Sunday, 22 October 2023

ಕರಾವಳಿಯ ಸಾವಿರದೊಂದು ದೈವಗಳು : ಮರ್ಲು ಮಾಣಿ

ಮರ್ಲ  ಮಾಣಿ - ಡಾ.ಲಕ್ಷ್ಮೀ ಜಿ ಪ್ರಸಾದ್.ಕರಾವಳಿಯ ಸಾವಿರದೊಂದು ದೈವಗಳು ,mobile - 9480516684 


copy rights reserved (c) ಡಾ.ಲಕ್ಷ್ಮೀ ಜಿ ಪ್ರಸಾದ   ಸುಳ್ಯದ ಎಡಮಂಗಲದಲ್ಲಿ ಉಳ್ಳಾಕುಲುಗಳೊಂದಿಗೆ ಆರಾಧಿಸಲ್ಪಡುವ ದೈವವಿದು. ಹೆಸರೇ ಸೂಚಿಸುವಂತೆ ಈ ದೈವ ಮೂಲತಃ ಬ್ರಾಹ್ಮಣ ಮಾಣಿಯಾಗಿದೆ. ಉಳ್ಳಾಕುಲು ಮರ್ಲಾಣೆ ಎಂಬ ಪ್ರದೇಶಕ್ಕೆ ಬರುವಾಗ ಅಲ್ಲಿ ಬ್ರಾಹ್ಮಣ ಅರ್ಚಕನೋರ್ವ ಪಂಚಕುರುವೆ ಹಿಡಿದುಕೊಂಡು ದೇವರಿಗೆ ಹೂ ಕೊಯ್ಯುತ್ತಿರುತ್ತಾನೆ. ಆಗ ಅಲ್ಲಿಗೆ ಬಂದ ಉಳ್ಳಾಕುಲು ಎಡಮಂಗಲ ದೇವಸ್ಥಾನಕ್ಕೆ ಹೋಗುವ ದಾರಿಯನ್ನು ಕೇಳಿದಾಗಈ ಬ್ರಾಹ್ಮಣ ಹುಡುಗ ತಪ್ಪು ದಾರಿಯನ್ನು ಹೇಳುತ್ತಾನೆ. ಇದು ತಿಳಿದ ಉಳ್ಳಾಕುಲುಗಳು ಕೋಪಿಸಿಕೊಂಡು ಅವನನ್ನು ಮಾಯ ಮಾಡುತ್ತಾರೆ. ಆಗ ತಪ್ಪಿಗೆ ಕ್ಷಮೆ ಯಾಚಿಸುತ್ತಾನೆ ಆ ಅರ್ಚಕ.copy rights reserved (c) ಡಾ.ಲಕ್ಷ್ಮೀ ಜಿ ಪ್ರಸಾದ ಆಗ ಉಳ್ಳಾಕುಲು ಅವನನ್ನು ತನ್ನ ಸೇರಿಗೆಯ ದೈವವಾಗಿ ಸೇರಿಸಿಕೊಳ್ಳುತ್ತಾರೆ. ಆತ ಮರ್ಲಾಣೆಯ ಮಾಣಿ ಎಂಬ ಹೆಸರಿನಿಂದ ಆರಾಧಿಸಲ್ಪಡುತ್ತಾನೆ. ಕಾಲಾಂತರದಲ್ಲಿ ಮರ್ಲಾಣೆಯ ಮಾಣಿ ಎಂಬುದು ಮರ್ಲು ಮಾಣಿ ಎಂದು ಅಪಭ್ರಂಶಗೊಂಡಿದೆ. ಈತನ ಬೆನ್ನಿಗೆ ಪಂಚಕುರುವೆ ನೇತು ಹಾಕುತ್ತಾರೆ. ಕೈಯಲ್ಲಿ ತಾಳೆಗರಿಯ ಕೊಡೆ ಹಾಗೂ ಕಬ್ಬಿನ ಜಲ್ಲೆಯನ್ನು ಈ ದೈವ ಹಿಡಿದಿರುತ್ತದೆ.
copy rights reserved (c) ಡಾ.ಲಕ್ಷ್ಮೀ ಜಿ ಪ್ರಸಾದಹಿಂದಿನ ಕಾಲದಲ್ಲಿ ತುಂಡರಸರು ತಮ್ಮ ಸುತ್ತ ಮುತ್ತಲಿನ ಇತರರ ವ್ಯಾಪ್ತಿಯಲ್ಲಿರುವ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿದ್ದರು .ಅಂತೆಯೇ ಮತಾಂಧ ಅರಸರು ಇತರ ಧರ್ಮದವರ ದೇವಾಲಯಗಳನ್ನು ಕೊಳ್ಳೆ ಹೊಡೆದು ನಾಶ ಮಾಡುತ್ತಿದ್ದರು .
ಹಾಗಾಗಿ ವಾಸ್ತವದಲ್ಲಿ ದೇವಸ್ಥಾನವನ್ನು ಕೊಳ್ಳೆ ಹೊಡೆಯಲು ಬಂದ ತುಂಡರಸ ಅಥವಾ ಪಾಳೆಗಾರರ ದಾರಿ ತಪ್ಪಿಸಿ ಈತ ದೇವಸ್ಥಾನದ ಸಂಪತ್ತನ್ನು ರಕ್ಷಣೆ ಮಾಡಿರ ಬಹುದು copy rights reserved (c) ಡಾ.ಲಕ್ಷ್ಮೀ ಜಿ ಪ್ರಸಾದ.ಇದು ಗೊತ್ತಾಗಿ ಮುಂದೆ ಆ ಪಾಳೆಗಾರ ಅಥವಾ ತುಂಡರಸ ಈತನನ್ನು ದುರಂತಕ್ಕೀಡು ಮಾಡಿರ ಬಹುದು .ಕಾಲಾಂತರದಲ್ಲಿ ಈತ ನಿಗೆ ಉಲ್ಲಾಕುಳು ಜೊತೆ ಆರಾಧನೆ ಆರಂಭವಾಗಿರ ಬಹುದು .
ಕರಾವಳಿಯ ಸಾವಿರದೊಂದು ದೈವಗಳು ಕೃತಿಯ ಆಯ್ದ ಭಾಗ 

No comments:

Post a Comment