#ನಮ್ಮ_ಹೆಮ್ಮೆಯ_ಓದುಗ_ಮಿತ್ರರು
#ಕರಾವಳಿಯ_ಸಾವಿರದೊಂದು_ದೈವಗಳು- ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ- ದಯಾನಂದ ರೈ ಕಳ್ವಾಜೆ
ಕಳೆದ ವರ್ಷ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕ ಪ್ರಕಟಣೆಗೆ ಮೊದಲೇ ಮುಂಗಡ ಪಾವತಿಸಿ ಕಾದಿರಿಸಿ ಬೆಂಬಲಿಸಿದವರು ಯುವ ಬರಹಗಾರರಾದ ದಯಾನಂದ ರೈ ಕಳ್ವಾಜೆಯವರು.
ಪುಸ್ತಕದ ಕುರಿತಾದ ಅವರ ಮೆಚ್ಚುಗೆಯ ಮಾತುಗಳು ಇಲ್ಲಿವೆ
"ಮೇಮ್ ನಮಸ್ಕಾರ...
ನಾನು ದಯಾನಂದ ರೈ ಕಳ್ವಾಜೆ.ನಿಮ್ಮ ಪುಸ್ತಕ ನನ್ನ ಕೈಸೇರಿ ವರುಷ ಸಂದರೂ, ಅಭಿಪ್ರಾಯ ಹೇಳಲು ಅನುವಾಗಿರಲಿಲ್ಲ. ದೈವಾರಾಧಾನೆಯ ನೆಲೆ ಮತ್ತು ಸಂಸ್ಕೃತಿಯ ಕೆಲವು ಮಜಲುಗಳನ್ನು ತಿಳಿಯಪಡಿಸುವ ಪ್ರಯತ್ನ ಶ್ಲಾಘನೀಯ. ಈ ಸಂಗ್ರಹಯೋಗ್ಯ ಹೊತ್ತಗೆಯ ಹಿಂದೆ ಅದೆಷ್ಟು ಶ್ರಮವಿದೆಯೋ ನಾನರಿಯೆ. ಆದರೆ ದೈವಿಕ ಸಂಪ್ರದಾಯಗಳನ್ನು ನಂಬುವವರು, ಮತ್ತು ಅಧ್ಯಯನ ನಡೆಸುವವರು ತಮ್ಮ ತಮ್ಮ ಮನೆಯಲ್ಲಿ ಸಂಗ್ರಹಿಸಿಡಲೇ ಬೇಕಾದ ಹೊತ್ತಗೆ ಇದು. ಮೇಲಾಗಿ ಸಾವಿರಕ್ಕಿಂತಲೂ ಮಿಗಿಲಾದ ವಿಭಿನ್ನ ಸಂಸ್ಕಾರ ವಿಶೇಷಗಳನ್ನು ಲೇಖನಿಯಲ್ಲಿಳಿಸಿ ಬಲ್ಲವರಲ್ಲಿ ಕೇಳಿತಿಳಿದ ನಿಮ್ಮ ಬಗೆ ಬಹುಮಾನ್ಯ. ಅಭಿನಂದನೆಗಳು ಮೇಮ್ ನಮಸ್ಕಾರ 🙏"
No comments:
Post a Comment