Monday 16 October 2023

ಬಹುಮುಖ ಪ್ರತಿಭೆಯ ವಿದ್ವಾಂಸೆ ಮತ್ತು ಲೇಖಕಿ ಡಾ ಲಕ್ಷ್ಮೀ ಜಿ ಪ್ರಸಾದ್- ಕೊಳ್ಚಪ್ಪೆ ಗೋವಿಂದ ಭಟ್

 ಬಹುಮುಖ ಪ್ರತಿಭೆಯ ವಿದ್ವಾಂಸೆ ಮತ್ತು ಲೇಖಕಿ ಡಾ ಲಕ್ಷ್ಮೀ ಜಿ ಪ್ರಸಾದ್ https://nadinasamachara.com/2023/06/25/ಬಹುಮುಖ-ಪ್ರತಿಭೆಯ-ವಿದ್ವಾಂಸ/

ಬಹುಮುಖ ಪ್ರತಿಭೆಯ ವಿದ್ವಾಂಸೆ ಮತ್ತು ಲೇಖಕಿ ಡಾ ಲಕ್ಷ್ಮೀ ಜಿ ಪ್ರಸಾದ್





ಡಾ.ಲಕ್ಷ್ಮೀ ಜಿ ಪ್ರಸಾದ್ ಕಾಸರಗೋಡು ಜಿಲ್ಲೆಯ ಕೋಳ್ಯೂರಿನವರು. ಕನ್ನಡ, ಹಿಂದಿ, ಸಂಸ್ಕೃತದಲ್ಲಿ ಪಾಂಡಿತ್ಯವಿದ್ದು, ಕನ್ನಡ ಉಪನ್ಯಾಸಕರಾಗಿದ್ದಾರೆ. ತಂದೆ -ನಾರಾಯಣ ಭಟ್ ವಾರಣಾಸಿ, ತಾಯಿ -ಸರಸ್ವತಿ. ಪತಿ ಗೋವಿಂದ ಪ್ರಸಾದ ಪಂಜಿಗದ್ದೆ, ಮಗ- ಅರವಿಂದ.



ಉಜಿರೆಯ ಎಸ್ ಡಿಎಂ ಕಾಲೇಜಿನಲ್ಲಿ ಬಿಯಸ್ಸಿ ಪದವಿ. ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಿಂದ ಎಂ.ಎ[ಕನ್ನಡ] ನಾಲ್ಕನೇ ರ‍್ಯಾಂಕ್. ಮಂಗಳೂರು ವಿಶ್ವ ವಿದ್ಯಾಲಯದಿಂದ ಎಂ.ಎ[ಸಂಸ್ಕ್ರತ] ಪ್ರಥಮ ರ‍್ಯಾಂಕ್. ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಿಂದ ಎಂಎ[ಹಿಂದಿ], ಎಂ.ಫಿಲ್[ವಿಷಯ:ಈಜೋ ಮಂಜೊಟ್ಟಿ ಗೋಣ-ಒಂದು -ವಿಶ್ಲೇಷಣಾತ್ಮಕ ಅಧ್ಯಯನ), ಪಿಹೆಚ್.ಡಿ[ವಿಷಯ:ತುಳು ನಾಡಿನ ನಾಗ ಬ್ರಹ್ಮ ಮತ್ತು ಕಂಬಳ-ಒಂದು ವಿಶ್ಲೇಷಣಾತ್ಮಕ ಅಧ್ಯಯನ) ಹಂಪಿ ಕನ್ನಡ ವಿಶ್ವ ವಿದ್ಯಾಲಯ. ಎರಡನೆಯ ಪಿಹೆಚ್.ಡಿ ಪದವಿ (ವಿಷಯ‘ಪಾಡ್ದನಗಳಲ್ಲಿ ತುಳುವ ಸಂಸ್ಕೃತಿಯ ಅಭಿವ್ಯಕ್ತಿ’) ದ್ರಾವಿಡ ವಿಶ್ವ ವಿದ್ಯಾಲಯ ಕುಪ್ಪಂ, ಬಿ ಎಡ್ ಬೆಂಗಳೂರು ವಿಶ್ವ ವಿದ್ಯಾಲಯ , ಎನ್.ಇ.ಟಿ-ಯುಜಿಸಿ, ಕನ್ನಡ ಶಾಸನ ಮತ್ತು ಲಿಪಿ ಶಾಸ್ತ್ರ ಡಿಪ್ಲೋಮಾ (ಪ್ರಥಮ ರ‍್ಯಾಂಕ್).



ಕೃತಿಗಳು:

ತುಂಡು ಭೂತಗಳು-ಒಂದು ಅಧ್ಯಯನ, ತುಳು ಜನಪದ ಕಾವ್ಯಗಳಲ್ಲಿ ಕಾವ್ಯ ತತ್ವಗಳು , ಬೆಳಕಿನೆಡೆಗೆ, ಕನ್ನಡ ತುಳು ಜನಪದ ಕಾವ್ಯಗಳಲ್ಲಿ ಸಮಾನ ಆಶಯಗಳು, ತುಳು ಪಾಡ್ದನಗಳಲ್ಲಿ ಸ್ತ್ರೀ, ತುಳುವ ಸಂಸ್ಕಾರಗಳು ಮತ್ತು ವೃತ್ತಿಗಳು, ತುಳು ಜನಪದ ಕವಿತೆಗಳು, ಪಾಡ್ದನ ಸಂಪುಟ, ಕಂಬಳ ಕೋರಿ ನೇಮ, ತುಳು ನಾಡಿನ ಅಪೂರ್ವ ಭೂತಗಳು, ಚಂದಬಾರಿ ರಾಧೆ ಗೋಪಾಲ ಮತ್ತು ಇತರ ಪಾಡ್ದನಗಳು, ದೈವಿಕ ಕಂಬಳ ಕೋಣ, ಅರಿವಿನಂಗಳದ ಸುತ್ತ, ಮನೆಯಂಗಳದಿ ಹೂ, ನಾಗ ಬ್ರಹ್ಮ ಮತ್ತು ಕಂಬಳ –ಒಂದು ವಿಶ್ಲೇಷಣಾತ್ಮಕ ಅಧ್ಯಯನ, ಭೂತಗಳ ಅದ್ಭುತ ಜಗತ್ತು, ಶಾರದಾ ಜಿ ಬಂಗೇರರ ಮೌಖಿಕ ಜಾನಪದ, ಬಂಗಲೆ ಗುಡ್ಡ ಸಣ್ಣಕ್ಕ ನ ಮೌಖಿಕ ಜಾನಪದ, ಸುಬ್ಬಿ ಇಂಗ್ಲಿಷ್ ಕಲ್ತದು ಮತ್ತು ಇತರ ನಾಟಕಗಳು, ಶಿಕ್ಷಣ ಲೋಕ, ಕರಾವಳಿಯ ಸಾವಿರದೊಂದು ದೈವಗಳು,



ಪ್ರಶಸ್ತಿ-ಪುರಸ್ಕಾರಗಳು: OUTSTANDING TEACHER AWARD -2013 (ಶಾಮ್ ರಾವ್ ಸ್ಮಾರಕದಿಂದ ), ಸಾಹಿತ್ಯ ಸೇವೆಗೆ ಬೆಂಗಳೂರಿನ ಜಯಪ್ರಕಾಶ ನಾರಾಯಣ ರಾಷ್ಟ್ರೀಯ ಮಹಿಳಾ ರತ್ನ – 2009, ಕರ್ನಾಟಕ ಭೂಷಣ ಪುರಸ್ಕಾರ – 2009 ಸೈನಿಕ ಸೇವಾ ದಳ ಸಾಂಸ್ಕೃತಿಕ ಪ್ರತಿಷ್ಠಾನ, .ತುಳುವೆರೆ ಆಯನೋ ಪ್ರಶಸ್ತಿ 2009), ಸಂಶೋಧನಾ ವಿಭಾಗ], ಕಾವ್ಯಶ್ರೀ ಪುರಸ್ಕಾರ [ಕಥಾ ವಿಭಾಗ], ಕರ್ನಾಟಕ ಜಾನಪದ ರತ್ನ,- 2014 ಅಖಿಲ‌ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ, ಕಲಾ ಜ್ಯೋತಿ- 2010 ಪದ್ಮಶ್ರೀ ಸಾಂಸ್ಕೃತಿಕ ಪ್ರತಿಷ್ಠಾನ, ಬೆಂಗಳೂರು, ಬಲಿಯೇಂದ್ರ ಪುರಸ್ಕಾರ,- 2017 ತುಳುವೆರೆಂಕುಲು,ಬೆಂಗಳೂರು , ಕರಾವಳಿ ರತ್ನ – ದಕ್ಷಿಣ ಕನ್ನಡಿಗರ ಸಂಘ, ಬೆಂಗಳೂರು- 2018 ,ರಾಜ್ಯ ಆದರ್ಶ ಶಿಕ್ಷಕ ಪ್ರಶಸ್ತಿ- 2015, ಪರಮೇಶ್ವರ ಪುಲಿಕೇಶಿ ಪ್ರಶಸ್ತಿ – 2015, ಜಾನಪದ ಪ್ರಪಂಚ ಪುರಸ್ಕಾರ- ಕನ್ನಡ ಜಾನಪದ ಪರಿಷತ್ 2017,ಕಯುವೇ ಸಾಧನಾ ಪ್ರಶಸ್ತಿ -2018, ಕರ್ನಾಟಕ ಯುವ ರಕ್ಷಣಾ ವೇದಿಕೆ,ಬೆಂಗಳೂರು, ಹವ್ಯಕ ಸಾಧಕ ರತ್ನ ಪ್ರಶಸ್ತಿ- 2018 ವಿಶ್ವ ಹವ್ಯಕ ಸಮ್ಮೇಳನ, Award for Excellence – ಮಂತ್ರ ನಾಟ್ಯಕಲಾ ಗುರುಕುಲ ,ಉಳ್ಳಾಲ-2019 ,ಮರೆಯದ ಮಾಣಿಕ್ಯ ಪ್ರಶಸ್ತಿ -2022 ಹವಿಗನ್ನಡದ ಮೊದಲ ನಾಟಕಗಾರ್ತಿ ಎಂಬ ಚಾರಿತ್ರಿಕ ದಾಖಲೆ.



ಡಾ ಲಕ್ಷ್ಮೀ ಜಿ ಪ್ರಸಾದ್ ಈಗ ಪ್ರಾಧ್ಯಾಪಿಕೆಯಾಗಿ ಬೆಂಗಳೂರಿನಲ್ಲಿ ಸೇವೆ ನಿರ್ವಹಿಸುತ್ತಿದ್ದು ಅಲ್ಲಿ ನೆಲೆಸಿದ್ದಾರೆ. ಅವರ ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಇನ್ನೂ ಹೆಚ್ಚಿನ ಸಾಧನೆಯಾಗಲಿ ಎಂದು ನಮ್ಮೆಲ್ಲರ ಶುಭ ಹಾರೈಕೆಗಳು.



ಪರಿಚಯಿಸಿದವರು

ಡಾ ಕೊಳ್ಚಪ್ಪೆ ಗೋವಿಂದ ಭಟ್ ಮಂಗಳೂರು

No comments:

Post a Comment