Thursday, 20 March 2025

ದೊಡ್ಡವರ ದಾರಿ :76 : ಉದಾರಿ ದಕ್ಷ ಪ್ರಿನ್ಸಿಪಾಲ್ ಸಿಸ್ಟರ್ ನತಾಲಿಯಾ ಡಿ ಸೋಜ ..

 ದೊಡ್ಡವರ ದಾರಿ : ಉದಾರಿ ದಕ್ಷ ಪ್ರಿನ್ಸಿಪಾಲ್  ಸಿಸ್ಟರ್ ನತಾಲಿಯಾ ಡಿ ಸೋಜ 

ಇಲ್ಲಿ ಜಡೆಗಳು ಜಗಳವಾಡುವುದಿಲ್ಲ

ಜಗ ಮೆಚ್ಚುವಂತೆ ಕೆಲಸ ಮಾಡುತ್ತವೆ..



ಕಳೆದ ಇಪ್ಪತ್ತು ದಿನಗಳಿಂದ ನನಗೆ ಬೆಂಗಳೂರಿನ ಜ್ಯೋತಿ ನಿವಾಸ್ ಪಿಯು ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಸ್ಪೆಷಲ್ ಇನ್ವಿಜಿಲೇಟರ್ಸ್ ಸ್ಕ್ವಾಡ್ ಆಗಿ ಕರ್ತವ್ಯ..

ಇದು ಬಹಳ ದೊಡ್ಡ ಶಿಕ್ಷಣ ಸಂಸ್ಥೆ. ಪಿಯು ವಿಭಾಗದಲ್ಲಿಯೇ 2000 ವಿದ್ಯಾರ್ಥಿಗಳಿದ್ದಾರೆ.ಇಲ್ಲಿ ಅನೇಕ ಬಡ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಾರೆ ,ಬಡ ವಿದ್ಯಾರ್ಥಿನಿಯರಿಗೆ ಊಟ ತಿಂಡಿ ಕೂಡ ಉಚಿತವಾಗಿ ಕೊಡುವ ವ್ಯವಸ್ಥೆ ಇದೆ 

ಇಲ್ಲಿನ  ವಿದ್ಯಾರ್ಥಿಗಳಿಗೆ ಇದು ಪರೀಕ್ಷಾ ಕೇಂದ್ರವಲ್ಲ.ಬೇರೆ ಬೇರೆ ಕಾಲೇಜುಗಳ ಒಂದೂವರೆ ಸಾವಿರದಷ್ಟು ವಿದ್ಯಾರ್ಥಿಗಳಿಗೆ ಇಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆದವು.

ಇದು ಸಿಸ್ಟರ್ಸ್ ನಡೆಸುವ ಮಹಿಳಾ  ಕಾಲೇಜು..ಹೆಚ್ಚಿನ ಉದ್ಯೋಗಿಗಳು ಕೂಡ ಮಹಿಳೆಯರೇ..ಇಲ್ಲಿನ  ಶಿಸ್ತು,ಸ್ವಚ್ಛತೆ, ಅಚ್ಚುಕಟ್ಟುತನ ಯಾರೂ ಕೂಡ ಮೆಚ್ಚಬೇಕಾದ್ದೇ..

ಅಷ್ಟು ದೊಡ್ಡ ಕಾಲೇಜಾದರೂ ಒಂದಿನಿತು ಗಲಭೆ ಇಲ್ಲ..ಸಿಟ್ಟು ಸೆಡವುಗಳಿಲ್ಲ..

ಚೀಫ್ ಎಕ್ಸಾಮಿನರ್ ಆಗಿರುವ ಪ್ರಿನ್ಸಿಪಾಲ್ ಸಿಸ್ಟರ್ ನತಾಲಿಯಾ ಡಿ ಸೋಜ  ಸಣ್ಣ ವಯಸ್ಸಿನವರು ಆದರೆ ಅವರ ನಿರ್ವಹಣಾ ಸಾಮರ್ಥ್ಯ ಅಸಾಧಾರಣವಾದುದು.ಹಾಗಾಗಿ ಪರೀಕ್ಷಾ ಕಾರ್ಯ ಯಾವುದೊಂದು ಸಣ್ಣ ಗೊಂದಲ ಸಮಸ್ಯೆ ಇಲ್ಲದೇ ನಡೆಯಿತು.

ಸದಾ ನಗು ಮುಖದಿಂದ ತಾಳ್ಮೆಯಿಂದ ಇರುವ ಅವರ ನಡೆ ನುಡಿ ನಿಜಕ್ಕೂ ಅನುಕರಣೀಯವಾಗಿದೆ ,ಇವರು ಫ್ರೆಂಚ್ ಭಾಷಾ ತಜ್ಞರೂ,ಪ್ರೆಂಚ ಉಪನ್ಯಾಸಕರೂ , ಸ್ತ್ರೀವಾದಿಗಳೂ ಆಗಿದ್ದಾರೆ .ಅನೇಕ ಪ್ರಬಂಧ ಗಳನ್ನು ಮಂಡಿಸಿದ್ದಾರೆ.ಸ್ತ್ರೀ ಸಂಬಂಧಿ ವಿಷಯದಲ್ಲಿ ಪಿ ಎಚ್ ಡಿ ಮಾಡ್ತಾ ಇದ್ದಾರೆ.

ಈವತ್ತು ಅಲ್ಲಿನ ಮೂವರು ಉಪನ್ಯಾಸಕಿಯರ ಹುಟ್ಟು ಹಬ್ಬ ಇತ್ತು ಅವರಿಗೆ ಶುಭ ಹಾರೈಸಿ ಉಡುಗೊರೆ ಯನ್ನು ಬಹಳ ಪ್ರೀತಿಯಿಂದ ಕೊಟ್ಟಿದ್ದಾರೆ.ಅದೇ ರೀತಿ ಅಲ್ಲಿನ ಕನ್ನಡ ಉಪನ್ಯಾಸಕಿ ಧನ ಲಕ್ಷ್ಮೀ ಯವರಿಗೆ ಅವರಿಗೆ ಒಂದು ಸಂಸ್ಥೆ ( ಹೆಸರು ಮರೆತೆ ) ಯಿಂದ ಉತ್ತಮ ಶಿಕ್ಷಕಿ ಪ್ರಶಸ್ತಿ ದೊರೆತಿತ್ತು.ಅದನ್ನು ಪಡೆದು ಅವರು ಕಾಲೇಜಿಗೆ ಬಂದಾಗ ಸ್ವತಃ ಪ್ರಾಂಶುಪಾಲರು ಅವರನ್ನು ಮುಕ್ತವಾಗಿ ಅಭಿನಂದಿಸಿ ನಮ್ಮ ಉಪನ್ಯಾಸಕಿ ಎಂದು ಹೆಮ್ಮೆ ಪಟ್ಟದ್ದನ್ನು ನಾನು ಕಣ್ಣಾರೆ ನೋಡಿದೆ .ತಮ್ಮ ಕೈ ಕೆಳಗಿನ ಅಧಿಕಾರಿಗಳನ್ನು ಮೆಚ್ಚಿ ಹೆಮ್ಮೆ ಪಡುವ ಉದಾರತೆ ಎಷ್ಟು ಪ್ರಾಂಶುಪಾಲರಿಗೆ  ಇದೆ ?  ನಮ್ಮ ಬ್ಯಾಟರಾಯನಪುರ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ದಯಾನಂದ ಸ್ವಾಮಿ ಬಿ ಎಂ ಎಸ್ ಅವರಿಗೆ ಇಂತಹ ಉದಾರತೆ ಇದೆ .ಇವರನ್ನು ಬಿಟ್ಟರೆ ಇಂತಹ ಉದಾತ್ತ ಮನೋಭಾವವನ್ನು ನಾನು ಕಂಡದ್ದು ಸಿಸ್ಟರ್ ನತಾಲಿಯಾ ಅವರಲ್ಲಿಯೇ..

ಅಲ್ಲಿನ ಎಲ್ಲ ಉದ್ಯೋಗಿಗಳ ಬಗ್ಗೆ ಕೂಡ ಅವರಿಗೆ ಅಪಾರ ಪ್ರೀತಿ ಅಭಿಮಾನ.‌.ಅದನ್ನು ಅವರ ನಡೆ ನುಡಿ ಆತ್ಮೀಯತೆ ತುಳುಕುವ ಕಣ್ಣಗಳಲ್ಲಿ ನಾವು ಕಾಣಬಹುದು. 

ಈವತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳು ಮುಗಿದವು.ನಾವು ಹಾಜರಾತಿ ಪ್ರಮಾಣ ಪತ್ರ ತಗೊಂಡು ಹೊರಡುವಾಗ   ಬೇಡ ಎಂದರೂ ಶಾಲು ಹೊದೆಸಿ ಸನ್ಮಾನಿಸಿ ಬಹಳ ಪ್ರೀತಿಯಿಂದ ಬೀಳ್ಕೊಟ್ಟರು 

ಎರಡು ಜಡೆಗಳು ಸೇರಿದರೆ ಜಗಳ ಆಗುತ್ತದೆ ಎಂಬ ನುಡಿಯನ್ನು ಈ ಮಹಿಳಾ  ಕಾಲೇಜಿನ ಪ್ರಿನ್ಸಿಪಾಲ್ ಉಪನ್ಯಾಸಕಿಯರು ಮತ್ತು ಮಹಿಳಾ ಸಿಬ್ಬಂದಿಗಳು ಸುಳ್ಳು ಎಂದು ಸಾಧಿಸಿ ತೋರಿಸಿದ್ದಾರೆ

ಇಲ್ಲಿ ಚೀಫ್ ಎಕ್ಸಾಮಿನರ್ (  ಪ್ರಿನ್ಸಪಾಲ್ ಸಿಸ್ಟರ್  ನತಾಲಿಯಾ ಡಿ ಸೋಜ  ,ಜಾಯಿಂಟ್ ಚೀಫ್ ಎಕ್ಸಾಮಿನರ್ ( ರಾಜಮ್ಮ ವಾಣಿಜ್ಯ ಶಾಸ್ತ್ರ ಉಪನ್ಯಾಸಕರು ರಾಣಿ ಸರಳಾದೇವಿ ಕಾಲೇಜು) Answer paper bundle custodian ( ಪ್ರೀತಿ ,ಅರ್ಥ ಶಾಸ್ತ್ರ ಉಪನ್ಯಾಸಕರು ಜ್ಯೋತಿ ನಿವಾಸ್ ಕಾಲೇಜು) ಸ್ಪೆಷಲ್ ಸ್ಕ್ವಾಡ್ ( ನಾನು) ಎಲ್ಲರೂ ಮಹಿಳೆಯರೇ ಆಗಿದ್ದು ಈ ಕೇಂದ್ರದಲ್ಲಿ  ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು  ಯಾವುದೇ ಒಂದು ಕಪ್ಪು ಚುಕ್ಕೆ ಇರದಂತೆ ನಿರ್ವಹಿಸಿದ ಬಗ್ಗೆ ನಮಗೆ ಹೆಮ್ಮೆ ಇದೆ .ಇದರ ಮೂಲ ಕಾರಣ ಕರ್ತರು ಜ್ಯೋತಿ ನಿವಾಸ ಪಿಯು ಕಾಲೇಜಿನ ಪ್ರಾಂಶುಪಾಲರಾದ ಸಿಸ್ಟರ್ ನತಾಲಿಯಾ( ಕುಳಿತವರಲ್ಲಿ ಎಡದಿಂದ ಮೊದಲಿನವರು)ಇನ್ನೋರ್ವ ಸಿಸ್ಟರ್ ( ಹೆಸರು ಕೇಳಲು ಮರೆತೆ) ಆಫೀಸ್ ನಲ್ಲಿ ಬಹಳ ಜವಾಬ್ದಾರಿ ಯಿಂದ ಕೆಲಸ ಮಾಡುತ್ತಿದ್ದು ನಮ್ಮನ್ನು ಬಹಳ ಪ್ರೀತಿ ಆತ್ಮೀಯತೆಯಿಂದ ನಡೆಸಿಕೊಂಡಿದ್ದಾರೆ.ಎಲ್ಲ ಉಪನ್ಯಾಸಕಿಯರೂ,ಉಪನ್ಯಾಸಕರೂ  ಇತರ ಸಿಬ್ಬಂದಿಗಳು ಕೂಡ ಬಹಳ ಸೌಜನ್ಯತೆ ತೋರಿದ್ದಾರೆ

ನಮ್ಮ ಹೆಮ್ಮೆಯ ಓದುಗರು ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ #ನಮ್ಮಹೆಮ್ಮೆಯಓದುಗರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಬೆಳ್ತಂಗಡಿ ಮೂಲದ ಅಶೋಕ್ ಅವರು ನಮ್ಮ ಮನೆಗೆ ಬಂದು ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕದ ಎರಡು ಪ್ರತಿಗಳನ್ನು ತಗೊಂಡು ಹೋಗಿದ್ದಾರೆ ನಮಗೆ ಓದುಗರದೇ ಶ್ರೀ ರಕ್ಷೆ..


 

Friday, 14 March 2025

ನಮ್ಮ_ಹೆಮ್ಮೆಯ_ಓದುಗ_ಮಿತ್ರರು ಕರಾವಳಿಯ ಸಾವಿರದೊಂದು ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ಪ್ರಶಾಂತ ಆಚಾರ್ಯ ಕುಳಾಯಿ ಮಂಗಳೂರು

 ನಮ್ಮ_ಹೆಮ್ಮೆಯ_ಓದುಗ_ಮಿತ್ರರು 

ಕರಾವಳಿಯ ಸಾವಿರದೊಂದು ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ


ಪ್ರಶಾಂತ ಆಚಾರ್ಯ ಕುಳಾಯಿ ಮಂಗಳೂರು


 


ಇವರ ಅಭಿಮಾನದ ನುಡಿಗಳು ಇಲ್ಲಿವೆ


"ನಮಸ್ತೇ ಮೇಡಮ್🙏🙏🙏


*ಕರಾವಳಿಯ ಸಾವಿರದೊಂದು ದೈವಗಳು* ಅತೀ ಅದ್ಭುತವಾದ ಗ್ರಂಥ..... 

ಇತ್ತೀಚಿಗೆ ಕೆಲವರು ತಮ್ಮ ವೈಯಕ್ತಿಕ ಕೀರ್ತಿ ಪ್ರತಿಷ್ಟೆಗಾಗಿ ಅಥವಾ ತಾವೇ ಎಲ್ಲಾ ತಿಳಿದವರು ಎಂಬಂತೆ ತೋರಿಸಿಕೊಳ್ಳಲು ದೈವಗಳ ಬಗ್ಗೆ ಅವರಿಗೆ ಬೇಕಾದ ಹಾಗೆ ಕಥೆಗಳನ್ನು ಹೆಣೆದುಕೊಂಡು ಮುಗ್ದ ಜನರ ಮನಸು ಹಾಗೂ ಹಣ ಹಾಳುಮಾಡುತಿದ್ದಾರೆ....... 

ನಿಮ್ಮ ಈ ಪುಸ್ತಕ ಅವರೆಲ್ಲರಿಗೂ ಸಮರ್ಥವಾಗಿ ಉತ್ತರಿಸಲು ಒಂದು ಅಸ್ತ್ರವಾಗಿದೆ... 

 ನಿಮಗೆ ಇನ್ನೂ ಹೆಚ್ಚಿನ ಸಂಶೋಧನೆ, ಅಧ್ಯಯನ ಮಾಡುವಂತ ಯೋಗವನ್ನೂ, ಅದನ್ನು ಓದುವಂತ ಭಾಗ್ಯವನ್ನು ನಮಗೂ ದೇವರು ಕರುಣಿಸಲಿ..... 

ಧನ್ಯವಾದಗಳು🙏🙏🙏"



#ನಮ್ಮ_ಹೆಮ್ಮೆಯ_ಓದುಗ_ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ಕಳೆದ ವರ್ಷ ಪುಸ್ತಕ ಪ್ರಕಟಣೆಗೆ ಮೊದಲೇ ಪಾವತಿಸಿ ಪುಸ್ತಕ ಕಾದಿರಿಸಿದ್ದ ನಮ್ಮ ಊರಿನ ಪವನ್ ಕುಮಾರ್ ಬೂದಿಮೂಲೆ ಕೊಡ್ಲಮೊಗರು ಮಂಜೇಶ್ವರ

 


ನಮ್ಮ_ಹೆಮ್ಮೆಯ_ಓದುಗ_ಮಿತ್ರರು ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ ನಮ್ಮ‌ಪುಟ್ಟ ಓದುಗ ಮಿತ್ರ ಎಡಮಂಗಲದ ಧನಂಜಯ ಮತ್ತು ಉಷಾ ಧನಂಜಯರ ಏಳು ವರ್ಷದ ಮಗ

 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು
ಮಾಯ ಮತ್ತು ಜೋಗದ ಬೆಳಕಿನಲ್ಲಿ
ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ 
ನಮ್ಮ‌ಪುಟ್ಟ ಓದುಗ ಮಿತ್ರ ಎಡಮಂಗಲದ ಧನಂಜಯ ಮತ್ತು ಉಷಾ ಧನಂಜಯರ ಏಳು ವರ್ಷದ ಮಗ


ನಮ್ಮ ಸಂಸ್ಕೃತಿಯ ಬಗ್ಗೆ ಮುಂದಿನ ಜನಾಂಗಕ್ಕೆ ತಿಳಿಸುವುದೇ ನನ್ನ ಅಧ್ಯಯನದ ಮುಖ್ಯ ಗುರಿ..ಈ ಎಳೆಯ ಓದುವದ್ದು ತಿಳಿದು ಸಾರ್ಥಕ ಭಾವ ಮೂಡಿತು

ಅವರ ಅಭಿಮಾನದ ಮಾತುಗಳು ಇಲ್ಲಿವೆ
.

"ನಮಸ್ತೆ ಮೇಡಂ ‌‌ .‌ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕವನ್ನು ನನ್ನ ೭ ವರ್ಷ ದ ಮಗ ತುಂಬಾ ಚೆನ್ನಾಗಿ ಅಕ್ಷರಗಳನ್ನು  ಜೋಡಿಸಿ ಓದುತ್ತಾ ದೈವಗಳ ಬಗೆಗೆ‌ ಸಾಕಷ್ಟು  ವಿಚಾರಗಳನ್ನು  ತಿಳಿದುಕೊಂಡಿದ್ದಲ್ಲದೆ , ನನಗೂ  ಅದರ ಬಗೆಗೆ ತಿಳಿಸುತ್ತಾನೆ .. ಅವನ ಅತ್ಯಂತ  ಮೆಚ್ಚಿನ  ಪುಸ್ತಕ.  ಅಷ್ಟೇ ಭಕ್ತಿ ಆ ಪುಸ್ತಕ ದ ಮೇಲಿದೆ. ಅವನ ಸ್ನೇಹಿತರಲ್ಲೂ ವಿಚಾರ ಹಂಚಿಕೊಳ್ಳುತ್ತಾನೆ .. ನನಗೆ ತುಂಬಾ ಹೆಮ್ಮೆ ಮತ್ತು  ಖುಷಿ . ಇದೆಲ್ಲ  ಸಾಧ್ಯ ವಾಗಿದ್ದು . ನಿಮ್ಮಿಂದ . 🙏🏻

Wednesday, 12 March 2025

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ,- ಡಾ.ಲಕ್ಷ್ಮೀ ಜಿ ಪ್ರಸಾದ್ ಶಿವರಾಮ ಗೌಡರು.,ಮಾಜಿ ಮುಖ್ಯ ಮಂತ್ರಿ ,ಕೇಂದ್ರ ಸಚಿವ ಸದಾನಂದ ಗೌಡರ ಸಹೋದರ.ಬಹಳ ಸಹೃದಯಿ.ದೈವ ಭಕ್ತರು,ನಮಗೆ ನಿರಂತ ಬೆಂಬಲ ನೀಡಿದವರು‌.ಕಳೆದ ವರ್ಷ ಮುಂಗಡ ಬುಕ್ ಮಾಡಿ ಪುಸ್ತಕ ತಗೊಂಡು ಪ್ರೋತ್ಸಾಹಿಸಿದ್ದರು.


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು ಕರಾವಳಿಯ ಸಾವಿರದೊಂದು ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ಡಾ.ಲಕ್ಷ್ಮೀ ಜಿ ಪ್ರಸಾದ್ ,ಮೊಬೈಲ್ 9480516684 ಸಾವಿರದೊಂದು_ದೈವಗಳು ಹಿರಿಯ ವಿದ್ವಾಂಸರೂ ಸಾಹಿತಿಗಳೂ ಆದ ಮಂಗಳೂರು ಆಕಾಶವಾಣಿಯ ನಿವೃತ್ತ ಉದ್ಘೋಷಕರೂ ಆಗಿರುವ ಮುದ್ದು ಮೂಡು ಬೆಳ್ಳೆಯವರು ಎಳೆಯರನ್ನು ಬೆಳೆಸುವ ಸಹೃದಯಿ,ನನ್ನ ಅಧ್ಯಯನಕ್ಕೆ ನಿರಂತರ ಪ್ರೋತ್ಸಾಹ ನೀಡಿದ್ದಾರೆ ಕರಾವಳಿಯ ಸಾವಿರದೊಂದು ದೈವಗಳು ವಾಚನ ಮುದ್ದು ಮೂಡುಬೆಳ್ಳೆ


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು ಕರಾವಳಿಯ ಸಾವಿರದೊಂದು ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ - ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684 ಪ್ರಶಾಂತ್ ಮಂಡ್ಯ


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು ಕರಾವಳಿಯ ಸಾವಿರದೊಂದು ದೈವಗಳು -ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684 ವಿನುತಾ ಕೆ ಕುಲಕರ್ಣಿ ,ಬೆಂಗಳೂರು


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು ಕರಾವಳಿಯ ಸಾವಿರದೊಂದು ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ - ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684; ನನ್ನ ಅಧ್ಯಯನಕ್ಕೆ ನಿರಂತರ ಬೆಂಬಲ ನೀಡುತ್ತಿರುವ ಕನ್ನಡ ತುಳು ಸಂಘಟಕರೂ ಧ್ವನಿ ಕಲಾವಿದರೂ ಆಗಿರುವ ಕೆ ಎನ್ ಅಡಿಗರು Adiga K N Adoor


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು ಮಾಯ ಮತ್ತು ಜೋಗದ ಬೆಳಕಿನಲ್ಲಿ #ಕರಾವಳಿಯ_ಸಾವಿರದೊಂದು_ದೈವಗಳು ನಮಗೆ ನಿರಂತರ ಬೆಂಬಲ ನೀಡುತ್ತಿರುವ ತುಳುವೆರೆಂಕುಲು ಸಂಘಟನೆಯ ಅಧ್ಯಕ್ಷರಾದ ಜಯಂತಣ್ಣ( ಜಯಂತ್ ರಾವ್)


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು ಕರಾವಳಿಯ ಸಾವಿರದೊಂದು ದೈವಗಳು_ ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ - ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684: ಹರಿಣಾಕ್ಷ ಬಿ ಚಿಪ್ಪಾರು


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ,ಡಾ.ಲಕ್ಷ್ಮೀ ಜಿ ಪ್ರಸಾದ್, ಮೊಬೈಲ್ 9480516684 ವೆಂಕಪ್ಪ ಪುತ್ಯೆ ಕೊಕ್ಕಡ


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ಈಶ್ವರ ಗೌಡ ಗೋಳ್ತಿಲ ಗುತ್ತು ಪುತ್ತೂರು


 

Monday, 10 March 2025

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ ವಾಸುದೇವ ಭಟ್ ಶ್ರೀ ಮಹಾಗಣಪತಿ ಜೋತಿಷ್ಯಂ


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ಡಾ.ವಿನಾಯಕ ಶೇಟ್


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ಪೂರ್ಣಪ್ರಜ್ಞ, ಕೃಷ್ಣಾಪುರ, ಕೊಡಗು


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ನಮ್ಮ ಹೆಮ್ಮೆಯ ಓದುಗ ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು #ನಮ್ಮ_ಹೆಮ್ಮೆಯ_ಓದುಗ_ಮಿತ್ರರು ಸಮಾಜ ಸೇವಕರೂ ಮಾಹಿತಿ ಹಕ್ಕು ಕಾರ್ಯಕರ್ತರೂ ದಾ ಧಾರ್ಮಿಕ ಮುಖಂಡರೂ ಆಗಿರುವ ಮಂಗಲ್ಪಾಡಿಯ ಯುವ ನಾಯಕ ಬ್ಯಾಂಕ್ ಉದ್ಯೋಗಿ ಗಿರಿಧರ ಎಸ್ ಅವರು YuviGiri Giri


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು- ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ರಾಘವೇಂದ್ರ ,ಉಡುಪಿ


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ಶ್ರೀಮತಿ ವಿದ್ಯಾಸರಸ್ವತಿ. ಕೆ. , ಮೈಸೂರು


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ಜಯರಾಜ್ ಎಂ್ ಪೂಜಾರಿ ಪಚಿನಡ್ಕ ಕಳ್ಳಿಗೆ ಬಂಟ್ವಾಳ


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ವಿದ್ವಾನ್ ಮಂಜುನಾಥ ಜೋಯಿಸರು ಅವರ ಅಭಿಮಾನ ನುಡಿಗಳು ಇಲ್ಲಿದೆ ಅತ್ಯುತ್ತವಾದ ಮಾಹಿತಿ ಸಂಗ್ರಹ ಹಾಗೂ ಪುಸ್ತಕ. ನಿಮ್ಮ ಶ್ರಮ ಗಣನೀಯ. ಇದೊಂದು ಇತಿಹಾಸ ಸಂಸ್ಕತಿಯ ದಾಖಲೆ ಆಗಿದೆ ನಿಮ್ಮ ಕೊಡುಗೆ ಅತ್ಯುತ್ತಮ- VIDWAN Manjunatha jois.H.S. JYOTHISHA CHATURVEDA ACHARYA ENVIRONMENTALIST UDUPI ಧನ್ಯವಾದಗಳು ಸರ್


 

#ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ #ನಮ್ಮ_ಹೆಮ್ಮೆಯ_ಓದುಗ_ಮಿತ್ರರು ನಮಗೆ ಮಾಹಿತಿ ಸಂಗ್ರಹದಲ್ಲಿ ಸಹಾಯ ಮಾಡಿದ್ದಲ್ಲದೆ ಪುಸ್ತಕ ಖರೀದಿಸಿ ನಿರಂತರ ಬೆಂಬಲ ನೀಡುತ್ತಿರುವ ದೇವಿಪ್ರಸಾದ್ ಶೆಟ್ಟಿ ಆಡಳಿತ ಮೊಕ್ತೇಸರರು ಶ್ರೀ ಅರಸು ಕುಂಜರಾಯ ದೈವಸ್ಥಾನ ಕೊಡೆತ್ತೂರು


 

#ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ #ನಮ್ಮ_ಹೆಮ್ಮೆಯ_ಓದುಗರ_ಮಿತ್ರರು ರಾಜಶೇಖರ ಭಟ್ ಬಾಳೆಗುಂಡಿ ಉಡುಪಿ


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು ಪ್ರಮೀಳಾ ಪೂಜಾರಿ #ಕರಾವಳಿಯ_ಸಾವಿರದೊಂದು_ದೈವಗಳು- ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ


 

ನಮ್ಮ ಹೆಮ್ಮೆಯ ಓದುಗ ಮಿತ್ರರು #ನಮ್ಮ_ಹೆಮ್ಮೆಯ_ಓದುಗ_ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು ಕನ್ನಡ ತುಳು ಸಂಸ್ಕೃತಿ ಸಾಹಿತ್ಯಗಳ ಬಗ್ಗೆ ಅತೀವ ಪ್ರೀತಿ ಅಭಿಮಾನ ಹೊಂದಿರುವ ಬೆಂಗಳೂರಿನ ಖ್ಯಾತ ಚರ್ಮರೋಗಚಿಕಿತ್ಸಾ ತಜ್ಞರಾದ ಡಾ.ಬಿ ಆರ್ ಸುಹಾಸ್


 

ನಮ್ಮ ಹೆಮ್ಮೆಯ ಓದುಗರು : ಪ್ರದೀಪ್ ಭಂಡಾರಿ

 


ನಮ್ಮ ಹೆಮ್ಮೆಯ_ಓದುಗ ಮಿತ್ರರು ಕರಾವಳಿಯ ಸಾವಿರದೊಂದು ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ಪ್ರೊ ಬಿ ಸತ್ಯನಾರಾಯಣ ಶೆಟ್ಟಿ ಪ್ರಾಂಶುಪಾಲರು ಸುರಾನಾ ಕಾಲೇಜು ,ಬೆಂಗಳೂರು

 

#ನಮ್ಮ ಹೆಮ್ಮೆಯ_ಓದುಗ ಮಿತ್ರರು
ಕರಾವಳಿಯ ಸಾವಿರದೊಂದು ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ
ಪ್ರೊ ಬಿ ಸತ್ಯನಾರಾಯಣ ಶೆಟ್ಟಿ ಪ್ರಾಂಶುಪಾಲರು ಸುರಾನಾ ಕಾಲೇಜು ,ಬೆಂಗಳೂರು



ಇವರುನಮಗೆ ನಿರಂತರ  ಬೆಂಬಲ ನೀಡುತ್ತಿದ್ದು
ನಮ್ಮಿಂದ ಅನೇಕ ಪುಸ್ತಕಗಳನ್ನು ಖರೀದಿಸಿ ತಮ್ಮ ಸ್ನೇಹಿತರಿಗೆ ಉಡುಗೊರೆಯಾಗಿ ನೀಡಿ ನಮ್ಮ ಸಂಸ್ಕೃತಿಯನ್ನು ಹರಡುವ ಸ್ತುತ್ಯರ್ಹ ಕಾರ್ಯ ಮಾಡಿದ್ದಾರೆ,

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು ಕರಾವಳಿಯ ಸಾವಿರದೊಂದು ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ: ಸುಮಾ ಪ್ರಸಾದ್


 

ನಮ್ಮ‌ಹೆಮ್ಮೆಯ ಓದುಗ ಮಿತ್ರರು #ನಮ್ಮ_ಹೆಮ್ಮೆಯ_ಓದುಗ_ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ಖ್ಯಾತ ಸಾಹಿತಿಗಳಾದ ಚಂದ್ರ ಹಾಸ ಕಣಂತೂರು


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು ಕರಾವಳಿಯ ಸಾವಿರದೊಂದು ದೈವಗಳು,- ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ದೀಪಾ, ಶಿಕ್ಷಕಿ, ಸಾಲಿಗ್ರಾಮ , ಉಡುಪಿ ಜಿಲ್ಲೆ


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು- ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ - ಡಾ.ಲಕ್ಷ್ಮೀ ಜಿ ಪ್ರಸಾದ್ ಉಷಾ ಧನಂಜಯ್ ಎಡಮಂಗಲ .


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ರಾಧಾಕೃಷ್ಣ ಉಳಿಯತ್ತಡ್ಕ,ಹಿರಿಯ ವಿದ್ವಾಂಸರು ,


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ನಮಗೆ ಅತ್ಯಪರೂಪದ ದೆಸಿಲು ಮತ್ತು ಕಿಲಮರಿತ್ತಾಯ ದೈವಗಳ ಚಂದದ ಫೋಟೋ ಒದಗಿಸಿದ್ದಲ್ಲದೆ ನಿರಂತರ ಬೆಂಬಲ ನೀಡುತ್ತಿರುವ ಗೋಪು ಗೋಖಲೆ ಶಿಶಿಲ,ಛಾಯಾಗ್ರಾಹಕರು


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು ಕರಾವಳಿಯ ಸಾವಿರದೊಂದು ದೈವಗಳು- ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ಡಾ.ಕೇದಿಗೆ ಅರವಿಂದ ರಾವ್


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು ಕರಾವಳಿಯ ಸಾವಿರದೊಂದು ದೈವಗಳು -ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ - ಡಾ.ಲಕ್ಷ್ಮೀ ಜಿ ಪ್ರಸಾದ್ ಸಾವಿರದೊಂದು ದೈವಗಳು ಡಾ.ಅರವಿಂದ್ ಎನ್ ಪಿ ಸಿರ್ಸಿ


 

Sunday, 9 March 2025

ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕಕ್ಕೆ ಯಾವುದೇ ಅಪೇಕ್ಷೆ ಇಲ್ಲದೆ ಬಹಳ ಪ್ರೀತಿ ಅಭಿಮಾನದಿಂದ ಮುಖಪುಟ ವಿನ್ಯಾಸ ಮಾಡಿ ಕೊಟ್ಟ ಶ್ರೀವತ್ಸ ಪಿವಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು ಇವರು ಕಳೆದ ವರ್ಷ ಪ್ರಕಟಿತ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕವನ್ನು ತಗೊಂಡಿದ್ದು ಸೆಲ್ಫಿನಲ್ಲಿ ಚಂದಕ್ಕೆ ಜೋಡಿಸಿಟ್ಟಿರುವಲ್ಲಿ ಅವರ ಪುಸ್ತಕ ಪ್ರೀತಿ ಅಭಿಮಾನ ಎದ್ದು ಕಾಣ್ತಿದೆ


 

ನಮ್ಮ ಹೆಮ್ಮೆಯ ಓದುಗರು ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು: ದಯಾನಂದಸ್ವಾಮಿ ಬಿಎಂಎಸ್

 ನನ್ನ  ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು


ಪುಸ್ತಕದ ಬಗ್ಗೆ ಎರಡು ಒಳ್ಳೆ ಮಾತು ಬರೆದು ಶುಭ ಹಾರೈಸಿದ ನಮ್ಮ‌ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ದಯಾನಂದ ಸ್ವಾಮಿ ಬಿ ಎಂ ಎಸ್ ಅವರಿಗೆ ಇಂದು ಪುಸ್ತಕದ ಪ್ರತಿ ನೀಡಿದೆ 


ತಮ್ಮ ಸಹೋದ್ಯೋಗಿಗಳ ಏಳಿಗೆಯನ್ನು ಬಹುತೇಕರು ಸಹಿಸುವುದಿಲ್ಲ.ಮತ್ಸರದಿಂದ  ಬಹಳಷ್ಟು ಕಿರುಕುಳ ಕೊಡುವ ಮೇಲಧಿಕಾರಿಗಳು ಅನೇಕರಿದ್ದಾರೆ ..ಕೆಲವರು ಕಿರುಕುಳ ಕೊಡದೆ ಸುಮ್ಮನಿರುವವರೂ ಇರಬಹುದು.ಆದರೆ ಬೆಂಬಲ ಕೊಡುವವರು ಬಹಳ ಅಪರೂಪಕ್ಕೆ ಸಿಗುತ್ತಾರೆ.ಈ ನಿಟ್ಟಿನಲ್ಲಿ ನಿಮ್ಮ ಕಾಲೇಜು ಪ್ರಾಂಶುಪಾಲರು ಅಭಿನಂದನಾರ್ಹರು ಎಂದು ನನ್ನ ಪುಸ್ತಕದಲ್ಲಿ ಇವರ ಮಾತನ್ನು ಓದಿದ ಈ ಪುಸ್ತಕ ಬಿಡುಗಡೆ ಮಾಡಿದ್ದ ಡಾ.ಈಶ್ವರ ದೈತೋಟರು ಹೇಳಿದ್ದರು

ಇದು ನಿಜಕ್ಕೂ ನೂರಕ್ಕೆ ನೂರರಷ್ಟು ಸತ್ಯದ ಮಾತು..


ನಾನೇ ಸ್ವತಃ ಬೆಳ್ಳಾರೆ ಕಾಲೇಜಿನಲ್ಲಿದ್ದಾಗ  ಪ್ರಿನ್ಸಿಪಾಲರಾಗಿದ್ದ ಈಗ ದಿವಂಗತರಾಗಿರುವ ಸುಬ್ರಾಯ ಗೌಡರಿಂದ ದ್ವೇಷ ಮತ್ಸರದ ಜಾತಿ ಬೇಧ ಲಿಂಗ ತಾರತಮ್ಯದ ಬಿಸಿಯನ್ನು ಅನುಭವಿಸಿದ್ದೆನಲ್ಲ..


ಇಂಥಹವರ ನಡುವೆ ನಮ್ಮ‌ಬ್ಯಾಟರಾಯನಪುರ ಕಾಲೇಜಿನ ದಯಾನಂದ ಸ್ವಾಮಿಯಂಥಹವರು ನಿಜಕ್ಕೂ ವಿಶಿಷ್ಟರೆನಿಸುತ್ತಾರೆ..


ಇದೇ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದು ಭಡ್ತಿಪಡೆದು ಈಗ ನಮ್ಮ‌ಪದವಿ ಪೂರ್ವ ಶಿಕ್ಷಣ ಇಲಾಖೆಯ  ಸಹ ನಿರ್ದೇಶಕರಾಗಿರುವ ಶೈಲಜಾ ಮೇಡಂ ಅವರು ಕೂಡ ನನಗೆ ತುಂಬು ಬೆಂಬಲವನ್ನು ನೀಡಿದ್ದನ್ನು ಕೂಡ ನಾನೆಂದಿಗೂ ಮರೆಯಲಾರೆ

ನಮ್ಮ ಹೆಮ್ಮೆಯ ಓದುಗರು # ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು- ರಾಘು ಪೂಜಾರಿ ಕಲ್ಮಂಜೆ

 #ನಮ್ಮ_ಹೆಮ್ಮೆಯ_ಓದುಗ_ಮಿತ್ರರು 

# ಮಾಯ ಮತ್ತು ಜೋಗದ ಬೆಳಕಿನಲ್ಲಿ  ಕರಾವಳಿಯ ಸಾವಿರದೊಂದು ದೈವಗಳು



 

ನಮ್ಮ ಆತ್ಮೀಯರಾದ ಸುಭಾಶ್ ಅವರು ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕವನ್ನು ಮಜೂರು ಗರೊಡಿಯ ಕೋಟಿ ಭೈದ್ಯರ ಪಾತ್ರಿಯಾಗಿರುವ ಹಿರಿಯರಾದ ರಾಘು ಪೂಜಾರಿ‌ ಕಲ್ಮಂಜೆಯವರಿಗೆ ಕಾಣಿಕೆಯಾಗಿ ನೀಡಿದ್ದಾರೆ .ಕಲ್ಕುಡ ದೈವದ ಮಧ್ಯಸ್ಥರೂ ಆಗಿರುವ  ಈ ಪುಸ್ತಕವನ್ನು ಮೆಚ್ಚಿದ ರಾಘು ಪೂಜಾರಿಯವರ ಅಂತರಂಗದ ಒಲುಮೆಯ ಮಾತುಗಳನ್ನು ಇಲ್ಲಿ ಕೇಳಬಹುದು ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು

ನಮ್ಮ ಹೆಮ್ಮೆಯ ಓದುಗರು: ಕರಾವಳಿಯ ಸಾವಿರದೊಂದು ದೈವಗಳು- ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ- ವಿಷ್ಣು ಪ್ರಸಾದ್ ಭಟ್


 

ನಮ್ಮ ಹೆಮ್ಮೆಯ ಓದುಗರು- ಚಂದ್ರಶೇಖರ ನಾವಡ


 

ನಮ್ಮ ಹೆಮ್ಮೆಯ ಓದುಗರು ... ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ವಿಶ್ರಾಂತ ಉಪಕುಲಪತಿ ,ತುಳು ಸಂಶೋಧಕರೂ ಆಗಿರುವ ಡಾ. ಬಿ ಎ ವಿವೇಕ ರೈಗಳು.. ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕ ಮಾಹಿತಿಗಾಗಿ 9480516684 ಗೆ ಕರೆ ಅಥವಾ ವಾಟ್ಸಪ್ ಮಾಡಬಹುದು


 

ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಕೃಷ್ಣ ಬೆಳ್ತಂಗಡಿ

 ಯುವ ನಿರ್ದೇಶಕರಾದ ಕೃಷ್ಣ ಬೆಳ್ತಂಗಡಿಯವರು ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕಕ್ಕಾಗಿ ಬಂದಿದ್ದರು.ಬಂದ ನಂತರ ನಮಗೆ ನೆಂಟರು ಎಂದು ತಿಳಿಯಿತು.ಸಿನೇಮ ಕಥೆಗಳ ಬಗ್ಗೆ ಒಂದಷ್ಟು ಪಟ್ಟಾಂಗ ಹೊಡೆದೆವು Krishna Belthangadi