರವಾಹಿನಿ ರಕ್ತಚಾಮುಂಡಿಯ ಜೊತೆಗೆ ಬಂದ ದೈವಾಂಶ ಸಂಭೂತರಾದ ರಾಮಸೆಟ್ಟಿ ತಮ್ಮ ಯೋಗ ಶಕ್ತಿಯಿಂದ ಮನುಷ್ಯ ರೂಪವನ್ನು ಬಿಟ್ಟು ಬೈರವ ದೇವತೆಯಾಗಿ ವ್ಯಾಘ್ರವಾಹಿನಿ ರಕ್ತಚಾಮುಂಡಿ ದೈವದೊಂದಿಗೆ ಸೇರುತ್ತಾರೆ. ರಾಮಶೆಟ್ಟಿ ಭೈರವ ದೇವತೆಯಾಗಿ ರಕ್ತಚಾಮುಂಡಿ ಸೇರಿಗೆಗೆ ಸಂದು ಪಾಪೆಲು ಚಾಮುಂಡಿ ಎಂಬ ದೈವವಾಗಿ ಆರಾಧನೆ ಪಡೆಯುತ್ತಾರೆ. ಕೊಕ್ಕಡ, ಕಾವು, ಬೆಳ್ತಂಗಡಿ, ಪರಿಸರದಲ್ಲಿ ಪಾಪೆಲು ಚಾಮುಂಡಿ (ನೆತ್ತರು ಮುಗುಳಿ) ದೈವಕ್ಕೆ ಆರಾಧನೆ ಇದೆ.

ಆಲಿಚಾಮುಂಡಿ :
 ಕುಂಬಳೆ ಪರಿಸರದ ಅರಿಕ್ಕಾಡಿಯಲ್ಲಿ ಆರಾಧಿಸಲ್ಪಡುವ ಆಲಿಚಾಮುಂಡಿ ಬಹಳ ಪ್ರಸಿದ್ಧವಾದ ದೈವ. ಮುಸ್ಲಿಂ ಮೂಲವನ್ನು ಹೊಂದಿರುವ ದೈವತವಿದು. ಇಬ್ಬರು ಮಹಿಳೆಯರಿಗೆ ಆಲಿ ಎಂಬಾತ ಕಿರುಕುಳ ನೀಡಿದಾಗ ಮುನಿದ ದೈವ ಚಾಮುಂಡಿಯು ಆತನನ್ನು ಮಾಯ ಮಾಡಿ ತನ್ನ ಸೇರಿಗೆಗೆ ಸೇರಿಸಿಕೊಳ್ಳುತ್ತದೆ. ಆತನೇ ಮುಂದೆ ಆಲಿಚಾಮುಂಡಿ ಎಂಬ ಹೆಸರಿನಿಂದ ದೈವತ್ವವನ್ನು ಪಡೆದು ಆರಾಧಿಸಲ್ಪಡುತ್ತಾನೆ.© ಡಾ.ಲಕ್ಷ್ಮೀ ಜಿ‌ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು,ಮೊಬೈಲ್ 9480516684 

ಮೊರಾಂಡಿ ,ಅಡಿಮರಾಂಡಿ ಇತ್ಯಾದಿ ಅನೇಕ ದೈವಗಳಿಗೆ  ತುಳುನಾಡಿನಲ್ಲಿ 
ಚಾಮುಂಡಿ ಹೆಸರಿನೊಂದಿಗೆ ಆರಾಧನೆ ಇದೆ ಈ ಮೊದಲು ಒಂದೇ ದೈವಕ್ಕೆ ಸ್ಥಳಿಯವಾಗಿ ಬೇರೆ ಬೇರೆ ಹೆಸರಿನಲ್ಲಿ ಆರಾಧನೆ ನಡೆಯುತ್ತದೆ ಎಂದು ಭಾವಿಸಲಾಗಿತ್ತು .ಆದರೆ ನನ್ನ ಕ್ಷೇತ್ರ ಕಾರ್ಯ  ಆಧಾರಿತ ಅಧ್ಯಯನದಲ್ಲಿ ಬೇರೆ ಬೇರೆ ದೈವಗಳು /ಶಕ್ತಿಗಳು ಒಂದೇ ದೈವದ ಹೆಸರಿನಲ್ಲಿ ಆರಾಧನೆ ಪಡೆಯುತ್ತಿವೆ ಎಂದು ಕಂಡು ಬಂದು ಬಂದಿದೆ ಆದ್ದರಿಂದ  ಈ ಬಗ್ಗೆ ಸಮಗ್ರ ಅಧ್ಯಯನದ ಅಗತ್ಯವಿದೆ© ಡಾ.ಲಕ್ಷ್ಮೀ ಜಿ‌ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು,ಮೊಬೈಲ್ 9480516684 


ಕರಾವಳಿಯ ಸಾವಿರದೊಂದು ದೈವಗಳು : ಅಗ್ನಿ ಕೊರತಿ - ಡಾ.ಲಕ್ಷ್ಮೀ ಜಿ ಪ್ರಸಾದ್

 



ಕರಾವಳಿಯ ಸಾವಿರದೊಂದು ದೈವಗಳು‌: ಅಗ್ನಿ ಕೊರತಿ - ಡಾ.ಲಕ್ಷ್ಮೀ ಜಿ ಪ್ರಸಾದ್ ಹೆಚ್ಚಿನ ಮಾಹಿತಿಗಾಗಿ  ,9480516684 
‌ಒಂದೆರಡು ವರ್ಷಗಳ ಹಿಂದೆ ಅಗ್ನಿ ಕೊರತಿ ದೈವದ ಫೋಟೋ ಕಳಹಿಸಿ ಈ ದೈವದ ಮಾಹಿತಿ ಇದೆಯೇ ಎಂದು ಸ್ನೇಹಿತರಾದ ಸಿಂಚನಾ ಶ್ಯಾಮ್ ಕೇಳಿದ್ದರು.ಅಗ್ನಿ ಕೊರತಿ ಓರ್ವ ಬೆಂಕಿಯಲ್ಲಿ ಆತ್ಮಾಹುತಿ ಮಾಡಿಕೊಂಡ ಸ್ತ್ರೀ ಎಂಬ ಐತಿಹ್ಯ ಸಿಕ್ಕಿತ್ತಾದರೂ ಸರಿಯಾದ ಮಾಹಿತಿ ಸಿಕ್ಕಿರಲಿಲ್ಲ.ತಿಂಗಳ ಮೊದಲು ಈ ಬಗ್ಗೆ ಅಭಿಲಾಷ್ ಚೌಟ ಅವರು ಸರಿಯಾದ ಮಾಹಿತಿ ನೀಡಿದರು.
‌ಹೆಸರು ಒಂದೇ ಇದ್ದರೂ ದೈವ ಒಂದೇ ಇರಬೇಕಾಗಿಲ್ಲ .ಅಗ್ನಿ ಕೊರತಿ ಕೊರತಿ ದೈವವಲ್ಲ .ಸಸಿಹಿತ್ತಿಲಿನಲ್ಲಿ ಗುಳಿಗನ ಜೊತೆ ಸೇರಿರುವ ದೈವವಿದು.ಗುಳಿಗನ ಜೊತೆ ಸೇರಿದ ಕಾರಣ ಅಗ್ನಿ ಗುಳಿಗನೆಂದು ಕೂಡ ಕರೆಯುತ್ತಾರೆ.
‌ಈ ದೈವದ ಹಿನ್ನೆಲೆಯಲ್ಲಿ ವರ್ಗ ಸಂಘರ್ಷದ ಸೂಚನೆ ಇರುವ ಕಥಾನಕ ಇದೆ
‌ಪೂಲ ಪೊಂಜೋವು ಮತ್ತು  ಗಾಳಿಭದ್ರ ದೇವರಿಗೆ ಸತ್ಯಭಾರಿ ಎಂಬ ಹೆಸರಿನ ಮಗಳಾಗಿ ಹುಟ್ಟುತ್ತಾಳೆ.ಹುಡುಗಿ ಹೋಗಿ ದೊಡ್ಡವಳಾದ ಶುದ್ಧ ನೀರಿಗಾಗಿ ಕಾಂತೇಶ್ವರ ದೇವಾಲಯಕ್ಕೆ ಬರುತ್ತಾಳೆ.ಅಲ್ಲಿ ಇಬ್ಬರು ಬ್ರಾಹ್ಮಣ ಬ್ರಹ್ಮಚಾರಿಗಳು ಅವಳನ್ನು ಅಟ್ಟಿಸಿಕೊಂಡು ಹಿಂಬಾಲಿಸಿ ಕೊಂಡು ಬರುತ್ತಾರೆ.ಆಗ ಅವಳು ಬೆಂಕಿಗೆ ಪ್ರವೇಶ ಮಾಡಿ ಆತ್ಮಾಹುತಿ ಮಾಡಿಕೊಳ್ಳುತ್ತಾಳೆ.ನಂತರ ದೈವವಾಗಿ ಎದ್ದು ನಿಂತು ಮುಳಿಹಿತ್ತಿಲಿಗೆ ಹೋಗಿ ಭಗವತಿ ಸಾನ್ನಿಧ್ಯದಲ್ಲಿ ಅಗ್ನಿ ಕೊರತಿ/ ಅಗ್ನಿ ಗುಳಿಗನಾಗಿ ಆರಾಧನೆ ಪಡೆಯುತ್ತಾಳೆ. ಅಲ್ಲಿಂದ ಭಗವತಿಯೊಡನೆ ಬೇರೆಡೆಗೆ ಪ್ರಸರಣಗೊಳ್ಳುತ್ತಾಳೆ.
‌ಕುಂದಣ್ಣ ಉರೊಲಿ  ಎಂಬವರು ಅಗ್ನಿ ಕೊರತಿಯ ಉಪಾಸನೆ ಮಾಡಿತ್ತಾರೆ.ನಂತರ ಒಂದು ಗುತ್ತಿನ ಮನೆಯವರು ಕಳ್ಳ ಕಾಕರಿಂದ ರಕ್ಷಣೆ ಪಡೆಯುವ ಸಲುವಾಗಿ ಅಗ್ನಿ ಕೊರತಿಯನ್ನು ಕೇಳಿ ಕರೆದುಕೊಂಡು ಹೋಗಿ ಆರಾಧನೆ ಮಾಡುತ್ತಾರೆ.

‌ಅಲೌಕಿಕ ನೆಲೆಯನ್ನು ಬಿಟ್ಟು ವಾಸ್ತವವಾಗಿ ಹೇಳುವುದಾದರೆ ಕೊರತಿ ಎಂಬ ಹೆಸರು ಜಾತಿ ಸೂಚಕವಾಗಿದ್ದು ಆಕೆ ಮೂಲತಃ ಕೊರಗ ಸಮುದಾಯಕ್ಕೆ ಸೇರಿದವಳು ಎಂಬುದನ್ನು ಸೂಚಿಸುತ್ತದೆ.
‌ವಿಧಿ ನಿಷೇಧ ಗಳು ಆದಿ ಮಾನವನ ಅಲಿಖಿತ ಶಾಸನಗಳಾಗಿದ್ದವು.
‌ಅಂತೆಯೇ ಕೊರಗ ಸಮುದಾಯದ ಹೆಣ್ಣು ಮಗಳು ಒಬ್ಬಳು ಶುದ್ಧವಾಗಲು ದೇವಾಲಯಕ್ಕೆ ಬರುವುದನ್ನು ಒಪ್ಪುವುದಿಲ್ಲ .ಹಾಗಾಗಿ ಅವಳನ್ನು ಅಲ್ಲಿ ಅಟ್ಟಿಸಿಕೊಂಡು ಹೋದಾಗ ಅವಳು ಅಗ್ನಿ ಪ್ರವೇಶಿಸಿ ದುರಂತವನ್ನಪ್ಪಿರಬಹುದು.ದುರಂತ ಮತ್ತು ದೈವತ್ವ ಒಟ್ಟೊಟ್ಟಿಗೆ ಸಾಗುವಂತೆ ಅವಳು ದೈವತ್ವ ಪಡೆದು ಆರಾಧನೆ ಹೊಂದಿರಬಹುದು.© ಡಾ.ಲಕ್ಷ್ಮೀ ಜಿ ಪ್ರಸಾದ ಲೇ ಕರಾವಳಿಯ ಸಾವಿರದೊಂದು ದೈವಗಳು 
‌ಅಗ್ನಿಕೊರತಿ ಬಗ್ಗೆ ಮಾಹಿತಿ ಸಂಗ್ರಹಕ್ಕೆ ಪ್ರೇರಣೆ ನೀಡಿದ  ಸಿಂಚನಾ ಶ್ಯಾಮ್ ಮತ್ತು ಮಾಹಿತಿ ನೀಡಿದ ಅಭಿಲಾಷ್ ಚೌಟರಿಗೆ ಕೃತಜ್ಣತೆಗಳು
‌ಚಿತ್ರ ಕೃಪೆ: ಧರ್ಮ ದೈವ