Saturday 14 October 2023

ಕರಿಯ ಕನ್ಯಾ ಮದನು ಪಾಡ್ದನ( ಕನ್ನಡ ಅನುವಾದ) ಡಾ.ಲಕ್ಷ್ಮೀ ಜಿ ಪ್ರಸಾದ್

 


ಶಾರದಾ ಜಿ ಬಂಗೇರರು ಹಾಡಿದ ಕರಿಯ ಕನ್ಯಾ ಮದನು ಎಂಬ ತುಳು ಪಾಡ್ದನದ ಕನ್ನಡ ಅನುವಾದ - ಡಾ.ಲಕ್ಷ್ಮೀ ಜಿ ಪ್ರಸಾದ್ 



ಡೆನ್ನ ಡೆನ್ನ ಡೆನ್ನಾನಾ ಡೆನ್ನ ಡೆನ್ನ ಡೆನ್ನಾನಾ

ಏಳು ಜನ ಕಬೇರರು೧ 

 ಏಳು ಜನ ಕಬೇರರಿಗೆ

ಒಬ್ಬಳೇ ಅವಳು ತಂಗಿಯAತಯೆ 

 ಕರಿಯ ಕನ್ಯಾ ಮದನು

ಯಾರಮ್ಮ ಮದನು ಯಾರು ಮಗ ಮದನು

ಒಂದೆರಡು ಬಂಗಾರವಲ್ಲ ಸಾವಿರ ಗಟ್ಟಲೆ ಬಂಗಾರ

ಬೇರೆ ಒಡವೆ ಬೇಕೆ ಏನು ಬೇಕೆಂದು ಕೇಳಿದರು

ತಂದೆ ತಾಯಿ ಇಲ್ಲದ ಮಗುವನ್ನು

ಬಾರಿ ಕೊಂಡಾಟದಿAದ ಸಾಕಿದ್ದಾರೆ 

 ಏಳು ಜನ ಕಬೇರುರ

ಡೆನ್ನ ಡೆನ್ನ ಡೆನ್ನಾನಾ ಓಯೆ ಓಯೇ ಡೆನ್ನ ಡೆನ್ನ ಡೆನ್ನಾನಾ

ಏಳು ಜನ ಕಬೇರರು ಏಳು ಏಳು ವಿಧ

ಬಂಗಾರು ಹಾಕಿ ಮತ್ತೂ ಕೇಳುವರು 

 ಅಣ್ಣಂದಿರು ಏಳು ಜನ ಕಬೇರರು

ಏನೆಲ್ಲ ತಂದಿದ್ದೀರಿ ಅಣ್ಣ ನನಗೇನೂ ಆಸೆ ಇಲ್ಲ

ಚೊಚ್ಚಿಲ ಬಸುರಿ ಆದ ಕರಿಯ ಕನ್ಯಾ ಮದನು

ಅಣ್ಣಂದಿರನ್ನು ಕರೆದು ಹೇಳುವಳು 

 ತಲೆಗೂದಲಿಗೆ ಮುತ್ತು ಪೋಣಿಸಬೇಕು

ಎಂದು ಆಸೆ ಇದೆ ಎಂದು ಹೇಳುವಳಪ್ಪ 

 ಕರಿಯ ಕನ್ಯಾ ಮದನು

ಯಾರಪ್ಪ ಅಣ್ಣಂದಿರಿ ನಿನ್ನ ಅತ್ತಿಗೆಯಂದಿರು ಇದ್ದಾರಲ್ಲ

© ಡಾ.ಲಕ್ಷ್ಮೀ ಜಿ ಪ್ರಸಾದ್ 

ಮಗಳೆ ಕೇಳು ಅರ‍್ಹೇಗೆ ನೋಡುವರು ನಿನ್ನನ್ನು

ಅರ‍್ಹೇಗೆ ನೋಡುವರು ನಿನ್ನನ್ನು ಹಾಗೆಯೇ ನೋಡು ಎಂದು

ಹೇಳಿ ಏಳು ಕಡಲಿನ ಹೊರಗೆ ಹೋಗುವರು

ಏಳು ಜನ ಕಬೇರರು 

 ಮುತ್ತನ್ನು ತಂದರು ಏಳು ಜನ ಕಬೇರರು

ಮುತ್ತನ್ನು ಪೋಣಿಸಿದರು ಏಳು ಜನ

ಒಂದು ತಲೆ ಕೂದಲಿಗೆ ಒಂದು ಮುತ್ತಿನಂತೆ

ಏಳು ಜನ ಪೋಣಿಸಿದಾಗ ತಲೆ ತುಂಬ ಮುತ್ತು ಆಯಿತು

ಬಯಕೆ ಸಮ್ಮಾನ ಆಗಿ ಹೊಳೆಯನ್ನು ದಾಟಿ

ಹೋಗಬೇಕು ಮಗಳನ್ನು ಕರೆದುಕೊಂಡು ಆ ಕಾಲದಲ್ಲಿ

ಒಂದು ಹೊಳೆಯನ್ನು ದಾಟಿ ಆದಾಗ 

 ಕದ್ರಿಗೆ ಬಂದು ಮುಟ್ಟುತ್ತದೆ

ಆ ಹೊತ್ತಿಗೆ ಯಾರಮ್ಮ ತಂಗಿ 

 ನೀರು ಬಾಯಾರಿಕೆಗೆ ಕುಡಿಯಮ್ಮ

ಹಸಿವಿಗೆ ಊಟ ಮಾಡಬೇಕು 

 ಏನು ನಾವು ಮಾಡುವುದೆಂದು ಹೇಳಿದರು

ಅಣ್ಣಂದಿರು ಏಳು ಜನ ಕಬೇರರು 

 ಆ ಹೊತ್ತಿಗೆ ಅತ್ತಿತ್ತ ನೋಡುವರು

ಒಬ್ಬ ಹೊಗಿ ಅಕ್ಕಿ ತರುತ್ತಾನೆ 

 ಒಬ್ಬ ಹೋಗಿ ಬೆಂಕಿ ತರುತ್ತಾನೆ

ಒಬ್ಬ ಹಓಗಿ ನೀರು ತರುತ್ತಾನೆ 

 ಏಳು ಜನ ಸೇರಿ ಏಳು ವಸ್ತು ತಂದರು

ಒAದು ಗೋಳಿ ಮರದ ಬುಡದಲ್ಲಿ 

 ಒಂದು ಕಲ್ಲಿನ ಒಲೆಯನ್ನು ನೋಡಿ

ಮೂರು ಕಲ್ಲು ಜೋಡಿಸಿ ಇಟ್ಟು 

 ಒಂದು ಸೇರು ಅಕ್ಕಿ ಬೇಯಲು ಇಟ್ಟು

ಬೇಯಿಸಿ ಚಟ್ನಿಯನ್ನು ಅರೆದು 

 ನಾವು ಕದಿರೆಯ ನಾವು ಕೆರೆಗೆ ಹೋಗಿ

ಸ್ನಾನ ಮಾಡಿ ಬರುವೆವು ತಂಗಿ ಎಂದು

ಹೇಳಿದರಪ್ಪ ಕಬೇರರು ಏಳು ಜನ ಕಬೇರರು

ಆ ಹೊತ್ತಿಗೆ ನೀರಿಗೆ ಹೋಗಿ ಇನ್ನು

ಕದಿರೆಯ ಏಳು ಕೆರೆಯಲ್ಲಿ ಸ್ನಾನ ಮಾಡಿ

ಶುದ್ಧ ಮುದ್ರಿಕೆಯಾಗಿ ನಾವು ಊರಿಗೆ ಹೋಗೋಣ

ತಂಗಿಯ ಹೆರಿಗೆ ಸುಸೂತ್ರವಾಗಿ 

 ಸುಖವಾಗಿರಲೆಂದು ನೆನೆಸಿಕೊಂಡು

ಹಣ್ಣುಕಾಯಿ ಮಾಡಿಸಿ ಬರುವ ಎಂದು

ಹೋಗುವರಪ್ಪ ಕಬೇರರು ಏಳು ಜನ ಅಣ್ಣಂದಿರು

ಹೋಗುವಾಗ ಕಾಣುತ್ತದೆಯಲ್ಲಿ ತೆಂಗಿನ ತೆಪ್ಪಂಗಾಯ

ಅಡಕೆಯ ಜೂಜು ಗುಬ್ಬಿಗಳ ನಾಟಕ

ವೇಶ್ಯೆಯರ ಮೇಳ ಉಂಟAತೆ ಅದನ್ನು ಹೀಗೆ ನೋಡುವಾಗ

ಗಂಡಸರು ಹೋಗುವ ಜಾಗವೆಂದು ಹೋಗುವರಪ್ಪಾ

ಅಣ್ಣಂದಿರು ಏಳು ಜನ ಕಬೇರರು 

 ಅಷ್ಟು ಮಾತು ಕೇಳುವರು ಅಣ್ಣಂದಿರು

ನಾವು ಗಂಡು ಗಂಡಸರಲ್ವ ಹೋಗುವ

ತಮ್ಮಂದಿರೆ ಎಂದು ತೆಂಗಿನ ಕಆಯಿ ತೆಪ್ಪಂಗಾಯಿ

ಅದರಲ್ಲಿಯೂ ಮೇಲಾದರು ಅಡಿಕೆಯ ಜೂಜಿಗೆ

ಹೋದರು ಅದರಲ್ಲಿಯೂ ಗೆಲುವನ್ನು ಪಡೆದರು

ವೇಶ್ಯೆಯರ ಮೇಳಕ್ಕೆ ಹೋದರು

ಅದರಲ್ಲಿಯೂ ಅವರದೇ ಮೇಲುಗೈ ಆಯಿತು

ಗುಬ್ಬಿಗಲ ನಾಟಕಕ್ಕೆ ಹೋದರು 

 ಅದರಲ್ಲಿಯೂ ಗೆಲುವನ್ನು ಪಡೆದರು

ಯಾರಯ್ಯ ಅವರು ಏಳುಜನ ಹುಡುಗರೆಂದು

ಕೇಳಿದರು ಬಂಗೇರರು ಕದಿರೆಯ ಬಂಗೇರರು

ಕೆಲಸದವರನ್ನು ಸಿಪಾಯಿಗಳನ್ನು ಕರೆಸಿದರು

ಅವರನ್ನು ಕೈಕಾಲು ಕಟ್ಟಿ ಹಾಕಿರಿ

ಅವರನ್ನು ಕೊಂಡು ಹೋಗಿ ನೀವು ಸೆರೆಮನೆಯಲ್ಲಿಡಿ

ಎಂದು ಹೇಳಿದರು ಕದಿರೆಯ ಬಂಗೇರರು

ಕೈ ಕಾಲನ್ನು ಕಟ್ಟಿ ಸಂಕೋಲೆ ಬಿಗಿದು

ತೆಗೆದುಕೊಂಡು ಹೊಗಿ ಅವರನ್ನು ಏಳು ಗುಮಡದ

ಒಳಗೆ ಹಾಕುವರು ಏಳುಜನ ಅಣ್ಣಂದಿರನ್ನು

ಕಾದು ಕಾದು ಕತ್ತಲೆ ಆಗುವಾಗ ಅಣ್ಣಂದಿರು

ಕಾಣಿಸುವುದಿಲ್ಲವೆAದು ಬಹಳ ವೇಸರದಲ್ಲಿ

ಕೆರೆಯ ಬದಿಗೆ ಮಡಲಿನ ಬದಿಯಲ್ಲಿ

ಕದಿರೆಯ ದಾರಿಯಲ್ಲಿ ಬಂತು ನಿಂತಳು

ಯಾರಮ್ಮ ನೀವು ಕೇಳಿರಿ ಎಂದಾಗ 

 ಅಣ್ಣಂದಿರು ಏಳು ಜನ ಕಬೇರರು

ಎಲ್ಲಿಗೆ ಹೋಗುವರೆಂದು ಹೇಳಿದರೆ ಕೇಳುವಾಗ

ತೆಂಗಿನ ತೆಪ್ಪಂಗಾಯ ಅಡಿಕೆಯ ಜೂಜು

ಆಟವನ್ನು ಆಡಿದರು ಅದರಲ್ಲಿ ಎಲ್ಲ ಗೆದ್ದರೆಂದು

ಅವರನ್ನು ಸಂಕೋಲೆ ಬಿಗಿದು ಕತ್ತಲೆಯ

ಮನೆಗೆ ಹಾಕಿದ್ದಾರೆಂದು ಹೇಳುವರು ಹುಡುಗರು

ಅಷ್ಟು ಮಾತನ್ನು ಕೇಳುವಳು

ಅಯ್ಯಯ್ಯೋ ದೇವರೆ ಉಳೊ ಉಳೊ ದೇವರೆ

ಅಳುವಳು ಬಸುರಿ ಹೆಂಗಸು ನಾನು ಎಲ್ಲಿಗೆ

ಹೋಗುವುದೆಂದು ಬಹಳ ದೊಡ್ಡ ಬೇಸರದಲ್ಲಿ

ಬರುವಳು ಮಗಳು ಅವಳು ಕರಿಯ ಕನ್ಯಾ ಮದನು

ಡೆನ್ನಾನಾ ಡೆನ್ನಾನ ಬಂಗೇರೆ ನನ್ನ ಒಂದು ಅಣ್ಣನವರನ್ನು

ಬಿಡಿರಿ ಬಂಗೇರರೆ ನಿಮಗೆ 

 ಏನು ಬೇಕು ನಾವು ಕೊಡುವೆವು ಅಣ್ಣನವರೆಂದು

ಕೈ ಕಾಲು ಹಿಡಿಯುವಳು ಅಡ್ಡ ನೀಟ ಬಿದುದ

ಬಸುರಿ ಹೆಣ್ಣು ಅವಳು ಬೇಡಿಕೊಂಡಳು

ಕರಿಯ ಕನ್ಯಾ ಮದನು 

 ಆ ಹೊತ್ತಿಗೆ ಹೇಳುವರು

ಯಾರಯ್ಯ ಕೆಲಸದವರೆ ಅವಳು ಎಂಥದ್ದು

ಹಕ್ಕಿಯ ಹಾಗೆ ಚೊರೆ ಚೊರೆ ಹೇಳುವುದು

ಕೊರಳಿಗೆ ಕೈ ಹಾಕಿ ನೂಕಿರಿ ಎಂದು ಹೇಳಿದನು

ಅವನು ಕದಿರೆಯ ಬಂಗೇರ

ಅಷ್ಟೊAದು ಮಾತನ್ನು ಕೇಳಿದಳು ಮಗಳು ಅವಳು

ಯಾರಯ್ಯ ಬಂಗೇರ ಬಿಡುವುದಾದರೆ ಬಿಡು

ಬಿಡದಿದ್ದರೆ ನನ್ನ ಹೊಟ್ಟೆಯಲ್ಲಿರುವ ಮಗುವಾದರು

ನಿನ್ನ ಏಳುಪ್ಪರಿಗೆ ಮನೆಯನ್ನು 

 ಬೀಳಿಸದೆ ಬಿಡಲಾರೆ ಎಂದು

ನನ್ನ ಅಣ್ಣಂದಿರನ್ನು ಬಿಡಿಸಿಕೊಂಡು ಬರುವ

ನನ್ನ ಮಗ ಬಂದು ಎಂದು ಹೇಳಿ

ಮಣ್ಣು ಮುಟ್ಟಿ ಆಣೆ ಕೊಡುವಳು ಮಗಳು

ಅವಳು ಕರಿಯ ಕನ್ಯಾ ಮದನು

ಇಳಿದುಕೊಂಡು ಬಂದು ಆನೆಕಲ್ಲು ಹತ್ತುವಾಗ

ಮೇಲೆ ಮೇಲೆ ನೋವು ಬಂದು ಅಯ್ಯಯ್ಯೋ

ದೇವರೆ ನನ್ನ ಅಣ್ಣನವರು

ಯಾರು ಇಲ್ಲ ಎಲ್ಲಿಗೆ ಹೋಗಲಿ ನಾನು ಎಂದು 

ಒಂದು ಮಡಿಕೆಯಲ್ಲಿ ಅನ್ನ ಬೇಯಿಸಿ

ಗೋಳಿಮರದ ಜಂತಿಗೆ ಕಟ್ಟಿ ಯಾವಾಗ

ನನ್ನ ಅಣ್ಣನವರು ಏಳು ಜನ ಸೇರಿ

ಎಂಟು ಆಗುತ್ತದೆ ನನ್ನ ಹೊಟ್ಟೆಯಲ್ಲಿರುವ ಮಗು ಸೇರಿ

ಒಂಬತ್ತು ಜನ ಸೇರಿ ಊಟ ಮಾಡುವ ಕಾಲದ ತನಕ

ಬಿಸಿಯಾಗಿಯೇ ಇರಬೇಕು ಎಂದು ಜಂತಿಗೆ ಕಟ್ಟಿ

ನಾರಾಯಣ ದೇವರಿಗೆ ಸೂರ್ಯಚಂದ್ರ ದೇವರಿಗೆ

ಆಣೆ ಕಟ್ಟಿ ಇಡುವಳು ಕರಿಯ ಕನ್ಯಾಮದನು

ಡೆನ್ನಾ ಡೆನ್ನಾ ಡೆನ್ನಾನಾಗೆ ಉಡು ಉಡೋ ನೋವು ಬಂದಿತು

ಮುAಡಿ೨ಯ ಬುಡದಲ್ಲಿ ಕುಳಿತು ಕೊಳ್ಳುವಳೆ ಮಗಳೆ

ಮೇಲೆ ಮೇಲೆ ನೋವು ಬಂದು ಗಂಡು ಮಗುವನ್ನು

ಹೆರಿಗೆಯ ನೋವಿನಲ್ಲಿ ಹೆರುವಳಪ್ಪಾ ಮಗಳು

ಒಂದು ತೆಕಲ್ಕಿಯ೩ ಎಲೆ ಕೊಂಡು ತಂದು ಮಗುವನ್ನು

ಮಲಗಿಸಿ ಎಲ್ಲಿಗೆ ಸೇರಬೇಕೋ ಅಲ್ಲಿಗೆ ಸೇರೆಂದು ಹೇಳಿ

© ಡಾ.ಲಕ್ಷ್ಮೀ ಜಿ ಪ್ರಸಾದ್ 

ಕಡಲಿನಲ್ಲಿ ಬಿಡುವಳಪ್ಪ ಕರಿಯ ಕನ್ಯಾಮದನು

ಸುತ್ತಿದ ಸೀರೆ ಹರಿದು ಹೋಗುತ್ತದೆ ತೆಕ್ಕಿಯೆಲೆ ಕಟ್ಟಿಕೊಂಡು

ಸೊAಟದ ಸುತ್ತ ತೆಕ್ಕಿಯೆಲೆ ಕಟ್ಟಿಕೊಂಡು

ಮಾನವನ್ನು ಮುಚ್ಚಿಕೊಂಡು ಮುಂಡೇವಿನ೪ ಪೊದರಿಯಲ್ಲಿ

ಕಾಲವನ್ನು ಕಳೆದುಕೊಂಡು ಇರುವಳು

ಮಗಳು ಕರಿಯ ಕನ್ಯಾಮದನು

ಏಳೇಳು ಹದಿನಾಲ್ಕು ವರ್ಷಗಳು ಹಾಗೆ ಕಾಲ ಕಳೆದು

ಕಾಡಿನಲ್ಲಿ ವಾಸವಾಗಿ ಇರಲು ಒಂದು 

ಕಾಡು ಮನುಷ್ಯ ಉಂಟೆAದು ಊರು ತುಂಬ

ಸುದ್ದಿ ಆಗಿಕೊಂಡು ಇರುವ ಕಾಲದಲ್ಲಿ

ಮಗುವಿಗೆ ಇಪ್ಪತ್ತು ವರ್ಷ ಪ್ರಾಯ ತುಂಬಿ

ಬರುತ್ತದೆ ಕರಿಯ ಕನ್ಯಾಮದನುವಿನ ಮಗನಿಗೆ

ಊರಿನಲ್ಲಿ ದೊಡ್ಡ ಅರಸುವಿಗೆ ಏಳು ಉಪ್ಪರಿಗೆ

ಮೇಲೆ ಕುಳಿತುಕೊಳ್ಳುವ ಅರಸುವಿಗೆ ಮಕ್ಕಳು

ಇಲ್ಲದೆ ಇರುವ ಕಾಲದಲ್ಲಿ ಮೀನು ಹಿಡಿಯುವ

ಮೀನು ಹಿಡಿಯುವ ಮರಕ್ಕಾಲರ೫ ಬಲೆಗೆ ಬಿದ್ದ

ಮಗುವನ್ನು ತೆಗೆದುಕೊಂಡು ಬಾರಿ ಚಂದದಲ್ಲಿ

ಸಾಕಿ ಅರಸುವಿನ ಮನೆಯಲ್ಲಿ ಬಿಡುವರು

ಮರಕ್ಕಾಲರು ಮೀನಿನ ಮರಕ್ಕಾಲರು

ಆ ಹೊತ್ತು ಆಗುವಾಗ ನಂದಾವರದ ಅರಸು

ಕೇಳುವಾಗ ಮಗುವಾದರೂ ದೊಡ್ಡವನಾಗಲು

ಅವನನ್ನು ಕರೆದುಕೊಂಡು ಕಾಡಿಗೆ ಹೋಗುತ್ತಾರೆ

ಕಾಡಿನಲ್ಲಿ ಬೇಟೆಯಾಡುವಾಗ ಒಂದು ಕಾಡು ಮನುಷ್ಯ

ಇದೆ ಎಂದು ಕಾಣಿಸುತ್ತದೆ ಕರಿಯ ಕನ್ಯಾಮದನು

ಅತ್ತಿತ್ತ ನೋಡುವಾಗ ಮಗನನ್ನು ನೋಡುವಾಗ

ಗಂಡನ ನೆನಪಾಗಿ ಸೂರ್ಯಚಂದ್ರ ದೇವರಂತೆ

ಬೆಳೆದ ಮಗ ಯಾರೆಂದು ನೆನೆಯುತ್ತಾಳೆ

© ಡಾ.ಲಕ್ಷ್ಮೀ ಜಿ ಪ್ರಸಾದ್ 

ಮಗಳು ಅವಳು ಕರಿಯ ಕನ್ಯಾಮದನು

ಹಿಡಿದ ಬಿಲ್ಲು ಬಾಣವನ್ನು ಕೆಳಗೆ ಹಾಕು ಮಗ

ನಿನ್ನ ತಾಯಿ ಅವಳು ಎಂದು ಮೀನನ್ನು

ಹಿಡಿಯುವ ಮರಕ್ಕಾಲ ಹೇಳುವಾಗ 

 ಭಾರಿ ದೊಡ್ಡ ಆಶ್ಚರ್ಯದಲ್ಲಿ

ಓಡಿ ಬಂದು ಅಪ್ಪಿಕೊಂಡು ಬಂದು ಏನು ಆಯಿತು

ತಾಯಿಯವರೆಂದು ಕೇಳುವಳಪ್ಪ ಮಗ ಅಲ್ಲಿ

ಗಂಡು ಮಗು ಕೇಳುವಾಗ ನೀನು ಯಾರು ಅರಸು ಮಗ

ಇಲ್ಲಿಗೆ ಯಾಕೆ ಬಂದೆ ನಾನು ಯಾರು

ತಾಯಿ ಎಂದು ನಿನಗೆ ಹೇಗೆ ಗೊತ್ತಾಯಿತ್ತೆಂದು

ಕೇಳುವಳು ಕರಿಯ ಕನ್ಯಾಮದನು

ಇಲ್ಲಿ ತಾಯಿಯವರೆ ನೀವು ತೇಲಿ ಬಿಟ್ಟ ನನ್ನನ್ನು

ಮಗುವನ್ನು ತಂದವರು ನಿಮ್ಮನ್ನು ನೋಡಿದ ಜನರು ಹೇಳಿದ್ದಾರೆ

ನಿಮಗೆ ಈ ಕಷ್ಟ ಯಾರಿಂದ ಬಂತೆAದು ಹೇಳಿರಿ ತಾಯಿ

ಒಂದು ಗಂಟೆ ಹೋಗುವುದರೊಳಗೆ ಏಳು ಗಂಟೆಯ

ಒಳಗೆ ನಾನು ನನ್ನ ಏಳು ಮಾವಂದಿರನ್ನು

ಬಿಡಿಸಿಗೊAಡು ಬರುವೆನೆಂದು ಹೇಳುವನು

ಗಂಡು ಹುಡುಗ ಹೇಳಿದಾಗ 

 ಯಾರಪ್ಪ ಮಗನೆ ಕುಮಾರ ಈಗ

ಅಷ್ಟು ದೊಡ್ಡ ಅರಮನೆಯನ್ನು 

 ನೀನ್ಹೇಗೆ ಗೆಲ್ಲುವೆ ಎಂದು ಕೇಳಿದಾಗ

ನಾನು ನಿಮಗೆ ಹುಟ್ಟಿದ ಮಗ ಆದರೆ ನೀವು

ಹೆತ್ತ ಮಗ ಆದರೆ ಸೂರ್ಯಚಂದ್ರ ಆಣೆ ಇಟ್ಟು

ನನ್ನನ್ನು ನೀರಿಗೆ ಬಿಡುವಾಗ ನನಗೆ ಸತ್ಯದ

ಕಳೆ ಉಂಟಾಯಿತು ತಾಯಿಯವರೆ ಕದಿರೆಯ ಆನೆಯನ್ನು

ಹತ್ತುವ ಎಂದು ಹೇಳುವನು ಮಗ

ಯಾರಯ್ಯ ಬಂಗೇರ ಆವತ್ತಿನ ಕಾಲದಲ್ಲಿ

ನನ್ನ ಅಣ್ಣಂದಿರನ್ನು ಕತ್ತಲೆಯ ಮನೆಯಲ್ಲಿ

ಸಂಕೋಲೆಯಲ್ಲಿ ಸುತ್ತಿ ಕುಳ್ಳಿರಿಸಿದೆಯಲ್ಲ

ಈವತ್ತಾದರೂ ಬಿಡು ಎಂದು ಹೇಳುವಾಗ

ಹೋಗಿತ್ತೀಯಾ ಇಲ್ವ ನಿನ್ನನ್ನು ಕೈ ಕಾಲು ಕಟ್ಟಿ ಹಾಕಬೇಕೆ ಎಂದು


ಕೇಳುತ್ತಾನೆ ಅವನು ಕದಿರೆಯ ಬಂಗೇರ

ಆ ಹೊತ್ತು ಆಗುವಾಗ ಉಪ್ಪರಿಗೆಯನ್ನು ಹೊತ್ತಿಸಿ

ಮಾಳಿಗೆಯ ಮನೆಗೆ ಬರುವಾಗ 

 ಏಳು ಮಾಳಿಗೆ ಉರಿದು ಭಸ್ಮವಾಯಿತು

© ಡಾ.ಲಕ್ಷ್ಮೀ ಜಿ ಪ್ರಸಾದ್ 

ಏಳು ಜನ ಮಾವಂದಿರನ್ನು ಬಿಡಿಸಿಕೊಂಡು ಬರುವನೆ ಮಗ

ಒಬ್ಬ ಮಗ ಕುಮಾರ ಕರಿಯ ಕನ್ಯಾ ಮದನುವಿನ

ಯಾರಮ್ಮಾ ಮದನು ಇದು ಯಾರು ಹುಡುಗನೆಂದು

ಕೇಳುವಾಗ ನಿಮ್ಮ ಅಳಿಯ ಅಣ್ಣಂದಿರೆ ಇಷ್ಟು ವರ್ಷ ಎಲ್ಲೋ

ಹುಟ್ಟಿ ಎಲ್ಲೋ ಬೆಳೆದು ರಾಜನ ಮಗ ಆಗಿದ್ದ

ಇವತ್ತು ಆಗುವಾಗ ನನ್ನ ಮಗ ಕುಮಾರ ಎಂದು ಗೊತ್ತಾಯಿತು

ಇನ್ನು ನಾವು ಹೋಗಿ ಅಂದು ಮಾಡಿದ ಊಟ ಮಾಡುವ

ಅದನ್ನು ಊಟ ಮಾಡಿ ಕಬೇರಂದ ಊರಿಗೆ

ಹೋಗುವ ಎಂದು ಹೇಳುವರಪ್ಪ ಕಬೇರರು

ಏಳು ಜನ ಕಬೇರರು ಕರಿಯ ಕನ್ಯಾ ಮದನು

© ಡಾ‌.ಲಕ್ಷ್ಮೀ ಜಿ ಪ್ರಸಾದ್ 

No comments:

Post a Comment