Friday 13 October 2023

ಕೆರೆ ಚಾಮುಂಡಿ - ಡಾ.ಲಕ್ಷ್ಮೀ ಜಿ ಪ್ರಸಾದ್


 ಚಾಮುಂಡಿ ದೈವದ ಹುಟ್ಟಿನ ಕುರಿತಾದ ಒಂದು ಪಾಡ್ದನದ ಭಾಗವನ್ನು ಪಾಡ್ದನಗಾರ್ತಿ ಶ್ರೀಮತಿ ಶಾರದಾ ಜಿ. ಬಂಗೇರ ಅವರಿಂದ ನಾನು ಸಂಗ್ರಹಿಸಿದ್ದು ಅದರ ಪ್ರಕಾರ ಚಾಮುಂಡಿ ಭೂತ ಮೂಲತಃ ಚಾಮುಂಡಿ ಎಂಬ ಹೆಸರಿನ ಹುಡುಗಿ. 

ಕರೆಯಲ್ಲಿ ಉದ್ಭವಿಸಿದ ಕಾರಣ ಕೆರೆ ಚಾಮುಂಡಿ ಎಂದು ಕರೆಯುತ್ತಾರೆ

ಮೂಲ ಚಾಮುಂಡಿ ಇದೇ ದೈವ  ಎಂದು ನನ್ನ ಅಭಿಪ್ರಾಯ 

ಈ  ಪಾಡ್ದನದಲ್ಲಿ ಎಡದಲ್ಲಿ ಎಡಮಲೆಬಲದಲ್ಲಿ ಬಲಮಲೆನಡುವಿನಲ್ಲಿ ನಡುಮಲೆ ಇದೆ. ಇದರಲ್ಲಿ ಭೀಮುರಾಯ ಭಟ್ಟರ ಸಂಪಿಗಾನ ತೋಟವಿದೆ. ಒಂದು ದಿನ ಭೀಮುರಾಯ ಭಟ್ಟರು ಸ್ನಾನಕ್ಕೆಂದು ಸಂಪಿಗಾನ ತೋಟದ ನಡುವಿನಲ್ಲಿರುವ ತಾವರೆಯ ಕೊಳಕ್ಕೆ ಬರುತ್ತಾರೆ. ಅಲ್ಲಿ ಒಂದು ಬಿಳಿಯ ತಾವರೆ ಹೂ ಭೀಮುರಾಯ ಭಟ್ಟರ ಮಡಿಲಿಗೆ ಬಂದು ಬೀಳುತ್ತದೆ. ತಮ್ಮ ಉತ್ತರೀಯದಲ್ಲಿ ಆ ಬಿಳಿಯ ತಾವರೆ ಹೂವನ್ನು ಕಟ್ಟಿಕೊಂಡು ಬಂದ ಭೀಮುರಾಯ ಭಟ್ಟರು ದೇವರ ಕೋಣೆಗೆ ತಂದು ದೇವರಿಗೆ ಅರ್ಪಿಸುತ್ತಾರೆ. ಆಗ ಆ ಬಿಳಿಯ ತಾವರೆ ಹೂ ಒಂದು ಹೆಣ್ಣುಮಗುವಾಗುತ್ತದೆ. ಮಕ್ಕಳಿಲ್ಲದೆ ಕೊರಗುತ್ತಿದ್ದ ಭೀಮುರಾಯ ಭಟ್ಟರಿಗೆ ಬಹಳ ಸಂತೋಷವಾಗುತ್ತದೆ. ಆ ಮಗುವಿಗೆ `ಚಾಮುಂಡಿ’ ಎಂದು ಹೆಸರಿಟ್ಟು ಸಾಕುತ್ತಾರೆ. ಮುಂದೆ `ಚಾಮುಂಡಿ’ ಎಂಬ ಹೆಸರುಳ್ಳ ಮಗುವೇ ದೈವತ್ವವನ್ನು ಪಡೆದು ಚಾಮುಂಡಿ ಭೂತವಾಗಿ ಆರಾಧನೆ ಹೊಂದುತ್ತಾಳೆ. ಆದರೆ ಅವಳು ಹೇಗೆ ದೈವತ್ವವನ್ನು ಪಡೆದಳು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.© ಡಾ.ಲಕ್ಷ್ಮೀ ಜಿ‌ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು,ಮೊಬೈಲ್ 9480516684

ಮುಂದೆ ದಾಯಾದಿಯಾಗಿರುವ ಗಣಪತಿ ಭಟ್ಟ ಎಂಬಾತ ಚಾಮುಂಡಿಗೆ ದ್ರೋಹ ಮಾಡ್ತಾನೆ ಆಗ ಕತ್ತಲೆಕಾನದ ಗುಳಿಗ ಆತನನ್ನು ಸಂಹಾರ ಮಾಡುತ್ತದೆ.

ದ್ರೋಹವೆಸಗಿ ದರಂತವನ್ನಪ್ಪಿದ ಗಣಪತಿ ಭಟ್ಟ ಎಂಬ ಬ್ರಾಹ್ಮಣ ಚಾಮುಂಡಿ ದೈವದ ಸೇರಿಗೆಗೆ ಸಂದು ಜತ್ತಿಂಗ/ ಜಟ್ಟಿಗ ಎಂಬ ಹೆಸರಿನಲ್ಲಿ ಆರಾಧಿಸಲ್ಪಡುತ್ತಾನೆ© ಡಾ.ಲಕ್ಷ್ಮೀ ಜಿ ಪ್ರಸಾದ್ 

ಹೆಚ್ಚಿನ ಮಾಹಿತಿ ಕರಾವಳಿಯ ಸಾವಿರದೊಂದು ದೈವಗಳು ಕೃತಿಯಲ್ಲಿದೆ  



ಚಾಮುಂಡಿ ಪಾಡ್ದನ 

ಹಾಡಿದವರು ಶಾರದಾ ಜಿ ಬಂಗೇರ

ಇದು ತುಳು ಭಾಷೆಯಲ್ಲಿದೆ.ನಾನು ಶಾರದಾ ಜಿ ಬಂಗೇರರಿಂದ ಅವರಿಗೆ ತಿಳಿದ ಎಲ್ಲ ಪಾಡ್ದನಗಳನ್ನು  ರೆಕಾರ್ಡ್ ಮಾಡಿ ಅನುವಾದಿಸಿ ವಿಶ್ಲೇಷಿಸಿ ಶಾರದಾ ಜಿ ಬಂಗೇರರ ಮೌಖಿಕ ಸಂಕಥನ ಎಂಬ ಪುಸ್ತಕ ರಚಿಸಿದ್ದು ಪ್ರಚೇತ ಬುಕ್ ಹೌಸ್ ಪ್ರಕಟಿಸಿದೆ

ಆ ಪುಸ್ತಕದ ಆಯ್ದ ಭಾಗ ಇದು copy rights reserved © ಡಾ‌.ಲಕ್ಷ್ಮೀ ಜಿ ಪ್ರಸಾದ್


 ಚಾಮುಂಡಿ ಪಾಡ್ದನ

 


ಡೆನ್ನಾನಾ ಡೆನ್ನಾನಾ ಡೆನ್ನಾಡೆನ್ನಾನಾ

ಓಯೇ ಡೆನ್ನಾನ ಡೆನ್ನಾನ ಡೆನ್ನಾಡೆನ್ನಾನಾ

ಎಡ ಭಾಗದಲ್ಲಿದೆ ಎಡಮಲೆ

ಬಲ ಭಾಗದಲ್ಲಿದೆ ಬಲಮಲೆ

ಎಡ ಭಾಗದಲ್ಲಿದೆ ಎಡಮಲೆ

ಬಲ ಭಾಗದಲ್ಲಿದೆ ಬಲಮಲೆ

ನಡುವಿನಲ್ಲಿ ಸಂಪಿಗೆ ಸುರಗೆ ತೋಟವಿದೆ

ಓ ನಡುವಿನಲ್ಲಿ ಸಂಪಿಗೆ ಸುರಗೆ ತೋಟವಿದೆ

ಭೀಮುರಾಯರ ಮಣ್ಣಿನಲ್ಲಿ

ಬೆಳಗಿನ ಜಾವದಲ್ಲಿ ಎದ್ದರು

ಭೀಮುರಾಯರು ಭಟ್ಟರು ಒಡೆಯರು

ಕೈಕಾಲು ಮುಖ ತೊಳೆದು

ಭೀಮುರಾಯರು ಭಟ್ಟರು ಒಡೆಯರು

ಮಡಿತುಂಬು ಇಡುವ ಕೋಣೆಗೆ ಹೋದರು

ಭೀಮಗರಾಯರು ಭಟ್ಟರು ಒಡೆಯರು

ತುಂಡು ತೆಗೆದು ಸೊಂಟಕ್ಕೆ ಮಡಿಬಟ್ಟೆ

ಸುತ್ತಿಕೊಂಡರು ಭೀಮುರಾಯರು ಭಟ್ಟರು

ಸಂಪಿಗೆ ಸುರಗೆ ತೋಟದಲ್ಲಿ

ಭೀಮುರಾಯರ ಮಣ್ಣಿನಲ್ಲಿ

ಮುತ್ತು ತಾವರೆಯ ಕೆರೆಯಲ್ಲಿ

ಕೈಕಾಲು ಮುಖ ತೊಳೆದುಕೊಂಡು ಹೋಗುವರು

ಅವರು ಭೀಮುರಾಯರ ಭಟ್ಟರು ಒಡೆಯರು

ಬಿಳಿಯ ತಾವರೆಯ ಹೂವಾಗಿ

ನಲಿದುಕೊಂಡು ನಗಾಡಿಕೊಂಡು ಬರುವುದಲ್ಲಿ

ಬಿಳಿಯ ತಾವರೆಯ ಹೂವೊಂದು

ಆ ಹೊತ್ತಿಗೆ ಸೆರಗು ಒಡ್ಡಿದರು

ಆ ಹೊತ್ತಿಗೆ ಸೆರಗು ಒಡ್ಡಿದರು

ಅವರು ಭೀಮುರಾಯರು ಭಟ್ಟರು ಒಡೆಯರು

ನಲಿಯುತ್ತಾ ನಗುತ್ತಾ ಬರುವುದು

ಬಿಳಿಯ ತಾವರೆಯ ಹೂವೊಂದು

ಉಟ್ಟಮಡಿ ವಸ್ತç ಅಂಗವಸ್ತçವನ್ನು ಒಡ್ಡಿದಾಗ

ಬಂದು ಬೀಳುವುದು ಬಿಳಿಯ ತಾವರೆಯ ಹೂವು

ಆರು ಎಸಳಿನಲ್ಲಿ ಮೂರು ಕುಸುಮದಲ್ಲಿ

ಬೆಳೆದು ಅರಳುವುದು ನೋಡಿದಾಗ

ಬಾರಿ ದೊಡ್ಡ ಸೋಜಿಗವೇ ಕಾಣಿಸುತ್ತದೆ

ಭೀಮುರಾಯರು ಬಂದರAತೆ

ಹಿಡಿದುಕೊAಡು ಅಂಗವಸ್ತçವನ್ನು ಕೊಡುವರು

ಚಾವಡಿ ನಡುಮನೆಗೆ ಬಂದು

ದೇವರ ಗುಂಡದ ಹೊಸಿಲಿನಲ್ಲಿ

ಇಡುವಾಗ ಕಾಣಿಸುತ್ತದೆ

ಪೂರ್ವದಲ್ಲಿ ಸೂರ್ಯ

ಹುಟ್ಟಿದಂತೇ ಕಾಣುತ್ತದೆ

ಬಿಳಿಯ ತಾವರೆಯ ಹೂವಾಗಿ

ಒಳಗಿನ ಸುತ್ತಿಗೆ ಹೋಗುವರು

ಭೀಮುರಾಯರು ಭಟ್ಟರು ಒಡೆಯರು

ದೇವರ ತಲೆಯಲ್ಲಿ ಇರಿಸುವರು

ಭೀಮುರಾಯರು ಭಟ್ಟರು ಒಡೆಯರು

ಅಡ್ಡ ಜಾರಿ ಬೀಳುತ್ತದೆ.

ಬಿಳಿಯ ತಾವೆಯ ಹೂವು ಅದು

ಆರು ಎಸಲು ಮೂರು ಕುಸುಮ ಬೀಳುವಾಗ

ನಡುವಿನಲ್ಲಿ ಮಗು ಆಳುವ ಶಬ್ದ ಕೇಳುವುದು

ಆ ಕಡೆ ಈ ಕಡೆ ನೋಡುವರು ಭೀಮುರಾಯರು ಭಟ್ಟರು

ಗಿಂಡಿಯ ನೀರು ತಳಿಯುವಾಗ

ಒಂದು ಬಿಳಿಯ ತಾವರೆಯ ಹೂವಿನಲ್ಲಿ

ಒಂದು ಮಗು ಉಂಟಾಯಿÄತ

ಕುಟುAಬ ಸಂಸಾರ ಇಲ್ಲದ

ಮನೆಯಲ್ಲಿ ಮಗು ಆಳುವ ಧ್ವನಿ ಕೇಳುತ್ತದೆ

ಎಂದರು ಭೀಮುರಾಯರು ಭಟ್ಟರು ಒಡೆಯರು

ಏನು ಹೆಸರು ಇಡುವುದು ಎಂದು ಕೇಳುವಾಗ

ಹೇಳಿದರು ಅವರು ಆರು ಎಸಳು ಮೂರು ಕುಸುಮದಲ್ಲಿ

ಉದ್ಭವವಾದ ದೇವಿ ಅವರೇ

ಚಾಮುಂಡಿ ಎಂದು ಹೆಸರು ಇಟ್ಟರು.-  ಡಾ‌.ಲಕ್ಷ್ಮೀ ಜಿ‌ ಪ್ರಸಾದ್ 

No comments:

Post a Comment