Tuesday, 10 October 2023

ಸೇಮಿಕಲ್ಲ ಪಂಜುರ್ಲಿ‌: ಡಾ.ಲಕ್ಷ್ಮೀ ಜಿ ಪ್ರಸಾದ್

ರಾವಳಿಯ ಸಾವಿರದೊಂದು  ದೈವಗಳು :ಸೇಮಿ ಕಲ್ಲ ಪಂಜುರ್ಲಿ © ಡಾ.ಲಕ್ಷ್ಮೀ ಜಿ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು ಮೊಬೈಲ್ 9480516684 

                                                ಚಿತ್ರ ಕೃಪೆ :ಧರ್ಮ ದೈವ
ಹೆಸರಿನಲ್ಲಿ ಪಂಜುರ್ಲಿ ಎಂದು ಇದ್ದರೂ ಕ್ಷೇಮಕಲ್ಲ /ಸೇಮಿ ಕಲ್ಲ ಪಂಜುರ್ಲಿ, ಪಂಜುರ್ಲಿ ದೈವವಲ್ಲ .ಪಂಜುರ್ಲಿಯ ಸೇರಿಗೆ ದೈವ ಕೂಡ ಅಲ್ಲ
ಪ್ರಧಾನ ದೈವದ ಸೇರಿಗೆಯಾಗಿ ಅನೇಕ ದೈವಗಳಿಗೆ ಆರಾಧನೆ ಇರುತ್ತದೆ .ಸಾಮಾನ್ಯವಾಗಿ ಸೇರಿಗೆ ದೈವಗಳು ಪ್ರಧಾನ ದೈವದ ಆಗ್ರಹ ಅಥವಾ ಅನುಗ್ರಹ ಪಡೆದು ದೈವತ್ವ ಪಡೆದ ಶಕ್ತಿಗಳಾಗಿರುತ್ತವೆ
ಹೀಗೆ ಸತ್ಯನಾಪುರದ ಸಿರಿಯ ಆಗ್ರಹಕ್ಕೆ ತುತ್ತಾಗೆ ದೈವತ್ವ ಪಡೆದ ದೈವ ಕ್ಷೇಮಿಕಲ್ಲ ಪಂಜುರ್ಲಿ .ಸತ್ಯನಾಪುರದ ರಾಜ ಬೆರ್ಮ ಆಳ್ವನಿಗೆ ಹುಟ್ಟಿದ ಮಗು ಸಾಯುತ್ತದೆ. ಹೆಂಡತಿಯೂ ಸಾಯುತ್ತಾಳೆ. ಬೇರೆ ಸಂತಾನವಿಲ್ಲದ ವೃದ್ಧ ಅರಸ ಬೆರ್ಮ ಆಳ್ವನಿಗೆ ‘ಮುಂದೆ ತನ್ನ ರಾಜ್ಯಕ್ಕೆ ದಿಕ್ಕಿಲ್ಲ’ ಎಂದು ಚಿಂತೆಯಾಗಿ ದುಃಖಿಸುತ್ತಾನೆ. ಅವನ ಕಣ್ಣೀರು ಅವನ ಕುಲದೈವ ಲಂಕೆಲೋಕನಾಡಿನ ಬೆರ್ಮರ ಪಾದಕ್ಕೆ ಸಂಪಿಗೆ ಹೂವಿನ ರಾಶಿಯಾಗಿ ಬೀಳುತ್ತದೆ.© ಡಾ.ಲಕ್ಷ್ಮೀ ಜಿ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು ಮೊಬೈಲ್ 9480516684 

ಆಗ ಬೆರ್ಮೆರ್ ಬಡಬ್ರಾಹ್ಮಣನ ರೂಪ ಧರಿಸಿ, ಬೆರ್ಮ ಆಳ್ವನಲ್ಲಿಗೆ ಬಂದು ‘ಲಂಕೆಲೋಕನಾಡಿನ ಆದಿ ಆಲಡೆ, ಕಾಡು-ಪೊದೆ ಬಳ್ಳಿಯಿಂದ ಸುತ್ತುವರಿದು ಪಾಳು ಬಿದ್ದಿದೆ. ಅದರ ಜೀರ್ಣೋದ್ಧಾರ ಮಾಡಿದರೆ ನಿನ್ನ ಸಮಸ್ಯೆ ಸರಿಹೋಗುತ್ತದೆ’ ಎಂದು ಹೇಳುತ್ತಾನೆ. ಅಂತೆಯೇ ಬೆರ್ಮ ಆಳ್ವ ಹೋಗಿ ಲಂಕೆಲೋಕನಾಡಿನ ‘ಬೆರ್ಮೆರ’ ಪ್ರಾರ್ಥನೆಯನ್ನು ಮಾಡಿ ಕಾಡಿನಲ್ಲಿರುವ ಬೆರ್ಮೆರನ್ನು ತಂದು ಏಳದೆ ಗುಂಡ ಗುಡಿ ಕಟ್ಟಿಸುತ್ತೇನೆ ಎಂದು ಹರಿಕೆ ಹೇಳುತ್ತಾನೆ. ಆಗ ಪ್ರಸಾದರೂಪದಲ್ಲಿ ಸಿಕ್ಕ ಹಿಂಗಾರದ ಹಾಳೆಯ ಮೇಲಿನ ಗಂಧದ ಗುಳಿಗೆ ಹೆಣ್ಣುಮಗುವಾಗುತ್ತದೆ.
ಆ ಮಗುವನ್ನು ದೇವರ ವರವೆಂದು ಭಾವಿಸಿ ಬೆರ್ಮ ಆಳ್ವ ಆ ಮಗುವಿಗೆ ‘ಬಾಲೆಕ್ಕೆ ಸಿರಿ’ ಎಂದು ಹೆಸರಿಟ್ಟು ಸಾಕುತ್ತಾನೆ. ಮುಂದೆ ಬಸ್ರೂರು ಬತ್ತಕೇರಿ ಅರಮನೆಯ ಕಾಂತುಪೂಂಜರ ಜೊತೆ ಅವಳ ಮದುವೆಯಾಗುತ್ತದೆ. ಮುಂದೆ ಕಾಂತುಪೂಂಜ ಸೂಳೆ ಸಿದ್ದುವಿನ ಸಹವಾಸ ಮಾಡುತ್ತಾನೆ. ಸಿರಿ ಗರ್ಭಿಣಿಯಾಗುತ್ತಾಳೆ. ಅವಳ ಸೀಮಂತಕ್ಕೆ, ತೆಗೆದ ಸೀರೆಯನ್ನು ಸೂಳೆ ಸಿದ್ದು ಉಟ್ಟು ನೆರಿಗೆ ಹಾಳು ಮಾಡುತ್ತಾಳೆ. ಈ ಬಗ್ಗೆ ಬೆರ್ಮೆರ್ ಸಿರಿಗೆ ಸೂಚನೆ ನೀಡಿರುತ್ತಾರೆ.© ಡಾ.ಲಕ್ಷ್ಮೀ ಜಿ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು ಮೊಬೈಲ್ 9480516684 

 ಆದ್ದರಿಂದ ಆ ಸೀರೆಯನ್ನು ತಿರಸ್ಕರಿಸಿ ತನ್ನ ಅಜ್ಜ ತಂದ ಸೀರೆಯನ್ನು ಉಡುತ್ತಾಳೆ. ಎಲ್ಲರ ಎದುರು ತನ್ನ ಮರ್ಯಾದೆ ತೆಗೆದಳೆಂದು ಕಾಂತುಪೂಂಜ ಸಿರಿಯೊಡನೆ ಕೋಪಿಸುತ್ತಾನೆ. ಮುಂದೆ ಅವಳು ಮಗುವನ್ನು ಹೆತ್ತಾಗಲೂ ನೋಡಲು ಬರುವುದಿಲ್ಲ. ಬೆರ್ಮ ಆಳ್ವ ಸತ್ತಾಗಲೂ ಬರುವುದಿಲ್ಲ. ಕಾಂತುಪೂಂಜನ ಪಿತೂರಿಯಿಂದಾಗಿ ಬೆರ್ಮ ಆಳ್ವನ ಅರಮನೆ, ರಾಜ್ಯ ದಾಯಾದಿಗಳ ಪಾಲಾಗುತ್ತದೆ.
 ಸಿರಿ ತನ್ನ ಮಗು ಕುಮಾರ ಹಾಗೂ ಕೆಲಸದ ಹೆಂಗಸು ದಾರುವಿನೊಂದಿಗೆ ಬಸ್ರೂರು ಬತ್ತಕೇರಿ ಅರಮನೆಗೆ ಬಂದು ಬರ (ವಿಚ್ಛೇದ)ವನ್ನು ಕೇಳುತ್ತಾಳೆ. ಮುಂದೆ ಅರಮನೆ ಉರಿದು ಹೋಗುವಂತೆ ಶಾಪ ಕೊಟ್ಟು ಅಲ್ಲಿಂದ ದೇಶಾಂತರ ಹೋಗುತ್ತಾಳೆ
ಸಂಜೆ ಹೊತ್ತು ಕಂತುವುದರ ಒಳಗೆ ತನ್ನ ರಾಜ್ಯದ ಗದುಯನ್ನು ದಾಟಿ ಹೋಗಬೇಕೆಂದು ಕಾಂತು ಪೂಂಜ ಹೇಳುತ್ತಾನೆ .
ಅಂತೆಯೇ ದಾರುವಿನೊಂದಿಗೆ ತೊಟ್ಟಿಲ ಮಗುವನ್ನು ಹಿಡಿದುಕೊಂಡು ಬರುವಾಗ ದಾರಿಯಲ್ಲಿ ಗಾಳಿ ಕೊಂತ್ಯಮ್ಮ ದೇವರು ಸಿಗುತ್ತಾರೆ .
ಸಿರಿಗೆ ರಸ ಬಾಲೆ ಹಣ್ಣು ಹಾಲು ತಂದು ಕೊಡುತ್ತಾಳೆ .ಮತ್ತೆ ಅವಳಲ್ಲಿ ನನ್ನ ಮಗ ವೀರ ಭದ್ರ ಕುಮಾರ ಬರುವ ಮೊದಲು ಇಲ್ಲಿಂದ ಹೋಗು ಅವನು ಕಂಡರೆ ನಿನ್ನನ್ನು ಬಿಡಲಾರ ,ಅವನು ಸಿಕ್ಕರೆ ಅವನನ್ನು ನಿನ್ನ ಮಗನ ಹಾಗೆ ಭಾವಿಸಿ ಅವನ ತಪ್ಪನ್ನು ಕ್ಷಮಿಸಬೇಕು ಎಂದು ಹೇಳುತ್ತಾರೆ .ಆಯಿತು ಎಂದು ಹೇಳುತ್ತಾಳೆ ಸಿರಿ
ಅಲ್ಲಿಂದ ಮುಂದೆ ಹೋಗುವಾಗ ವೀರ ಭದ್ರ ಕುಮಾರ ಹಿಮ್ಬಾಲಿಸ್ಕೊಂದು ಬಂದು ಅಡ್ಡ ಕಟ್ಟುತ್ತಾನೆ .ಅವಳತಲೆ ಕೂದಲಿಗೆ ಕೈ ಹಾಕುತ್ತಾನೆ .ಆಗ


ಓ ಮುಟ್ಟಡ ಮುಟ್ಟಡ ಪಂಡೆರ್ ಬಾಲೆಕ್ಕೆ ಸಿರಿಯೇ
ಓ ಪನ್ನಲ ಪತ್ತಿನಕೇಂಡಿಜೆ ಪಂಡೆರ್ ಆರಾಂಡ ಆನಿಗಯ್ ಯೇ
ಓ ಒಲಿಪ್ಪಾಲ ಉದೆಟ್ ಲ ನೆದಿಪ್ಪಾಲ ಕಲ್ಲುಲ ಪಾದೆಲ ನೆಗೆಪ್ಪುಲಾಯೆ

ನನ್ನನ್ನು ಮುಟ್ಟ ಬೇಡ ಮುಟ್ಟ ಬೇಡ ಎಂದು ಸಿರಿ ಹೇಳುತ್ತಾಳೆ .ಅವಳ ಮಾತನ್ನು ಲಕ್ಷಿಸದೆ ಮುಂದುವರಿದ ಅವನಿಗೆ ಶಾಪ ಕೊಟ್ಟು ಹೊಳೆಯಲ್ಲಿ ಪಾದೆ ಕಲ್ಲಾಗುವಂತೆಮಾಡುತ್ತಾಳೆ .ಮುಂದೆ ಅವನ ತಾಯಿಗೆ ಕೊಟ್ಟ ಮಾತು ನೆನಪಾಗಿ ಆತನಿಗೆ ದೈವತ್ವ ನೀಡಿ ಕ್ಷೇಮ ಕಲ್ಲು ಪಂಜುರ್ಲಿ ಎಂಬ ಹೆಸರಿನಲ್ಲಿ ಆರಾಧನೆ ಪಡೆ ಎಂದು ಹೇಳುತ್ತಾಳೆ .
© ಡಾ.ಲಕ್ಷ್ಮೀ ಜಿ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು ಮೊಬೈಲ್ 9480516684 
ಹೀಗೆ ಸಿರಿಯ ಅನುಗ್ರಹದಿಂದ ದೈವತ್ವ ಪಡೆದ ವೀರ ಭದ್ರ ಕುಮಾರ ಕ್ಷೇಮ ಕಲ್ಲ ಪಂಜುರ್ಲಿ ದೈವವಾಗಿ ನೆಲೆ ನಿಲ್ಲುತ್ತಾನೆ .

No comments:

No comments:

Post a Comment