Thursday, 20 March 2025

ದೊಡ್ಡವರ ದಾರಿ :76 : ಉದಾರಿ ದಕ್ಷ ಪ್ರಿನ್ಸಿಪಾಲ್ ಸಿಸ್ಟರ್ ನತಾಲಿಯಾ ಡಿ ಸೋಜ ..

 ದೊಡ್ಡವರ ದಾರಿ : ಉದಾರಿ ದಕ್ಷ ಪ್ರಿನ್ಸಿಪಾಲ್  ಸಿಸ್ಟರ್ ನತಾಲಿಯಾ ಡಿ ಸೋಜ 

ಇಲ್ಲಿ ಜಡೆಗಳು ಜಗಳವಾಡುವುದಿಲ್ಲ

ಜಗ ಮೆಚ್ಚುವಂತೆ ಕೆಲಸ ಮಾಡುತ್ತವೆ..



ಕಳೆದ ಇಪ್ಪತ್ತು ದಿನಗಳಿಂದ ನನಗೆ ಬೆಂಗಳೂರಿನ ಜ್ಯೋತಿ ನಿವಾಸ್ ಪಿಯು ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಸ್ಪೆಷಲ್ ಇನ್ವಿಜಿಲೇಟರ್ಸ್ ಸ್ಕ್ವಾಡ್ ಆಗಿ ಕರ್ತವ್ಯ..

ಇದು ಬಹಳ ದೊಡ್ಡ ಶಿಕ್ಷಣ ಸಂಸ್ಥೆ. ಪಿಯು ವಿಭಾಗದಲ್ಲಿಯೇ 2000 ವಿದ್ಯಾರ್ಥಿಗಳಿದ್ದಾರೆ.ಇಲ್ಲಿ ಅನೇಕ ಬಡ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಾರೆ ,ಬಡ ವಿದ್ಯಾರ್ಥಿನಿಯರಿಗೆ ಊಟ ತಿಂಡಿ ಕೂಡ ಉಚಿತವಾಗಿ ಕೊಡುವ ವ್ಯವಸ್ಥೆ ಇದೆ 

ಇಲ್ಲಿನ  ವಿದ್ಯಾರ್ಥಿಗಳಿಗೆ ಇದು ಪರೀಕ್ಷಾ ಕೇಂದ್ರವಲ್ಲ.ಬೇರೆ ಬೇರೆ ಕಾಲೇಜುಗಳ ಒಂದೂವರೆ ಸಾವಿರದಷ್ಟು ವಿದ್ಯಾರ್ಥಿಗಳಿಗೆ ಇಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆದವು.

ಇದು ಸಿಸ್ಟರ್ಸ್ ನಡೆಸುವ ಮಹಿಳಾ  ಕಾಲೇಜು..ಹೆಚ್ಚಿನ ಉದ್ಯೋಗಿಗಳು ಕೂಡ ಮಹಿಳೆಯರೇ..ಇಲ್ಲಿನ  ಶಿಸ್ತು,ಸ್ವಚ್ಛತೆ, ಅಚ್ಚುಕಟ್ಟುತನ ಯಾರೂ ಕೂಡ ಮೆಚ್ಚಬೇಕಾದ್ದೇ..

ಅಷ್ಟು ದೊಡ್ಡ ಕಾಲೇಜಾದರೂ ಒಂದಿನಿತು ಗಲಭೆ ಇಲ್ಲ..ಸಿಟ್ಟು ಸೆಡವುಗಳಿಲ್ಲ..

ಚೀಫ್ ಎಕ್ಸಾಮಿನರ್ ಆಗಿರುವ ಪ್ರಿನ್ಸಿಪಾಲ್ ಸಿಸ್ಟರ್ ನತಾಲಿಯಾ ಡಿ ಸೋಜ  ಸಣ್ಣ ವಯಸ್ಸಿನವರು ಆದರೆ ಅವರ ನಿರ್ವಹಣಾ ಸಾಮರ್ಥ್ಯ ಅಸಾಧಾರಣವಾದುದು.ಹಾಗಾಗಿ ಪರೀಕ್ಷಾ ಕಾರ್ಯ ಯಾವುದೊಂದು ಸಣ್ಣ ಗೊಂದಲ ಸಮಸ್ಯೆ ಇಲ್ಲದೇ ನಡೆಯಿತು.

ಸದಾ ನಗು ಮುಖದಿಂದ ತಾಳ್ಮೆಯಿಂದ ಇರುವ ಅವರ ನಡೆ ನುಡಿ ನಿಜಕ್ಕೂ ಅನುಕರಣೀಯವಾಗಿದೆ ,ಇವರು ಫ್ರೆಂಚ್ ಭಾಷಾ ತಜ್ಞರೂ,ಪ್ರೆಂಚ ಉಪನ್ಯಾಸಕರೂ , ಸ್ತ್ರೀವಾದಿಗಳೂ ಆಗಿದ್ದಾರೆ .ಅನೇಕ ಪ್ರಬಂಧ ಗಳನ್ನು ಮಂಡಿಸಿದ್ದಾರೆ.ಸ್ತ್ರೀ ಸಂಬಂಧಿ ವಿಷಯದಲ್ಲಿ ಪಿ ಎಚ್ ಡಿ ಮಾಡ್ತಾ ಇದ್ದಾರೆ.

ಈವತ್ತು ಅಲ್ಲಿನ ಮೂವರು ಉಪನ್ಯಾಸಕಿಯರ ಹುಟ್ಟು ಹಬ್ಬ ಇತ್ತು ಅವರಿಗೆ ಶುಭ ಹಾರೈಸಿ ಉಡುಗೊರೆ ಯನ್ನು ಬಹಳ ಪ್ರೀತಿಯಿಂದ ಕೊಟ್ಟಿದ್ದಾರೆ.ಅದೇ ರೀತಿ ಅಲ್ಲಿನ ಕನ್ನಡ ಉಪನ್ಯಾಸಕಿ ಧನ ಲಕ್ಷ್ಮೀ ಯವರಿಗೆ ಅವರಿಗೆ ಒಂದು ಸಂಸ್ಥೆ ( ಹೆಸರು ಮರೆತೆ ) ಯಿಂದ ಉತ್ತಮ ಶಿಕ್ಷಕಿ ಪ್ರಶಸ್ತಿ ದೊರೆತಿತ್ತು.ಅದನ್ನು ಪಡೆದು ಅವರು ಕಾಲೇಜಿಗೆ ಬಂದಾಗ ಸ್ವತಃ ಪ್ರಾಂಶುಪಾಲರು ಅವರನ್ನು ಮುಕ್ತವಾಗಿ ಅಭಿನಂದಿಸಿ ನಮ್ಮ ಉಪನ್ಯಾಸಕಿ ಎಂದು ಹೆಮ್ಮೆ ಪಟ್ಟದ್ದನ್ನು ನಾನು ಕಣ್ಣಾರೆ ನೋಡಿದೆ .ತಮ್ಮ ಕೈ ಕೆಳಗಿನ ಅಧಿಕಾರಿಗಳನ್ನು ಮೆಚ್ಚಿ ಹೆಮ್ಮೆ ಪಡುವ ಉದಾರತೆ ಎಷ್ಟು ಪ್ರಾಂಶುಪಾಲರಿಗೆ  ಇದೆ ?  ನಮ್ಮ ಬ್ಯಾಟರಾಯನಪುರ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ದಯಾನಂದ ಸ್ವಾಮಿ ಬಿ ಎಂ ಎಸ್ ಅವರಿಗೆ ಇಂತಹ ಉದಾರತೆ ಇದೆ .ಇವರನ್ನು ಬಿಟ್ಟರೆ ಇಂತಹ ಉದಾತ್ತ ಮನೋಭಾವವನ್ನು ನಾನು ಕಂಡದ್ದು ಸಿಸ್ಟರ್ ನತಾಲಿಯಾ ಅವರಲ್ಲಿಯೇ..

ಅಲ್ಲಿನ ಎಲ್ಲ ಉದ್ಯೋಗಿಗಳ ಬಗ್ಗೆ ಕೂಡ ಅವರಿಗೆ ಅಪಾರ ಪ್ರೀತಿ ಅಭಿಮಾನ.‌.ಅದನ್ನು ಅವರ ನಡೆ ನುಡಿ ಆತ್ಮೀಯತೆ ತುಳುಕುವ ಕಣ್ಣಗಳಲ್ಲಿ ನಾವು ಕಾಣಬಹುದು. 

ಈವತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳು ಮುಗಿದವು.ನಾವು ಹಾಜರಾತಿ ಪ್ರಮಾಣ ಪತ್ರ ತಗೊಂಡು ಹೊರಡುವಾಗ   ಬೇಡ ಎಂದರೂ ಶಾಲು ಹೊದೆಸಿ ಸನ್ಮಾನಿಸಿ ಬಹಳ ಪ್ರೀತಿಯಿಂದ ಬೀಳ್ಕೊಟ್ಟರು 

ಎರಡು ಜಡೆಗಳು ಸೇರಿದರೆ ಜಗಳ ಆಗುತ್ತದೆ ಎಂಬ ನುಡಿಯನ್ನು ಈ ಮಹಿಳಾ  ಕಾಲೇಜಿನ ಪ್ರಿನ್ಸಿಪಾಲ್ ಉಪನ್ಯಾಸಕಿಯರು ಮತ್ತು ಮಹಿಳಾ ಸಿಬ್ಬಂದಿಗಳು ಸುಳ್ಳು ಎಂದು ಸಾಧಿಸಿ ತೋರಿಸಿದ್ದಾರೆ

ಇಲ್ಲಿ ಚೀಫ್ ಎಕ್ಸಾಮಿನರ್ (  ಪ್ರಿನ್ಸಪಾಲ್ ಸಿಸ್ಟರ್  ನತಾಲಿಯಾ ಡಿ ಸೋಜ  ,ಜಾಯಿಂಟ್ ಚೀಫ್ ಎಕ್ಸಾಮಿನರ್ ( ರಾಜಮ್ಮ ವಾಣಿಜ್ಯ ಶಾಸ್ತ್ರ ಉಪನ್ಯಾಸಕರು ರಾಣಿ ಸರಳಾದೇವಿ ಕಾಲೇಜು) Answer paper bundle custodian ( ಪ್ರೀತಿ ,ಅರ್ಥ ಶಾಸ್ತ್ರ ಉಪನ್ಯಾಸಕರು ಜ್ಯೋತಿ ನಿವಾಸ್ ಕಾಲೇಜು) ಸ್ಪೆಷಲ್ ಸ್ಕ್ವಾಡ್ ( ನಾನು) ಎಲ್ಲರೂ ಮಹಿಳೆಯರೇ ಆಗಿದ್ದು ಈ ಕೇಂದ್ರದಲ್ಲಿ  ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು  ಯಾವುದೇ ಒಂದು ಕಪ್ಪು ಚುಕ್ಕೆ ಇರದಂತೆ ನಿರ್ವಹಿಸಿದ ಬಗ್ಗೆ ನಮಗೆ ಹೆಮ್ಮೆ ಇದೆ .ಇದರ ಮೂಲ ಕಾರಣ ಕರ್ತರು ಜ್ಯೋತಿ ನಿವಾಸ ಪಿಯು ಕಾಲೇಜಿನ ಪ್ರಾಂಶುಪಾಲರಾದ ಸಿಸ್ಟರ್ ನತಾಲಿಯಾ( ಕುಳಿತವರಲ್ಲಿ ಎಡದಿಂದ ಮೊದಲಿನವರು)ಇನ್ನೋರ್ವ ಸಿಸ್ಟರ್ ( ಹೆಸರು ಕೇಳಲು ಮರೆತೆ) ಆಫೀಸ್ ನಲ್ಲಿ ಬಹಳ ಜವಾಬ್ದಾರಿ ಯಿಂದ ಕೆಲಸ ಮಾಡುತ್ತಿದ್ದು ನಮ್ಮನ್ನು ಬಹಳ ಪ್ರೀತಿ ಆತ್ಮೀಯತೆಯಿಂದ ನಡೆಸಿಕೊಂಡಿದ್ದಾರೆ.ಎಲ್ಲ ಉಪನ್ಯಾಸಕಿಯರೂ,ಉಪನ್ಯಾಸಕರೂ  ಇತರ ಸಿಬ್ಬಂದಿಗಳು ಕೂಡ ಬಹಳ ಸೌಜನ್ಯತೆ ತೋರಿದ್ದಾರೆ

No comments:

Post a Comment