Tuesday, 12 December 2023

ಕರಾವಳಿಯ ಸಾವಿರದೊಂದು ದೈವಗಳು:.ಪದ್ಮಶ್ರೀ ಸಾಲು‌ಮರದ ತಿಮ್ಮಕ್ಕ


 

ಕರಾವಳಿಯ ಸಾವಿರದೊಂದು ದೈವಗಳು : ಮಂಗಳೂರು ವಿಶ್ವವಿದ್ಯಾಲಯದ ವೀಸಿಗಳಾದ ಡಾ.ಪಿ ಎಸ್ ಯಡಪಡಿತ್ತಾಯ


 

ಕರಾವಳಿಯ ಸಾವಿರದೊಂದು ದೈವಗಳು : ನಮ್ಮ ಹೆಮ್ಮೆಯ ಓದುಗರಾದ ಸುಬ್ರಹ್ಮಣ್ಯ ಹೆಬ್ಬಾರ


 

ಕರಾವಳಿಯ ಸಾವಿರದೊಂದು ದೈವಗಳು: ಹೆಮ್ಮೆಯ ಓದುಗರಾದ ಡಾ.ಸುಹಾಸ್ ಖ್ಯಾತ ಡರ್ಮೋಲಜಿಸ್ಟ್


  ಡಾ.ಸುಹಾಸ್ ಖ್ಯಾತ ಡರ್ಮಾಲಜಿಸ್ಟ್,ಬೆಂಗಳೂರು 

ಕರಾವಳಿಯ ಸಾವಿರದೊಂದು ದೈವಗಳು: ಹೆಮ್ಮೆಯ ಓದುಗರಾದ ಯೂನಿಯನ್ ಬ್ಯಾಂಕ್ ಡೆಪ್ಯೂಟಿ ಜನರಲ್ ಮ್ಯಾನೇಜರ್ ರಮೇಶ್ಚಂದ್ರ ಪ್ರಭು


 

ಕರಾವಳಿಯ ಸಾವಿರದೊಂದು ದೈವಗಳು : ಹೆಮ್ಮೆಯ ಓದುಗರಾದ ಪುಷ್ಪರಾಜ ಚೌಟ ಕಾರ್ನಾಡು ಮೂಲ್ಕಿ


 

ಕರಾವಳಿಯ ಸಾವಿರದೊಂದು ದೈವಗಳು : ರಚನ್ ಬಿ ಘೋಷಲ್


 ಡಾ. ಲಕ್ಷ್ಮಿ ಜಿ ಪ್ರಸಾದ್ ರವರು ಬರೆದಿರುವ ಕರಾವಳಿಯ ಸಾವಿರದೊಂದು ದೈವಗಳು ಎಂಬ ಪುಸ್ತಕದಲ್ಲಿ ಕರಾವಳಿಯಲ್ಲಿ ಆರಾಧಿಸುವ ಅನೇಕ ದೈವಗಳ ಮಾಹಿತಿ ಅಡಕವಾಗಿದೆ . ಕಂಡು ಕೇಳರಿಯದ ಉಮ್ಮಾಲ್ತಿ, ಕುಂಡೋದರ, ಭೈರಜ್ಜಿ, ಸರ್ಪ ಕೋಲಾ, ಕರಿಚಾಮುಂಡಿ, ಬೊಟ್ಟಿ ಭೂತ, ಗಿಣಿರಾಮ ಮುಂತಾದ ದೈವಗಳ ಹೆಸರು ಈ ಪುಸ್ತಕದಲ್ಲಿ ದೊರೆತಿದೆ. ಈ ಪುಸ್ತಕವು ನಮ್ಮಲ್ಲಿನ ದೈವಗಳ ಆರಾಧನೆಯ ಕುರಿತು ಮುಂದಿನ ಪೀಳಿಗೆಗೆ ಮಾಹಿತಿ ಒದಗಿಸುತ್ತದೆ.🙏- ರಚನ್ ಬಿ ಘೋಷಾಲ್ 

ಕರಾವಳಿಯ ಸಾವಿರದೊಂದು ದೈವಗಳು: ರಜನಿ ವಿ ಶಾಸ್ತ್ತ್ರಿ


 ಅಪ್ರತಿಮ ಲೇಖಕಿಯಿಂದ ಸಮಾಜಕ್ಕೆ ಅದ್ಭುತ ಗ್ರಂಥದ ಕೊಡುಗೆ. ಈಗ ಕಾಂತಾರಾ ಚಲನ ಚಿತ್ರದ ಅಲೆ ಹರಡಿದೆ.ಆದರೆ ಆ ಕಾಲಕ್ಕೆ ಅಷ್ಟಾಗಿ ಯಾರೂ ಸ್ಪರ್ಶಿಸದ ದೈವಗಳ ಬರಹದ ಯೋಚನೆ ಬರಲು, ಅದು ಕಾರ್ಯರೂಪಕ್ಕೆ ತರುವಂತಹ ಕಠಿಣ ತಪಸ್ಸು ನಿಮ್ಮಂತ ಸಾಧಕಿಗೆ ಮಾತ್ರ ಸಾಧ್ಯ. ಇಲ್ಲಿ ಆ ಹುಚ್ಚಿರಬೇಕು..ಜೊತೆಗೆ ಒಂದಷ್ಟು ಕೆಚ್ಚಿರಬೇಕು.1228 ದೈವಗಳ ಮಾಹಿತಿ ಸಂಗ್ರಹ ಸುಲಭವಲ್ಲ..ಹಾಯಾಗಿ ಕೂತು ಓದುವ ನಾವು ಧನ್ಯರು.ದೈವ -ದೇವರುಗಳು ಸದಾ ನಿಮ್ಮ ರಕ್ಷೆಯಾಗಿರಲಿ ರಜನಿ ವಿ ಶಾಸ್ತ್ರಿ
ಮದಂಗಲ್ಲು 

ಕರಾವಳಿಯ ಸಾವಿರದೊಂದು ದೈವಗಳು: ಹೆಮ್ಮೆಯ ಓದುಗರಾದ ದಿನೇಶ್ ಎಂ ಕಾರ್ಕಳ


 🚩🚩🚩ಮಾಯ ಮತ್ತು ಜೋಗದ ಬೆಳಕಿನಲ್ಲಿ.🚩🚩🚩

   🚩🚩🚩🚩ಕರಾವಳಿಯ ಸಾವಿರದೊಂದು ದೈವಗಳು.🚩🚩🚩🚩

        ಡಾ.ಲಕ್ಷ್ಮೀ ಜಿ.ಪ್ರಸಾದ್ ರವರ ಲೇಖನದಲ್ಲಿ   ಕೊಡಗು ಸೇರಿದಂತೆ ಕಾರವಾರದಿಂದ ಕೊಟ್ಟಾಯಂವರೆಗಿನ ತುಳು ˌಕನ್ನಡ ˌಮಲಯಾಳ ಪರಿಸರದ ಒಂದು ಸಾವಿರದ ಇನ್ನೂರ ಐವತ್ತಮೂರು ದೈವಗಳ ಮಾಹಿತಿಯುಳ್ಳ ಗ್ರಂಥ ಇಂದು ನನ್ನ ಕೈ ಸೇರಿದೆ.😍🎊🎊🎉- ದಿನೇಶ್ ಎಂ ಕಾರ್ಕಳ‌

Monday, 11 December 2023

ಕರಾವಳಿಯ ಸಾವಿರದೊಂದು ದೈವಗಳು : ಹೆಮ್ಮೆಯ ಓದುಗರಾದ ಗುಣಾಜೆ ರಾಮಚಂದ್ರ ಭಟ್


 ನಮ್ಮ ಹೆಮ್ಮೆಯ ಓದುಗ ಬಂಧುಗಳು

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು 

#ಕರಾವಳಿಯ_ಸಾವಿರದೊಂದು_ದೈವಗಳು 

ನಮಗೆ ನಿರಂತರವಾಗಿ ಬೆಂಬಲ ನೀಡುತ್ತಿರುವ ಹಿರಿಯ ವಿದ್ವಾಂಸರೂ ಕವಿ ಸಾಹಿತಿಗಳೂ ಆಗಿರುವ ನಿವೃತ್ತ ಕನ್ನಡ ಅಧ್ಯಾಪಕರಾದ ರಾಮಚಂದ್ರ ಭಟ್ ಗುಣಾಜೆ

ಕರಾವಳಿಯ ಸಾವಿರದೊಂದು ದೈವಗಳು : ಪವರ್ ಟಿವಿಯ ಪ್ರದಾನ ಸಂಪಾದಕರಾದ ಚಂದನ್ ಶರಗಮಾರೊಂದಿಗೆ


 ಯಾರೇನೇ ಹೇಳಿದರೂ ಲೆಕ್ಕಿಸದೇ ಅಭಿಮಾನದಿಂದ ಕರೆದು ಪವರ್ ಟಿವಿಯಲ್ಲಿ ದೈವಾರಾಧನೆ ಕುರಿತಾದ ಚರ್ಚೆಗೆ ಆಹ್ವಾನಿಸಿ ಪ್ರಸಾರ ಮಾಡಿರುವ ಚಂದನ್ ಶರ್ಮಾರಿಗೆ ಕೃತಜ್ಞತೆ ಗಳು 

ಕರಾವಳಿಯ ಸಾವಿರದೊಂದು ದೈವಗಳು : ನಮ್ಮ ಹೆಮ್ನೆಯ ಓದುಗರಾದ ಅನಂತ ಪದ್ಮನಾಭ ಮೂಡತ್ತಾಯ


 

ಕರಾವಳಿಯ ಸಾವಿರದೊಂದು ದೈವಗಳು : ದಯಾನಂದ ಸ್ವಾಮಿ


 

ಕರಾವಳಿಯ ಜಾನಪದ  ಅಧ್ಯಯನ ಕ್ಷೇತ್ರದಲ್ಲೊಂದು ಮೈಲುಗಲ್ಲು

- ದಯಾನಂದ ಸ್ವಾಮಿ 

ಡಾ.ಲಕ್ಷ್ಮೀ ಜಿ ಪ್ರಸಾದರು ವೃತ್ತಿಯಲ್ಲಿ ದಕ್ಷ ಸಮರ್ಥ  ಉಪನ್ಯಾಸಕರಾಗಿದ್ದುಕೊಂಡು  ಪ್ರವೃತ್ತಿಯಲ್ಲಿ ಸಂಶೋಧಕರು ಹಾಗೂ  ಲೇಖಕರು  ಆಗಿದ್ದಾರೆ  .ಇವರು  ಸರಳತೆ ,ಕ್ರಿಯಾಶೀಲತೆ ಹಾಗು ಕವಿ ಹೃದಯದ ಕಾಳಜಿ ಹೊಂದಿದ್ದು  ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಭರವಸೆಯ ಬರಹಗಾರರಾಗಿದ್ದಾರೆ

 ಕನ್ನಡ ,ಹಿಂದಿ ಮತ್ತು  ಸಂಸ್ಕೃತ ಈ ಮೂರು ಭಾಷೆಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ರ‌್ಯಾಂಕ್ ಹಾಗೂ ಚಿನ್ನದ ಪದಕಗಳೊಂದಿಗೆ  ಪಡೆದು ,ತುಳು ಸಂಸ್ಕೃತಿ ಬಗ್ಗೆ ಅಧ್ಯಯನ ಮಾಡಿ ಎಂಫಿಲ್ ಮತ್ತು ಎರಡು ಡಾಕ್ಟರೇಟ್ ಪದವಿಗಳನ್ನು ಗಳಿಸಿಕೊಂಡ ಪ್ರತಿಭಾನ್ವಿತೆಯಾಗಿದ್ದಾರೆ

 

ಡಾ.ಲಕ್ಷ್ಮೀ ಜಿ ಪ್ರಸಾದರ ಮಾಯ ಮತ್ತು ಜೋಗದ ಬೆಳಕಿನಲ್ಲಿ "ಕರಾವಳಿಯ ಸಾವಿರದೊಂದು ದೈವಗಳು" ಎಂಬ  ಒಂದು ಸಾವಿರದ ಇನ್ನೂರ ಐವತ್ತೊಂದು ದೈವಗಳ ಮಾಹಿತಿ ಇರುವ , ಸಾವಿರಕ್ಕಿಂತ ಹೆಚ್ಚಿನ ಪುಟಗಳಿರುವ ಈ ಬೃಹತ್ ಗ್ರಂಥವು ಕನ್ನಡ-ತುಳು ಸಂಶೋಧನಾ ಕ್ಷೇತ್ರದಲ್ಲಿ ಅಪರೂಪದಲ್ಲಿ ಅಪರೂಪದ್ದಾಗಿದೆ

ಕನ್ನಡ ತುಳು ಮಲೆಯಾಳ ಕೊಡವ ಪರಿಸರದ ವಿವಿಧ ದೈವಗಳ ಸಮಗ್ರ ಚರಿತ್ರೆಯನ್ನು  ಅಧ್ಯಯನ ಮಾಡಿ ಈ ಗ್ರಂಥದಲ್ಲಿ  ಅತ್ಯಂತ ಮೌಲಿಕವಾಗಿ ಬರೆದಿದ್ದಾರೆ .ಇಲ್ಲಿ ತಿಮ್ಮಪ್ಪ ನಾಯಕ ಬಸಪ್ಪ ನಾಯಕ ಸೇರಿದಂತೆ  ಅನೇಕ ಐತಿಹಾಸಿಕ ಪುರುಷರು ದೈವತ್ವ ಪಡೆದು ಆರಾಧಿಸಲ್ಪಡುವ ಬಗ್ಗೆ ಸಚಿತ್ರ ಮಾಹಿತಿ ನೀಡಿದ್ದಾರೆ

 

  ಕರ್ನಾಟಕ ಪಶ್ಚಿಮ‌ ಕರಾವಳಿಯಿಂದ ಕೇರಳದ ಕೊಟ್ಟಾಯಂ ತನಕ ,ಕೊಡಗು ಸೇರಿದಂತೆ  ದೈವಗಳ ಚರಿತ್ರೆಯನ್ನು  ಸುದೀರ್ಘ ಇಪ್ಪತ್ತೊಂದು ವರ್ಷಗಳ ಕಾಲ ಕ್ಷೇತ್ರ ಕಾರ್ಯ ಆಧರಿತವಾಗಿ ಸಮಗ್ರ  ಸಂಶೋಧನೆ  ಮಾಡಿ ಈ ಗ್ರಂಥವನ್ನು ಡಾ.ಲಕ್ಷ್ಮೀಯವರು   ರಚಿಸಿದ್ದು  ಇದು ಸೂಕ್ತ ವಿಶ್ಲೇಷಣೆಗಳೊಂದಿಗೆ   1253 ದೈವಗಳ ಮಾಹಿತಿಯನ್ನು   ಹೊಂದಿರುವ ದೈವಾರಾಧನೆಯ   ವಿಶ್ವಕೋಶ  ಎನ್ನಬಹುದಾದ ಗ್ರಂಥವಾಗಿದೆ.. ದೈವಾರಾಧನೆಯ ಮಾಹಿತಿ ಕಣಜವಾಗಿದೆ

ಇದೊಂದು  ಕರಾವಳಿಯ ಜಾನಪದ ಸಾಂಸ್ಕೃತಿಕ ಅಧ್ಯಯನ ಕ್ಷೇತ್ರದಲ್ಲಿ ಒಂದು ಮೈಲುಗಲ್ಲಾಗಿದೆ

ಇಂಥಹ ಅಪಾರ ಪರಿಶ್ರಮ ಬೇಡುವ ಹಾಗೂ ಸಾಕಷ್ಟು ಖರ್ಚು ವೆಚ್ಚಗಳಿರುವ ಅಧ್ಯಯನವನ್ನು ಯಾವುದೇ ವಿಶ್ವವಿದ್ಯಾಲಯ ಅಕಾಡೆಮಿ ಸಂಘ ಸಂಸ್ಥೆಗಳ ಅನುದಾನವಿಲ್ಲದೆ  ತನ್ನ ವೇತನವನ್ನು ಇದಕ್ಕಾಗಿ ವ್ಯಯ ಮಾಡಿ  ಸ್ವತಃ ಪ್ರಕಟಿಸುತ್ತಿರುವ ಡಾ.ಲಕ್ಷ್ಮೀ ಜಿ ಪ್ರಸಾದರಿಗೆ  ಪೂರ್ಣ ಯಶಸ್ಸು ಸಿಗಲಿ ,ಉತ್ತರೋತ್ತರ ಅಭಿವೃದ್ಧಿಯಾಗಲಿ ಎಂದು ಹಾರೈಸುತ್ತೇನೆ

                           ದಯಾನಂದ ಸ್ವಾಮಿ ಬಿಎಮ್ ಎಸ್

                          ಪ್ರಾಂಶುಪಾಲರು ,ಸರ್ಕಾರಿ ಪಿಯು ಕಾಲೇಜು ,ಬ್ಯಾಟರಾಯನಪುರ ಬೆಂಗಳೂರು 


ಡಾ. ಲಕ್ಷ್ಮೀ ಜಿ. ಪ್ರಸಾದ್ ಇವರು ವೃತ್ತಿಯಿಂದ ಸಮರ್ಥ ಉಪನ್ಯಾಸಕರು.ವಿದ್ಯಾರ್ಥಿಗಳ ಮೇಲೆ ಅವರ ವೃತ್ತಿಪರ ಕಾಳಜಿ ಅಮೋಘ. ಸನ್ಮಾನಗಳಿಂದ ಬರುವ ಹಣವನ್ನು ತಮ್ಮ ವಿದ್ಯಾರ್ಥಿಗಳಿಗೆ ಬಹುಮಾನ ರೂಪದಲ್ಲಿ ವಿತರಿಸುವ ಅವರ ಪ್ರಬುದ್ಧತೆ ಅದ್ಭುತವಾದುದು. ಪ್ರವೃತ್ತಿಯಲ್ಲಿ ಸ್ವತಃ ಸಂಶೋಧನೆ ಹಾಗೂ ಬರಹಗಳಿಂದ ಜನಮನಗಳಲ್ಲಿ ತಮ್ಮ ಅಸಾಧಾರಣ ಪ್ರತಿಭೆ, ಪಾಂಡಿತ್ಯಛಾಪು ಮೂಡಿಸಿದ್ದಾರೆ. ಪ್ರಸ್ತುತ ಅವರ "ಕರಾವಳಿಯ ಸಾವಿರದೊಂದು ದೈವಗಳು" ಒಂದು ಅದ್ಭುತ ಸಾಧನೆ.ಅವರಿಗೆ ನನ್ನ ಶುಭಾಶಯಗಳು.


 ಶ್ರೀಯುತ ದಯಾನಂದ ಸ್ವಾಮಿ ,ಪ್ರಾಂಶುಪಾಲರು ಸರ್ಕಾರಿ ಪಿಯು ಕಾಲೇಜು, ಬ್ಯಾಟರಾಯನಪುರ ಬೆಂಗಳೂರು 

ಕರಾವಳಿಯ ಸಾವಿರದೊಂದು ದೈವಗಳು : ಉಪನ್ಯಾಸಕಿ ಮಂಜುಳಾ ಭಾರದ್ವಾಜ್ ಅವರೊಂದಿಗೆ


ಈ ಪುಸ್ತಕದ ರೂವಾರಿ ನನ್ನ ಸಹೋದ್ಯೋಗಿ....ಅವರ ಅವಿರತ ಪರಿಶ್ರಮದ ಫಲವಿದು.ಈ ಪುಸ್ತಕವು ದೈವಗಳ ಬಗೆಗಿನ encyclopaedia ಆಗಿದೆ.ಇವರ ಸಾಹಿತ್ಯ ಸೇವೆ ಹೀಗೆ ಮುಂದುವರೆದು ವಿಶ್ವದಾದ್ಯಂತ ದೈವಗಳ ಕಂಪು ಪಸರಿಸಲಿ ಮತ್ತು ಕನ್ನಡದ ಕ��ಪು ಮೊಳಗಲಿ...ಶುಭವಾಗಲಿ ಗೆಳತಿ.- ಮಂಜುಳಾ ಭಾರದ್ವಾಜ್ ,ಗಣಿತ ಉಪನ್ಯಾಸಕರು ಸರ್ಕಾರಿ ಪಿಯು ಕಾಲೇಜು ಬ್ಯಾಟರಾಯನಪುರ ಬೆಂಗಳೂರು 

ಕರಾವಳಿಯ ಸಾವಿರದೊಂದು ದೈವಗಳು: ನಮ್ಮ ಹೆಮ್ನೆಯ ಓದುಗರಾದ ಯೋಗೀಶ್ ರಾವ್ ಚಿಗುರುಪಾದೆ


 

ವೃತ್ತಿಯಲ್ಲಿ ದಕ್ಷ ಶಿಕ್ಷಕರಾಗಿರುವ ಯಕ್ಷಗಾನ ಕಲಾವಿದರೂ ವಿದ್ವಾಂಸರೂ ಅಗಿರುವ ನಮ್ಮ ಊರಿನ ಆತ್ಮೀಯರಾದ ಯೋಗೀಶ ರಾವ್ ಚಿಗುರುಪಾದೆ ಅವರ ಅಭಿಪ್ರಾಯ ಇಲ್ಲಿದೆ  

ಡಾ.ಲಕ್ಷ್ಮೀ.ಜಿ.ಪ್ರಸಾದ್ ಅವರ ಕರಾವಳಿಯ ಸಾವಿರದೊಂದು ದೈವಗಳು ಕೃತಿ ದೈವಗಳಬಗ್ಗೆ ಅಧ್ಯಯನಾಸಕ್ತರಿಗೆ ಮಹತ್ವದ ಕೃತಿ.

ಸಾವಿರದ ಇನ್ನೂರ ಇಪ್ಪತ್ತೆಂಟು ದೈವಗಳ ಮಾಹಿತಿಯುಳ್ಳ ಹೊತ್ತಗೆ. ಅಧ್ಯಯನಾಸಕ್ತರು ಈ ಕೃತಿಯ ಬೆಳಕಿನ ಆಧಾರದಲ್ಲಿ ಇನ್ನಷ್ಟು ಅಧ್ಯಯನ ಕೈ ಗೊಳ್ಳಬಹುದು. ಓರ್ವ ಮಹಿಳೆ ಸ್ವತಹ ಕ್ಷೇತ್ರ ಕಾರ್ಯಮಾಡಿ ಇಷ್ಟು ಮಾಹಿತಿಯನ್ನು ಕಲೆಹಾಕಿದ್ದು ಅತೀ ಸವಾಲಿನ ಕಾರ್ಯ . ಪ್ರಶಂಸಾರ್ಹ. ಒಂದು ಎರಡು ದಿನದಲ್ಲಿ ಓದಿ ಮುಗಿಸಬಹುದಾದ ಕೃತಿ ಇದಲ್ಲ. ಪ್ರತೀ ಮನೆಯ ಪುಸ್ತಕ ಭಂಡಾರದಲ್ಲಿ ಮಾತ್ರವಲ್ಲ ವಿದ್ಯಾಸಂಸ್ಥೆಗಳ ಪುಸ್ತಕ ಭಂಡಾರದಲ್ಲಿ ಕಾಪಿಡಬೇಕಾದ ಪುಸ್ತಕ. ಅಗತ್ಯಕ್ಕನುಗುಣವಾಗಿ ಮಾಹಿತಿ ಬಳಸಿ ಕೊಳ್ಳಬಹುದು. ಒಂದರ್ಥದಲ್ಲಿ ದೈವಗಳ ಅಧ್ಯಯನಕ್ಕೆ ಇದೊಂದು ವಿಶ್ವಕೋಶ ವಿದ್ದಹಾಗೆ. ಮುಂದಿನ ದೈವಾರಾಧನೆಯ ಅಧ್ಯಯನ ಕಾರರು ಈ ಗ್ರಂಥವನ್ನು ಬಳಸಿಕೊಳ್ಳದಿದ್ದಲ್ಲಿ ಅಧ್ಯಯನ ಅಪೂರ್ಣವೇ ಸರಿ. ಕೃತಿ ಕಾರರರಿಗೆ ಅಭಿನಂದನೆಗಳು.- ಯೋಗೀಸ್ ರಾವ್ ಚಿಗುರುಪಾದೆ 

ಕರಾವಳಿಯ ಸಾವಿರದೊಂದು ದೈವಗಳು : ನಮ್ಮ ಹೆಮ್ಮೆಯ ಓದುಗರಾದ ಸುಕೇಶ್ ಶೆಟ್ಟಿ


 ಸುಕೇಶ್ ಶೆಟ್ಟಿಯವರ ಮಗಳು ಕುತೂಹಲ ದಿಂದ ನೋಡುತ್ತಿದ್ದಾಳೆ 

Sunday, 10 December 2023

ಕರಾವಳಿಯ ಸಾವಿರದೊಂದು ದೈವಗಳು :ಐತಿಹಾಸಿಕ ಮಹತ್ವದ ಜಾನಪದ ಅಧ್ಯಯನ ಗ್ರಂಥ  ಡಾ. ಬಿ. ಜನಾರ್ದನ ಭಟ್





 ಐತಿಹಾಸಿಕ ಮಹತ್ವದ 

ಜಾನಪದ ಅಧ್ಯಯನ ಗ್ರಂಥ

 ಡಾ. ಬಿ. ಜನಾರ್ದನ ಭಟ್


ತುಳು ಜಾನಪದ ಸಂಶೋಧಕಿ, ಮುಖ್ಯವಾಗಿ ದೈವಾರಾಧನೆಯ ಬಗ್ಗೆ ಅಭೂತಪೂರ್ವ ಕ್ಷೇತ್ರಕಾರ್ಯ ಮಾಡಿ ಮಾಹಿತಿಗಳನ್ನು ಸಂಗ್ರಹಿಸಿರುವ ಡಾ. ಲಕ್ಷ್ಮೀ ಜಿ. ಪ್ರಸಾದ್ ಅವರ ಮಹತ್ವದ ಕೃತಿ ‘ಕರಾವಳಿಯ ಸಾವಿರದೊಂದು ದೈವಗಳು’ ಕೃತಿಗೆ ಒಂದು ನುಡಿಸೇಸೆ ಇದು. 

ಈ ಕೃತಿಯ ಹಿಂದಿರುವ ಸಂಶೋಧನೆ, ದಾಖಲಾತಿ, ಅಧ್ಯಯನ, ವಿಶ್ಲೇಷಣೆ, ಬರವಣಿಗೆ ಮತ್ತು ಗ್ರಂಥರಚನೆ – ಈ ಪ್ರಕ್ರಿಯೆಯೇ ಒಂದು ಐತಿಹಾಸಿಕ ಮಹತ್ವದ ಘಟನೆÀ. ತುಳುನಾಡಿನಲ್ಲಿ ಸಾವಿರದಷ್ಟು ದೈವ ಭೂತಗಳಿಗೆ ಆರಾಧನೆ ಇದೆ ಎನ್ನುವುದು ಒಂದು ಅಂದಾಜಿನÀ ಹೇಳಿಕೆಯಾಗಿ ಚಾಲ್ತಿಯಲ್ಲಿತ್ತು. ಮತ್ತು ಅದು ಸರಿಯೂ ಆಗಿತ್ತು. ಆದರೆ ಅದನ್ನು ಅಧ್ಯಯನದ ಮೂಲಕ ಖಚಿತಪಡಿಸಲಾಗಿರಲಿಲ್ಲ. ಅದನ್ನು ಸಂಶೋಧನೆಯ ಮೂಲಕ ಖಚಿತ ಪಡಿಸಿ, ದಾಖಲಿಸಿರುವ ಕಾರಣಕ್ಕಾಗಿ ಇದು ಈ ಕ್ಷೇತ್ರದಲ್ಲಿ ಒಂದು ಐತಿಹಾಸಿಕ ಮಹತ್ವದ ಪ್ರಕಟಣೆಯಾಗಿದೆ. ಎರಡನೆಯದಾಗಿ ಈ ಕ್ಷೇತ್ರದಲ್ಲಿ ನಡೆದ ಅಧ್ಯಯನಾಧಾರಿತ ಕೃತಿಗಳ ಪ್ರಕಟಣೆಯ ಆಯಾಮವನ್ನು ನೋಡಿದಾಗಲೂ ಇದೊಂದು ಮಹತ್ವದ ಹೆಜ್ಜೆಯಾಗಿದೆ. ವಿಶ್ವಕೋಶದ ಮಾದರಿಯಲ್ಲಿ ದೈವ, ಭೂತಗಳ ಹಿನ್ನೆಲೆ, ಕಥೆ, ಮಹತ್ವ ಇತ್ಯಾದಿಗಳನ್ನು ಸಂಗ್ರಹಿಸಿ, ವಿಶ್ಲೇಷಿಸಿ ನೀಡಿರುವುದು ಮುಂದಿನ ಅಧ್ಯಯನಕ್ಕೆ ಸಹಾಯಕವಾಗಿದೆ.

ಖ್ಯಾತ ತುಳು-ಕನ್ನಡ ವಿದ್ವಾಂಸ ಡಾ. ವಾಮನ ನಂದಾವರ ಅವರು ಡಾ. ಲಕ್ಷ್ಮೀ  ಪ್ರಸಾದ್ ಅವರ ಗ್ರಂಥವೊಂದಕ್ಕೆ (‘ನಾಗ ಬ್ರಹ್ಮ ಮತ್ತು ಕಂಬಳ - ಒಂದು ವಿಶ್ಲೇಷಣಾತ್ಮಕ ಅಧ್ಯಯನ) ಮುನ್ನುಡಿ ಬರೆಯುತ್ತಾ ತುಳುನಾಡಿನ ದೈವ ಭೂತಗಳ ‘ಸಾವಿರದ ಲೆಕ್ಕಾಚಾರದ’ ದಾರಿಯನ್ನು ಹೀಗೆ ಗುರುತಿಸಿದ್ದರು: “ಎ.ಸಿ ಬರ್ನೆಲ್ (1894-1897) ನಡೆಸಿದ ಅಧ್ಯಯನದ ಫಲವಾಗಿ, ‘ಖಿhe ಆeviಟ ತಿoಡಿshiಠಿ oಜಿ  ಣhe ಖಿuಟuvಚಿs’ ಈ ಸಂಶೋಧನ ಪ್ರಬಂಧ ಮಾಲಿಕೆಯಲ್ಲಿ ಪ್ರಮುಖ ಭೂತಗಳ ಒಂದು ಪಟ್ಟಿಯಿದೆ. ಈ ಪಟ್ಟಿಯನ್ನು ಸಿದ್ಧಮಾಡಿ ಗ್ರಂಥದಲ್ಲಿ ಸೇರಿಸಿದವರು ಎ. ಮೇನ್ನರ್. ಈ ಪಟ್ಟಿಯಲ್ಲಿ 133 ಭೂತಗಳ ಹೆಸರುಗಳಿವೆ. ಡಾ. ಬಿ. ಎ. ವಿವೇಕ ರೈ (1985) ಅವರ ‘ತುಳು ಜನಪದ ಸಾಹಿತ್ಯ’ ಕೃತಿಯಲ್ಲಿ 274 (ಪು.35-38)  ಭೂತಗಳ ಹೆಸರುಗಳಿವೆ. ಡಾ. ಕೆ. ಚಿನ್ನಪ್ಪ ಗೌಡ (1990) ಅವರ, ‘ಭೂತಾರಾಧನೆ ಜಾನಪದೀಯ ಅಧ್ಯಯನ’ ಗ್ರಂಥದಲ್ಲಿ 360 ಭೂತಗಳ ಪರಿಷ್ಕೃತ ಪಟ್ಟಿಯಿದೆ (ಪು.34-39). ‘ಸಾವಿರದೊಂದು ಭೂತಗಳ ಬೆನ್ನು ಹಿಡಿದಾಗ’ ಎನ್ನುವ ಲೇಖನದಲ್ಲಿ ರಘುನಾಥ ಎಂ. ವರ್ಕಾಡಿ (2011, ಪು.65-79) ಅವರ ‘ಕಡಂಬಾರ ಮಲ್ರಾಯೆ’ ಕೃತಿಯಲ್ಲಿ 407 ಭೂತಗಳ ಹೆಸರುಗಳು ದಾಖಲಾಗಿವೆ. ಈ ಲೆಕ್ಕಾಚಾರ ತೀರ ಈಚೆಗಿನದು.


“ನಾನು ನನ್ನ ಜನಪದ ಸುತ್ತಮುತ್ತ ಕೃತಿಯಲ್ಲಿ ದಾಖಲಿಸಿರುವಂತೆ ಮತ್ತು ಕಂಡುಕೊಂಡಂತೆ ‘ಕಂಡಿಗೆತ್ತಾಯ’ (ಬಜ್ಪೆ-ಕೊಳಂಬೆ), ‘ನಡ್ಡೊಡಿತ್ತಾಯ’ (ಕಾರಿಂಜೆ), ‘ಮುಕುಡಿತ್ತಾಯಿ’ ಈ ಮೂರು ಭೂತಗಳ  ಹೆಸರುಗಳು ಈಗಾಗಲೇ ಮಾಡಿರುವ ಪಟ್ಟಿಯಲ್ಲಿ ಇಲ್ಲ. ಹಾಗಾಗಿ ಅವು ಸೇರಿದಾಗ: 407+3=410 ಭೂತಗಳ ಲೆಕ್ಕ ಸಿಗುತ್ತದೆ. ತುಳುವರು ಸಾವಿರದೊಂದು (ಸಾರತ್ತೊಂಜಿ) ಭೂತಗಳನ್ನು ನಂಬಿಕೊಂಡು ಬಂದ ಪರಂಪರೆಯವರು. ಇಲ್ಲೀಗ 133 ಭೂತಗಳ ಈ ಸಂಖ್ಯೆ ಹೆಚ್ಚಾಗುತ್ತಿರುವುದೆಂದರೆ ಭೂತಗಳ ಸಂತಾನ ಅಭಿವೃದ್ಧಿಯಾಗಿದೆ ಎಂದರ್ಥವಲ್ಲ. ಒಂದಾನೊಂದು ಕಾಲದಲ್ಲಿ ಸಾವಿರದೊಂದು ದೈವಗಳನ್ನು ನಂಬಿಕೊಂಡು ಬರುತಿದ್ದರೂ ಕಾಲಕ್ರಮೇಣ ಈ ನಂಬಿಕೆ ಸಡಿಲಾಗಿ ಅವುಗಳ ಸಂಖ್ಯೆ ಜನಮಾನಸದ ನೆನಪಿನಲ್ಲಿ ಕಡಿಮೆಯಾಗಿರಬಹುದು. ಅಧ್ಯಯನ ಮತ್ತು ಸಂಶೋಧನೆಗಳಿಂದಾಗಿ ಅವುಗಳ ಹೆಸರುಗಳು ಮತ್ತೆ ಬೆಳಕಿಗೆ ಬಂದುವು. ಹಾಗೆ ಇದೀಗ ಡಾ. ಲಕ್ಷ್ಮೀ  ವಿ. ಅವರ ಈ ಸ್ವರೂಪದ ಶೋಧನೆಯಿಂದಾಗಿ 132 ದೈವಗಳು ನಮ್ಮ ತಿಳುವಳಿಕೆಯ ಮಜಲಿಗೆ ಬಂದಿವೆ. ಆಗ 410+132=542 ಎಂದಾಗುವುದು. ಇನ್ನು ಮುಂದೆ ಅವುಗಳ ಲೆಕ್ಕಕೊಡುವಾಗ 542ಕ್ಕಿಂತ ಕುಂದು ಬರಬಾರದು.  ಶೋಧನೆಗೆ ಇನ್ನೂ ಎಡೆಯಿದೆ. ಸಾವಿರದೊಂದು ಗುರಿಯೆಡೆಗೆ ಸಾಗುವ ಹಾದಿಯಿದೆ.”

ಡಾ. ಲಕ್ಷ್ಮೀ  ಪ್ರಸಾದ್ ಅವರು ಬರ್ನೆಲ್, ಮೇನರ್ ಅವರ ದಾರಿಯಲ್ಲಿ ನಡೆದಿದ್ದಾರೆ ಎಂದು ಡಾ. ವಾಮನ ನಂದಾವರ ಹೇಳಿದ್ದರು (‘ಬರ್ನೆಲ್ ಮೇನ್ನರ್ ತೋರಿಸಿದ ಹಾದಿಯಲ್ಲಿ  ಸಾವಿರದೊಂದು ಗುರಿಯೆಡೆಗೆ’). ‘ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ:  ಒಂದು ವಿಶ್ಲೇಷಣಾತ್ಮಕ ಅಧ್ಯಯನ’ ಗ್ರಂಥ ಡಾ. ಎಸ್. ನಾಗರಾಜು ಅವರ ಮಾರ್ಗದರ್ಶನದಲ್ಲಿ ಹಂಪಿ ಕನ್ನಡ ವಿಶ್ವ ವಿದ್ಯಾಲಯಕ್ಕೆ, ಬೆಂಗಳೂರಿನ ಬಿ. ಎಂ. ಶ್ರೀ ಸ್ಮಾರಕ  ಪ್ರತಿμÁ್ಠನದ ಎಂ. ವಿ. ಸೀ. ಸ್ನಾತಕೋತ್ತರ ಸಂಶೋಧನ ಕೇಂದ್ರದ ಮೂಲಕ ಡಾ. ಲಕ್ಷ್ಮೀ ಪ್ರಸಾದ್ ಅವರು ಸಲ್ಲಿಸಿದ ಪಿಎಚ್.ಡಿ. ಸಂಪ್ರಬಂಧ. ಆ ಗ್ರಂಥಕ್ಕೆ ಮುನ್ನುಡಿ ಬರೆಯುತ್ತಾ, ಸಾವಿರ ದೈವಗಳ ಹೆಸರುಗಳ ಪಟ್ಟಿಗೆ ಇರುವ ಮಹತ್ವವನ್ನು ಡಾ. ವಾಮನ ನಂದಾವರ ಅಂದು ಸೂಚಿಸಿದ್ದರು. ಮುಂದೆ ನಡೆಯಬೇಕಾದ ದಾರಿಯನ್ನು ಸೂಚಿಸಿದ್ದರು. ಡಾ. ಲಕ್ಷ್ಮೀ ಪ್ರಸಾದ್ ಅದನ್ನು ತಮಗೆ ಮುಂದಿನ ಅಧ್ಯಯನಕ್ಕೆ ತೋರಿದ ದಾರಿ ಎಂದು ಪರಿಗಣಿಸಿ ಆ ನಿಟ್ಟಿನಲ್ಲಿ ಸಂಶೋಧನೆ, ಮಾಹಿತಿ ಸಂಗ್ರಹವನ್ನು ಮುಂದುವರಿಸಿ ಈ ಗುರಿಯನ್ನು ತಲುಪಿದ್ದಾರೆ, ಮತ್ತು ಇನ್ನೂ ಸ್ವಲ್ಪ ಮುಂದೆಯೇ ಹೋಗಿದ್ದಾರೆ. ಈ  

ಕೃತಿಯಲ್ಲಿ ಸಾವಿರದ ಇನ್ನೂರರಷ್ಟು ದೈವಗಳ ಮಾಹಿತಿ ನೀಡಿ, ಕಾರವಾರದಿಂದ ಆರಂಭಿಸಿ ಕಣ್ಣನ್ನೂರು ತನಕದ ಕರಾವಳಿಯಲ್ಲಿ ಸಾವಿರಕ್ಕಿಂತ ಹೆಚ್ಚು ದೈವಗಳಿಗೆ ಆರಾಧನೆ ಇದೆ ಎಂಬುದನ್ನು ದಾಖಲಿಸಿದ್ದಾರೆ. 


“..... ‘ತುಳುನಾಡಿನ ಅಪೂರ್ವ ಭೂತಗಳು’, ‘ಬೆಳಕಿನೆಡೆಗೆ’ ಸಂಶೋಧನಾ ಲೇಖನಗಳು. ‘ತುಳು ಜನಪದ ಕವಿತೆಗಳು’, ‘ಚಂದಬಾರಿ ರಾಧೆ ಗೋಪಾಲ ಮತ್ತು ಇತರ ಅಪೂರ್ವ ಪಾಡ್ದನಗಳು’, ‘ಕಂಬಳ ಕೋರಿ ನೇಮ’ .... ಹೀಗೆ ಒಟ್ಟು ಹದಿನಾಲ್ಕು ಕೃತಿಗಳು ಇವರ ‘ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ: ಒಂದು ವಿಶ್ಲೇಷನಾತ್ಮಕ ಅಧ್ಯಯನ’ಕ್ಕೆ ದೊಡ್ಡ ಗಂಟಿನ ಮೊದಲ ಬೌದ್ಧಿಕ ಬಂಡವಾಳವಾಗಿರುವುದು ನಿಜ....... ಇಂತಹ ಸಂಶೋಧನೆಯ ಮತ್ತು ಗ್ರಂಥಗಳ ಪ್ರಕಟಣೆಯ ಕೆಲಸಗಳಿಗೆ ಕೇವಲ ಅಧ್ಯಯನ ಆಸಕ್ತಿ ಮಾತ್ರ ಇದ್ದರೆ ಸಾಕಾಗುವುದಿಲ್ಲ  ಜೊತೆಗೆ ಉತ್ಸಾಹ ಮತ್ತು ಛಲಗಳ ಮನೋಧರ್ಮದ ದೃಢ ಸಂಕಲ್ಪವೂ ಬೇಕು. ಜೊತೆಗೆ ಧೈರ್ಯವೂ ಬೇಕು. ಇರುವ ಮತ್ತು ಸಿಗುವ ಅವಕಾಶಗಳ ಸದುಪಯೋಗಕ್ಕಾಗಿ ಅವರ ಮನಸ್ಸು ಸದಾ ತುಡಿಯುತ್ತಲೂ ಇರಬೇಕು. ಇಲ್ಲದೆ ಹೋದರೆ ಬೌದ್ಧಿಕ ರಂಗದಲ್ಲಿ ಅಧ್ಯಯನ ಸಾಧನೆಯ ಉತ್ಪನ್ನಗಳು, ಸಾರಸ್ವತಲೋಕದಲ್ಲಿ ಸಾಧನೆಗಳು ಲಭ್ಯವಿರುವುದಿಲ್ಲ. ತರಗತಿಯಲ್ಲಿ ಕಲಿಸುವ ಜೊತೆಯಲ್ಲೇ ಅಧ್ಯಾಪನ. ಪ್ರಾಧ್ಯಾಪನ ಕಾಯಕದಲ್ಲಿ ಕಲಿಯುವ ಅವಕಾಶಗಳೂ ಹೇರಳ. ಇಂತಹ ಸಂದರ್ಭಗಳನ್ನು ಹಗುರವಾಗಿ ಕಾಣದೆ ಲಕ್ಷ್ಮೀಯಂತಹವರು ಗಂಭೀರವಾಗಿ ತೆಗೆದುಕೊಳ್ಳವುದರಿಂದಲೇ ಈ ತರದ ಕೆಲಸಗಳು ಸಾಧನೆಯಾಗಿ ಪರಿವರ್ತನೆಗೊಳ್ಳುತ್ತವೆ. ಇಲ್ಲಿ ಕೆಲಸ ಮತ್ತು ಬಿಡುವು ಪರಸ್ಪರ ಹೊಂದಾಣಿಕೆಯಲ್ಲೇ ಸಾಗುತ್ತಿರುತ್ತವೆ. ಹಾಗಿದ್ದಾಗಲೇ ಕಟ್ಟುವ ಕೆಲಸ ನಡೆದು ಉತ್ಪನ್ನದ ಸಾಧನೆಯಾಗಿ ಸಿದ್ಧಿಸುತ್ತದೆ. ಹೀಗೆ ಒಂದೊಂದು ಹಂತಗಳಲ್ಲಿ ಒಂದೊಂದು ಹಿಡಿಯಷ್ಟು ಹೊತ್ತಗೆಗಳನ್ನು ಪ್ರಕಟಿಸಿ ಇವರು ನಿಜ ಅರ್ಥದಲ್ಲಿ ಪ್ರಕಟವಾಗಿದ್ದಾರೆ ಮತ್ತು ಈವರೆಗೆ ಅಧ್ಯಯನ ನಡೆಯದ ಕ್ಷೇತ್ರಗಳಲ್ಲಿ ಸಾಕಷ್ಟು ಕೈಯಾಡಿಸಿದ್ದಾರೆ. ಯಾವಾಗ ಇಂತಹ ಕೈಯಾಡಿಸುವ ಕೆಲಸ ಸಾಧ್ಯವಾಗುತ್ತದೆ ಎಂದರೆ ಅಲ್ಲೆಲ್ಲ ಹಾಗೆಯೇ ಅಧ್ಯಯನ - ಸಂಶೋಧನ ಕ್ಷೇತ್ರಕಾರ್ಯಗಳಲ್ಲಿ ಕಾಲಾಡಿಸುವ ಕಾಯಕವೂ ನಡೆಯುತ್ತಿರಬೇಕಾಗುತ್ತದೆ.” - ಎಂದು ಡಾ. ವಾಮನ ನಂದಾವರ ಅವರು ಇವರ ಸಾಧನೆಯ ಮಹತ್ವವನ್ನು, ಆ ದಾರಿಯಲ್ಲಿರುವ ಸವಾಲು, ಸಾಧ್ಯತೆಗಳನ್ನು ಗುರುತಿಸಿದ್ದಾರೆ. ಈ ಸಂಪುಟಕ್ಕೂ ಇವೇ ಮಾತುಗಳು ಸಲ್ಲುವುದರಿಂದ ಡಾ. ನಂದಾವರ ಅವರ ಮಾತುಗಳನ್ನೇ ನೆನಪಿಸಿದ್ದೇನೆ.  


ತುಳು ನಾಡಿನಲ್ಲಿ ಎಷ್ಟು ದೈವಗಳಿಗೆ ಆರಾಧನೆ ಇದೆ ಎಂಬ ಬಗ್ಗೆ ಖಚಿತವಾದ ಉತ್ತರ ಸಿಗುತ್ತಿರಲಿಲ್ಲ. ಡಾ.ಲಕ್ಷ್ಮೀ ಜಿ. ಪ್ರಸಾದ್ ಅವರು ಸತತ ಅಧ್ಯಯನ ಮಾಡಿ 2016 ರಲ್ಲಿ 1435  ದೈವಗಳ ಪಟ್ಟಿ ಮಾಡಿ ‘ಅಣಿ ಅರದಳ ಸಿರಿ ಸಿಂಗಾರ’ ಪುಸ್ತಕದಲ್ಲಿ ಪ್ರಕಟಿಸಿದರು. (ನಾನೂ ಆ ಗ್ರಂಥದ ಸಂಪಾದಕ ಮಂಡಳಿಯಲ್ಲಿದ್ದೆ). ಇತರ ಕೆಲವು ಅಪರೂಪದ ದೈವಗಳ ಕುರಿತ ಡಾ. ಲಕ್ಷ್ಮೀ ಜಿ. ಪ್ರಸಾದ್ ಅವರ ಕೆಲವು ಲೇಖನಗಳೂ ಅದರಲ್ಲಿದ್ದವು. ಅವರು ಅಂತರ್ಜಾಲದಲ್ಲಿರುವ ತಮ್ಮ ಜಾಲತಾಣದಲ್ಲಿಯೂ ದೈವ ಭೂತಗಳ ಮತ್ತು ವಿಶಿಷ್ಟ ಆರಾಧನೆಗಳ ಕುರಿತ ಬರಹಗಳನ್ನು ಪ್ರಕಟಿಸುತ್ತಿರುತ್ತಾರೆ.

ಪ್ರಸ್ತುತ ಪುಸ್ತಕ ಇವೆಲ್ಲವುಗಳಿಗಿಂತ ಮುಖ್ಯವಾದದ್ದು ಮತ್ತು ಶಾಶ್ವತವಾದದ್ದು. 


ಕಾರವಾರದಿಂದ ಕಣ್ಣಾನೂರು ತನಕ, ಕೊಡಗು ಸೇರಿದಂತೆ ಕರ್ನಾಟಕದ ಪಶ್ಚಿಮ ಕರಾವಳಿಯ ಕನ್ನಡ, ತುಳು, ಮಲೆಯಾಳ, ಕೊಡವ ಪರಿಸರದ ದೈವಗಳ ಅಧ್ಯಯನವನ್ನು ಮಾಡಿ ಮಾಹಿತಿ ಸಂಗ್ರಹಿಸಿರುವುದರಿಂದ ಇದಕ್ಕೆ ‘ಕರಾವಳಿಯ ಸಾವಿರದೊಂದು ದೈವಗಳು’ ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ‘ಸಾವಿರ’, ‘ಸಾವಿರದೊಂದು’, ‘ಸಾವಿರಾರು’ ಮುಂತಾದ ಪ್ರಯೋಗಗಳಲ್ಲಿ ‘ಸಾವಿರ’ ಅನ್ನುವುದು ಸಂಖ್ಯಾವಾಚಕ ಶಬ್ದವಲ್ಲ – ಅಥವಾ ಅದು ಮಾತ್ರವಲ್ಲ - ಗುಣವಾಚಕವೂ, ಆಲಂಕಾರಿಕವೂ ಆದ ಶಬ್ದ. ತುಳುವಿನಲ್ಲಿಯೂ ಅದೇ ರೀತಿಯ ಆಲಂಕಾರಿಕ ಶಬ್ದ ಅದು. ‘ಸಾರತ್ತೊಂಜಿ ದೈವೊಲು’ ಎಂಬುದು ವಾಡಿಕೆಯ ಮಾತು. ಇದರರ್ಥ ಸಾವಿರದ ಒಂದು ದೈವಗಳು ಮಾತ್ರ ಇವೆ ಎಂದರ್ಥವಲ್ಲ. ಹೆಚ್ಚೂ ಇರಬಹುದು ಕಡಿಮೆಯೂ ಇರಬಹುದು. 


ಡಾ.ಲಕ್ಷ್ಮೀ ಜಿ. ಪ್ರಸಾದ್ ಅವರು ಯಾವ ಅನುದಾನವನ್ನೂ ಪಡೆಯದೆ ತಮ್ಮ ಸ್ವಂತ ಹಣ, ಸಮಯ ಮತ್ತು ಶ್ರಮಗಳನ್ನು ಈ  ಕೆಲಸಕ್ಕೆ ನಿರಂತರ  ಇಪ್ಪತ್ತು ವರ್ಷಗಳ ಕಾಲ ಧಾರೆಯೆರೆದುದರ ಪರಿಣಾಮವಾಗಿ ದೊಡ್ಡ ಕಾರ್ಯ ಅವರಿಂದ ಸಾಧ್ಯವಾಗಿದೆ. ಇದರಲ್ಲಿ ಅವರು ಕರಾವಳಿಯಲ್ಲಿ ಆರಾಧನೆ ಇರುವ 1250 ರಷ್ಟು ದೈವಗಳ ಹೆಸರನ್ನು ಪಟ್ಟಿ ಮಾಡಿದ್ದಾರೆ. ಇದರಲ್ಲಿನ ಮಾಹಿತಿಯನ್ನು ದೈವನರ್ತಕ ಕಲಾವಿದರು ಹೇಳುವ ಪಾಡ್ದನಗಳನ್ನು, ಐತಿಹ್ಯಗಳನ್ನು ಮತ್ತು ಇತಿಹಾಸದ ಆಕರಗಳನ್ನು ಆಧರಿಸಿ ವಿಶ್ಲೇಷಣೆ ಮಾಡಿ ಬರೆದಿದ್ದಾರೆ. ಕಾಡ್ಯನಾಟ, ಪಾಣರಾಟ, ಸಪರ್ಂಕಳಿ, ಸಪರ್ಂತುಳ್ಳಲ್, ನಾಗಮಂಡಲಗಳಲ್ಲಿ ಆರಾಧನೆ ಪಡೆವ ದೈವಗಳ ಬಗ್ಗೆ ಕೂಡ ಸಂಕ್ಷಿಪ್ತವಾಗಿ ಮಾಹಿತಿ ನೀಡಿದ್ದಾರೆ. ಜೊತೆಗೆ ಭೂತ ಕೋಲವನ್ನು ಹೋಲುವ ಶ್ರೀಲಂಕಾದ ಕೋಲದ ಬಗ್ಗೆ ಮಾಹಿತಿ ನೀಡಿದ್ದಾರೆ. ದೈವಗಳ ಅಪರೂಪದ ಪೋಟೋಗಳು ಇವೆ.

ಹಿಂದೆ ಪ್ರಕಟಿತ ಕೃತಿಗಳಲ್ಲಿ ಅಧ್ಯಯನಕಾರರು ದಾಖಲಿಸಿರುವ ಮಾಹಿತಿಗಳನ್ನು ಬಳಸಿಕೊಂಡು ಡಾ. ಲಕ್ಷ್ಮೀ ಪ್ರಸಾದ್ ತಮ್ಮ ಬರಹಗಳ ಸೌಧವನ್ನು ಕಟ್ಟಿದ್ದಾರೆ.  ಸುಮಾರು ಮುನ್ನೂರು ಮುನ್ನೂರೈವತ್ತು ದೈವಗಳ ಮಾಹಿತಿ ಮೊದಲೇ ದಾಖಲಾಗಿತ್ತೆಂದು ಗುರುತಿಸಬಹುದು. ಅಂದರೆ ಇವರು ತಮ್ಮ ಸ್ವಂತ ಅಧ್ಯಯನದಿಂದ  ಸಂಗ್ರಹಿಸಿದ ಏಳುನೂರ ಐವತ್ತು ,ಎಂಟು ನೂರು ದೈವಗಳ ಮಾಹಿತಿಯನ್ನು ಸೇರಿಸಿ ಈ ಕಾರ್ಯಕ್ಕೆ ಒಂದು ಸಮಗ್ರತೆಯನ್ನು ತಂದುಕೊಟ್ಟಿದ್ದಾರೆ. ಇದರಲ್ಲಿ ಈ ತನಕ ಹೆಸರು ಕೂಡ ಎಲ್ಲೂ ದಾಖಲಾಗದ, ಅಧ್ಯಯನವಾಗದ  ಅನೇಕ ದೈವಗಳ ಹುಟ್ಟು ಮತ್ತು ಪ್ರಸಾರವೂ ದಾಖಲಾಗಿದೆ.  

ಇಲ್ಲಿ ಡಾ. ಲಕ್ಷ್ಮೀ ಪ್ರಸಾದ್ ಅವರು ಇಲ್ಲಿ ದೈವಗಳ ಪರಿಚಯ ಲೇಖನಗಳ ಜೋಡಣೆಗೆ ಎರಡು ಮಾರ್ಗಗಳನ್ನು ಅನುಸರಿಸಿದ್ದಾರೆ. ಒಂದು - ಅಕಾರಾದಿ ವರ್ಗೀಕರಣ ಮಾಡದೆ ಈ ದೈವಗಳನ್ನು ಚಾಮುಂಡಿ ಮತ್ತು ಸೇರಿಗೆ ದೈವಗಳು, ಗುಳಿಗ ಮತ್ತು ಸೇರಿಗೆ ದೈವಗಳು, ಭಗವತಿ ಮತ್ತು ಸೇರಿಗೆ ದೈವಗಳು, ಧೂಮಾವತಿ ದೈವಗಳು, ಪಂಜುರ್ಲಿ ಮತ್ತು ಸೇರಿಗೆ ದೈವಗಳು, ಹಾಯ್ಗುಳಿ ಮತ್ತು ಸೇರಿಗೆ ದೈವಗಳು, ಬ್ರಾಹ್ಮಣ ಮೂಲದ ದೈವಗಳು, ಮುಸ್ಲಿಂ ಮೂಲದ ದೈವಗಳು, ಹಿರಿಯಾಯ ದೈವಗಳು, ಮೂಲ ಪುರುಷ / ಕಾರಣವರ್ ದೈವಗಳು ಇತ್ಯಾದಿಯಾಗಿ ಬೇರೆ ಬೇರೆ ಅಧ್ಯಾಯಗಳ ಮೂಲಕ ವರ್ಗೀಕರಿಸಿರುವುದು. ಇದು ಒಂದು ಹೊಸ ಉಪಕ್ರಮ; ಈ ವಿಷಯದ ಅಧ್ಯಯನಕ್ಕೆ ಅನುಕೂಲವಾಗಿದೆ. ಎರಡು – ಮೇಲಿನಂತೆ ಯಾವುದೇ ಗುಂಪಿಗೆ ಸೇರದ ದೈವಗಳ ಬಗ್ಗೆ ಅಕಾರಾದಿಯಾಗಿ ಬರೆದು ಜೋಡಿಸಿದ್ದಾರೆ. ಒಟ್ಟು ಸುಮಾರು ಮುನ್ನೂರು ಅಧ್ಯಾಯಗಳು ಈ ಕೃತಿಯಲ್ಲಿದೆ.

ಅಕ್ಕ ಅರಸು ಎಂಬ ಜೈನ ಮಹಿಳೆ ದೈವವಾಗಿ ಅಕ್ಕಚ್ಚು ಎಂಬ ಹೆಸರಿನಲ್ಲಿ ದೈವವಾಗಿ ಆರಾಧನೆ ಪಡೆಯುವ ಬಗ್ಗೆ ಮೊದಲ ಅಧ್ಯಾಯದಲ್ಲಿ ಮಾಹಿತಿ ಇದ್ದರೆ ಕೊನೆಯ ಅಧ್ಯಾಯದಲ್ಲಿ ಹೌಟಲ ಗುತ್ತಿನ ಹೌಟಲ್ದಾಯ ಮತ್ತು ಮಾಳದ ಕೊರಗ ದೈವದ ಬಗ್ಗೆ ಕೊನೆಯ ಅಧ್ಯಾಯದಲ್ಲಿ ಮಾಹಿತಿ ಇದೆ.ಈ ನಡುವೆ ಸಾವಿರದ ಇನ್ನೂರು ದೈವಗಳ ಮಾಹಿತಿ ಇದೆ. 

ಈ ಕೃತಿಯ ಬಗ್ಗೆ ಡಾ.ಲಕ್ಷ್ಮೀ ಜಿ ಪ್ರಸಾದ್ ಅವರು ಹೇಳುವುದು ಹೀಗೆ: "ದಿನೇ ದಿನೇ ಹಿರಿಯ ತಲೆಗಳು ಪ್ರಕೃತಿಯಲ್ಲಿ ಲೀನವಾದಂತೆಲ್ಲ ಬಾಯ್ದೆರೆಯಾಗಿ ಪಾಡ್ದನ ಐತಿಹ್ಯ ರೂಪಗಳಲ್ಲಿ ನೂರಾರು ವರ್ಷಗಳಿಂದ ಹರಿದು ಬಂದ ಮಾಹಿತಿಗಳು ಆಧುನಿಕತೆಯ ಭರಾಟೆಯಲ್ಲಿ ಕಳೆದುಹೋಗುತ್ತಿವೆ. ಮೂಲ ಕಥಾನಕಗಳು ಕಳೆದು ಹೋಗಿ ಪುರಾಣದ ಕಥೆಗಳು ಸೇರ್ಪಡೆಯಾಗುತ್ತದೆ. ಹಾಗಾಗಿ ಈ ಸಾವಿರಕ್ಕಿಂತ ಹೆಚ್ಚಿನ ದೈವಗಳ ಮೂಲ ಕಥಾನಕಗಳು, ಐತಿಹ್ಯಗಳನ್ನು ಮುಂದಿನ ಜನಾಂಗಕ್ಕೆ ಕಾಪಿಡುವ ಸಲುವಾಗಿ ನಾನು ಈ ಕೆಲಸವನ್ನು ಮಾಡಿದ್ದೇನೆ.”

ಇಂತಹ ದಾಖಲೀಕರÀಣದ ಮಹತ್ವ ದೊಡ್ಡದು. ವಿಶ್ಲೇಷಣೆಯ ಹಂತಕ್ಕೆ ಬಂದರೆ ಮುಂದೆ ಬೇರೆ ಬೇರೆ ಅಧ್ಯಯನ ಮಾರ್ಗಗಳು, ತಿಳಿವಳಿಕೆಗಳನ್ನು ಬಳಸಿಕೊಂಡು ಹೊಸ ಬಗೆಯಲ್ಲಿ ವಿಶ್ಲೇಷಣೆಗಳನ್ನು ಮಾಡುವ ಅವಕಾಶವಿದೆ. ಆದರೆ ಆಚರಣೆಯನ್ನು (ಪರ್ಫಾರೆನ್ಸ್) ನಮಗೆ ಬೇಕಾದಾಗ ಗಮನಿಸಲು, ದಾಖಲಿಸಲು ಸಾಧ್ಯವಿಲ್ಲ. ಕೆಲವು ಆಚರಣೆಗಳು ಮುಂದೆ ನಿಂತೇ ಹೋಗಬಹುದು. ಇದರಿಂದ ಈ ಕೃತಿಯ ಮಹತ್ವವನ್ನು ಊಹಿಸಬಹುದು. 

ವಿಶ್ಲೇಷಣೆಯ ಹಂತದಲ್ಲಿ ವಿದ್ವಾಂಸರ ನಡುವಿನ ಸಂವಾದಕ್ಕೆ ವೇದಿಕೆ ನಿರ್ಮಾಣವಾಗುತ್ತದೆ. ತುಳು ಜಾನಪದ ಕ್ಷೇತ್ರದಲ್ಲಿ, ಅದರಲ್ಲೂ ಭೂತಾರಾಧನೆಯ ಕ್ಷೇತ್ರದಲ್ಲಿ ಪ್ರಾಥಮಿಕ ದಾಖಲೀಕರಣಕ್ಕೆ ಸುಮಾರು ಒಂದು ಶತಮಾನಕ್ಕೂ ಹೆಚ್ಚಿನ ಇತಿಹಾಸವಿದೆ. ಆ ಕಾರ್ಯವೂ ಪೂರ್ತಿಯಾಗಿಲ್ಲ ಎನ್ನುವುದನ್ನು ಈ ಕೃತಿ ತೋರಿಸಿಕೊಟ್ಟಿದೆ. ಈ ಗ್ರಂಥದಲ್ಲಿ ಆನುಷಂಗಿಕವಾಗಿ ಬರುವ ವಿಶ್ಲೇಷಣೆಗಳಲ್ಲಿ ವಿದ್ವಾಂಸರಿಗೆ ಭಿನ್ನಮತಗಳಿರಬಹುದು. ಅದೊಂದು ನಿರಂತರ ಪ್ರಕ್ರಿಯೆ. ಮುಖ್ಯವಾದುದು ಈ ಮಟ್ಟಿನ ದಾಖಲೀಕರಣ ಸಾಹಸ. ಇದು ವಿಶ್ವವಿದ್ಯಾಲಯಗಳು, ಅಕಾಡೆಮಿಗಳು ಮಾಡುವಂತಹ ಕೆಲಸ. ಅದನ್ನು ಏಕಾಂಗಿಯಾಗಿ ಮಾಡಿ, ಇಂತಹದೊಂದು ಗ್ರಂಥವನ್ನು ನಮ್ಮ ಕೈಗಿತ್ತಿರುವ ಡಾ. ಲಕ್ಷ್ಮೀ ಜಿ. ಪ್ರಸಾದ್ ಅವರಿಗೆ ಅಭಿನಂದನೆಗಳು.


ಗುರುಪೂರ್ಣಿಮೆ

ಡಾ. ಬಿ. ಜನಾರ್ದನ ಭಟ್


ಕರಾವಳಿಯ ಸಾವಿರದೊಂದು ದೈವಗಳು: ನಮ್ಮ‌ಹೆಮ್ಮೆಯ ಓದುಗರಾದ ಡಾ.ಚೈತ್ರ ಅವರ ಅಭಿಪ್ರಾಯವ


 ನಮ್ಮ ಸಂಸ್ಕೃತಿಯ ಭಾಗವಾಗಿರುವ ದೈವಾರಾಧನೆಯ ಪರಂಪರೆ ಮುಂದುವರೆಯಬೇಕಾದರೆ ಮುಂದಿನ ಪೀಳಿಗೆಗೆ ದೈವಗಳ ಹಿನ್ನೆಲೆಯ ಜ್ಞಾನವೂ ಮುಖ್ಯ.ಈ ಹಿನ್ನೆಲೆಯಲ್ಲಿ ಡಾ. ಲಕ್ಷ್ಮೀ ಜಿ. ಪ್ರಸಾದರ ಈ ಪುಸ್ತಕ ದೈವಾರಾಧನೆಯ ಮಾಹಿತಿಯ ಕಣಜದಂತಿದೆ.ಯುವ ಸಂಶೋಧಕರಿಗೆ ಕುತೂಹಲ ಹುಟ್ಟಿಸುವ, ಹೊಸ ಚಿಂತನ-ಮಂಥನಗಳಿಗೆ ಸ್ಫೂರ್ತಿ ತುಂಬುವ ಅಮೂಲ್ಯ ಪುಸ್ತಕವಾಗಿದೆ. ಆಧುನಿಕ ಬದುಕಿನ ಹೊಸ ಬದಲಾವಣೆ, ಆಡಂಬರಗಳಗಳ ಅಲೆಯಲ್ಲಿ ದೈವಾರಾಧನೆಯ ಮೂಲ ಉದ್ದೇಶ, ಮಹತ್ವ ಎಲ್ಲರಿಗೂ ಮನದಟ್ಟು ಆಗಬೇಕೆಂದರೆ ಇಂತಹ ಪುಸ್ತಕಗಳ ಓದು ಸಹಕಾರಿಯಾಗುವುದು.ದೈವಾರಾಧನೆಯ ಆಚರಿಸುವ ಪ್ರತಿ ಕುಟುಂಬದೊಂದಿಗೆ ಒಂದು ಪುಸ್ತಕವಿದ್ದರೆ ಮುಂದಿನ ಪೀಳಿಗೆಗೂ ಮೂಡುವ ಹಲವು ಪ್ರಶ್ನೆ, ಸಂಶಯಗಳಿಗೆ ಈ ಮೂಲಕ ಸ್ಪಷ್ಟ ಉತ್ತರ ದೊರಕುವುದು.ದೈವದ ಆಶೀರ್ವಾದದೊಂದಿಗೆ ಓದ ಬಯಸುವ ಎಲ್ಲಾ ಸಹೃದಯರಿಗೆ ಪುಸ್ತಕ ಒದಗುವಂತಾಗಲಿ.🙏

ಡಾ.ಚೈತ್ರಾ 

ಕರಾವಳಿಯ ಸಾವಿರದೊಂದು ದೈವಗಳು : ನಮ್ಮ ಆತ್ಮೀಯ ಓದುಗರಾದ ಶರಶ್ಚಂದ್ರ ರಾವ್


 

ಕರಾವಳಿಯ ಸಾವಿರದೊಂದು ದೈವಗಳು : ನಮ್ಮ ಹೆಮ್ಮೆಯ ಓದುಗರಾದ ಸೋನಾ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಯಜ್ಞನಾರಾಯಣ ಕೆ ಅವರೊಂದಿಗೆ


 

ಕರಾವಳಿಯ ಸಾವಿರದೊಂದು ದೈವಗಳು: ನಮ್ಮ ಹೆಮ್ಮೆಯ ಓದುಗರಾದ ಫಣಿರಾಜ ಹೆಬ್ಬಾರ್ ಅವರೊಂದಿಗೆ


 ಕೋಟೇಶ್ವರ ಮೈತ್ರಿ ತ್ರೈಮಾಸಿಕ ದ ಪ್ರಧಾನ ಸಂಪಾದಕರಾದ ಫಣಿರಾಜ ಹೆಬ್ಬಾರ್ 

ಭೂತಾರಾಧನೆಯ ಅಪೂರ್ವ ಸಂಶೋಧಕಿ : ಡಾ.ಲಕ್ಷ್ಮೀ ಜಿ ಪ್ರಸಾದ್ - ಸುಮನಾ ಉಪಾಧ್ಯಾಯ


 




ಭೂತಾರಾಧನೆ ತುಳುನಾಡು ಕರಾವಳಿ ಭಾಗದ ಒಂದು ಸೊಗಸಾದ ಸಂಸ್ಕೃತಿ. ಭೂತಾರಾಧನೆ ಇಲ್ಲಿನ ತುಳು ಭಾಷಿಕರ ಜನರ ಜೀವನದಲ್ಲಿ ಹಾಸುಹೊಕ್ಕಿದೆ.

ಆಧುನಿಕ ಜೀವನಶೈಲಿಯಲ್ಲಿ ಭೂತಾರಾಧನೆ ಬಗ್ಗೆ ಇಂದಿನ ಜನಾಂಗದವರಿಗೆ ತಿಳುವಳಿಕೆ ಕಡಿಮೆಯೇ.ಇಂದಿನ ಮಕ್ಕಳಿಗೆ ಭೂತಗಳ ವೇಷಗಳನ್ನು ನೋಡ ಸಿಗುವುದೇ ಅಪರೂಪ. 

ಇಂತಹ ಸ್ಥಿತಿಯೊಳಗೆ ತುಳುನಾಡಿನ ಸಂಸ್ಕೃತಿ, ಭೂತಾರಾಧನೆ ಬಗ್ಗೆ ಅಧ್ಯಯನ ಮಾಡಿ ಎಂ.ಫಿಲ್ ಹಾಗೂ ಎರಡು ಡಾಕ್ಟರೇಟ್ ಪದವಿಗಳನ್ನು ಪಡೆದ ಮೊದಲ ಮಹಿಳೆ ಮಾತ್ರವಲ್ಲ ವ್ಯಕ್ತಿ ಡಾ.ಲಕ್ಷ್ಮಿ ಜಿ ಪ್ರಸಾದ್ ಅವರು. ಅಧ್ಯಯನ ಮಾಡಿದ್ದಷ್ಟೇ ಅಲ್ಲದೆ ಇಂದಿನ ಡಿಜಿಟಲ್ ಮಾಧ್ಯಮ ಯುಗದಲ್ಲಿ ಎಲ್ಲರೂ ಇಂಟರ್ನೆಟ್ ಗೆ ಮಾಹಿತಿಗೆ ಮೊರೆಹೋಗುತ್ತಿರುವ ಸಂದರ್ಭದಲ್ಲಿ ಅದರ ಪರಿಚಯ, ಮಾಹಿತಿ ಇಂದಿನ ಯುವಜನರಿಗೂ ಸಿಗಲೆಂದು ಲಕ್ಷ್ಮಿಯವರು ಈ ಬಗ್ಗೆ ಅತ್ಯಪರೂಪದ ಬ್ಲಾಗನ್ನೇ ತಯಾರಿಸಿದ್ದಾರೆ. ಕರಾವಳಿ ಜಿಲ್ಲೆಯ ತುಳುನಾಡಿನ ಭೂತಗಳ ಇತಿಹಾಸ, ಹಿನ್ನೆಲೆ, ಆರಾಧನೆ ಸ್ವರೂಪ ಒಳಗೊಂಡ ವಿಚಾರ ನಿರಂತರ ಸಂಶೋಧನೆ ಮಾಡಿ, ಭೂತಾರಾಧನೆ ಮಾಹಿತಿ ಹಾಗೂ ಸಂಬಂಧಿಸಿದ ವಿಚಾರಗಳ 700ಕ್ಕಿಂತಲೂ ಹೆಚ್ಚು ಬರಹಗಳು ಈ ಬ್ಲಾಗ್ ನಲ್ಲಿವೆ. 

http://laxmipras.blogspot.com(ಭೂತಗಳ ಅದ್ಭುತ ಜಗತ್ತು-ಸಂಶೋಧನಾ ಬ್ಲಾಗ್) ನೊಳಗೆ ಸಂಪೂರ್ಣ ಮಾಹಿತಿ ಓದುಗರಿಗೆ ಸಿಗುತ್ತದೆ. ಈ ಬ್ಲಾಗ್ ಎಷ್ಟು ಜನಪ್ರಿಯವಾಗಿದೆಯೆಂದರೆ ದೇಶ-ವಿದೇಶಗಳ 3 ಲಕ್ಷಕ್ಕಿಂತಲೂ ಹೆಚ್ಚಿನ ಓದುಗರನ್ನು ಇದು ಹೊಂದಿದೆ. ಭೂತಾರಾಧನೆಯ ಕುರಿತು ಮಾಹಿತಿ, ಫೋಟೊ, ಜಾನಪದ, ಮಹಿಳೆಯರ ಬದುಕು, ನಾನಾ ಭಾಷೆಯ ಸಾಹಿತ್ಯಗಳ ಬರಹ ಈ ಬ್ಲಾಗ್‌ನಲ್ಲಿದೆ. ದೇಶ-ವಿದೇಶಗಳ ಅನೇಕ ಸಂಶೋಧಕರು, ಅಧ್ಯಯನಕಾರರು ಇದರಿಂದ ಮಾಹಿತಿ ಪಡೆದಿದ್ದಾರೆ. ಡಾ ಲಕ್ಷ್ಮಿ ಜಿ ಪ್ರಸಾದ್ ಅವರು ಸಾವಿರದ ಎಂಟು ನೂರು ದೈವಗಳ ಹೆಸರನ್ನು ಸಂಗ್ರಹ ಮಾಡಿದ್ದಾರೆ‌. 500 ಭೂತಗಳ ಕುರಿತಾಗಿ ಅಧ್ಯಯನ ಮಾಡಿ ಬರೆದಿದ್ದಾರೆ‌.ನೂರಕ್ಕೂ ಹೆಚ್ಚಿನ ಅಪರೂಪದ ಪಾಡ್ದನಗಳನ್ನು ಸಂಗ್ರಹಿಸಿದ್ದಾರೆ.

ADVERTISEMENT

ಇವರು ಮೂಲತಃ ಕಾಸರಗೋಡಿನ ಕೋಳ್ಯೂರಿನವರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಸ್ತುತ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ 20ಕ್ಕೂ ಅಧಿಕ ಪುಸ್ತಕಗಳು, 200ಕ್ಕೂ ಅಧಿಕ ಶೈಕ್ಷಣಿಕ,ವೈಚಾರಿಕ, ಸಂಶೋಧನಾತ್ಮಕ ಬರಹಗಳು ನಾಡಿನ ಪತ್ರಿಕೆಗಳಲ್ಲಿ, ಪುಸ್ತಕಗಳಾಗಿ ಪ್ರಕಟಗೊಂಡಿವೆ. 


ಡಾ. ಲಕ್ಷ್ಮೀ ಜಿ.ಪ್ರಸಾದ್‌ ಕನ್ನಡ, ಸಂಸ್ಕೃತಿ ಮತ್ತು ಹಿಂದಿ ಎಂಎ ಪದವಿ ಪಡೆದಿದ್ದಾರೆ. ತುಳುನಾಡಿನ ನಾಗಬ್ರಹ್ಮ ಮತ್ತು ಕಂಬಳ -ವಿಶ್ಲೇಷಣಾತ್ಮಕ ಅಧ್ಯಯನ ಎಂಬ ಸಂಶೋಧನೆ ಮಹಾಪ್ರಬಂಧ ರಚಿಸಿ ಹಂಪಿ ಕನ್ನಡ ವಿವಿಯಲ್ಲಿ ಡಾಕ್ಟರೇಟ್‌ ಗಳಿಸಿದ್ದಾರೆ. ಪಾಡ್ದನಗಳಲ್ಲಿ ತುಳುವ ಸಂಸ್ಕೃತಿಯ ಅಭಿವ್ಯಕ್ತಿ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ದ್ರಾವಿಡ ವಿವಿಯಿಂದ 2ನೇ ಡಾಕ್ಟರೇಟ್‌ ಗಳಿಸಿದ್ದಾರೆ. 150 ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ರಾಜ್ಯ, ಪ್ರಾದೇಶಿಕ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದು, ಹಲವಾರು ರಾಜ್ಯ, ರಾಷ್ಟ್ರೀಯ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.


ಇಂದಿನ ಕಾಲಘಟ್ಟಕ್ಕೆ ಭೂತಾರಾಧನೆ ಅದರ ಕಲಿಕೆ ಹೇಗೆ ಪ್ರಸ್ತುತ ಎಂಬುದಕ್ಕೆ ಡಾ ಲಕ್ಷ್ಮಿ ಪ್ರಸಾದ್ ಹೀಗೆ ಹೇಳುತ್ತಾರೆ:
ಕುಮಾರವ್ಯಾಸನ ಗದುಗಿನ ಭಾರತ, ರಾಮಾಯಣ, ಮಹಾಭಾರತ, ಹಳೆಗನ್ನಡ ಹೇಗೆ ಇಂದಿಗೂ ಪ್ರಸ್ತುತವೋ, ಇಂದಿನ ಜನಾಂಗದವರು ಕಲಿಯಬೇಕೆನ್ನುತ್ತಾರೋ ಭೂತಾರಾಧನೆ ಕೂಡ ತುಳು ಸಂಸ್ಕೃತಿಯ ಪರಂಪರೆ ಇಂದಿಗೂ ಪ್ರಸ್ತುತ. ಅದು ತುಳು ಸಂಸ್ಕೃತಿಯ ಮೆಟ್ಟಿಲು, ಅದೊಂದು ತುಳುನಾಡಿನ ಶಕ್ತಿ, ಅದನ್ನು ಅರಿತು ದಾಟಿಕೊಂಡೇ ಮುಂದೆ ಹೋಗಬೇಕಾಗುತ್ತದೆ. ''ನೀರಿನಲ್ಲಿ ಮೀನು ಈಜುವುದು, ಹಕ್ಕಿ ಹಾರುವುದು''ಎಷ್ಟು ಸಹಜವೋ ತುಳುನಾಡಿನ ಭೂತಾರಾಧನೆ ಬಗ್ಗೆ ತಿಳಿದುಕೊಳ್ಳುವುದು ಅಷ್ಟೇ ಸಹಜ ಎನ್ನುತ್ತಾರೆ.

ಡಾ ಲಕ್ಷ್ಮಿ ಪ್ರಸಾದ್ ಅವರು ಭೂತಾರಾಧನೆ ಬಗ್ಗೆ ವಿವರವಾಗಿ ಹೇಳಿರುವ ವಿಡಿಯೊ:

ಡಾ ಲಕ್ಷ್ಮಿ ಜಿ ಪ್ರಸಾದ್ ಅವರ ಮೊಬೈಲ್ ಸಂಖ್ಯೆ: 9480516684

ಲೇಖನ: ಸುಮನಾ ಉಪಾಧ್ಯಾಯ 

ಕರಾವಳಿಯ ಸಾವಿರದೊಂದು ದೈವಗಳು: ನಮ್ಮ ಹೆಮ್ಮೆಯ ಓದುಗರಾದ ಅಶೋಕ್ ಶೆಟ್ಟಿ ದುಬೈ


 

ಕರಾವಳಿಯ ಸಾವಿರದೊಂದು ದೈವಗಳು: ನಮ್ಮ ಹೆಮ್ಮೆಯ ಓದುಗರಾದ ಸರಸ್ವತಿ ಮಧ್ಯಸ್ಥರು


 

ಕರಾವಳಿಯ ಸಾವಿರದೊಂದು ದೈವಗಳು: ನಮ್ಮ ಹೆಮ್ಮೆಯ ಓದುಗರಾದ ಕವಿತಾ


 

ಕರಾವಳಿಯ ಸಾವಿರದೊಂದು ದೈವಗಳು: ನಮ್ಮ ಹೆಮ್ಮೆಯ ಓದುಗರಾದ ನಾಗೇಂದ್ರ


 

ಕರಾವಳಿಯ ಸಾವಿರದೊಂದು ದೈವಗಳು: ನಮ್ಮ ಹೆಮ್ಮೆಯ ಓದುಗರಾದ ಧೀರೇನ್ ಅವರೊಂದಿಗೆವ


 

ಕರಾವಳಿಯ ಸಾವಿರದೊಂದು ದೈವಗಳು: ನಮ್ಮ ಹೆಮ್ಮೆಯ ಓದುಗರಾದ ಪದ್ಮನಾಭ ಕೊಳಕೆ


 

ಕರಾವಳಿಯ ಸಾವಿರದೊಂದು ದೈವಗಳು: ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಹ ನಿರ್ದೇಶಕರಾದ ಸಿ ಎಲ್ ಶೈಲಜಾ ಅವರೊಂದಿಗೆ

 

ಡಾ.ಲಕ್ಷ್ಮೀ ಜಿ ಪ್ರಸಾದರು ಕನ್ನಡ,ಸಂಸ್ಕೃತ,ಹಿಂದಿ ಈ ಮೂರು ಭಾಷೆಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು,ತುಳು ಸಂಸ್ಕೃತಿ ಕುರಿತು ಎಂಫಿಲ್ ಹಾಗೂ ಎರಡು ಡಾಕ್ಟರೇಟ್ ಪದವಿಗಳನ್ನು ಗಳಿಸಿದ್ದು  ಸಾಹಿತ್ಯ ಸಂಸ್ಕೃತಿ ಕುರಿತು ಅಪಾರ ಕಾಳಜಿಯನ್ನು ಹೊಂದಿದ್ದಾರೆ.ತುಳು ನಾಡಿನಲ್ಲಿ ಎಷ್ಟು ದೈವಗಳಿಗೆ ಆರಾಧನೆ ಇದೆ ಎಂಬ ಬಗ್ಗೆ ಅಧ್ಯಯನ ಮಾಡಿ ಕಾರವಾರದಿಂದ ಕಣ್ಣನ್ನೂರು ತನಕ ಆರಾದನೆ ಪಡೆವ  ಸಾವಿರದ ಇನ್ನೂರ ಏಳು ದೈವ ಮಾಹಿತಿ ಸಂಗ್ರಹಿಸಿ,ಕರಾವಳಿಯಲ್ಲಿ ಸಾವಿರಕ್ಕಿಂತ ಹೆಚ್ಚು ದೈವಗಳಿಗೆ ಆರಾಧನೆ ಇದೆ ಎಂಬ ಸ್ಪಷ್ಟ ಉತ್ತರ ನೀಡಿದ್ದಾರೆ .

ಮೊದಲಿಗೆ ಅವರ ಮನೆಯಲ್ಲಿ ಆರಾಧನೆಗೊಳ್ಳುವ ದೈವಗಳ ಅಧ್ಯಯನ‌ ಶುರುಮಾಡಿ ನಿರಂತರ ಇಪ್ಪತ್ತೊಂದು ವರ್ಷಗಳ ಕಾಲ ಸಂಶೋಧನೆ ಮಾಡಿ ಪುರುಷರೂ ಮಾಡಲು ಹಿಂದೇಟು ಹಾಕುವ ಕಾರ್ಯವನ್ನು   ಏಕಾಂಗಿಯಾಗಿ ಹೆಣ್ಣಿಗೆ  ಅಸಾಧ್ಯವೆನಿಸುವ   ಕಾರ್ಯವವನ್ನು ಮಾಡಿ   ಇತರರಿಗಿಂತ ಭಿನ್ನವೆನಿಸಿಕೊಂಡಿದ್ದಾರೆ.

 

ನೆಲ ,ಜಲ ಭಾಷೆ ನಮ್ಮದೆಂದು ಭಾವಿಸಿಕೊಂಡು ಸತ್ವ ಗುಣಗಳನ್ನು ಒಲಿಸಿಕೊಂಡು ವಾಸ್ತವಿಕತೆಯ ನೆಲಗಟ್ಟಿನಲ್ಲಿ ತುಳುನಾಡಿನ ದೈವಗಳ ವಿಸ್ಮಯ  ಜಗತ್ತನ್ನು ತೆರೆದಿಟ್ಟಿದ್ದಾರೆ

 

ಉತ್ಸಾಹ ಮತ್ತು ಉಲ್ಲಾಸದಿಂದ ಹಾಡುವ ಹಕ್ಕಿಯಂತೆ ಸದಾ ಕ್ರಿಯಾ ಶೀಲತೆಯಲ್ಲಿ ಸಂಭ್ರಮಿಸುವ ಇವರದು ಸೂಕ್ಷ್ಮ ಮನಸ್ಸು,ತೆರೆದ ಹೃದಯವಂತಿಕೆ,ಜೀವನೋತ್ಸಾಹ ಇವರ ವ್ಯಕ್ತಿತ್ವದ ಮೂಲ ಸೆಲೆಯಾಗಿದೆ ,

ವ್ಯವಹಾರ,ವೃತ್ತಿ ಪರಿಣತಿ ,ಆಚಾರ ವಿಚಾರ,ಜ್ಞಾನ ಮುಂತಾದವುಗಳನ್ನೆಲ್ಲ‌ ಅರಳಿಸಿಕೊಡುವ ಹಾಗೂ ಜಗತ್ತಿಗೆ ಪರಿಣಾಮಕಾರಿಯಾಗಿ ತಿಳಿಸಿಕೊಡುವ ಕಾರ್ಯ ಮಾಡಿದ್ದಾರೆ‌.ಈ ನಿಟ್ಟಿನಲ್ಲಿ ಇವರ ಕಾರ್ಯೋತ್ಸಾಹ ಮೆಚ್ಚುವಂತಹದ್ದು.

 

ವೃತ್ತಿ ಪರ ಸವಾಲುಗಳನ್ನು ಎದುರಿಸಿ,ಆರೋಗ್ಯ ಸಮಸ್ಯೆಗಳನ್ನು ಮೆಟ್ಟಿ ನಿಂತು ಕೌಟುಂಬಿಕ ಜವಾಬ್ದಾರಿಗಳನ್ನು ನಿರ್ವಹಿಸುತ್ತಾ ,ಸದಾ ವಿದ್ಯಾರ್ಥಿಗಳ ಏಳಿಗೆಗಾಗಿ ಶ್ರಮಿಸುತ್ತಾ ,ಅಧ್ಯಯನ ,ಅಧ್ಯಾಪನ ಬರವಣಿಗೆ ಎಲ್ಲ‌ವನ್ನೂ ಹೊಂದಾಣಿಕೆ ಮಾಡಿ  ಬದುಕು ಸಾಗಿಸುತ್ತಿದ್ದಾರೆ.ಈ  ಬಹುಮುಖಿ‌ ಪ್ರತಿಭೆಯ ಹೂವನ್ನು ದೇವರು ಸದಾ ಹರ್ಷದಲ್ಲಿಟ್ಟಿರಲಿ ಎಂದು ಹಾರೈಸುತ್ತೇನೆ

ಶ್ರಿಮತಿ ಸಿ ಎಲ್  ಶೈಲಜಾ

ಉಪನಿರ್ದೇಶಕರು( ಪರೀಕ್ಷಾ ವಿಭಾಗ)

ಪದವಿ ಪೂರ್ವ ಶಿಕ್ಷಣ ಇಲಾಖೆ

ಕರ್ನಾಟಕ ರಾಜ್ಯ


ಕರಾವಳಿಯ ಸಾವಿರದೊಂದು ದೈವಗಳು: ನಮ್ಮ ಹೆಮ್ಮೆಯ ಓದುಗರಾದ ಖ್ಯಾತ ಚಿತ್ರ ಕಲಾವಿದರಾದ ಚಿತ್ರಮಿತ್ರ ಮತ್ತು ಅನು ಪಾವಂಜೆ ದಂಪತಿಗಳು


 

ಕರಾವಳಿಯ ಸಾವಿರದೊಂದು ದೈವಗಳು: ನಮ್ಮ ಹೆಮ್ಮೆಯ ಓದುಗರಾದ ಚೇತನ್ ಕುಮಾರ್ ಪೂರ್ಣಿಮಾ ದಂಪತಿಗಳೊಂದಿಗೆ


 

ಕರಾವಳಿಯ ಸಾವಿರದೊಂದು ದೈವಗಳು: ನಮ್ಮ ಹೆಮ್ಮೆಯ ಓದುಗರಾದ ಡಾ.ಆಶಾ ಅಭಿಕಾರ್ ಅವರೊಂದಿಗೆವ


 

ಕರಾವಳಿಯ ಸಾವಿರದೊಂದು ದೈವಗಳು: ನಮ್ಮ ಹೆಮ್ಮೆಯ ಓದುಗರಾದ ಗಣೇಶ್ ಬೆಂಗಳೂರು


 

ಕರಾವಳಿಯ ಸಾವಿರದೊಂದು ದೈವಗಳು: ನಮ್ಮ ಹೆಮ್ಮೆಯ ಓದುಗರಾದ ಪ್ರೊ‌.ರವಿರಾಮ ಸಿದ್ಧ ಮೂಲೆ


 

ಕರಾವಳಿಯ ಸಾವಿರದೊಂದು ದೈವಗಳು: ನಮ್ಮ ಹೆಮ್ಮೆಯ ಓದುಗರಾದ ಚೇತನ್ ಅವರೊಂದಿಗೆ


 

ಕರಾವಳಿಯ ಸಾವಿರದೊಂದು ದೈವಗಳು: ನಮ್ಮ ಹೆಮ್ಮೆಯ ಓದುಗರಾದ ವಿಷ್ಣು ಪ್ರಸಾದ್ ಭಟ್


 ವಿಷ್ಣು ಪ್ರಸಾದ ಭಟ್ ಅವರ ಅಭಿಪ್ರಾಯ ಇಲ್ಲದೆ


https://fb.watch/oSH9oVyKwm/?mibextid=Nif5oz
.

ಕರಾವಳಿಯ ಸಾವಿರದೊಂದು ದೈವಗಳು: ನಮ್ಮ ಹೆಮ್ಮೆಯ ಓದುಗರಾದ ಲಕ್ಷ್ಮೀಶರೊಂದಿಗೆ


 

ಕರಾವಳಿಯ ಸಾವಿರದೊಂದು ದೈವಗಳು: ನಮ್ಮ ಹೆಮ್ಮೆಯ ಓದುಗರಾದ ರತನ್ ಶೆಟ್ಟಿ


 

ಕರಾವಳಿಯ ಸಾವಿರದೊಂದು ದೈವಗಳು: ನಮ್ಮ ಹೆಮ್ಮೆಯ ಓದುಗರಾದ ವಿನೋದ್


 

ಕರಾವಳಿಯ ಸಾವಿರದೊಂದು ದೈವಗಳು: ನಮ್ಮ ಹೆಮ್ಮೆಯ ಓದುಗರಾದ ರಾಜೇಂದ್ರ


 

ಕರಾವಳಿಯ ಸಾವಿರದೊಂದು ದೈವಗಳು: ನಮ್ಮ ಹೆಮ್ಮೆಯ ಓದುಗರಾದ ರಾಧಾಕೃಷ್ಣ ಉಳಿಯತ್ತಡ್ಕ ,ಹಿರಿಯ ವಿದ್ವಾಂಸರು


 

ಕರಾವಳಿಯ ಸಾವಿರದೊಂದು ದೈವಗಳು : ನಮ್ಮ ಹೆಮ್ಮೆಯ ಓದುಗರಾದ ಡಾ.ಸೂರ್ಯನಾರಾಯಣ ಶರ್ಮ,ಖ್ಯಾತ ನ್ಯೂರಾಲಜಿಷ್ಟ್


 

ಕರಾವಳಿಯ ಸಾವಿರದೊಂದು ದೈವಗಳು : ನಮ್ಮ ಹೆಮ್ಮೆಯ ಓದುಗರಾದ ಪ್ರಶಾಂತ್ ಪೆರಡೂರು


 

ಕರಾವಳಿಯ ಸಾವಿರದೊಂದು ದೈವಗಳು : ಹೆಮ್ಮೆಯ ಓದುಗರಾದ ಶ್ರೀ ಕಾಂತ್ ಉಳುವಾರು


 

ಕರಾವಳಿಯ ಸಾವಿರದೊಂದು ದೈವಗಳು : ಹೆಮ್ಮೆಯ ಓದುಗರಾದ ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ


 

ಕರಾವಳಿಯ ಸಾವಿರದೊಂದು ದೈವಗಳು- ಹೆಮ್ಪ್ರೇಮೆಯ ಓದುಗರಾದ ಮಾ ಭಟ್ ತೊಟ್ಟೆತ್ತೋಡಿ


 

ಕರಾವಳಿಯ ಸಾವಿರದೊಂದು ದೈವಗಳು: ಹೆಮ್ಮೆಯ ಓದುಗರಾದ ಕೇಶವ ಪ್ರಸಾದ ಭಟ್ ಕೆದಿಲ


 

ಕರಾವಳಿಯ ಸಾವಿರದೊಂದು ದೈವಗಳು: ಹೆಮ್ಮೆಯ ಓದುಗರಾದ ಗೋಪಾಲ ಕೃಷ್ಣ ಭಟ್ ಅರಂತಾಡಿನ


 ನಮಗೆ ಬಹಳ ಆತ್ಮೀಯರಾದ ಅರಂತಾಡಿ ಗೋಪಪ್ಪಚ್ಚಿ ಕೈಯಲ್ಲಿ ಕರಾವಳಿಯ ಸಾವಿರದೊಂದು ದೈವಗಳು ..

ಕರಾವಳಿಯ ಸಾವಿರದೊಂದು ದೈವಗಳು : ಹೆಮ್ಮೆಯ ಓದುಗರಾದ ಸಂತೋಷ್ ರಾಮಪ್ಪ ಪೂಜಾರಿ


 

ಕರಾವಳಿಯ ಸಾವಿರದೊಂದು ದೈವಗಳು - ಡಾ.ಪುನೀತ್ ರಾಘವೇಂದ್ರ


 ತಮ್ಮ‌ಮಗನ ಕೈಗೆ ಪುಸ್ತಕ ನೀಡಿದ ಈ ಪ್ರೀತಿ ಅಭಿಮಾನಕ್ಕೆ ಏನೆನ್ನಲಿ, ಧನ್ಯವಾದಗಳು ಡಾಕ್ಟ್ರೇ DrPuneeth Raghavendra Kuntukadu 


ದೇಶ #ಸುತ್ತಬೇಕು #ಕೋಶ #ಓದಬೇಕು

https://m.facebook.com/story.php?story_fbid=1795558340834127&id=100011399344171

ಲಕ್ಷ್ಮೀ ಮೇಡಂ ಪರಿಚಯ ನನಗೆ ಸುಮಾರು ಐದು ವರ್ಷಗಳಿಗೂ ಹಳೆಯದು...ಅದೂ ಕೇವಲ ಅಂತರ್ಜಾಲದಲ್ಲಿ ಮಾತ್ರ!! ಹೀಗೇ ಒಂದು ಬಾರಿ ಬ್ಲಾಗ್'ನಲ್ಲಿ ಜಾಲಾಡುತ್ತಿದ್ದಾಗ ಅವರ ಕೆಲಸಗಳ ಪರಿಚಯವಾಯ್ತು.. ಸುಳ್ಯ ತೊಡಿಕಾನ ಗ್ರಾಮದ ನಮ್ಮ ಕುಂಟುಕಾಡು ಮನೆತನದಲ್ಲಿ ಮಾತ್ರ ಆರಾಧನೆಗೊಳಪಡುವ #ಹಿತ್ತಿಲುಚಾಮುಂಡಿ ಎಂಬ ದೈವದ ಕುರಿತಾಗಿ ಮಾಹಿತಿ ಪಡೆಯುವುದಿತ್ತು. ಅಲ್ಲಿಂದ ಮುಂದುವರೆದ ಪರಿಚಯ ಆರೋಗ್ಯ-ಮಾಹಿತಿ ಕುರಿತಾಗಿಯೂ ವಿಚಾರ ವಿನಿಮಯಮಾಡಿಕೊಳ್ಳುತ್ತೇವೆ. 


ಅವರ ಬರವಣಿಗೆಯ ಪರಿಚಯವಿದ್ದ ನನಗೆ ಈ ಹೊಸ ಪುಸ್ತಕಕ್ಕೆ ಮುಂಗಡ ಪಾವತಿಸಲು ಯಾವುದೇ ಸಂಶಯವಿರಲಿಲ್ಲ. ಪುಸ್ತಕ ನಿನ್ನೆಯಷ್ಟೇ ಕೈ ಸೇರಿತು... ಅಮೋಘ.. ಅದ್ಭುತ.. ಅಪೂರ್ವ ಗ್ರಂಥ!! 


ಭೂತಾರಾಧನೆಯ ಕುರಿತು "ಏನು ಇದೆ?" ಅಂದುಕೊಳ್ಳುವವರಿಗೆ ಇದೊಂದು ಮಾಹಾಗ್ರಂಥ!! ಕರಾವಳಿ ಪ್ರಾಂತ್ಯದಲ್ಲಿ ನಾವೆಲ್ಲಾ ದೈವಾರಾಧನೆಯನ್ನು ನಡೆಸುವವರೇ. ಆದರೆ ಅವುಗಳ ಇತಿಹಾಸ ಒಂದಿನಿತೂ ತಿಳಿದಿಲ್ಲ‌. ಹಾಗಾಗಿ ನನಗನಿಸಿದಂತೆ ಪ್ರತಿಯೋರ್ವರ ಮನೆಯಲ್ಲೂ ಖಡ್ಡಾಯವಾಗಿ ಇರತಕ್ಕಂಥ ಅಪೂರ್ವ ಪುಸ್ತಕ ಈ "#ಕರಾವಳಿಯ #ಸಾವಿರದೊಂದು #ದೈವಗಳು" (ನಮ್ಮ ಇತಿಹಾಸ ನಾವಲ್ಲದೆ ಇನ್ಯಾರು ತಿಳ್ಕೋಬೇಕು? ಅಲ್ವೇ?! )


ಅಷ್ಟಕ್ಕೂ ಇದೊಂದು ಸಾಮಾನ್ಯ ಗ್ರಂಥವಲ್ಲ. ಕನಿಷ್ಠ ಹತ್ತು ಅಧ್ಯಯನ (ಪಿಹೆಚ್'ಡಿ) ಈ ಒಂದು ಗ್ರಂಥದ ಮೇಲೇ ಮಾಡಲು ಸಾಧ್ಯವಿದೆ!!  ಹಾಗಾಗಿ ಇದರ ಇಂಗ್ಲೀಷ್ ಅವತರಣಿಕೆ ಶೀಘ್ರವಾಗಿ ಬರಲಿ, ಆ ಮೂಲಕ ನಮ್ಮ ಸಂಸ್ಕ್ರತಿಯು ವಿಶ್ವದಾದ್ಯಂತ ಪರಿಚಯವಾಗಲೆಂದು ಹಾರೈಸುತ್ತೇನೆ. 


#ಕೊನೆಯದಾಗಿ: 


ನಮ್ಮ ಮುಂದಿನ ಪೀಳಿಗೆಗೆ ನಾವು ನೀಡುವ ಅತ್ಯುತ್ತಮ ಉಡುಗೊರೆಯೆಂದರೆ ನಮ್ಮ ಸಂಸ್ಕೃತಿಯನ್ನು ತಿಳಿಸಿಕೊಡುವುದು. ಈ ಹಿಂದೆ ಸೂಕ್ತ ದಾಖಲೆಗಳಿಲ್ಲದೆ ಅದೆಷ್ಟನ್ನೋ ನಾವು ಕಳೆದುಕೊಂಡಿದ್ದೇವೆ, ಇಂದೂ ಕಳೆದುಕೊಳ್ಳುತ್ತಿದ್ದೇವೆ. ಹಾಗಾಗಿ.. ಮುಂದಿನ ತಲೆಮಾರಿಗೆ ಸಂಸ್ಕ್ರತಿ ಪರಿಚಯಿಸಲು ನನ್ನ ಮಗನಾದ #ಹಿರಣ್ಮಯ #ರಾಂ ನಿಗೆ ಈ ಪುಸ್ತಕವನ್ನು ಕೊಡುತ್ತಿದ್ದೇನೆ. 


Lakshmi V  ಲಕ್ಷ್ಮೀ ಮೇಡಂ... ಕೇವಲ ಧನ್ಯವಾದ ಹೇಳಿದ್ರೆ ಮುಗಿಯಲ್ಲ... ಬೇರೆ ಹೇಳ್ಲಿಕ್ಕೆ ಪದಗಳೂ ಇಲ್ಲ!! ನಿಮ್ಮ ಆಶೀರ್ವಾದ ಇರ್ಲಿ ಅಷ್ಟೇ ಕೇಳ್ಕೋಬೋದು 🙏🙏🙏


#ನಮಸ್ತೇ 🙏🙏


ದುಂಡಿರಾಜರು ಹೇಳಿದಂತೆ 

ರಾವಣನ ಪತ್ನಿ ಮಂಡೋದರಿ..‌

ಕನ್ನಡ ಪುಸ್ತಕ ಕೊಂಡೋದಿರಿ!! 😂😂


ಪುಸ್ತಕಕ್ಕೆ ಇಲ್ಲಿ ಸಂಪರ್ಕಿಸಬಹುದು. 


Dr Laxmi V 

9480516684